Thursday, September 7, 2017

ಕಾರು ಡಿಕ್ಕಿ ಬಾಲಕಿ ದುರ್ಮರಣ:

       ರಸ್ತೆಬದಿಯಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ದುರ್ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದಲ್ಲಿ ಸಂಭವಿಸಿದೆ. ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಲೋಕೇಶ ಎಂಬವರ ಮಗಳು ಪ್ರೀತಿ ದಿನಾಂಕ 6-9-2017 ರಂದು ಅವರು ವಾಸವಾಗಿರುವ ಪಕ್ಕದ ಮನೆಯ ವೇಲು ಎಂಬವರ ಮನೆಯ ಮುಂದೆ ರಸ್ತೆಯಲ್ಲಿ ಆಟವಾಡುತ್ತಿದ್ದಾಗ  ಆರೋಪಿ ಮಂಜುನಾಥ್  ತಮ್ಮ ಕಾರನ್ನು ಅತೀ ವೇಗ ಮತ್ತು  ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸದರಿ ಬಾಲಕಿ ಪ್ರೀತಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರೀತಿಯ ತಲೆಯ ಭಾಗಕ್ಕೆ ತೀವ್ರತರಹದ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ - ಆಟೋ ಡಿಕ್ಕಿ.

     ಬೈಕಿಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಇಂಜಿನಿಯರ್ ಕಾಲೇಜು ಬಳಿ ನಡೆದಿದೆ. ದಿನಾಂಕ 4-9-17 ರಂದು ತೀರ್ಥಾನಂದ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಬೈಕಿನ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾದ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ರಿಕ್ಷಾವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಬೈಕ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ತೀರ್ಥಾನಂದ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

     ದಿನಾಂಕ 01-09-2017 ರಂದು ಸಮಯ 04.30 ಪಿ ಎಂ ಗೆ ಕೇರಳದ ಮಾನಂದವಾಡಿ ನಿವಾಸಿ ಕೆ.ಪಿ.ಶಿವದಾಸನ್ ಮತ್ತು ಸ್ನೇಹಿತ ಶಾಜಿ, ಕುಟ್ಟ ಗ್ರಾಮದ ಕೆ ಎಂ ಕೊಲ್ಲಿ ರಸ್ತೆ ಯಲ್ಲಿರುವ ದುರ್ಗ ಬೋಜಿ ಮದ್ಯದ ಅಂಗಡಿಗೆ ಹೋಗಿದ್ದು ಅಂಗಡಿಯಲ್ಲಿ ಕುಡಿಯುವ ಗ್ಲಾಸ್ ಬಿದ್ದು ಒಡೆದುಹೋದ ವಿಚಾರದಲ್ಲಿ ಮದ್ಯ ಅಂಗಡಿಯ ಕೆಲಸಗಾರರು ಸೇರಿ ಶಿವದಾಸನ್ ರವರ ಮೇಲೆ ಹಲ್ಲೆ ನಡೆಸಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಕೋಟೆ ಪೈಸಾರಿಯಲ್ಲಿ ವಾಸವಾಗಿರುವ ಎ.ಜಿ. ರವಿ ಎಂಬವರ ಪತ್ನಿ ಆರ್. ನೇತ್ರ ಎಂಬವರು ದಿನಾಂಕ 1-9-2017 ರಂದು ಮೈಗೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಕ್ಕೆ ಯತ್ನಿಸಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ 6-9-2017 ರಂದು ಆಕೆ ಮೃತಪಟ್ಟಿರುತ್ತಾರೆಂದು  ಮೃತೆಯ ಅಜ್ಜಿ  ಶ್ರೀಮತಿ ಲಕ್ಷ್ಮಿ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.