Wednesday, November 8, 2017


ಟಿಪ್ಪು ಜಯಂತಿ ಸಂಬಂಧ ಬಂದೋಬಸ್ತ್:

     ದಿನಾಂಕ 10-11-2017 ರಂದು ರಾಜ್ಯ ಸರಕಾರದ  ವತಿಯಿಂದ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯು ಮತೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾದ ಕಾರಣ ಆ ದಿನ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯಕೈಗೊಂಡಿದ್ದು, ವಿವರಗಳು ಈ ಕೆಳಕಂಡಂತಿದೆ.
ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ ಪೋಸ್ಟ್ ಗಳು  ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ  ಒಟ್ಟು 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಬರುವಂತಹ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ 60 ಆಂತರಿಕ ವಿಶೇಷ ಚೆಕ್ ಪೋಸ್ಟ್ ಗಳು ಪೊಲೀಸ್ ಠಾಣಾ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ.

     ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಗಳಲ್ಲಿ ಒಟ್ಟು 249 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ.

     ಕೊಡಗು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿದೆಡೆಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಿಸಲಾಗಿದ್ದು, 01 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08 ಡಿವೈಎಸ್ಪಿ, 23 ಪೊಲೀಸ್ ಇನ್ಸ್ಪೆಕ್ಟರ್, 68 ಸಬ್ ಇನ್ಸ್ಪೆಕ್ಟರ್, 113 ಎಎಸ್ಐ, 1500 ಹೆಚ್.ಸಿ/ಪಿ.ಸಿ/ಮಹೆಚ್ ಸಿ/ಮಪಿಸಿ, 27 ಡಿಎಆರ್ ತುಕಡಿಗಳು, 15 ಕೆ.ಎಸ್.ಆರ್.ಪಿ ತುಕಡಿಗಳು, ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪೆನಿ ಒಳಗೊಂಡಿರುತ್ತದೆ.

     100 ವಾಹನಗಳನ್ನು ದಿನದ 24 ಗಂಟೆ ಗಸ್ತಿಗೆ ನೇಮಿಸಲಾಗಿರುತ್ತದೆ. ಇದಲ್ಲದೇ ಅರಣ್ಯ ಇಲಾಖೆಯ ವತಿಯಿಂದ 14 ರಾ ಪಿಡ್ ರೆಸ್ಪಾನ್ಸ್ ತಂಡವನ್ನು ಹಾಗೂ 75 ಸಿಬ್ಬಂದಿಗಳನ್ನು ಪೊಲೀಸರೊಂದಿಗೆ ಸಹಕರಿಸಲು ನಿಯೋಜಿಸಲಾಗಿರುತ್ತದೆ.
    ಕಂದಾಯ ಇಲಾಖೆಯ ವತಿಯಿಂದ 16 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರನ್ನು ಎಲ್ಲಾ ಹೋಬಳಿ ಕೇಂದ್ರಗಳಿಗೆ ನಿಯೋಜಿಸಲಾಗಿರುತ್ತದೆ.
                                                                       ------        ----      ------
 
 
ಜಿಲ್ಲೆಯಲ್ಲಿ ದಾಖಲುಗೊಂಡ ಪ್ರಕರಣಗಳ ವಿವರ:

ಪಾದಚಾರಿಗೆ ಬಸ್ಸು ಡಿಕ್ಕಿ:

     ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡ್ಲು ಗ್ರಾಮದ ನಿವಾಸಿ ಸಿ.ಕೆ. ಸರೋಜಮ್ಮ ಎಂಬವರು ದಿನಾಂಕ 07-11-2017 ರಂದು ಸಮಯ 15.15 ಗಂಟೆಗೆ ಸೋಮವಾರಪೇಟೆ ನಗರಗದ ವಿವೇಕಾನಂದ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ರಾಘವೇಂದ್ರ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಸರೋಜಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಬಿದ್ದು ಬಸ್ಸಿನ ಮುಂದಿನ ಚಕ್ರ ಅವರ ಬಲ ಕಾಲಿನ ಪಾದದ ಮೇಲೆ ಹರಿದು ಗಾಯವಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

    ಸೋಮವಾರಪೇಟೆ ತಾಲೋಕು ಗಣಗೂರು ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರ ಮಗ ಸದೀಪ್ ಕುಮಾರ್ ಎಂಬವರು ದಿನಾಂಕ 04.11.2017 ರಂದು ಸಮಯ ಸಂಜೆ 7:30 ಗಂಟೆಗೆ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದ್ದು, ಸದರಿಯವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07.11.2017 ರಂದು ಸದರಿಯವರು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಕುತ್ತಿಗೆಯಿಂದ ತಾಳಿ ಚೈನು ಕಳವು:

     ರಥೋತ್ಸವ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗಿಯಾದ ಮಹಿಳೆಯೊಬ್ಬರ ಕುತ್ತಿಗೆಯಿಂದ ಕಳ್ಳರು ತಾಳಿಚೈನನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ದೊಡ್ಡವರೆ ಗ್ರಾಮದ ನಿವಾಸಿ ಶ್ರೀಮತಿ ಶೋಭ ಎಂಬವರು ದಿನಾಂಕ 7-11-2017 ರಂದು ಕುಶಾಲನಗರದ ಆಂಜನೇಯ ದೇವಾಲಯದ ಬಳಿ ನಿಂತಿದ್ದ ದೇವರ ರಥಕ್ಕೆ ಜನರ ಮದ್ಯದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ತಾಳಿ ಚೈನನ್ನು ಯಾರೋ ಕಳ್ಳರು ಕಳವುಮಾಡಿ ಕೊಂಡುಹೋಗಿದ್ದು ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕಳವು:

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಂಬಟ್ಟಿ ಬಾಳುಗೋಡು ಗ್ರಾಮದ ನಿವಾಸಿ ಟಿ. ಪ್ರಮೋದನ್ ಎಂಬವರು ದಿನಾಂಕ 6-11-2017 ರಂದು ತನ್ನ ಸಂಸಾರದೊಂದಿಗೆ ತಮ್ಮ ಸ್ವಂತ ಊರಾದ ಕೇರಳದ ತಲಚೇರಿಗೆ ಹೋಗಿದ್ದು ದಿನಾಂಕ 6-11-2017 ಮತ್ತು 7-11-2017 ನಡುವಿನ ಸಮಯದಲ್ಲಿ ಯಾರೋ ಆವರ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲನ್ನು ಒಡೆದು ಮನೆಯ ಒಳಗೆ ನುಗ್ಗಿ ನಗದು ಹಣ ರೂ.8,000 ಮತ್ತು 6,000 ರೂ ಬೆಲೆಯ ಚಿನ್ನದ ಓಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
     ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಕೆ.ಆರ್. ಟೀ ಎಸ್ಟೇಟ್ ನಲ್ಲಿ ಹರಿಯುತ್ತಿರುವ ಕೆ.ಕೆ.ಆರ್. ಹೊಳೆಯಲ್ಲಿ ದಿನಾಂಕ 7-11-2017 ರಂದು ಒಬ್ಬ ಅಪರಿಚಿತ ವ್ಯಕ್ತಿಯ ಮೃತಹೇಹವು ಪತ್ತೆಯಾಗಿದ್ದು, ಈ ಸಂಬಂಧ ಕೆ.ಕೆ.ಆರ್. ಟೀ ಎಸ್ಟೇಟ್ ನಲ್ಲಿ ಫೀಲ್ಡ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಿ.ಎಸ್. ಲೋಹಿತ್ ಎಂಬವರು ನೀಡಿದ ದೂರಿನ ಮೇರೆಗೆ ಶ್ರೀಮಂತಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.