Monday, November 13, 2017

ಪಾದಚಾರಿಗಳಿಗೆ ಬೈಕ್ ಡಿಕ್ಕಿ:

     ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕು ಪದವನಳ್ಳಿ ಗ್ರಾಮದ ನಿವಾಸಿ ಜಯಬೋವಿ ಎಂಬವರು ದಿನಾಂಕ 12-11-2017 ರಂದು ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಅವರ ತಂಗಿ ಕವಿತ ಮತ್ತು ವೆಂಕಟೇಶರವರ ಮಗ ಸುಪ್ರೀತ್ ಎಂಬವರುಗಳು ರಾತ್ರಿ 8-15 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಎ.12-ಕೆ-8818 ರ ಮೋಟಾರ್ ಸೈಕಲ್ ಸವಾರ ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಕವಿತ ಮತ್ತು ಸುಪ್ರೀತ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೈಕ್ ಡಿಕ್ಕಿ:

      ದಿನಾಂಕ 12-11-2017 ರಂದು ಮಡಿಕೇರಿ ತಾಲೋಕು ಕೊಟ್ಟಮುಡಿ ಗ್ರಾಮದ ನಿವಾಸಿ ಪಿ.ಎಂ. ಅಹಮ್ಮದ್ ಎಂಬವರು ತಮ್ಮ ಬಾಪ್ತು ರಿಡ್ಜ್ ಕಾರನ್ನು ನಾಪೋಕ್ಲು ನಗರದ ಬೇತು ರಸ್ತೆಯಲ್ಲಿ ನಿಲ್ಲಿಸಿದ್ದು, ನಾಪೋಕ್ಲು ಬಸ್ ನಿಲ್ದಾಣದ ಕಡೆಯಿಂದ ಬಂದ ಮೋಟಾರ್ ಸೈಕಲನ್ನು ಸವಾರ ಶಾಫಿ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಿಲ್ಲಿಸಿದ್ದ ಪಿ.ಎಂ. ಅಹಮ್ಮದ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಾನಿಗೆ ಕಾರು ಡಿಕ್ಕಿ:

     ಮಡಿಕೇರಿ ತಾಲೋಕು ಮೂರ್ನಾಡು ನಿವಾಸಿ ಕೆ.ಯು. ಹಸೈನಾರ್ ಎಂಬವರು ಪತ್ನಿ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ದಿನಾಂಕ 12-11-2017 ರಂದು ಸಿದ್ದಾಪುರ ಕಡೆಯಿಂದ ಅಮ್ಮತ್ತಿ ಮೂಲಕ ಮೂರ್ನಾಡು ಕಡೆಗೆ ತಮ್ಮ ಬಾಪ್ತು ಮಾರುತಿ ವ್ಯಾನಿನಲ್ಲಿ ಬರುತ್ತಿರುವಾಗ್ಗೆ ಸಿದ್ದಾಪುರ ಸಮೀಪಕ ಇಂಜಿಲಗೇರಿ ಎಂಬಲ್ಲಿ ಎದುರುಗಡೆಯಿಂದ ಬಂದ ಕೆಎ-12- 8227ರ ಮಾರುತಿ ಡಿಸೈರ್ ಕಾರಿನ ಚಾಲಕ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಸೈನಾರ್ ರವರು ಚಲಾಯಿಸುತ್ತಿದ್ದ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನ ಚಾಲಕ ಹಸೈನಾರ್, ಆಯಿಷ, ಮುಮ್ತಾಜ್ ರವರು ಗಾಯಗಾಯಗೊಂಡಿದ್ದು, ಸಿದ್ದಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ವಿಷ ಸೇವಿಸಿ ವಿದ್ಯಾರ್ಥಿನಿ ಸಾವು:

     ವಿರಾಜಪೇಟೆ ತಾಲೋಕು, ಹೆಗ್ಗಳ ಗ್ರಾಮದ ನಿವಾಸಿ ಕೆ.ಕೆ. ಪೂವಯ್ಯ ಎಂಬವರ ಮಗಳಾದ ಕೌಷಲ್ಯ ಎಂಬಾಕೆ ದಿನಾಂಕ 10-11-2017 ರಂದು ವಿಷ ಸೇವಿಸಿ ಅಸ್ವಸ್ಥಳಾಗಿದ್ದು ಆಕೆಯನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12-11-2017 ರಂದು ಸಾವನಪ್ಪಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.