Saturday, October 7, 2017

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:


        ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ತಾಯಿಮೇಲೆ ಹಲ್ಲೆ ನಡೆಸಿದ ಘಟನೆ ಭಾಗಮಂಡಲ ಠಾಣಾ ಸರಹದ್ದಿನ ಕರಿಕೆ ಗ್ರಾಮದ ಚತ್ತುಕಾಯ ಎಂಬಲ್ಲಿ ನಡೆದಿದೆ. ಚೆತ್ತುಕಾಯ ನಿವಾಸಿ ಶ್ರೀಮತಿ ನಾರಾಯಣಿ ಎಂಬವರ ಮೇಲೆ ಅವರ ಮಗ ಸುಂದರ ಎಂಬವರು ಊಟದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ವ್ಯಕ್ತಿಗೆ ಕೊಲೆ ಬೆದರಿಕೆ:

       ವಿರಾಜಪೇಟೆ ತಾಲೂಕು ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕುಟ್ಟಂದಿ ಗ್ರಾಮದ ನಿವಾಸಿ ಅಪ್ಪಂಡರೆಂಡ ಟಿ. ಸುರೇಶ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ದಿನಾಂಕ 27-9-2017 ರಂದು ಆರೋಪಿಗಳಾದ ಕುಂಙೀರ ಭರತ್‍ ಹಾಗು ಇತರೆ ನಾಲ್ಕು ಜನರು ಸೇರಿ ಅಕ್ರಮ ಪ್ರವೇಶ ಮಾಡಿ ಮರಳನ್ನು ಸಾಗಿಸುವ ವಿಚಾರದಲ್ಲಿ ಜಗಳ ಮಾಡಿ ಹೋಗಿದ್ದು ನಂತರ ದೂರವಾಣಿ ಮೂಲಕ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.