Thursday, August 31, 2017


ಪತ್ರಿಕಾ ಪ್ರಕಟಣೆ


        ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಕಳುವಾಗಿದ್ದ ಪ್ರಕರಣದಲ್ಲಿ ಮಾನ್ಯ ಪೊನ್ನಂಪೇಟೆ ನ್ಯಾಯಾಲಯವು ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತದೆ.

      ದಿನಾಂಕ 02/05/2017 ರಂದು ಸುಳುಗೋಡು ಗ್ರಾಮದ ಕೆ.ಯು.ಬೋಪಯ್ಯರವರು ತನ್ನ ಸಹೋದರನ ಮದುವೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಪೊನ್ನಂಪೇಟೆ ಕೊಡವ ಸಮಾಜಕ್ಕೆ ಹೋಗಿದ್ದು ಮಧ್ಯರಾತ್ರಿ ಮನೆಗೆ ಬಂದು ನೋಡುವಾಗ್ಗೆ ಮನೆಯ ಹಿಂಭಾಗಿಲಿನ ಬೀಗ ಮುರಿದು ಮನೆಯ ಬೆಡ್ ರೂಮ್ನ ಅಲ್ಮೇರಾದಲ್ಲಿದ್ದ ಪಿರ್ಯಾಧಿಯವರ ತಾಯಿ ಮತ್ತು ಅವರ ಸಹೋದರಿಯವರಿಗೆ ಸೇರಿದ ಸುಮಾರು 2.5 ಕೆ.ಜಿ ಚಿನ್ನಾಭರಣಗಳು ಹಾಗೂ 4 ಲಕ್ಷ ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪುಕಾರು ನೀಡಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ.37/2015 ಕಲಂ:454, 457, 380 ಐಪಿಸಿ ರೀತ್ಯ ಪ್ರಕರಣದ ದಾಖಲಾಗಿದ್ದು, ನಂತರ ತನಿಖಾಧಿಕಾರಿ ಶ್ರೀ.ಪಿ.ಕೆ.ರಾಜು, ಸಿಪಿಐ ಗೋಣಿಕೊಪ್ಪರವರ ನೇತೃತ್ವದ ತಂಡ ಪ್ರಕರಣದಲ್ಲಿ ಈ ಕೆಳಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಸುಮಾರು 1 ಕೋಟಿ 30 ಲಕ್ಷ ಮೌಲ್ಯದ 5 ಕೆಜಿ 112 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ತನಿಖಾಧಿಕಾರಿ ಶ್ರೀ.ಪಿ.ಕೆ.ರಾಜುರವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.


1) ಕೆ.ಜಿ.ಸುರೇಶ ತಂದೆ:ಪೌತಿ ಕೆ ಗೋಪಾಲ ಪ್ರಾಯ 38 ವರ್ಷ, ಪುಟ್ಟೇಗೌಡರವರ ತರಕಾರಿ ಅಂಗಡಿಯಲ್ಲಿ ಕೆಲಸ, ಮಂಡಿ ಮಾರ್ಕೆಟ್, ನಂಜನಗೂಡು ರಸ್ತೆ, ಮೈಸೂರು. ಸ್ವಂತ ಊರು: ಉಲುಗುಲಿ ರಸ್ತೆ, ಸುಂಠಿಕೊಪ್ಪ, ಸೋಮವಾರಪೇಟೆ ತಾಲ್ಲೋಕು.

2) ಎಂ.ಯೊಗೇಶ ತಂದೆ:ಮಂಚಪ್ಪ ಪ್ರಾಯ 23 ವರ್ಷ, ನಾಯಕ ಜನಾಂಗ, ಅಡುಗೆ ಕೆಲಸ, ಕೀತರ್ಿ ಬಾರ್, ಕೆ.ಆರ್.ಪುರಂ ಸರ್ಕಲ್ ಬೆಂಗಳೂರು, ಸ್ವಂತ ಊರು: ತೆಲಗುಂದ್ಲಿ ಗ್ರಾಮ ಮತ್ತು ಅಂಚೆ ಮತ್ತು ಹೋಬಳಿ, ಸೊರಬ ತಾಲ್ಲೋಕು, ಶಿವಮೊಗ್ಗ ಜಿಲ್ಲೆ.

3) ಗಿರೀಶ ತಂದೆ:ರಾಜು ಪ್ರಾಯ 22 ವರ್ಷ, ವ್ಯವಸಾಯ ವೃತ್ತಿ, ವಾಸ: ಹಂಡ್ರಂಗಿ ಗ್ರಾಮ ಮತ್ತು ಅಂಚೆ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೋಕು, ಹಾಸನ ಜಿಲ್ಲೆ.

4) ರಾಜು ತಂದೆ:ಪೌತಿ ತಿರುಮಲ ಸ್ವಾಮಿ, ಪ್ರಾಯ 48 ವರ್ಷ, ವ್ಯವಸಾಯ ವೃತ್ತಿ, ವಾಸ: ಹಂಡ್ರಂಗಿ ಗ್ರಾಮ ಮತ್ತು ಅಂಚೆ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೋಕು, ಹಾಸನ ಜಿಲ್ಲೆ.

5) ಹೆಚ್.ಸಿ.ರಾಜೇಶ ತಂದೆ ಹೆಚ್.ಕೆ.ಚಾಮ, ಪ್ರಾಯ 30 ವರ್ಷ, ಸುಳುಗೋಡು ಗ್ರಾಮ, ಪೊನ್ನಂಪೇಟೆ.

6) ಕಾರಿಯಾಡ್ ಹೌಸ್ ಎಸ್.ಸುಭಾಷ್ @ ರವಿ ತಂದೆ ಪೌತಿ.ಸೋಮನ್ ಪ್ರಾಯ 38 ವರ್ಷ, ಹಾಲಿ ಜಿಲ್ಲಾ ಕಾರಾಗೃಹದಲ್ಲಿ ಸಜಾ ಬಂಧಿ, ಕುರುಪ್ಪ್ ಮುಟ್ಟಿಲ್ ಜಾರ್ಜ್ ರವರ ಬಾಡಿಗೆ ಮನೆ,ಕುಂಞಿಕುಯಿ ಗ್ರಾಮ, ಮತ್ತು ಅಂಚೆ, ಕೊಟ್ಟಯಂ ಜಿಲ್ಲೆ, ಕೇರಳ ರಾಜ್ಯ.

      ಶ್ರೀ ಪಿ.ರಾಜೇಂದ್ರ ಪ್ರಸಾದ್, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ಹಾಗೂ ಶ್ರೀ.ನಾಗಪ್ಪ, ಕೆ.ಎಸ್.ಪಿ.ಎಸ್, ಪೊಲೀಸ್ ಉಪ-ಅಧೀಕ್ಷಕರು, ವಿರಾಜಪೇಟೆ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ.ಪಿ.ಕೆ.ರಾಜು, ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಸಿಬ್ಬಂದಿಯವರು ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿದಾರರರಿಗೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಕರಣದಲ್ಲಿ ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

      ದಿ:30/08/2017 ರಂದು ಪ್ರಕರಣದ ತೀರ್ಪು  ಪ್ರಕಟಿಸಿದ ಪೊನ್ನಂಪೇಟೆ ಮಾನ್ಯ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಶ್ರೀ.ಮೋಹನ್ ಗೌಡರವರು ಪ್ರಕರಣದ 1ನೇ ಆರೋಪಿ ಕೆ.ಜಿ.ಸುರೇಶನಿಗೆ ಕಲಂ 380 ಐಪಿಸಿ ಗೆ 3 ವರ್ಷ, ಕಲಂ 457 ಐಪಿಸಿಗೆ 3 ವರ್ಷ, 3ನೇ ಆರೋಪಿ ಹೆಚ್.ಆರ್.ಗಿರೀಶ ಕಲಂ 380 ಐಪಿಸಿ ಗೆ 1 ವರ್ಷ, ಕಲಂ 457 ಐಪಿಸಿಗೆ 1 ವರ್ಷ ಹಾಗೂ 4ನೇ ಆರೋಪಿ ರಾಜುರವರಿಗೆ ಕಲಂ.411 ಐಪಿಸಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀಪರ್ು ನೀಡಿರುತ್ತಾರೆ. 2ನೇ ಆರೋಪಿ ಯೊಗೇಶ ಜಾಮೀನಿನ ಮೇಲೆ ಹೊರಬಂದ ನಂತರ ತಲೆಮರೆಸಿಕೊಂಡಿರುತ್ತಾನೆ. ಮೈಸೂರಿನ ಕೇಂದ್ರ ಕಾರಾಗೃದಲ್ಲಿಕೊಂಡು ಕಳ್ಳತನಕ್ಕೆ ಸಂಚು ರೂಪಿಸಿದ್ದ ಆರೋಪದಿಂದ ರಾಜೇಶ್ ಮತ್ತು ಸುಭಾಷ್ ರವರುಗಳನ್ನು ಖುಲಾಸೆಗೊಳಿಸಿರುತ್ತದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ.ರಂಜಿತ್ರವರು ವಾದ ಮಂಡಿಸಿದ್ದರು.

     ಈ ಪ್ರಕರಣದ ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶ್ರೀ. ಪಿ.ಕೆ. ರಾಜು ಹಾಗೂ ಸಿಬ್ಬಂದಿಯವರ ಈ ಕಾರ್ಯವನ್ನು ಶ್ಲಾಘಿಸಿ ಅವರಿಗೆ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಮಾನ್ಯ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ.

                                                                        ಸಾರ್ವಜನಿಕ ಮಾಹಿತಿ ಅಧಿಕಾರಿ
                                                                             ಕೊಡಗು ಜಿಲ್ಲೆ, ಮಡಿಕೇರಿ.


                                                                                          --- 
 
ಪಾದಚಾರಿಗೆ ಆಟೋ ಡಿಕ್ಕಿ
                  ಗೋಣೀಕೊಪ್ಪ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕರಾಗಿ ಕೆಲಸ ಮಾಡುತ್ತಿರುವ ಕುಂದ ಗ್ರಾಮದ ಕಾರ್ಯಪ್ಪ ಎಂಬುವವರು ದಿನಾಂಕ 29-08-2017 ರಂದು ಸಂಚಾರ ನಿಯಂತ್ರಣ ಕರ್ತವ್ಯ ಮುಗಿಸಿ ರಾತ್ರಿ 8-00 ಗಂಟೆಗೆ ಠಾಣೆಗೆ ನಡೆದುಕೊಂಡು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಆಟೋವನ್ನು ಅದರ ಚಾಲಕ ಉಮೇಶ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಕಾರ್ಯಪ್ಪನವರಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರ ಕಳವಿಗೆ ಯತ್ನ
                    ದಿನಾಂಕ 30-08-2017 ರಂದು ಕೊಂಡಂಗೇರಿ, ಹಾಲುಗುಂದ ಗ್ರಾಮದ ನಿವಾಸಿಯಾದ ಸಫಿಯಾ ಎಂಬುವವರ ಮನೆಯ ಹಿಂಬದಿಯಲ್ಲಿ ಒಣಗಿ ಬಿದ್ದಿದ್ದ ಬೀಟೆ ಮರವನ್ನು ಯಾರೋ ತುಂಡುಗಳನ್ನಾಗಿ ಮಾಡಿ ಸಾಗಿಸಲು ಪ್ರಯತ್ನ ಪಟ್ಟಿದ್ದು, ಈ ಬಗ್ಗೆ ಸಫಿಯಾರವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕು ಅಪಘಾತ
                              ದಿನಾಂಕ 30-08-2017 ರಂದು ಸೋಮವಾರಪೇಟೆಯ ಕಾರೆಕೊಪ್ಪಲುವಿನ ನಿವಾಸಿ ರವಿ ಎಂಬುವವರು ಕುಶಾಲನಗರಕ್ಕೆ ಹೋಗುತ್ತಿರುವಾಗ ಯಡವನಾಡು ಬಳಿ ವಾಹನಕ್ಕೆ ದಾರಿ ಕೊಡುವ ವೇಳೆ ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಗೀತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                          ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಶರತ್ ಎಂಬುವವರು ದಿನಾಂಕ 27-08-2017 ರಂದು ಅಕ್ಕ ಸೌಮ್ಯರವರ ಸ್ಕೂಟರನ್ನು ತೆಗೆದುಕೊಂಡು ಹೋಗಿದ್ದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ದಿನಾಂಕ 30-08-2017 ರಂದು ಸೌಮ್ಯರವರ ಗಂಡ ಯೋಗಣ್ಣರವರು ಸ್ಕೂಟರನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದೆ ಎಂದು ಕೇಳಿದಾಗ ಜಗಳ ತೆಗೆದು ಚಾಕುವಿನಿಂದ ಯೋಗಣ್ಣನವರಿಗೆ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೌಮ್ಯರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, August 30, 2017

ರಸ್ತೆ ಅಫಘಾತ
                    ದಿನಾಂಕ 22/08/2017ರಂದು ಸೋಮವಾರಪೇಟೆ ಬಳಿಯ ಬಿಳಿಗೇರಿ ನಿವಾಸಿ ಕೆ.ಕೆ.ರೀನಾ ಎಂಬವರು ಸೋಮವಾರಪೇಟೆ ನಗರದ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-21-ಎಸ್-7228ರ ಮೋಟಾರು ಬೈಕನ್ನು ಅದರ ಚಾಲಕ ಮಂಜುನಾಥ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಕೆ.ರೀನಾರವರಿಗೆ ಡಿಕ್ಕಿಪಡಿಸಿದ  ಪರಿಣಾಮ ರೀನಾರವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 28/08/2017ರಂದು ಮಡಿಕೇರಿ ಬಳಿಯ ಬಕ್ಕ ಹೊಸ್ಕೇರಿ ನಿವಾಸಿ ಸರೋಜ ಎಂಬವರು ಅವರ ತಾಯಿಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರ ಪತಿ ಸೋಮ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕುಸಿದು ಬಿದ್ದು ವ್ಯಕ್ತಿ ಸಾವು
                 ದಿನಾಂಕ 29/08/2017ರಂದು ಕುಶಾಲನಗರ ಬಳಿಯ ರಂಗಸಮುದ್ರ ನಿವಾಸಿ ರಾಜು ಎಂಬವರ ಮಗ  ಮೋಹನ್ ಕುಮಾರ್ ಎಂಬಾತನು ರಂಗ ಸಮುದ್ರ ಗ್ರಾಮದಲ್ಲಿನ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಬಾಳುಗೋಡಿನ ಬಳಿ ರಸ್ತೆಯಲ್ಲಿ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದಾಗ ಆತನು ಮೃತನಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, August 29, 2017


ಶಾಲಾ ಬಾಲಕನಿಗೆ ಲಾರಿ ಡಿಕ್ಕಿ
                        ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ 14 ವರ್ಷ ಪ್ರಾಯದ ಹೇಮಂತ್ ಎಂಬುವವರು ದಿನಾಂಕ 28-08-2017 ರಂದು ಬೆಳೀಗ್ಗೆ ತಾಕೇರಿ ಗ್ರಾಮದ ಕೂಡು ಗದ್ದೆಯ ಬಳಿ ತಿರುವು ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಟಿಪ್ಪರ್ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಹಿಂಬದಿಯಿಂದ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಹೇಮಂತ್ ರವರಿಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                         ದಿನಾಂಕ 24-08-2017 ರಂದು ಹಾಸನ ಜಿಲ್ಲೆಯ ಸಕಲೇಶಪುರದ ಗೂರು ಗ್ರಾಮದ ನಿವಾಸಿ ನಿರ್ವಾಣಶೆಟ್ಟಿ ಎಂಬುವವರು ಮೋಟಾರು ಸೈಕಲಿನಲ್ಲಿ ಕೊಡ್ಲಿಪೇಟೆಯಿಂದ ಶನಿವಾರಸಂತೆಗೆ ಹೋಗುತ್ತಿರುವಾಗ ದೊಡ್ಡಕುಂದ ಎಂಬಲ್ಲಿ ಎದುರುಗಡೆಯಿಂದ ಕೆಎ-12-ಎಂ-7152 ರ ಜೀಪನ್ನು ಚಾಲಕ ದರ್ಶನ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿರ್ವಾಣಶೆಟ್ಟಿಯವರಿಗೆ ಗಾಯವಾಗಿದ್ದು, ಈ ಬಗ್ಗೆ ನಿರ್ವಾಣಶೆಟ್ಟಿಯವರ ಮಗ ನೀಡಿದ ದೂರಿನ ಮೇರೆಗೆ ಶನಿವಾಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, August 28, 2017

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

      ಸೋಮವಾರಪೇಟೆ ತಾಲೋಕು ತಾಕೇರಿ ಗ್ರಾಮದ ನಿವಾಸಿ ಎ.ಎಂ. ಬೋಪಯ್ಯ ಎಂಬವರು ಅವರ ಪತ್ನಿಯೊಂದಿಗೆ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ವಾಸದ ಮನೆಗೆ ಹೋಗುತ್ತಿದ್ದಾಗ ಅವರ ಮನೆಯ ಮುಂದೆ ಮೈದಾನದಲ್ಲಿ ನಿಂತಿದ್ದ ಯಶವಂತ್ ಮತ್ತು ವೆಂಕಟೇಶ್ ಎಂಬವರು ಮನೆಗೆ ಹೋಗದಂತೆ ಅಡ್ಡಗಟ್ಟಿ ದಾರಿ ತಡೆದು ಕೆಳಗೆ ಬೀಳಿಸಿ ಕೈಯಿಂದ ಹಲ್ಲೆ ಮಾಡಿ ನೋವು ಪಡಿಸಿದ್ದು, ಅಲ್ಲದೆ ಎ.ಎಂ.ಬೋಪಯ್ಯ ಮತ್ತು ಅವರ ಪತ್ನಿ ಗುಣವತಿರವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ: 

    ವ್ಯಕ್ತಿಯೊಬ್ಬರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮತ್ತುರು ಗ್ರಾಮದ ಬಾಳೆಲೆ ರಸ್ತೆಯಲ್ಲಿರುವ ಕೆ.ಇ.ಬಿ. ಕಛೇರಿಯ ಬಳಿ ಅಂಗಡಿಯನ್ನು ನಡೆಸುತ್ತಿರುವ .ಎಂ.ಎ. ಬಿದ್ದಪ್ಪ ಎಂಬವರು ಅಕ್ರಮವಾಗಿ ಅವರ ಅಂಗಡಿ ಮುಂದುಗಡೆ ಸಾರ್ವಜನಿಕವಾಗಿ ಮದ್ಯವನ್ನು ಮಾರಾಟ ಮಾಡಿ ಸೇವಿಸಲು ಅವಕಾಶ ಕಲ್ಪಿಸಿದ್ದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, August 27, 2017

ಪಾದಚಾರಿಗೆ ಆಟೋ ರಿಕ್ಷಾ ಡಿಕ್ಕಿ:

     ಪಾದಚಾರಿಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಅವರು ಗಾಯಗೊಂಡ ಘಟನೆ ಮಡಿಕೇರಿ ತಾಲೋಕು ಕತ್ತಲೆಕಾಡು ಪೈಸಾರಿಯಲ್ಲಿ ನಡೆದಿದೆ. ದಿನಾಂಕ 25-8-2017 ರಂದು ರಾತ್ರಿ 8-45 ಗಂಟೆಗೆ ಕತ್ತಲೆಕಾಡು ಪೈಸಾರಿ ನಿವಾಸಿ ಶೇಖರ ಎಂಬವರು ಅವರ ತಮ್ಮ ಮಂಜುನಾಥ ಹಾಗು ಕುಟುಂಬದವರೊಂದಿಗೆ ಕತ್ತಲೆಕಾಡು ಪೈಸಾರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಪೂಜೆಗೆಂದು ಹೋಗಿದ್ದು, ಮರಳಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿಯಿಂದ ಬಂದ ಆಟೋ ರಿಕ್ಷಾವೊಂದು ಮಂಜುನಾಥನವರಿಗೆ ಡಿಕ್ಕಿಯಾದ ಪರಿಣಾಮ  ಸದರಿ ಮಂಜುನಾಥರವರು ರಸ್ತೆಗೆ ಬಿದ್ದು ಅವರ ತಲೆಗೆ ಪೆಟ್ಟಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ.

     ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ಅರುವತ್ತೊಕ್ಲು ಗ್ರಾಮದ ಮೈಸೂರಮ್ಮನಗರದ ವಾಸಿ 75 ವರ್ಷ ಪ್ರಾಯದ ಕುಂಞುನ್ ಎಂಬವರು ದಿನಾಂಕ 25-8-2017 ಮತ್ತು 26-8-2017ರ ಬೆಳಗ್ಗೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಅರುವತ್ತೊಕ್ಲು ಗ್ರಾಮದ ಗಿರೀಶ್ ಎಂಬವರ ಕಾಫಿ ತೋಟದಲ್ಲಿ ತಮ್ಮ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯ ಅಸಹಜ ಸಾವು.

     ಫಿರ್ಯಾದಿ ಎ.ಎಸ್. ಹಮೀದ್ ರವರು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಮರೂರು ಜಂಕ್ಷನ್ ನಲ್ಲಿ ಹೊಟೇಲ್ ವೊಂದನ್ನು ನಡೆಸುತ್ತಿದ್ದು ಸದರಿ ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ 50 ವರ್ಷ ಪ್ರಾಯದ ಮಂಜು ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಒಮ್ಮೆ ಹೃದಯಾಘಾತಕ್ಕೀಡಾಗಿದ್ದು, ದಿನಾಂಕ 25-8-2017 ರಂದು ರಾತ್ರಿ ಹೊಟೇಲ್ ಕೆಲಸ ಮುಗಿಸಿ ಎಂದಿನಂತೆ ಹೊಟೇಲ್ ನಲ್ಲಿ ಮಲಗಿದ್ದು ಮಾರನೇ ದಿನ ದಿನಾಂಕ 26-8-2017 ರಂದು ಹೊಟೇಲ್ ಮಾಲಿಕ ಎ.ಎಸ್. ಹಮೀದ್ ರವರು ಹೊಟೇಲ್ ಗೆ ಬಂದು ಮಂಜುರವರನ್ನು ಕರೆದಾಗ ಅವರು ಸಾವನಪ್ಪಿದ್ದು ಕಂಡು ಬಂದಿದ್ದು, ಈ ಬಗ್ಗೆ ಎ.ಎಸ್. ಹಮೀದ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Saturday, August 26, 2017

ಪತ್ರಿಕಾ ಪ್ರಕಟಣೆ.

        ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಗೋಣಿಕೊಪ್ಪ ನಗರದಲ್ಲಿ ದಿನಾಂಕ:21/08/2017 ರಂದು ರಾತ್ರಿ ನಡೆದ ರಮೇಶ್ ಎಂಬವರ ಕೊಲೆ ಪ್ರಕರಣದ ಆರೋಪಿತರನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿ ಯಾಗಿದ್ದಾರೆ.

     ದಿನಾಂಕ:22/08/2017 ರಂದು ಫಿರ್ಯಾದಿ ಶ್ರೀಮತಿ ಸೆಲ್ವಿ ತಂದೆ ಮಾದು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ, ವಾಸ:ಪಟೇಲ್ ನಗರ ಗೋಣಿಕೊಪ್ಪ ಇವರು ಗೋಣಿಕೊಪ್ಪ ಪೊಲೀಸ್ ಠಾಣೆಗೆ ಹಾಜರಾಗಿ, ತನ್ನ ಅಣ್ಣ ರಮೇಶ್ರವರು ಗೋಣಿಕೊಪ್ಪ ನಗರದಲ್ಲಿ ಕುಕ್ಕೆ ವ್ಯಾಪಾರ ಹಾಗೂ ಗೂಡ್ಸ್ ಅಟೋ ಚಾಲನೆ ಮಾಡಿಕೊಂಡು ತನ್ನ ತಾಯಿಯೊಂದಿಗೆ ವಾಸವಾಗಿದ್ದು, ರಮೇಶನು ದಿನಾಂಕ 21/08/2017 ರಂದು ಬೆಳಿಗ್ಗೆ 08.00 ಗಂಟೆ ಮನೆಯಿಂದ ಹೋಗಿದ್ದು, ರಾತ್ರಿ ಮನೆಗೆ ವಾಪಾಸ್ಸು ಬಾರದೇ ಇದ್ದು, ದಿನಾಂಕ:22/08/2017 ರಂದು ನೋಡಲಾಗಿ ಅರ್ವತ್ತೊಕ್ಲು ಗ್ರಾಮದ ಮೈಸೂರಮ್ಮ ನಗರದ ಜಿ.ಟಿ.ಗಿರೀಶ್ ರವರಿಗೆ ಸೇರಿದ ನಿವೇಶನದ ಒಳಗಡೆ ರಸ್ತೆಯಲ್ಲಿ ಯಾರೋ ದುಷ್ಕರ್ಮಿಗಳು ರಮೇಶನ ಗಂಟಲಿನ ಭಾಗಕ್ಕೆ ಹಾಗೂ ಶರೀರದ ಇತರೆ ಭಾಗಗಳಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಪುಕಾರು ನೀಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ.132/2017 ಕಲಂ:302 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.

     ಈ ಕೊಲೆ ಆರೋಪಿತರ ಪತ್ತೆಗಾಗಿ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಶ್ರೀ. ಪಿ.ಕೆ ರಾಜು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ದಿನಾಂಕ: 26/08/2017 ರಂದು ಆರೋಪಿತರನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ.  

ಬಂಧಿತ ಆರೋಪಿಗಳ ವಿವರ:

1) ಎಸ್.ನಾರಾಯಣ ತಂದೆ:ಪೌತಿ ಸದಾಶಿವ, ಪ್ರಾಯ 38 ವರ್ಷ, ಕುಕ್ಕೆ ವ್ಯಾಪಾರ, ಗ್ರಾಮ ಪಂಚಾಯ್ತಿ ಕಟ್ಟಡ, ಗೋಣಿಕೊಪ್ಪ. ವಾಸ: ಬೈಪಾಸ್ ರಸ್ತೆ, ಗೋಣಿಕೊಪ್ಪ. 

2) ಕಣ್ಣಂಬಾರ ಸಿ. ಮನೋಜ್ @ ಮನು, ತಂದೆ ಕೆ.ಪಿ. ಚಂದ್ರ, ಪ್ರಾಯ 34 ವರ್ಷ, ಪೆಯಿಂಟಿಂಗ್ ಕೆಲಸ, ವಾಸ ಕುಪ್ಪಂಡ ಪೂಣ್ಣಚ್ಚರವರ ಬಾಡಿಗೆ, ಮನೆ, ಮೈಸೂರಮ್ಮ ನಗರ, ಅರುವತ್ತೋಕ್ಲು ಗ್ರಾಮ, ಗೋಣಿಕೊಪ್ಪ.

          ದಿನಾಂಕ:26/08/2017 ರಂದು ಪ್ರಕರಣದ 1ನೇ ಆರೋಪಿ ನಾರಾಯಣನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದು, 2ನೇ ಆರೋಪಿ ಮನೋಜ್ ನನ್ನು ಗೋಣಿಕೊಪ್ಪದಲ್ಲಿ ದಸ್ತಗಿರಿ ಮಾಡಿದ್ದು, ಆರೋಪಿತರುಗಳ ವಿಚಾರಣೆ ಮಾಡಲಾಗಿ ತನಿಖೆಯಿಂದ ತಿಳಿದುಬಂದ ಅಂಶವೇನೆಂದರೆ, ಆರೋಪಿ ನಾರಾಯಣನಿಗೂ ಮತ್ತು ಮೃತ ರಮೇಶ್ ರವರ ಕುಟುಂಬಕ್ಕೂ ಕುಕ್ಕೆ ವ್ಯಾಪಾರದ ವಿಚಾರದಲ್ಲಿ ಸುಮಾರು 30 ವರ್ಷಗಳಿಂದ ಇದ್ದ ವೈಷಮ್ಯವೇ ಕಾರಣವಾಗಿರುತ್ತದೆ. ಕಳೆದ 3 ತಿಂಗಳ ಹಿಂದೆ ಆರೋಪಿತ ನಾರಾಯಣನು ಬೈಪಾಸ್ ದಲ್ಲಿರುವ ತನ್ನ ಮನೆಯಿಂದ ಅಂಗಡಿಗೆ ಹೋಗುತ್ತಿರುವಾಗ್ಗೆ ರಮೇಶನು ಅವನ ಗೂಡ್ಸ್ ಅಟೋದಲ್ಲಿ ಆರೋಪಿತನ ಸ್ಕೂಟರಿಗೆ ಡಿಕ್ಕಿಪಡಿಸಲು ಪ್ರಯತ್ನಪಟ್ಟಾಗ ಆರೋಪಿ ನಾರಾಯಣನು ತಪ್ಪಿಸಿಕೊಂಡು ಪಾರಾಗಿರುತ್ತಾನೆಂದು, ರಮೇಶನನ್ನು ಹೀಗೆ ಬಿಟ್ಟರೆ ತನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದುಕೊಂಡ ಆರೋಪಿ ನಾರಾಯಣನು ರಮೇಶನನ್ನು ಕೊಲೆ ಮಾಡಲು ನೆರವು ನೀಡುವ ಬಗ್ಗೆ ಒಂದು ತಿಂಗಳ ಹಿಂದೆ 2ನೇ ಆರೋಪಿ ಮನೋಜನಿಗೆ ಕೇಳಿಕೊಂಡಿದ್ದು ಮನೋಜನು ಅದಕ್ಕೆ ಒಪ್ಪಿಕೊಂಡಿರುತ್ತಾನೆ. ರಮೇಶನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರಲು ಅನುಕೂಲವಾಗುವಂತೆ 1ನೇ ಆರೋಪಿಯ ಸಲಹೆಯಂತೆ ಮನೋಜನು ರಮೇಶನೊಂದಿಗೆ ಒಂದು ತಿಂಗಳಿನಿಂದ ಆತ್ಮೀಯನಂತೆ ವರ್ತಿಸಿರುತ್ತಾನೆ. ದಿನಾಂಕ:21/08/2017 ರ ಸೋಮವಾರದಂದು 2ನೇ ಆರೋಪಿ ಮನೋಜನು ರಮೇಶನನ್ನು ಪಾರ್ಟಿ ಮಾಡುವ ನೆಪದಲ್ಲಿ ಗೋಣಿಕೊಪ್ಪ ನಗರದ ಬೈಪಾಸ್ ನಲ್ಲಿರುವ ಖಾಲಿ ಜಾಗಕ್ಕೆ ಕರೆದುಕೊಂಡು ಬಂದಿದ್ದು, ರಮೇಶನು ನಿಶ್ಚಿತಾರ್ಥವಾಗಿದ್ದ ಯುವತಿಯೊಂದಿಗೆ ತನ್ನ ವಾಹನದಲ್ಲಿಯೇ ಕುಳಿತುಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ, ರಾತ್ರಿ 10 ಗಂಟೆ 10 ನಿಮಿಷದ ವೇಳೆಗೆ 1ನೇ ಆರೋಪಿ ನಾರಾಯಣನು ಮನೋಜನ ಸಹಕಾರದೊಂದಿಗೆ ರಮೇಶನ ಮೇಲೆ ಏಕಾಏಕಿ ಧಾಳಿ ಮಾಡಿ, ಆತನ ಕುತ್ತಿಗೆ, ಭುಜ, ಮುಖದ ಭಾಗಗಳನ್ನು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ.

ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಈ ಕೆಳಕಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.


1. ಕೃತ್ಯಕ್ಕೆ ಬಳಸಿದ ಅಲ್ಟೋ-800 ಕಾರ್ ನಂ. ಏಂ-12 ಚ-1239
2. ಕೃತ್ಯಕ್ಕೆ ಬಳಸಿದ ಸ್ಕೂಟಿ ನಂ. ಏಂ-12 ಐ-1210
3. 90,000/- ನಗದು ಹಣ
4. ಕೃತ್ಯಕ್ಕೆ ಬಳಸಿದ ಚಾಕು

     ಗೋಣಿಕೊಪ್ಪ ಭಾಗದ ಸಾರ್ವಜನಿಕರಲ್ಲಿ ತಲ್ಲಣ ಉಂಟು ಮಾಡಿದ್ದ ಈ ಕೊಲೆ ಪ್ರಕರಣದ ಆರೋಪಿತರನ್ನು ಮಾನ್ಯ ಪಿ.ರಾಜೇಂದ್ರ ಪ್ರಸಾದ್, ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ಹಾಗೂ ವಿರಾಜಪೇಟೆ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ.ನಾಗಪ್ಪ, ರವರ ಮಾರ್ಗದರ್ಶನದಲ್ಲಿ ಶ್ರೀ.ಪಿ.ಕೆ ರಾಜು ಸಿ.ಪಿ.ಐ ಗೋಣಿಕೊಪ್ಪ ವೃತ್ತ ರವರ ನೇತೃತ್ವದ ತಂಡ ಬಂಧಿಸಿರುತ್ತದೆ. ಸದರಿ ಕಾರ್ಯಾಚರಣೆಯಲ್ಲಿ ಶ್ರೀ.ಪಿ.ಕೆ ರಾಜು ಸಿ.ಪಿ.ಐ ಗೋಣಿಕೊಪ್ಪ ವೃತ್ತ, ಶ್ರೀ ಹೆಚ್.ವೈ ರಾಜು, ಪಿ.ಎಸ್.ಐ ಗೋಣಿಕೊಪ್ಪ ಠಾಣೆ, ಶ್ರೀ.ಬಿ.ಜಿ.ಮಹೇಶ್, ಪಿ.ಎಸ್.ಐ ಪೊನ್ನಂಪೇಟೆ ಠಾಣೆ ಹಾಗೂ ಸಿಬ್ಬಂದಿಗಳಾದ ಕೃಷ್ಣ, ಮಹಮದ್ ಅಲಿ, ಎಂ.ಡಿ.ಮನು, ಸುರೇಂದ್ರ, ಪೂವಣ್ಣ, ಅಬ್ದುಲ್ ಮಜೀದ್, ಬಿ.ಟಿ.ಮಂಜುನಾಥ್, ಹರೀಶ್ ಕುಮಾರ್, ಮೋಹನ್, ಕೃಷ್ಣಮೂರ್ತಿ, ಪುಟ್ಟರಾಜು, ರಂಜಿತ್, ಶೇಖರ್, ಚಾಲಕ ಕೃಷ್ಣಪ್ಪ ಹಾಗೂ ಜಿಲ್ಲಾ ಸಿಡಿಆರ್ ಘಟಕದ ಸಿಬ್ಬಂದಿ ರಾಜೇಶ್ ಹಾಗೂ ಗಿರೀಶ್ ಭಾಗವಹಿಸಿದ್ದು, ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ. 

                                                                                                       ಸಾರ್ವಜನಿಕ ಮಾಹಿತಿ ಅಧಿಕಾರಿ,
                                                                                                              ಕೊಡಗು ಜಿಲ್ಲೆ.
                                                                              ---
                                                                                    
 
 
ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ:

     ಆಟೋ ರಿಕ್ಷಾಕ್ಕೆ ಬೈಕೊಂದು ಹಿಂದಿನಿಂದ ಬಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ತಾಲೋಕು ಯಡೂರುಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಯಡೂರು ಗ್ರಾಮದ ನಿವಾಸಿ ಡಿ.ಸಿ ರಾಜು ಎಂಬವರು ದಿನಾಂಕ 22-8-2017 ರಂದು ಆಟೋ ರಿಕ್ಷಾವೊಂದರಲ್ಲಿ ಸೋಮವಾರಪೇಟೆ ಯಿಂದ ಯಡೂರು ಗ್ರಾಮದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದು ಸದರಿ ಆಟೋ ರಿಕ್ಷಾದ ಹಿಂದಿನಿಂದ ಮೋಟಾರ್ ಸೈಕಲ್ ವೊಂದು ಬರುತ್ತಿದ್ದು ಆಟೋ ರಿಕ್ಷಾವನ್ನು ಚಲಾಯಿಸುತ್ತಿದ್ದ ಡೈವರ್ ದಿಡೀರನೆ ಆಟೋ ರಿಕ್ಷಾವನ್ನು ನಿಲ್ಲಿಸಿದ್ದರಿಂದ ಹಿಂದಿನಿಂದ ಬರುತ್ತಿದ್ದ ಬೈಕ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಟೆಂಪೋ ವಾಹನ ಡಿಕ್ಕಿ:

     ದಿನಾಂಕ 25-08-17 ರಂದು ಬೆಳಗ್ಗೆ ದಿವ್ಯಸಿಂಗ್ (ವಾಸ ರಾಯಿನ್‌ ನಗರ ಚತ್ತಿಸ್‌ಗಡ) ರವರು ಅವರ ಸ್ನೇಹಿತರಾದ ನೇಹಾ, ಶಿರಾನಿ, ಶಿಕಾ ಪೂಜಾರವರೊಂದಿಗೆ ಕೆ ಎ 51 ಎಎ 1195 ಮಾರುತಿ ಬಲಿನೋ ಕಾರಿನಲ್ಲಿ ಬೆಂಗಳೂರಿನಿಂದ ಮಡಿಕೇರಿಗೆ ಹೋಗುತ್ತಿದ್ದಾಗ ಸಮಯ 03-30 ಪಿಎಂಗೆ ಕುಶಾಲನಗರದ ನಿಸರ್ಗದಾಮದ ಹತ್ತಿರ ತಲುಪುವಾಗ್ಗೆ ಎದುರುಗಡೆಯಿಂದ ಅಂದರೆ ಮಡಿಕೇರಿ ಕಡೆಯಿಂದ ಬಂದ ಕೆ ಎ01 ಎಸಿ 5015 ಟೆಂಪೋ ಟ್ರಾವೆಲ್ಲರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿ ದಿವ್ಯಸಿಂಗ್ ಮತ್ತು ಕಾರಿನಲ್ಲಿದ್ದ ಇತರರಿಗೆ ಗಾಯ ನೋವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದ ನಿವಾಸಿ ಅಪ್ಪಂಡೆರಂಡ ದಿನು ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಪಣಿಎರವರ ಮಂಜು ಎಂಬವರು ದಿನಾಂಕ 24-8-2017 ರಂದು ಕಂಡಂಗಾಲ ಗ್ರಾಮದ ಅಪ್ಪಂಡೆರಂಡ ಕಾಳಪ್ಪ ಎಂಬವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, August 25, 2017

ಲಾರಿ ಅವಘಡ, ಕ್ಲೀನರ್ ಸಾವು
                                 ದಿನಾಂಕ 24/08/2017ರಂದು ಬೆಳಗಿನ ಜಾವ ಸಮಯದಲ್ಲಿ ವಿರಾಜಪೇಟೆ ಬಳಿಯ ಮಾಕುಟ್ಟದಲ್ಲಿನ ಒಂದು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿರುವ ಪೋಕರ್‌ ಎಂಬವರು ಹೋಟೆಲಿನಲ್ಲಿರುವಾಗ ದಾರಿಯಲ್ಲಿ ಯಾವುದೋ ವಾಹನವೊಂದು ಮಗುಚಿಬಿದ್ದ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ಎಪಿ-07-ಟಿಹೆಚ್-2059ರ ಸಂಖ್ಯೆ ಸರಕು ತುಂಬಿದ ಲಾರಿಯೊಂದು ಮಗುಚಿ ಬಿದ್ದುದ್ದು ಅದರ ಕ್ಲೀನರ್‌ ರಾಜು ಎಂಬಾತನು ಲಾರಿಯಡಿ ಸಿಲುಕಿ ಮೃತಪಟ್ಟಿರುವುದು ಕಂಡು ಬಂದಿರುವುದಾಗಿದೆ. ಲಾರಿಯ ಚಾಲಕ ವೆಂಕಟರಮಣರವರು ಲಾರಿಯನ್ನು ತಿರುವಿನಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿಯು ಸಮತೋಲನ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಅವಘಢ ಸಂಭವಿಸಿರುವುದಾಗಿ ಪೋಕರ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಲಾರಿ ಅವಘಢ
                        ದಿನಾಂಕ 24/08/2017ರಂದು ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಗೋಲ್ಡನ್ ರಾಕ್ಸ್ ಸಂಸ್ಥೆಗೆ ಸೇರಿದ ಕೆಎ-12-ಎ-4137 ಸಂಖ್ಯೆ ಟಿಪ್ಪರ್ ಲಾರಿಯಲ್ಲಿ ಇಟ್ಟಿಗೆಗಳನ್ನು ತುಂಬಿಸಿಕೊಂಡು ಅದರ ಚಾಲಕ ಕೆ.ಹೆಚ್‌ಆಲಿ ಎಂಬವರು ವಿರಾಜಪೇಟೆಗೆ ಹೋಗುತ್ತಿರುವಾಗ ಹೆಗ್ಗಳ ಗ್ರಾಮದ ನ್ಯಾಯಬೆಲೆ ಅಂಗಡಿಯ ಬಳಿ ಚಾಲಕ ಆಲಿರವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ಆಲಿಯವರ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, August 24, 2017

 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸೋಮವಾರಪೇಟೆ ತಾಲೋಕು ಜೌಡ್ಲು ಗ್ರಾಮದಿಂದ ವರದಿಯಾಗಿದೆ. ಚೌಡ್ಲು ಗ್ರಾಮದ ನಿವಾಸಿ ದಿಲೀಪ್ ಎಂಬವರ ತಂದೆ ಧರ್ಮಪ್ಪ ಎಂಬವರು ದಿನಾಂಕ 23-8-2017 ರಂದು ತಾವು ವಾಸವಾಗಿರುವ ಮನೆಯಲ್ಲಿ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಸದರಿಯವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ವ್ಯಕ್ತಿ ಧರ್ಮಪ್ಪನವರು ಸಾವನಪ್ಪಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಮೆರಾ ಟ್ರ್ಯಾಪ್ ಯಂತ್ರ ಕಳವು:

     ಕಾಡು ಪ್ರಾಣಿಗಳ ಚಲನವಲನಗಳನ್ನು ವೀಕ್ಷಿಸಲು ಅನುಸ್ಥಾಪಿಸಿದ್ದ ಸುಮಾರು 19 ಸಾವಿರ ರೂ ಮೌಲ್ಯದ ಕ್ಯಾಮೇರಾ ಟ್ರ್ಯಾಪ್ ಯಂತ್ರವನ್ನು ಕಳ್ಳತನ ಮಾಡಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಬಿಬಿಟಿಸಿ ಮೈತಾಲ್ ಪುರ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ತಿತಿಮತಿ ವಲಯದ ಚೆನ್ನಂಗಿ ಶಾಖೆಯ ಮಾಲ್ದಾರೆ ಗ್ರಾಮ ವ್ಯಾಪ್ತಿಯಲ್ಲಿ ಆಗ್ಗಿಂದಾಗೆ ಹುಲಿಯು ಕಾಣಿಸಿ ಕೊಳ್ಳುತ್ತಿರುವ ಬಗ್ಗೆ ಸದರಿ ಗ್ರಾಮದ ಜನರಿಂದ ದೂರು ಬಂದ ಹಿನ್ನೆಲೆಯಲ್ಲಿ ಸದರಿ ಗ್ರಾಮದ ಬಿಬಿಟಿಸಿ ಮೈಲಾತ್ ಪುರ ಕಾಫಿ ತೋಟದಲ್ಲಿ ಎಂಬಲ್ಲಿ ದಿನಾಂಕ 14/08/17 ರಂದು ಬೆಳಿಗ್ಗೆ ಕ್ಯಾಮೇರಾ ಟ್ರ್ಯಾಪ್ ಯಂತ್ರ ವನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಅಳವಡಿಸಿದ್ದು, ದಿನಾಂಕ 15/08/17 ರಂದು ಮದ್ಯಾಹ್ನ 2.30 ಗಂಟೆಗೆ ಸದರಿ ಸ್ಥಳದಲ್ಲಿ ಹೋಗಿ ಪರಿಶೀಲಿಸಿದಾಗ ಸದರಿ ಕ್ಯಾಮೇರಾ ಟ್ರ್ಯಾಪ್ ಯಂತ್ರ ವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅಶೋಕ್ ಪರಮಾನಂದ ಹನಗುಂದ ಅರಣ್ಯವಲಯಾಧಿಕಾರಿ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾರುಗಳ ಮುಖಾಮುಖಿ ಡಿಕ್ಕಿ:

      ಕುಶಾಲನಗರದ ಕಾರಿಯಪ್ಪ ಬಡಾವಣೆ ನಿವಾಸಿ ಬಿ.ಪಿ. ಹರೀಶ ಎಂಬವರು ದಿನಾಂಕ 20-8-2017 ರಂದು ರಾತ್ರಿ 9-30 ಗಂಟೆಗೆ ತಮ್ಮ ಬಾಪ್ತು ಕಾರಿನಲ್ಲಿ ತನ್ನ ಸ್ನೇಹಿತ ಹರ್ಷ ಎಂಬವರೊಂದಿಗೆ ಗೋಣಿಕೊಪ್ಪದಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ತಿತಿಮತಿ ಮತ್ತಿಗೋಡುವಿನ ಆನೆಕ್ಯಾಂಪ್ ಬಳಿ ಮುಖ್ಯ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಿ.ಪಿ. ಹರೀಶ್ ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರು ಜಖಂಗೊಂಡಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, August 23, 2017

ವ್ಯಕ್ತಿಯ ಕೊಲೆ:

        ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ಗೋಣಿಕೊಪ್ಪ ಗ್ರಾಮದ ನಿವಾಸಿ ಶ್ರೀಮತಿ ಎಂ.ಸೆಲ್ವಿ ಎಂಬವರ ಸಹೋದರ ರಮೇಶ್ ಎಂಬಾತ ಗೂಡ್ಸ್ ವಾಹನವನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು ದಿನಾಂಕ 21-8-2017ರ ರಾತ್ರಿ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದ ಮೈಸೂರಮ್ಮ ನಗರದ ಜಿ.ಟಿ ಗಿರೀಶ್ ರವರಿಗೆ ಸೇರಿದ ನಿವೇಶನದಲ್ಲಿ  ಸದರಿ ರಮೇಶ್ ರವರ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲಿಸರು ತನಿಖೆ ಕಯಗೊಂಡಿದ್ದಾರೆ.

ಮೋಟಾರ್ ಬೈಕ್ ಕಳವು:

       ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಕಳ್ಳರು ಕಳವು ಮಾಡಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಚನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಚನ್ನಯ್ಯನಕೋಟೆ ಗ್ರಾಮದ ನಿವಾಸಿ ಟಿ.ಕೆ. ರಸಾಕ್ ಎಂಬವರು ತಮ್ಮ ಬಾಪ್ತು ಹಿರೋ ಹೋಂಡಾ ಪ್ಯಾಷನ್ ಮೊಟಾರ್ ಸೈಕಲನ್ನು ದಿನಾಂಕ 17-8-2017 ರಂದು ತಾವು ವಾಸವಾಗಿರುವ ಮನೆಯ ಮುಂದುಗಡೆ ನಿಲ್ಲಿಸಿದ್ದು ಅಂದು ರಾತ್ರಿ ಯಾರೋ ಕಳ್ಳರು ಸದರಿ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಕಾರು ಡಿಕ್ಕಿ:

     ವ್ಯಕ್ತಿಯೊಬ್ಬರು ಬೈಕಿನಲ್ಲಿ ಕುಳಿತುಕೊಂಡಿರುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಚಡಾವು ಎಂಬಲ್ಲಿ ನಡೆದಿದೆ. ದಿನಾಂಕ 21-08-2017 ರಂದು ಸಂಜೆ 6.30 ಗಂಟೆಗೆ ಸಂಪಾಜೆ ಗ್ರಾಮದ ಚಡಾವು ಎಂಬಲ್ಲಿ ಕೊಯಿನಾಡು ಗ್ರಾಮದ ನಿವಾಸಿ ಮಹಮ್ಮದ್ ಆಶೀಕ್ ಎಂಬವರು ತನ್ನ ಬೈಕ್ ನಲ್ಲಿ ಕುಳಿತುಕೊಂಡಿರುವಾಗ ಹಿಂದಿನಿಂದ KA-04-MF-3317 ರ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಜಖಂಗೊಂಡು ಮಹಮ್ಮದ್ ಆಶೀಕ್ ರವರು ಗಾಯಗೊಂಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮಣ್ಣಿನಿಂದ ಮರಳು ತಯಾರಿಕೆ , ಪ್ರಕರಣ ದಾಖಲು:


     ಅಕ್ರಮವಾಗಿ ಟಾಟಾ ಹಿಟಾಚಿ ಯಂತ್ರವನ್ನು ಬಳಸಿ ಮಣ್ಣಿನಿಂದ ಮರಳನ್ನು ಬೇರ್ಪಡಿಸಿ ಅಕ್ರಮ ಸಾಗಾಟಕ್ಕೆ ಶೇಖರಿಸಿಟ್ಟಿದ್ದನ್ನು ರೆವಿನ್ಯೂ ಇಲಾಖೆ ಅಧಿಕಾರಿಗಳು  ಹಾಗು ವಿರಾಜಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಡಂಗಾಲ ಗ್ರಾಮದ ನಿವಾಸಿಗಳಾದ ಜೀವನ್ ಹಾಗು ಇತರರು ಟಾಟಾ ಹಿಟಾಚಿ ವಾಹನದ ಸಹಾಯದಿಂದ ಮಣ್ಣಿನಿಂದ ಸುಮಾರು 3 ಲೋಡ್ ಮರಳನ್ನು ಬೇರ್ಪಡಿಸಿ ಅಕ್ರಮ ಸಾಗಾಟ ಮಾಡಲು ಶೇಖರಿಸಿಟ್ಟಿದನ್ನು ಪತ್ತೆಹಚ್ಚಿದ ರೆವಿನ್ಯು ಇಲಾಖೆ ಅಧಿಕಾರಿ ಮತ್ತು ವಿರಾಜಪೇಟೆ ಪೊಲೀಸರು ಆರೋಪಿಗಳ ವಿರುದ್ಧ, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, August 22, 2017

ಪರಸ್ಪರ ಹಲ್ಲೆ, ಕೊಲೆ ಬೆದರಿಕೆ
                         ದಿನಾಂಕ 19/08/2017ರಂದು ಸೋಮವಾರಪೇಟೆ ಬಳಿಯ ರೇಂಜರ್ ಬ್ಲಾಕ್ ನಿವಾಸಿ ಎಸ್‌.ಎಂ.ಮಿಲನ್ ಎಂಬವರು ನಗರದ ಕಬಾಬ್‌ ಅಂಗಡಿ ಒಂದರಲ್ಲಿ ಕಬಾಬ್ ಖರೀದಿಸಲೆಂದು ಸ್ನೇಹಿತ ಕೀರ್ತನ್‌ ಎಂಬವರೊಂದಿಗೆ ಹೋಗಿ ಅವರ ಕಾರಿನಲ್ಲಿ ಕುಳಿತಿರುವಾಗ ಅಲ್ಲಿಗೆ ಒಂದು ಸ್ಕೂಟರಿನಲ್ಲಿ ಬಂದ ಜನತಾ ಕಾಲೊನಿ ನಿವಾಸಿ ಹರ್ಷಿತ್‌ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಿಲನ್‌ರವರ ಮೇಲೆ ಹಲ್ಲೆ ಮಾಡಲೆತ್ನಿಸಿ ಕೊಲೆ  ಬೆದರಿಕೆ ಹಾಕಿರುವುದಾಗಿ ಮಿಲನ್‌ರವರು ದೂರು ನೀಡಿದ್ದು ಅದೇ ರೀತಿ ಐಗೂರು ನಿವಾಸಿ ಭರತ್ ಹಾಗೂ ಮಿಲನ್‌ರವರು ಸೇರಿ ಹರ್ಷಿತ್‌ರವರ ಮೇಲೆ ಹಲ್ಲೆ ಮಾಡಲೆತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                           ದಿನಾಂಕ 21/08/2017ರಂದು ಸೋಮವಾರಪೇಟೆ ಬಳಿಯ ಐಗೂರು ನಂಜಪ್ಪ ಎಂಬವರೊಂದಿಗೆ ಅವರ ಪಕ್ಕದ ಮನೆಯ ನಿವಾಸಿಗಳಾದ ಸೋಮಯ್ಯ ಹಾಗೂ ಕಮಲ ಎಂಬವರು  ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಂಜಪ್ಪ ಹಾಗೂ ಅವರ ಸೋದರಿ ಮೋಹಿನಿ ಎಂಬವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಅಫಘಾತ
                       ದಿನಾಂಕ 21/07/2017ರಂದು ಸೋಮವಾರಪೇಟೆ ಬಳಿಯ ಬಾಣಾವರ ನಿವಾಸಿ ರೂಪಾ ಎಂಬವರು ಯೋಗೆಶ್‌ ಎಂಬವರ ಕೆಎ-12-ಎನ್-1931ರ ಕಾರಿನಲ್ಲಿ ಬಾಣಾವರ ಗೇಟಿನ ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ವಿಶ್ವನಾಥ ಎಂಬವರು ಕೆಎ-12-ಜೆಡ್-9297ರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರೂಪಾರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ರೂಪಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, August 21, 2017

ಬೀಗ ಮುರಿದು ಕರಿಮೆಣಸು ಕಳವು:

     ಕಾಫಿ ಎಸ್ಟೇಟಿನ ಗೋದಾಮಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 18-8-2017 ರ ರಾತ್ರಿಯಿಂದ ದಿನಾಂಕ 19-8-2017ರ ಬೆಳಗಿನ ಜಾವ 6-00 ಗಂಟೆಯ ಮದ್ಯದ ಅವಧಿಯಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಮೇರಿ ಲ್ಯಾಂಡ್ ಕಾಫಿ ಎಸ್ಟೇಟಿನ ಗೋದಾಮಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಗೊದಾಮಿನಲ್ಲಿ ಶೇಖರಿಸಿಟ್ಟಿದ್ದ ಸುಮಾರು 20 ಲಕ್ಷ ರೂ ಮೌಲ್ಯದ 83 ಚೀಲ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ಕಾಫಿ ಎಸ್ಟೇಟಿನ ರೈಟರ್ ಲತೀಫ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ,

Sunday, August 20, 2017

ವಿಷ ಸೇವಿಸಿ ಆತ್ಮಹತ್ಯೆ
                       ಕುಟ್ಟ ಬಳಿಯ ಮಂಚಳ್ಳಿ ನಿವಾಸಿ ಮಲ್ಲಂಡ ನಾಣಯ್ಯ ಎಂಬವರು ದೀರ್ಘ ಕಾಲದಿಂದ ಮಧುಮೇಹ ಮತ್ತು ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು ಈ ಬಗ್ಗೆ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 15/08/2017ರಂದು ಇಲಿ ಕೊಲ್ಲಲು ಉಪಯೋಗಿಸುವ ವಿಷವನ್ನು ಸೇವಿಸಿ ಅಸ್ವಸ್ಥರಾದವರನ್ನು ಮೈಸೂರಿನ ಜೆ.ಎಸ್‌.ಎಸ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18/08/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ ಗಾಯಾಳು ಮೃತ
                    ದಿನಾಂಕ 16/08/2017ರಂದು ಗೋಣಿಕೊಪ್ಪ ಬಳಿಯ ಹರಿಶ್ಚಂದ್ರಪುರದ ಬಳಿ ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ಮೋಟಾರು ಬೈಕೊಂದು ಡಿಕ್ಕಿಯಾಗಿ  ಬೈಕ್ ಸವಾರ ರಾಹುಲ್‌ ಪಟೇಲ್‌ ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ರಾಹುಲ್ ಪಟೇಲ್‌ ಎಂಬವರನ್ನು ವಿಜಯಪುರದ ಚೌಧರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ರಾಹುಲ್‌ ಪಟೇಲ್‌ ದಿನಾಂಕ 19/08/2017ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಗೋಣಿಕೊಪ್ಪ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ
                      ದಿನಾಂಕ 17/08/2017ರಂದು ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಪಣಿ ಎರವರ ಅಯ್ಯಪ್ಪ ಎಂಬ ಬಾಲಕನು ಬೈಸಿಕಲ್‌ನಲ್ಲಿ ಅಂಗಡಿಗೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಕಳ್ಳೇಂಗಡ ಪೂವಯ್ಯ ಎಂಬವರು ಅವರ ಕೆಎ-12-ಎಂ-5755ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ಬಾಲಕ ಅಯ್ಯಪ್ಪನು ಚಾಲಿಸುತ್ತಿದ್ದ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬಾಲಕ  ಅಯ್ಯಪ್ಪನಿಗೆ ಗಾಯಗಳಾಗಿರುವುದಾಗಿ ಬಾಲಕನ ತಾಯಿ ಗಂಗೆ ಎಂಬವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅವಘಢ, ರಿಕ್ಷಾ ಚಾಲಕ ಸಾವು
                        ದಿನಾಂಕ 19/08/2017ರಂದು ವಿರಾಜಪೇಟೆ ಬಳಿಯ ಮಗ್ಗುಲ ನಿವಾಸಿ ಚೋಕಂಡ ಶಿವಪ್ಪ ಎಂಬವರು ಅವರ ಕೆಎ-12-ಎ-2893ರ ರಿಕ್ಷಾವನ್ನು ಚಾಲಿಸಿಕೊಂಡು  ವಿರಾಜಪೇಟೆ ನಗರದ ಸಿದ್ದಾಪುರ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಒಂದು ಮೋಟಾರು ಸೈಕಲನ್ನು  ಕಂಡು  ಗಾಬರಿಯಾದ ಶಿವಪ್ಪನವರು ರಿಕ್ಷಾವನ್ನು ಏಕಾ ಏಕಿ ಬಲಗಡೆಗೆ ತಿರುಗಿಸಿದ  ಪರಿಣಾಮ ರಿಕ್ಷಾ ಅವರ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಮಗುಚಿಕೊಂಡು ತೀವ್ರವಾಗಿ ಗಾಯಗೊಂಡ ಶಿವಪ್ಪನವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯಲ್ಲಿ ಶಿವಪ್ಪನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ
                     ಕೇರಳದ ಕೊಟ್ಟಾಯಂ ನಿವಾಸಿ ಟ್ರೀಸಿ ಜೇಮ್ಸ್ ಎಂಬ ಮಹಿಳೆಯ ಪತಿಯ ತಾಯಿ ಅಮ್ಮಣ್ನಿ ಎಂಬವರು ಸಿದ್ದಾಪುರದ ಸೇಕ್ರೆಡ್ ಹಾರ್ಟ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ 19/08/2017ರಂದು ಅವರನ್ನು ನೋಡಲು  ಬಂದ ಟ್ರೇಸಿ ಜೇಮ್ಸ್‌ರವರು ಅತ್ತೆ ಅಮ್ಮಣ್ಣಿಯವರನ್ನು ಚಿಕಿತ್ಸೆಗಾಗಿ ಕೇರಳಕ್ಕೆ ಕರೆದೊಯ್ಯುವಂತೆ ಪತಿಯ ತಮ್ಮ ಜೋಸೆಫ್ ಜಾರ್ಜ್‌ರವರಿಗೆ ಸಲಹೆ ನೀಡಿದಾಗ ಜೋಸೆಫ್‌ ಜಾರ್ಜ್‌ರವರು ಏಕಾ ಏಕಿ ಟ್ರೀಸಿ ಜೇಮ್ಸ್‌ರವರ ಮೇಲೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                            ದಿನಾಂಕ 07/08/2017ರಮದು ಮಡಿಕೇರಿ ಬಳಿಯ ಕಟ್ಟೆಮಾಡು ನಿವಾಸಿ ಹೆಚ್‌.ಕೆ.ಶಶಿಯಪ್ಪ ಎಂಬವರಿಗೆ ಅದೇ ಗ್ರಾಮದ ನಂದೇಟಿರ ಗಾಂದಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ  ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, August 19, 2017

ಅಕ್ರಮ ಜಾನುವಾರು ಸಾಗಾಟ:

     ಕೆಲವು ವ್ಯಕ್ತಿಗಳು ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿ ನೆಲ್ಲಿಹುದಿಕೇರಿ ಗ್ರಾಮದ ಮುಸ್ಲೀಂ ಜನಾಂಗದ ಸ್ಮಶಾನದಲ್ಲಿ ಕಟ್ಟಿಹಾಕಿದ್ದನ್ನು ಪತ್ತೆಹಚ್ಚಿದ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 17-8-2017 ರಂದು ರಾತ್ರಿ ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಈಚರ್ ಲಾರಿಯಲ್ಲಿ ಅಕ್ರಮವಾಗಿ ಸುಮಾರು 9 ಜಾನುವಾರುಗಳನ್ನು ತುಂಬಿಸಿ ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಬಾತ್ಮಿದಾರರು ನೀಡಿದ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಶ್ರೀ ಜಿ.ಕೆ. ಸುಬ್ರಮಣಿ ಹಾಗು ಸಿಬ್ಬಂದಿಗಳು ಅಂದು ರಾತ್ರಿ 11-00 ಸಮಯದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಮುಸ್ಲಿಂ ಜನಾಂಗದ ಸ್ಮಶಾನದ ಪಕ್ಕಕ್ಕೆ ಹೋಗಿ ಪರಿಶೀಲಿಸಿದ್ದು, ಸ್ಮಶಾನದಲ್ಲಿ ಸುಮಾರು 9 ಜಾನುವಾರುಗಳನ್ನು ಕಟ್ಟಿಹಾಕಿರುವುದು ಪತ್ತೆಯಾಗಿದ್ದು ಸದರಿ ಜಾನುವಾರುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲು ಅಲ್ಲಿ ಕಟ್ಟಿ ಹಾಕಿರುವ ಬಗ್ಗೆ ಮಾಹಿತಿ ಇದ್ದುದರಿಂದ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

       ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೋಕು ಸುಳಿಮಳ್ತೆ ಗ್ರಾಮದಲ್ಲಿ ನಡೆದಿದೆ. ಸುಳಿಮಳ್ತೆ ಗ್ರಾಮದ ನಿವಾಸಿ ಎಸ್.ಬಿ.ಸಣ್ಣಪ್ಪ ಎಂಬವರ ಸಹೋದರ ಎಸ್.ಬಿ. ಉಮೇಶ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18-8-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು:

      ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಮ್ಮ ಕಾಲೋನಿ ನಿವಾಸಿ ಎನ್. ಶ್ರೀನಿವಾಸ ರವರು ದಿನಾಂಕ 13-6-2017 ರಂದು ಕಾಳಮ್ಮ ಕಾಲೋನಿಯಲ್ಲಿರುವ ತಮ್ಮ ಮನೆಯ ಮುಂದೆ ನಿಂತುಕೊಂಡಿರುವಾಗ ಆರೋಪಿಗಳಾದ ತಿಮ್ಮ ಹಾಗು ಇತರೆ 5 ಜನರು ಅಲ್ಲಿಗೆ ಬಂದು ಅವರ ವಿರುದ್ದ ನೀಡಿದ ಹಲ್ಲೆ ಪ್ರಕರಣಕ್ಕೆ ನೀಡಿದ ದೂರನ್ನು ಹಿಂದಕ್ಕೆ ಪಡೆಯಲು ಹೇಳಿದ್ದು ಅಲ್ಲದೆ ಮನೆಯನ್ನು ಸಹಾ ಖಾಲಿ ಮಾಡುವಂತೆ ಬೆದರಿಕೆ ಹಾಕಿ ಅಲ್ಲದೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಶ್ರೀನಿವಾಸರವರಿಗೆ ಸೇರಿದ ದ್ವಿಚಕ್ರವಾಹನವನ್ನು ಜಖಂಗೊಳಿಸಿ ಸುಮಾರು 30,000 ರೂ ನಷ್ಟಪಡಿಸಿರುತ್ತಾರೆಂದು ದಿನಾಂಕ 18-8-2017 ರಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Friday, August 18, 2017

 ಅಕ್ರಮ ಮರಳು ಸಾಗಾಟ

       ದಿನಾಂಕ 17-08-2017 ರಂದು ಸಿದ್ದಾಪುರ ಠಾಣಾ ಸಿಬ್ಬಂದಿಯವರಾದ ಡಿಂಪಲ್ ರವರು ಹೊಸೂರು ಗ್ರಾಮ ಗಸ್ತುವಿನಲ್ಲಿರುವಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕೆಎ-12-ಬಿ-4485 ರ ಟಿಪ್ಪರ್ ಲಾರಿಯನ್ನು ಹೊಸೂರು ಗ್ರಾಮದ ರಸ್ತೆಯಲ್ಲಿ ತಡೆದಾಗ ಚಾಲಕನು ಲಾರಿಯನ್ನು ನಿಲ್ಲಿಸಿ ಓಡಿ ಹೋಗಿದ್ದು, ನಂತರ ಮರಳು ತುಂಬಿದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ
            ಮಡಿಕೇರಿ ನಗರದ ಕೆನರಾ ಬ್ಯಾಂಕಿನ ಪಶ್ಚಿಮ ಶಾಖೆಯಲ್ಲಿ ಬಿ ಆರ್. ಬಾಸ್ಕರ ಎಂಬುವವರು 2009 ನೇ ಇಸವಿಯಿಂದ 2013 ನೇ ಇಸವಿಯವರೆಗೆ ಉಸ್ತುವಾರಿ ವ್ಯವಸ್ಥಾಪಕರಾಗಿದ್ದು, ಆ ಸಮಯದಲ್ಲಿ ಬ್ಯಾಂಕಿನ ಗ್ರಾಹಕರಾದ ಶ್ರೀ ಸಣ್ಣೇಗೌಡ ಎಂಬುವವರ ಖಾತೆಯಿಂದ 25,128 ರೂಗಳನ್ನು ಇನ್ಸೂರೆನ್ಸ್ ಗೆ ಕಳುಹಿಸುವ ಬದಲು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಲ್ಲದೇ, ಸರ್ಕಾರದ ವತಿಯಿಂದ ಬ್ಯಾಂಕಿಗೆ ನೀಡಿದ 50,592 ರೂಗಳನ್ನು ಸಹಾ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದು, ವಿವಿಧ ತಾತ್ಕಾಲಿಕ ಖಾತೆಯಿಂದ ವಿವಿಧ ಮೊತ್ತದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಒಟ್ಟು 4,12,441.50 ರೂ ಹಣವನ್ನು ದುರುಪಯೋಗ ಮಾಡಿಕೊಂಡು ಬ್ಯಾಂಕಿಗೆ ಮೋಸ ಮಾಡಿರುತ್ತಾರೆಂದು ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಹರಿ ಎಂಬುವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

                ದಿನಾಂಕ 16-08-2017 ರಂದು ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ನಿವಾಸಿ ಜಗದೀಶ ಎಂಬುವವರು ತಮ್ಮ ಸ್ನೇಹಿತರಾದ ಸಂತೋಷ, ಯೋಗೇಶ್ ಮತ್ತು ಕವನ್ ರವರೊಂದಿಗೆ ಆಟೋರಿಕ್ಷಾದಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ದನ ಅಡ್ಡ ಬಂದ ಕಾರಣ ಆಟೋವನ್ನು ನಿಲ್ಲಿಸಿದಾಗ ಹಿಂದೆ ಇದ್ದ ಪಿಕ್ ಅಪ್ ಜೀಪಿನ ಚಾಲಕ ಕುಮಾರರವರು ಏಕೆ ಆಟೋ ನಿಲ್ಲಿಸಿದ್ದೀಯಾ ಎಂದು ಜಗಳ ತೆಗೆದು ನಿತಿನ್ ಮತ್ತು ಪವನ್ ರವರು ಸೇರಿಕೊಂಡು ಹೊಡೆದು ನೋವು ಪಡಿಸಿದ್ದು ಈ ಬಗ್ಗೆ ಜಗದೀಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Thursday, August 17, 2017

ಬೈಕ್ ಕಳವು
                           ವಿರಾಜಪೇಟೆ ಸಮೀಪದ ಮೀನುಪೇಟೆ ನಿವಾಸಿ ಅಜಯ್ ಎಂಬವರು ಅವರಿಗೆ ಸೇರಿದ ಕೆಎಲ್‌-45-ಎಲ್‌-8852ರ ಮೋಟಾರು ಬೈಕನ್ನು  ದಿನಾಂಕ 07/08/2017ರಂದು ಅವರ ಮನೆಯ ಮುಂದಿನ ವೆರಾಂಡಾದಲ್ಲಿ ನಿಲ್ಲಿಸಿದ್ದು ಮಾರನೆ ದಿನ ಬೆಳಿಗ್ಗೆ ನೋಡುವಾಗ ಅಲ್ಲಿ ನಿಲ್ಲಿಸಿದ್ದ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ
                          ದಿನಾಂಕ 16/08/2017ರಂದು ಪೊನ್ನಂಪೇಟೆ ಬಳಿಯ ನಿಸರ್ಗ ನಗರ ನಿವಾಸಿ ಜೇಮ್ಸ್ ಎಂಬವರು ಅವರ ಮನೆಯ ಮೇಲ್ಛಾವಣಿಯ ಕಬ್ಬಿಣದ ಪೈಪಿಗೆ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಜೇಮ್ಸ್ ಮಾನಸಿಕ ಅಸ್ವಸ್ಥರಾಗಿದ್ದು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 15/07/2017ರಂದು ಕುಟ್ಟ ಗ್ರಾಮದ ನಿವಾಸಿಗಳಾದ ಪಣಿ ಎರವರ ಕಡ್ಡಿ ಮತ್ತು ಅಮ್ಮುಣಿ ಎಂಬವರು ಕುಟ್ಟ ಸಂತೆಗೆ ಹೋಗಿ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಮಲಗಿದ್ದು ಮಾರನೆ ದಿನ ಬೆಳಿಗ್ಗೆ ಅಮ್ಮುಣಿಯು ಎದ್ದು ನೋಡಿದಾಗ ಪತಿ ಕಡ್ಡಿಯು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ಸಿಗೆ ಬೈಕು ಡಿಕ್ಕಿ
                     ದಿನಾಂಕ 16/08/2017ರಂದು ಪೊನ್ನಂಪೇಟೆ ನಿವಾಸಿ ಸಿ.ಪಿ.ಅಯ್ಯಣ್ಣ ಎಂಬವರು ಹುಣಸೂರಿನಿಂದ ಗೋಣಿಕೊಪ್ಪಕ್ಕೆ ಕೆಎ-45-ಎಫ್-0009ರ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೋಗುತ್ತಿರುವಾಗ ಗೋಣಿಕೊಪ್ಪ ನಗರದ ಹರಿಶ್ಚಂದ್ರಪುರದ ಬಳಿ ಎದುರಿನಿಂದ ಕೆಎ-09-ಟಿಆರ್-2162ರ ಮೋಟಾರು ಬೈಕನ್ನು ಅದರ  ಸವಾರ ರಾಹುಲ್‌ ಪಟೇಲ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸವಾರ ರಾಜುಲ್‌ ಪಟೇಲ್‌ ಮತ್ತು ಇನ್ನೋರ್ವ ಹಿಂಬದಿ ಸವಾರನಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಲಹ
                 ದಿನಾಂಕ 16/08/2017ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಮುಖ್ಯ ಪೇದೆ ಸಿ.ಎಂ.ಉದಯ ಎಂಬವರು ಕೂಡ್ಲೂರು ಗ್ರಾಮದಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಗ್ರಾಮದ ದೊಡ್ಡಮ್ಮ ತಾಯಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಕೂಡು ಮಂಗಳೂರು ನಿವಾಸಿ ನಾಗೇಶ ಹಾಗೂ ಬಸವನತ್ತೂರು ನಿವಾಸಿ ಕೆ.ಎಂ.ಮಂಜುನಾಥ ಎಂಬವರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡುತ್ತಾ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತಿರುವುದು ಕಂಡು ಬಂದಿದ್ದು ಅವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಠಾಣೆಗೆ ಕರೆತಂದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು
                    ಮಡಿಕೇರಿಯ ಹಿಲ್‌ ರಸ್ತೆ ನಿವಾಸಿ ಎಫ್‌.ಹೆಚ್‌.ಮುಸ್ತಫಾ ಎಂಬವರು ಅವರಿಗೆ ಸೇರಿದ ಕೆಎ-12-ಕ್ಯು-3515ರ ಎನ್‌ ಫೀಲ್ಡ್ ಮೋಟಾರು ಬೈಕನ್ನು ದಿನಾಂಕ 04/08/2017ರ ಸಂಜೆ ಅವರ ಮನೆಯ ಮುಂದಿನ ಜಗುಲಿಯಲ್ಲಿ ನಿಲ್ಲಿಸಿದ್ದು ಮಾರನೆ ದಿನ ಬೆಳಿಗ್ಗೆ ನೋಡುವಾಗ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿದ್ದು ಬೈಕನ್ನು ಹಲವಾರು ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Wednesday, August 16, 2017

ವ್ಯಕ್ತಿಯ ಮೇಲೆ ಹಲ್ಲೆ
                              ದಿನಾಂಕ 14/08/2017ರಂದು ರಾತ್ರಿ ವೇಳೆ ಕೇರಳದ ಮಲಪುರಂ ನಿವಾಸಿ ಚಂದ್ರನ್ ಎಂಬವರು ಅವರ ಪಿಕ್‌ಅಪ್ ಜೀಪಿನಲ್ಲಿ ಕೆ.ಆರ್.ನಗರದಿಂದ ಕೇರಳದ ಕಡೆಗೆ ಹೋಗುತ್ತಿರುವಾಗ ಕುಟ್ಟ ಬಳಿಯ ಕೆ.ಬಾಡಗ ಗ್ರಾಮದ ಬೊಳ್ಳೇರ ಗೇಟ್ ಬಳಿ ರಿಕ್ಷಾವೊಂದಕ್ಕೆ ಡಿಕ್ಕಿಯಾಗಿ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸಿದ ನಂತರ ಚಂದ್ರನ್‌ರವರು ಅವರ ಜೊತೆಗೆ ಶಂಕರ್‌ ಎಂಬವರೊಂದಿಗೆ ಅಲ್ಲಿಯೇ ನಿಂತು ಕೊಂಡಿರುವಾಗ ಅಲ್ಲಿಗೆ ಒಂದು ರಿಕ್ಷಾದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಂದ್ರನ್‌ರವರನ್ನು ಕುರಿತು ಅಶ್ಲೀಲವಾಗಿ ಬೈದು ಕೈಯಿಂದ ಗುದ್ದಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿಗಿಡ ಕಡಿದು ಹಾನಿ
                             ದಿನಾಂಕ 15/08/2017ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಮಾಧವ ರಾವ್‌ ಎಂಬವರ ಅಣ್ಣನ  ಕಾಫಿ ತೋಟಕ್ಕೆ ಅದೇ ಗ್ರಾಮದ ನಿವಾಸಿ ಬಿ.ಜಿ.ಗಣೇಶ್‌ ಕುಮಾರ್‌ ಎಂಬವರು ಅಕ್ರಮವಾಘಿ ಪ್ರವೇಶಿಸಿ ಕಾಫಿ ಗಿಡಗಳ ರೆಂಬೆಗಳನ್ನು ಕಡಿದು ಹಾನಿಯುಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಕ್ಕೆ ಟ್ರ್ಯಾಕ್ಟರ್ ಡಿಕ್ಕಿ
                          ದಿನಾಂಕ 15/08/2017ರಂದು ಪಿರಿಯಾಪಟ್ಟಣ ನಿವಾಸಿ ಕಲ್ಪನಾ ಎಂಬವರು ಕೆಎ-12-7214ರ ರಿಕ್ಷಾದಲ್ಲಿ ಪಿರಿಯಾಪಟ್ಟಣಕ್ಕೆ ಹೋಗುತ್ತಿರುವಾಗ ಕುಶಲನಗರದ ಮಾಕೇಟ್‌  ಬಳಿ ಎದುರುಗಡೆಯಿಂದ ಕೆಎ-45-ಟಿ-5906ರ ಟ್ರ್ಯಾಕ್ಟರನ್ನು ಅದರ ಚಾಲಕ ಜಗದೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಲ್ಪನಾರವರು ಚಾಲಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಲ್ಪನಾ ಮತ್ತು ರಿಕ್ಷಾ ಚಾಲಕ ಹಸನ್ ಶರೀಫ್‌ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ   ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ
                      ದಿನಾಂಕ 15/08/2017ರಂದು ಬೆಂಗಳೂರಿನ ನಿವಾಸಿ ರೋಹಿತ್‌ ಎಂಬವರು ಅವರ ಸ್ನೇಹಿತರೊಂದಿಗೆ ಕೆಎ-51-ಜೆಡ್-3070ರ ಕಾರಿನಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ಎದುರುಗಡೆಯಿಂದ ಎಪಿ-20-ಟಿಸಿ-6399ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರೋಹಿತ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು ಲಾರಿಯ ಚಾಲಕ ಓಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, August 15, 2017

ಹೊಳೆಯಲ್ಲಿ ಮುಳುಗಿ ಯುವಕ ಸಾವು
                              ದಿನಾಂಕ 13/08/2017ರಂದು ಹಾಸನ ಜಿಲ್ಲೆಯ ಯಸಳೂರು ನಿವಾಸಿ ಜೀಶಾನ್‌ ಎಂಬವರ ಮಗ ಅಫ್‌ಶಾನ್ ಎಂಬ ಯುವಕನು ಸ್ನೇಹಿತರಾದ ಸುಹೇಬ್‌, ತೌಫೀಕ್, ಮುಜೀಬ್‌ ಮತ್ತು ಜುನೈದ್ ಎಂಬವರೊಂದಿಗೆ ಕೊಡ್ಲಿಪೇಟೆ ಬಳಿಯ ಕೆಳಕೊಡ್ಲಿ ಗ್ರಾಮದಲ್ಲಿ ಹೇಮಾವತಿ ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದು ಹೊಳೆಯಲ್ಲಿ ಈಜಾಡುತ್ತಿದ್ದಾಗ ಸುಹೇಬ್‌ ಎಂಬಾತನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು ಆತನನ್ನು ರಕ್ಷಿಸಲು ಅಫ್‌ಶಾನ್‌ ಸಹಾ ಕೈ ನೀಡಿದಾಗ ಸುಹೇಬ್‌ನೊಂದಿಗೆ ಆತನೂ ನೀರಿನಲ್ಲಿ ಮುಳುಗಿದ್ದು ದಿನಾಂಕ 14/08/2017ರಂದು ನೀರಿನಲ್ಲಿ ಮುಳುಗಿದ ಯುವಕರಿಬ್ಬರ ಮೃತದೇಹಗಳನ್ನು ನುರಿತ ಈಜುಗಾರರು ಹೊಳೆಯಲ್ಲಿ ಪತ್ತೆ ಹಚ್ಚಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ
                       ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಅಣ್ಣಪ್ಪ ಎಂಬವರು ದಿನಾಂಕ 11/08/2017ರಿಂದ ಕಾಣೆಯಾಗಿದ್ದು ಈತನನ್ನು ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ಆತನ ತಾಯಿ ವೇಲಮ್ಮರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, August 14, 2017

ಅಕ್ರಮ ಜೂಜಾಟ  
                             ದಿನಾಂಕ 13/08/2017ರಂದು ಮರಗೋಡು ಗ್ರಾಮದಲ್ಲಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಹೆಚ್‌.ಎಸ್.ಬೋಜಪ್ಪರವರು ಸಿಬ್ಬಂದಿಯವರೊಡನೆ ಮರಗೋಡು ಗ್ರಾಮಕ್ಕೆ ತೆರಳಿ ಅಲ್ಲಿ ಕುಟ್ಟನ ಲವ ಎಂಬವರ ಕಾಫಿ ತೋಟದೊಳಗೆ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಜೂಜಾಡುತ್ತಿದ್ದ ಮರಗೋಡು ಗ್ರಾಮದ ಸುಜಿತ್, ಕಟ್ಟೆಮಾಡು ಗ್ರಾಮದ ಜಗನ್ನಾಥ್, ನೆಲ್ಲಿಹುದಿಕೇರಿಯ ಎಇ.ಪಿ.ದಿನೇಶ್ ಮತ್ತು ಕಟ್ಟೆಮಾಡು ಗ್ರಾಮದ ಮಂಜುನಾಥ್ ಎಂಬವರುಗಳನ್ನು ಬಂಧಿಸಿ ಜೂಜಾಟಕ್ಕೆ ಉಪಯೋಗಿಸಿದ್ದ ಇಸ್ಪೇಟು ಎಲೆಗಳು ಮತ್ತು ರೂ. 4380/- ಹಣವನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಫಘಾತ
                          ದಿನಾಂಕ 12/08/2017ರಂದು ನಾಪೋಕ್ಲು ನಿವಾಸಿ ವಿರನ್ ಮುದ್ದಪ್ಪ ಎಂಬವರು ಅವರ ಬಾಪ್ತು ಕೆಎ-12-ಆರ್-3277ರಲ್ಲಿ ಅವರ ಸ್ನೇಹಿತ ಸೋಮಣ್ಣರವರೊಡನೆ ದೇವಣಗೇರಿ ಗ್ರಾಮಕ್ಕೆ ಹೋಗಿ ಮರಳಿ ಬರುತ್ತಿರುವಾಗ ದೇವಣಗೇರಿಯ ಬಳಿ ಬೈಕ್‌ನ್ನು ಚಾಲಿಸುತ್ತಿದ್ದ ಸೋಮಣ್ಣರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಸೋಮಣ್ಣರವರ ನಿಯಂತ್ರಣ ತಪ್ಪಿ ತಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮ ವಿರನ್‌ ಮುದ್ದಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆತ್ಮಹತ್ಯೆ ಪ್ರಕರಣ
                        ದಿನಾಂಕ 13/08/2017ರಂದು ಪೊನ್ನಂಪೇಟೆ ಬಳಿಯ ಭದ್ರಗೊಳ ನಿವಾಸಿ ರಘು ಎಂಬವರ ಪತ್ನಿ ಕಮಲ ಎಂಬವರು ಮನೆಯ ಸ್ನಾನಗೃಹದಲ್ಲಿ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಅಂದು ಬೆಳಿಗ್ಗೆ ಮೃತೆ ಕಮಲ ಹಾಗೂ ಮೂರು ಜನ ಮಕ್ಕಳೊಂದಿಗೆ ಪಾಲಿಬೆಟ್ಟಕ್ಕೆ ಸಂತೆಗೆ ಹೋಗಿದ್ದು ಕಮಲ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಸಂತೆಯಿಂದ ಮರಳಿ ಮನೆಗೆ ಬಂದಿದ್ದು ಮಗ ದರ್ಶನ್‌ ಮಾತ್ರ ಸಂಜೆಯಾದರೂ ಬಾರದ ಕಾರಣ ಮನ ನೊಂದು ಕಮಲರವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಮೃತೆಯ ಪತಿ ರಘುರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಲಹ ಪ್ರಕರಣ
                        ದಿನಾಂಕ 13/08/2017ರಂದು ಕುಶಾಲನಗರ ಗ್ರಾಮಾಂತರ  ಠಾಣೆಯ ಪಿಎಸ್‌ಐ ಜೆ.ಇ.ಮಹೇಶ್‌ರವರು ಸಿಬ್ಬಂದಿಯವರೊಡನೆ ದುಬಾರೆ ಪ್ರವಾಸಿ ತಾಣದ ಬಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಅಲ್ಲಿ ವಾಹನ ನಿಲುಗಡೆಯ ಸುಂಕ ವಸೂಲಾತಿ ಕೆಲಸ ಮಾಡಿಕೊಂಡಿರುವ ಕುಶಾಲನಗರ ನಿವಾಸಿ ಸಿ.ಎ.ಕಾರ್ಯಪ್ಪ ಮತ್ತು ರಂಗಸಮುದ್ರ ನಿವಾಸಿ ಮಾಂತೇಶ ಎಂಬವರು ಸುಂಕ ವಸೂಲಾತಿ ವಿಚಾರವಾಗಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಅವರ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, August 13, 2017

ನೇಣು ಬಿಗಿದು ಆತ್ಮ ಹತ್ಯೆ

               ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ವದಿಯಾಗಿದೆ. ಕಾವಾಡಿ ಗ್ರಾಮದ ಗಣಪತಿಯವರ ಲೈನ್ ಮನೆಯಲ್ಲಿ ವಾಸವಿರವ ಪಣಿಯರವರ ಮಲ್ಲಿಗೆ @ ಇಂದಿರಾರವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 9-08-2017 ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ ಇದ್ದು ದಿನಾಂಕ 12-08-2017 ರಂದು ಗಣಪತಿಯವರ ತೋಟದಲ್ಲಿ ಮಲ್ಲಿಗೆಯವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಈ ಬಗ್ಗೆ ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ 
            ದಿನಾಂಕ 12-08-2017 ರಂದು ಸುಂಟಿಕೊಪ್ಪ ಠಾಣಾಧಿಕಾರಿಯವರಾದ ಜಯರಾಮ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸುಂಟಿಕೊಪ್ಪದ ಸಂತೆ ನಡೆಯುವ ಸ್ಥಳಕ್ಕೆ ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಭಾಷಾ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Saturday, August 12, 2017

ಮನುಷ್ಯ ಕಾಣೆ:

      ವೃದ್ದ ವ್ಯಕ್ತಿಯೊಬ್ಬರು ಕೆಲಸಕ್ಕೆಂದು ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದಿಂದ ವರದಿಯಾಗಿದೆ. ಕೆದಮುಳ್ಳೂರು ಗ್ರಾಮದ ನಿವಾಸಿ ಮೈಕಲ್ ಮಿರಾಂದ ಎಂಬವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ದಿನಾಂಕ 20-7-2017 ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಸದರಿಯವರ ಮಗ ಪ್ರಶಾಂತ್ ಮಿರಾಂದ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರ, ವ್ಯಕ್ತಿಗೆ ಕಚ್ಚಿ ಗಾಯ:
     ಹಣ ನೀಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿಯೊಂದಿಗೆ ಜಗಳ ಮಾಡಿ ರಟ್ಟೆಗೆ ಗಾಯಪಡಿಸಿದ ಘಟನೆ ಸೋಮವಾರಪೇಟೆ ನಗರದ ಗಣಪತಿ ದೇವಾಲಯದ ಬಳಿ ನಡೆದಿದೆ. ಸೋಮವಾರಪೇಟೆ ನಗರದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಹೆಚ್.ಆರ್. ಮನೋಹರ್ ಎಂಬವರ ಅಂಗಡಿಯಲ್ಲಿ ಮೋಣಪ್ಪ ಎಂಬ ವ್ಯಕ್ತಿ ಕೆಲಸಮಾಡಿಕೊಂಡಿದ್ದು, ದಿನಾಂಕ 8-8-17 ರಂದು ಮೋಣಪ್ಪನವರು ಮನೋಹರ್ ಬಳಿ 100 ರೂ ಹಣ ಕೇಳಿ ಹಣ ನೀಡದ ಕಾರಣಕ್ಕೆ ಕೋಪಗೊಂಡ ಮೋಣಪ್ಪ, ಮನೋಹರ ನಗರದ ಗಣಪತಿ ದೇವಾಲಯದ ಬಳಿ ನಿಂತಿದ್ದಾಗ ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು ರಟ್ಟೆಗೆ ಕಚ್ಚಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ:
     ಮಡಿಕೇರಿ ನಗರದ ಅಶೋಕಪುರ ನಿವಾಸಿ ಚಂದ್ರಶೇಖರ್ ಎಂಬವರು ಅವರ ಸ್ನೇಹಿತ ಜನಾರ್ದನ್ ರವರೊಂದಿಗೆ ಕೆ ಎ 12 ಆರ್ 2408 ರ ಬೈಕ್ ನಲ್ಲಿ ಸ್ವಂತ ಕೆಲಸದ ನಿಮಿತ್ತ ಕೂಡಿಗೆಗೆ ಹೋಗಿ ವಾಪಾಸ್ಸು ಕುಶಾಲನಗರ ಕಡೆ ಹೊರಟಿದ್ದು, ಸಮಯ 03:45 ಪಿ ಎಂ ಗೆ ಗುಮ್ಮನಕೊಲ್ಲಿ ವೀರಭೂಮಿ ಜಂಕ್ಷನ್ ಹತ್ತಿರ ರಸ್ತೆಗೆ ಇಟ್ಟಿರುವ ಬ್ಯಾರಿಕೇಡ್ ಅನ್ನು ದಾಟಿ ಎಡಬದಿಯಲ್ಲಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಬಂದ ಕೆ ಎ 12 ಜೆಡ್ 5586 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಂದ್ರಶೇಖರ್ ರವರು ಚಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಮತ್ತು ಬೈಕ್ ಹಿಂಬದಿ ಕುಳ್ಳಿತಿದ್ದ ಜನಾರ್ದನ್ ರವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. 

ಮೋಟಾರ್ ಬೈಕಿಗೆ ಕಾರು ಡಿಕ್ಕಿ:

      ಸೋಮವಾರಪೇಟೆ ತಾಲೋಕು ಹೊಸಗುತ್ತಿ ಗ್ರಾಮದ ವಾಸಿ ಹೆಚ್.ಟಿ. ಬಸವರಾಜ್ ಎಂಬವರು ದಿನಾಂಕ 10-8-2017 ರಂದು ತಮ್ಮ ಮೋಟಾರ್ ಸೈಕಲಿನಲ್ಲಿ ಹೊಸಗುತ್ತಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಆಲೂರು ಸಿದ್ದಾಪುರ ಗ್ರಾಮದ ಲಿಂಗರಾಜು ಎಂಬವರ ಮನೆಯ ಹತ್ತಿರ ಎದುರುಗಡೆಯಿಂದ ಬಂದ ಮಾರುತಿ ವ್ಯಾನೊಂದು ಡಿಕ್ಕಿಯಾಗಿ ಬಸವರಾಜ್ ರವರ ಬಲಕಾಲಿಗೆ ಗಾಯವಾಗಿ ಬೈಕ್ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, August 11, 2017

ಶ್ವಾನಕ್ಕೆ ಬೈಕ್ ಡಿಕ್ಕಿ, ಮಹಿಳೆ ಸಾವು:

      ಚಲಿಸುತ್ತಿದ್ದ ಮೋಟಾರ್ ಸೈಕಲೊಂದು ಶ್ವಾನಕ್ಕೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಸಾವನಪ್ಪಿದ ಘಟನೆ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದ ಮಂಜುನಾಥ ಎಂಬವರು ದಿನಾಂಕ 10-8-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ತನ್ನ ತಾಯಿ ಸರೋಜಮ್ಮ ರವರೊಂದಿಗೆ ಹೆಬ್ಬಾಲೆ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಸದರಿ ಮೋಟಾರ್ ಸೈಕಲ್ ನಾಯಿಯೊಂದಕ್ಕೆ ಡಿಕ್ಕಿಯಾಗಿದ್ದು, ಪರಿಣಾಮ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಸರೋಜಮ್ಮನವರು ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸದರಿಯವರು ಸಾವನಪ್ಪಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿಯ ಮೇಲೆ ಇಬ್ಬರಿಂದ ಹಲ್ಲೆ:

      ದಿನಾಂಕ 10-08-2017 ರಂದು ಸಂಜೆ 17.30 ಗಂಟೆಗೆ ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಆಟೋ ಚಾಲಕ ಮುಜಾಹಿರ್ ರೆಹಮಾನ್ ಎಂಬವರು ವಿರಾಜಪೇಟೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಆಟೋ ರಿಕ್ಷಾ ನಿಲ್ದಾಣದಲ್ಲಿ ತನ್ನ ಬಾಪ್ತು ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ನಿಂತಿರುವಾಗ್ಗೆ ಸದರಿಯವರ ಎರಡನೇ ಹೆಂಡತಿಯ ಸಹೋದರರಾದ ಕಲೀಲ್ ಹಾಗೂ ಸಾದಿಕ್ ರವರುಗಳು ಅಲ್ಲಿಗೆ ಬಂದು ವಿನಾಕಾರಣ ಜಗಳ ತೆಗೆದು ರಾಡಿನಿಂದ ಹಾಗೂ ಹಾಕಿ ಸ್ಟಿಕ್ ನಿಂದ ತಲೆ ಹಾಗೂ ಶರೀರಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಗಳ ಮುಖಾಮುಖಿ, ಇಬ್ಬರಿಗೆ ಗಾಯ:

      ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳು ಗಾಯಗೊಂಡ ಘಟನೆ ಕುಶಾಲನಗರ ಪಟ್ಟಣದ ಅಯ್ಯಪ್ಪ ರಸ್ತೆಯಲ್ಲಿ ನಡೆದಿದೆ. ಕುಶಾಲನಗರ ಹತ್ತಿರದ ಭುವನಗಿರಿಯಲ್ಲಿ ವಾಸವಾಗಿರುವ ಲೋಕೇಶ್ ಎಂಬವರ ಮಗ ರವಿಕುಮಾರ್ ಎಂಬವರು ಕುಶಾಲನಗರದ ಕೆ.ಬಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 9-8-2017 ರಂದು ಮೋಟಾರ್ ಸೈಕಲಿನಲ್ಲಿ ಸ್ನೇಹಿತ  ಹರಿಪ್ರಸಾದ್ ನೊಂದಿಗೆ ಕುಶಾಲನಗರದ ಅಯ್ಯಪ್ಪ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಚಂದನ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರವಿಕುಮಾರ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಹರಿಪ್ರಸಾದ್, ಮನೋಜ್ ರವರುಗಳು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮೇಲೆ ನಾಲ್ವರಿಂದ ಹಲ್ಲೆ:

      ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ನಾಲ್ವರು ಸೇರಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಒಡೆಯನಪುರ ಗ್ರಾಮದ ನಿವಾಸಿ ಶ್ರೀಮತಿ ಜಿ.ಬಿ. ಸವಿತ ರವರು ದಿನಾಂಕ 7-8-2017 ರಂದು ಸಂಜೆ 8-45 ಗಂಟೆಯ ಸಮಯದಲ್ಲಿ ತಮ್ಮ ಮನೆಯಲ್ಲಿರುವಾಗ್ಗೆ ಅವರ ಪತಿ ಬಸವರಾಜನವರ ಸಹೋದರ ರಾಮಯ್ಯ, ರಾಮಯ್ಯನವರ ಪತ್ನಿ ಸುಮಿತ್ರ, ಮಕ್ಕಳಾದ ಸ್ವಾತಿ ಮತ್ತು ಭೂಮಿಕಾ ರವರುಗಳು ಬಂದು ಜಿ.ಬಿ.ಸವಿತರವರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ, ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಕಲಿ ಸಹಿಯನ್ನು ಮಾಡಿ ವಂಚನೆ:

     ಮಡಿಕೇರಿ ನಗರದ ಮುತ್ತಪ್ಪ ದೇವಸ್ಥಾನದ ಹತ್ತಿರ ವಾಸವಾಗಿರುವ ಶ್ರೀಮತಿ ಎಂ.ಸಿ. ಪಾರ್ವತಿ ಎಂಬವರ ಪತಿ ಎಂ.ಎನ್. ಕಾರ್ಯಪ್ಪನವರ ಕುಟುಂಬದ ಆಸ್ತಿಯು ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದಲ್ಲಿದ್ದು ಅವರ ಕುಟುಂಬದವರೇ ಎಂ.ಎಸ್. ಮುದ್ದಪ್ಪನವರು ನಕಲಿ ವಿಭಾಗ ಪತ್ರವನ್ನು ತಯಾರಿಸಿ ಫಿರ್ಯಾದಿ ಪಾರ್ವತಿ ಹಾಗು ಅವರ ಮಗಳಾದ ಶ್ರೀಮತಿ ಸವಿತಾ ರವರ ಸಹಿಯನ್ನು ಪೋರ್ಜರಿ ಮಾಡಿ ಜಾಗಕ್ಕೆ ಸಂಬಂಧಿಸಿದ ಆರ್.ಟಿ.ಸಿ.ಯನ್ನು ಪಡೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Thursday, August 10, 2017

ಪರಸ್ಪರ ಕಾರು ಅವಘಢ
                     ದಿನಾಂಕ 08/08/2017ರಂದು ಮಡಿಕೇರಿ ನಿವಾಸಿ ಅನಿಲ್ ಲೋಬೋ ಎಂಬವರು ಅವರ ಸ್ನೇಹಿತ ರೋಷನ್ ಪಿಂಟೋ ಎಂಬವರ ಕಾರು ಸಂಖ್ಯೆ ಕೆಎ-12-ಜೆಡ್-5199ರಲ್ಲಿ ಕುಟುಂಬದೊಂದಿಗೆ ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಸಂಪಾಜೆ ಬಳಿಯ ಪೆರಾಜೆಯ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-20-ಎಂಎ-2191ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರೋಷನ್‌ ಪಿಂಟೋರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 08/08/2017ರಂದು ಕುಶಾಲನಗರ ಬಳಿಯ ಮುಳ್ಳುಸೋಗೆ ನಿವಾಸಿ ಪ್ರಸನ್ನ ಎಂಬವರು ಅವರ ತಾಯಿಯ ಅನಾರೋಗ್ಯ ಹಾಗೂ ಇಬ್ಬರು ತಂಗಿಯರಿಗೆ ಮದುವೆ ಮಾಡಲು ಆರ್ಥಿಕ ಅಡಚಣೆಯಿರುವ ಬಗ್ಗೆ ಮನನೊಂದು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, August 9, 2017

ಆಸ್ತಿ ವಿಚಾರ, ಹಲ್ಲೆ
                    ದಿನಾಂಕ 08/08/2017ರಂದು ಪಾಲೂರು ನಿವಾಸಿ ಬಿ.ಎಂ.ಪುಟ್ಟಪ್ಪ ಎಂಬವರು ಅವರ ತೋಟದಲ್ಲಿ ಕಾಡು ಕಡಿಯುತ್ತಿದ್ದಾಗ ಅಲ್ಲಿಗೆ ಬಂದ ಬೈತಡ್ಕ ಗಣಪತಿ ಎಂಬವರು ಆಸ್ತಿ ವಿಚಾರವಾಗಿ ಪುಟ್ಟಪ್ಪನವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಪುಟ್ಟಪ್ಪನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ
                   ಮಡಿಕೇರಿ ನಗರದ ಹಿಲ್‌ ರಸ್ತೆಯಲ್ಲಿರುವ ಹೇಮಾ ವೈನ್ಸ್‌ ಎಂಬ ಮದ್ಯದಂಗಡಿಯಲ್ಲಿ ನಿಯಮ ಬಾಹಿರವಾಗಿ ಮದ್ಯವನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗಿ ದೊರೆತ ಮಾಹಿತಿಯ ಮೇರೆಗೆ ಮಡಿಕೇರಿ ನಗರ ಠಾಣಾ ಪಿಎಸ್‌ಐ ಹೆಚ್‌.ವೈ.ವೆಂಕಟರಮಣರವರು ದಿನಾಂಕ 08/08/2017ರಂದು ಹೇಮಾ ವೈನ್ಸ್‌ಗೆ ತೆರಳಿದಾಗಿ ಅಂಗಡಿಯಲ್ಲಿ ಮದ್ಯವನ್ನು ನಿಯಮ ಬಾಹಿರವಾಗಿ ಮದ್ಯವನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಮದ್ಯ ಮಾರಾಟ ಮಾಡುತ್ತಿದ್ದ ರಾಣಿಪೇಟೆ ನಿವಾಸಿ ಶೇಷಪ್ಪ ಎಂಬವರನ್ನು ಬಂಧಿಸಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಆಕಸ್ಮಿಕ  ಸಾವು
                  ದಿನಾಂಕ 07/08/2017ರಂದು ಮಡಿಕೇರಿ ಬಳಿಯ ಹಾಕತ್ತೂರು ಗ್ರಾಮದ ಚೂರಿಕಾಡು ಪೈಸಾರಿ ನಿವಾಸಿ ಹೆಚ್‌.ಪಿ.ಶಾಂತಿರವರ ಮಗ ವೆಂಕಟೇಶ ಎಂಬವರು ಶಾಂತಿರವರ ಇನ್ನೋರ್ವ ಮಗ ಯಶವಂತರವರು ವಾಸವಿರುವ ಮನೆಗೆ ತೆರಳಿದ್ದು  ಆ ಸಮಯದಲ್ಲಿ ಯಶವಂತರವರು ಮರಗೋಡಿನಿಂದ ಮದ್ಯಪಾನ ಮಾಡಿ ಬಂದು ನೆರೆ ಮನೆಯ ಅನೀಶ್ ಎಂಬವರ ಮನೆಯಲ್ಲಿ ರಾತ್ರಿ ವೇಳೆ ಮಲಗಿದ್ದು ಮಾರನೇ ದಿನ ಬೆಳಿಗ್ಗೆ ಏಳದೆ ಇದ್ದುದನ್ನು ಕಂಡು ಯಶವಂತನ ಪತ್ನಿ ಸುನೀತ ಹಾಗೂ ಇತರರು ಸೇರಿ ಕರೆದರೂ ಏಳದ ಕಾರಣ ಎಲ್ಲರೂ ಸೇರಿ ಆತನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದಲ್ಲಿ ಪರೀಕ್ಷಿಸಿದ ವೈದ್ಯರು ಯಶವಂತನು ಮೃತನಾಘಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ
                       ದಿನಾಂಕ 08/08./2017ರಂದು ಕಡಂಗ ನಿವಾಸಿ ರಶೀಕ್‌ ಗಣಪತಿ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಬಿ-3745ರಲ್ಲಿ ಅಭಿ ಎಂಬವರೊಡನೆ ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿ ಬಳಿಯ ಮದೆನಾಡಿನ ಬಳಿ ಕೆಎ-19-ಎಂಜಿ-0247ರ ಕಾರನ್ನು ಅದರ ಚಾಲಕ ಮಹಮದ್ ಮುದಸೀರ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಶೀಕ್ ಗಣಪತಿರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಹಾನಿಗೊಳಗಾಗಿದ್ದು ಮಹಿಳೆಯೊಬ್ಬರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸೋಲಾರ್‌ ಬ್ಯಾಟರಿ ಕಳವು
                  ಮಡಿಕೇರಿ ಬಳಿಯ ಹುಲಿತಾಳ ಗ್ರಾಮದ ಅಂಗನವಾಡಿ ಬಳಿ ಅಳವಡಿಸಿದ್ದ ಸೋಲಾರ್‌ ದೀಪಗಳ ಎರಡು ಬ್ಯಾಟರಿಗಳನ್ನು ಯಾರೋ ಇತ್ತೀಚೆಗೆ ಕಳವು ಮಾಡಿರುವುದಾಗಿ ಹಾಕತ್ತೂರು ಪಂಚಾಯಿತಿ ಪಿಡಿಒ ಸೆಬಾಸ್ಟಿನ್ ಪೆರೇರಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನ ಕಳವು
                      ದಿನಾಂಕ 07/08/2017ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ಗ್ರಾಮದ ಗಣಪತಿ ದೇವಸ್ಥಾನದ ಅರ್ಚಕರಾದ ಸಿ.ಎ.ವಿಷ್ಣುಮೂರ್ತಿರವರು ರಾತ್ರಿ ವೇಳೆ ದೇವಸ್ಥಾನದ ಪೂಜೆ ಮುಗಿಸಿ ಮನೆಗೆ ತೆರಳಿದ್ದು ಮಾರನೆ ದಿನ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಪೂಜಾ ಕೈಂಕರ್ಯಕ್ಕೆಂದು ತೆರಳಿದಾಗ  ಗರ್ಬಗುಡಿಯ ಬಾಗಿಲು ತೆರೆದಿದ್ದು ದೇವರ ವಿಗ್ರಹದ ಪಂಚಲೋಹದ ಪ್ರಭಾವಳಿ  ಮತ್ತು ಅಲ್ಲಿ ಅಳವಡಿಸಿದ್ದ ಸಿ.ಸಿ.ಕೆಮರಾವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, August 8, 2017

ಬೈಕ್ ಕಳವು
                    ದಿನಾಂಕ 05/07/2017ರಂದು ಗೋಣಿಕೊಪ್ಪ ನಗರದ ನಿವಾಸಿ ಎನ್‌.ಪಿ.ರವೀಂದ್ರ ಎಂಬವರು ಅವರ ಕೆಎ-12-ಕ್ಯು-6916ರ ಮೋಟಾರು ಬೈಕಿನಲ್ಲಿ ಕೆಲಸದ ನಿಮಿತ್ತ ಬೆಳ್ಳೂರು ಗ್ರಾಮಕ್ಕೆ ಹೋಗಿ ಮರಳಿ ಬಂದು ಬೈಕನ್ನು ಪೊನ್ನಂಪೇಟೆ ಜಂಕ್ಷನ್ ಬಳಿ ಅದಾರ್ ಫರ್ನಿಚರ್ಸ್ ಅಂಗಡಿಯ ಮುಂದೆ ನಿಲ್ಲಿಸಿ ಎಂದಿನಂತೆ ಮನೆಗೆ ಹೋಗಿದ್ದು ಮಾರನೆ ದಿನ ಬೆಳಿಗ್ಗೆ ನೋಡುವಾಗ ಬೈಕ್ ಕಾಣೆಯಾಗಿದ್ದು ಬೈಕನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಕಸ್ಮಿಕ ಸಾವು
                       ದಿನಾಂಕ 07/08/2017ರಂದು ಪೊನ್ನಂಪೇಟೆ ಬಳಿಯ ನಿಟ್ಟೂರು ನಿವಾಸಿ ಪಣಿ ಎರವರ ಶಂಕರ ಎಂಬವರು ಎಂದಿನಂತೆ ನಿಟ್ಟೂರು ನಿವಾಸಿ ಮಲ್ಚೀರ ನಾಣಯ್ಯ ಎಂಬವರ ತೋಟದಲ್ಲಿ ಮರ ಕಪಾತು ಕೆಲಸ ಮಾಡು ಸಂದರ್ಭದಲ್ಲಿ ಮರದ ರೆಂಬಯನ್ನು ಕಡಿದು  ಬೀಳಿಸುವಾಗ ಶಂಕರರವರ ಸೊಂಟಕ್ಕೆ ಕಟ್ಟಿದ್ದ ಹಗ್ಗ ಕಾಲಿಗೆ ಸುತ್ತಿಕೊಂಡು ಶಂಕರರವರು ಸುಮಾರು 30 ಅಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ತೋಟದ ಮಾಲೀಕರ  ಜೀಪಿನಲ್ಲಿ  ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, August 7, 2017

ಬಾಗಿಲು ಮುರಿದು ನಗ ನಾಣ್ಯ ಕಳವು:

       ಮನೆಯ ಬಾಗಿಲನ್ನು ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನವಾದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಬಲಮುರಿ ಗ್ರಾಮದಲ್ಲಿ ನಡೆದಿದೆ. ಬಲಮುರಿ ಗ್ರಾಮದ ನಿವಾಸಿ ಪೋಡಿಯಂಡ ನಾಚಪ್ಪ ಎಂಬವರು ಬೆಂಗಳೂರಿನಲ್ಲಿರುವ ಹಾಕಿ ಸ್ಟೇಡಿಯಂನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು, ಬಲಮುರಿ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಅವರ ತಾಯಿ ಗೌರಮ್ಮನವರು ನೆಲಸಿದ್ದು, ದಿನಾಂಕ 5-8-2017 ರಂದು ಗೌರಮ್ಮನವರು ತೋಟಕ್ಕೆ ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಯಾರೋ ಕಳ್ಳರು ಅವರ ಮನೆಯ ಹಿಂದಿನ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ರೂ.3,700 ರೂ ಬೆಲೆಬಾಳುವ ಚಿನ್ನಾಭರಣ, 10000 ನಗದು, 1100 ಚಿಲ್ಲರೆ ಕಾಯಿನ್ ಗಳು ಮತ್ತು 7 ಕೋವಿ ತೋಟಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಫಿರ್ಯಾದಿ ಪೋಡಿಯಂಡ ನಾಚಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.   

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ದುರ್ಮರಣ:

     ಈಜಲು ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ವಿರಾಜಪೇಟೆ ಸಮೀಪದ ಚಿಟ್ಟೊಡೆ ಗ್ರಾಮದಲ್ಲಿ ಹರಿಯುವ ಹೊಳೆಯಲ್ಲಿ ಸಂಭವಿಸಿದೆ. ವಿರಾಜಪೇಟೆ ನಗರದ ಶಾಂತಿನಗರದ ನಿವಾಸಿ ಎ.ಎನ್. ದಶರಥ ಎಂಬವರ ಮಗ 16 ವರ್ಷ ಪ್ರಾಯದ ಎ.ಎನ್. ಗಗನ್ ಎಂಬಾತ ವಿರಾಜಪೇಟೆ ನಗರದ ಕೂರ್ಗ್ ವ್ಯಾಲಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 6-8-2017 ರಂದು ತನ್ನ ಸ್ನೇಹಿತರಾದ ಕಿರಣ, ಕೌಶಿಕ್, ಅಜಿತ್ ಮತ್ತು ಇತರರೊಂದಿಗೆ ಬೇಟೋಳಿ ಗ್ರಾಮದ ಚಿಟ್ಟೊಡೆ ಗ್ರಾಮದಲ್ಲಿರುವ ಹೊಳೆಯಲ್ಲಿ ಸ್ನಾನಕ್ಕೆಂದು ಹೋಗಿದ್ದು, ಎ.ಎನ್. ಜಗನ್ ಆಕಸ್ಮಿಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕುರಿ ಕಳ್ಳತನ:

     ಮೇಯಲು ಬಿಟ್ಟಿದ್ದ ಕುರಿಯೊಂದನ್ನು ಕಳ್ಳತನ ಮಾಡಿರುವ ಘಟನೆ ಸೋಮವಾರಪೇಟೆ ತಾಲೋಕು ತೋಳರು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಳುರು ಶೆಟ್ಟಳ್ಳಿ ಗ್ರಾಮದ ಪಿ.ಎಂ. ರಾಜೇಶ್ ರವರು ತನ್ನ ಬಾಪ್ತು ಮೇಯಲು ಕಟ್ಟಿದ್ದ 3 ಕುರಿಗಳ ಪೈಕಿ ಸುಮಾರು 10,000 ರೂ. ಬೆಲೆಬಾಳುವ ಒಂದು ಕುರಿಯನ್ನು ಕಳ್ಳತನ ಮಾಡಿ, ಅದನ್ನು ಕೊಂದು ಮಾಂಸ ಮಾಡಿರುವುದಾಗಿದ್ದು  ಮತ್ತು ರಾಜು ಎಂಬುವವರ ಮೇಲೆ ಸಂಶಯವಿರುತ್ತದೆ ಎಂಬುದಾಗಿ ಪಿ.ಎಂ. ರಾಜೇಶ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು:

     ವ್ಯಕ್ತಿಯೊಬ್ಬರು ಅಲ್ಯೂಮಿನಿಯಂ ಪೈಪನ್ನು ಉಪಯೋಗಿಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ಗುಡ್ಡೆಹೊಸೂರು ಗ್ರಾಮದ ನಿವಾಸಿ 65 ವರ್ಷ ಪ್ರಾಯದ ಮ್ಯಾಥ್ಯೂ ಎಂಬವರು ದಿನಾಂಕ 6-8-2017 ರಂದು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಟೆರೇಸ್ ನಲ್ಲಿ ನಿಂತು ಅಲ್ಯೂಮಿನಿಯಂ ಪೈಪನ್ನು ಉಪಯೋಗಿಸಿ ಮನೆಯ ಪಕ್ಕದಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿಯನ್ನು ಕೀಳುತ್ತಿರುವ ಸಂದರ್ಭದಲ್ಲಿ ತೆಂಗಿನ ಮರದ ಪಕ್ಕದಲ್ಲೇ ಹಾದುಹೋದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಅಲ್ಯೂಮಿನಿಯಂ ಪೈಪು ತಾಗಿದ ಪರಿಣಾಮ ಮ್ಯಾಥ್ಯೂರವರು ವಿದ್ಯುತ್ ಪ್ಷರ್ಷಗೊಂಡು ತೀವ್ರವಾಗಿ ಗಾಯಗೊಂಡು ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಪಾದಚಾರಿಗೆ ಪಿಕ್ ಅಪ್ ವಾಹನ ಡಿಕ್ಕಿ:

     ಶನಿವಾರಸಂತೆ ಠಾಣಾ ವ್ಯಾಪ್ತಿಯ ಶನಿವಾರಸಂತೆ ನಗರದ ನಿವಾಸಿ ಮುನೀರ್ ಹಾಗು ಅವರ ಸಂಬಂಧಿ ಅನಿಸ್ ಬೇಗ್ ಎಂಬವರು ದಿನಾಂಕ 6-7-2017 ರಂದು ಕೊಡ್ಲಿಪೇಟೆ ಪಟ್ಟಣದಲ್ಲಿರುವ ಕೊಡ್ಲಿಪೇಟೆ ಶಾಲೆಯ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಮಯ 4-45 ಪಿಎಂ ಗೆ ಚಂದ್ರೇಗೌಡ ಎಂಬವರು ಕೆಎ-12-ಎ2939ರ ಬೊಲೆರೋ ಪಿಕ್ ಅಪ್ ವಾಹನವನ್ನು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಅನಿಸ್ ಬೇಗ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರ ಬಲಕಾಲಿಗೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಸದರಿಯವರನ್ನುಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮುನೀರ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Sunday, August 6, 2017

ವ್ಯಕ್ತಿ ಆತ್ಮಹತ್ಯೆ
                         ದಿನಾಂಕ 04/08/2017ರಂದು ಸಿದ್ದಾಪುರ ಬಳಿಯ ವಾಲ್ನೂರು ಬಳಿಯ ಅಮ್ಮಂಗಾಲ ನಿವಾಸಿ ತಂಬಿ ಅಲಿಯಾಸ್ ಮಂಜು ಎಂಬವರು ರಾತ್ರಿ ಊಟ ಮಾಡಿ ಮನೆಯ ವೆರಾಂಡಾದಲ್ಲಿ ಮಲಗಿದ್ದು ಮಾರನೆ ದಿನ 05/08/2017ರಂದು ಬೆಳಿಗ್ಗೆ ನೋಡುವಾಗ ಮನೆಯ ಮಾಡಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದ  ಇತ್ತೀಚೆಗೆ ತಂಬಿ ಯಾನೆ  ಮಂಜುರವರು ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ  ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ ಪ್ರಕರಣ
                             ಸೋಮವಾರಪೇಟೆ ಬಳಿಯ ಐಗೂರಿನ ಟಾಟಾ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ನಿವಾಸಿ ನಿಂಗಮ್ಮ ಎಂಬವರ ಪತಿ ಜೋಗಪ್ಪ ಎಂಬವರು ದಿನಾಂಕ 03/08/2017ರಂದು ಬ್ಯಾಂಕ್‌ನಲ್ಲಿ ಕೆಲಸಕ್ಕೆಂದು ಮೇಲಧಿಕಾರಿಗಳ ಸೂಚನೆಯಂತೆ ಸೋಮವಾರಪೇಟೆ ನಗರಕ್ಕೆ  ಹೋಗಿದ್ದು ಬ್ಯಾಂಕಿಗೂ ಹೋಗದೆ ಮನೆಗೂ ಮರಳ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, August 5, 2017

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

      ಮಾನಸಿಕ ಆನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಬಳಿಯ ಮೇಕೇರಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆರವನಾಡು ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಎಂಬವರ ಪತಿ ವೆಂಕಪ್ಪ ನವರು ಸುಮಾರು ಒಂದು ವರ್ಷದಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು, ಇತ್ತೀಚೆಗೆ ಮಾನಸಿಕ ರೋಗ ಜಾಸ್ತಿಯಾದ್ದರಿಂದ ಸದರಿಯವರು ದಿನಾಂಕ 4-8-2017 ರಂದು ಮೇಕೇರಿ ಗ್ರಾಮದ ರಾಮಣ್ಣ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆ ಕಳವು ಪ್ರಕರಣ ದಾಖಲು: 

     ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅಮ್ಮತ್ತಿ ಗ್ರಾಮದಲ್ಲಿ ವಾಸವಾಗಿರುವ ಜೋಸೆಫ್ ಮನೇಜಸ್ ಎಂಬವರು ದಿನಾಂಕ 4-8-17 ರಂದು ತಮ್ಮ ಮನೆಯ ಮಲಗುವ ಕೋಣೆಯ ಗಾಡ್ರೇಜ್ ಬೀರುವಿಗೆ ಬೀಗ ಹಾಕಿ ಕೀಯನ್ನು ಹಾಸಿಗೆ ಕೆಳಗೆ ಇಟ್ಟು ಹೆಂಡತಿ ಮಕ್ಕಳು ತಮ್ಮ ತಮ್ಮ ಕೆಲಸಕ್ಕೆ ಹೋದ ಮೇಲೆ ಫಿರ್ಯಾದಿಯವರು ಸಮಯ 8-30 ಎ.ಎಂ.ಗೆ ಮನೆಯ ಬಾಗಿಲ ಬೀಗ ಹಾಕಿ ಕೀಯನ್ನು ಮನೆಯ ಮುಂದಿನ ನಾಯಿ ಗೂಡಿನ ಮೇಲೆ ಇಟ್ಟು ಹೋಗಿದ್ದು, ಸದರಿ ಕೀಯನ್ನು ಬಳಸಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಗೆ ನುಗ್ಗಿ ಗಾಡ್ರೇಜ್ ಬಾಗಿಲನ್ನು ತೆಗೆದು ಅದರಲ್ಲಿಟ್ಟಿದ್ದ ಸುಮಾರು 24,000 ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲ್ಲೂಕು ಧನುಗಾಲ ಗ್ರಾಮದ ಬೆಳ್ಳಿಕಾಲೋನಿಯಲ್ಲಿ ವಾಸವಾಗಿದ್ದ ರಾಜೇಶ ಎಂಬ ವ್ಯಕ್ತಿ ದಿನಾಂಕ 3-8-2017 ರಂದು ತಾನು ವಾಸವಾಗಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, August 4, 2017

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ
                      ದಿನಾಂಕ 02/07/2017ರ ರಾತ್ರಿ ವೇಳೆ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ಜಿ.ಆರ್‌.ಉದಯ ಕುಮಾರ್ ಎಂಬವರು ಕುಶಾಲನಗರ ಪಟ್ಟಣದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಆದಿ ಬಾರ್‌ ಬಳಿ ಯಾರೋ ಹೊಡೆದಾಡುತ್ತಿದ್ದು ಅಲ್ಲಿಗೆ ತೆರಳುವಂತೆ  ವೈರ್‌ಲೆಸ್‌ ಮೂಲಕ ಬಂದ ಸೂಚನೆಯ ಮೇರೆಗೆ ಆದಿ ಬಾರ್‌ ಬಳಿಗೆ ಜಿ.ಆರ್‌.ಉದಯ ಕುಮಾರ್‌ರವರು ಹೋದಾಗ ಅಲ್ಲಿ ಸುಮಾರು 6-8 ಜನರು ಬಿಯರ್ ಬಾಟಲಿಗಳಿಂದ ಪರಸ್ಪರ ಹೊಡೆದಾಡುತ್ತಿದ್ದುದನ್ನು ಕಂಡು ಅಲ್ಲಿಗೆ ತೆರಳಿದಾಗ ಅಲ್ಲಿದ್ದ ಎಲ್ಲರೂ ಉದಯ ಕುಮಾರ್‌ರನ್ನು ಕುರಿತು ಅಶ್ಲೀಲವಾಗಿ ನಿಂದಿಸಿ ಸಮವಸ್ತ್ರ ಹಿಡಿದು ಎಳೆದಾಡಿದ್ದು ನಂತರ ಒಡೆದ ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಕುಶಾಲನಗರದ ನಿವಾಸಿಗಳಾದ ವಿಶ್ವ, ಪ್ರಸನ್ನ ಕುಮಾರ್, ಮಂಜುನಾಥ, ಕುಮಾರ್, ಶಾಂತ ಕುಮಾರ್ ಮತ್ತು ಪ್ರದೀಪ್‌ ಎಂಬವರ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, August 3, 2017

 ಪರಸ್ಪರ ಬೈಕ್ ಗಳ ಡಿಕ್ಕಿ ಒಬ್ಬನಿಗೆ ಗಾಯ:

     ಪರಸ್ಪರ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವನ ಕೈ ಮತ್ತು ಕಾಲು ಜಖಂಗೊಮಡ ಘಟನೆ ಕುಶಾಲನಗರ ಸಂಚಾರಿ ಠಾಣಾ ವ್ಯಾಪ್ತಿಯ ವೀರಭೂಮಿ ಸರ್ಕಲ್ ಬಳಿ ನಡೆದಿದೆ. ಕೂಡಿಗೆ ಗ್ರಾಮದ ನಿವಾಸಿ ಮಂಜುನಾಥ ಎಂಬವರ ಪುತ್ರ ಮನೋಹರ ಎಂಬವರು ದಿನಾಂಕ 9-7-2017 ರಾತ್ರಿ 10.00 ಗಂಟೆಯ ಸಮಯದಲ್ಲಿ ಕುಶಾಲನಗರದ ಕಡೆಯಿಂದ ಕೂಡಿಗೆಯಲ್ಲಿರುವ ತಮ್ಮ ಮನೆಯ ಕಡೆಗೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಜಯಪ್ರಕಾಶ್ ಎಂಬವರು ತಮ್ಮ ಮೋಟಾರ್ ಸೈಕಲಿನಲ್ಲಿ ಬಂದು ಮನೋಹರರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಂ ಮನೋಹರರವರ ಕೈ ಮತ್ತು ಕಾಲಿನ ಮೂಳೆ ಮುರಿದು ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಮಂಜುನಾಥರವರು ದಿನಾಂಕ 2-8-2017 ರಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಮಾರುತಿ ವ್ಯಾನ್ ಡಿಕ್ಕಿ:
     ಕುಶಾಲನಗರದ ಹೊಸಪಟ್ಟಣ ಗ್ರಾಮದ ವಾಸಿ ಹೆಚ್.ಎಂ. ಕಾರ್ತಿಕ್ ಎಂಬವರು ದಿನಾಂಕ 1-8-2017 ರಂದು ತನ್ನ ಸ್ನೇಹಿತ ಕೌಶಿಕ್ ಎಂಬಾತನ್ನು ತನ್ನ ಬಾಪ್ತು ಕೆ ಎ 12 ಆರ್ 0924 ರ ಆಕ್ಟಿವಾ ಹೊಂಡಾ ಬೈಕ್ ನಲ್ಲಿ ಕೂರಿಸಿಕೊಂಡು ಹೊಸಪಟ್ಟಣದಿಂದ ಕುಶಾಲನಗರಕ್ಕೆ ಹೋಗುತ್ತಿದ್ದಾಗ ಕುಶಾಲನಗರದ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್ ಹತ್ತಿರ ಸಮಯ 07.45 ಪಿ ಎಂಗೆ ತಲುಪಿದಾಗ ಕೆಎ12ಎಂ2513 ಸಂಖ್ಯೆಯ ಓಮಿನಿ ಕಾರನ್ನು ಅದರ ಚಾಲಕ ಯಾವುದೆ ಸಿಗ್ನಲ್ ನೀಡದೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರ್ತಿಕ್ ರವರು ಗಾಯಗೊಂಡು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Wednesday, August 2, 2017

ವಾಹನ ಅಪಘಾತದಲ್ಲಿ ಗಾಯಗೊಂಡ ಮಹಿಳೆ ಸಾವು:

        ಮಾರುತಿ ವ್ಯಾನ್ ಮತ್ತು ಜೀಪಿನ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಮಾದಪುರ ಗ್ರಾಮದಿಂದ ವರದಿಯಾಗಿದೆ. ಸೋಮವಾರಪೇಟೆ ತಾಲೂಕು ಗರಗಂದೂರು ಗ್ರಾಮದ ನಿವಾಸಿ ಪಿ.ಈ.ರಹೀಂ ಎಂಬವರು ದಿನಾಂಕ 28/07/2017 ರಂದು ಗರಗಂದೂರು ಗ್ರಾಮದಿಂದ ಮಾದಾಪುರ ಬಳಿಯ ನಂದಿಮೊಟ್ಟೆಯಲ್ಲಿರುವ ಸುಧೀರ್ ಅಪ್ಪಚ್ಚು ರವರ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕಾಗಿ ಅವರ ಬಾಪ್ತು ಕೆಎ 12 ಎಂ 6829 ರ ಜೀಪಿನಲ್ಲಿ ಅವರ ಗ್ರಾಮದ ಸುಶೀಲ ಕಾವೇರಿ ಲೀಲಾ ಪದ್ಮ ರುಕ್ಮಿಣಿ ಮತ್ತು ಮೀನಾ ರವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಸಮಯ 08:30 ಗಂಟೆಯ ವೇಳೆಗೆ ಮಾದಾಪುರದ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಬಂಕ್ ನಿಂದ ಒಂದು ಮಾರುತಿ ವ್ಯಾನಿನ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ವ್ಯಾನ್ ಅನ್ನು ಚಾಲನೆ ಮಾಡಿಕೊಂಡು ಬಂದು ರಹೀಂರವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪಿನ ಹಿಂದಿನ ಸೀಟಿನಲ್ಲಿ  ಕುಳಿತಿದ್ದ ಶ್ರೀಮತಿ  ಲೀಲಾರವರ ಸೊಂಟಕ್ಕೆ ಸ್ವಲ್ಪ ಪೆಟ್ಟಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಪಘಾತದ ಬಗ್ಗೆ ಯಾವುದೇ ದೂರನ್ನು ನೀಡುವುದು ಬೇಡವೆಂದು ತೀರ್ಮಾನ ಮಾಡಿ ಲೀಲಾ ರವರಿಗೆ ಚಿಕಿತ್ಸೆಯ ಎಲ್ಲಾ ಹಣವನ್ನು ನೀಡುವುದಾಗಿ ಪ್ರದೀಫ್ ರವರು ಒಪ್ಪಿಕೊಂಡು ಲೀಲಾರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 1-8-2017 ರಂದು ಮೃತಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಾವನನ್ನು ಕತ್ತಿಯಿಂದ ಕಡಿದು ಕೊಂದ ಅಳಿಯ:

      ಕೌಟುಂಬಿಕ ವಿಚಾರದಲ್ಲಿ ವ್ಯಕ್ತಿಯೋರ್ವ ತನ್ನ ಮಾವನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ. ನಲ್ಲೂರು ಗ್ರಾಮದ ನಿವಾಸಿ ಎರವರ ಬೆಳ್ಳಿ (49) ರವರನ್ನು ಅವರ 2ನೇ ಹೆಂಡತಿಯ ಮಗಳ ಗಂಡನಾದ ಪಂಜರಿ ಎರವರ ರಮೇಶ ಎಂಬ ವ್ಯಕ್ತಿ ಸಂಸಾರದಲ್ಲಿ ಹಿಂದೆ ಆದ ಸಣ್ಣ ಜಗಳದ ಹಿನ್ನೆಲೆಯಲ್ಲಿ ದಿನಾಂಕ 31-7-2016 ರಂದು ರಾತ್ರಿ ನಲ್ಲೂರು ಗ್ರಾಮದ ಪಂಜರಿ ಎರವರ ಬೆಳ್ಳಿ ವಾಸವಿರುವ ಲೈನು ಮನೆಗೆ ಹೋಗಿ ಬೆಳ್ಳಿರವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಈ ಸಂಬಂಧ ಬೆಳ್ಳಿರವರ ಮಗ ಪಂಜರಿ ಎರವರ ಮಂಜು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:


      ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಇಬ್ಬರು ಸೇರಿ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಶ್ರೀಮಂಗಲ ಪಟ್ಟಣದಲ್ಲಿ ನಡೆದಿದೆ. ದಿನಾಂಕ 1-8-2017 ರಂದು ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಪಟ್ಟಣದಲ್ಲಿ ಬೀರುಗ ಗ್ರಾಮದ ಜೇನುಕುರುಬರ ರಮೇಶ ರವರ ಮೇಲೆ ಗಣೇಶ ಹಾಗು ಉತ್ತಪ್ಪ ಎಂಬವರು ಹಣದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ರಮೇಶರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಸ್ಪರ್ಷಗೊಂಡು ಹೆಣ್ಣಾನೆಯ ಸಾವು:

      ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿದ ಹೆಣ್ಣಾನೆಯೊಂದು ಸಾವನ್ನಪಿದ ಘಟನೆ ಸಿದ್ದಾಪುರ ಸಮೀಪದ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-07-2017 ರಂದು ಸಮಯ 11.50 ಎ.ಎಂ ಗೆ ಮೀನುಕೊಲ್ಲಿ ಶಾಖೆ, ನಂಜರಾಯಪಟ್ಟಣ ಗಸ್ತು ವ್ಯಾಪ್ತಿಯ ಅಭ್ಯತ್ ಮಂಗಲ ಗ್ರಾಮದ ಕರ್ಣಯ್ಯನ ಎ ವಿಶ್ವನಾಥ್ ರವರ ಗದ್ದೆಯಲ್ಲಿನ ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ತುಂಡಗಿ ಬಿದ್ದು ವಿದ್ಯುತ್ ತಂತಿಯನ್ನು ಸ್ವರ್ಶಿಸಿ ಹೆಣ್ಣು ಕಾಡಾಣೆಯೊಂದು ಸಾವನ್ನಪ್ಪಿದ್ದು, ಈ ಸಂಬಂಧ ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಬಿ.ಆರ್. ದೇವಿಪ್ರಸಾದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, August 1, 2017

ವ್ಯಕ್ತಿಯ ಆಕಸ್ಮಿಕ ಸಾವು
                          ದಿನಾಂಕ 12/07/2017ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದಲ್ಲಿ ಕಾಶಿ ಎಂಬವರ ಮನೆಯ ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಂಜಯ್ ಮಂಡೆಲ್ ಎಂಬವರು ಕಾಲು ಜಾರಿ ಬಿದ್ದು ಗಂಭೀರ ಗಾಯಗಳಿಂದ ಆತನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಮಂಡೆಲ್ ದಿನಾಂಕ 30/07/2017ರಂದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.