Saturday, September 30, 2017

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಠಾಣಾ ಸರಹದ್ದಿನ ಅರೆಕಾಡು ಗ್ರಾಮದ ನಿವಾಸಿ ಶ್ರೀಮತಿ ಪ್ರಿಯ ಎಂಬವರ ಗಂಡ ಮಣಿಕಂಠ ಎಂಬಾತ ದಿನಾಂಕ 28-9-2017 ರಂದು ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ರಸ್ತೆ ಅಪಘಾತ ಬೈಕ್ ಸವಾರ ಸಾವು:

    ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಸೆ ಗ್ರಾಮದಲ್ಲಿ ಬೈಕಿಗೆ ಮಾರುತಿ ವ್ಯಾನ್ ಡಿಕ್ಕಿಯಾಗಿ ಬೈಕ್ ಸವಾರ ಸಾವನಪ್ಪಿದ ಘಟನೆ ನಡೆದಿದೆ. ಹುಲಸೆ ಗ್ರಾಮದ ಹೆಚ್.ಜಿಜ. ಶಿವನಂಜಪ್ಪ ಎಂಬವರ ಮಗ ನವೀನ ಎಂಬಾತ ದಿನಾಂಕ 29-9-2017 ರಂದು ಸಂಜೆ 5-45 ಗಂಟೆಗೆ ಮೋಟಾರ್ ಸೈಕಲಿನಲ್ಲಿ ಹೆಬ್ಬಾಲೆ ಗ್ರಾಮದಿಂದ ಹುಲಸೆ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ವ್ಯಾನ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ನವೀನ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಲಾರಿ ಡಿಕ್ಕಿ:

    ಪಾದಚಾರಿಗೆ ಲಾರಿ ಡಿಕ್ಕಿಯಾಗಿ  ಸದರಿಯವರು ಗಾಯಗೊಂಡ ಘಟನೆ ಕುಶಾಲನಗರ ಹತ್ತಿರದ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ಗುಡ್ಡೆಹೊಸೂರು ಗ್ರಾಮದ ಮುರುಗನ್ ಹಾಗು ಅವರ ಮಾವ ರಾಜು ರವರು ಗುಡ್ಡೆಹೊಸೂರು ವಿನ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಲಾರಿಯೊಂದು ರಾಜುರವರಿಗೆ ಡಿಕ್ಕಿಯಾದ ಪರಿಣಾಮ ಸದರಿಯವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Friday, September 29, 2017

ಮನೆ ಕಳವು:

     ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ಮಡಿಕೇರಿ ನಗರದ ರೈಫಲ್ ರೇಂಜ್ ನಲ್ಲಿ ನಡೆದಿದೆ. ಮಡಿಕೇರಿ ನಗರದ ರೈಪಲ್ ರೇಂಜ್ ನಿವಾಸಿ ಎನ್.ಯು.ಗೌತಮ್ ಎಂಬವರ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಚಿನ್ನಾಭರಣ, ಒಂದು ಎಸ್.ಬಿ.ಬಿ.ಎಲ್. ಕೋವಿ. ಇತ್ಯಾದಿಯನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ಮಡಿಕೇರಿ ತಾಲೋಕು ಕಡಗದಾಳು ಗ್ರಾಮದ ನಿವಾಸಿ ಎಂ.ಡಿ. ಬೆಳ್ಳಿಯಪ್ಪ ಎಂಬವರ ತಂದೆ ದಾದ @ ಅಣ್ಣು ಎಂಬವರು ದಿನಾಂಕ 28-9-2017 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಎಂ.ಡಿ.ಬೆಳ್ಳಿಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, September 28, 2017

ಹಳೆ ದ್ವೇಷ, ಹಲ್ಲೆ
                                 ದಿನಾಂಕ 26/09/2017ರಂದು ಮಡಿಕೇರಿಯ ಪುಟಾಣಿನಗರದ ನಿವಾಸಿ ಜಿ.ಆರ್.ಚಂದ್ರು ಎಂಬವರು ನಗರದ ದೇವಸ್ಥಾನ ರಸ್ತೆಯಲ್ಲಿರುವ  ಬಾರ್‌ಗೆ ಮದ್ಯಪಾನ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದಾಗ ಅಲ್ಲಿಗೆ ಬಂದ ಪುಟಾಣಿ ನಗರದ ಸುಜಿತ್ ಎಂಬಾತನು ಹಳೆ ದ್ವೇಷದಿಂದ ಜಿ.ಆರ್‌.ಚಂದ್ರುರವರೊಂದಿಗೆ ಜಗಳವಾಡಿ ಸುಜಿತ್ ಹಾಗೂ ಆತನ ಸ್ನೇಹಿತರಾದ ದೇವರಾಜ್, ಪುನೀತ್ ಹಾಗೂ ಇತರರು ಸೇರಿಕೊಂಡು ಚಂದ್ರುರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವ್ಯಕ್ತಿ ಕಾಣೆ
                          ಕುಶಾಲನಗರ ಬಳಿಯ ಚಿಕ್ಕತ್ತೂರು ನಿವಾಸಿ ಜಿ.ಎಸ್.ಉದಯಕುಮಾರ್ ಎಂಬವರು ದಿನಾಂಕ 14/09/2017ರಂದು ಎಂದಿನಂತೆ ಲಾರಿಯಲ್ಲಿ ಚಾಲಕ ಕೆಲಸಕ್ಕೆ ಹೋಗಿದ್ದು ಮುಂಬಯಿಗೆ ಹೋಗುವುದಾಗಿ ಪತ್ನಿ ಸುಮಿತ್ರರವರಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದು ನಂತರ ಅವರಿಂದ ಯಾವುದೇ ಮಾಹಿತಿ ಇಲ್ಲದೆ ಇದುವರೆಗೂ ಮನೆಗೆ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ  ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                            ದಿನಾಂಕ 26/09/2017ರಂದು ಕುಶಾಲನಗರ ಬಳಿಯ ಮಾದಾಪಟ್ನ ನಿವಾಸಿ ರಾಮಚಂಧ್ರ ಎಂಬವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ನೆರೆಮನೆಯ ಅರುಣ ಎಂಬಾತನು ಸಿಕ್ಕಿ ಆತನು ರಾಮಚಂದ್ರರವರ ಬಳಿ ಮದ್ಯಪಾನ ಮಾಡಲು ಹಣ ಕೇಳಿದ್ದು ರಾಮಚಂದ್ರರವರು ನಿರಾಕರಿಸಿದ ಕಾರಣಕ್ಕೆ ಅರುಣನು ಜಗಳವಾಡಿ ದೊಣ್ಣೆಯಿಂದ ರಾಮಚಂದ್ರರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ದೇಗುಲ ಕಳವು
                            ಸಿದ್ದಾಪುರ ಬಳಿಯ ಪಾಲಿಬೆಟ್ಟ ರಸ್ತೆಯಲ್ಲಿರುವ ಮೇಕೂರಿನ ವಡ್ಡರಕಾಡು ಎಸ್ಟೇಟಿನಲ್ಲಿರುವ ಗಣಪತಿ ದೇವಾಲಯದ ಅರ್ಚಕ ವಿ.ವಿ.ರಾಧಾಕೃಷ್ಣ ಎಂಬವರು ದಿನಾಂಕ 25/09/2017ರಂದು ಪೂಜೆ ಮುಗಿಸಿ ಸಂಜೆ ಮನೆಗೆ ಹೋಗಿದ್ದರು. ಮಾರನೆ ದಿನ 26/09/2017ರಂದು ರಾಧಾಕೃಷ್ಣರವರು ದೇವಾಲಯಕ್ಕೆ ಪೂಜೆ ಮಾಡಲೆಂದು ಬಂದಾಗ ಯಾರೋ ಕಳ್ಳರು ದೇವಾಲಯದ ಬೀಗ ಮುರಿದು ಒಳ ಪ್ರವೇಶಿಸಿ ದೇವಾಲಯದಲ್ಲಿದ್ದ ಸುಮಾರು ರೂ. 19,000/- ಬೆಲೆ ಬಾಳುವ ಎರಡು ಪಂಚ ಲೋಹದ ವಿಗ್ರಹ ಹಾಗೂ ಒಂದು ಆರತಿ ತಟ್ಟೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತೋಟದ ಉಸ್ತುವಾರಿ ನೋಡಿಕೊಳ್ಳುವ ಎ.ಎಸ್.ಬಾಬುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ, ಬಂಧನ
                            ದಿನಾಂಕ 27/09/2017ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ನಗರದಲ್ಲಿ ಓರ್ವ ವ್ಯಕ್ತಿಯು ಅಕ್ರಮವಾಗಿ ಲಾಟರಿ ಟಿಕೇಟುಗಳನ್ನು ಮಾರಾಟ ಮಾಡುತ್ತಿರುವಾಗಿ ದೊರೆತ ಸುಳಿವಿನ ಮೇರೆಗೆ ಪೊನ್ನಂಪೇಟೆ ಠಾಣೆಯ ಪಿಎಸ್‌ಐ ಬಿ.ಜಿ.ಮಹೇಶ್‌ರವರು ಬಾಳೆಲೆ ನಗರಕ್ಕೆ ತೆರಳಿ ನಿಟ್ಟೂರು ಗ್ರಾಮದ ನಿವಾಸಿ ತಮಿಳರ ಮಹದೇವ ಎಂಬವರು ಅಕ್ರಮವಾಗಿ ಕೇರಳ ರಾಜ್ಯದ ಲಾಟರುಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿ, ಸುಮಾರು 72 ಲಾಟರಿ ಟಿಕೆಟುಗಳನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, September 27, 2017

ವಾಹನ ಡಿಕ್ಕಿ ಪಾದಚಾರಿ ಸಾವು:

    ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ಸಚಿನ್ ಎಂಬವರ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಜೇನುಕುರುಬರ ಕೃಷ್ಣ ಎಂಬವರು ದಿನಾಂಕ 25-9-2017 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಟಿ.ಶೆಟ್ಟಿಗೇರಿಯಿಂದ ಬಿರುಣಾಣಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನವೊಂದು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕೃಷ್ಣರವರು ಗಾಯಗೊಂಡು ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದು ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಚಿನ್ನದಂಗಡಿಯಿಂದ ಚಿನ್ನಾಭರಣ ಕಳವು:

     ಗೋಣಿಕೊಪ್ಪ ಹರಿಶ್ಚಂದ್ರನಗರದ ನಿವಾಸಿ ಜಿ. ಗೋಪಾಲ ಎಂಬವರು ನಗರದ ಮುಖ್ಯರಸ್ತೆಯಲ್ಲಿ ಆದರ್ಶ ಜ್ಯುವೆಲರಿ ವರ್ಕ್ಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 25/09/2017 ರಂದು ಎಂದಿನಂತೆ ವ್ಯಾಪಾರ ಮುಗಿಸಿ ರಾತ್ರಿ 8-00 ಗಂಟೆಗೆ ಅಂಗಡಿ ಮುಚ್ಚಿ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 26/09/2017 ರಂದು ಎಂದಿನಂತೆ ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಜಿ. ಗೋಪಾಲರವರು ಅಂಗಡಿಗೆ ಬಂದು ಬೀಗ ತೆಗೆದು ಒಳ ನುಗ್ಗುವಾಗ್ಗೆ ಅಂಗಡಿಯ ಒಳಗಡೆ ಶೋಕೇಸ್ ಡೋರ್ ತೆರೆದಿದ್ದು ಡೋರಿನ ಹಿಂಭಾಗ ಗೋಡೆಯ ಮೇಲ್ಭಾಗದಲ್ಲಿ ಪ್ಲೈವುಡ್ ಶೀಲಿಂಗನ್ನು ತೆರೆದು ಅದರ ಮೇಲ್ಭಾಗದಲ್ಲಿದ್ದ ಯಾಸ್ಪರ್ ಶೀಟ್ ಅನ್ನು ಒಡೆದು ಯಾರೋ ಕಳ್ಳರು ಒಳನುಗ್ಗಿ ಅಂಗಡಿಯ ಒಳಗಡೆ ಶೋಕೇಸ್ ನಲ್ಲಿ ಇಟ್ಟಿದ್ದ ಚಿನ್ನದ ಅಂದಾಜು 50 ಗ್ರಾಂನಷ್ಟು ಚಿಕ್ಕ ಪುಟ್ಟ ಉಂಗುರ, ಮಾಟಿ, ವಾಲೆ, ಇತ್ಯಾದಿಗಳನ್ನು ಹಾಗೂ ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಕಡಗ, ಪೆಂಡೆಂಟ್, ಬ್ರಾಸ್ಲೆಟ್, ಕೊಕ್ಕೆ ತಾತಿ ಇತ್ಯಾದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಬೆಲೆ ರೂ ಒಟ್ಟು 1,64,000/- ರೂಗಳಾಗಿರತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, September 26, 2017

ಕಾರಿಗೆ ಬಸ್ ಡಿಕ್ಕಿ
                 ದಿನಾಂಕ 20/09/2017ರಂದು ಚಾಮರಾಜನಗರದ ಚಿತ್ರಸೇನಾ ಎಂಬವರು ಬಿ.ಕೆ.ತುಳಸಿಮಾಲಾ ಎಂಬವರೊಂದಿಗೆ ಕೆಎ-09-ಝೆಡ್-6235ರ ಕಾರಿನಲ್ಲಿ ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ಬಳಿಯ ಮದೆನಾಡು ಬಳಿ ಎದುರುಗಡೆಯಿಂದ ಕೆಎ-19-ಎಫ್-3168ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಿತ್ರಸೇನಾರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾನಿಗೊಳಗಾಗಿದ್ದು ಕಾರಿನಲ್ಲಿದ್ದ ತುಳಸಿಮಾಲಾರವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 25, 2017

ಹಣದ ವಿಚಾರದಲ್ಲಿ ಜಗಳ ಹಲ್ಲೆ:
     ಸಿದ್ದಾಪುರ ಠಾಣಾ ವ್ಯಾಪ್ತಿಯ  ಗುಹ್ಯ ಗ್ರಾಮದ ವರ್ನಾಂಡಿ ಕಾಫಿ ತೋಟದ ಲೈನುಮನೆಯಲ್ಲಿ ವಾಸವಾಗಿರುವ ಶ್ರೀಮತಿ ಜಯಲಕ್ಷ್ಮಿ ಎಂಬವರೊಂದಿಗೆ  ಅವರ ಪಕ್ಕದ ಮನೆಯಲ್ಲಿ ವಾಸವಾಗಿರುವ ಶ್ರೀಮತಿ ವಿಮಲ ರವರೊಂದಿಗೆ 100 ರೂ ಸಾಲವನ್ನು ಮರಳಿ ಕೊಡಲು ಕೇಳಿದ್ದು ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟು, ಜಗಳವನ್ನು ಬಿಡಿಸಲು ಬಂದಿ ಶ್ರೀಮತಿ ಜಲಯಕ್ಷ್ಮಿಯವರ ಪತಿ ಮಂಜುನಾಥರವರ ಮೇಲೆ  ಆರೋಪಿ ಶ್ರೀಮತಿ ವಿಮಲ ರವರು ದಬ್ಬೆಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು:
       ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿನೋರ್ವ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆ ಕುಶಾಲನಗರದ ಮಾದಾಪಟ್ನದ ಹತ್ತಿದ ಕಾವೇರಿ ಹೊಳೆಯಲ್ಲಿ ಸಂಭವಿಸಿದೆ.  ದಿನಾಂಕ 23-9-2017 ರಂದು ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ಕು ಜನ ವಿದ್ಯಾರ್ಥಿಗಳು ಮಾದಾಪಟ್ಣ ಗ್ರಾಮದಲ್ಲಿರುವ ಕಾವೇರಿ ಹೊಳೆಗೆ ಈಜಲು ಹೋಗಿದ್ದು, ಈಜುತ್ತಿದ್ದ 17 ವರ್ಷ ಪ್ರಾಯದ ಪ್ರಶಾಂತ್ ಎಂಬವನು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  

 

Sunday, September 24, 2017

ರಸ್ತೆ ಅಫಘಾತ
                        ದಿನಾಂಕ 23/09/2017ರಂದು ಮಡಿಕೇರಿ ಸಂಚಾರಿ ಠಾಣೆಯ ಎಎಸ್‌ಐ ಹೆಚ್‌.ಕೆ.ಮಹದೇವರವರು ನಗರದ ಜಿ.ಟಿ.ವೃತ್ತದಲ್ಲಿ ದಸರಾ ಪ್ರಯುಕ್ತ ನಡೆಯುತ್ತಿದ್ದ ಮ್ಯಾರಥಾನ್ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದಾಗ ಕೆಎ-12-ಎನ್-104 ಸಂಖ್ಯೆಯ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಬಾಲರಾಜ್‌ ಎಂಬವರು ಎಎಸ್‌ಐರವರು ನೀಡಿದ ನಿಲುಗಡೆ ಸೂಚನೆಯನ್ನು ನಿರ್ಲಕ್ಷಿಸಿ ಅಜಾಗರೂಕತೆಯಿಂದ ಏಕಾಏಕಿ ವ್ಯಾನನ್ನು ಮುಂದೆ ಚಾಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಮಹದೇವರವರಿಗೆ ಡಿಕ್ಕಿಪಡಿಸಿದ ಪರಿಣಾಮ ಎಎಸ್‌ಐ ಮಹದೇವರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿಗೆ ಬಸ್‌ ಡಿಕ್ಕಿ
                       ದಿನಾಂಕ 23/09/2017ರಂದು ಸುಂಟಿಕೊಪ್ಪ ಬಳಿಯ ಗದ್ದೆಹಳ್ಳ ನಿವಾಸಿ ರಘು ಎಂಬವರು ಅವರು ಚಾಲಕನಾಗಿ ಕರ್ತವ್ಯ ಮಾಡಿಕೊಂಡಿದ್ದ ಕೆಎ-12-ಎ-9430ರ ಐಷರ್ ಕಂಪೆನಿಯ ಟಿಪ್ಪರ್ ಲಾರಿಯನ್ನು ಚಾಲಿಸಿಕೊಂಡು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಕೊಡಗರಹಳ್ಳಿಯ VAM ಹೋಟೆಲಿನ ಬಳಿ ನಿಂತಿದ್ದ ಕಾರನ್ನು ಅದರ ಚಾಲಕ ಹಿಂದಕ್ಕೆ ಚಾಲಿಸುತ್ತಿದ್ದು ರಘುರವರ ಲಾರಿಯ ಮುಂದೆ ಹೋಗುತ್ತಿದ್ದ ಒಂದು ಸ್ಕೂಟರನ್ನು ಅದರ ಚಾಲಕ ನಿಲ್ಲಿಸಿದ ಪರಿಣಾಮ ರಘುರವರು ಸಹಾ ಲಾರಿಯನ್ನು ನಿಲ್ಲಿಸಿದ್ದು ಅದೇ ಸಮಯಕ್ಕೆ ಹಿಂದಿನಿಂದ ಕೆಎ-19-ಎಫ್-3077ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿ ರಘುರವರ ಲಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದು ಅದರ ಪರಿಣಾಮ ಲಾರಿಯು ಮುಂದೆ ಚಲಿಸಿ ಮುಂದಿದ್ದ ಸ್ಕೂಟರಿಗೆ ಡಿಕ್ಕಿಯಾಗಿದ್ದು ಲಾರಿ VAM ಹೋಟೆಲಿನ ಒಳಗೆ ನುಗ್ಗಿ ಹೋಟೆಲಿನ ಒಳಗೆ ಇದ್ದ ಓರ್ವ ವ್ಯಕ್ತಿಯು ಗಾಯಾಳುವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 23, 2017

ಮನುಷ್ಯ ಕಾಣೆ:

     ಕೆಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ವಿರಾಜಪೇಟೆ ತಾಲೋಕು ನಾಂಗಾಲ ಗ್ರಾಮದ ನಿವಾಸಿ ಗುಡ್ಡಂಡ ಎಂ. ರಮೇಶ ಎಂಬವರ ಮಗ ಬೋಪನ್ಣ @ ಯತೀಶ್ ಎಂಬವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ನಂತರ ಅವರು ಕೆಲಸ ಬಿಟ್ಟು ಮನೆಗೆ ಬಂದು ನೆಲೆಸಿದ್ದು, ದಿನಾಂಕ 5-6-2012 ರಂದು ಮನೆಯಿಂದ ಹೋಗಿದ್ದು, ಮತ್ತೆ ಅವರು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕ್ವಾಲೀಸ್ ಕಾರು ಡಿಕ್ಕಿ:

     ದಿನಾಂಕ 22-9-2017 ರಂದು ಸಮಯ 12-30 ಪಿ.ಎಂ.ಗೆ ಪಿರ್ಯಾದಿ ಕೆ.ವಿ. ಪೈಸಲ್ ಕಣ್ಣೂರು, ಕೇರಳ ರವರು ಹಾಗೂ ಅವರ ಸ್ನೇಹಿತ ರವರು ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದು ಪೆರಂಬಾಡಿ ಕೆರೆಯ ತಿರುವಿನ ಬಳಿ ತಲಪುವಾಗ್ಗೆ, ಎದುರುಗಡೆಯಿಂದ ಹಸಿರು ಬಣ್ಣದ ಕ್ವಾಲೀಸ್ ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಕೆ.ವಿ. ಪೈಸಲ್ ಹಾಗು ಹಿಂಬದಿ ಸವಾರ ಅಬ್ದುಲ್ ಸಲಾಂ ರವರು ಗಾಯಗೊಂಡಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್ ಸೈಕಲ್ ಕಳವು:

     ದ್ವಿಚಕ್ರವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾದ ಘಟನೆ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 20-9-2017 ರಂದು ಮಡಿಕೇರಿ ನಗರದ ಠಾಣಿಪೇಟೆಯಲ್ಲಿ ವಾಸವಾಗಿರುವ ಜಿ.ಕಿಶೋರ್ ಕುಮಾರ್ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್ ಕಟ್ಟಡದ ಮುಂದುಗಡೆ ಇರುವ ದ್ವಿಚಕ್ರವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಿದ್ದು ಮತ್ತೆ 11-00 ಗಂಟೆ ಸಮಯಕ್ಕೆ ಅಲ್ಲಿಗೆ ಬಂದು ನೋಡಿದಾಗ ಸದರಿ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಕೆ ಕೈಗೊಂಡಿದ್ದಾರೆ. 

Friday, September 22, 2017

ಕೌಟುಂಬಿಕ ಜಗಳ:

     ಸಂಸಾರದಲ್ಲಿ ಕಲಹದಿಂದಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ಠಾಣಾ ಸರಹದ್ದಿನ ಕೊಡಗರಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಲಲಿತಾ ಎಂಬವರ ಅಳಿಯ ಮತ್ತು ಮಗಳ ನಡುವೆ ಕೆಲವು ಸಮಯದಿಂದ ಜಗಳ ನಡೆಯುತ್ತಿದ್ದು ದಿನಾಂಕ 19-9-2017 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಶ್ರೀಮತಿ ಲಲಿತಾರವರ ಮನೆಗೆ ಅಳಯ ಪ್ರಕಾಶ ಬಂದು ತನ್ನ ಹೆಂಡತಿಯೊಂದಿಗೆ ಜಗಳ ವಾಡುತ್ತಿದ್ದು, ಅದನ್ನು ತಡೆಯಲು ಹೋದ ಅತ್ತೆ ಶ್ರೀಮತಿ ಲಲಿತಾರವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಟಾಟಾ ಏಸ್ ವಾಹನ ಅಪಘಾತ :

     ಟಾಟಾ ಏಸ್ ವಾಹನವನ್ನು ಚಾಲಕ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಪರಿಣಾಮ ಮಗುಚಿ ಬಿದ್ದು 10 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ. ದಿನಾಂಕ 21/09/17 ರಂದು ಪಿರ್ಯಾದಿ ಹೆಬ್ಬಾಲೆ ಗ್ರಾಮದ ನಿವಾಸಿ ದಿಲೀಪ್ ಕುಮಾರ್ ಮತ್ತು ಇತರೆ 9 ಮಂದಿ ಕಾರ್ಮಿಕರು ಬೈರಪ್ಪನಗುಡಿ ಗ್ರಾಮದಲ್ಲಿ ಕೂಲಿಕೆಲಸ ಮುಗಿಸಿ ಮೇಸ್ತ್ರಿ ಸುರೇಶ ಎಂಬುವರೊಂದಿಗೆ ತೊರೆನೂರು ಗ್ರಾಮದ ಮಂಜು ಎಂಬುgÀವರ ಕೆಎ 20 ಡಿ 0476 ರ ಟಾಟಾ ಏಸ್ ವಾಹನದಲ್ಲಿ ಬೈರಪ್ಪನಗುಡಿಯಿಂದ 6 ನೇ ಹೊಸಕೋಟೆ ಕಡೆಗೆ ಬರುತ್ತಿರುವಾಗ್ಗೆ ಸಂಜೆ 6.00 ಗಂಟೆ ಸಮಯದಲ್ಲಿ ಹೆಬ್ಬಾಲೆ-ಬಾಣವಾರ ಮುಖ್ಯರಸ್ತೆಯ ಮುನಿಯಪ್ಪನ ಗುಡಿ ಎಂಬ ಸ್ಥಳದಲ್ಲಿ ವಾಹನದ ಚಾಲಕ ಮಂಜು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಟಾಟಾ ಏಸ್ ವಾಹನವು ರಸ್ತೆಯ ಬಲ ಭಾಗಕ್ಕೆ ಮಗುಚಿಕೊಂಡಿದ್ದು, ವಾಹನದಲ್ಲಿದ್ದ ಪಿರ್ಯಾದಿ ಮತ್ತು ಇತರ ಒಂಬತ್ತು ಜನರಿಗೆ ಗಾಯವಾಗಿzÀÄÝ, ಗಾಯಾಳುಗಳು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Thursday, September 21, 2017

ಬಸ್ಸಿಗೆ ಕಾರು ಡಿಕ್ಕಿ.

    ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಜೋಡುಪಾಲದ ಬಳಿ ನಡೆದಿದೆ. ಪುತ್ತೂರು ಡಿಪೋದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಆಲ್ವಿನ್ ತೌರ್ ಎಂಬವರು ದಿನಾಂಕ 20-9-2017 ರಂದು ಪುತ್ತೂರಿನಿಂದ ಮೈಸೂರು ಕಡೆಗೆ  ಕೆಎ-19-ಎಫ್ -3168 ರ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯೆ ಮದೆನಾಡು ಗ್ರಾಮದ ಜೋಡುಪಾಲ ಸಮೀಪದ ಅಬ್ಬಿಕೊಲ್ಲಿ ಎಂಬಲ್ಲಿ  ಎದುರಿನಿಂದ ಮಡಿಕೇರಿ ಕಡೆಯಿಂದ ಬಂದ ಕೆಎ-09-ಜೆಡ್-6235 ರ ಹೂಂಡೈ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆಲ್ವಿನ್ ತೌರ್ ರವರು ಚಾಲಿಸುತ್ತಿದ್ದ ಕೆ ಎಸ್ ಆರ್.ಟಿ.ಸಿ ಬಸ್ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿಗೂ ಹಾಗೂ ಕಾರಿನ ಮುಂಭಾಗಕ್ಕೂ ಜಖಂಗೊಂಡಿರುವುದಲ್ಲದೇ ಕಾರಿನಲ್ಲಿ ಪ್ರಯಾಣಿಸುತಿದ್ದ ಒಬ್ಬ ಮಹಿಳೆಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.ಟಿ.ಎಂ.ನಿಂದ ಹಣ ಕಳ್ಳತನಕ್ಕೆ ಯತ್ನ:

     ದಿನಾಂಕ 20-9-2017 ರ ರಾತ್ರಿ 20-30 ಗಂಟೆ ಮತ್ತು ದಿನಾಂಕ 20-9-2017ರ 08-30 ಗಂಟೆಯ ಮದ್ಯದ ಅವಧಿಯಲ್ಲಿ ಮಡಿಕೇರಿ ತಾಲೋಕು, ಮೂರ್ನಾಡು ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎ.ಟಿ.ಎಂ. ರೂಮಿನ ಶೆಟರ್ಸ್ ನ ಬೀಗವನ್ನು ಯಾರೋ ಕಳ್ಳರು ಒಡೆದು ಎ.ಟಿ.ಎಂ. ಯಂತ್ರದಿಂದ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ್ದು, ಈ ಸಂಬಂಧ ಬ್ಯಾಂಕಿನ ವ್ಯವಸ್ಥಾಪಕರಾದ ಸುಜಿತ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

     ಮಡಿಕೇರಿ ತಾಲೋಕು ಬೆಟ್ಟತ್ತೂರು ಗ್ರಾಮದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಕಾಣೆಯಾದ ಘಟನೆ ವರದಿಯಾಗಿದೆ.  ಪಿರ್ಯಾದಿ ಆಲ್ಪೌನ್ಸೆ ರವರು ಬೆಂಗಳೂರಿನ ನಿವಾಸಿಯಾಗಿದ್ದು ಬೆಟ್ಟತ್ತೂರು ಗ್ರಾಮದಲ್ಲಿ ಮಡಿಕೇರಿಯ ರೆನಿಲ್ ಜಾನ್ ಎಂಬುವರ ಮನೆಯನ್ನು ಕಟ್ಟುವ ಕೆಲಸವನ್ನು ಕರಾರು ತೆಗೆದುಕೊಂಡಿದ್ದು ಕಳೆದ 20 ದಿನಗಳಿಂದ 10 ಜನ ಕೆಲಸಗಾರರೊಂದಿಗೆ ಲೈನ್ ಮನೆಯಲ್ಲಿ ವಾಸವಿದ್ದು ಕೆಲಸ ಮಾಡಿಕೊಂಡಿರುವುದಾಗಿದೆ. ಕೆಲಸಗಾರರಲ್ಲಿ ಕೃಷ್ಣ ಎಂಬುವರು ಸಹಾ ಒಬ್ಬರಾಗಿದ್ದು ದಿನಾಂಕ 12.09.2017 ರಂದು 11.00 ಎ.ಎಂ ಗೆ ಕೃಷ್ಣ ರವರು ಚೆರಂಬಾಣೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸ್ಸು ಬಾರದೆ ಕಾಣೆಯಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ದಂಪತಿ ಮೇಲೆ ಹಲ್ಲೆ:

     ದಿನಾಂಕ 19/09/2017 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ನಿವಾಸಿ ಬಿ.ಎನ್. ಲಿಂಗಪ್ಪ ಎಂಬವರ ಸಹೋದರ ಬಾಲಕೃಷ್ಣ ಹಾಗು ತಾಯಿ ಶ್ರೀಮತಿ ರಾಮಕ್ಕ ರವರು ಸೇರಿ ಫಿರ್ಯಾದಿ ಬಿ.ಎನ್. ಲಿಂಗಪ್ಪ ಹಾಗು ಅವರ ಪತ್ನಿಯ ಮೇಲೆ ದೋಣ್ಣೆಯಿಂದ ಹಲ್ಲೆ ನಡೆಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸದರಿ ಬಿ.ಎನ್. ಲಿಂಗಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಡ್ಜ್ ನಿಂದ ಮೊಬೈಲ್ ಮತ್ತು ನಗದು ಕಳವು:

     ವಸತಿ ಗೃಹದಲ್ಲಿ ತಂಗಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಮತ್ತು ನಗದು ಹಣ ಕಳ್ಳತನವಾದ ಘಟನೆ ವಿರಾಜಪೇಟೆ ನಗರದ ಕುಟ್ಟಂಡ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ದಿನಾಂಕ 20-09-2017 ರಂದು ಬೆಂಗಳೂರಿನ ಪೂಜಾ ಕ್ರಾಫ್ಟೆಡ್ ಹೋಮ್ಸ್ ಪ್ರೈ,ಲಿ. ನ ಪ್ರಾಜೆಕ್ಟ್ ಮ್ಯಾನೇಜರ್ ಹೆಚ್.ಕೆ. ವೆಂಕಟೇಶ್ ರೆಡ್ಡಿ ಹಾಗೂ ಸಹಾಯಕ ಕೀರ್ತಿ ಎಂಬುವವರು ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯಲ್ಲಿರುವ ಕುಪ್ಪಂಡ ಕಾಂಪ್ಲೆಕ್ಸ್ ನ ಕಾವೇರಿ ಲಾಡ್ಜ್ ನಲ್ಲಿ ರೂಂ ನಂ: 2 ರಲ್ಲಿ ತಂಗಿದ್ದು, ರೂ.5000 ಬೆಲೆಯ ರೆಡ್ ಮಿ ನೋಟ್-4 ಮೊಬೈಲ್ ಫೋನ್, ರೂ. 1000 ಬೆಲೆಯ ಸೋನಿ ಎರಿಕ್ಷನ್ ಮೊಬೈಲ್ ಫೋನ್ ಮತ್ತು ಪರ್ಸನಲ್ಲಿದ್ದ 9000 ರೂ ನಗದು ಹಣ ವನ್ನು ಸಮಯ 03-00 ಪಿಎಂಗೆ ರೂಮಿನಲ್ಲಿದ್ದ ಟಿಪಾಯಿ ಮೇಲೆ ಇರಿಸಿ ರೂಮಿನ ಬಾಗಿಲನ್ನು ಹಾಗೇ ಎಳೆದುಕೊಂಡು ಇಬ್ಬರು ಹೊರಗೆ ಹೋಗಿ 03-15 ಪಿಎಂಗೆ ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಬಾಗಿಲನ್ನು ತೆರೆದು ಒಳನುಗ್ಗಿ ಟಿಫಾಯಿ ಮೇಲಿದ್ದ ಮೇಲ್ಕಂಡ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, September 20, 2017

 ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ.

     ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 19-9-2017 ರಂದು ಕುಶಾಲನಗರ ಸಂಚಾರಿ ಠಾಣಾ ವ್ಯಾಪ್ತಿಯ ಕಣಿವೆ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕುಶಾಲನಗರ ನಿವಾಸಿ ಅಬ್ದುಲ್ ಅಬು ತಾಹಿರ್ ಎಂಬವರು ತಮ್ಮ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಶಿರಂಗಾಲದ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿರುವಾಗ್ಗೆ ಕೂಡಿಗೆ ಕಡೆಯಿಂದ ಗಿರೀಶ್ ಎಂಬವರು ತಮ್ಮ ಮೊಟಾರ್ ಸೈಕಲ್ ನಲ್ಲಿ ಹಿಂಬದಿ ಸವಾತ ಗಣೇಶ ಎಂಬವರೊಂದಿಗೆ ಬರುತ್ತಿದ್ದು, ಸದರಿ ಮೋಟಾರ್ ಸೈಕಲನ್ನು ಗಿರೀಶ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಗಿರೀಶ್ ಮತ್ತು ಗಣೇಶ ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆ ಸಿಬ್ಬಂದಿ ಪರ್ಸ್ ಕಳವು:

     ದಿನಾಂಕ 18/09/2017 ರಂದು ರಾತ್ರಿ 9.50 ರ ಸಮಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸೋಮವಾರಪೇಟೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಆಗಮಿಸಿ ಶುಶ್ರೂಷಕಿ ಯವರ ವಿಶ್ರಾಂತಿ ಕೊಠಡಿಯ ಕಿಟಕಿಯನ್ನು ತೆರೆದು ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಶುಶ್ರೂಷಕಿ ಎಸ್.ಸಿ. ಭಾನುಮತಿ ಎಂಬವರ ಪರ್ಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದ್ರಿ ಪರ್ಸ್ ನಲ್ಲಿ 400/- ರೂ ಇದ್ದು, ಈ ಸಂಬಂಧ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ಡಾ: ಜಸ್ವಂತ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಗಿಲು ಮುರಿದು ಕಳ್ಳತನ.

     ಮನೆಯ ಬಾಗಿಲನ್ನು ಮುರಿದು ನಗದು ಹಣ ಮತ್ತು ಎಟಿಎಂ ಕಾರ್ಡುಗಳನ್ನು ಕಳ್ಳತನ ಮಾಡಿದ ಘಟನೆ ಕುಶಾಲನಗರ ಸಮೀಪದ ಕೂಡ್ಲೂರು ನವ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-9-2017 ರಂದು ಫಿರ್ಯಾದಿ ಕೂಡ್ಲೂರು ಗ್ರಾಮದ ನಿವಾಸಿ ಶ್ರೀಮತಿ ಪ್ರೇಮ ಎಂಬವರು ಮಧ್ಯಾಹ್ನ 2-45 ಗಂಟೆ ಸಮಯದಲ್ಲಿ ಅವರ ಮನೆಯ ಪಕ್ಕದ ಮನೆ ಶ್ರೀಮತಿ ಪಧ್ಮಾ ರವರ ಮನೆಗೆ ಹೋಗಿ ಸಂಜೆ 4-00 ಗಂಟೆ ಸಮಯದಲ್ಲಿ ಮನೆಗೆ ಬಂದಾಗ ಮನೆಯ ಹಿಂದಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆರೆದು ಮನೆಯ ಒಳಗಡೆಯ ಕೊಠಡಿಯಲ್ಲಿಟ್ಟಿದ್ದ ಬೀರುವಿನಿನ ಬಾಗಿಲನ್ನು ಸಹ ತೆರೆದು 24,000 ಸಾವಿರ ನಗದು ಮತ್ತು ಎರಡು ಎ.ಟಿ.ಎಂ. ಕಾರ್ಡುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿಗೆ ಹಾರಿಗೆ ವ್ಯಕ್ತಿ ಆತ್ಮಹತ್ಯೆ:

    ಆರ್ಥಿಕ ಮುಗ್ಗಟ್ಟಿನಿಂದ ವ್ಯಕ್ತಿಯೋರ್ವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಗ್ರಾಮಾಂತರ ಸರಹದ್ದಿನ ಗೋಂದಿಬಸವಳ್ಳಿ ಗ್ರಾಮದಲ್ಲಿ ನಡೆದಿದೆ. ಗೊಂದಿಬಸವನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಗೀತಾ ಎಂಬವರ ಅಳಿಯ ಅರುಣ್ ಕುಮಾರ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-9-2017 ರಂದು ಸಂಜೆ 4-45 ಗಂಟೆಗೆ ಗೊಂದಿಬಸವನಳ್ಳಿ ಗ್ರಾಮದಲ್ಲಿ ಕಲ್ಲುಕೋರೆಯ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಮರ ಬಿದ್ದು ವ್ಯಕ್ತಿ ಸಾವು:

     ಅಡಿಕೆ ಮರ ಕಡಿಯುವ ವೇಳೆ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ವಿರಾಜಪೇಟೆ ತಾಲೋಕು ಅಮ್ಮತ್ತಿ ಗ್ರಾಮದಲ್ಲಿ ಸಂಭವಿಸಿದೆ. ಅಮ್ಮತ್ತಿ ಗ್ರಾಮದ ನೆಲ್ಲಮಕ್ಕಡ ಲೋಕೇಶ ಬೋಪಣ್ಣ ಎಂಬವರ ಲೈನುಮನೆಯಲ್ಲಿ ವಾಸವಾಗಿದ್ದ ರವಿ ಎಂಬವರು ದಿನಾಂಕ 12-9-2017 ರಂದು ಲೋಕೇಶ್ ಬೋಪಣ್ಣರವರ ತೋಟದಲ್ಲಿ ಅಡಿಕೆ ಮರ ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಸದರಿ ಅಡಿಕೆ ಮರವು ಅವರ ಮೇಲೆ ಬಿದ್ದು ಪೆಟ್ಟಾಗಿದ್ದು ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದು ನೋವು ಜಾಸ್ತಿಯಾದ ಕಾರಣ ಸದರಿಯವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 19-9-2017 ರಂದು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ:

     ದಿನಾಂಕ 19-09-2017 ರಂದು ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ನಿವಾಸಿ ಎ.ಎಂ. ನಿರಂಜನ ಎಂಬವರು ತಮ್ಮ ಬಾಪ್ತು KA-12-Q-9010 ರ ಮೋಟಾರ್ ಬೈಕ್ ನಲ್ಲಿ ತನ್ನ ಸಹೋದರ  ಎ.ಎಂ.ರತನ್ ರವರೊಂದಿಗೆ ಮೂರ್ನಾಡುವಿನಿಂದ ಹೊದ್ದೂರಿನಲ್ಲಿರುವ ತಮ್ಮ ಮನೆಗೆ ಹೋಗುತ್ತಿರುವಾಗ ಸಮಯ 6.00 ಪಿ.ಎಂ ಗೆ ಮೂರ್ನಾಡು ಗ್ರಾಮದ ಕಾಲೇಜಿನ ಬಳಿಯ ರಸ್ತೆಯಲ್ಲಿ ಎದುರಿನಿಂದ KA-12-B-4761 ರ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿರಂಜನ್ ರವರು ಓಡಿಸುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯಲ್ಲಿ ಬಿದ್ದು ಜಖಂಗೊಂಡು, ನಿರಂಜನ್ ಹಾಗೂ ರತನ್ ರವರಿಗೆ ರಕ್ತಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, September 19, 2017

ರಸ್ತೆ ಅಫಘಾತ
                        ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ಬಿ.ವಿ.ಅರವಿಂದ್ ಎಂಬವರು ಅವರ ಮನೆಯ ಮುಂದೆ ಅವರ ಕಾರು ಸಂಖ್ಯೆ  ಕೆಎ-05-ಎಂಬಿ-69ನ್ನು ನಿಲ್ಲಿಸಿದ್ದು ದಿನಾಂಕ 17/09/2017ರಂದು ರಾತ್ರಿ ವೇಳೆ  ಸುಮಂತ್ ಎಂಬವರು ಅವರ ಮೋಟಾರು ಬೈಕ್ ಸಂಖ್ಯೆ ಕೆಎ-12-ಇ-4537ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅರವಿಂದ್‌ರವರು ನಿಲ್ಲಿಸಿದ್ದ ಅವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿದ್ದು ಬೈಕ್ ಸವಾರನಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ  ಕಾಣೆ ಪ್ರಕರಣ
                    ಸೋಮವಾರಪೇಟೆ ಬಳಿಯ ದೊಡ್ಡಬ್ಬೂರು ಗ್ರಾಮದ ನಿವಾಸಿ ಸಂದೇಶ್ ಲೋಬೋ ಎಂಬವರು ದಿನಾಂಕ 19/06/2017ರಂದು ಮನೆಯಲ್ಲಿ ತಂದೆ ಹಾಗೂ ತಾಯಿ ಇಲ್ಲದ ಸಮಯದಲ್ಲಿ ಮನೆಯಿಂದ ಆತನ ಕೆಲವು ದಾಖಲೆಗಳು ಮತ್ತು ವಸ್ತುಗಳನ್ನು ತೆಗೆದುಕೊಂಡು ಹೊರಟು ಹೋಗಿದ್ದು ನಂತರ ತಾಯಿಗೆ ಫೋನ್ ಕರೆ ಮಾಡಿ ತಾನು ಗೋಣಿಕೊಪ್ಪಲಿನಲ್ಲಿ ಇರುವುದಾಗಿತಿಳಿಸಿದ್ದು ನಂತರ 2 ತಿಂಗಳಿನಿಂದ ಆತನು ಯಾವುದೇ ಫೋನ್‌ ಕರೆಗೆ ಸಿಗದಿದ್ದು ಆತನ ಇರುವಿಕೆಯ ಬಗ್ಗೆ ಮಾಹಿತಿ ಇಲ್ಲವೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಅಫಘಾತ
                     ದಿನಾಂಕ 18/09/2017ರಂದು ಮೈಸೂರಿನ ಶರತ್ ಕುಮಾರ್ ಎಂಬವರು ಮಡಿಕೇರಿಯಿಂದ ಅವರ ಸ್ನೇಹಿತರೊಂದಿಗೆ ಕೆಎ-05-ಎಂಎನ್-8757ರಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಸ್ಯಾಂಡಲ್ ವುಡ್ ಎಸ್ಟೇಟ್ ಬಳಿ ಕಾರನ್ನು ಚಾಲಿಸುತ್ತಿದ್ದ ಅವರ ಸ್ನೇಹಿತ ಅಜಯ್ ಎಂಬವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಅಜಯ್‌ರವರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಮಗುಚಿದ ಪರಿಣಾಮ ಶರತ್‌ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಸ್ಕೂಟರ್ ಡಿಕ್ಕಿ
                       ದಿನಾಂಕ 18/09/2017ರಂದು ಗೋಣಿಮರೂರು ನಿವಾಸಿ ಜಿ.ಎಸ್.ದಯಾನಂದ ಎಂಬವರು ಅವರ ಕೆಎ-04-ಜೆಡ್-5188ರಲ್ಲಿ ಸ್ನೇಹಿತರೊಂದಿಗೆ ಕುಶಾಲನಗರಕ್ಕೆ ಬಂದು ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ಸಿನಿಪ್ಲೆಕ್ಸ್ ಚಿತ್ರ ಮಂದಿರದ ಬಳಿ ಕಾರನ್ನು ಎಡಭಾಗದಲ್ಲಿ ನಿಲ್ಲಿಸಿ ಬಲಕ್ಕೆ ತಿರುಗುವ ಸಂದರ್ಭದಲ್ಲಿ ಒಂದು ಹೊಸ ನೋಂದಣಿಯಾಗದ ಸ್ಕೂಟರನ್ನು ಅದರ ಚಾಲಕ  ಚೆಟ್ಟಳ್ಳಿ ನಿವಾಸಿ ರಾಜೇಶ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾಗೂ ಸ್ಕೂಟರಿಗೆ ಹಾನಿಯುಂಟಾಗಿದ್ದು ಸ್ಕೂಟರ್ ಸವಾರ ರಾಜೇಶ್‌ರವರಿಗೂ ಸಹಾ ಗಾಯಗಳಾಗಿರುವುದಾಗಿ ನೀಡಿದ ದೂರಿನ  ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಪ್ರವೇಶ, ಕಳ್ಳತನ
                                ದಿನಾಂಕ 18/09/2017ರಂದು ಮೈಸೂರು ನಿವಾಸಿ ಕಲಾವತಿ ಎಂಬವರು ಅವರ ಸ್ನೇಹಿತರೊಂದಿಗೆ ಕಾರ್ಯ ನಿಮಿತ್ತ ಮಡಿಕೇರಿಗೆ ಬಂದು ನಂತರ ಅವರ ತಂದೆಯ ಮನೆಯಿರುವ ಶ್ರೀಮಂಗಲ ಬಳಿಯ ಬೆಳ್ಳೂರು ಗ್ರಾಮಕ್ಕೆ ಹೋದಾಗ ಮನೆಯೊಳಗೆ ಯಾರೋ ಮಾತನಾಡುತ್ತಿರುವ ಸದ್ದು ಕೇಳಿ ಇವರು ಹತ್ತಿರ  ಹೋದಾಗ ಇವರು ಮಾತನಾಡುವ ದನಿ ಕೇಳಿ ಮನೆಯೊಳಗಿದ್ದವರು ಓಡಿ ಹೋಗಿದ್ದು ನಂತರ ಕಲಾವತಿಯವರು ಒಳಗೆ ಹೋಗಿ ನೋಡಿದಾಗ ಮನೆಯೊಳಗಿದ್ದ ಒಂದು ಎಸ್‌ಬಿಬಿಎಲ್ ಕೋವಿ ಹಾಗೂ ಸುಮಾರು 15 ಮದ್ಯದ ಬಾಟಲಿಗಳು ಕಾಣೆಯಾಗಿದ್ದು ಕಲಾವತಿಯವರ ತಂದೆಯ ಬಗ್ಗೆ ವೈಷಮ್ಯ ಹೊಂದಿದ್ದ ನೂರೆರ ರಂಜಿ, ಚೀಯಣಮಾಡ ಸಂಜು ಮತ್ತು ಇತರರು ಕಳ್ಳತನವೆಸಗಿರುವುದಾಗಿ ಕಲಾವತಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 18, 2017

ರಿಕ್ಷಾ ಮಗುಚಿ ಸಾವು
                           ದಿನಾಂಕ 17/09/2017ರಂದು ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿ ಕೃಷ್ಣ ಎಂಬವರು ಅವರ ರಿಕ್ಷಾ ಸಂಖ್ಯೆ ಕೆಎ-12-ಎ-8112ರನ್ನು ಚಾಲಿಸಿಕೊಂಡು ಕೂಡಿಗೆ ಕಡೆಯಿಂದ ಬರುತ್ತಿರುವಾಗ ಕೂಡ್ಲೂರುವಿನ ಕೈಗಾರಿಕಾ ಬಡಾವಣೆ ಬಳಿ ರಸ್ತೆಗೆ ಅಡ್ಡಲಾಗಿ ಬಂದ ಹಸುವಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಸಲುವಾಗಿ ರಿಕ್ಷಾವನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸಿದಾಗ ರಿಕ್ಷಾವು ಕೃಷ್ಣರವರ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡ ಕೃಷ್ಣರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಕೃಷ್ಣರವರು ಮೃತರಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                      ದಿನಾಂಕ 17/09/2017ರಂದು ಮಡಿಕೇರಿ ಬಳಿಯ ಇಬ್ನಿವಳವಾಡಿ ನಿವಾಸಿ ಎನ್‌.ಜಿ.ಅಯ್ಯಪ್ಪ ಎಂಬವರು ಅವರ ಕೆಎ-12-ಜೆಡ್-0510ರ ಇನ್ನೋವಾ ಕಾರಿನಲ್ಲಿ ಗೋಣಿಕೊಪ್ಪಕ್ಕೆ ಹೋಗುತ್ತಿರುವಾಗ ಗ್ರಾಮದ ಇಬ್ನಿ ರೆಸಾರ್ಟ್‌ ಮುಂದಿನ ತಿರುವಿನಲ್ಲಿ ಕೆಎ-03-ಎಇ-2678ರ ಕಾರನ್ನು ಅದರ ಚಾಲಕ ಪ್ರಣವ್ ಠಾಕೂರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸುತ್ತಾ ಆತನ ಮುಂದಿದ್ದ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಎನ್‌.ಜಿ.ಅಯ್ಯಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿ ನಮೇರೆಗೆ  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
                      ಶ್ರೀಮಂಗಲ ಬಳಿಯ ಬಲ್ಯಮಂಡೂರು ನಿವಾಸಿ ಪೆಮ್ಮಂಡ ಪೊನ್ನಪ್ಪ ಎಂಬವರ ಲೈನು ಮನೆಯಲ್ಲಿ ವಾಸವಿರುವ ಪಣಿ ಎರವರ ಮೀನಾ ಎಂಬವರು ದಿನಾಂಕ 17/09/2017ರಂದು ಬಲ್ಯಮಂಡೂರು ಕಡೆಗೆ ಹೋಗಿ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಅದನ್ನು ಆಕ್ಷೇಪಿಸಿದ ಗಂಡ ಒಡಕನಿಗೆ ಬುದ್ದಿ ಕಲಿಸುವುದಾಗಿ ಹೇಳಿ ಯಾವುದೋ ವಿಷವನ್ನು ಸೇವಿಸಿ ಅಸ್ವಸ್ಥಳಾಗಿದ್ದು ಆಕೆಯನ್ನು ಶ್ರೀಮಂಗಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, September 17, 2017

ಮಹಿಳೆ ಆತ್ಮಹತ್ಯೆ
                  ಸೋಮವಾರಪೇಟೆ ಠಾಣೆಯ ಸರಹದ್ದಿನ ಕಾರೆಕೊಪ್ಪ ಗ್ರಾಮದ ನಿವಾಸಿ ಮರಿಯಮ್ಮ ಎಂಬುವವರು ಒಬ್ಬಂಟಿಯಾಗಿ ವಾಸವಿದ್ದು, ಇವರ ಮಗ ಬೆಂಗಳೂರಿನಲ್ಲಿ ವಾಸವಿರುವುದಾಗಿದೆ. ಇವರಿಗೆ ಮದ್ಯಪಾನ ಮಾಡುವ ಚಟವಿದ್ದು ದಿನಾಂಕ 16-09-2017 ರಂದು ತಾನು ವಾಸ ಮಾಡುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ವಿನ್ಸೆಂಟ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ವಶ
                     ದಿನಾಂಕ 15-09-2017 ರಂದು ರಾತ್ರಿ ಚೆನ್ನಯ್ಯನಕೋಟೆಯ ಉಪಠಾಣೆಯ ಸಿಬ್ಬಂದಿಯವರಾದ ಲೋಕೇಶರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಪಾಲಿಬೆಟ್ಟ ಕಡೆಯಿಂದ ಬರುತ್ತಿದ್ದ ಸ್ಕೂಟಿಯನ್ನು ತಡೆದಾಗ ಸ್ಕೂಟಿಯನ್ನು ಚಾಲನೆ ಮಾಡುತ್ತಿದ್ದ ಚೆನ್ನಯ್ಯನಕೋಟೆಯ ನಿವಾಸಿಯಾದ ಹೆಚ್. ಎಸ್. ವಿಶ್ವನಾಥ ಎಂಬುವವರು ಸ್ಕೂಟಿಯನ್ನು ಬಿಟ್ಟು ಓಡಿಹೋಗಿದ್ದು ಸ್ಕೂಟಿಯನ್ನು ಪರಿಶೀಲಿಸದಾಗ 90 ಎಂ.ಎಲ್ ನ 40 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಇದ್ದು, ಈ ಬಗ್ಗೆ ಲೋಕೇಶರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, September 16, 2017

ಹಲ್ಲೆ ಪ್ರಕರಣ 
                                 ದಿನಾಂಕ 01/09/2017ರಂದು ಪೊನ್ನಂಪೇಟೆ ನಿವಾಸಿ ಸಂಜು ಎಂಬವರು ಸ್ನೇಹಿತರೊಂದಿಗೆ ಪೊನ್ನಂಪೇಟೆ ನಗರದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾವನ್ನು ವೀಕ್ಷಿಸಲು ಹೋಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಅಭಿ ಎಂಬಾತನು ಸಂಜುವಿಗೆ ಕೊಡಬೇಕಾಗಿದ್ದ ಹತ್ತು ರೂಪಾಯಿ ಹಣವನ್ನು ಕೇಳಿದಾಗ ಮಾತಿಗೆ ಮಾತು ಬೆಳೆದು ಅಭಿ ಹಾಗೂ ಜೊತೆಯಲ್ಲಿದ್ದ ಶಿವು, ಸುನಿಲ್ ಹಾಗೂ ರಾಜ ಎಂಬವರು ಸೇರಿ ಸಂಜುರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು ಪರಿಣಾಮವಾಗಿ ಸಂಜುರವರ ಕಿವಿಯ ಮೇಲ್ಭಾಗದ ಮೂಳೆ ಮುರಿದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ. 

ಅಪರಿಚಿತ ಶವ ಪತ್ತೆ
                              ದಿನಾಂಕ 15/09/2017ರಂದು ವಿರಾಜಪೇಟೆ ನಗರದ ನಿವಾಸಿ ಪ್ರವೀಣ ಎಂಬವರು ಅವರ ಮನೆಯ ಮುಂದೆ ನಿಲ್ಲಿಸಿದ್ದ ರಿಕ್ಷಾವನ್ನು ತೆಗೆಯಲೆಂದು ಹೋದಾಗ ಅಲ್ಲಿ ರಿಕ್ಷಾದೊಳಗೆ ಓರ್ವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಕೊಲೆ
                     ಮಡಿಕೇರಿ ನಗರದ ದಾಸವಾಳ ರಸ್ತೆಯ ನಿವಾಸಿ ಕೆ.ಕೆ.ಲಲಿತ ಎಂಬವರ ತಾಯಿ 65 ವರ್ಷ ಪ್ರಾಯದ ಸೀತಮ್ಮ ಎಂಬವರು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ಒಬ್ಬರೆ ವಾಸವಾಗಿದ್ದು ಲಲಿತಾರವರು ಆಗಾಗ್ಗೆ ದೂರವಾಣಿ ಕರೆ ಮಾಡಿ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದು 12/09/2017ರಂದು ಕರೆ ಮಾಡಿದಾಗ ತಾಯಿ ಸೀತಮ್ಮನವರ ಮೊಬೈಲ್‌ ಸ್ವಿಚ್ ಆಫ್ ಆಗಿದ್ದು ನಂತರ ಎರಡು ದಿನಗಳೂ ಕರೆ ಮಾಡಿದಾಗ  ಮೊಬೈಲ್ ಸ್ವಿಚ್‌ ಆಫ್‌ ಆಗಿದ್ದು, ಈ ಬಗ್ಗೆ ಅನುಮಾನಗೊಂಡ ಲಲಿತಾರವರ ಪತಿ ಕಾರ್ಯಪ್ಪನವರು ದಿನಾಂಕ 15/09/2017ರಂದು ಇಗ್ಗೋಡ್ಲುವಿಗೆ ಹೋಗಿ ನೋಡಿದಾಗ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲುಗಳೆರಡು ಮುಚ್ಚಿದ್ದು ಮನೆಯೊಳಗಿನಿಂದ ವಾಸನೆ ಬರುತ್ತಿತ್ತೆನ್ನಲಾಗಿದೆ. ಕೂಡಲೇ ಕಾರ್ಯಪ್ಪನವರು ಮನೆಯ ಕಿಟಕಿಯನ್ನು ತಳ್ಳಿ ನೋಡಿದಾಗ ಸೀತಮ್ಮನವರ ಮೃತ ದೇಹವು ಕೋಣೆಯ ಮಧ್ಯದಲ್ಲಿ ಅಂಗಾತ ಬಿದ್ದಿದ್ದು ಮನೆಯ ಬಾಗಿಲು ತೆರೆಸಿ ನೋಡಿದಾಗ ಸೀತಮ್ಮನವರ ಶವವು ಕೊಳೆತ ಸ್ಥಿತಿಯಲ್ಲಿದ್ದು ದೇಹದ ಮುಖ ಮತ್ತು ಕೈ ಮೇಲೆ ಪೌಡರ್ ಚೆಲ್ಲಿದ್ದು ತಲೆಯ ಮೇಲೆ ನಾಣ್ಯವನ್ನು ಇಟ್ಟಿದ್ದು ಯಾರೋ ದುಷ್ಕರ್ಮಿಗಳು ತಮ್ಮ ತಾಯಿಯನ್ನು ಕೊಲೆ ಮಾಡಿರುವುದಾಗಿ ಲಲಿತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿ ಮಗುಚಿ ವ್ಯಕ್ತಿಯ ಸಾವು
                            ದಿನಾಂಕ 15/09/2017ರಂದು ಮಡಿಕೇರಿ ಬಳಿಯ ಎರಡನೇ ಮೊಣ್ಣಂಗೇರಿ ನಿವಾಸಿಗಳಾದ ಟಿ.ಜಿ.ದಿನೇಶ್ ಮತ್ತು ಅವರ ಅಣ್ಣ ಹೇಮರಾಜು ಎಂಬವರು ಅವರ ಸಂಘದ ಸಭೆಗೆ ಹೋಗುವ ಸಲುವಾಗಿ ಮದೆನಾಡಿಗೆ ಹೋಗುತ್ತಿರುವಾಗ ಮದೆನಾಡಿನ ಅಬ್ಬಿಕೊಲ್ಲಿ ಎಂಬಲ್ಲಿ ಮಡಿಕೇರಿ ಕಡೆಯಿಂದ ಕೆಎ-01-ಎಸಿ-6844ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಲಾರಿಯು ಆತನ ನಿಯಂತ್ರಣ ತಪ್ಪಿ ಮಗುಚಿ ರಸ್ತೆಯಲ್ಲಿ ಬಿದ್ದು ಅದರಲ್ಲಿದ್ದ ಇಂಟರ್‌ಲಾಕ್‌ಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೇಮರಾಜುರವರ ಮೇಲೆ ಬಿದ್ದು ಹೇಮರಾಜುರವರು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ಬೈಕ್ ಕಳವು 
                              ಮಡಿಕೇರಿ ಬಳಿಯ ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಹೆಚ್‌.ಕೆ.ಮೂರ್ತಿ ಎಂಬವರು ದಿನಾಂಕ 12/09/2017ರಂದು ಅವರ ಕೆಎ-02-ವಿ-8710ರ ಮೋಟಾರು ಬೈಕನ್ನು ಅವರ ಮನೆಯ ಮುಂದಿನ ಅಂಗಡಿಯ ಮುಂದೆ ನಿಲ್ಲಿಸಿದ್ದು ಮಾರನೆ ದಿನ ದಿನಾಂಕ 13/09/2017ರಂದು ಸಿದ್ದಾಪುರಕ್ಕೆ ಹೋಗಲೆಂದು ನೋಡಿದಾಗ ಬೈಕ್ ಕಾಣೆಯಾಗಿದ್ದು ಯಾರೋ ಬೈಕನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 15, 2017

ಯುವಕ ಕಾಣೆ
                     ಕುಶಾಲನಗರದ ಸುಂದರನಗರದ ಬಳಿ ಇರುವ ರಾಜ್‌ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚೇತನ್‌ ಎಂಬ ಯುವಕನು ದಿನಾಂಕ 10/09/2017ರಂದು ಕೆಲಸದಿಂದ ತೆರಳಿದ್ದು ನಂತರ ಕೆಲಸಕ್ಕೇ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಸ್ಕೂಟರ್ ಪರಸ್ಪರ ಡಿಕ್ಕಿ
                    ದಿನಾಂಕ 13/09/2017ರಂದು ಪಿರಿಯಾಪಟ್ಟಣ ನಿವಾಸಿ ಚೇತನ್ ಎಂಬವರು ಕುಶಾಲನಗರದ ಕಡೆಯಿಂದ ಮಾದಾಪಟ್ನದ ಕಡೆಗೆ ಅವರ ಹೊಸ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಪಾಲಿಟೆಕ್ನಿಕ್ ಬಳಿ ಎದುರುಗಡೆಯಿಂದ ಕೆಎ-12-ಹೆಚ್-2205ರ ಮೋಟಾರು ಬೈಕನ್ನು ಅದರ ಚಾಲಕ ಮಾದಾಪಟ್ನದ ನಿವಾಸಿ ಜಗದೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೇತನ್‌ರವರ  ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿಗೆ ಹಾನಿಯಾಗಿದ್ದು ಚೇತನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಜೀಪು ಡಿಕ್ಕಿ
                   ದಿನಾಂಕ 14/09/2017ರಂದು ಕುಶಾಲನಗರ ನಿವಾಸಿ ಎಂ.ಕೆ.ಮಹಮದ್ ನಸೀರ್ ಎಂಬವರು ಅವರ ಕೆಎ-12-ಪಿ-5427ರ ಕಾರಿನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಬೋಯಿಕೇರಿ ಬಳಿ ಕೆಎ-45-ಎಂ-725ರ ಜೀಪನ್ನು ಅದರ ಚಾಲಕ ಗಿರೀಶ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹಮದ್ ನಸೀರ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮಹಮದ್ ನಸೀರ್, ಎಂ.ಎನ್.ಮುಷಾಬರ್ ಮತ್ತು ಮಕ್ಬೂಲ್ ಎಂಬ ಮಹಿಳೆಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ಮಹಮದ್ ನಸೀರ್‌ರವರು ಕಾರನ್ನು ರಸ್ತೆಯ ಬಲಗಡೆಯಲ್ಲಿ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶ್‌ರವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪು ಹಾಗೂ ಜೀಪಿನಲ್ಲಿದ್ದ ಗಿರೀಶ್‌ ಮತ್ತು ಕಾವೇರಮ್ಮ ಎಂಬವರಿಗೆ ಗಾಯಗಳಾಗಿರುವುದಾಗಿ ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ಕಡೆಯ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ ಬಂಧನ
                      ದಿನಾಂಕ 13/09/2017ರ ರಾತ್ರ ವೇಳೆ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲ್ಲಪ್ಪ ಮುಶಿಗೇರಿ ಮತ್ತು ಮಹದೇವ ಸ್ವಾಮಿ ಎಂಬವರುಗಳು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ನಡು ರಾತ್ರಿ ವೇಳೆಯಲ್ಲಿ ಸಿದ್ದಾಪುರ ನಗರದ ವಿಜಯ ಬ್ಯಾಂಕಿನ ಎಟಿಎಂ ಕೇಂದ್ರದ ಬಳಿ ಸಿದ್ದಾಪುರ ಬಳಿಯ ಹೊಲಮಾಳ ನಿವಾಸಿ ಕೆ.ಮಂಜು ಎಂಬಾತನು  ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದು ಆತನನ್ನು ವಿಚಾರಿಸಿದಾಗ ಆ ಅವೇಳೆಯಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣವನ್ನು ನೀಡದೆ ಇದ್ದ ಕಾರಣಕ್ಕೆ ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ದರೋಡೆ ಯತ್ನ ಪ್ರಕರಣ
                 ದಿನಾಂಕ 14/09/2017ರಂದು ವಿರಾಜಪೇಟೆ ಬಳಿಯ ನಿಸರ್ಗನಗರದಲ್ಲಿನ ನಿವಾಸಿ ಅಶ್ವಿನಿ ಎಂಬವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಆಕೆಯನ್ನು ಮಂಚದಲ್ಲಿ ಕಟ್ಟಿ ಹಾಕಿ ದರೋಡೆ ಮಾಡುವ ಯತ್ನದಲ್ಲಿದ್ದಾಗ ಆಕೆಯ ಪತಿ ಸುರೇಶ್‌ರವರು ಕಾರಿನಲ್ಲಿ ಬಂದು ಕಾರಿನ ಹಾರನ್ ಮಾಡಿದ ಶಬ್ದವನ್ನು ಕೇಳಿ ಇಬ್ಬರೂ ಓಡಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Thursday, September 14, 2017

ಸ್ಕೂಟರ್ ಕಾರು ಡಿಕ್ಕಿ

     ದಿನಾಂಕ 12/09/2017ರಂದು ಸೋಮವಾರಪೇಟೆ ಬಳಿಯ ಕೂಗೂರು ನಿವಾಸಿಗಳಾದ ಶಶಿಕುಮಾರ್‌ ಹಾಗೂ ರವಿ ಎಂಬವರುಗಳು ಕೆಎ-12-ಕ್ಯು-6470ರಲ್ಲಿ ಗೌಡಳ್ಳಿ ಕಡೆಗೆ ಹೋಗುತ್ತಿರುವಾಗ ಗೌಡಳ್ಳಿ ಕಡೆಯಿಂದ ಕೆಎ-12-ಪಿ-8691ರ ಕಾರನ್ನು ಅದರ ಚಾಲಕ ಶಾಂತವೇರಿ ಗ್ರಾಮದ ಮಿಥುನ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಶಿಕುಮಾರ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಶಶಿಕುಮಾರ್‌ ಹಾಗೂ ರವಿಯವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ದುರುಪಯೋಗ


     ಕುಶಾಲನಗರದ ಎಪಿಸಿಎಂಎಸ್‌ ವತಿಯಿಂದ ನಡೆಸುತ್ತಿರುವ ಕುಶಾಲನಗರದ ಜನತಾ ಬಜಾರ್ ಔಷಧಿ ಅಂಗಡಿಯಲ್ಲಿ ಮಾರಾಟ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಾಕೂರು ಶಿರಂಗಾಲ ಗ್ರಾಮದ ರಾಜೇಶ್‌ ಎಂಬವರು ಅಂಗಡಿಯಲ್ಲಿದ್ದ ದಾಸ್ತಾನಿನ ಪೈಕಿ ಸುಮಾರು ರೂ. 5,34,138,70/- ಮೌಲ್ಯದ ಔಷಧದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು ದಿನಾಂಕ 04/03/2017ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಹಣ ದುರುಪಯೋಗ

     ಮೈಸೂರಿನ ಟಿ.ಜಿ.ಆದಿಶೇಷನ್ ಎಂಬವರು 2014ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಬಾರ್ಡ್ ಫೈನಾನ್ಸಿಯಲ್ ಸರ್ವಿಸ್‌ ಲಿಮಿಟೆಡ್ ನ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲೆಯಲ್ಲಿನ ಮಹಿಳಾ ಸ್ವಸಹಾಯ ಸಂಘಗಳ ಅಧ್ಯಕ್ಷರಾಗಿದ್ದು ಅವರ ಅಧಿಕಾರಾವಧಿಯಲ್ಲಿ ಆ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮೈಸೂರಿನ ಎನ್‌.ಜೆ.ರಾಜೇಶ್, ರಾಮಚಂದ್ರ, ಆಸಿಫ್ ಮತ್ತು ಬೇಗಂ ರಹೀಮ ಎಂಬವರು ಸುಮಾರು ರೂ. 19,09,132/-ನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ:

      ವ್ಯಕ್ತಿಯೊಬ್ಬವರು ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 13-09-2017 ರಂದು 4.30 ಪಿ.ಎಂ ಗೆ ವಿರಾಜಪೇಟೆನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆರೋಪಿ ಎಸ್.ಬಿ ರಾಜು ಎಂಬಾತನು ಕೇರಳಾ ರಾಜ್ಯದ ಲಾಟರಿ ಟಿಕೆಟ್ಟುಗಳನ್ನು ಅಕ್ರಮವಾಗಿ ಮಾರಟಮಾಡುತ್ತಿದ್ದುದ್ದನ್ನು ವಿರಾಜಪೇಟೆ ನಗರ ಪೊಲೀಸರು ಪತ್ತೆಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Wednesday, September 13, 2017

ಮನುಷ್ಯ ಕಾಣೆ:

     ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮೂವತ್ತೋಕ್ಲು ಗ್ರಾಮದಿಂದ ವರದಿಯಾಗಿದೆ. ಸೋಮವಾರಪೇಟೆ ತಾಲೋಕು ಮೂವತ್ತೊಕ್ಲು ಗ್ರಾಮದ ನಿವಾಸಿ ಟಿ.ಚಂಗಪ್ಪ ಎಂಬವರ ತಂದೆ ತಂಬುಕುತ್ತೀರ ಈರಪ್ಪ @ ಅಣ್ಣ ಕುಂಜ್ಞರವರು ಮಾದಾಪುರ ಸುತ್ತಮುತ್ತ ಟಿಂಬರ್ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 13.08.2017 ರಂದು ಮನೆಯಿಂದ ಹೋದವರು ಇಲ್ಲಿಯ ತನಕ ಮನೆಗೆ ಬಾರದೆ ಇದ್ದು, ಪಿರ್ಯಾದಿ ಟಿ.ಚಂಗಪ್ಪನವರು ಎಲ್ಲಾ ಕಡೆ ಹುಡುಕಿದರೂ ಅವರು ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
     ಕೊಲೆಪ್ರಕರಣದಲ್ಲಿ ಶಿಕ್ಷೆಯಾಗಿ ಬಂದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಡಿಕೇರಿ ನಗರದ ಮಂಗಳಾದೇವಿ ನಗರದ ನಿವಾಸಿ ಆರ್. ಶ್ರೀಕಾಂತ್ ಎಂಬವರ ಮಾವ ಎಂ. ಗಣಪತಿ ಎಂಬವರು ತನ್ನ ಹೆಂಡತಿ ಚಂದ್ರಮತಿಯವರನ್ನು ಕೊಲೆ ಮಾಡಿ 3 ವರ್ಷ ಮಡಿಕೇರಿಯ ಜೈಲಿನಲ್ಲಿದ್ದು, ಶಿಕ್ಷೆ ಮುಗಿದು ಜೈಲಿನಿಂದ  ಬಂದು ಸದರಿ ವ್ಯಕ್ತಿ ಶ್ರೀಕಾಂತರ ರವರಿಗೆ ಸೇರಿದ ಅರೆಯೂರಿನಲ್ಲಿರುವ ತೋಟದ ಲೈನು ಮನೆಯಲ್ಲಿ ವಾಸವಿದ್ದು, ಕೊಲೆ ಪ್ರಕರಣದಲ್ಲಿ ಪುನ: ಶಿಕ್ಷೆಯಾಗಬಹುದೆಂದು ಹೆದರಿ ದಿನಾಂಕ 11-9-2017 ರಂದು ಮದ್ಯಾಹ್ನ 12:30 ಗಂಟೆಗೆ ಲೈನು ಮನೆಯೊಳಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ದೇವನೂರು ಗ್ರಾಮ –ಬಾಳೆಲೆ ನಿವಾಸಿ ಪಿ.ಕೆ. ಸುರೇಶ ಎಂಬವರ ಮಗ ಸುದೀಶ ಎಂಬಾತ ಮೂರ್ಚೆರೋಗದಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಸದರಿ ಸುದೀಶ ದಿನಾಂಕ 12-9-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tuesday, September 12, 2017

ಬೈಕಿಗೆ ಜೀಪು ಡಿಕ್ಕಿ
                       ದಿನಾಂಕ 11/09/2017ರಂದು ಪಿರಿಯಾಪಟ್ನ ನಿವಾಸಿ ರಂಗಸ್ವಾಮಿ ಎಂಬವರು ಕೆಎ-02-ಇಎಫ್-5672ರ ಬೈಕಿನಲ್ಲಿ ಸುಬ್ರಮಣಿ ಎಂಬವರೊಂದಿಗೆ ಪಿರಿಯಾಪಟ್ಟಣದಿಂದ ಸಿದ್ದಾಪುರ ಕಡೆಗೆ ಬರುತ್ತಿರುವಾಗ ಬಾಡಗ ಬಾಣಂಗಾಲದ ಘಟ್ಟದಳ್ಳ ಬಳಿ ಎದುರಿನಿಂದ KA-09-M-5643 ರ ಜೀಪನ್ನು ಅದರ ಚಾಲಕ ರಜಾಕ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಂಗಸ್ವಾಮಿಯವರು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ವಾಹನ ಜಖಂ ಗೊಂಡು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ರಂಗಸ್ವಾಮಿ ಮತ್ತು ಸುಬ್ರಮಣಿ ಎಂಬುವವರು ಗಾಯಗೊಂಡು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಬೈಕ್ ಡಿಕ್ಕಿ
                          ದಿನಾಂಕ 11-09-2017 ರಂದು ಮಡಿಕೇರಿ ಬಳಿಯ ಕಾಂತೂರು ಮೂರ್ನಾಡು ನಿವಾಸಿ ಮಹಮದ್ ಮುಜಾಮಿಲ್ ಎಂಬವರು ತನ್ನ ಸ್ನೇಹಿತ ನಿಜಾಸ್ ನೊಂದಿಗೆ KA-19-V-3103 ರ ಮೋಟಾರ್ ಬೈಕ್ ನಲ್ಲಿ ಮೂರ್ನಾಡುವಿನಿಂದ ಬಲಮುರಿ ಕಡೆಗೆ ಹೋಗುತ್ತಿದ್ದಾಗ, ಮೂರ್ನಾಡು ಕಾಲೇಜಿನ ಬಳಿ ಹಿಂದಿನಿಂದ KA-09-ET-5626 ರ ಮೋಟಾರ್ ಬೈಕ್ ಅನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಹಮದ್ ಮುಜಾಮಿಲ್‌ರವರ ಬೈಕ್ ಗೆ ಡಿಕ್ಕಿ ಪಡಿಸಿ, ನಂತರ ಎದುರಿನಿಂದ ಬಲಮುರಿ ಕಡೆಯಿಂದ ಬರುತ್ತಿದ್ದ KA-12-L-6468 ರ ಮೋಟಾರ್ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮೂರು ಬೈಕುಗಳು ಗಾಯಗೊಂಡು ಮೂವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                      ಶ್ರೀಮಂಗಲ ಬಳಿಯ ಈಸ್ಟ್ ನೆಮ್ಮಲೆ ನಿವಾಸಿ ಪಣಿ ಎರವರ ಅಣ್ಣಪ್ಪ ಎಂಬವರ ಪತ್ನಿ ಮಲ್ಲಿಗೆ ಎಂಬವರು ದಿನಾಂಕ 11/09/2017ರಂದು ಮನೆಯಲ್ಲಿ ಕ್ರಿಮಿನಾಶಕ ವಿಷವನ್ನು ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ  ಟಿ.ಶೆಟ್ಟಿಗೇರಿಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು ನಂತರ ಕುಟ್ಟದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತರಾಗಿರುವುದಾಗಿ ವರದಿಯಾಗಿದೆ. ಮೃತೆಯು ಸುಮಾರು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                     ಕೇರಳದ ಕಣ್ಣೂರು ಜಿಲ್ಲೆಯ ವಾಸಿ ಅನೂಪ್‌ ಎಂಬವರು ವಿರಾಜಪೇಟೆ ಬಳಿಯ ಬಳಿಯ ರಾಮನಗರದಲ್ಲಿ ಹೋಂ ಸ್ಟೇ ವ್ಯವಹಾರ ಹಾಗೂ ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ನಿವಾಸಿ ಹರೀಶ ಎಂಬವರೊಂದಿಗೆ ಸೇರಿ ಪಾಲುದಾರಿಕೆಯಲ್ಲಿ ನಿವೇಶನಗಳ ದಲ್ಲಾಳಿ  ಕೆಲಸವನ್ನು ಸಹಾ ಮಾಡಿಕೊಂಡಿದ್ದು ದಿನಾಂಕ 10/09/2017ರಂದು ಅನೂಪ್‌ರವರು ವಿರಾಜಪೇಟೆಯ ಮಲಬಾರ್‌ ರಸ್ತೆಯಲ್ಲಿರುವ ಸೋಮಪದ್ಮ ಪೆಟ್ರೋಲ್ ಬಂಕಿನಲ್ಲಿ ಅವರ ಕಾರಿಗೆ ಪೆಟ್ರೋಲ್ ಹಾಕಿಸುತ್ತಿರುವಾಗ ಅಲ್ಲಿಗೆ ಬಂದ ಹರೀಶ್‌ ಹಣದ ವ್ಯವಹಾರದ ಬಗ್ಗೆ ಜಗಳವಾಡಿ ಅನೂಪ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 11, 2017

ಮಹಿಳೆಯ ಅಸಹಜ ಸಾವು:

      ದಿನಾಂಕ 09-09-2017 ರಂದು ಸಮಯ ಬೆಳಿಗ್ಗೆ 08.45 ಗಂಟೆಗೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ತಾವಳಗೇರಿ ಗ್ರಾಮದ ನಿವಾಸಿ ಎ.ಸಿ.ಸತ್ಯ ಎಂಬವರ ತಾಯಿ ಬೆಳಗ್ಗೆ ಮನೆಯಲ್ಲಿದ್ದವರು ಸುಮಾರು 11-30 ಗಂಟೆಗೆ ಮನೆಯಲ್ಲಿ ಇಲ್ಲದೇ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದ್ದು ಪುನ: ಸಂಜೆ 5-00 ಗಂಟೆಗೆ ಕೆಲಸದಿಂದ ಬಂದಾಗ ಮನೆಗೆ ಹಾಕಿದ ಬೀಗ ಹಾಗೆಯೇ ಇರುವುದು ಕಂಡುಬಂದಿದ್ದು ನಂತರ  ಅವರನ್ನು ಎಲ್ಲಾ ಕಡೆ ಹುಡುಕಿದಾಗ ಅವರ ತೋಟದಲ್ಲಿರುವ ಒಂದು ಕರೆಂಟ್ ಕಂಬದ ಪಕ್ಕ ಬೇಲಿ ಬದಿಯಲ್ಲಿ ಅವರ ಮೃತದೇಹ ಬಿದ್ದಿರುವುದು  ಕಂಡುಬಂದಿದ್ದು, ಸದರಿಯವರ ಸಾವಿನ ಬಗ್ಗೆ ಸಂಶಯವಿರುವುದಾಗಿ ಫಿರ್ಯಾದಿ ಎ.ಸಿ. ಸತ್ಯರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೈಕಲ್ ಗೆ   ಬೈಕ್ ಡಿಕ್ಕಿ, ಸೈಕಲ್ ಸವಾರನ ದುರ್ಮರಣ:
     ಸೈಕಲ್ ಗೆ ಬೈಕೊಂದು ಡಿಕ್ಕಿಯಾಗಿ ಸೈಕಲ್ ಸವಾರ ಸಾವನಪ್ಪಿದ ಘಟನೆ ಕುಶಾಲನಗರ ಹತ್ತಿರದ ಕೂಡ್ಲೂರು ಇಂಡೆಸ್ಟ್ರೀಯಲ್ ಎರಿಯಾ ಜಂಕ್ಷನ್ ನಲ್ಲಿ ಸಂಭವಿಸಿದೆ. ದಿನಾಂಕ 10-9-2017 ರಂದು ಕೂಡ್ಲೂರು ಗ್ರಾಮದ ಪುಟ್ಟಣ್ಣಯ್ಯಚಾರ್ ಎಂಬವರು ಸೈಕಲ್ ನಲ್ಲಿ ಕೂಡಿಗೆ ಕಡೆಯಿಂದ ಬರುತ್ತಿರುವಾಗ್ಗೆ ಹಿಂದಿನಿಂದ ಬಂದ ಮೋಟಾರ್ ಸೈಕಲೊಂದು ಸದರಿ ಸೈಕಲ್ ಗೆ ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಪುಟ್ಟಣ್ಣಯ್ಯಚಾರ್ ರವರು ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ವೇಳೆ ದಾರಿಮದ್ಯದಲ್ಲಿ ಸಾವನಪ್ಪಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ಅಕ್ರಮ ಪ್ರವೇಶ, ಹಲ್ಲೆ:


     ಕಟ್ಟಡದ ಸೆಂಟ್ರಿಂಗ್ ಸಾಮಾಗ್ರಿಗಳನ್ನು ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋದ ವಿಚಾರದಲ್ಲಿ ಮೂವರು ಸೇರಿ ವ್ಯಕ್ತಿಯ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದಿದ ಘಟನೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 26-7-2017 ರಂದು ಅಪರಾಹ್ನ 2-30 ಗಂಟೆಗೆ ಕುಶಾಲನಗರದ ಕೋಣಮಾರಿಯಮ್ಮ ದೇವಾಲಯದ ಹತ್ತಿರ ವಾಸವಾಗಿರುವ ಶ್ರೀಮತಿ ಲೀಲಾವತಿ ಎಂಬವರ ಮಗನ ಬಾಪ್ತು ಸೆಂಟ್ರಿಂಗ್ ಸಾಮಾಗ್ರಿಗಳನ್ನು ಮುರುಗೇಶ, ತೇಜಸ್ವಿನಿ ಹಾಗು ಸುರೇಶ ಎಂಬವರು ತೆಗೆದುಕೊಂಡು ಹೋಗಿದ್ದು ಅದನ್ನು ಲೀಲಾವತಿಯವರು ವಿಚಾರಿಸಿದ ಹಿನ್ನೆಲೆಯಲ್ಲಿ ಸದರಿ ಮೂವರು ಸೇರಿ ಫಿರ್ಯಾದಿ ಶ್ರೀಮತಿ ಲೀಲಾವತಿಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಜಖಂಪಡಿಸಿ ಸುಮಾರು 30,000/- ರೂ. ಗಳಷ್ಟು ನಷ್ಪಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ವಿಷ ಸೇವಿಸಿ ಮಹಿಳೆ ಸಾವು:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಲ್ವತ್ತೊಕ್ಲು ಗ್ರಾಮದ ನಿವಾಸಿ ಮಣಿ ಎಂಬವರ ಮಗಳಾದ ಮಲ್ಲಿಗೆ ಎಂಬವರು ತನ್ನ ಪತಿ ಸಾವನಪ್ಪಿದ ವಿಚಾರದಲ್ಲಿ ಕೊರಗುತ್ತಾ ಇದ್ದು ಇದೇ ವಿಚಾರದಲ್ಲಿ ಮದ್ಯಪಾನ ಮಾಡುವ ಚಟವನ್ನು ಬೆಳೆಸಿಕೊಂಡಿದ್ದು ದಿನಾಂಕ 9-9-2017 ರಂದು ರಾತ್ರಿ ವಿಪರೀತ ಮದ್ಯಪಾನ ಮಾಡಿ ಮದ್ಯದ ಅಮಲಿನಲ್ಲಿ ಮನೆಯಲ್ಲಿಟ್ಟಿದ್ದ ಬೆಳೆಗೆ ಸಿಂಪಡಿಸುವ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, September 10, 2017

 ಬೀಗ ಮುರಿದು ಚಿನ್ನಾಭರಣ ಕಳವು:

     ಮನೆಯ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 8-9-2017 ರಂದು ಮಗ್ಗುಲ ಗ್ರಾಮದ ನಿವಾಸಿ ಹೆಚ್.ಕೆ. ದೇವಯ್ಯ ಎಂಬವರು ಎಂದಿನಂತೆ ಬೆಳಿಗ್ಗೆ 9-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕೆ ಹೋಗಿದ್ದು, ವಾಪಾಸ್ಸು ಸಮಯ ಸಂಜೆ 5-00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಮನೆಯ ಒಳಗಡೆ ಹೋಗಿ ನೋಡಿದಾಗ ಮನೆಯ ಗಾಡ್ರೇಜಿನ ಬಾಗಿಲು ಸಹ ತೆರೆದಿದ್ದು, ಪರಿಶೀಲಿಸಿ ನೋಡಲಾಗಿ ಗಾಡ್ರೇಜಿನ ಒಳಗಡೆ ಇಟ್ಟಿದ್ದ ಒಂದು ಚಿನ್ನದ ಪತ್ತಾಕ್, ಹಾಗೂ ಒಂದು ಜೊತೆ ಚಿನ್ನದ ಓಲೆ ಮತ್ತು 1,500 ರೂ ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ಇವುಗಳ ಮೌಲ್ಯ ಅಂದಾಜು 24,000 ರೂ. ಆಗಿದ್ದು ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಕಳ್ಳತನ ಎಸಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ.

     ದಿನಾಂಕ 08-09-2017 ರಂದು ಮಕ್ಕಂದೂರು ಗ್ರಾಮದ ಬಿ.ಐ. ಗಣೇಶ ಎಂಬವರ ಪತ್ನಿ ಮಂಜುಳರವರು ತನ್ನ ಮಗಳು ಪುನೀತ ಮಗ ದುಶ್ಯಂತ್ ರವರೊಂದಿಗೆ ಮಕ್ಕಂದೂರು ಗ್ರಾಮದ ಗಣಪತಿಯ ವಿಸರ್ಜನ ಮೆರವಣಿಗೆ ನೋಡಲು ಹೋಗಿ ಸಮಯ 11.15 ಪಿ.ಎಂ ಗೆ ವಾಪಾಸು ಮನೆಗೆ ರಸ್ತೆ ಬದಿಯಲ್ಲಿ ಬರುತ್ತಿರುವಾಗ ಭದ್ರಕಾಳಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಮಡಿಕೇರಿ ಕಡೆಯಿಂದ KA-12-J-5197 ರ ಮೋಟಾರ್ ಬೈಕ್ ಅನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದುಶ್ಯಂತನಿಗೆ ಡಿಕ್ಕಿ ಪಡಿಸಿದ ಪರಿಣಾಮ ದುಶ್ಯಂತನ ಬಲ ಕಿವಿ ಮೇಲ್ಭಾಗ, ಹಣೆಯ ಬಲ ಭಾಗ, ಬಲ ಕಾಲಿನ ಮೇಲ್ಭಾಗದಲ್ಲಿ ಗಾಯ ನೋವುಗಳಾಗಿದ್ದು, ಈ ಸಮಯದಲ್ಲಿ ಬೈಕ್ ಸವರನು ಬೈಕನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಣಿಕೊಪ್ಪ ಠಾಣಾ ಸರಹದ್ದಿನ ಬಾಳಾಜಿ ಗ್ರಾಮದ ನಿವಾಸಿ ಶ್ರೀಮತಿ ಮಂಜಮ್ಮ ಎಂಬವರ ಪತಿ ಅರುಳದಾಸ್ (35) ಎಂಬವರು ದಿನಾಂಕ 9-9-2017 ರಂದು ಅವರು ವಾಸವಾಗಿರುವ ಲೈನು ಮನೆಯ ಮಾಲೀಕರಾದ ಆಪ್ಪಟ್ಟೀರ ಚಂಗಪ್ಪನವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ದೇವಾಲಯದಿಂದ ಕಳ್ಳತನ:

     ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಆಗಳಿ ಗ್ರಾಮದ ಉಧ್ಬವಲಿಂಗ ಶ್ರೀ. ಗವಿಸಿದ್ದೇಶ್ವರ ದೇವಾಲಯದಲ್ಲಿ ದಿನಾಂಕ 04-09-2017 ರಿಂದ 08-09-2017 ರ ನಡುವಿನ ಅವಧಿಯಲ್ಲಿ ಶ್ರೀ. ಗಣಪತಿ ವಿಗ್ರಹ, ಶ್ರೀ ಗುರು ಸಿದ್ದೇಶ್ವರ ಪೀಟ ಹಾಗೂ ಪ್ರಭಾವಳಿ, ಮೆರೆ ಬಸವಣ್ಣನ ಶಿಲಾ ಮೂರ್ತಿ, ಒಂದು ದೊಡ್ಡ ಕಂಚಿನ ಗಂಟೆ, , ಒಂದು ಜೊತೆ ದೀಪ ಕಂಬಳು ( ಕಂಚು ) ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇವುಗಳ ಅಂದಾಜು ಮೌಲ್ಯ ರೂ-12,500/- ಗಳಾಗಿದ್ದು, ಅಗಳಿ ಗ್ರಾಮದ ನಿವಾಸಿ ಎ.ಎಸ್. ಪ್ರಸನ್ನರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಹೆ:

     ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಮಾಡಿಕೊಂಡ ಘಟನೆ ಶನಿವಾರಸಂತೆ ನಗರದಿಂದ ವರದಿಯಾಗಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಕಾನ್ವೆಂಟ್ ರಸ್ತೆ ನಿವಾಸಿ ಶ್ರೀಮತಿ ರತ್ನ ಎಂಬವರ ಪತಿ ಶಿವಕುಮಾರ್ (45) ರವರು ಸುಮಾರು 5 ವರ್ಷಗಳಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಕಾಯಿಲೆ ವಾಸಿ ಆಗದೇ ಇದ್ದುದರಿಂದ ಜೀವನದಲ್ಲಿ ಬೇಸತ್ತು ದಿನಾಂಕ 8-9-2017 ರಂದು ವಿಷ ಸೇವಿಸಿದ್ದು, ಅಸ್ವಸ್ಥಗೊಂಡ ಸದರಿಯವರನ್ನು ಚಿಕಿತ್ಸೆಗೆ ಶನಿವಾರಸಂತೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗಿದೆ ಸದರಿ ವ್ಯಕ್ತಿ 9-9-2017 ರಂದು ಮೃತಪಟ್ಟಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರು ವ್ಯಾನಿಗೆ ಡಿಕ್ಕಿ, ವ್ಯಾನ್ ಚಾಲಕನ ಸಾವು:


     ಕಾರು ಮತ್ತು ಓಮ್ನಿ ವ್ಯಾನ್ ನಡುವೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಸಾವನಪ್ಪಿದ ಘಟನೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಟಿ.ಶೆಟ್ಟಗೇರಿ ತಾವಳಗೇರಿ ಗ್ರಾಮದ ನಿವಾಸಿ ಕೈಬುಲಿರ ಸುಧಿ @ ಮಂಜುನಾಥ ಎಂಬವರು ದಿನಾಂಕ 9-9-2017 ರಂದು ಸಮಯ 13-00 ಗಂಟೆಯಲ್ಲಿ ತಮ್ಮ ಬಾಪ್ತು ಮಾರು ಓಮ್ನಿ ವ್ಯಾನಿನಲ್ಲಿ ಹುದಿಕೇರಿಯಿಂದ ತಮ್ಮ ಗ್ರಾಮ ತಾವಳಗೇರಿ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ಬೆಲಿನೋ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಧಿ @ ಮಂಜುನಾಥ ರವರು ಚಾಲನೆ ಮಾಡುತ್ತಿದ್ದ ಮಾರುತಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಸುಧಿರವರರಿಗೆ ತೀವ್ರವಾಗಿ ಪೆಟ್ಟಾಗಿ ಸದರಿಯವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮದ್ಯದಲ್ಲಿ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Saturday, September 9, 2017

ಕಾರಿಗೆ ಬೈಕ್ ಡಿಕ್ಕಿ.
                            ದಿನಾಂಕ 08/09/2017ರಂದು ಸುಂಟಿಕೊಪ್ಪ ನಿವಾಸಿ ರಫೀಕ್‌ ಎಂಬವರು ಕೆಎ-12-ಪಿ-2953ರ ಕಾರಿನಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಹೋಗುತ್ತಿರುವಾಗ ಆನೆಕಾಡು ತಿರುವು ಬಳಿ ಮಡಿಕೇರಿ ಕಡೆಯಿಂದ ಕೆಎ-44-ಕೆ-4420ರ ಮೋಟಾರು ಬೈಕನ್ನು ಅದರ ಸವಾರ  ಪಿರಿಯಾಪಟ್ಟಣದ ನವಿಲೂರಿನ ಕುಮಾರ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಫೀಕ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಕುಮಾರನಿಗೆ ಗಾಯಗಳಾಗಿ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಗೆ ಜೀಪು ಡಿಕ್ಕಿ
                                ದಿನಾಂಕ 08/09/2017ರಂದು ಸೋಮವಾರಪೇಟೆ ನಗರದ ನಿವಾಸಿ ನಾಗರಾಜು ಎಂಬವರು ಅವರ ಮಗ ಹೆಚ್‌.ಎಸ್.ಅಶೋಕ ಎಂಬವರ ಆಟೋ ಗ್ಯಾರೇಜಿನಲ್ಲಿ ಒಳಗಡೆ ನಿಂತುಕೊಂಡಿರುವಾಗ ನಗರದ ಕ್ಲಬ್ ರಸ್ತೆ ಕಡೆಯಿಂದ ಕೆಎ-12-ಎಂ-3797ರ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗ್ಯಾರೇಜಿನ ಮಧ್ಯ ಭಾಗದಲ್ಲಿರುವ ಕಂಬಕ್ಕೆ ಡಿಕ್ಕಿಪಡಿಸಿ ನಂತರ ಅಲ್ಲಿಯೇ ನಿಂತಿದ್ದ ನಾಗರಾಜುರವರಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                      ದಿನಾಂಕ 06/09/2017ರಂದು ಶ್ರೀಮಂಗಲ ಬಳಿಯ ಈಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಚೊಟ್ಟೆಯಂಡಮಾಡ ಉತ್ತಯ್ಯನವರ ಪತ್ನಿ ದೇವಕಿರವರು ಅವರ ಸಂಘದ ಸಭೆಗೆ ಹೋಗುವ ಸಲುವಾಗಿ ಅವರಿಗೆ ಪರಿಚಯವಿರುವ ರಿಕ್ಷಾ ಚಾಲಕ ಚೊಟ್ಟೆಯಂಡಮಾಡ ಶಿವಪ್ಪರವರಿಗೆ ರಿಕ್ಷಾವನ್ನು ಮನೆಯ ಬಳಿ ತರಲು ತಿಳಿಸಿದ್ದರೆನ್ನಲಾಗಿದೆ. ಅದೇ ರೀತಿ ರಿಕ್ಷಾ ಚಾಲಕ ಶಿವಪ್ಪನವರು ರಿಕ್ಷಾವನ್ನು ತಂದಾಗ ಉತ್ತಯ್ಯನವರ ನೆರೆಮನೆಯ ಬೆಳ್ಳಿಯಪ್ಪ ಮತ್ತು ಅವರ ಪತ್ನಿ ಪೊನ್ನಮ್ಮನವರು ರಿಕ್ಷಾವನ್ನು ತಡೆದಿದ್ದು ಇದನ್ನು ವಿಚಾರಿಸಿದ ಉತ್ತಯ್ಯನವರಿಗೆ ಬೆಳ್ಳಿಯಪ್ಪ ಮತ್ತು ಪೊನ್ನಮ್ಮರವರು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಬಿಡಿಸಲು ಬಂದ ಉತ್ತಯ್ಯನವರ ಪತ್ನಿ ದೇವಕಿರವರಿಗೂ ಸಹಾ ಹಲ್ಲೆ ಮಾಡಿ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕರುವುದಾಗಿ ದೂರು ನೀಡಲಾಗಿದೆ. ಅದೇ ರೀತಿ ಬೆಳ್ಳಿಯಪ್ಪ ಮತ್ತು ಪೊನ್ನಮ್ಮರವರ ಮೇಲೆ ಉತ್ತಯ್ಯ ಹಾಗೂ ಅವರ ಪತ್ನಿ ಹಲ್ಲೆ ಮಾಡಿರುವುದಾಗಿ ಬೆಳ್ಳಿಯಪ್ಪನವರು ದೂರು ನೀಡಿದ್ದು ಶ್ರೀಮಂಗಲ ಠಾಣೆಯ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 08/09/2017ರಂದು ಮಡಿಕೇರಿ ಬಳಿಯ ಮರಗೋಡು ನಿವಾಸಿಯಾದ ನಿವೃತ್ತ ಡಿವೈಎಸ್‌ಪಿ ಶಶಿಧರ ಎಂಬವರು ಅವರ ಮನೆಯಲ್ಲಿ ಕೋವಿಯಿಂದ ತಲೆಯ  ಭಾಗಕ್ಕೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಸುಮಾರು 4 ವರ್ಷಗಳ ಹಿಂದೆ ನಿವೃತ್ತರಾದ ಶಶಿಧರರವರ ಪತ್ನಿ 11 ತಿಂಗಳ ಹಿಂದೆ ಮೃತರಾಗಿದ್ದು ಒಂಟಿಯಾಗಿದ್ದ ಶಶಿಧರವರು ಪತ್ನಿ ವಿಯೋಗದ ಚಿಂತೆಯಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 8, 2017

ಕಳವಿಗೆ ಯತ್ನ
                              ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದ ನಿವಾಸಿ ಲೀಲಾವತಿ ಎಂಬವರು ದಿನಾಂಕ 21/08/2017ರಂದು ಅವರ ಗಂಡನ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದು ದಿನಾಂಕ 06/07/2017ರಂದು ಅವರ ನೆರೆಮನೆಯ ನಳಿನಿ ಎಂಬವರು ದೂರವಾಣಿ ಕರೆ ಮಾಡಿ ಲೀಲಾವತಿಯವರ ಮನೆಯ ಬಾಗಿಲು ಅರ್ದ ತೆರೆದಿರುವುದಾಗಿ ತಿಳಿಸಿದ್ದು ಕೂಡಲೇ ಅವರು ದಿನಾಂಕ 07/09/2017ರಂದು ಮರಳಿ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಲು ಪ್ರಯತ್ನಿಸಿರುವುದು ಕಂಡು ಬಂದಿರುವುದಾಗಿ ದೂರು ನೀಡಿದ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                                         ದಿನಾಂಕ 07/09/2017ರಂದು ಮಡಿಕೇರಿ ಬಳಿಯ ಬೆಟ್ಟಗೇರಿ ನಿವಾಸಿ ತಳೂರು ಕಾಳಪ್ಪ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಗಣಿತ್‌ ಕುಮಾರ್, ವಿಕಾಸ್‌ ಮತ್ತು  ದಿವ್ಯ ಎಂಬವರು ಕ್ಷುಲ್ಲಕ ಕಾರಣಕ್ಕೆ ಕಾಳಪ್ಪನವರೊಂದಿಗೆ ಜಗಳವಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, September 7, 2017

ಕಾರು ಡಿಕ್ಕಿ ಬಾಲಕಿ ದುರ್ಮರಣ:

       ರಸ್ತೆಬದಿಯಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ದುರ್ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದಲ್ಲಿ ಸಂಭವಿಸಿದೆ. ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಲೋಕೇಶ ಎಂಬವರ ಮಗಳು ಪ್ರೀತಿ ದಿನಾಂಕ 6-9-2017 ರಂದು ಅವರು ವಾಸವಾಗಿರುವ ಪಕ್ಕದ ಮನೆಯ ವೇಲು ಎಂಬವರ ಮನೆಯ ಮುಂದೆ ರಸ್ತೆಯಲ್ಲಿ ಆಟವಾಡುತ್ತಿದ್ದಾಗ  ಆರೋಪಿ ಮಂಜುನಾಥ್  ತಮ್ಮ ಕಾರನ್ನು ಅತೀ ವೇಗ ಮತ್ತು  ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸದರಿ ಬಾಲಕಿ ಪ್ರೀತಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರೀತಿಯ ತಲೆಯ ಭಾಗಕ್ಕೆ ತೀವ್ರತರಹದ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ - ಆಟೋ ಡಿಕ್ಕಿ.

     ಬೈಕಿಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಇಂಜಿನಿಯರ್ ಕಾಲೇಜು ಬಳಿ ನಡೆದಿದೆ. ದಿನಾಂಕ 4-9-17 ರಂದು ತೀರ್ಥಾನಂದ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಬೈಕಿನ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾದ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ರಿಕ್ಷಾವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಬೈಕ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ತೀರ್ಥಾನಂದ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

     ದಿನಾಂಕ 01-09-2017 ರಂದು ಸಮಯ 04.30 ಪಿ ಎಂ ಗೆ ಕೇರಳದ ಮಾನಂದವಾಡಿ ನಿವಾಸಿ ಕೆ.ಪಿ.ಶಿವದಾಸನ್ ಮತ್ತು ಸ್ನೇಹಿತ ಶಾಜಿ, ಕುಟ್ಟ ಗ್ರಾಮದ ಕೆ ಎಂ ಕೊಲ್ಲಿ ರಸ್ತೆ ಯಲ್ಲಿರುವ ದುರ್ಗ ಬೋಜಿ ಮದ್ಯದ ಅಂಗಡಿಗೆ ಹೋಗಿದ್ದು ಅಂಗಡಿಯಲ್ಲಿ ಕುಡಿಯುವ ಗ್ಲಾಸ್ ಬಿದ್ದು ಒಡೆದುಹೋದ ವಿಚಾರದಲ್ಲಿ ಮದ್ಯ ಅಂಗಡಿಯ ಕೆಲಸಗಾರರು ಸೇರಿ ಶಿವದಾಸನ್ ರವರ ಮೇಲೆ ಹಲ್ಲೆ ನಡೆಸಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಕೋಟೆ ಪೈಸಾರಿಯಲ್ಲಿ ವಾಸವಾಗಿರುವ ಎ.ಜಿ. ರವಿ ಎಂಬವರ ಪತ್ನಿ ಆರ್. ನೇತ್ರ ಎಂಬವರು ದಿನಾಂಕ 1-9-2017 ರಂದು ಮೈಗೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಕ್ಕೆ ಯತ್ನಿಸಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ 6-9-2017 ರಂದು ಆಕೆ ಮೃತಪಟ್ಟಿರುತ್ತಾರೆಂದು  ಮೃತೆಯ ಅಜ್ಜಿ  ಶ್ರೀಮತಿ ಲಕ್ಷ್ಮಿ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, September 6, 2017

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

     ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರಸಂತೆ ಠಾಣೆಯಲ್ಲಿ ವರದಿಯಾಗಿದೆ.  ಶನಿವಾರಸಂತೆ ಠಾಣಾ ವ್ಯಾಪ್ತಿಯ ತ್ಯಾಗರಾಜ ಕಾಲೋನಿ ನಿವಾಸಿ ಶ್ರೀನಿವಾಸಚಾರ್ಯ ಸುಮಾರು 10 ವರ್ಷಗಳಿಂದ ಬಿ.ಪಿ ಹಾಗೂ ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಆಗಾಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಸದರಿಯವರಿಗೆ ವಿಪರೀತ ಮಧ್ಯಪಾನ ಮಾಡುವ ಅಭ್ಯಾಸವಿದ್ದು ಸದರಿಯವರು ನನ್ನ ಖಾಯಿಲೆ ವಾಸಿಯಾಗುತ್ತಿಲ್ಲವೆಂದು ಹೇಳಿ ಕೊರಗುತ್ತಿದ್ದು ಇದೇ ಕಾರಣದಿಂದ ಮನನೊಂದು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿ ಮೇಲೆ ಹಲ್ಲೆ, ಗಾಯ:

     ವಿನಾಕಾರಣ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಕತ್ತಿಯಿಂದ ಹಲ್ಲೆನಡೆಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಮಳುರು ಹೇರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 05-09-17 ರಂದು ಪಿರ್ಯಾದಿ ಪಿ.ಎಸ್. ಸರ್ವೇಶ್ ಎಂಬವರ ಮೇಲೆ ಆರೋಪಿ ದಿಲೀಪ್ ಎಂಬ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ವಿಚಾರವಾಗಿ ಫಿರ್ಯಾದಿ ಸರ್ವೇಶ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಮತ್ತು ದನ-ಕರುವಿಗೆ ಜೀಪುಡಿಕ್ಕಿ:

     ಜೀಪೊಂದು ಬೈಕ್ ಮತ್ತು ಹಸು-ಕರುವಿಗೆ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಜೀಪಿನಲ್ಲಿದ್ದ ಜನರು ಗಾಯಗೊಂಡು ಗಾಯಗೊಂಡು ಹಸು ಮತ್ತು ಕರು ಮೃತಪಟ್ಟ ಘಟನೆ ಕುಶಾಲನಗರ ಬಳಿಯ ಆನೆಕಾಡು ಸಾರ್ವಜನಿಕ ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 05-09-17 ರಂದು ಮೂರ್ತಾಚಾರಿ ಎಂಬವರು ಮತ್ತು ಅವರ ತಮ್ಮ ಅಶೋಕ ಹಾಗು ಅವರ ಸ್ನೇಹಿತ ಬಾಸ್ಕರ ರವರು ಪ್ರತ್ಯೇಕ ಬೈಕ್ ಗಳಲ್ಲಿ ಸುಂಟಿಕೊಪ್ಪಕ್ಕೆ ಹೋಗಿ ವಾಪಾಸ್ಸು ಕುಶಾಲನಗರ ಕಡೆ ರಾಷ್ಟೀಯ ಹೆದ್ದಾರಿ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಸಮಯ ಅಪರಾಹ್ನ 03;30 ಗಂಟೆಗೆ ಆನೆಕಾಡು ಹತ್ತಿರ ತಲುಪಿದಾಗ ಎದುರುಗಡೆಯಿಂದ ಬಂದ ಕೆ ಎಲ್ 14 ಎಂ 6169 ಬೊಲೆರೋ ಜೀಪನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೊಂಡು ಬಂದು ಅಶೋಕ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ, ಅಶೋಕರವರು ರಸ್ತೆಗೆ ಬಿದ್ದಿದ್ದು, ಮತ್ತೆ ಸದರಿ ಜೀಪು ಅಲ್ಲೆ ರಸ್ತೆಯ ಪಕ್ಕದಲ್ಲಿದ್ದ ಒಂದು ಹಸು ಮತ್ತು ಕರುವಿಗೆ ಡಿಕ್ಕಿಯಾಗಿದ್ದು ಸದ್ರಿ ಅಪಘಾತದಿಂದ ಬೈಕ್ ಸವಾರ ಅಶೋಕ ಮತ್ತು ಜೀಪಿನಲ್ಲಿದ್ದವರಿಗೂ ಸಹ ಪೆಟ್ಟಾಗಿದ್ದು, ಹಸು ಮತ್ತು ಕರು ಮೃತ ಮೃತಪಟ್ಟಿರುತ್ತದೆ. ಈ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, September 5, 2017

ವ್ಯಕ್ತಿಯ ಆಕಸ್ಮಿಕ ಸಾವು
                        ದಿನಾಂಕ 04/09/2017ರಂದು ಬೆಳಿಗ್ಗೆ ಸೋಮವಾರಪೇಟೆ ಬಳಿಯ ಗೋಣಿಮರೂರು ಗ್ರಾಮದ ನಿವಾಸಿ ಸೋಮಶೇಖರ್‌ ಎಂಬವರು ಬಾವಿಯಿಂದ ನೀರೆಳೆಯುವಾಗ ಆಕಸ್ಮಿಕವಾಗಿ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತರಾಗಿರುವುದಾಗಿ ಸೋಮಶೇಖರ್‌ರವರ ಮಗಳು ಇಂಪನಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಸ್ವಸ್ಥ ವ್ಯಕ್ತಿ ಸಾವು
                      ಕುಶಾಲನಗರ ಬಳಿಯ ಹುಲುಗುಂದ ನಿವಾಸಿ ಪ್ರಭಾಕರ ಎಂಬವರು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾತಿಯಾಗದೆ ದಿನಾಂಕ 03/09/2017ರಂದು ಮೃತರಾಗಿರುವುದಾಗಿ ಮೃತರ ಪತ್ನಿ ರೇಣುಕಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಜೀಪು ಡಿಕ್ಕಿ
                        ದಿನಾಂಕ 02/09/2017ರಂದು ಬೆಟ್ಟತ್ತೂರು ನಿವಾಸಿ ಚಂಗಪ್ಪ ಕೆ.ಡಿ. ಎಂಬವರು ಅವರ ಕಾರು ಸಂಖ್ಯೆ ಕೆಎ-12-ಬಿ-4808ರಲ್ಲಿ ಅವರ ಸ್ನೇಹಿತರಾದ ವೇಣು ಮತ್ತು ವಿಜಯಕುಮಾರ್‌ ಎಂಬವರೊಂದಿಗೆ ಮಡಿಕೇರಿಗೆ ಬರುತ್ತಿರುವಾಗ ಮದೆನಾಡಿನ ಬಳಿ ಕೆಎ-12-ಎಂ-5605ರ ಜೀಪನ್ನು ಅದರ ಚಾಲಕ ಪ್ರಭಾಕರ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾಗೂ ಜೀಪಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
                       ದಿನಾಂಕ 04/09/2017ರಂದು ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಪ್ರಕಾಶ್ ಎಂಬವರು ಹಾಕತ್ತೂರಿನ ದೂರವಾಣಿ ವಿನಿಮಯ ಕೇಂದ್ರದ ಬಳಿ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಕೆಎ-45-ಜೆ-9523ರ ಬೈಕನ್ನು ಅದರ ಚಾಲಕ ಅತಿ ವೇಗ  ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಕಾಶ್‌ರವರಿಗೆ ಡಿಕ್ಕಿಪಡಿಸಿ ಬೈಕನ್ನು ನಿಲ್ಲಿಸದೆ ಹೋಗಿದ್ದು ಪ್ರಕಾಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ  ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ 
                       ದಿನಾಂಕ 04/09/2017ರಂದು ಮಡಿಕೇರಿ ಬಳಿಯ ಬೆಟ್ಟಗೇರಿಯಲ್ಲಿ ಅಲ್ಲಿನ ನಿವಾಸಿ ವಿ.ವಿ.ಚೆನ್ನಗಿರಿ ಎಂಬವರು ರಿಕ್ಷಾ ನಿಲ್ಲಿಸಿಕೊಂಡು ಮೀನು ಮಾರಾಟ ಮಾಡುತ್ತಿರುವಾಗ ಅಲ್ಲಿಗೆ ಬಂದ ಬೊಳ್ಳಪಂಡ ಬೋಪಣ್ಣ, ಕುಂಜಿಲನ ಮನೋಜ್‌, ಪಟ್ಟಂದಿ ಕುಶ ಮತ್ತು ತಳೂರು ಹೇಮಂತ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಚೆನ್ನಗಿರಿಯವರೊಂದಿಗೆ ಜಗಳವಾಡಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 4, 2017

ಬಸ್ಸ್ ಚಾಲಕನ ಮೇಲೆ ಹಲ್ಲೆ:

      ಬಸ್ಸೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಪಡಿಸಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಜೆ.ಸಿ. ರವಿ ಎಂಬವರು ಮೈಸೂರು ಗ್ರಾಮಾಂತರ ಘಟಕ – 1 ಕೆ.ಎಸ್.ಆರ್.ಟಿ.ಸಿ. ಬಸ್ಸು ನಂ. ಕೆ.ಎ.09 ಎಫ್.5188 ರ ಚಾಲಕನಾಗಿದ್ದು ಕಣ್ಣನ್ನೂರು – ಮೈಸೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 03-09-2017 ರಂದು ಸಮಯ 4-50 ಪಿ.ಎಂ.ಗೆ ವಿರಾಜಪೇಟೆ ನಗರದ ಮೀನು ಮಾರಾಟದ ಸರ್ಕಲ್ ಬಳಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ್ಗೆ ಕೆಎ02 ಎನ್.3351 ರ ಕಾರಿನಲ್ಲಿ ಬಂದ ಅದರ ಚಾಲಕ ಹಾಗು ಅವರ ಸ್ನೇಹಿತರು ಬಸ್ಸನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಬಸ್ಸು ಚಾಲಕ ಜೆ.ಸಿ. ರವಿ ರವರ ಮುಖಕ್ಕೆ ಹಾಗು ಶರೀರದ ಭಾಗಕ್ಕೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

      ಮೂವರು ವ್ಯಕ್ತಿಗಳು ಸೇರಿ ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ಬಣ್ಣಮೊಟ್ಟೆ ಪೈಸಾರಿಯಲ್ಲಿ ನಡೆದಿದೆ. ನಾಲ್ಕೇರಿ ಗ್ರಾಮದ ಬಣ್ಣೆಮೊಟ್ಟೆ ಪೈಸಾರಿಯಲ್ಲಿ ವಾಸವಾಗಿರುವ ಪಂಜರಿ ಎರವರ ಅಯ್ಯಪ್ಪ ಎಂಬವರು ದಿನಾಂಕ 3-9-2017 ರಂದು ಬೆಳಗ್ಗೆ 10-30 ಗಂಟೆಗೆ ಶ್ರೀಧರ್ ಎಂಬವರ ಅಂಗಡಿಗೆ ಹೋಗುತ್ತಿದ್ದಾಗ ಅದೇ ಗ್ರಾಮದ ಬೆಳ್ಳಿ, ರಾಜು ಮತ್ತು ರಮೇಶ ಎಂಬವರುಗಳು ಹಳೇ ದ್ವೇಷದಿಂದ ಅಯ್ಯಪ್ಪನವರ ದಾರಿ ತಡೆದು ಹಲ್ಲೆ ನಡೆಸಿದ್ದು ತಡೆಯಲು ಬಂದ ಪತ್ನಿ ಲಲಿತಾ ಮತ್ತು ಸ್ನೇಹಿತ ರಾಜನವರ ಮೇಲೆ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

      ದಿನಾಂಕ 3-9-2017 ರಂದು ನಾಲ್ಕೇರಿ ಗ್ರಾಮದ ಪಿ.ಕೆ. ರಾಜು ರವರು ಶ್ರೀಧರ್ ರವರ ಅಂಗಡಿಯಿಂದ ಮನೆಗೆ ಹೋಗುತ್ತಿದ್ದಾಗ ನಾಲ್ಕೇರಿ ಗ್ರಾಮದ ಬಣ್ಣಮೊಟ್ಟೆ ನಿವಾಸಿ ಅಯ್ಯು, ಮಣಿ, ಬೋಜ, ತಮ್ಮ ಮತ್ತು ಬೇರ ರವರುಗಳು ಸೇರಿ ರಾಜುರವರ ದಾರಿ ತಡೆದು ಹಲ್ಲೆ ನಡೆಸಿರುತ್ತಾರೆಂದು ಮತ್ತು ಜಗಳ ಬಿಡಿಸಲು ಬಂದ ರಮೇಶ ಎಂಬವರ ಮೇಲೆ ಸಹ ಹಲ್ಲೆ ನಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಲಕನಿಗೆ ಬೈಕ್ ಡಿಕ್ಕಿ:

       ರಸ್ತೆಬದಿಯಲ್ಲಿ ನಿಂತಿದ್ದ ಬಾಲಕನೊಬ್ಬನಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸಿದ್ದಾಪುರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 3-9-2017 ರಂದು ಚೆನ್ನಯ್ಯನಕೋಟೆ ಗ್ರಾಮದ ವಾಸಿ ಟಿ.ಎಂ. ವಾಸು ಎಂಬವರ ಮಗ 8 ವರ್ಷದ ವಿಷ್ಣು ಎಂಬಾತ ಚೆನ್ನಯ್ಯನಕೋಟೆ ಗ್ರಾಮದ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ತಾರು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ್ಗೆ ಪಾಲಿ ಬೆಟ್ಟದ ಕಡೆಯಿಂದ KA-12-H-4473 ರ ಮೋಟಾರ್ ಸೈಕಲ್ ಅನ್ನು ಅದರ ಚಾಲಕ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ವಿಷ್ಣುವಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿಷ್ಣು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ ಮೂವರಿಗೆ ಗಾಯ:

      ಮಡಿಕೇರಿಯ ಹೆಚ್.ಎಂ. ಲೋಕೇಶ್ ಎಮಬವರು ದಿನಾಂಕ 02-09-2017 ರಂದು ದಕ್ಷತ್ ರವರ ಬಾಪ್ತು KA-12-B-4009 ರ ಕಾರಿನಲ್ಲಿ ದಕ್ಷತ್ ಮತ್ತು ವಿಜತ್ ರವರೊಂದಿಗೆ ಬೋಯಿಕೇರಿಯಿಂದ ಮಡಿಕೇರಿಗೆ ಬರುತ್ತಿರುವಾಗ ಸಮಯ 9.30 ಪಿ.ಎಂ ಗೆ ಇಬ್ನಿವಾಳವಾಡಿ ಗ್ರಾಮದ ರಸ್ತೆಯಲ್ಲಿ ದಕ್ಷತನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಚಾಲಕನ ನಿಯಾಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಕಾರು ಜಖಂಗೊಂಡು, ಚಾಲಕ ಸೇರಿ ಇಬ್ಬರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜಾಟ:

      ಪೊನ್ನಂಪೇಟೆ ಠಾಣಾಧಿಕಾರಿ ಶ್ರೀ ಬಿ.ಜಿ. ಮಹೇಶ್ ರವರಿಗೆ ದಿನಾಂಕ 3-9-2017 ರಂದು ಬಂದ ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ದೇವನುರು ಗ್ರಾಮದ ರಾಜಾಪುರ ಸಾರ್ವಜನಿಕ ರಸ್ತೆಬದಿಯಲ್ಲಿ ಸುಮಾರು 7 ಜನರು ಅಕ್ರಮವಾಗಿ ಹಣವನ್ನು ಪನವನ್ನಾಗಿಟ್ಟುಕೊಂಡು ಇಸ್ಪೀಟ್ ಆಟ ಆಡುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮದ್ಯದ ಅಮಲಿನಲ್ಲಿ ನೀರಿಗೆ ಹಾರಿ ವ್ಯಕ್ತಿ ಸಾವು:

      ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ನೀರಿದ ಹಾರಿ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹರಿಹರ ಗ್ರಾಮದಲ್ಲಿ ನಡೆದಿದೆ. ಹರಿಹರ ಗ್ರಾಮದ ಎಂ.ಸಿ. ಕೃಷ್ಣ (70) ಎಂಬವರಿಗೆ ವಿಪರೀರ ಮದ್ಯಪಾನ ಮಾಡುವ ಚಟವಿದ್ದು ದಿನಾಂಕ 3-9-2017 ರಂದು ಮದ್ಯಪಾನ ಮಾಡಿದ್ದು ಮದ್ಯದ ಅಮಲಿನಲ್ಲಿ ಬಾವಿಗೆ ಹಾರುವುದಾಗಿ ಹೇಳಿ ಹರಿಹರ ಗ್ರಾಮದಲ್ಲಿರುವ ಸರ್ಕಾರಿ ಬಾಯಿಗೆ ಹಾರಿ ಮೃತಪಟ್ಟಿದ್ದು, ಎಂ.ಕೆ. ಪಧ್ಮ, ಅಂಗನವಾಡಿ ಕಾರ್ಯಕರ್ತೆ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯಿಂದ ಪತ್ನಿ ಕೊಲೆ:

       ವಿರಾಜಪೇಟೆ ತಾಲೋಕು ಕಡಂಗ ಮರೂರು ಗ್ರಾಮದ ಪಳಂಗಡ ಸರಸ್ವತಿ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಮಣಿ ಎಂಬಾತ ದಿನಾಂಕ 2-9-2017ರ ರಾತ್ರಿ 11-00 ಗಂಟೆ ಸಮಯದಲ್ಲಿ ತನ್ನ ಪತ್ನಿ ಮುತ್ತಿ ಎಂಬವರೊಂದಿಗೆ ಜಾಗದ ವಿಚಾರವಾಗಿ ಜಗಳ ಮಾಡಿದ್ದು, ಸಿಟ್ಟಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಪರಿಣಾಮ ಪತ್ನಿ ಮುತ್ತಿ ಸಾವನಪ್ಪಿದ್ದು, ಪಳಂಗಡ ಸರಸ್ವತಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, September 3, 2017


ಆಸ್ತಿ ವಿಚಾರದಲ್ಲಿ ಜಗಳ
                       ದಿನಾಂಕ 2-9-2017 ರಂದು ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ ನಿವಾಸಿಗಳಾದ ತೊತ್ತಿಯಂಡ ಮಾದಪ್ಪ ಮತ್ತು ತೊತ್ತಿಯಂಡ ಭೀಮಯ್ಯನವರು ಆಸ್ತಿಯ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                  ದಿನಾಂಕ 1-9-2017 ರಂದು ಎಂ ಬಾಡಗ ಗ್ರಾಮದ ನಿವಾಸಿಯಾದ ಕೆ ಜನಾರ್ಧನ ರಾವ್ ಎಂಬುವವರು ಮಡಿಕೇರಿಯಿಂದ ಮನೆಯ ಕಡೆಗೆ ಹೋಗುತ್ತಿರುವಾಗ ಕಗ್ಗೋಡ್ಲು ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಕೆಎ-12-ಜೆಡ್-8399 ರ ಕಾರನ್ನು ಬಲ್ಲಾರಂಡ ಸುಬ್ರಮಣಿ ಎಂಬುವವರು ಅಜಾಗರೂಕತೆಯಿಂಧ ಚಾಲನೆ ಮಾಡಿಕೊಂಡು ಹೋಗಿ ಜನಾರ್ಧನನವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಈ ಬಗ್ಗೆ ಜನಾರ್ಧನನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಾನಿಗೆ ಆಟೋರಿಕ್ಷಾ ಡಿಕ್ಕಿ
                     ದಿನಾಂಕ 2-9-2017 ರಂದು ಸುಳ್ಯದ ನಿವಾಸಿ ಗಿರೀಶರವರು ತಮ್ಮ ಸಂಸಾರದೊಂದಿಗೆ ಕೆಎ-21-ಎನ್-406 ರ ಮಿನಿ ವ್ಯಾನಿನಲ್ಲಿ ಮೈಸೂರಿಗೆ ಹೋಗುತ್ತಿರುವಾಗ ಕಾಟಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕೆಎ-12-ಎ-8113 ರ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನು ಜಖಂಗೊಂಡಿದ್ದು ವ್ಯಾನಿನಲ್ಲಿದ್ದವರಿಗೆ ಹಾಗೂ ಆಟೋ ಚಾಲಕನಿಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                        ಕುಶಾಲನಗರದ ಚಿಕ್ಕತ್ತೂರು ಗ್ರಾಮದ ನಿವಾಸಿಯಾದ ಹ್ಯಾಪಿ ಬೋಪಯ್ಯ ಎಂಬುವವರು ದಿನಾಂಕ 2-9-2017 ರಂದು ಬಸವನತ್ತೂರು ಎಂಬಲ್ಲಿ ತಂದೆಯೊಂದಿಗೆ ಕಾರಿನಲ್ಲಿ ಕುಳಿತುಕೊಂಡಿರುವಾಗ ಸೈಡು ಕೊಡುವ ವಿಚಾರದಲ್ಲಿ ಈ ಹಿಂದೆ ಗಲಾಟೆ ಮಾಡಿದ್ದ ಅರಗಲ್ಲು ಗ್ರಾಮದ ನಿವಾಸಿಗಳಾದ ಪ್ರದೀಪ್, ಅವಿನಾಶ್, ಸಾಗರ್, ಕೇಶವಮೂರ್ತಿ, ಲವಿನ್ ಮತ್ತು ಇತರರು ಜಗಳ ತೆಗೆದು ಕಾರಿನಲ್ಲಿದ್ದ ಹ್ಯಾಪಿ ಬೋಪಯ್ಯನವರ ತಂದೆಯನ್ನು ಹೊರಗಡೆ ಎಳೆದು ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕಾರಿನ ಮುಂಭಾಗ ಹಾಗೂ ಹಿಂಭಾಗದ ಗಾಜನ್ನು ಒಡೆದು ನಷ್ಟಪಡಿಸಿರುವುದಾಗಿ ಹ್ಯಾಪಿ ಬೋಪಯ್ಯನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪತಿಯಿಂದ ಪತ್ನಿಯ ಹತ್ಯೆ
                          ದಿನಾಂಕ 2-8-2017 ರಂದು ರಾತ್ರಿ ಸುಂಟಿಕೊಪ್ಪ ಠಾಣಾ ಸರಹದ್ದಿನ ಕೆದಕಲ್ ಗ್ರಾಮದ ನಿವಾಸಿಯಾದ ರಾಮಣ್ಣರವರು ತನ್ನ ಪತ್ನಿ ಜಯರವರೊಂದಿಗೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕತ್ತಿಯಿಂದ ಪತ್ನಿಯ ಕುತ್ತಿಗೆಗೆ ಕಡಿದು ಗಾಯಪಡಿಸಿದ್ದು, ಗಾಯವಾಗಿದ್ದ ಜಯರವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಜಯಾರವರು ಮೃತಪಟ್ಟಿದ್ದು, ಬಗ್ಗೆ ಜಯರವರ ಮಗ ಜೀವನ್ ಎಂಬುವವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.