Thursday, November 30, 2017

ಬೈಕಿಗೆ ಕಾರು ಡಿಕ್ಕಿ:
 
     ದಿನಾಂಕ 28-11-2017 ರಂದು ಪಿರಿಯಾಪಟ್ಟಣ ತಾಲೋಕು ಬೆಂಗಲ್ ಗ್ರಾಮದ ನಿವಾಸಿ ಸೈಯದ್ ಅಬ್ದುಲ್ಲಾ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಸತೀಶ್ ಎಂಬವರೊಂದಿಗೆ ಸೋಮವಾರಪೇಟೆ ಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಯಡವನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕುಶಾಲನಗರದ ಕಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಯದ್ ಅಬ್ದುಲ್ಲಾರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ  ಬೈಕಿನಲ್ಲಿದ್ದ ಸೈಯದ್ ಅಬ್ದುಲ್ಲಾ ಮತ್ತು ಸತೀಶ್ ರವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
 
     ಸೋಮವಾರಪೇಟೆ ನೇಗಳ್ಳಿ ಗ್ರಾಮದ ನಿವಾಸಿ ಎನ್. ಎಂ. ದಿವಾಕರ್ ಎಂಬವರು ದಿನಾಂಕ 29-11-2017 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಭುವಂಗಾಲ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್ಸು ಬರುತ್ತಿದ್ದಾಗ ಆರೋಪಿಗಳಾದ ಭುವಂಗಾಲ ಗ್ರಾಮದ ಭರತ್, ತೇಜು ಹಾಗು ವಿನು ಎಂಬವರುಗಳು ದಿವಾಕರ್ ರವರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಾಗು ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
 
     ಪೊನ್ನಂಪೇಟೆ ಠಾಣೆ ವ್ಯಾಪ್ತಿಯ ಬೇಗೂರು ಗ್ರಾಮದ ನಿವಾಸಿ ಎಂ.ಪಿ. ಕಾಳಪ್ಪ ಎಂಬವರು ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಮನನೊಂದು ದಿನಾಂಕ 29-11-2017 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಪಾದಚಾರಿಗೆ ಕಾರು ಡಿಕ್ಕಿ:
 
     ವಿರಾಜಪೇಟೆ ನಗರದ ಮೈಕ್ರೋ ಸ್ಟೇಷನ್ ಬಳಿ ವಾಸವಾಗಿರುವ ಹೆಚ್.ಎನ್. ರಾಜು ಎಂಬವರು ದಿನಾಂಕ 29-11-2017 ರಂದು ಸಂಜೆ 7-15 ಗಂಟೆ ಸಮಯದಲ್ಲಿ ಅಮ್ಮತ್ತಿ ನಗರದಲ್ಲಿರುವ ಬ್ರದರ್ಸ್ ಹೋಟೇಲ್ ನ ಮುಂಭಾಗ ರಸ್ತೆಯನ್ನು ದಾಟುತ್ತಿದ್ದಾಗ ಸಿದ್ದಾಪುರದ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  
 
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
 
     ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಾಟಾ ಕಾಫಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಸುಮತಿ ಎಂಬವರ ಪತಿ ವಿನು (37) ರವರಿಗೆ ವಿಪರೀತ ಮದ್ಯ ಸೇವಿಸುವ ಅಭ್ಯಾಸವಿದ್ದು, ದಿನಾಂಕ 29-11-2017 ರಂದು ಬೆಳಗ್ಗೆ 7-00 ಗಂಟೆ ಸಮಯದಲ್ಲಿ ಯಾವುದೋ ವಿಷವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನು  ಅಮ್ಮತ್ತಿಯಲ್ಲಿರುವ RIHP ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ವ್ಯಕ್ತಿ ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಕಾರು-ವ್ಯಾನ್ ಪರಸ್ಪರ ಡಿಕ್ಕಿ, ಇಬ್ಬರಿಗೆ ಗಾಯ:
 
    ಮಡಿಕೇರಿ ತಾಲೋಕು  ಎಮ್ಮೆಮಾಡು ಗ್ರಾಮದ ನಿವಾಸಿ ಟಿ.ಎ. ಮೊಯ್ದು ಎಂಬವರು ದಿನಾಂಕ 29-11-2017 ರಂದು ತಮ್ಮ ಬಾಪ್ತು ಸ್ವಿಪ್ಟ್ ಕಾರಿನಲ್ಲಿ ಕುಂಜಿಲ ಗ್ರಾಮದಿಂದ ನಾಪೋಕ್ಲು ಕಡೆಗೆ ಬರುತ್ತಿದ್ದಾಗ ನಾಪೋಕ್ಲು ಕಡೆಯಿಂದ ಹೋದ ಮಾರುತಿ ವ್ಯಾನ್ ಸ್ವಿಪ್ಟ್ ಕಾರಿಗೆ ಡಿಕ್ಕಿಯಾದ ಕಾರಣ ಎರಡೂ ವಾಹನಗಳು ಜಖಂಗೊಂಡು ಮಾರುತಿ ವ್ಯಾನಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಕ್ಷುಲ್ಲಕ ಕಾರಣ, ಪತಿಯಿಂದ ಪತ್ನಿ ಮೇಲೆ ಹಲ್ಲೆ:
 
     ಭಾಗಮಂಡಲ ಠಾಣಾ ವ್ಯಾಪ್ತಿಯ ಕೊಟ್ಟೂರು ಗ್ರಾಮದ ನಿವಾಸಿ ದಿನೇಶ್ ರವರು ದಿನಾಂಕ 28-11-2017 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಮೊಬೈಲ್ ಪೋನಿನ ಮೂಲಕ ಯಾವುದೇ ಹೆಂಗಸಿನೊಂದಿಗೆ ಮಾತನಾಡುತ್ತಿದ್ದು, ಅದನ್ನು ವಿಚಾರಿಸಿದ ಪತ್ನಿ ಆಶಾರವರ ಮೇಲೆ ಪತಿ ದಿನೇಶ್ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
 
 
 
 

Wednesday, November 29, 2017

ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ 'ಜನಸ್ನೇಹಿ ಪೊಲೀಸ್' ಕಾರ್ಯಾಗಾರ.    

     ಮಾನ್ಯ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರ ಆದೇಶದಂತೆ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು ದಕ್ಷಿಣ ವಲಯ ಮೈಸೂರುರವರ ನಿರ್ದೇಶನದ  ಮೇರೆಗೆ ಪೊಲೀಸ್ ಹಾಗೂ ಸಾರ್ವಜನಿಕರೊಂದಿಗೆ ಬಾಂಧವ್ಯವನ್ನು ವೃದ್ಧಿಗೊಳಿಸಿ ಪೊಲೀಸರು ಹಾಗೂ ಸಾರ್ವಜನಿಕರನ್ನು ಇನ್ನೂ ಹತ್ತಿರ ತರುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ 'ಜನ ಸ್ನೇಹಿ ಪೊಲೀಸ್' ಎಂಬ ಉಪವಿಭಾಗಮಟ್ಟದ ಕಾರ್ಯಾಗಾರವನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರವರ ಉಸ್ತುವಾರಿಯಲ್ಲಿ ಮಡಿಕೇರಿ, ವಿರಾಜಪೇಟೆ ಹಾಗೂ ಕುಶಾಲನಗರಗಳಲ್ಲಿ ನಡೆಸಲಾಯಿತು. ಪೊಲೀಸ್ ಠಾಣೆಗೆ ಆಗಮಿಸುವ ದೂರುದಾರರು ಹಾಗೂ ಸಾರ್ವಜನಿಕರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವ ಬಗೆಗಿನ ತರಭೇತಿ ಇದಾಗಿರುತ್ತದೆ.

     ಈ ಕಾರ್ಯಾಗಾರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ನಾಲ್ಕು ತಂಡಗಳನ್ನಾಗಿ ರಚಿಸಿ, ಸಾರ್ವಜನಿಕರೊಂದಿಗೆ ನಡೆದುಕೊಳ್ಳಬೇಕಾದ ರೀತಿ, ಸುಧಾರಿತ ಗಸ್ತು ವ್ಯವಸ್ಥೆ, ಮಾಹಿತಿ ಕಲೆ ಹಾಕುವಿಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ಮಾಡುವ ಜವಾಬ್ದಾರಿಯನ್ನು ನೀಡಿ ಉತ್ತಮವಾದ ಪ್ರಾತ್ಯಕ್ಷಿಕೆ ಮಾಡಿದ ತಂಡಕ್ಕೆ ಬಹುಮಾನವನ್ನು ವಿತರಿಸಲಾಯಿತು.   ಪೊಲೀಸ್ ಠಾಣೆಯ ಗುಣಮಟ್ಟವನ್ನು ಹೇಗೆ ಹೆಚ್ಚಿಸಬಹುದು ಹಾಗೂ ಪೊಲೀಸ್ ಠಾಣಾ ವಿನ್ಯಾಸದ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿಯವರಿಂದ ನಕ್ಷೆಗಳನ್ನು ತಯಾರಿಸುವ ಮೂಲಕ ಅವರ ಸಲಹೆಗಳನ್ನು ಪಡೆದುಕೊಂಡು ಉತ್ತಮವಾದ ನಕ್ಷೆಯನ್ನು ತಯಾರಿಸಿದ ತಂಡಕ್ಕೆ ಬಹುಮಾನವನ್ನು ವಿತರಿಸಲಾಗಿಯಿತು.

     ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದ ಮುಕ್ತಾಯ ಸಮಾರಂಭದ ಮುಖ್ಯ ಅಥಿತಿಗಳಾಗಿ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಭಾಗವಹಿಸಿ ಪೊಲೀಸ್ ಹಾಗೂ ಸಾರ್ವಜನಿಕರ ಬಾಂಧವ್ಯ ವೃದ್ಧಿಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕರು ವಹಿಸಿಕೊಂಡಿದ್ದರು.

     ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಸಾರ್ವಜನಿಕರಿಗೆ ಹತ್ತಿರವಾಗಿಸುವ ಮೊದಲ ಹಂತದಲ್ಲಿ ದಿನಾಂಕ: 30/11/2017 ರಿಂದ ಎಲ್ಲಾ ಪೊಲೀಸ್ ಠಾಣೆಯಲ್ಲಿ ಸ್ವಾಗತಕಾರ / ಸ್ವಾಗತಗಾರ್ತಿಯರನ್ನು ನೇಮಿಸಿ, ಪೊಲೀಸ್ ಠಾಣೆಗೆ ಬರುವ ಎಲ್ಲಾ ನೊಂದವರು/ದೂರುದಾರೊಂದಿಗೆ ಸಹಾನುಭೂತಿಯಿಂದ ಸ್ಪಂದಿಸುವ ಕಾರ್ಯವನ್ನು ಪ್ರಾರಂಭಿಸುತ್ತಿರುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ.
                                                                           ---   ---   ---


ಬಾಗಿಲು ಮುರಿದು ನಗ ನಾಣ್ಯ ಕಳವು:
 
      ದಿನಾಂಕ 27-11-2017 ರಂದು ಸೋಮವಾರಪೇಟೆ ತಾಲೋಕು ಮುಳ್ಳೂರು ಗ್ರಾಮದ ನಿವಾಸಿ  ಹನೀಫ ಹಾಗು ಅವರ ತಂಗಿ ಕೆಲಸಕ್ಕೆ ಹೋಗಿದ್ದು ಅವರ ಅಮ್ಮ ಒಬ್ಬರೇ ಮನೆಯಲ್ಲಿದ್ದು  ಅವರು  ಮನೆಯ ಮುಂದಿನ ಅಂಗಳದಲ್ಲಿದ್ದ ಸಂದರ್ಭದಲ್ಲಿ  ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ತೆರೆದು ಒಳನುಗ್ಗಿ ಮನೆಯೊಳಗೆ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಯ ಬಾಗಿಲನ್ನು ತೆಗೆದು  15,000 ರೂ.ನಗದು ಹಾಗು ಚಿನ್ನಾಭರಣಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಕ್ಷುಲ್ಲಕ ಕಾರಣ ದಾರಿ ತಡೆದು ಹಲ್ಲೆ:
 
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಭುವಂಗಾಲ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರು ದಿನಾಂಕ 28-11-2017 ರಂದು ಮಧ್ಯಾಹ್ನ 1-30  ಗಂಟೆಯ ಸಮಯದಲ್ಲಿ  ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಅದೇ ಗ್ರಾಮದ ನಿವಾಸಿ ವಿಜಿತ್ ಎಂಬವರು  ಕುಶಾಲಪ್ಪನವರ ದಾರಿ ತಡೆದು ಜಮೀನಿನಲ್ಲಿ ದನ-ಕರುಗಳನ್ನು ಬಿಟ್ಟ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ  ಕಲ್ಲಿನಿಂದ  ಹಲ್ಲೆನಡೆಸಿ ಕಾಲುಗಳಿಂದ ಒದ್ದು ಗಾಯಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:
 
     ಕುಟ್ಟ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದ ಮುಕ್ಕಾಟಿರ ಮಂದಣ್ಣ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ  ಪಣಿಎರವರ ಶ್ರೀಮತಿ ದೇವು ಎಂಬವರ ಗಂಡ ಮಣಿ ಎಂಬ ವ್ಯಕ್ತಿ ದಿನಾಂಕ 27-11-2017 ರಾತ್ರಿ ತಾನು ವಾಸವಾಗಿದ್ದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಬಲವಂತದಿಂದ ಹಣ ವಸೂಲಿ:
 
     ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕೋಟುಪರಂಬು ನಾಲ್ಕೇರಿ ಗ್ರಾಮದ ನಿವಾಸಿ ಕೋಟೇರ ಟಿ. ಉತ್ತಯ್ಯ ಎಂಬವರಿಂದ ದಿನಾಂಕ 3-9-2017 ರಂದು ಆರೋಪಿಗಳಾದ ಮುಲ್ಲೇರ ದರ್ಶನ್ @ ಪೊನ್ನಪ್ಪ ಹಾಗು ಅಮ್ಮಂಡೀರ ಎ. ಮಂದಣ್ಣ ರವರುಗಳು ಸೇರಿ ಬಲವಂತದಿಂದ 24,000/- ಗಳನ್ನು ಪಡೆದುಕೊಂಡು ನಂತರ ದಿನಾಂಕ  ಉತ್ತಯ್ಯನವರ ಪತ್ನಿ ಶ್ರೀಮತಿ ರಾಣಿರವರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಅವರನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ  3000/0 ರೂ.ಗಳನ್ನು ಪಡೆದುಕೊಂಡಿದ್ದು ಅಲ್ಲದೆ ಪುನ: ಅಂದು ವಿರಾಜಪೇಟೆ ನಗರರಕ್ಕೆ ಕರೆದುಕೊಂಡು ಹೋಗಿ ಪಟ್ಟಣ ಸಹಕಾರ ಬ್ಯಾಂಕಿನಿಂದ ರೂ.25,000/- ಗಳನ್ನು ಪಡೆದುಕೊಂಡು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಂದು ಚೆಕ್ ನಲ್ಲಿ 13,000/- ರೂ. ಗಳನ್ನು ಬರೆಸಿಕೊಂಡು ಚೆಕ್ ನ್ನು ತೆಗೆದುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
 

 

Tuesday, November 28, 2017

ಸ್ಕೂಟರ್‌ಗೆ ಬೈಕ್ ಡಿಕ್ಕಿ
                     ದಿನಾಂಕ 24/11/2017ರಂದು ಕುಶಾಲನಗರ ಬಳಿಯ ಕೂಡ್ಲೂರು ಬಳಿ ಸುರೇಶ್‌ ಹಾಗೂ ನಾಗರತ್ನ ಎಂಬವರು ಕೆಎ-12-ಆರ್-4180ರ ಸ್ಕೂಟರಿನಲ್ಲಿ ಕೂಡಿಗೆ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಕೆ-5584 ಮೋಟಾರು ಬೈಕನ್ನು ಅದರ ಚಾಲಕ ಯತೀಶ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುರೇಶ್‌ ಮತ್ತು ನಾಗರತ್ನರವರು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಪಡಿಸಿದ ಪರಿಣಾಮ ಸುರೇಶ್‌ ಹಾಗೂ ನಾಗರತ್ನರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
                          ದಿನಾಂಕ 27/11/2017ರಂದು ಗೋಣಿಕೊಪ್ಪ ಬಳಿಯ ಅರುವತೊಕ್ಲು ನಿವಾಸಿ ನಾಣಿ ಎಂಬವರು ಅಡಕೆ ಕುಯ್ಯಲು ಕೆರೆಯ ಬಳಿ ಹೋಗುತ್ತಿದ್ದಾಗ ಕೆರೆಯಲ್ಲಿ ಒಂದು ಹೆಣ ತೇಲುತ್ತಿದ್ದುದನ್ನು ಕಂಡು ಕಾಡ್ಯಮಾಡ ಮಂದಣ್ಣ ಎಂಬವರಿಗೆ ವಿಷಯ ತಿಳಿಸಿದ್ದು ಮಂದಣ್ಣರವರು ಬಂದು ಪರಿಶೀಲಿಸಿದಾಗ ಹೆಣವು ಅರುವತೊಕ್ಲು ನಿವಾಸಿ ಪಣಿ ಎರವರ ಚಿಮ್ಮ ಎಂಬಾತನದೆಂದು ಗುರುತು ಹಚ್ಚಿದ್ದು ಮೃತನು ಮೂರ್ಚೆ ರೋಗದಿಂದ ಬಳಲುತ್ತಿದ್ದು ಕೆರೆಯಲ್ಲಿ ಬಟ್ಟೆ ತೊಳೆಯಲೆಂದು ಹೋದಾಗ ಬಿದ್ದು ಮೃತನಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                          ದಿನಾಂಕ 27/11/2017ರಂದು ಶ್ರೀಮಂಗಲ ಬಳಿಯ ಹೈಸೊಡ್ಲೂರು ನಿವಾಸಿ ವಿಜಯಕುಮಾರ್ ಎಂಬವರು ಟ್ರ್ಯಾಕ್ಟರನ್ನು ತೊಳೆಯುತ್ತಿದ್ದಾಗ ತಮಿಳರ ರಾಜ ಎಂಬವರೊಂದಿಗೆ ಜಗಳವಾಡಿ ರಾಜನು ವಿಜಯಕುಮಾರ್‌ರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 27, 2017

ಪಾದಚಾರಿ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ:
 
     ಗೋಣಿಕೊಪ್ಪ ಠಾಣಾ ಸರಹದ್ದಿನ ಹರಿಶ್ಚಂದ್ರಪುರ ನಿವಾಸಿ ಶ್ರೀಮತಿ ಕಾಳಿ ಎಂಬವರು ದಿನಾಂಕ 26-11-2017 ರಂದು  ಗೋಣಿಕೊಪ್ಪ ಸಂತೆ ಹೋಗಿ ಮಾರುಕಟ್ಟೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಷಾವನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಕಾಳಿಯವರಿಗೆ ರಿಕ್ಷಾ ಡಿಕ್ಕಿಯಾಗಿ ಸದರಿಯವರು ರಸ್ತೆಗೆ ಬಿದ್ದು ಅವರ ಕಾಲು ಮುರಿತಕ್ಕೊಳಗಾಗಿದ್ದು, ಈ ಸಂಬಂಧ ಸದರಿಯವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
 
ಲಾರಿ ಮತ್ತು ವ್ಯಾನ್ ನಡುವೆ ಅಪಘಾತ:
 
     ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಬಿ.ಕೆ. ಮೋಹನ್ ಎಂಬವರು ದಿನಾಂಕ 26-11-2017 ರಂದು  ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ 7ನೇ ಹೊಸಕೋಟೆ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ  ಮಾರುತಿ ವ್ಯಾನ್ ನ್ನು ಅದರ ಚಾಲಕ ಯಾವುದೇ ಸೂಚನೆಗಳನ್ನು ನೀಡದೇ ಮಡಿಕೇರಿ ಕಡೆಗೆ ತಿರುಗಿಸಿದ ಪರಿಣಾಮವಾಗಿ ವ್ಯಾನ್ ಮತ್ತು ಬಿ.ಕೆ. ಮೋಹನ್ ರವರು ಚಲಾಯಿಸುತ್ತಿದ್ದ ಸ್ವರಾಜ್ ಮಜ್ಧಾ ಲಾರಿ ನಡುವೆ ಅಪಘಾತ ಸಂಭವಿಸಿ ವ್ಯಾನ್ ಮಗುಚಿ ಬಿದ್ದುದರಿಂದ ಚಾಲಕ ಎಂ.ಎ. ಸುಜು ರವರು ಗಾಯಗೊಂಡು  ಎರಡೂ ವಾಹನಗಳು ಜಖಂ ಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ವ್ಯಕ್ತಿಗೆ ಕೊಲೆ ಬೆದರಿಕೆ ಪ್ರಕರಣ ದಾಖಲು:
 
     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಹೊಸ್ಕೇರಿ ಗ್ರಾಮದ ನಿವಾಸಿ  ಎಂ.ಎಸ್. ದೇವಯ್ಯ ಎಂಬವರ ಕಾಫಿ ತೋಟದ ವಿಚಾರದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು  ಸದರಿ ಎಂ.ಎಸ್. ದೇವಯ್ಯನವರ ಸಹೋದರ  ಎಂ.ಎಸ್. ಭುವನೇಶ್ವರ್ ಎಂಬವರು ಎರಡು ಸಿಲ್ವರ್ ಮರಗಳನ್ನು ಕಡಿದು ಕಾಫಿಗಿಡಗಳ ಮೇಲೆ ಬೀಳಿಸಿ ನಷ್ಟಪಡಿಸಿದ್ದು, ಈ ಬಗ್ಗೆ ವಿಚಾರಿಸಿದ ಫಿರ್ಯಾದಿ ಎಂ.ಎಸ್. ದೇವಯ್ಯನವರನ್ನು ಕೊಲೆ ಮಾಡುವುದಾಗಿ ಭುವನೇಶ್ವರ್ ರವರು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 26, 2017

ಹಳೇ ವೈಷಮ್ಯದಿಂದ ವ್ಯಕ್ತಿಯ ಮೇಲೆ ಹಲ್ಲೆ
              ದಿನಾಂಕ 22-11-2017 ರಂದು ಸೋಮವಾರಪೇಟೆ ತಾಲೂಕಿನ ಐಗೂರುವಿನ ನಿವಾಸಿ ರಾಮದಾಸ್ ಎಂಬುವವರ ಮೇಲೆ ಪಕ್ಕದ ಮನೆಯ ನಿವಾಸಿಗಳಾದ ಕಿರಣ ಮತ್ತು ಮಧುರವರು ಹಳೇ ವೈಷಮ್ಯದಿಂದ ಜಗಳ ಮಾಡಿ ಹೊಡೆದು ನೋವುಪಡಿಸಿದ್ದು ಈ ಬಗ್ಗೆ ರಾಮದಾಸ್ ರವರು ದಿನಾಂಕ 25-11-2017 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ 
        ದಿನಾಂಕ 25-11-2017 ರಂದು ಕುಶಾಲನಗರದ ವಾಲ್ನೂರು ಗ್ರಾಮದ ನಿವಾಸಿ ಯಜ್ಞೇಷ ಎಂಬುವವರು ಟೆಂಪೋ ಟ್ರಾವೆಲರ್ ನಲ್ಲಿ ವಾಲ್ನೂರುವಿನಿಂದ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಬಾಳುಗೋಡು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಮೋಟಾರು ಸೈಕಲನ್ನು ಚಂದ್ರಹಾಸ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಪಡಿಸಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಶಾಲಾ ಬಾಲಕಿಗೆ ವ್ಯಾನು ಡಿಕ್ಕಿ
       ದಿನಾಂಕ 25-11-2017 ರಂದು ಗೋಣಿಕೊಪ್ಪಲುವಿನ ಕೈಕೇರಿ ಗ್ರಾಮದ ನಿವಾಸಿ ಕಲ್ಯಾಣಮ್ಮ ಎಂಬುವವರ ಮೊಮ್ಮಗಳಾದ ಸ್ವಪ್ನ ಎಂಬುವವಳು ಶಾಲೆಗೆ ಹೋಗುವ ಸಲುವಾಗಿ ಬಸ್ಸು ಹತ್ತಲು ರಸ್ತೆ ದಾಟುವಾಗ ವಿರಾಜಪೇಟೆ ಕಡೆಯಿಂದ ಕೆಎ-12-ಎಂ.ಬಿ-8182 ರ ಮಾರುತಿ ವ್ಯಾನನ್ನು ಅದರ ಚಾಲಕ ಉತ್ತಪ್ಪ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಸ್ವಪ್ನಳಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, November 25, 2017

ಸ್ಕೂಟರ್ ಗೆ ಪಿಕ್ ಅಪ್ ವಾಹನ ದಿಕ್ಕಿ:

     ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದ ನಿವಾಸಿ ಹೊನ್ನರಾಜ್ ಎಂಬವರ ತಮ್ಮ ಲೋಕೇಶ್ ಎಂಬವರು ತನ್ನ ಸ್ನೇಹಿತ ದಯಾಕರ್ ರವರೊಂದಿಗೆ ಸ್ಕೂಟರ್ ನಲ್ಲಿ ಶನಿವಾರಸಂತೆ ಹೋಗಿ ಶನಿವಾರಸಂತೆಯ ಮಸೀದಿ ಬಳಿ ಸ್ಕೂಟರ್ ನ್ನು ನಿಲ್ಲಿಸಿ ಮಾತನಾಡಿಕೊಂಡಿರುವಾಗ ತೇಜನ್ ಎಂಬ ವ್ಯಕ್ತಿ ಪಿಕ್ ಅಪ್ ವಾಹನವನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲೋಕೇಶ್ ರವರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ದಯಾಕರ್ ರವರು ಗಾಯಗೊಂಡಿದ್ದು ಸ್ಕೂಟರ್ ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ:

    ವಿರಾಜಪೇಟೆ ತಾಲೋಕು ಕಣ್ಣಂಗಾಲ ಗ್ರಾಮದ ನಿವಾಸಿ ವಿ.ಜಿ. ದೀಪಕ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24-11-2017 ರಂದು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಳಿ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆ:

     ಮಡಿಕೇರಿ ತಾಲೋಕು ಮುರ್ನಾಡು ನಿವಾಸಿ ಶ್ರೀಮತಿ ಬಿ.ಪಿ. ಕುಮಾರಿ ಎಂಬವರು ದಿನಾಂಕ 24-11-2017 ರಂದು ಬೈರಂಬಾಡದ ಸುಬ್ರಮಣ್ಯ ದೇವಸ್ಥಾನಕ್ಕೆ ಪೂಜೆಗೆ ಹೋಗಿ ವಾಪಾಸು ಮನೆಗೆ ಬಂದು ನಂತರ ಮೂರ್ನಾಡು ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆ ಮುಗಿಸಿಕೊಂಡು ಸಮಯ 1.15 ಪಿ.ಎಂ ಗೆ ಅಯ್ಯಪ್ಪ ದೇವಸ್ಥಾನದಲ್ಲಿ ತೀರ್ಥ ಪ್ರಸಾದ ಪಡೆಯುವ ಸಮಯದಲ್ಲಿ ನುಕು ನುಗ್ಗಲಿದ್ದು, ಅದೇ ವೇಳೆಯಲ್ಲಿ ಸದರಿ ಬಿ.ಪಿ. ಕುಮಾರಿರವರು ಧರಿಸಿದ್ದ 35 ಗ್ರಾಂ ತೂಕದ ಚಿನ್ನದ ಸರ, ತಾಳಿ, ಮತ್ತು 2 ಚಿನ್ನದ ಗುಂಡು ಬಿದ್ದು ಕಳುವಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 80.000/- ಆಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಹನದಲ್ಲಿಟ್ಟಿದ್ದ ಹಣ, ಮೊಬೈಲ್ ಮತ್ತು ದಾಖಲೆ ಪತ್ರಗಳ ಕಳವು:

     ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಿವಾಸಿ ಮಹಮ್ಮದ್ ಶಿಯಾಬ್ ಎಂಬವರು ದಿನಾಂಕ 24-11-2017 ರಂದು ಸಮಯ 5.35 ಎ.ಎಂ ಗೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೆರಾಜೆ ಮಸೀದಿ ಬಳಿ ತನ್ನ KA-19-AA-3603 ರ ಪಿಕ್ ಅಫ್ ಜೀಪನ್ನು ನಿಲ್ಲಿಸಿ ಪಿಕ್ ಜೀಪಿನಲ್ಲಿ 1) Lyf Water-7 ಮೊಬೈಲ್ ಹಾಗೂ ಏರ್ ಟೇಲ್ ಸಿಮ್ 2) ಒಂದು ನೋಕಿಯ ಮೊಬೈಲ್ ಹಾಗೂ ಐಡಿಯ ಸಿಮ್ ನಂ 8722553946, 3) ಪರ್ಸ್ ಹಾಗೂ ಅದರಲ್ಲಿ 13.800/- ಹಣ, ಓಟರ್ ಐಡಿ, ಪಾನ್ ಕಾರ್ಡ್, ವಾಹನ ಚಾಲನೆ ಪರವಾನಗಿ ನಂ KA21 20100002895, KA-21-Q-4361 ರ ಆರ್/ಸಿ, ಎರಡು ಎಸ್.ಬಿ.ಐ ಬ್ಯಾಂಕಿನ ಎ.ಟಿ.ಎಂ, ಒಂದು ಸಿಂಡಿಕೇಟ್ ಬ್ಯಾಂಕಿನ ಎ.ಟಿ.ಎಂ ಮತ್ತು ಕ್ಯಾಂಪ್ಕೋ ಸದಸ್ಯತನದ ಕಾರ್ಡ್, ಮತ್ತು ಹಣಕಾಸು ಸಂಸ್ಥೆಯ ಸಾಲದ ಕಾರ್ಡ್ ಅನ್ನು ಇಟ್ಟು ಮಸೀದಿಗೆ ನಮಾಜು ಮಾಡಲು ಹೋಗಿ ವಾಪಾಸು ಬಂದು ಪಿಕ್ ಜೀಪಿನಲ್ಲಿ ನೋಡಿದಾಗ ಮೇಲ್ಕಂಡ ವಸ್ತುಗಳನ್ನು ಯಾರೋ ಕಳ್ಳತನಮಾಡಿಕೊಂಡು ಹೋಗಿದ್ದು, ಈ ವಿಚಾರವಾಗಿ ಸದರಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, November 24, 2017

ಅಕ್ರಮ ಲಾಟರಿ ಮಾರಾಟ
                           ದಿನಾಂಕ 23/11/2017ರಂದು ಮಡಿಕೇರಿ ನಗರದ ನಗರ ಸಭೆ ಕಚೇರಿ ಮುಂಭಾಗದಲ್ಲಿರುವ ಗಾರ್ಡನ್‌ ಸ್ಪೈಸಸ್ ಅಂಗಡಿಯಲ್ಲಿ ಅಕ್ರಮವಾಗಿ ಲಾಟರಿಯನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಮಡಿಕೇರಿ ನಗರ ಠಾಣೆಯ ಪಿಎಸ್‌ಐ ವೆಂಕಟರಮಣರವರು ಸಿಬ್ಬಂದಿಗಳೊಂದಿಗೆ ಗಾರ್ಡನ್‌ ಸ್ಪೈಸಸ್ ಅಂಗಡಿಯ ಮೇಲೆ ಧಾಳಿ ನಡೆಸಿ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೆನ್ನಲಾದ ಕೇರಳ ರಾಜ್ಯದ ವಿವಿಧ ಮುಖ ಬೆಲೆಯ ಸುಮಾರು ರೂ. 20,290/- ಮೌಲ್ಯದ 24 ಬಂಡಲ್‌ಗಳಷ್ಟು ಲಾಟರಿಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕ ರಾಜ ಕೆ.ಆರ್., ಮತ್ತು ಅರವಿಂದ್‌ ಹಾಗೂ ಪವನ್‌ ಎಂಬವರ ವಿರುದ್ದ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 22/11/2017ರಂದು ರಾತ್ರಿ ವಿರಾಜಪೇಟೆ ಬಳಿಯ ಹೆಗ್ಗಳ ನಿವಾಸಿ ಎರವರ ಕರಿಯ ಎಂಬಾತನು ಮನೆಯ ಪಕ್ಕದಲ್ಲಿರುವ ಅಂಬಟೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಕರಿಯ ವಿಪರೀತ ಮದ್ಯ ವ್ಯಸನಿಯಾಗಿದ್ದು ಯಾವುದೋ ವಿಚಾರಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ
                     ದಿನಾಂಕ 29/09/2014ರಂದು ವಿರಾಜಪೇಟೆಯ  ಭಾರತೀಯ ಸ್ಟೇಟ್ ಬ್ಯಾಂಕ್‌ ಶಾಖೆಗೆ ಅಬ್ದುಲ್ ಕಲಾಂ ಆಜಾದ್ ಎಂಬ ಗ್ರಾಹಕರು ಅಸ್ಸಾಂ ರಾಜ್ಯದ ಅವರ ಖಾತೆಗೆ ಸುಮಾರು ರೂ.41,000/-ಗಳನ್ನು ಜಮಾ ಮಾಡಲು ಜಮಾ ಚೀಟಿಯನ್ನು ಆ ದಿನ ಬ್ಯಾಂಕಿನಲ್ಲಿದ್ದ ಉದ್ಯೋಗಿ ಅಭಿನಂದನ್‌ ಎಂಬವರಿಗೆ ನೀಡಿದ್ದು ಜಮಾ ಚೀಟಿಯಲ್ಲಿ ಗ್ರಾಹಕ ಅಬ್ದುಲ್ ಕಲಾಂ ಆಜಾದ್‌ರವರು ಕೈತಪ್ಪಿನಿಂದ ರೂ.41,000/- ಬದಲಿಗೆ ರೂ.14,000/- ಎಂಬುದಾಗಿ ಬರೆದಿದ್ದು ಆತನು ನೀಡಿದ 41,000/- ರೂಪಾಯಿ ಹಣವನ್ನು ಸ್ವೀಕರಿಸಿದ ಉದ್ಯೋಗಿ ಅಭಿನಂದನ್‌ರವರು ಗ್ರಾಕರ ಖಾತೆಗೆ ರೂ.14,000/-ವನ್ನು ಜಮಾ ಮಾಡಿದ್ದು ಉಳಿದ 27,000 ರೂಪಾಯಿ ಹಣವನ್ನು ತಮ್ಮ ಬಳಿ ಇರಿಸಿಕೊಂಡಿದ್ದು ನಂತರ  ಗ್ರಾಹಕ ಅಬ್ದುಲ್ ಕಲಾಂ ರವರು ಬ್ಯಾಂಕಿನಲ್ಲಿ ವಿಚಾರಿಸಿದಾಗ ಅಭಿನಂದನ್‌ರವರು ತಮ್ಮ ತಪ್ಪನ್ನು ಒಪ್ಪಿಕೊಂಡು ಉಳಿದ ರೂ.27,000/- ಹಣವನ್ನು ಹಿಂದಿರುಗಿಸಿದ್ದು ಗ್ರಾಹಕರ ಹಣವನ್ನು ತಾತ್ಕಾಲಿಕವಾಗಿ ದುರುಪಯೋಗ ಪಡಿಸಿಕೊಂಡಿರುವುದಾಗಿ ವಿರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಅಶೋಕರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
                           ದಿನಾಂಕ 23/11/2017ರಂದು ಕುಶಾಲನಗರದ ನಿವಾಸಿ ಶ್ರೀನಿವಾಸ್‌ ಎಂಬವರು ನಗರದ ಕೆಇಬಿ ಬಳಿ ಇರುವ ಅವರ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಕೆಇಬಿ ಬಳಿಯ ಗೇಟ್‌ನ ಮುಂಭಾಗದಲ್ಲಿ ಓರ್ವ 70 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿಕೊಂಡಿದ್ದು ಪರಿಶೀಲಿಸಿದಾಗ ಆ ವ್ಯಕ್ತಿಯು ಮೃತನಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, November 22, 2017


ವ್ಯಕ್ತಿ ಮೇಲೆ ಹಲ್ಲೆ
                             ದಿನಾಂಕ 19/11/2017ರಂದು ಸೋಮವಾರಪೇಟೆ ಬಳಿಯ ಕಿರಗಂದೂರು ನಿವಾಸಿಗಳಾದ ಪ್ರಸನ್ನ ಕುಮಾರ್‌ ಮತ್ತು ಕೆ.ಎಂ.ತಿಮ್ಮಯ್ಯ ಎಂಬವರುಗಳಿಗೆ ಅದೇ ಗ್ರಾಮದ ನಿವಾಸಿಗಳಾದ ಗಣೇಶ್, ಮಿಥುನ್ ಮತ್ತು ನಿತಿನ್ ಎಂಬವರುಗಳು ಸೇರಿಕೊಂಡು ಹಳೆಯ ದ್ವೇಷದಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                           ದಿನಾಂಕ 20/11/2017ರಂದು ಮಡಿಕೇರಿ ಬಳಿಯ ಐಕೊಳ ಗ್ರಾಮದ ನಿವಾಸಿ ಸಿ.ಎಸ್.ನಂಜಪ್ಪ ಎಂಬವರ ತಮ್ಮ ತಮ್ಮಯ್ಯ ಎಂಬವರು ಮದ್ಯಪಾನ ಮಾಡಿ  ಬಂದು ನಂಜಪ್ಪನವರನ್ನು ಬೈಯುತ್ತಿದ್ದುದನ್ನು ನಂಜಪ್ಪನವರ ಪತ್ನಿ ಸೀತಮ್ಮ ಆಕ್ಷೇಪಿಸಿದ್ದು ಈ ಕಾರಣಕ್ಕೆ ತಮ್ಮಯ್ಯ ಜಗಳವಾಡಿ ಚಾಕುವಿನಿಂದ ನಂಜಪ್ಪನವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸರ ಅಪಹರಣ
                           ದಿನಾಂಕ 21/11/2017ರಂದು ಮಾದಾಫುರ ಬಳಿಯ ಇಗ್ಗೋಡ್ಲು ನಿವಾಸಿ ಡಿ.ಕೆ.ಚೆನ್ನವ್ವ ಎಂಬಾಕೆಯು ಮಾದಾಪುರದ ತೋಟಗಾರಿಕಾ ಕಚೇರಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಒಂದು ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚೆನ್ನವ್ವನವರ ಕುತ್ತಿಗೆಯಲ್ಲಿದ್ದ ಅಂದಾಜು ರೂ.50,000/- ಮೌಲ್ಯದ 24 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ ಬಂಧನ
                          ದಿನಾಂಕ 21/11/2017ರಂದು ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿ ಮುನೀರ್‌ ರವರು ಅಪರಾಧ ಪತ್ತೆ ಕರ್ತವ್ಯದಲ್ಲಿರುವಾಗ ನಗರದ ಮೀನುಪೇಟೆಯ ಸ್ಮಶಾನದ ಮುಂಭಾಗದ ರಸ್ತೆಯಲ್ಲಿ ಕೇರಳದ ಕಣ್ಣೂರಿನ ನಿವಾಸಿ ಬೈಜು ಥೋಮಸ್ ಎಂಬಾತನು ಕಬ್ಬಿಣದ ರಾಡನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಶಂಕಿಸಿ ಆತನನ್ನು ಬಂಧಿಸಿ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, November 21, 2017

 ನಾಗರಿಕ ಬಂದೂಕು ತರಬೇತಿ 
ದಿನಾಂಕ 22/11/2017 ರಿಂದ 
                        ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ದಿನಾಂಕ 22/11/2017 ರಿಂದ 28/11/2017ರವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ದಿನಾಂಕ 22/10/2017 ರಂದು ಬೆಳಿಗ್ಗೆ 10:00ಗಂಟೆಗೆ ಉದ್ಘಾಟನಾ ಸಮಾರಂಭವನ್ನು ಮಡಿಕೇರಿ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಉದ್ಘಾಟಿಸಲಿದ್ದಾರೆ. ಈ ತರಬೇತಿಗೆ ಮಡಿಕೇರಿ ತಾಲ್ಲೂಕಿನ 27 ಮಂದಿ, ಸೋಮವಾರಪೇಟೆ ತಾಲ್ಲೂಕಿನ 23 ಮಂದಿ ಮತ್ತು ವಿರಾಜಪೇಟೆ ತಾಲ್ಲೂಕಿನ 06 ಮಂದಿ ಭಾಗವಹಿಸಲಿದ್ದು ತರಬೇತಿಯಲ್ಲಿ 48 ಮಂದಿ ಪುರುಷರು ಹಾಗೂ 08 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 56 ಮಂದಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

ಹಲ್ಲೆ ಪ್ರಕರಣ
                      ದಿನಾಂಕ 18/11/2017ರಂದು ಭಾಗಮಂಡಲ ಬಳಿಯ ಅಯ್ಯಂಗೇರಿ ಗ್ರಾಮದ ಉದ್ದುಮಾಡಂಡ ಇಂದಿರಾ ಎಂಬವರಿಗೆ ಸೇರಿದ ಜಾಗದಲ್ಲಿ ಉದ್ದುಮಾಡಂಡ ಪೂಣಚ್ಚ ಎಂಬವರು ರಸ್ತೆ ನಿರ್ಮಾಣ ಮಾಡುತ್ತಿದ್ದುದನ್ನು ಆಕ್ಷೇಪಿಸಿದ ಕಾರಣಕ್ಕೆ ಪೂಣಚ್ಚ, ಹೇಮಂತ ಮತ್ತು ಭೀಮಯ್ಯ ಎಂಬವರು ಸೇರಿಕೊಂಡು ಇಂದಿರಾ ಮತ್ತು ಆಕೆಯ ಪರಿ ಹರೀಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                      ದಿನಾಂಕ ದಿನಾಂಕ 19/11/2017ರಂದು ಸೋಮವಾರಪೇಟೆ ನಿವಾಸಿ ಜೀವಿತ್ ಕುಮಾರ್ ಎಂಬವರ ತಾಯಿಯ ಸ್ಕೂಟರ್ ಸಂಖ್ಯೆ ಕೆಎ-12-ಕ್ಯು-3329ರ  ಸ್ಕೂಟರನ್ನು ಜೀವಿತ್‌ ಕುಮಾರ್‌ರವರ ಪರಿಚಯದ ಯೋಗೇಶ್ ಎಂಬಾತನು ತೆಗೆದುಕೊಂಡು ಹೋಗಿ ಸೋಮವಾರಪೇಟೆ ನಗರದ ಬಸಪ್ಪ ಹಾರ್ಡ್‌ವೇರ್ ಬಳೀ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸ್ಕೂಟರ್ ಯೋಗೇಶನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 20, 2017

ಮೋಟಾರ್ ಸೈಕಲ್ಲಿಗೆ ಕಾರು ಡಿಕ್ಕಿ.

     ಶನಿವಾರಸಂತೆ ಪೊಲೀಸ್ ಠಾಣೆ ಸರಹದ್ದಿನ ದೊಡ್ಡಕೊಡ್ಲಿ ಗ್ರಾಮದ ನಿವಾಸಿ ಕೆ.ಹೆಚ್. ವಸಂತ ಎಂಬವರು ದಿನಾಂಕ 19-11-2017 ರಂದು ಸಮಯ 12-30 ಗಂಟೆ ಸಮಯದಲ್ಲಿ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕಲ್ಲಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಲ್ಟೋ ಕಾರಿನ ಚಾಲಕ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಸಂತರವರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ವಸಂತರವರು ಗಾಯಗೊಂಡು ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

    ದಿನಾಂಕ 19-10-17 ರಂದು ಬೆಳಿಗ್ಗೆ ಸಮಯ 11.00 ಗಂಟೆಗೆ ಸೋಮವಾರಪೇಟೆ ತಾಲೋಕು ಬಾಣಾವರ ಗ್ರಾಮದ ನಿವಾಸಿ ಬಿ.ಸಿ. ಲೋಕೇಶ್, ಎಂಬವರ ತಂದೆ ಚೆನ್ನಯ್ಯ @ ಸಣ್ಣಣ್ಣ ರವರು ಕೂಲಿ ಕೆಲಸ ಮಾಡಿದ ಹಣ ರೂ. 4,000/- ಮತ್ತು ಬ್ಯಾಂಕ್ ಪಾಸ್ ಪುಸ್ತಕವನ್ನು ತೆಗೆದುಕೊಂಡು ಸೋಮವಾರಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಾಗದ ವಿಚಾರದಲ್ಲಿ ಜಗಳ:

     ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಮಾದಂಡ ಕೆ. ಪೂಣಚ್ಚ ಎಂಬವರ ಮನೆಯ ಗೇಟಿನ ಬಳಿ ಅದೇ ಗ್ರಾಮದ ಹರೀಶ್ ಹಾಗು ಇಂದಿರಾ ರವರುಗಳು ದಿನಾಂಕ 18-11-2017 ರಂದು ಅಪರಾಹ್ನ 2-30 ಗಂಟೆ ಸಮಯದಲ್ಲಿ ವಾಹನಳು ಒಡಾದಂತೆ ತಡೆಯುವ ಉದ್ದೇಶದಿಂದ ತಂತಿ ಬೇಲಿಯನ್ನು ನಿರ್ಮಿಸುತ್ತಿದ್ದು ಅದನ್ನು ಫಿರ್ಯಾದಿ ಕೆ. ಪೂಣಚ್ಚ ರವರು ವಿಚಾರಿದ ಕಾರಣಕ್ಕೆ ಆರೋಪಿಗಳಾದ ಹರೀಶ ಹಾಗು ಇಂದಿರಾರವರುಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, November 19, 2017

ಲಾರಿ ಅವಘಢ, ಗಾಯ
                       ದಿನಾಂಕ 16/11/2017ರಂದು ಭಾಗಮಂಡಲ ಬಳಿಯ ತಣ್ಣಿಮಾನಿ ನಿವಾಸಿ ಸಿ.ಎ.ಗಣೇಶ ಎಂಬವರು ಕೋಪಟ್ಟಿ ಗ್ರಾಮದ ಮುರಳಿ ಎಂಬವರಿಗೆ ಸೇರಿದ ಕೆಎ-12-9601ರ ಸ್ವರಾಜ್ ಮಜ್ದಾ ಲಾರಿಯಲ್ಲಿ ಕರಿಕೆ ಕಡೆಗೆ ಹೋಗುತ್ತಿರುವಾಗ ಚಾಲಕ ಮುರಳಿಯವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ತಣ್ಣಿಮಾನಿ ಬಳಿ ಲಾರಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಗಣೇಶರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಪಘಾತ
                          ದಿನಾಂಕ 18/11/2017ರಂದು ಸಂಪಾಜೆ ಬಳಿಯ ಚೆಂಬು ಗ್ರಾಮದ ನಿವಾಸಿ ಸಚಿನ್ ಎಂಬವರು ಅವರ ತಂದೆ ಭೀಮಯ್ಯನವರೊಂದಿಗೆ ಕೆಎ-21-ಐ-7538ರ ಬೈಕಿನಲ್ಲಿ ಕಲ್ಲುಗುಂಡಿಗೆ ಹೋಗುತ್ತಿರುವಾಗ ಚೆಂಬು ಗ್ರಾಮದ ವಿದ್ಯಾಧರ ಎಂಬವರ ಮನೆಯ ಬಳಿ ಭೀಮಯ್ಯನವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ರಸ್ತೆಯಲ್ಲಿ ಮಗುಚಿ ಅಪಘಾತಕ್ಕೀಡಾಗಿದ್ದು ಸಚಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮವಾಗಿ ಗೊಬ್ಬರ ಸಾಗಾಟ
                          ದಿನಾಂಕ 14/11/2017ರಂದು ಕುಟ್ಟ ಬಳಿಯ ಠಾಣಾ ಮುಂಭಾಗದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕೇರಳಕ್ಕೆ ಹೋಗುವ ವಾಹನಗಳ ತಪಾಸಣೆ ಮಾಡುತ್ತಿರುವ ಸಂದರ್ಭ ಪೊನ್ನಂಪೇಟೆ ಕಡೆಯಿಂದ ಬಂದ ಕೆಎ-12-8311ರ ಲಾರಿಯಲ್ಲಿ ಸುಮಾರು ರೂ.60,000/- ಮೌಲ್ಯದ 200 ಚೀಲ ಯೂರಿಯಾ ಗೊಬ್ಬರ ಪತ್ತೆಯಾಗಿದ್ದು ನಂತರ ದಿನಾಂಕ 15/11/2017ರಂದು ವಿರಾಜಪೇಟೆ ರಸಗೊಬ್ಬರ ನೋಂದಣಿ ಪ್ರಾಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರಾದ ರೀನಾರವರು ಸಿಬ್ಬಂದಿಗಳೊಂದಿಗೆ ಬಂದು ಗೊಬ್ಬರದ ದಾಖಲೆಗಳನ್ನು ಪರಿಶೀಲಿಸಿದಾಗ ಸ್ಥಳೀಯವಾಗಿ ಕೊಡಗಿನ ರೈತರಿಗೆ ಮಾರಾಟ ಮಾಡಲು ಸರಬರಾಜಾದ ಗೊಬ್ಬರವನ್ನು ಕೊಡಗು ಜಿಲ್ಲಾ ಸಹಕಾರ ಮಂಡಳಿಯ ಪೊನ್ನಂಪೇಟೆ ಶಾಖೆಯ ಕಾರ್ಯದರ್ಶಿ ಎಂ.ಎನ್.ಲಾಲಾ ಮತ್ತು ಮಾರಾಟ ಸಹಾಯಕ ಡ್ಯಾನಿ ಎಂಬವರು ಸೇರಿ ಹೊರ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಮಾರಾಟ ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
ದಿನಾಂಕ 18/11/2017ರಂದು ವಿರಾಜಪೇಟೆ ಬಳಿಯ ಕುಂಜಿಲಗೇರಿ ನಿವಾಸಿ ಮಂಗಳೂರಿನ ಸುರತ್ಕಲ್‌ನಲ್ಲಿ ಟ್ರಾನ್ಸ್‌ಪೋರ್ಟ್‌ ವ್ಯಾಪಾರ ಮಾಡಿಕೊಂಡಿರುವ ಮುಂಡಂಡ ಅನಿಲ್‌ ಎಂಬವರು ಕುಂಜಿಲಗೇರಿಯ ಅವರ ಮನೆಯಿಂದ ಬೊಳ್ಳುಮಾಡು ಗ್ರಾಮಕ್ಕೆ ಅವರ ಕಾರಿನಲ್ಲಿ ಹೋಗುತ್ತಿರುವಾಗ ಬೊಳ್ಳುಮಾಡು ಗ್ರಾಮದ ಬಳಿ ಅವರಿಗೆ ಪರಿಚಯವಿರುವ ಪಾಲಚಂಡ ತಾಪ ಚಿಟ್ಟಿಯಪ್ಪ ಎಂಬವರು ಬೈಕಿನಲ್ಲಿ ಬಂದು ಕಾರನ್ನು ನಿಲ್ಲಿಸುವಂತೆ ಹೇಳಿದ ಕಾರಣ ಅನಿಲ್‌ರವರು ಕಾರನ್ನು ನಿಲ್ಲಿಸಿ ತಾಪರವರ ಜೊತೆ ಮಾತನಾಡುತ್ತಿರುವಾಗ ತಾಪ ಚಿಟ್ಟಿಯಪ್ಪರವರು ಅನಿಲ್‌ರವರು ನೀಡಬೇಕಾದ ಹಳೆಯ ಬಾಕಿ ಹಣವನ್ನು ಕೇಳಿ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, November 18, 2017

ದಾರಿ ತಡೆದು ಕೊಲೆ ಬೆದರಿಕೆ:

     ವಿರಾಜಪೇಟೆ ತಾಲೋಕು ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಎಂ.ಬಿ. ಮಾಚಯ್ಯ ಎಂಬವರು ತನ್ನ ಅಣ್ಣ ತಿಮ್ಮಯ್ಯ ಎಂಬವರ ಮೇಲೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಕೇಸನ್ನು ದಾಖಲಿಸಿದ್ದು, ಫಿರ್ಯಾದಿ ಎಂ.ಬಿ ಮಾಚಯ್ಯನವರು ದಿನಾಂಕ 9-11-2017 ರಂದು ಪ್ರಕರಣದ ವಿಚಾರೆಗೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಲಯದಿಂದ ಹೋಗುತ್ತಿದ್ದಾಗ ನ್ಯಾಯಾಲಯದ ಗೇಟಿನ ಹತ್ತಿರ ತಿಮ್ಮಯ್ಯನವರ ಮಗ ಅಯ್ಯಪ್ಪ ಎಂಬವರು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ನ್ಯಾಯಾಲಯದಲ್ಲಿ ದಾಖಲಿಸಿದ ಕೇಸನ್ನು ಹಿಂದಕ್ಕೆ ಪಡೆಯದೇ ಇದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Friday, November 17, 2017

ಜೀಪು ಮಗುಚಿ ವ್ಯಕ್ತಿಗೆ ಗಾಯ
                       ದಿನಾಂಕ 16/11/2017ರಂದು ಮಡಿಕೇರಿ ಬಳಿಯ ಬೆಟ್ಟಗೇರಿ ನಿವಾಸಿ ಷರೀಫ್ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಶಶಿಕುಮಾರ್ ಎಂಬವರು ರಫೀಕ್ ಎಂಬವರ ಪಿಕ್‌ಅಪ್ ಜೀಪು ಸಂಖ್ಯೆ ಕೆಎ-12-ಎ-9953ರಲ್ಲಿ ಮಂಜು ಎಂಬವರೊಡನೆ ಅಮ್ಮತ್ತಿಗೆ ಹೋಗುತ್ತಿರುವಾಗ ಮೂರ್ನಾಡು ಬಳಿಯ ಬೊಳಿಬಾಣೆ ಎಂಬಲ್ಲಿ ಚಾಲಕ ರಫೀಕ್ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ರಫೀಕ್‌ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಶಶಿಕುಮಾರ್‌ ಮತ್ತು ಮಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 15//11/2017ರಂದು ಮಡಿಕೇರಿ ಬಳಿಯ ಮುಕ್ಕೋಡ್ಲು ನಿವಾಸಿ ಮಿಥುನ್ ಎಂಬ ಯುವಕನು ಮನೆಯಲ್ಲಿ ಕಳೆನಾಶಕ ಔಷಧಿಯನ್ನು ಸೇವಿಸಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ವೈವಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16/11/2017ರಂದು ಮೃತನಾಗಿರುವುದಾಗಿ ದೂರು ನೀಡಲಾಗಿದೆ. ಮದುವೆ ಸಮಾರಂಭದಲ್ಲಿ ಮದ್ಯಪಾನ ಮಾಡಿದುದನ್ನು ತಂದೆ ತಾಯಿಯವರು ಆಕ್ಷೇಪಿಸಿದುದೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರಳು ಕಳವು ಪ್ರಕರಣ
                      ದಿನಾಂಕ 16/11/2017ರಂದು ಕುಶಾಲನಗರ ಪಟ್ಟಣ ಠಾಣೆಯ ಪಿಎಸ್‌ಐ ಪಿ.ಜಗದೀಶ್‌ರವರು ಗಸ್ತು ಕರ್ತವ್ಯದಲ್ಲಿರುವಾಗ ಕುಶಾಲನಗರದ ರಸೂಲ್ ಲೇ ಔಟ್ ಬಳಿ ಕಾವೇರಿ ಹೊಳೆಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಪಿಕ್‌ ಅಪ್ ವಾಹನಕ್ಕೆ ತುಂಬಿಸುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಕಾವೇರಿ ಹೊಳೆಯಿಂದ ಆಜು, ಕಿರಣ್, ಸಾಗರ್ ಮತ್ತು ಅಮಾನ್ ಎಂಬವರು ಅಕ್ರಮವಾಗಿ ಮರಳನ್ನು ಹೊಳೆಯಿಂದ ತೆಗೆದು ಜೀಪಿಗೆ  ತುಂಬಿಸುತ್ತಿರುವುದನ್ನು ಪತ್ತೆ ಹಚ್ಚಿ ಕುಶಾಲನಗರ ಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 16, 2017

ಆಟೋ ಬಾಡಿಗೆ ವಿಷಯದಲ್ಲಿ ವ್ಯಕ್ತಿ ಮೇಲೆ ಹಲ್ಲೆ:
   ದಿನಾಂಕ 15-11-2017 ರಂದು 11-45 ಗಂಟೆಗೆ ಮಡಿಕೇರಿ ನಗರ ನಿವಾಸಿ ಆಟೋ ಚಾಲಕ ಪಿ.ಎಂ. ಹಸನ್ ಎಂಬವರು ತಮ್ಮ ಬಾಪ್ತು ಆಟೋ ರಿಕ್ಷಾದಲ್ಲಿ ನಗರದ ಕಾವೇರಿ ಹಾಲ್ ಬಳಿಯಿಂದ ಮಡಿಕೇರಿ ನಗರದ ವಿದ್ಯಾನಗರ ನಿವಾಸಿ ರಮೇಶ ಎಂಬವರನ್ನು ಬಾಡಿಗೆಗೆ ಐ.ಟಿ.ಐ. ಜಂಕ್ಷನ್ ಗೆ ಕರೆದುಕೊಂಡು ಹೋಗಿದ್ದು, ಬಳಿಕ ಬಾಡಿಗೆ ಹಣ ನೀಡುವ ವಿಚಾರದಲ್ಲಿ ಸದರಿ ರಮೇಶ್ ರಿಕ್ಷಾ ಚಾಲಕನೊಂದಿಗೆ ಜಗಳ ಮಾಡಿ ಹಣವನ್ನು ನೀಡಿದ್ದು, ಚಾಲಕ ರಿಕ್ಷಾವನ್ನು ನಗರದ ಕಡೆಗೆ ತಿರುಗಿಸಿದ ಸಂದರ್ಭದಲ್ಲಿ ಆರೋಪಿ ರಮೇಶ ಕಲ್ಲೊಂದರಿಂದ ಚಾಲಕನ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾರು ಅಪಘಾತ:
    ವಿರಾಜಪೇಟೆ ತಾಲೋಕು ಪಾಲಿಬೆಟ್ಟ ನಿವಾಸಿ ವಿವೇಕ್ ಜೋಯಪ್ಪ ಎಂಬವರ ಪತ್ನಿ ಶ್ರೀಮತಿ ರಿಷಿಕ ವಿವೇಕ್ ಎಂಬವರು ದಿನಾಂಕ 15-11-2017 ರಂದು ಕೆಎ 12 ಎನ್ 8068 ರ ಕಾರಿನಲ್ಲಿ ಮಗಳು ಸಾಕ್ಷಿಯನ್ನು ಕೂರಿಸಿಕೊಂಡು ಗೋಣಿಕೊಪ್ಪದ ಕಾಲ್ಸ್ ಶಾಲೆಯ ಕಡೆಗೆ ಸಮಯ 08.15 ಎ.ಎಂ.ಗೆ ಹೋಗುತ್ತಿದ್ದಾಗ ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಪಾಲಿಬೆಟ್ಟ ಟಾಟಾ ಕಂಪೆನಿಗೆ ಸೇರಿದ ಕೋಟೆಬೆಟ್ಟ ಕಾಫಿ ತೋಟದ ಮುಂಭಾಗದ ರಸ್ತೆಯ ಹತ್ತಿರ ರಸ್ತೆಯ ಬಲಭಾಗದಿಂದ ದನವೊಂದು ಅಡ್ಡ ಬಂದ ಕಾರಣ ಕಾರಿನ ನಿಯಂತ್ರಣ ಕಳೆದುಕೊಂಡ ಕಾರಣ ಕಾರು ರಸ್ತೆಯ ಎಡಭಾಗದಲ್ಲಿದ್ದ ವಿದ್ಯುತ್ ಚ್ಛಕ್ತಿ ಕಂಬಕ್ಕೆ ಡಿಕ್ಕಿಯಾಗಿ ಕಂಬ ಮುರಿದು ಬಿದ್ದು, ಕಾರು ಎಡಭಾಗದ ಬರೆಗೆ ಡಿಕ್ಕಿಯಾಗಿ ಮಗುಚಿಕೊಂಡು ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದವರು ಯಾವುದೇ ಅಪಾಯದಿಂದ ಪಾರಾಗಿರುತ್ತಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊಲೆ ಬೆದರಿಕೆ:

    ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ದೀಣೆಕೊಪ್ಪ ಗ್ರಾಮದ ನಿವಾಸಿ ಜಿ.ಟಿ. ರಾಜಪ್ಪ ಎಂಬವರು ದಿನಾಂಕ 14-11-2017 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಗೌಡಳ್ಳಿಯಲ್ಲಿರುವ ಅಂಗಡಿಯೊಂದಕ್ಕೆ ಹೋಗಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಅದೇ ಗ್ರಾಮದವರಾದ ಸುಚಿತ ಹಾಗು ಜಯಕುಮಾರ ಎಂಬವರು ದಾರಿ ತಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, November 15, 2017

ಅಕ್ರಮ ಮರಳು ಸಾಗಾಟ 71 ಪ್ರಕರಣಗಳು ದಾಖಲು:
 
     ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ವ್ಯಾಪ್ತಿಯ ಕಾವೇರಿ, ಹಾರಂಗಿ, ಲಕ್ಷ್ಮಣತೀರ್ಥ, ಬರಪೊಳೆಗಳಲ್ಲಿ ಅಕ್ರಮವಾಗಿ ಮರಳನ್ನು ಕೆಲವು ಕಿಡಿಗೇಡಿಗಳು ತೆಗೆಯುತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರೆವಿನ್ಯೂ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಯವರು ಇದನ್ನು ತಡೆಯುವ ಉದ್ದೇಶದಿಂದ ಅಕ್ರಮವಾಗಿ ಮರಳು ತೆಗೆಯುವವರ ಹಾಗೂ ಸಾಗಾಟ ಮಾಡುವವರ ವಿರುದ್ಧ 2017 ರಲ್ಲಿ 71 ಪ್ರಕರಣಗಳನ್ನು ದಾಖಲಿಸಲಾಗಿದ್ದು, 51 ಲಾರಿ, 4 ಟ್ರಾಕ್ಟರ್ ಹಾಗೂ ಇತರೆ 10 ವಾಹನಗಳನ್ನು ವಶಪಡಿಸಿಕೊಂಡು, ಪ್ರಕರಣಗಳನ್ನು ದಾಖಲಿಸಲಾಗಿದ್ದು, 75 ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ.

     ಅನೇಕ ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾದ್ಯಮಗಳಲ್ಲಿ ಪೊಲೀಸರು ಶಾಮೀಲಾಗಿರುವ ವದಂತಿಗಳ ಬಗ್ಗೆ ಸುದ್ಧಿ ಪ್ರಸಾರವಾಗುತ್ತಿದ್ದು, ಇದಕ್ಕೆ ಪೂರಕವಾದಂತೆ ದಿನಾಂಕ: 29-11-2017 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದ ಕಿರಣ್ ಕುಮಾರ್ ರವರ ದೂರಿನ ಅನ್ವಯ ಕೊಡಗು ಜಿಲ್ಲೆಯ ವಿವಿಧ ಮಾಧ್ಯಮದ ವರಧಿಗಾರ, ಛಾಯಾಗ್ರಾಹಕರ ವಿರುದ್ಧ ಅಕ್ರಮ ಮರಳು ಸಾಗಾಟ ಮಾಡುವವರಿಂದ ಹಣ ವಸೂಲಿ ಮಾಡಿದ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.157/17, ಕಲಂ 384 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣವು ತನಿಖಾ ಹಂತದಲ್ಲಿರುತ್ತದೆ. ಆರೋಪಿಗಳು ಕುಶಾಲನಗರದ ಶಿರಂಗಾಲಕ್ಕೆ ಹೋದ ಬಗ್ಗೆ ಹಾಗೂ ಅಕ್ರಮವಾಗಿ ಮರಳು ಸಾಗಾಟ ಮಾಡುವವರಿಂದ ಹಣ ವಸೂಲಿ ಮಾಡಿದ ಬಗ್ಗೆ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದ್ದು, ಇದರ ತೀವ್ರತೆಯನ್ನು ಅರಿತು ಮೇಲಾಧಿಕಾರಿಗಳ ಅನುಮತಿ ಪಡೆದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದೆಂದು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ.
     
ನೌಕರಿ ಪಡೆಯುವಲ್ಲಿ ಅಕ್ರಮ:
 
     2017 ರಲ್ಲಿ ನಡೆದ ಜಿಲ್ಲಾ ಸಶಸ್ತ್ರ ಮೀಸಲು ದಳದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಆಯ್ಕೆ ಪ್ರಕ್ರಿಯೆಯ ವೇಳೆ ಮೂಲ ಅಭ್ಯರ್ಥಿಯ ಬದಲಾಗಿ ಆತನ ಅಣ್ಣ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ತನ್ನ ತಮ್ಮನಿಗೆ ಪೊಲೀಸ್ ಇಲಾಖೆಯ ಎಪಿಸಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಸಹಾಯ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    2017 ನೇ ಸಾಲಿನ  ಜಿಲ್ಲಾ ಸಶಸ್ತ್ರ ಮೀಸಲು ದಳದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ದೇಹದಾರ್ಡ್ಯ ಪರೀಕ್ಷೆಯು ದಿನಾಂಕ: 28-01-2017 ರಂದು ನಿಗದಿಯಾಗಿದ್ದು, ಆ ದಿನ ಎಪಿಸಿ ಹುದ್ದೆಗೆ ಅಜರ್ಿ ಸಲ್ಲಿಸಿದ್ದ ಶರೀಫ್ ಸಾಬ ಲಾಲ ಸಾಬ ವಾಲೀಕರ್ ಎಂಬಾತನು ಬಾಗಲಕೋಟೆ ಜಿಲ್ಲೆಯಿಂದ ಮಡಿಕೇರಿಗೆ ಬಂದಿದ್ದು, ದಾಖಲಾತಿ ಪರಿಶೀಲನೆಯ ವೇಳೆ ಹಾಜರಿದ್ದು, ತದನಂತರ ನೆಡೆದ ದೇಹದಾರ್ಡ್ಯ ಪರೀಕ್ಷೆಯ ವೇಳೆಯಲ್ಲಿ ತಾನು ನಿಗದಿಪಡಿಸಿದ ಎತ್ತರಕ್ಕಿಂತ 6 ಸೆಂ.ಮೀ ಕಡಿಮೆ ಇದ್ದ ಕಾರಣ ತಾನು ಆಯ್ಕೆಯಾಗುವುದಿಲ್ಲವೆಂದು ತಿಳಿದು, ಹಾಲಿ ಮಂಗಳೂರು ಜಿಲ್ಲೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದ ತನ್ನ ಅಣ್ಣನಾದ ಮೊದೀನ್ ಸಾಬ ಲಾಲಸಾಬ ವಾಲೀಕರ್ ನಿಗೆ ದೇಹದಾರ್ಡ್ಯ ಪರೀಕ್ಷೆಗೆ ಹಾಜರಾಗುವಂತೆ ಪ್ರಚೋದನೆ ನೀಡಿದ್ದು, ಅದರಂತೆ ಮೊದೀನ್ ಸಾಬ ಲಾಲಸಾಬ ವಾಲೀಕರ್ ನು ದಿನಾಂಕ: 28-01-2017 ರಂದು ನೆಡೆದ ದೇಹದಾರ್ಡ್ಯ ಪರೀಕ್ಷೆಯಲ್ಲಿ ಪಾಲ್ಗೊಂಡು ತನ್ನ ತಮ್ಮ ಎಪಿಸಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗುವಂತೆ ಸಹಕರಿಸಿರುತ್ತಾರೆ.
     ಆಯ್ಕೆಯಾದ ನಂತರ ದಿನಾಂಕ: 03-11-2017 ರಂದು ಕರ್ತವ್ಯಕ್ಕೆ ವರಧಿ ಮಾಡಿಕೊಂಡಿದ್ದು, ಆತನಿಗೆ ಎಪಿಸಿ 68 ಸಂಖ್ಯೆ ನ್ನು ನೀಡಿದ್ದು, ಡಿಎಆರ್ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 14-11-2017 ರಂದು ಸಂಜೆ ಹಾಜರಾತಿಯ ವೇಳೆ ಸಶಸ್ತ್ರ ಪೊಲೀಸ್ ನಿರೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ದಳ, ಮಡಿಕೇರಿ ರವರಿಗೆ ಅನುಮಾನ ಬಂದು ಆತನ ಎತ್ತರವನ್ನು ಎತ್ತರ ಮಾಪನದಲ್ಲಿ ಪರೀಕ್ಷಿಸಿದಾಗ ಶರೀಫ್ ಸಾಬ ಲಾಲ ಸಾಬ ವಾಲೀಕರ್ ನು ನಿಗದಿಪಡಿಸಿದ ಎತ್ತರಕಿಂತ 6 ಸೆಂ.ಮೀ ಕಡಿಮೆ ಇರುವುದು ಕಂಡು ಬಂದಾಗ, ಆತನನ್ನು ವಿಚಾರ ಮಾಡಲಾಗಿ ಆತನು ಸಮಂಜಸವಾದ ಉತ್ತರ ನೀಡದೇ ಇದ್ದಾಗ, ಆದಿನದ ವಿಡಿಯೋ ಚಿತ್ರೀಕರಣವನ್ನು ವೀಕ್ಷಿಸಲಾಗಿ ಶರೀಫ್ ಸಾಬ ಲಾಲ ಸಾಬ ವಾಲೀಕರ್ ಹಾಗೂ ಮೊದೀನ್ ಸಾಬ ಲಾಲ ಸಾಬ ವಾಲೀಕರ್ ಮಾಡಿದ ಅಕ್ರಮದ ಬಗ್ಗೆ ತಿಳಿದು ಬಂದಿದ್ದು, ತಿಮ್ಮಪ್ಪಗೌಡ, ಸಶಸ್ತ್ರ ಪೊಲೀಸ್ ನಿರೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ದಳ, ಮಡಿಕೇರಿ ರವರ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸ್ ಠಾಣಾ ಮೊ. ಸಂ. 148/17 ಕಲಂ. 114, 419, 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ಆರೋಪಿ ಶರೀಫ್ ಸಾಬ ಲಾಲ ಸಾಬ ವಾಲೀಕರ್ ನನ್ನು ದಸ್ತಗಿರಿ ಮಾಡಲಾಗಿದ್ದು, ಮೊದೀನ್ ಸಾಬ ಲಾಲ ಸಾಬ ವಾಲೀಕರ್ ನು ತಲೆಮರೆಸಿಕೊಂಡಿರುತ್ತಾನೆ.

ಹೊಟೇಲ್ ಗೆ ನುಗ್ಗಿ ಕಳವು:
     ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೊಟ್ಟಮುಡಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿ ಕೊಟ್ಟಮುಡಿ ಗ್ರಾಮದ ನಿವಾಸಿ ಹೆಚ್.ಹೆಚ್. ಖಾಲೀದ್ ರವರು ಹೊಟೇಲ್ ನ್ನು ನಡೆಸುತ್ತಿದ್ದು, ಸದರಿ ಹೊಟೇಲ್ ಗೆ ದಿನಾಂಕ 13-11-2017 ಮತ್ತು 14-11-2017ರ ಬೆಳಗಿನ ಅವಧಿಯಲ್ಲಿ ಯಾರೋ ಕಳ್ಳರು ನುಗ್ಗಿ ಹಿಂದಿನ ಬಾಗಿಲಿನ ಮೂಲಕ ನುಗ್ಗಿ ಹೊಟೇಲ್ ನಿಂದ 3000 ರೂ ನಗದು ಮತ್ತು 12,000 ರೂ. ಬೆಲೆಬಾಳುವ ವೀಡಿಯೋಕೋನ್ ಟಿ.ವಿ.ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ ನಾಲ್ವರಿಗೆ ಗಾಯ:
     ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರು ಗಾಯಗೊಂಡ ಘಟನೆ ವಿರಾಜಪೇಟೆ ಸಮೀಪದ ಮಾಕುಟ್ಟ ಎಂಬಲ್ಲಿ ನಡೆದಿದೆ. ದಿನಾಂಕ 13-11-2017 ರಂದು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಕೇರಳ ರಾಜ್ಯ, ಕಣ್ಣೂರು ತಾಲೋಕಿನ ಅಡಿಗಪಾರ ಗ್ರಾಮದ ನಿವಾಸಿ ಕೆ.ಕೆ. ಅಬ್ದುಲ್ ರೆಹಮಾನ್ ಎಂಬವರು ಇತರೆ ಮೂರುಜನರೊಂದಿಗೆ ಕಾರಿನಲ್ಲಿ ಕೇರಳಕ್ಕೆ ಗೋಣಿಕೊಪ್ಪ-ಪೆರುಂಬಾಡಿ ಮಾರ್ಗವಾಗಿ ಹೋಗುತ್ತಿದ್ದಾಗ ಕಾರಿನ ಚಾಲಕ ಕುಂಞಮೊಹಮ್ಮದ್ ರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಮಾಕುಟ್ಟ ಗ್ರಾಮದ ಸಾರ್ವಜನಿಕ ರಸ್ತೆಯ ಬಲ ಬದಿಯ ಬರೆಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಫಿರ್ಯಾದ ಕೆ.ಕೆ.ಅಬ್ದುಲ್ ರೆಹಮಾನ್, ಚಾಲಕ ಮತ್ತು ಇತರೆ ಇಬ್ಬರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ:

     ಕಾರೊಂದು ಅಪಘಾತಕ್ಕೀಡಾಗಿ ವಿದ್ಯುತ್ ಕಂಬಕ್ಕೆ ದಿಕ್ಕಿಯಾದ ಪರಿಣಾಮ ಕಾರು ಹಾಗು ವಿದ್ಯುತ್ ಕಂಬಗಳು ಜಖಂಗೊಂಡ ಘಟನೆ ಸೋಮವಾರಪೇಟೆ ತಾಲೋಕು ಯಡೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14-11-2017 ರಂದು ಇಶಾನ್ ಎಂಬವರು ತಮ್ಮ ಬಾಪ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಯಡೂರು ಗ್ರಾಮದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಸುಮಾರು 30 ಅಡಿ ದೂರದ ಗುಂಡಿಯಲ್ಲಿ ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದುಹೋಗಿ ಸುಮಾರು 1,25,000 ರೂ. ನಷ್ಟ ಸಂಭವಿಸಿರುತ್ತದೆ ಎಂಬುದಾಗಿ ಎಂ.ಜಿ. ವಸಂತ್ ಕುಮಾರ್ ವ್ಯವಸ್ಥಾಪಕರು, ಕೊಡಗು ಹೈಡಲ್ ಪ್ರೈ.ಲಿ, ಬೀದಳ್ಳಿ ಗ್ರಾಮ ಸೋಮವಾರಪೇಟೆ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, November 14, 2017

ಹಲ್ಲೆ ಪ್ರಕರಣ
                     ದಿನಾಂಕ 13/11/2017ರಂದು ಶ್ರೀಮಂಗಲ ಬಳಿಯ ತೂಚಮಕೇರಿ ನಿವಾಸಿ ಚಿಂಡಾಮಾಡ ವಿಷ್ಣು ಎಂಬವರ ಮನೆಗೆ ಕಂದಾಯ ಅಧಿಕಾರಿಗಳು ಬಂದು ಕಂದಾಯ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಚಿಂಡಮಾಡ ಅರಸು, ಉಮೇಶ, ಬಬಿತ ಮತ್ತು ತೇಜಸ್ವಿನಿ ಎಂಬವರು ಸೇರಿಕೊಂಡು ವಿಷ್ಣು ಹಾಗೂ ಅವರ ತಾಯಿಯವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ರಿಕ್ಷಾ ಡಿಕ್ಕಿ
                    ದಿನಾಂಕ 8/11/2017ರಂದು ಗೋಣಿಕೊಪ್ಪ ಬಳಿಯ ಮಾಯಮುಡಿ ನಿವಾಸಿ ಎನ್.ಎನ್.ಸಂತೋಷ್ ಎಂಬವರ ತಂದೆ ನಾರಾಯಣ ಎಂಬವರು ಮಾಯಮುಡಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಬಿ-4763ರ ರಿಕ್ಷಾವನ್ನು ಅದರ ಚಾಲಕ ಜಗದೀಶ ಎಂಬವರು ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾರಾಯಣರವರಿಗೆ ಡಿಕ್ಕಿಪಡಿಸಿದ ಪರಿಣಾಮ ನಾರಾಯಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಹತ್ಯೆ 
                     ದಿನಾಂಕ 12/11/2017ರಂದು ಸಂಜೆ ವೇಳೆ ಕೇರಳದ ಸಜು ಎಂಬ ವ್ಯಕ್ತಿಯು ವಿರಾಜಪೇಟೆ ನಗರದ ಬಾಲಾಜಿ ಬ್ರಾಂದಿ ಅಂಗಡಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಗಿ ಮದ್ಯಪಾನ ಮಾಡಿ ಇಬ್ಬರೂ ಹೋಗಿದ್ದು ನಂತರ ರಾತ್ರಿ ವೇಳೆ ಸಜು ಮರಳಿ ಬಾರಿಗೆ ಬಂದು ಬಾರಿನ ಕ್ಯಾಷಿಯರ್ ಜೇಮ್ಸ್ ಮೆನೆಜಸ್ ಎಂಬವರೊಂದಿಗೆ ತಾನು ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಸಾರ್ವಜನಿಕ ಶೌಚಾಲಯದ ಬಳಿ ಓರ್ವ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗಣಕ ಯಂತ್ರ ಕಳವು
                    ದಿನಾಂಕ 11/11/2017ರಿಂದ 13/12/2017ರ ನಡುವೆ ವಿರಾಜಪೇಟೆಯ ಸರ್ವೋದಯ ಕಾಲೇಜಿನಲ್ಲಿ ರಜೆ ಇದ್ದ ಸಮಯದಲ್ಲಿ ಯಾರೋ ಕಳ್ಳರು ಕಾಲೇಜಿನ ಗಣಕ ಯಂತ್ರ ವಿಭಾಗದ ಪ್ರಯೋಗಾಲಯದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು ರೂ.20,000/- ಮೌಲ್ಯದ ಗಣಕ ಯಂತ್ರದ ಎರಡು ಸಿಪಿಯುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಫಘಾತ ಗಾಯಾಳು ಸಾವು
                    ದಿನಾಂಕ 11/11/2017ರಂದು ಸೋಮವಾರಪೇಟೆ ಬಳಿಯ ಕೂಗೂರು ನಿವಾಸಿ ರಂಜನ್ ಎಂಬವರು ಅವರ ಕಾರಿನಲ್ಲಿ ಶನಿವಾರಸಂತೆಗೆ ಹೋಗುತ್ತಿರುವಾಗ ರಾಮೇನಹಳ್ಳಿ ಬಳಿ ಎದುರುಗಡೆಯಿಂದ ಚೆನ್ನಾಪುರ ಗ್ರಾಮದ ಪರಮೇಶ ಎಂಬಾತನು ಕೆಎ-13-ಜೆ-8205ರ ಬೈಕನ್ನು ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಂಜನ್‌ರವರ ಕಾರಿಗೆ ಡಿಕ್ಕಿಪಡಿಡಿದ ಪರಿಣಾಮ ಗಾಯಗೊಂಡ ಪರಮೆಶ ಹಾಗೂ ಬೈಕಿನ ಹಿಂಬದಿ ಸವಾರ ನವೀನ ಎಂಬವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಪ್ರಕರಣದ ತನಿಖೆಯನ್ನು  ಕೈಗೊಳ್ಳಲಾಗಿತ್ತು. ಇದೀಗ ದಿನಾಂಕ 13/11/2017ರಂದು ಗಾಯಾಳು ಪರಮೇಶ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ 
                    ದಿನಾಂಕ 12/11/2017ರಂದು ಸಕಲೇಶಪುರದ ಯೆಸಳೂರು ನಿವಾಸಿ ಈರಪ್ಪಶೆಟ್ಟಿ ಎಂಬವರು ಅವರ ಕೆಎ-12-ಆರ್-2332ರ ಬೈಕಿನಲ್ಲಿ ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುತ್ತಿರುವಾಗ ಸೋಮವಾರಪೇಟೆ ಬಳಿಯ ಕೋವರ್‌ಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಕೆಎಲ್‌-60-ಎಲ್-6360ರ ಇನ್ನೋವಾ ಕಾರನ್ನು ಅದರ ಚಾಲಕ ರಿಯಾಜ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಈರಪ್ಪಶೆಟ್ಟಿಯವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಕಳವು
                        ದಿನಾಂಕ 12/11/2017ರಂದು ಕುಶಾಲನಗರ ಬಳಿಯ ರಸಲ್ ಪುರ ನಿವಾಸಿ ರೋಷನ್ ಎಂಬವರು ಅವರ ಕೆಎ-12-ಎನ್-587ರ ಮಾರುತಿ ವ್ಯಾನಿನಲ್ಲಿ ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆಯುತ್ತಿದ್ದ  ಜಾತ್ರೆ ವೀಕ್ಷಿಸಲು ಹೋಗಿ ಜಾತ್ರಾ ಮೈದಾನದಲ್ಲಿ ವ್ಯಾನು ನಿಲ್ಲಿಸಿ ಜಾತ್ರೆಗೆ ತೆರಳಿದ್ದು ಮರಳಿ ಬಂದು ನೋಡುವಾಗ ವ್ಯಾನು ಕಾಣೆಯಾಗಿದ್ದು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 13, 2017

ಪಾದಚಾರಿಗಳಿಗೆ ಬೈಕ್ ಡಿಕ್ಕಿ:

     ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕು ಪದವನಳ್ಳಿ ಗ್ರಾಮದ ನಿವಾಸಿ ಜಯಬೋವಿ ಎಂಬವರು ದಿನಾಂಕ 12-11-2017 ರಂದು ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಅವರ ತಂಗಿ ಕವಿತ ಮತ್ತು ವೆಂಕಟೇಶರವರ ಮಗ ಸುಪ್ರೀತ್ ಎಂಬವರುಗಳು ರಾತ್ರಿ 8-15 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಎ.12-ಕೆ-8818 ರ ಮೋಟಾರ್ ಸೈಕಲ್ ಸವಾರ ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಕವಿತ ಮತ್ತು ಸುಪ್ರೀತ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೈಕ್ ಡಿಕ್ಕಿ:

      ದಿನಾಂಕ 12-11-2017 ರಂದು ಮಡಿಕೇರಿ ತಾಲೋಕು ಕೊಟ್ಟಮುಡಿ ಗ್ರಾಮದ ನಿವಾಸಿ ಪಿ.ಎಂ. ಅಹಮ್ಮದ್ ಎಂಬವರು ತಮ್ಮ ಬಾಪ್ತು ರಿಡ್ಜ್ ಕಾರನ್ನು ನಾಪೋಕ್ಲು ನಗರದ ಬೇತು ರಸ್ತೆಯಲ್ಲಿ ನಿಲ್ಲಿಸಿದ್ದು, ನಾಪೋಕ್ಲು ಬಸ್ ನಿಲ್ದಾಣದ ಕಡೆಯಿಂದ ಬಂದ ಮೋಟಾರ್ ಸೈಕಲನ್ನು ಸವಾರ ಶಾಫಿ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಿಲ್ಲಿಸಿದ್ದ ಪಿ.ಎಂ. ಅಹಮ್ಮದ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಾನಿಗೆ ಕಾರು ಡಿಕ್ಕಿ:

     ಮಡಿಕೇರಿ ತಾಲೋಕು ಮೂರ್ನಾಡು ನಿವಾಸಿ ಕೆ.ಯು. ಹಸೈನಾರ್ ಎಂಬವರು ಪತ್ನಿ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ದಿನಾಂಕ 12-11-2017 ರಂದು ಸಿದ್ದಾಪುರ ಕಡೆಯಿಂದ ಅಮ್ಮತ್ತಿ ಮೂಲಕ ಮೂರ್ನಾಡು ಕಡೆಗೆ ತಮ್ಮ ಬಾಪ್ತು ಮಾರುತಿ ವ್ಯಾನಿನಲ್ಲಿ ಬರುತ್ತಿರುವಾಗ್ಗೆ ಸಿದ್ದಾಪುರ ಸಮೀಪಕ ಇಂಜಿಲಗೇರಿ ಎಂಬಲ್ಲಿ ಎದುರುಗಡೆಯಿಂದ ಬಂದ ಕೆಎ-12- 8227ರ ಮಾರುತಿ ಡಿಸೈರ್ ಕಾರಿನ ಚಾಲಕ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಸೈನಾರ್ ರವರು ಚಲಾಯಿಸುತ್ತಿದ್ದ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನ ಚಾಲಕ ಹಸೈನಾರ್, ಆಯಿಷ, ಮುಮ್ತಾಜ್ ರವರು ಗಾಯಗಾಯಗೊಂಡಿದ್ದು, ಸಿದ್ದಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ವಿಷ ಸೇವಿಸಿ ವಿದ್ಯಾರ್ಥಿನಿ ಸಾವು:

     ವಿರಾಜಪೇಟೆ ತಾಲೋಕು, ಹೆಗ್ಗಳ ಗ್ರಾಮದ ನಿವಾಸಿ ಕೆ.ಕೆ. ಪೂವಯ್ಯ ಎಂಬವರ ಮಗಳಾದ ಕೌಷಲ್ಯ ಎಂಬಾಕೆ ದಿನಾಂಕ 10-11-2017 ರಂದು ವಿಷ ಸೇವಿಸಿ ಅಸ್ವಸ್ಥಳಾಗಿದ್ದು ಆಕೆಯನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12-11-2017 ರಂದು ಸಾವನಪ್ಪಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, November 12, 2017

ಕೊಡಗು ಜಿಲ್ಲಾ ಪೊಲೀಸ್ ನಾಗರೀಕ ಬಂದೂಕು ತರಬೇತಿ ಶಿಬಿರದ ಪತ್ರಿಕಾ ಪ್ರಕಟಣೆ
 
     ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರೀಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ ಇಲಾಖ ವತಿಯಿಂದ ನಡೆಸಲು ಉದ್ದೇಶಿಸಲಾಗಿದೆ. ಈ ತರಬೇತಿ ಪಡೆದುಕೊಳ್ಳಲು ಆಸಕ್ತಿ ಉಳ್ಳವರು ಆರ್.ಪಿ.ಐ ಡಿ.ಎ.ಆರ್, ಕಛೇರಿಯಿಂದ ನಿಗಧಿತ ಅರ್ಜಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
       
 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :-20.11.2017
 ಶುಲ್ಕ :-10/-
 ಸಂಪರ್ಕ ಸಂಖ್ಯೆ :-9480804906 ಮತ್ತು 08272228420
 ತರಬೇತಿಯ ಅವಧಿ :-22.11.2017 ರಿಂದ 28.11.2017
 ಅರ್ಜಿಯನ್ನು ಸಲ್ಲಿಸಲು ಇಚ್ಛೆಯುಳ್ಳವರು ತಮ್ಮ ಇತ್ತೀಚಿನ  04 ಸಂಖ್ಯೆಯ ಪಾಸ್ಪೋರ್ಟ್      ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
                                                   
                                         

                                                                            ಸಾರ್ವಜನಿಕ ಸಂಪರ್ಕಾಧಿಕಾರಿ,
                                                                                ಕೊಡಗು ಜಿಲ್ಲೆ, ಮಡಿಕೇರಿ.                                         
 ------

ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಬಂಧನ:


      ದಿನಾಂಕ 10-11-2017 ರಂದು ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಟಿಪ್ಪು ಜಯಂತಿಯ ಆಚರಣೆ ವೇಳೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

      ಜಿಲ್ಲಾಡಳಿತ ವತಿಯಿಂದ ಟಿಪ್ಪು ಜಯಂತಿ ಆಚರಣೆಯನ್ನು ದಿನಾಂಕ 10-11-2017 ರಂದು ಹಮ್ಮಿಕೊಂಡಿದ್ದು ಇದನ್ನು ವಿರೋಧಿಸಿ ಕೊಡಗು ಜಿಲ್ಲೆಯ ಹಿಂದೂಪರ ಸಂಘಟನೆಗಳು ಹಾಗು ಟಿಪ್ಪು ಜಯಂತಿ ವಿರೋಧಿ ವೇದಿಕೆಯವರು ಕೊಡಗು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಹಾಗು ನಗರ ಮತ್ತು ಹೊರವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

     ಜಿಲ್ಲಾ ಪೊಲೀಸರು ನಗರ ಹಾಗು ಹೊರವಲಯದಲ್ಲಿ ಕಟ್ಟೆಚ್ಚರವಹಿಸಿ ಬಂದೋಬಸ್ತ್ನಲ್ಲಿ ತೊಡಗಿರುವ ವೇಳೆ ಕೆಲ ದುಷ್ಕರ್ಮಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದಲ್ಲಿ ರಾಜ್ಯಾಧ್ಯಂತ ಸುದ್ದಿಯಾಗಿ ಟಿಪ್ಪು ಜಯಂತಿ ಆಚರಣೆಯನ್ನು ತಡೆಯುವಲ್ಲಿ ತಾವು ಯಶಸ್ವಿಯಾಗಬಹುದೆಂದು ಯೋಜನೆಯನ್ನು ರೂಪಿಸಿ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳವ ಸಾಧ್ಯತೆ ಇರುತ್ತದೆ ಎಂಬ ಭಯದಿಂದ ಕಲ್ಲು ತೂರಾಟ ನಡೆಸಲು ನಿರ್ಜನ ಪ್ರದೇಶವಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ರಸ್ತೆಯನ್ನು ಆಯ್ಕೆ ಮಾಡಿ ಕಾಲೂರು ಗ್ರಾಮಕ್ಕೆ ತೆರಳಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ್ನ್ನು ಹಿಂಭಾಲಿಸಿ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸ್ನ್ನು ಅಡ್ಡ ಹಾಕಿ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿರುತ್ತಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ. 325/2017 ಕಲಂ 341, 427 ರೆ:ವಿ 34 ಐಪಿಸಿ ಮತ್ತು ಕಲಂ 2(ಎ) (ಬಿ) The Prevention of Destruction and Loss of Property Act 1951    ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  

     ಕೂಡಲೇ ಕಾರ್ಯ ಪ್ರವೃತ್ತರಾದ ಮಡಿಕೇರಿ ಗ್ರಾಮಾಂತರ ಪೊಲೀಸರು ಜಿಲ್ಲಾ ಪೊಲೀಸ್ ವತಿಯಿಂದ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮಾರದ ವೀಡಿಯೋವನ್ನು ಆಧರಿಸಿ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಆರೋಪಿಗಳು ಮಡಿಕೇರಿಯಿಂದ ದ್ವಿಚಕ್ರವಾನದಲ್ಲಿ ಕೆ.ಎಸ್.ಆರ್.ಟಿ. ಬಸ್ಸನ್ನು ಹಿಂಭಾಲಿಸಿ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ತಡೆದು ಕಲ್ಲು ತೂರಾಟ ನಡೆಸಿದ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ ಈ ಕೆಳಗಿನಂತಿದೆ.

1. ಟಿ.ಹೆಚ್. ಸುಧೀಂದ್ರ, ತಂದೆ ಟಿ.ಟಿ. ಹನುಮಂತ ಶೆಟ್ಟಿ, 31 ವರ್ಷ ಎಲೆಕ್ಟ್ರಿಷಿಯನ್ ವೃತ್ತಿ, ಕೆ.ಹೆಚ್.ಬಿ. ಕಾಲೋನಿ, ವಿಧ್ಯಾನಗರ ಮಡಿಕೇರಿ.

2. ಬಿ.ಎ.ಉಮೇಶ @ ಸಾವಂತ್ ತಂದೆ: ಅಣ್ಣು, 24 ವರ್ಷ, ಹೆರಿಟೇಜ್ ಹೊಟೇಲ್ನಲ್ಲಿ ಸಪ್ಲಯರ್ ಕೆಲಸ, ವಾಸ ವಿಧ್ಯಾನಗರ ಮಡಿಕೇರಿ.

3. ಪಿ.ಎಂ. ಅಕ್ಷಯ, ತಂದೆ: ಮಣಿ 21 ವರ್ಷ, ಎಫ್.ಎಂ.ಸಿ. ಕಾಲೇಜಿನ 1ನೇ ಬಿ.ಕಾಂ. ವಿದ್ಯಾರ್ಥಿ.

4. ಜಿ.ಕೆ. ನವೀನ, ತಂದೆ ಕೆಂಚಪ್ಪ, 21 ವರ್ಷ, ಜೆ.ಸಿ.ಬಿ. ಆಪರೇಟರ್ ಕೆಲಸ, ವಾಸ ವಿಧ್ಯಾನಗರ ಮಡಿಕೇರಿ.


      ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಮಾರ್ಗದರ್ಶನದಲ್ಲಿ ಮತ್ತು ಮಡಿಕೇರಿ ಪೊಲೀಸ್ ಉಪಾಧೀಕ್ಷಕರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್.ಪ್ರದೀಪ್, ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸ್ಐ ಶ್ರೀ ಚೇತನ್, ಶ್ರೀ ಬೋಜಪ್ಪ ಹಾಗು ಸಿಬ್ಬಂದಿಗಳಾದ ತೀರ್ಥಕುಮಾರ್, ಕೆ.ಎ. ಇಬ್ರಾಹಿಂ, ಎ.ವಿ. ಕಿರಣ್, ಎ.ಯು. ಸತೀಶ್, ದಿನೇಶ್, ಶಿವರಾಜೇಗೌಡ, ಚಾಲಕರಾದ ಅರುಣ ಮತ್ತು ಸುನಿಲ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಈ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.
 ---------- 
 
ಜಿಲ್ಲೆಯಲ್ಲಿ ದಾಖಲುಗೊಂಡ  ಅಪರಾಧಗಳ ವಿವರ:
ಮಹಿಳೆ ಮೇಲೆ ಹಲ್ಲೆ:
 
         ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಹತ್ತಿರ ವಾಸವಾಗಿರುವ ಶ್ರೀಮತಿ ಹೇಮಾವತಿ ಎಂಬವರು ಆನಂದ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು ಜೀವನ ಸಾಗಿಸುತ್ತಿದ್ದು ದಿನಾಂಕ 8-11-2017 ರಂದು   ಆನಂದ ಹೇಮಾವತಿಯವರಿಂದ ಮದ್ಯಸೇವಿಸಲು ಹಣ ಕೇಳಿ ಹಣ ನೀಡದ ವಿಚಾರದಲ್ಲಿ ದಿನಾಂಕ 9-11-2018 ರಂದು ಜಗಳ ಮಾಡಿ ಹೇಮಾವತಿಯವರ ಮೇಲೆ ಕೈಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮನೆ ಕಳವು:

         ವಿರಾಜಪೇಟೆ ತಾಲೋಕು ಹೊಸಕೋಟೆ ಗ್ರಾಮದ ನಿವಾಸಿ ಅಮ್ಮಂಡ ಎಂ.ಅಯ್ಯಣ್ಣ ಎಂಬವರ ಮನೆಯಲ್ಲಿ ದಿನಾಂಕ 5-11-2017 ರಂದು ಯಾರೂ ಇಲ್ಲದೆ ಸಮಯದಲ್ಲಿ ಬಾಗಿಲನ್ನು ತೆರೆದು ಒಳ ನುಗ್ಗಿದ ಕಳ್ಳರು ಸುಮಾರು 48,000 ರೂ ಬೆಲೆಬಾಳುವ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಫಿರ್ಯಾದಿ ಅಮ್ಮಂಡ ಎಂ. ಅಯ್ಯಣ್ಣ ನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು  ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ ಇಬ್ಬರಿಗೆ ಗಾಯ:

     ಶನಿವಾರಸಂತೆ ಠಾಣೆ ಸರಹದ್ದಿನ ಕೂಗೂರು ಗ್ರಾಮದ ನಿವಾಸಿ ಸಿ.ರಂಜನ್ ಎಂಬವರು ದಿನಾಂಕ 11-11-2017 ರಂದು ತಮ್ಮ ಬಾಪ್ತು ಕಾರಿನಲ್ಲಿ ಶನಿವಾರಸಂತೆ ಕಡೆಯಿಂದ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿ.ರಂಜನ್ ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು ಮೋಟಾರ್ ಸೈಕಲ್ ಸವಾರ ಪರಮೇಶ ಹಾಗು ಹಿಂಬದಿ ಸವಾರ ನವೀನ್ ಎಂಬವರು ಗಾಯಗೊಂಡಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ಕೈಗೊಂಡಿದ್ದಾರೆ. 
 
ಅಕ್ರಮ ಮರಳು ಸಾಗಾಟ:
 
     ದಿನಾಂಕ 11-11-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ನಾಪೋಕ್ಲು ಠಾಣಾ ವ್ಯಾಪ್ತಿಯ  ಕುಯ್ಯಂಗೇರಿ ಕುಂಬಳದಾಳು ಗ್ರಾಮದಲ್ಲಿ  ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಾಪೋಕ್ಲು ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

Saturday, November 11, 2017

ಕಲ್ಲು ತೂರಾಟ, ಬಸ್‌ಗೆ ಹಾನಿ
                    ದಿನಾಂಕ 10/11/2017ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೊ ಚಾಲಕ ರಘು ಎಂಬವರು ಕೆಎ09-ಎಫ್-5205ರಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮಡಿಕೇರಿಯಿಂದ ಕಾಲೂರಿಗೆ ಹೋಗುತ್ತಿರುವಾಗ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕೆಲವು ಅಪರಿಚಿತರು ಬಸ್‌ನ ಗಾಜುಗಳಿಗೆ ಕಲ್ಲು ಎಸೆದು ಹಾನಿಯುಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅವಘಢ
                     ದಿನಾಂಕ 28/10/2017ರಂದು ಶನಿವಾರಸಂತೆ ಬಳಿಯ ಗುಡುಗಳಲೆ ನಿವಾಸಿ ಅಶೋಕ ಎಂಬವರ ಅಮಗ ಆಯುಷ್ ಎಂಬಾತನು ರಮೇಶ್‌ ಎಂಬವರೊಂದಿಗೆ ರಮೇಶ್‌ರವರಕೆಎ-12-ಎಲ್-2734ರ ಬೈಕಿನಲ್ಲಿ  ಕೊಡ್ಲಿಪೇಟೆಯ ಬಡಕನಹಳ್ಳಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಹೋಗುತ್ತಿರುವಾಗ ಚಾಲಕ ರಮೇಶ್ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಮದುವೆ ಮನೆಯ ಬಳಿ ಬೈಕು ಚಾಲಕ ರಮೇಶ್‌ರವರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಹಿಂಬದಿ ಸವಾರ ಆಯುಷ್‌ಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
                ದಿನಾಂಕ 10/11/2017ರಂದು ಕುಶಾಲನಗರದ ನಿವಾಸಿ ನಸ್ರುದ್ದೀನ್ ಎಂಬವರು ನಗರದ ನಾಲ್ಕನೇ ವಿಭಾಗದಲ್ಲಿರುವ ಅವರ ಅಂಗಡಿಯ ಮುಂದೆ ಸ್ಕೂಟರ್‌ ನಿಲ್ಲಿಸುವ ಸಲುವಾಗಿ ತೆರಳಿದಾಗ ಅಂಗಡಿಯ ಬಳಿ ಅಂದಾಜು 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 10/11/2017ರಂದು ಕುಶಾಲನಗರದ ಬೈಚನಹಳ್ಳಿ ನಿವಾಸಿ ಸೂರ್ಯಚಂದ್ರ ಎಂಬವರು ಬೈಕಿನಲ್ಲಿ ಅವರ ಮನೆಗೆ ಹೋಗುತ್ತಿರುವಾಗ ಕೀರ್ತಿ ಪ್ರಸಾದ್ ಎಂಬಾತನು ಆತನ ಸ್ಕೂಟರನ್ನು ತಂದು ಸೂರ್ಯಚಂದ್ರರವರ ಬೈಕಿಗೆ ಅಡ್ಡ ನಿಲ್ಲಿಸಿದುದನ್ನು ಪ್ರಶ್ನಿಸಿದ ಕಾರಣಕ್ಕೆ ಕೀರ್ತಿ ಪ್ರಸಾದ್‌ ಮತ್ತು ಆತನ ಜೊತೆಯಲ್ಲಿದ್ದ ಕಿರಣ್‌ ಎಂಬವರು ಸೂರ್ಯಚಂದ್ರವರ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಬಂದ ಶ್ರೀಕಾಂತ್ ಎಂಬವರ ಮೇಲೆಯೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, November 10, 2017

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
                           ದಿನಾಂಕ 09/11/2017ರಂದು ಸಿದ್ದಾಪುರ ಬಳಿಯ ಮಾಲ್ದಾರೆ ನಿವಾಸಿ ಪಂಜರಿ ಎರವರ ಅಯ್ಯಪ್ಪ ಎಂಬಾತನು ಆತನ ಮನೆಯಿಂದ ಸ್ವಲ್ಪ ದೂರವಿರುವ ಕೆರೆಗೆ ಕಯಕಾಲು ತೊಳೆಯಲೆಂದು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ಅಯ್ಯಪ್ಪನು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು ಕಾಲು ತೊಳೆಯುತ್ತಿದ್ದ ಸಂದರ್ಭ ಕಾಯಿಲೆ ಕಾಣಿಸಿಕೊಂಡು ಕೆರೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್ ಅಫಘಾತ
                  ದಿನಾಂಕ 09/11/2017ರಂದು ಸೋಮವಾರಪೇಟೆ ಬಳಿಯ ಕಿರಗಂದೂರು ನಿವಾಸಿ ಎಸದದ.ಹೆಚ್.ಸಂತೋಷ್ ಎಂಬವರು ಅಯ್ಯಪ್ಪ ಎಂಬವರೊಡನೆ ಸ್ಕೂಟರಿನಲ್ಲಿ ಸೋಮವಾರಪೇಟೆಯಿಂದ ಅವರ ಮನೆಗೆ ಹೋಗುತ್ತಿರುವಾಗ ಸ್ಕೂಟರ್ ಚಾಲಕ ಅಯ್ಯಪ್ಪ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಸೋಮವಾರಪೇಟೆ ನಗರದ ಪ್ರವಾಸಿ ಮಂದಿರದ ಕಾಂಪೌಂಡ್‌ಗೆ ಡಿಕ್ಕಿಪಡಿಸಿದ ಪರಿಣಾಮ ಹಿಂಬದಿಯಲ್ಲಿದ್ದ ಸಂತೋಷ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ಚಾಲಕನಿಗೆ ಹಲ್ಲೆ
ದಿನಾಂಕ 09/11/2017ರಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಮೈಸೂರು ಗ್ರಾಮಾಂತರ ವಿಭಾಗದ ಕೆಎ-09- ಎಫ್-3809ರ ಬಸ್ಸಿನಲ್ಲಿ ನಿರ್ವಾಹಕರಾಗಿರುವ ಚೇತನ್ ಶರ್ಮ ಎಂಬವರು ಕುಟ್ಟ ಬಸ್ ನಿಲ್ದಾಣದಿಂದ ಜನರನ್ನು ತುಂಬಿಸಿಕೊಂಡು ಮೇಲಿನ ಬಸ್‌ ನಿಲ್ದಾಣಕ್ಕೆ ಹೋಗುವಾಗ ಕೆಎ-14-9089ರ ಖಾಸಗಿ ಬಸ್ಸನ್ನು ಅದರ ಚಾಲಕ ಏಕಾ ಏಕಿ ತಂದು ಚೇತನ್ ಶರ್ಮರ ಬಸ್ಸಿನ ಮುಂಭಾಗ ನಿಲ್ಲಿಸಿದ್ದು ಅದನ್ನು ಪ್ರಶ್ನಿಸಿದ ಚೇತನ್‌ ಶರ್ಮರವರ ಮೇಲೆ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಬ್ಬರೂ ಸೇರಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                  ದಿನಾಂಕ 08/11/2017ರಂದು ಕುಶಾಲನಗರದ ಮಾದಾಪಟ್ನದ ಬಳಿಯಿರುವ ಅತಿಥಿ ಹೋಟೆಲಿನ ಉದ್ಯೋಗಿ ದೇವಯ್ಯ ಎಂಬವರು ಕೆಲಸ ಮುಗಿಸಿ ಮನೆಗೆ ಹೋಗಲು ಹೋಟೆಲಿನ ಮುಂಭಾಗದಲ್ಲಿ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ಅರುಣ, ಪ್ರದೀಪ ಮತ್ತು ಜನ್ನಿ ಎಂಬವರು ಹಳೆ ವೈಷಮ್ಯದಿಂದ ದೇವಯ್ಯನವರ ಮೇಲೆ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Thursday, November 9, 2017

ದೇಗುಲ ಕಳವು
                             ದಿನಾಂಕ 07/11/2017ರಂದು ರಾತ್ರಿ ವೇಳೆ ಕೊಡ್ಲಿಪೇಟೆಯ ಗಣಪತಿ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ದೇಗುಲದ ಹುಂಡಿಯಲ್ಲಿದ್ದ ರೂ.5,000/-ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಲಕನಿಗೆ ಕಾರು ಡಿಕ್ಕಿ
                             ದಿನಾಂಕ 07/11/2017ರಂದು ಕುಶಾಲನಗರ ಬಳಿಯ ಸಿದ್ದಲಿಂಗಪುರ ನಿವಾಸಿ ವಿನಯ್ ಕುಮಾರ್ ಎಂಬವರ ಮಗ ಕುಶಾಲಪ್ಪ ಎಂಬಾತನು ಸಿದ್ದಲಿಂಗಪುರದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-05-ಎಂಇ-4157ರ ಕಾರನ್ನು ಅದರ ಚಾಲಕ ಜನಾರ್ಧನ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಶಾಲಪ್ಪನಿಗೆ ಡಿಕ್ಕಿಪಡಿಸಿದ ಪರಿಣಾಮ ಕುಶಾಲಪ್ಪನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                           ದಿನಾಂಕ 08/11/2017ರಂದು ವಿರಾಜಪೇಟೆ ನಿವಾಸಿ ಸಿ.ಎಸ್.ಅಂತೋಣಿ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಜೆಡ್-9389ರಲ್ಲಿ ಮಡಿಕೇರಿಯಿಂದ ವಿರಾಜಪೇಟೆಗೆ ಹೋಗುತ್ತಿರುವಾಗ ಕಗ್ಗೋಡ್ಲು ಬಳಿ ಎದುರುಗಡೆಯಿಂದ ಕೆಎ-03-ಸಿ-0023ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಂತೋಣಿಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ  ಕಾರುಗಳು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, November 8, 2017


ಟಿಪ್ಪು ಜಯಂತಿ ಸಂಬಂಧ ಬಂದೋಬಸ್ತ್:

     ದಿನಾಂಕ 10-11-2017 ರಂದು ರಾಜ್ಯ ಸರಕಾರದ  ವತಿಯಿಂದ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯು ಮತೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾದ ಕಾರಣ ಆ ದಿನ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯಕೈಗೊಂಡಿದ್ದು, ವಿವರಗಳು ಈ ಕೆಳಕಂಡಂತಿದೆ.
ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ ಪೋಸ್ಟ್ ಗಳು  ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ  ಒಟ್ಟು 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಬರುವಂತಹ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ 60 ಆಂತರಿಕ ವಿಶೇಷ ಚೆಕ್ ಪೋಸ್ಟ್ ಗಳು ಪೊಲೀಸ್ ಠಾಣಾ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ.

     ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಗಳಲ್ಲಿ ಒಟ್ಟು 249 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ.

     ಕೊಡಗು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿದೆಡೆಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಿಸಲಾಗಿದ್ದು, 01 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08 ಡಿವೈಎಸ್ಪಿ, 23 ಪೊಲೀಸ್ ಇನ್ಸ್ಪೆಕ್ಟರ್, 68 ಸಬ್ ಇನ್ಸ್ಪೆಕ್ಟರ್, 113 ಎಎಸ್ಐ, 1500 ಹೆಚ್.ಸಿ/ಪಿ.ಸಿ/ಮಹೆಚ್ ಸಿ/ಮಪಿಸಿ, 27 ಡಿಎಆರ್ ತುಕಡಿಗಳು, 15 ಕೆ.ಎಸ್.ಆರ್.ಪಿ ತುಕಡಿಗಳು, ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪೆನಿ ಒಳಗೊಂಡಿರುತ್ತದೆ.

     100 ವಾಹನಗಳನ್ನು ದಿನದ 24 ಗಂಟೆ ಗಸ್ತಿಗೆ ನೇಮಿಸಲಾಗಿರುತ್ತದೆ. ಇದಲ್ಲದೇ ಅರಣ್ಯ ಇಲಾಖೆಯ ವತಿಯಿಂದ 14 ರಾ ಪಿಡ್ ರೆಸ್ಪಾನ್ಸ್ ತಂಡವನ್ನು ಹಾಗೂ 75 ಸಿಬ್ಬಂದಿಗಳನ್ನು ಪೊಲೀಸರೊಂದಿಗೆ ಸಹಕರಿಸಲು ನಿಯೋಜಿಸಲಾಗಿರುತ್ತದೆ.
    ಕಂದಾಯ ಇಲಾಖೆಯ ವತಿಯಿಂದ 16 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರನ್ನು ಎಲ್ಲಾ ಹೋಬಳಿ ಕೇಂದ್ರಗಳಿಗೆ ನಿಯೋಜಿಸಲಾಗಿರುತ್ತದೆ.
                                                                       ------        ----      ------
 
 
ಜಿಲ್ಲೆಯಲ್ಲಿ ದಾಖಲುಗೊಂಡ ಪ್ರಕರಣಗಳ ವಿವರ:

ಪಾದಚಾರಿಗೆ ಬಸ್ಸು ಡಿಕ್ಕಿ:

     ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡ್ಲು ಗ್ರಾಮದ ನಿವಾಸಿ ಸಿ.ಕೆ. ಸರೋಜಮ್ಮ ಎಂಬವರು ದಿನಾಂಕ 07-11-2017 ರಂದು ಸಮಯ 15.15 ಗಂಟೆಗೆ ಸೋಮವಾರಪೇಟೆ ನಗರಗದ ವಿವೇಕಾನಂದ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ರಾಘವೇಂದ್ರ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಸರೋಜಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಬಿದ್ದು ಬಸ್ಸಿನ ಮುಂದಿನ ಚಕ್ರ ಅವರ ಬಲ ಕಾಲಿನ ಪಾದದ ಮೇಲೆ ಹರಿದು ಗಾಯವಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

    ಸೋಮವಾರಪೇಟೆ ತಾಲೋಕು ಗಣಗೂರು ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರ ಮಗ ಸದೀಪ್ ಕುಮಾರ್ ಎಂಬವರು ದಿನಾಂಕ 04.11.2017 ರಂದು ಸಮಯ ಸಂಜೆ 7:30 ಗಂಟೆಗೆ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದ್ದು, ಸದರಿಯವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07.11.2017 ರಂದು ಸದರಿಯವರು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಕುತ್ತಿಗೆಯಿಂದ ತಾಳಿ ಚೈನು ಕಳವು:

     ರಥೋತ್ಸವ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗಿಯಾದ ಮಹಿಳೆಯೊಬ್ಬರ ಕುತ್ತಿಗೆಯಿಂದ ಕಳ್ಳರು ತಾಳಿಚೈನನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ದೊಡ್ಡವರೆ ಗ್ರಾಮದ ನಿವಾಸಿ ಶ್ರೀಮತಿ ಶೋಭ ಎಂಬವರು ದಿನಾಂಕ 7-11-2017 ರಂದು ಕುಶಾಲನಗರದ ಆಂಜನೇಯ ದೇವಾಲಯದ ಬಳಿ ನಿಂತಿದ್ದ ದೇವರ ರಥಕ್ಕೆ ಜನರ ಮದ್ಯದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ತಾಳಿ ಚೈನನ್ನು ಯಾರೋ ಕಳ್ಳರು ಕಳವುಮಾಡಿ ಕೊಂಡುಹೋಗಿದ್ದು ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕಳವು:

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಂಬಟ್ಟಿ ಬಾಳುಗೋಡು ಗ್ರಾಮದ ನಿವಾಸಿ ಟಿ. ಪ್ರಮೋದನ್ ಎಂಬವರು ದಿನಾಂಕ 6-11-2017 ರಂದು ತನ್ನ ಸಂಸಾರದೊಂದಿಗೆ ತಮ್ಮ ಸ್ವಂತ ಊರಾದ ಕೇರಳದ ತಲಚೇರಿಗೆ ಹೋಗಿದ್ದು ದಿನಾಂಕ 6-11-2017 ಮತ್ತು 7-11-2017 ನಡುವಿನ ಸಮಯದಲ್ಲಿ ಯಾರೋ ಆವರ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲನ್ನು ಒಡೆದು ಮನೆಯ ಒಳಗೆ ನುಗ್ಗಿ ನಗದು ಹಣ ರೂ.8,000 ಮತ್ತು 6,000 ರೂ ಬೆಲೆಯ ಚಿನ್ನದ ಓಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
     ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಕೆ.ಆರ್. ಟೀ ಎಸ್ಟೇಟ್ ನಲ್ಲಿ ಹರಿಯುತ್ತಿರುವ ಕೆ.ಕೆ.ಆರ್. ಹೊಳೆಯಲ್ಲಿ ದಿನಾಂಕ 7-11-2017 ರಂದು ಒಬ್ಬ ಅಪರಿಚಿತ ವ್ಯಕ್ತಿಯ ಮೃತಹೇಹವು ಪತ್ತೆಯಾಗಿದ್ದು, ಈ ಸಂಬಂಧ ಕೆ.ಕೆ.ಆರ್. ಟೀ ಎಸ್ಟೇಟ್ ನಲ್ಲಿ ಫೀಲ್ಡ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಿ.ಎಸ್. ಲೋಹಿತ್ ಎಂಬವರು ನೀಡಿದ ದೂರಿನ ಮೇರೆಗೆ ಶ್ರೀಮಂತಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

 

Tuesday, November 7, 2017

ದರೋಡೆಗೆ  ಹೊಂಚು ಹಾಕುತ್ತಿದ್ದ ತಂಡದ ಬಂಧನ.
                          ದಿನಾಂಕ 05/11/2017ರಂದು ಸೋಮವಾರಪೇಟೆ ಠಾಣೆಯ ಪಿಎಸ್‌ಐ ಎಂ.ಶಿವಣ್ಣರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಕೆಲವು ವ್ಯಕ್ತಿಗಳು ಮಾರಕಾಯುಧಗಳೊಂದಿಗೆ ದರೋಡೆ ಮಾಡಲು  ಹೊಂಚು ಹಾಕುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ರಾತ್ರಿ 12:00 ಗಮಟೆಯ ವೇಳೆಗೆ ಕೋವರ್‌ಕೊಲ್ಲಿ ಬಳಿ ತೆರಳಿದಾಗ ಕೋವರ್‌ಕೊಲ್ಲಿಯ ಬಸ್ ತಂಗುದಾಣದ ಬಳಿ ಎರಡು ಕಾರುಗಳು ನಿಂತಿದ್ದು ಪೊಲೀಸ್‌ ವಾಹನ ಕಂಡು ಕಾರುಗಳಿಂದ ಇಳಿದು ಓಡಲು ತೊಡಗಿದಾಗ ಪೊಲೀಸ್‌ ಸಿಬ್ಬಂದಿಗಳು ಸುತ್ತುವರೆದು ಅವರಲ್ಲಿ 8 ಜನರನ್ನು ಹಿಡಿದು ವಿಚಾರಿಸಿದಾಗ ಮಧ್ಯ ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ತಡೆದು ದರೋಡೆ ಮಾಡುವ ಸಲುವಾಗಿ ಹೊಂಚು ಹಾಕುತ್ತಿರುವುದಾಗಿ ತಿಳಿದು ಬಂದಿದ್ದು ಕಾರುಗಳನ್ನು ಪರಿಶೀಲಿಸಿದಾಗ ಕಾರುಗಳಲ್ಲಿ ಕತ್ತಿ, ಖಾಲಿ ಬಿಯರ್ ಬಾಟಲಿಗಳು, ಕಬ್ಬಿಣದ ರಾಡ್‌ಗಳು, ಹಾಕಿ ಸ್ಟಿಕ್ ಮತ್ತು ಮರದ ತುಂಡುಗಳು ಕಂಡು ಬಂದಿರುವುದಾಗಿದೆ. ಎಲ್ಲಾ ಮಾರಕಾಯುಧಗಳು ಮತ್ತು ಕೆಎ-12-ಎನ್-4165ರ ಆಲ್ಟೋ ಕಾರು ಹಾಗೂ ಕೆಎ-51-ಎಂಜಿ-3007ರ ಮಿಟ್ಸುಬಿಷಿ ಪಜೆರೋ ಕಾರನ್ನು ವಶಪಡಿಸಿಕೊಂಡ ಪೊಲೀಸರು ವಶಕ್ಕೆ ಪಡೆದುಕೊಂಡ 7ನೇ ಹೊಸಕೋಟೆ ನಿವಾಸಿಗಳಾದ ಅಭಿಲಾಷ್, ಚರಣ್, ಸಚಿನ್, ರಾಜೆಶ್, ಸುಜಿ, ಯಡವಾರೆ ಗ್ರಾಮದ ಯೋಗೇಶ್, ಮಾದಾಪುರದ ಅನಿಲ್ ಕುಶಾಲನಗರದ ಸುಮೀರ್‌ ಎಂಬವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಓಡಿ ಹೋದ ಉಳಿದ ನಾಲ್ವರ ಪತ್ತೆಗೆ  ತನಿಖೆ ಕೈಗೊಂಡಿದ್ದಾರೆ.

Monday, November 6, 2017

ರಸ್ತೆ ಅಪಘಾತ, ಗಾಯಾಳು ಸಾವು
                          ದಿನಾಂಕ 23/10/2017ರಂದು ಕುಶಾಲನಗರ ಬಳಿಯ ಕೂಡು ಮಂಗಳೂರು ರಸ್ತೆಯಲ್ಲಿ ಭಾಸ್ಕರ್ ಎಂಬ ವ್ಯಕ್ತಿಗೆ ರಿಕ್ಷಾವೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಭಾಸ್ಕರ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ದಿನಾಂಕ 05/11/2017ರಂದು ಗಾಯಾಳು ಭಾಸ್ಕರ್ ಆಸ್ಪತ್ರೆಯಲ್ಲಿ ಮೃತನಾಗಿದ್ದು ಕುಶಾಲನಗರ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ, ವ್ಯಕ್ತಿ ಸಾವು
                      ದಿನಾಂಕ 05/11/2017ರಂದು ಕುಶಾಲನಗರದ ಹಳೆ ಕೂಡಿಗೆ ಬಳಿ ಕೇರಳದ ಕಣ್ಣೂರು ನಿವಾಸಿ ಅಬೂಬಕರ್ ಎಂಬವರು ಕೆಎಲ್-58-ಎನ್-8511ರ ಲಾರಿಯಲ್ಲಿ ಕೆಸದ ಗೆಡ್ಡೆ ಮತ್ತು ಸಿಹಿ ಗೆಣಸನ್ನು ತುಂಬಿಕೊಂಡು ಹೋಗುತ್ತಿರುವಾಗ ಅಬೂಬಕರ್‌ರವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಎದುರುಗಡೆಯಿಂದ ಬರುತ್ತಿದ್ದ ಕೆಎ-18-ಎ-7153ರ ಟಾಟಾ ಏಸ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅಬೂಬಕರ್‌ರವರು ತೀವ್ರವಾಗಿ ಗಾಯಗೊಂಡು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಗೆ ಲಾರಿ ಡಿಕ್ಕಿ
                          ದಿನಾಂಕ 03/11/2017ರಂದು ಕುಶಾಲನಗರ ಬಳಿಯ ಕೂಡು ಮಂಗಳೂರು ನಿವಾಸಿ ಗುರು ದರ್ಶನ್ ಎಂಬವರ ತಾಯಿ ಕೂಡು ಮಂಗಳೂರಿನಲ್ಲಿ ಅಂಗಡಿಗೆ ಹೋಗಿ ಮನೆಗೆ ಮರಳಿ ಹೋಗುತ್ತಿರುವಾಗ ಕೆಎ-12-2415ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗುರುದರ್ಶನ್‌ರವರ ತಾಯಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ತಾಯಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿ ಮಗುಚಿ ಅಫಘಾತ 
                      ದಿನಾಂಕ 05/11/2017ರಂದು ಅಶ್ವಥಯ್ಯ ಎಂಬವರು ತುಮಕೂರಿನ ಚಂದ್ರಶೇಖರ್‌ ಎಂಬವರಿಗೆ ಸೇರಿದ ಕೆಎ-52-ಎ-2334ರ ಲಾರಿಯಲ್ಲಿ ಚಾಲಕನಾಗಿ ಕುಶಾಲನಗರದಿಂದ ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ಬಳಿಯ ಜೋಡುಪಾಲ ಎಂಬಲ್ಲಿ ಅಶ್ವಥಯ್ಯನವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿಕೊಂಡ ಪರಿಣಾಮ ಲಾರಿ ಸಂಪೂರ್ಣವಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                        ದಿನಾಂಕ 05/11/2017ರಂದು ಕಾರುಗುಂದ ನಿವಾಸಿ ರಮೇಶ್ ಎಂಬವರು ಸಂಜೆ ಗೆಳೆಯರೊಂದಿಗೆ ಕ್ರಿಕೆಟ್ ಆಟ ಆಡುತ್ತಿದ್ದಾಗ ಅಲ್ಲಿಗೆ ಬಂದ ಅಜ್ಜೇಟಿರ ಸುಬ್ಬಯ್ಯ ಎಂಬವರು ವಿನಾ ಕಾರಣ ರಮೇಶ್‌ರವರ ಮೇಲೆ ಹಲ್ಲೆ ಮಾಡಿ ರಮೇಶ್‌ರವರ ತಮ್ಮನಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 5, 2017


ಕೊಡಗು ಜಿಲ್ಲೆಗೆ ದಕ್ಷಿಣ ವಲಯದ ಐ.ಜಿ.ಪಿ ಭೇಟಿ.
      ದಿನಾಂಕ 10-11-2017 ರಂದು ಸರಕಾರದ ವತಿಯಿಂದ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯು ಮತೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾದ ಕಾರಣ ಆ ದಿನ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯಕೈಗೊಂಡಿದ್ದು, ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ ಪೋಸ್ಟ್ ಗಳಿಗೆ ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಂಬಂಧಪಟ್ಟಂತಹ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸೂಚನೆಗಳನ್ನು ನೀಡಿರುತ್ತಾರೆ.

     ಟಿಪ್ಪು ಜಯಂತಿಯ ಸಂದರ್ಭ ಪೊಲೀಸ್ ಬಂದೋಬಸ್ತ್ ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ದಕ್ಷಿಣ ವಲಯದ ಐಜಿಪಿ ರವರು ಇಂದು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಕೊಡಗು ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿ ಟಿಪ್ಪು ಜಯಂತಿ ಆಚರಣೆಯು ಸರಕಾರಿ ಕಾರ್ಯಕ್ರಮವಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡುವ ಹಾಗೂ ಶಾಂತಿ ಸುವ್ಯವಸ್ಥೆಗೆ ದಕ್ಕೆಯುಂಟು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
                                                                                             ----
       
ನೀರಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

      ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೋರ್ವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗ್ರಾಮದ ನಿವಾಸಿ ಶ್ರೀಮತಿ ಮುತ್ತಮ್ಮ ಎಂಬುವರ ಪತಿ ತಿಮ್ಮಯ್ಯ ಎಂಬವರು ದಿನಾಂಕ 03/11/2017 ರಂದು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಪತ್ನಿ ಶ್ರೀಮತಿ ಮುತ್ತಮ್ಮನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

      ದಿನಾಂಕ 04-11-2017 ರಂದು ಸಮಯ 17:00 ಗಂಟೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೆ.ನಿಡುಗಣೆ ಪಂಚಾಯಿತಿ ಕಚೇರಿಯ ಹತ್ತಿದರದಲ್ಲಿ ಫಿರ್ಯಾದಿ ಸೋಮಯ್ಯ .ಸಿ.ಜಿ. ಎಂಬವರು ತಮ್ಮ ತಂಗಿಯ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಹೋಗುತ್ತಿದ್ದಾಗ, ಮಡಿಕೇರಿ ಭಗವತಿ ನಗರದ ನಿವಾಸಿ ಸುಜಿತ್ ಎಂಬವರು ಅವರ ದಾರಿ ತಡೆದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಸ್ಕೂಟರ್ ಡಿಕ್ಕಿ:

     ದಿನಾಂಕ 04-11-2017 ರಂದು ಮಡಿಕೇರಿ ನಗರ ನಿವಾಸಿ ಸಿ.ಎಸ್. ನಾಚಪ್ಪ ಎಂಬವರು ತಮ್ಮ ಕಾರು ನಂಬರ್ KA-05-ML-1065 ರಲ್ಲಿ ಯೋಗೇಶ್ ರವರೊಂದಿಗೆ ಮಡಿಕೇರಿಯಿಂದ ತನ್ನ ಪತ್ನಿಯ ಮನೆ ನೀರುಕೊಲ್ಲಿಗೆ ಹೋಗುತ್ತಿರುವಾಗ ಕಲ್ಲುಕೋರೆಯ ದೇವಸ್ಥಾನದ ಬಳಿ ಸಮಯ 5.45 ಪಿ.ಎಂ ಗೆ ಎದುರಿನಿಂದ KA-12-J-7839 ರ ಸ್ಕೂಟರ್ ಅನ್ನು ಅದರ ಚಾಲಕಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಿ.ಎಸ್. ನಾಚಪ್ಪರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಸ್ಕೂಟರ್ ಜಖಂಗೊಂಡು ಸ್ಕೂಟರ್ ನ ಚಾಲಕಿರವರಿಗೆ ಪೆಟ್ಟಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ದಿನಾಂಕ 04-11-17 ರಂದು ಕುಶಾಲನಗರದ ಕುವೆಂಪು ಬಡಾವಣೆ ನಿವಾಸಿ ಕುಶಾಲಪ್ಪ ಎಂಬವರು ಕೂಡಿಗೆ ಸಂತೆಯಿಂದ ತರಕಾರಿ ತೆಗೆದುಕೊಂಡು ಬರಲೆಂದು ಕುಶಾಲನಗರದಿಂದ ಕೆ ಎ 12 ಬಿ 5261 ರ ಆಟೋರಿಕ್ಷಾದಲ್ಲಿ ಕೂಡಿಗೆ ಕಡೆಗೆ ಹೋಗುತ್ತಿದ್ದಾಗ ಇಂಡಸ್ಟ್ರಿಯಲ್ ಏರಿಯಾ ಬಳಿ ಇರುವ ಪೆಟ್ರೋಲ್ ಬಂಕ್ ಹತ್ತಿರ ತಲುಪಿದಾಗ ಸಮಯ 03;30 ಪಿ ಎಂಗೆ ಕೆ ಎ 04 ಎಂ ಪಿ 6421 ಆಲ್ಟೋ ಕಾರನ್ನು ಅದರ ಚಾಲಕ ಹನಿಫ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದ ಕುಶಾಲಪ್ಪ ರವರು ಗಾಯಗೊಂಡಿದ್ದು ಅಲ್ಲದೆ ಆಟೋ ರಿಕ್ಷಾ ಚಾಲಕನೂ ಸಹ ಗಾಯಗೊಂಡಿದ್ದು ಈ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.