Sunday, August 13, 2017

ನೇಣು ಬಿಗಿದು ಆತ್ಮ ಹತ್ಯೆ

               ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ವದಿಯಾಗಿದೆ. ಕಾವಾಡಿ ಗ್ರಾಮದ ಗಣಪತಿಯವರ ಲೈನ್ ಮನೆಯಲ್ಲಿ ವಾಸವಿರವ ಪಣಿಯರವರ ಮಲ್ಲಿಗೆ @ ಇಂದಿರಾರವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 9-08-2017 ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ ಇದ್ದು ದಿನಾಂಕ 12-08-2017 ರಂದು ಗಣಪತಿಯವರ ತೋಟದಲ್ಲಿ ಮಲ್ಲಿಗೆಯವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಈ ಬಗ್ಗೆ ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ 
            ದಿನಾಂಕ 12-08-2017 ರಂದು ಸುಂಟಿಕೊಪ್ಪ ಠಾಣಾಧಿಕಾರಿಯವರಾದ ಜಯರಾಮ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸುಂಟಿಕೊಪ್ಪದ ಸಂತೆ ನಡೆಯುವ ಸ್ಥಳಕ್ಕೆ ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಭಾಷಾ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.