Sunday, November 12, 2017

ಕೊಡಗು ಜಿಲ್ಲಾ ಪೊಲೀಸ್ ನಾಗರೀಕ ಬಂದೂಕು ತರಬೇತಿ ಶಿಬಿರದ ಪತ್ರಿಕಾ ಪ್ರಕಟಣೆ
 
     ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರೀಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ ಇಲಾಖ ವತಿಯಿಂದ ನಡೆಸಲು ಉದ್ದೇಶಿಸಲಾಗಿದೆ. ಈ ತರಬೇತಿ ಪಡೆದುಕೊಳ್ಳಲು ಆಸಕ್ತಿ ಉಳ್ಳವರು ಆರ್.ಪಿ.ಐ ಡಿ.ಎ.ಆರ್, ಕಛೇರಿಯಿಂದ ನಿಗಧಿತ ಅರ್ಜಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
       
 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :-20.11.2017
 ಶುಲ್ಕ :-10/-
 ಸಂಪರ್ಕ ಸಂಖ್ಯೆ :-9480804906 ಮತ್ತು 08272228420
 ತರಬೇತಿಯ ಅವಧಿ :-22.11.2017 ರಿಂದ 28.11.2017
 ಅರ್ಜಿಯನ್ನು ಸಲ್ಲಿಸಲು ಇಚ್ಛೆಯುಳ್ಳವರು ತಮ್ಮ ಇತ್ತೀಚಿನ  04 ಸಂಖ್ಯೆಯ ಪಾಸ್ಪೋರ್ಟ್      ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
                                                   
                                         

                                                                            ಸಾರ್ವಜನಿಕ ಸಂಪರ್ಕಾಧಿಕಾರಿ,
                                                                                ಕೊಡಗು ಜಿಲ್ಲೆ, ಮಡಿಕೇರಿ.                                         
 ------

ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಬಂಧನ:


      ದಿನಾಂಕ 10-11-2017 ರಂದು ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಟಿಪ್ಪು ಜಯಂತಿಯ ಆಚರಣೆ ವೇಳೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

      ಜಿಲ್ಲಾಡಳಿತ ವತಿಯಿಂದ ಟಿಪ್ಪು ಜಯಂತಿ ಆಚರಣೆಯನ್ನು ದಿನಾಂಕ 10-11-2017 ರಂದು ಹಮ್ಮಿಕೊಂಡಿದ್ದು ಇದನ್ನು ವಿರೋಧಿಸಿ ಕೊಡಗು ಜಿಲ್ಲೆಯ ಹಿಂದೂಪರ ಸಂಘಟನೆಗಳು ಹಾಗು ಟಿಪ್ಪು ಜಯಂತಿ ವಿರೋಧಿ ವೇದಿಕೆಯವರು ಕೊಡಗು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಹಾಗು ನಗರ ಮತ್ತು ಹೊರವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

     ಜಿಲ್ಲಾ ಪೊಲೀಸರು ನಗರ ಹಾಗು ಹೊರವಲಯದಲ್ಲಿ ಕಟ್ಟೆಚ್ಚರವಹಿಸಿ ಬಂದೋಬಸ್ತ್ನಲ್ಲಿ ತೊಡಗಿರುವ ವೇಳೆ ಕೆಲ ದುಷ್ಕರ್ಮಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದಲ್ಲಿ ರಾಜ್ಯಾಧ್ಯಂತ ಸುದ್ದಿಯಾಗಿ ಟಿಪ್ಪು ಜಯಂತಿ ಆಚರಣೆಯನ್ನು ತಡೆಯುವಲ್ಲಿ ತಾವು ಯಶಸ್ವಿಯಾಗಬಹುದೆಂದು ಯೋಜನೆಯನ್ನು ರೂಪಿಸಿ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳವ ಸಾಧ್ಯತೆ ಇರುತ್ತದೆ ಎಂಬ ಭಯದಿಂದ ಕಲ್ಲು ತೂರಾಟ ನಡೆಸಲು ನಿರ್ಜನ ಪ್ರದೇಶವಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ರಸ್ತೆಯನ್ನು ಆಯ್ಕೆ ಮಾಡಿ ಕಾಲೂರು ಗ್ರಾಮಕ್ಕೆ ತೆರಳಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ್ನ್ನು ಹಿಂಭಾಲಿಸಿ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸ್ನ್ನು ಅಡ್ಡ ಹಾಕಿ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿರುತ್ತಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ. 325/2017 ಕಲಂ 341, 427 ರೆ:ವಿ 34 ಐಪಿಸಿ ಮತ್ತು ಕಲಂ 2(ಎ) (ಬಿ) The Prevention of Destruction and Loss of Property Act 1951    ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  

     ಕೂಡಲೇ ಕಾರ್ಯ ಪ್ರವೃತ್ತರಾದ ಮಡಿಕೇರಿ ಗ್ರಾಮಾಂತರ ಪೊಲೀಸರು ಜಿಲ್ಲಾ ಪೊಲೀಸ್ ವತಿಯಿಂದ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮಾರದ ವೀಡಿಯೋವನ್ನು ಆಧರಿಸಿ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಆರೋಪಿಗಳು ಮಡಿಕೇರಿಯಿಂದ ದ್ವಿಚಕ್ರವಾನದಲ್ಲಿ ಕೆ.ಎಸ್.ಆರ್.ಟಿ. ಬಸ್ಸನ್ನು ಹಿಂಭಾಲಿಸಿ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ತಡೆದು ಕಲ್ಲು ತೂರಾಟ ನಡೆಸಿದ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ ಈ ಕೆಳಗಿನಂತಿದೆ.

1. ಟಿ.ಹೆಚ್. ಸುಧೀಂದ್ರ, ತಂದೆ ಟಿ.ಟಿ. ಹನುಮಂತ ಶೆಟ್ಟಿ, 31 ವರ್ಷ ಎಲೆಕ್ಟ್ರಿಷಿಯನ್ ವೃತ್ತಿ, ಕೆ.ಹೆಚ್.ಬಿ. ಕಾಲೋನಿ, ವಿಧ್ಯಾನಗರ ಮಡಿಕೇರಿ.

2. ಬಿ.ಎ.ಉಮೇಶ @ ಸಾವಂತ್ ತಂದೆ: ಅಣ್ಣು, 24 ವರ್ಷ, ಹೆರಿಟೇಜ್ ಹೊಟೇಲ್ನಲ್ಲಿ ಸಪ್ಲಯರ್ ಕೆಲಸ, ವಾಸ ವಿಧ್ಯಾನಗರ ಮಡಿಕೇರಿ.

3. ಪಿ.ಎಂ. ಅಕ್ಷಯ, ತಂದೆ: ಮಣಿ 21 ವರ್ಷ, ಎಫ್.ಎಂ.ಸಿ. ಕಾಲೇಜಿನ 1ನೇ ಬಿ.ಕಾಂ. ವಿದ್ಯಾರ್ಥಿ.

4. ಜಿ.ಕೆ. ನವೀನ, ತಂದೆ ಕೆಂಚಪ್ಪ, 21 ವರ್ಷ, ಜೆ.ಸಿ.ಬಿ. ಆಪರೇಟರ್ ಕೆಲಸ, ವಾಸ ವಿಧ್ಯಾನಗರ ಮಡಿಕೇರಿ.


      ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಮಾರ್ಗದರ್ಶನದಲ್ಲಿ ಮತ್ತು ಮಡಿಕೇರಿ ಪೊಲೀಸ್ ಉಪಾಧೀಕ್ಷಕರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್.ಪ್ರದೀಪ್, ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸ್ಐ ಶ್ರೀ ಚೇತನ್, ಶ್ರೀ ಬೋಜಪ್ಪ ಹಾಗು ಸಿಬ್ಬಂದಿಗಳಾದ ತೀರ್ಥಕುಮಾರ್, ಕೆ.ಎ. ಇಬ್ರಾಹಿಂ, ಎ.ವಿ. ಕಿರಣ್, ಎ.ಯು. ಸತೀಶ್, ದಿನೇಶ್, ಶಿವರಾಜೇಗೌಡ, ಚಾಲಕರಾದ ಅರುಣ ಮತ್ತು ಸುನಿಲ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಈ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.
 ---------- 
 
ಜಿಲ್ಲೆಯಲ್ಲಿ ದಾಖಲುಗೊಂಡ  ಅಪರಾಧಗಳ ವಿವರ:
ಮಹಿಳೆ ಮೇಲೆ ಹಲ್ಲೆ:
 
         ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಹತ್ತಿರ ವಾಸವಾಗಿರುವ ಶ್ರೀಮತಿ ಹೇಮಾವತಿ ಎಂಬವರು ಆನಂದ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು ಜೀವನ ಸಾಗಿಸುತ್ತಿದ್ದು ದಿನಾಂಕ 8-11-2017 ರಂದು   ಆನಂದ ಹೇಮಾವತಿಯವರಿಂದ ಮದ್ಯಸೇವಿಸಲು ಹಣ ಕೇಳಿ ಹಣ ನೀಡದ ವಿಚಾರದಲ್ಲಿ ದಿನಾಂಕ 9-11-2018 ರಂದು ಜಗಳ ಮಾಡಿ ಹೇಮಾವತಿಯವರ ಮೇಲೆ ಕೈಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮನೆ ಕಳವು:

         ವಿರಾಜಪೇಟೆ ತಾಲೋಕು ಹೊಸಕೋಟೆ ಗ್ರಾಮದ ನಿವಾಸಿ ಅಮ್ಮಂಡ ಎಂ.ಅಯ್ಯಣ್ಣ ಎಂಬವರ ಮನೆಯಲ್ಲಿ ದಿನಾಂಕ 5-11-2017 ರಂದು ಯಾರೂ ಇಲ್ಲದೆ ಸಮಯದಲ್ಲಿ ಬಾಗಿಲನ್ನು ತೆರೆದು ಒಳ ನುಗ್ಗಿದ ಕಳ್ಳರು ಸುಮಾರು 48,000 ರೂ ಬೆಲೆಬಾಳುವ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಫಿರ್ಯಾದಿ ಅಮ್ಮಂಡ ಎಂ. ಅಯ್ಯಣ್ಣ ನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು  ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ ಇಬ್ಬರಿಗೆ ಗಾಯ:

     ಶನಿವಾರಸಂತೆ ಠಾಣೆ ಸರಹದ್ದಿನ ಕೂಗೂರು ಗ್ರಾಮದ ನಿವಾಸಿ ಸಿ.ರಂಜನ್ ಎಂಬವರು ದಿನಾಂಕ 11-11-2017 ರಂದು ತಮ್ಮ ಬಾಪ್ತು ಕಾರಿನಲ್ಲಿ ಶನಿವಾರಸಂತೆ ಕಡೆಯಿಂದ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿ.ರಂಜನ್ ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು ಮೋಟಾರ್ ಸೈಕಲ್ ಸವಾರ ಪರಮೇಶ ಹಾಗು ಹಿಂಬದಿ ಸವಾರ ನವೀನ್ ಎಂಬವರು ಗಾಯಗೊಂಡಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ಕೈಗೊಂಡಿದ್ದಾರೆ. 
 
ಅಕ್ರಮ ಮರಳು ಸಾಗಾಟ:
 
     ದಿನಾಂಕ 11-11-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ನಾಪೋಕ್ಲು ಠಾಣಾ ವ್ಯಾಪ್ತಿಯ  ಕುಯ್ಯಂಗೇರಿ ಕುಂಬಳದಾಳು ಗ್ರಾಮದಲ್ಲಿ  ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಾಪೋಕ್ಲು ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.