Sunday, December 31, 2017

ಯುವಕ ಆತ್ಮಹತ್ಯೆ
                      ದಿನಾಂಕ 28/12/2017ರಂದು ಮೂರ್ನಾಡು ಬಳಿಯ ಕೋಡಂಬೂರು ನಿವಾಸಿ ಯತೀಶ ಎಂಬ ಯುವಕನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ಅಪಘಾತ
                        ದಿನಾಂಕ 29/12/2017ರ ಮುಂಜಾನೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಪುತ್ತೂರು ವಿಭಾಗದಲ್ಲಿ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸು್ತಿದ್ದ ಯತೀಶ ಎಂಬವರು ಸಾರಿಗೆ ಸಂಸ್ಥೆಗೆ ಸೇರಿದ ಜೀಪಿನಲ್ಲಿ ಚೇರಂಬಾಣೆಯಿಂದ ಬೆಟ್ಟಗೇರಿ ಕಡೆಗೆ ಬರುತ್ತಿರುವಾಗ ಬಕ್ಕ ಬೆಟ್ಟಗೇರಿ ಬಳಿ ಕೆಎ-19-ಡಿ-7785 ರ ಬಸ್ಸಿನ ಚಾಲಕ ಶ್ರವಣ್ ಶೆಟ್ಟಿ ಎಂಬಾತನು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್ಸಿನ ಲಗೇಜ್ ಬಾಕ್ಸ್ ನ ಬಾಗಿಲು ತೆರೆದುಕೊಂಡು ಜೀಪಿಗೆ ಬಡಿದು ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅವಘಢ
                     ದಿನಾಂಕ 29/12/2017ರಂದು ಶನಿವಾರಸಂತೆಯ ಸೇಕ್ರೆಡ್ ಹಾರ್ಟ್‌ ವಿದ್ಯಾ ಸಂಸ್ಥೆಯ ಕಾರು ಸಂಖ್ಯೆ ಕೆಎ-12-ಜೆಡ್-7720ರಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಜೋಸೆಫ್ ಅಚ್ಚಂಡಿಯವರು ಚಾಲಕ ವಿಜಯಕುಮಾರ್‌ ಎಂಬವರೊಂದಿಗೆ ಸೋಮವಾರಪೇಟೆಗೆ ಹೋಗುತ್ತಿರುವಾಗ ರಾಮೇನಹಳ್ಳಿ ಬಳಿ ಚಾಲಕ ವಿಜಯಕುಮಾರ್ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ, ಕೊಲೆ ಬೆದರಿಕೆ
                           ದಿನಾಂಕ 29/12/2017ರಂದು ಮರಗೋಡು ಬಳಿಯ ಹೊಸ್ಕೇರಿ ನಿವಾಸಿ ಭಾರತಿ ಎಂಬವರು ತೋಟದಲ್ಲಿ ಕಾಫಿ ಕುಯ್ಯುತ್ತಿರುವಾಗ ಅವರ ಪತಿಯ ತಮ್ಮ ಭುವನೇಶ್ವರ ಎಂಬಾತನು ರಸ್ತೆಯ ವಿವಾದದಲ್ಲಿ ಜಗಳವಾಡಿ ಭಾರತಿಯವರ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Friday, December 29, 2017

ಹೊಸ ವರ್ಷಾಚರಣೆ-ಸೂಚನೆಗಳು
                  ಕೊಡಗು ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ ಕೊಡಗಿನ ಸಮಸ್ತ ನಾಗರಿಕರಿಗೆ 2018 ರ ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತಾ ನೂತನ ವರ್ಷಾಚಚರಣೆಯ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೆಲ್ ಕ್ಲಬ್, ರೆಸ್ಟೋರೆಂಟ್, ರೆಸಾರ್ಟ್‌, ಹೋಂ ಸ್ಟೇ ಮತ್ತು ಸಂಘ ಸಂಸ್ಥೆಗಳಿಗೆ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
 1. ದಿನಾಂಕ 31-12-2017 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ಕೊಡಗು ಜಿಲ್ಲೆಯ ಹೊಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್‌ಗಳಲ್ಲಿ ಆಚರಿಸುವ ವೇಳೆ ಮದ್ಯ ಸರಬರಾಜು ಮಾಡುವ ನಿಗದಿತ ಸಮಯದೊಳಗೆ ಮಾತ್ರ ಮದ್ಯ ಸರಬರಾಜು ಮಾಡುವುದು. ಮಧ್ಯರಾತ್ರಿ 12.30 ಗಂಟೆಯ ಒಳಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮುಕ್ತಾಯ ಮಾಡುವುದು. ಹೋಂ ಸ್ಟೇಗಳಲ್ಲಿ ಯಾವುದೇ ರೀತಿಯ ಮದ್ಯ ಸರಬರಾಜು ಮಾಡತಕ್ಕದ್ದಲ್ಲ.
 2. ಹೊಸ ವರ್ಷ ಆಚರಣೆ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್‌ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಕಡ್ಡಾಯವಾಗಿ ಕಾರ್ಯಕ್ರಮ ನಡೆಸಲು ಅನುಮತಿಯನ್ನು ಪಡೆದುಕೊಳ್ಳುವುದು.
 3. ಹೊಸ ವರ್ಷದ ಆಚರಣೆಯ ಸಂಬಂಧ ಧ್ವನಿವರ್ಧಕವನ್ನು ಅಳವಡಿಸುವ ವೇಳೆ ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿದ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವುದು.
 4. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತೆಯಿಂದ ವಾಹನ ಚಾಲನೆ ಮಾಡುವುದು ವೀಲಿಂಗ್ ಮತ್ತು ರೇಸಿಂಗ್ ಮಾಡುವುದು ಹಾಗೂ ಕಾರುಗಳಲ್ಲಿ ಅತಿಯಾಗಿ ಮ್ಯೂಸಿಕ್ ಹಾಕಿಕೊಂಡು ಹೋಗುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುವುದು.
 5. ಹೊಸ ವರ್ಷವನ್ನು ಆಚರಿಸುವವರು ದಿನಾಂಕ 31-12-2017 ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು / ಮಹಿಳೆಯರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರಿ ತೊಂದರೆ ಮಾಡಬಾರದು. ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು.
 6. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.
 7. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
 8. ಕೊಡಗು ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನ ತಪಾಸಣೆ ಮಾಡುವುದಿದ್ದು, ಹಾಗೂ ಠಾಣಾ ಸರಹದ್ದಿನಲ್ಲಿ ಸಹ ವಾಹನ ತಪಾಸಣೆ ಮಾಡಲಿದ್ದು ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಕಂಡು ಬಂದಲ್ಲಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೂ ಸದರಿ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಸಂಬಂಧಪಟ್ಟ ಪ್ರಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು.
 9. ಪ್ರವಾಸಿ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಮತ್ತು ವಾಹನಗಳ ಒಳಗಡೆ ಕುಳಿತು ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿರುತ್ತದೆ.
 10. ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಹೋಟೆಲ್/ರೆಸ್ಟೋರೆಂಟ್ ಹಾಗೂ ಕ್ಲಬ್‌ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವುದು.
 11. ಸಾರ್ವಜನಿಕರಿಗೆ ಹೊಸ ವರ್ಷಾಚರಣೆಯ ಸಮಯದಲ್ಲಿ ಯಾರಿಂದಲಾದರೂ ತೊಂದರೆಗಳು ಆದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08272-228330, 100 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ 2018ನೇ ವರ್ಷವನ್ನು ಆಚರಿಸುವ ವೇಳೆ ಈ ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಪ್ರಸಾದ್.ಪಿ, ಐಪಿಎಸ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಿಲಿಂಡರ್ ಕಳವು
                      ದಿನಾಂಕ 27/12/2017ರಿಂದ 28/12/2017ರ ನಡುವೆ ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಕೊಠಡಿಯೊಳಗಿದ್ದ ಸುಮಾರು ರೂ.10,500/- ಬೆಲೆಯ 2 ಅಡುಗೆ ಅನಿಲದ ಸಿಲಿಂಡರ್, 70 ಕೆ.ಜಿ.ಅಕ್ಕಿ ಹಾಗೂ 2 ಕೆ.ಜಿ.ತೊಗರಿ ಬೇಳೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
                     ದಿನಾಂಕ 28/12/2017ರಂದು ಮೂರ್ನಾಡು ಬಳಿಯ ಎಂ.ಬಾಡಗ ನಿವಾಸಿ ರಿಜ್ವಾನ್‌ ಎಂಬವರು ಅಂಗಡಿಗೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಕೆಎಲ್‌-12-ಇ-899ರ ಕಾರನ್ನು ಅದರ ಚಾಲಕ ಸ್ಟೀವನ್ ಮ್ಯಾಥ್ಯೂ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ರಿಜ್ವಾನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಿಜ್ವಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, December 28, 2017

ವಾಹನ ಡಿಕ್ಕಿ ಪಾದಚಾರಿ ಸಾವು:

     ದಿನಾಂಕ 27-12-2017 ರಂದು ಸಮಯ 21.00 ಗಂಟೆಗೆ ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗೋಣಿಕೊಪ್ಪ ವಿರಾಜಪೇಟೆ ರಸ್ತೆಯ ಕೈಕೇರಿ ಗ್ರಾಮ ಪಿರ್ಯಾದಿ ಕೋಣಿಯಂಡ ಉತ್ತಪ್ಪ ರವರ ಮನೆಯ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಂದಾಜು 75 ವರ್ಷ ಪ್ರಾಯದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಸದರಿ ಅಪರಿಚಿತ ವ್ಯಕ್ತಿ ಸಾವನಪ್ಪಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎರಡು ಕಾರುಗಳ ನಡುವೆ ಅಪಘಾತ:

     ವಿರಾಜಪೇಟೆ ತಾಲೋಕು ಕುಂದ ಗ್ರಾಮದ ನಿವಾಸಿ ಕಲಿಯಂಡ ಕೆ.ಅಯ್ಯಪ್ಪ ಎಂಬವರು ದಿನಾಂಕ 27-12-2017 ರಂದು ತಮ್ಮ ಕಾರಿನಲ್ಲಿ ಗೋಣಿಕೊಪ್ಪದಿಂದ ಕುಂದ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕಾಲ್ಸ್ ಶಾಲೆಯ ರಸ್ತೆಯಿಂದ ಬಂದ ಕಾರು ಕೆ. ಅಯ್ಯಪನವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂ ಗೊಂಡಿದ್ದು ಸದರಿ ಕಾರಿನಲ್ಲಿದ್ದ ಡಾ: ರೇಖಾ ಎಂಬವರು ಕೆ.ಅಯ್ಯಪ್ಪನವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ, ಮೃತಪಟ್ಟ ಚಾಲಕ:

      ಬೆಂಗಳೂರಿನ ನಿವಾಸಿ ವಿನಯ್ ಕುಮಾರ್ ಎಂಬ ವ್ಯಕ್ತಿ ದಿನಾಂಕ 27-12-2017ರಂದು ಸಮಯ 02-30 ಗಂಟೆಗೆ ಕುಶಾಲನಗರ ಟೌನ್ ಕಡೆಯಿಂದ ಬೈಚನಳ್ಳಿ ಕಡೆಗೆ ಕೆಎ-53-ಸಿ-6747 ಸಂಖ್ಯೆಯ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬೈಚನಳ್ಳಿಯಲ್ಲಿರುವ ಬ್ಲೂಮೂನ್ ಪೆಟ್ರೋಲ್ ಬಂಕ್ ಮುಂಭಾಗ ಅಳವಡಿಸಿದ್ದ ಎಕ್ಸ್ ಪೆಂಡೆಬಲ್ ರಿಫ್ಲೆಕ್ಟರ್ ಬ್ಯಾರಿಕೇಡ್ ಗೆ ಡಿಕ್ಕಿಪಡಿಸಿ ನಂತರ ರಸ್ತೆಯ ಬದಿಯಲ್ಲಿದ್ದ ಸೈನ್ ಬೋರ್ಡ್ ಗೆ ಡಿಕ್ಕಿ ಪಡಿಸಿದ್ದು ನಂತರ ಸಾಮಿಲ್ ಬಳಿ ಇರುವ ಮರವೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಕಾರಿನ ಚಾಲಕ ವಿನಯ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಮ್ಮನಕೊಲ್ಲಿ ಗ್ರಾಮದಲ್ಲಿ ವಾಸವಾಗಿದ್ದ ಅಲೆಕ್ಸ್ ಡಿಸೋಜ ಎಂಬ ವ್ಯಕ್ತಿ ದಿನಾಂಕ 27-12-2017 ರಂದು 11-00 ಗಂಟೆಯ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಮೇಲೆ ಪತಿಯಿಂದ ಹಲ್ಲೆ:

    ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸವಾಗಿದ್ದು ಗೃಹರಕ್ಷಕಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಲಕ್ಷ್ಮಿ ಎಂಬವರ ಮೇಲೆ ಆಕೆಯ ಗಂಡ ವೆಂಕಟರಾಮು ರವರು ದಿನಾಂಕ 27-12-2017 ರಂದು ಹಲ್ಲೆ ನಡೆಸಿ ಚಾಚುವಿನಿಂದ ತಿವಿದು ಗಾಯವನ್ನುಂಟುಮಾಡಿದ್ದು ಶ್ರೀಮತಿ ಲಕ್ಷ್ಮಿ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದಾಮಿಗೆ ನುಗ್ಗಿ ಹಣ ಕಳವು:

     ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೊಳಕೇರಿ ಗ್ರಾಮದಲ್ಲಿ ಬಿ.ವಿ. ಹರೀಶ್ ಕುಮಾರ್ ಎಂಬವರು ತಂಪು ಪಾನೀಯವನ್ನು ಗೋದಾಮು ಒಂದರಲ್ಲಿ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದು ಸದರಿ ಗೋದಾಮಿಗೆ ದಿನಾಂಕ 22-12-2017ರ ಸಂಜೆ 7-00 ಗಂಟೆ ಯಿಂದ ದಿನಾಂಕ 27-12-2017ರ ಬೆಳಿಗ್ಗೆ 11-00 ಗಂಟೆಯ ಅವಧಿಯೊಳಗೆ ಯಾರೋ ಕಳ್ಳರು ಗೋದಾಮಿನ ಮೇಲ್ಛಾವಣಿಯ ಸಿಮಿಂಟ್ ಶೀಟ್ ಗಳನ್ನು ತೆಗದು ಅದರ ಮೂಲಕ ಗೊದಾಮಿನೊಲಗೆ ನುಗ್ಗಿ ಡ್ರಾಯರ್ ನಲ್ಲಿಟ್ಟಿದ್ದ ರೂ.23,000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tuesday, December 26, 2017

ಅಡಿಕೆ ಕಳವು:

     ವ್ಯಕ್ತಿಯೊಬ್ಬರ ತೋಟದಿಂದ ಅಡಿಕೆಯನ್ನು ಕಳ್ಳತನ ಮಾಡಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ. ಕಳತ್ಮಾಡು ಗ್ರಾಮದ ಕೊಲ್ಲೀರ ಬಿ.ಈಶ್ವರ ಎಂಬವರಿಗೆ ಸೇರಿದ ಕಳತ್ಮಾಡು ಗ್ರಾಮದ ಕರಂಬೈಲು ತೋಟದಿಂದ ದಿನಾಂಕ 10-12-2017 ರಂದು ವಿರಾಜಪೇಟೆ ತಾಲೋಕು ಜೋಡುಬಟ್ಟಿ ಗ್ರಾಮದ ನಿವಾಸಿಗಳಾದ ಲೋಕೇಶ್, ಆಟೋ ಚಾಲಕ, ಕಿಶೋರ್ @ ಕಿಶು ಮತ್ತು ಸುಬ್ರಮಣಿ ಎಂಬವರುಗಳು ಸೇರಿ ಸುಮಾರು 35 ಅಡಿಕೆ ಮರದಿಂದ ಅಂದಾಜು 24,500 ರೂ ಬೆಲೆಬಾಳುವ ಅಡಿಕೆಯನ್ನು ಕುಯ್ದು ಕಳವುಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮೇಲೆ ಹಲ್ಲೆ:

     ದಿನಾಂಕ 24-12-2017 ರಂದು ಸಮಯ 3.30 ಪಿ.ಎಂ ಗೆ ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ಪಿರ್ಯಾಧಿ ಶ್ರೀಮತಿ ಪುಷ್ಪಲತಾರವರ ಮನೆ ಬಳಿಯ ಗದ್ದೆಯಲ್ಲಿ ಅವರ ಪತಿ ರಘುನಾಥ್ ರವರಿಗೆ ಮನೋಜ್ ಕುಮಾರನು ಅವಾಚ್ಯ ಶಬ್ದಗಳಿಂದ ಬೈದು ಜಗಳ ಮಾಡುತ್ತಿದ್ದುದನ್ನು ಕಂಡು ಜಗಳ ಬಿಡಿಸಲು ಹೋದ ಪಿರ್ಯಾಧಿ ಶ್ರೀಮತಿ ಪುಷ್ಪಲತಾ ರವರನ್ನು ಆರೋಪಿ ಪ್ರದೀಪ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿರುವುದಲ್ಲದೆ ಮೊಣ್ಣಪ್ಪ ಎಂಬವರು ಫಿರ್ಯಾದಿಯವರಿಗೆ ಸೇರಿದ ಕಾರಿನ ಗಾಜನ್ನು ಪುಡಿ ಮಾಡಿ ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್-ಪಿಕ್ ಅಪ್ ವಾಹನಗಳ ನಡುವೆ ಡಿಕ್ಕಿ, ಬೈಕ್ ಸವಾರ ಸಾವು:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬೊಳ್ಳುಮಾಡು ಗ್ರಾಮದ ನಿವಾಸಿ ಅಲ್ಲರಂಡ ಅಚ್ಚಯ್ಯ ಎಂಬವರು ದಿನಾಂಕ 25-12-2017 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಮುರ್ನಾಡು ಕಡೆಯಿಂದ ಮೊಳ್ಳುಮಾಡು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಪಿಕ್ ಅಪ್ ವಾಹನ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಅಲ್ಲರಂಡ ಅಚ್ಚಯ್ಯನವರು ಸಾವನಪ್ಪಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು:

    ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೊತೂರು ಗ್ರಾಮದ ನಿವಾಸಿ ಚೆಪ್ಪುಡೀರ ಸೋಮಯ್ಯ ಎಂಬವರ ತೋಟದಲ್ಲಿ ಕೇರಳ ರಾಜ್ಯದ ಮಾನಂದವಾಡಿ ಗ್ರಾಮದ ಪಿ. ರಾಜನ್ ಎಂಬ ವ್ಯಕ್ತಿ ದಿನಾಂಕ 25-12-2017 ರಂದು ಅಡಿಕೆ ಕುಯ್ಯಲು ಅಡಿಕೆ ಮರ ವೇರಿದ್ದು,  ಆಕಸ್ಮಿಕವಾಗಿ ಮರದಿಂದ ಬಿದ್ದು ಸಾವನಪ್ಪಿದ್ದು, ಕುಟ್ಟ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಮ್ರದ ತಂತಿ ಕಳವು:

    ದಿನಾಂಕ 25-12-2017 ರ 3-00 ಪಿ.ಎಂ. ಮತ್ತು 25-12-2017ರ 2-00 ಪಿ.ಎಂ. ನಡುವಿನ  ಅವಧಿಯಲ್ಲಿ ವಿರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ರವರ ಕಛೇರಿಯ ಬೀಗವನ್ನು ಯಾರೋ ಕಳ್ಳರು ಒಡೆದು ಕಛೇರಿಯಲ್ಲಿಟ್ಟಿದ್ದ ಅಂದಾಜು ರೂ.12,000 ರೂ ಬೆಲೆಬಾಳುವ 800 ಮೀಟರ್ ತಾಮ್ರದ ತಂತಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ  ಶಿವನಗೌಡ ಅಯ್ಯನಗೌಡ ಪಾಟೀಲ, ಸಹಾಯಕ ಅಭಿಯಂತರು, ವಿರಾಜಪೇಟೆ ಸೆಸ್ಕ್ ರವರು ನೀಡಿದ  ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Monday, December 25, 2017

ಮೋಟಾರು ಬೈಕ್ ಕಳವು
                      ದಿನಾಂಕ 20/12/2017ರಂದು ರಾತ್ರಿ ವೇಳೆ ಮರಗೋಡು ನಿವಾಸಿ ಶ್ಯಾಂ ಕುಮಾರ್ ಎಂಬವರು ಅವರ ಕೆಎ-12-ಕೆ-9369ರ ಮೋಟಾರು ಬೈಕನ್ನು ಮಡಿಕೇರಿ ನಗರದ ವೆಸ್ಟ್ ಎಂಡ್ ಹೋಟೆಲಿನ ಮುಂದೆ ನಿಲ್ಲಿಸಿ ಊಟಕ್ಕೆ ಹೋಗಿದ್ದು ಮರಳಿ ಬಂದು ನೋಡುವಾಗ ಬೈಕು ನಿಲ್ಲಿಸಿದ ಸ್ಥಳದಿಂದ ಕಾಣೆಯಾಗಿದ್ದು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿ ಡಿಕ್ಕಿ ಪ್ರಕರಣ
                       ದಿನಾಂಕ 24/12/2017ರಂದು ಸೋಮವಾರಪೇಟೆ ಬಳಿಯ ಕಾಗಡಿಕಟ್ಟೆ ಗ್ರಾಮದ ರಸ್ತೆಯಲ್ಲಿ ಕೆಎ-12-ಎ-8741 ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ 63 ಕೆವಿ ವಿದ್ಯುತ್ ಪರಿವರ್ತಕದ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ 6 ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳು ಕೆಳಗೆ ಬಿದ್ದು ಸುಮಾರು ರೂ. 2,76,030/- ರಷ್ಟು ಹಾನಿಯುಂಟಾಗಿರುವುದಾಗಿ ಶಾಂತಳ್ಳಿ ಸೆಸ್ಕ್ ಶಾಖೆಯ ಶಾಖಾಧಿಕಾರಿ  ರುಕ್ಮಾಂಗದರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅವಘಢ
                    ದಿನಾಂಕ 24/12/2017ರಂದು ಸೋಮವಾರಪೇಟೆ ಬಳಿಯ ಯೆಡೂರು ನಿವಾಸಿ ನವೀನ್ ಎಂಬವರು ಸೋಮವಾರಪೇಟೆಯ ಆಲೆಕಟ್ಟೆ ರಸ್ತೆಯ ಬದಿಯಲ್ಲಿ ಅವರ ಮೋಟಾರು ಬೈಕನ್ನು ನಿಲ್ಲಿಸುತ್ತಿರುವಾಗ ಹಿಂದಿನಿಂದ ಚೌಡ್ಲು ನಿವಾಸಿ ಹೊನ್ನಪ್ಪ ಎಂಬವರು ಅವರ ಕೆಎ-04-ಕೆ-5214ರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನವೀನರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನವೀನರವರು ಬೈಕ್ ಸಮೇತ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                     ದಿನಾಂಕ 23/12/2017ರಂದು ಶನಿವಾರಸಂತೆ ಬಳಿಯ ಕೂರಳ್ಳಿ ನಿವಾಸಿ ಕೆ.ವಿ.ಪುನೀತ್ ಎಂಬವರು ಅವರ ಮನೆಯ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಸುದೀಪ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಪುನೀತ್‌ರವರ ಮೇಲೆ ಕಬ್ಬಿಣದ ರಾಡು ಹಾಗೂ ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                ದಿನಾಂಕ 24/12/2017ರಂದು ಬಾಳೆಲೆ ಬಳಿಯ ದೇವನೂರು ನಿವಾಸಿ ಕೊಕ್ಕಲೆಮಾಡ ಮಧು ಎಂಬವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಮಧುರವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, December 24, 2017

ರಸ್ತೆ ಅಪಘಾತ, ವ್ಯಕ್ತಿ ಸಾವು
                          ದಿನಾಂಕ 22/12/2017ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಪಾಂಡುರಂಗ ಎಂಬವರು ಕೊಪ್ಪದಿಂದ ಅವರ ರಿಕ್ಷಾದಲ್ಲಿ ಕುಶಾಲನಗರಕ್ಕೆ ಬರುತ್ತಿರುವಾಗ ಕುಶಾಲನಗರದ ಸ್ಟುಡೆಂಟ್ ಕಾರ್ನರ್ ಬಳಿ ಕೆಎ-12-ಬಿ-3929ರ ರಿಕ್ಷಾ ಚಾಲಕ ದಿನೇಶ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ರಿಕ್ಷಾವನ್ನು ಚಾಲಿಸಿಕೊಂಡು ದಿನೇಶ್‌ರವರ ರಿಕ್ಷಾವನ್ನು ಹಿಂದಿಕ್ಕಿ ಮುಂದೆ ರಸ್ತೆ ದಾಟುತ್ತಿದ್ದ ಜನತಾ ಕಾಲೊನಿ ನಿವಾಸಿ ರಾಜು ಎಂಬ ವ್ಯಕ್ತಿಗೆ ಡಿಕ್ಕಿಪಡಿಸಿ ರಿಕ್ಷಾವನ್ನು ನಿಲ್ಲಿಸದೆ ಹೊರಟು ಹೋಗಿದ್ದು  ಪಾಂಡುರಂಗ ಹಾಗೂ ಮತ್ತಿತರರು ಸೇರಿ ಗಾಯಾಳು ರಾಜುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾಜುರವರು ದಿನಾಂಕ 23/12/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹೊಳೆಗೆ ಬಿದ್ದು ವ್ಯಕ್ತಿ ಸಾವು
                          ದಿನಾಂಕ 23/12/2017ರಂದು ಗೋಣಿಕೊಪ್ಪ ನಗರದ ನಿವಾಸಿ ಪಿ.ಆರ್.ರೋಬಿ ಎಂಬಾತನು ಅತೀವ ಮದ್ಯ ಸೇವನೆ ಮಾಡಿ ಅತ್ತೂರು ಬಳಿಯ ಕೀರೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಹೊಳೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಂಡು ಹೊಡೆದು ವ್ಯಕ್ತಿ ಹತ್ಯೆ
                          ದಿನಾಂಕ 23/12/2017ರಂದು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದ ನಿವಾಸಿ ರಂಜು ಪೂವಯ್ಯ ಎಂಬ ವ್ಯಕ್ತಿಯನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಜೀಪು ಚಾಲಕರಾಗಿರುವ ಮರತ ರಂಜು ಪೂವಯ್ಯನವರು ಬೆಳಿಗ್ಗೆ 5:00 ಗಂಟೆಗೆ ಜೀಪು ತೊಳೆಯಲೆಂದು ಹೊರಟು ಅವರು ವಾಸವಿರುವ ಮಹಡಿ ಮನೆಯ ಮೆಟ್ಟಿಲಿನಿಂದ ಕೆಳಗಿಳಿಯುತ್ತಿರುವಾಗ ಯಾರೋ ಅಪರಿಚಿತರು ಗುಂಡು ಹೊಡೆದಿದ್ದು ಮೃತ ರಂಜು ಪೂವಯ್ಯನವರ ಅಣ್ಣ ಕೆ.ಯು.ಈರಪ್ಪನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, December 23, 2017

ಅಪಘಾತ ಪ್ರಕರಣ
              ದಿನಾಂಕ 22-12-2017 ರಂದು ಬಂಟ್ವಾಳ ತಾಲೂಕಿನ ಪೊನ್ನಚ್ಚ ಗ್ರಾಮದ ನಿವಾಸಿಯಾದ ಈಶ್ವರ್ ನಾಯಕ್ ಎಂಬುವವರು ವಿಟ್ಲಾದಿಂದ ಜಲ್ಲಿ ಕಲ್ಲನ್ನು  ಲಾರಿಯಲ್ಲಿ ತುಂಬಿಸಿಕೊಂಡು ಸಂಪಾಜೆಗೆ ಬರುತ್ತಿರುವಾಗ ಪೆರಾಜೆ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಇನ್ನೂ ನೋಂದಣಿಯಾಗದ ಮಾರುತಿ ಡಿಸೈರ್ ಕಾರನ್ನು ಅರ ಚಾಲಕ ಶಶಾಂಕ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಕಾರಿಗೆ ಡಿಕ್ಕಿ ಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

           ದಿನಾಂಕ 22-12-2017 ರಂದು ವಿರಾಜಪೇಟೆ ತಾಲೂಕಿನ ಮಾಯಮುಡಿಯ ಬಾಳಾಜಿ ಗ್ರಾಮದ ನಿವಾಸಿಯಾದ ಕಾವ್ಯ ಎಂಬುವವರು ತನ್ನ ಗಂಡ ಮತ್ತು ಮಗನೊಂದಿಗೆ ಜೀಪಿನಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ವಾಸಿಯಾದ ಗುಲಾಬಿ ಎಂಬುವವರು ಜೀಪನ್ನು ತಡೆದು ನಿಲ್ಲಿಸಿ ಕಾವ್ಯರವರ ಪತಿ ಸೋಮಯ್ಯನವರೊಂದಿಗೆ ಮಗನ ಮೇಲೆ ಪೊಲೀಸ್ ಪುಕಾರು ನೀಡಿದ ಬಗ್ಗೆ ಜಗಳ ಮಾಡಿ, ಕಾವ್ಯರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ:

        ದಿನಾಂಕ 21-12-2017 ರಂದು ಬೆಂಗಳೂರಿನ ನಿವಾಸಿ ಅಮರೇಂದ್ರ ಪ್ರಸಾದ್ ಎಂಬುವವರು ಕುಶಾಲನಗರದ ಕುಶಾಲ್ ಲಾಡ್ಜ್ ನಲ್ಲಿ ತಂಗಿದ್ದು ರಾತ್ರಿ ತಂಗಿದ್ದ ಲಾಡ್ಜ್ ನ ರೂಮಿಗೆ ಹೋಗಲೆಂದು ಕುಶಾಲ್ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗ ಕಾರನ್ಉ ನಿಲ್ಲಿಸುವಾಗ ಕುಶಾಲನಗರದ ಬೈಚನಹಳ್ಳಿಯ ನಿವಾಸಿಗಳಾದ ಕುಮಾರ, ಉದಯ, ಪ್ರಸನ್ನ, ರವಿ ಮತ್ತು ಇನ್ನಿಬ್ಬರು ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, December 22, 2017

ವ್ಯಕ್ತಿ ಆತ್ಮಹತ್ಯೆ
                       ಸಿದ್ದಾಪುರ ಬಳಿಯ ಹಾಲುಗುಂದ ನಿವಾಸಿ ಅಬೂಬಕರ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಹಾಲುಗುಂದ ನಿವಾಸಿ ಅಬೂಬಕರ್‌ರವರು ವ್ಯಾಪಾರ ನಿಮಿತ್ತ ಬ್ಯಾಂಕು ಹಾಗೂ ಇತರೆಡೆಗಳಿಂದ ಸಾಲ ಮಾಡಿದ್ದು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣಕ್ಕೆ ಸಾಲದ ಹಣವನ್ನು ಹಿಂತಿರುಗಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಅಬೂಬಕರ್‌ರವರ ಪತ್ನಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗ್ಯಾಸ್ ಸಿಲಿಂಡರ್ ಕಳವು
                     ದಿನಾಂಕ 04/12/2017ರಿಂದ 05/12/2017ರ ನಡುವೆ ಗೋಣಿಕೊಪ್ಪ ಬಳಿಯ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಅನ್ನ ದಾಸೋಹಕ್ಕೆ ನೀಡಲಾದ ಎರಡು  ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಕಳವು ಮಾಡಿರುವುದಾಗಿ ಶಾಲಾ ಮುಖ್ಯೋಪಾದ್ಯಾಯಿನಿ ಸೋಫಿಯಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ಕಳ್ಳತನ
                     ದಿನಾಂಕ 19/12/2017ರಂದು ಕುಶಾಲಗರದ ಹೆಚ್‌.ಆರ್.ಪಿ. ಕಾಲೊನಿ ನಿವಾಸಿ ಹರೀಶ್‌ ಎಂಬವರು ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿರುವಾಗ ಹಿಂದಿನಿಂದ ಯಾರೋ ಅಪರಿಚಿತ ವ್ಯಕ್ತಿಯು ಅವರನ್ನು ತಳ್ಳಿದ್ದು ಆ ಸಮಯದಲ್ಲಿ ಹರೀಶ್‌ರವರ ಮುಂದಿದ್ದ ಮಗುವೊಂದು ಕೆಳಗೆ ಬಿದ್ದು ಅದನ್ನು ಎತ್ತಲು ಹರೀಶ್‌ರವರು ಕೆಳಗೆ ಬಗ್ಗಿದಾಗ ಹಿಂದಿದ್ದ ಅಪರಿಚಿತ ವ್ಯಕ್ತಿಯು ಹರೀಶ್‌ರವರ ಜೇಬಿನಿಂದ ಸುಮಾರು ರೂ.92,000/- ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, December 21, 2017

ಲಾರಿಯಿಂದ ಬ್ಯಾಟರಿ ಕಳವು:

     ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದ ಕಾಡು ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಪಿ.ಎಂ. ತಾಹೀರ್ ಎಂಬವರು ದಿನಾಂಕ 19/12/2017 ರಂದು ಸಮಯ ರಾತ್ರಿ 10.00 ಗಂಟೆಯ ವೇಳಗೆ KA-12-B-2904 ಈಚರ್ ಮಿನಿ ಲಾರಿಯನ್ನು ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡು ರಸ್ತೆಯ ಉದಯ ನರ್ಸರಿಯ ಮುಂಬಾಗದ ತಾರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು  ದಿನಾಂಕ 20/12/2017 ರಂದು ಬೆಳಿಗ್ಗೆ 7.00 ಗಂಟೆ ವೇಳಗೆ ಲಾರಿಯ ಹತ್ತಿರ ಬಂದು ನೋಡಲಾಗಿ ಲಾರಿಗೆ ಅಳವಡಿಸಿದ್ದ Exide ಕಂಪನಿಯ 12Volt ನ ಒಂದು ಬ್ಯಾಟರಿಯನ್ನು (ಅಂದಾಜು ಮೌಲ್ಯ 3000/-) ಯಾರೋ ಕಳವುಮಾಡಿಕೊಂಡು ಹೊಗಿರುವುದು ಕಂಡುಬಂದಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಜಗಳ:

      ದಿನಾಂಕ 19/12/2017 ರಂದು ಸಮಯ ಸಂಜೆ 06-30 ಗಂಟೆಗೆ ಫಿರ್ಯಾದಿ ಸಿ.ಎ. ಮಾಚಯ್ಯ, ವಾಸ ನೋಕ್ಯ ತಿತಿಮತಿ ಇವರು ಕೆಎ-12-ಎಂಎ-1269 ರ ಕಾರನ್ನು ಗೋಣಿಕೊಪ್ಪ ನಗರದ ಐ.ಪಿ ಪೆಟ್ರೋಲ್ ಬಂಕ್ ಮುಂಭಾಗ ನಿಲ್ಲಿಸಿಕೊಂಡಿರುವಾಗ ಕೇರಳ ರಾಜ್ಯದ ಪಯ್ಯನೂರು ನಿವಾಸಿಗಳಾದ ಅಜೇಶ್ ಕುಮಾರ್ ಹಾಗು ಕೆ. ಮನೋಜ್ ಎಂಬವರು ಕೆಎಲ್ 65-ಡಿ-6013 ರ ಕಾರಿನಲ್ಲಿ ಹಿಂದಿನಿಂದ ಬಂದು ಫಿರ್ಯಾದಿ ಸಿ.ಎ. ಮಾಚಯ್ಯನವರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಸಿ.ಎ. ಮಾಚಯ್ಯನವರ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೇಶ್ ಕುಮಾರ್ ಹಾಗು ಕೆ. ಮನೋಜ್ ರವರು ಗೋಣಿಕೊಪ್ಪ ಠಾಣೆಯಲ್ಲಿ ದೂರನ್ನು ನೀಡಿ ಸಿ.ಎ. ಮಾಚಯ್ಯನವರು ಕಾರನ್ನು ಚಲಾಯಿಸಲು ಜಾಗ ಬಿಡುವ ವಿಚಾರದಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಹಸು ಸಾವು, ಗುಂಡು ಹಾರಿಸಿ ಸಾಯಿಸಿದ ಶಂಕೆ:

     ಸೋಮವಾರಪೇಟೆ ತಾಲೋಕು ಯಡೂರು ಗ್ರಾಮದ ನಿವಾಸಿ ಡಿ.ಟಿ. ಲಿಂಗಪ್ಪ ಎಂಬವರ ಬಾಪ್ತು 2 ಎತ್ತುಗಳು ಹಾಗೂ 2 ಹಸುಗಳನ್ನು ಗದ್ದೆಯ ಪಕ್ಕ ಮರದ ಕೆಳಗೆ ಕಟ್ಟಿ ಹಾಕಿದ್ದು ದಿನಾಂಕ 19/12/2017 ರಂದು ಬೆಳಗಿನ ಜಾವ ದನಗಳನ್ನು ಕಟ್ಟಿದಲ್ಲಿಂದ ಬಿಡಲು ಹೋದಾಗ 3 ವರ್ಷದ ಬಿಳಿ ಬಣ್ಣದ ಒಂದು ಹಸು ಮಲಗಿದ್ದನ್ನು ನೋಡಿದಾಗ ಅದರ ಕುತ್ತಿಗೆಯಲ್ಲಿ ರಕ್ತ ಬರುತ್ತಿದ್ದು ಅದನ್ನು ಕೂಲಂಕುಶವಾಗಿ ನೋಡಿದಾಗ ಯಾರೋ ಕೋವಿಯಿಂದ ಗುಂಡು ಹಾರಿಸಿ ಸಾಯಿಸಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, December 20, 2017

ಶಾಲೆಯಿಂದ ಗ್ಯಾಸ್ ಸಿಲೆಂಡರ್ ಕಳವು:

     ದಿನಾಂಕ 16-12-2017ರ ಅಪರಾಹ್ನ 1-30 ಗಂಟೆ ಮತ್ತು ದಿನಾಂಕ 18-12-2017ರ ಬೆಳಿಗ್ಗೆ 9-00 ಗಂಟೆಯ ಅವಧಿಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಅಡುಗೆ ಕೋಣೆಯ ಬೀಗವನ್ನು ಯಾರೋ ಕಳ್ಳರು ಹೊಡೆದು ಅಡುಗೆಕೋಣೆಯಲ್ಲಿದ್ದ ರೂ.1600/- ಬೆಲೆಬಾಳುವ ಇಂಡೇನ್ ಗ್ಯಾಸ್ ಸಿಲೆಂಡರ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಎನ್. ಸಂದ್ಯಾರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ಯುವತಿ ಆತ್ಮಹತ್ಯೆ:
    ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೇವನೂರು ಗ್ರಾಮದ ಅಯ್ಯಮ್ಮ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಪಣಿಎರವರ ಬೋಜಿ ಎಂಬವರ ಮಗಳಾದ 17 ವರ್ಷ ಪ್ರಾಯದ ಪಣಿಎರವರ ದಿವ್ಯ ಎಂಬಾಕೆ ದಿನಾಂಕ 18-12-2017 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ನಿವಾಸಿ ಪಣಿಎರವರ ಮುತ್ತೆ ಎಂಬವರ ಗಂಡ 35 ವರ್ಷ ಪ್ರಾಯದ ಪಣಿಎರವರ ಬೋಜ ಎಂಬವರು ದಿನಾಂಕ 18-12-2017 ರಂದು ತಾನು ವಾಸವಾಗಿರುವ ಮನೆಯ ಹತ್ತಿರ ಕಾಫಿ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಪಶ್ಷಿಮ ಬಂಗಾಳ ಮೂಲಕ ಮಹಿಳೆಯೋರ್ವಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೋಕು ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ಶ್ರೀಮತಿ ರೇಖಾ ಅಧಿಕಾರಿ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ವಿರಾಜಪೇಟೆ ತಾಲೋಕು ಕೊಳ್ತೋಡು ಬೈಗೋಡು ಗ್ರಾಮದಲ್ಲಿ ವಾಸವಾಗಿದ್ದು ತನ್ನ ಮಗ ಸಾಧಿ ಎಂಬವನು ಮೊಬೈಲ್ ಖರೀದಿಸಲು ಹಣ ಕೇಳಿ ಹಣ ನೀಡದ ಹಿನ್ನಲೆಯಲ್ಲಿ ಆತ ಮನೆ ಬಿಟ್ಟು ಹೋದ ವಿಚಾರದಲ್ಲಿ ಮನನೊಂದು ಸದರಿ ಶ್ರೀಮತಿ ರೇಭಾ ಅಧಿಕಾರಿಯವರು ದಿನಾಂಕ 19-12-2017 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಗ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕು ಶುಂಠಿ ಗ್ರಾಮದ ನಿವಾಸಿ ಜೆ.ಇ. ವೆಂಕಟಪ್ಪ ಎಂಬವರು ದಿನಾಂಕ 25/11/2017 ರಂದು ಬೆಳಿಗ್ಗೆ ತೋಟಕ್ಕೆ ಕಾಫಿ ಹಣ್ಣು ಕುಯ್ಯಲು ಹೋದಾಗ ಆರೋಪಿ ವರುಣ ಎಂಬವರು ಜಾಗದ ವಿಷಯವಾಗಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಾಫಿ ಹಣ್ಣನ್ನು ಕುಯ್ಯ ಬೇಡ ಎಂದು ನಿಂದಿಸಿ ಜೆ.ಇ. ವೆಂಕಟಪ್ಪನವರ ಮೇಲೆ ಕೈಯಿಂದ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಶರ್ಟನ್ನು ಹರಿದು ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, December 19, 2017

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 17/12/2017ರಂದು ಮಡಿಕೇರಿಯ ಹೊಸ ಬಡಾವಣೆ ನಿವಾಸಿ ಕೆ.ಎ.ಪೊನ್ನಪ್ಪ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಪೊನ್ನಪ್ಪರವರಿಗೆ 65 ವರ್ಷ ವಯಸ್ಸಾಗಿದ್ದು, ಅತೀವ ಹೊಟ್ಟೆ ನೋವು ಹಾಗೂ ವಯೋ ಸಂಬಂಧಿ ದುರ್ಬಲತೆಯಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                      ದಿನಾಂಕ 17/12/2017ರಂದು ಸಂಪಾಜೆ ಬಳಿಯ ಕೊಯನಾಡು ನಿವಾಸಿ ಮಹಮದ್ ಹನೀಫ್ ಎಂಬವರು ಸಮೀರ್‌,  ಅಶ್ರಫ್ ಮತ್ತು ಜಾಫರ್ ಎಂಬವರೊಂದಿಗೆ ಕೆಎ-21-ಎಂ-9337ರ ಕಾರಿನಲ್ಲಿ ಸಂಪಾಜೆಯ ದೇವಿಚರಣ್ ಎಂಬವರ ಸಾವಿನ ಅಂತಿಮ ದರ್ಶನಕ್ಕೆ ಹೋಗಿ ಮರಳಿ ಬರುವಾಗ ಸಂಪಾಜೆಯ ಅರಣ್ಯ ಕಚೇರಿ ಬಳಿ ಕಾರು ನಿಲ್ಲಿಸಿ  ಸಮೀಪದ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋಗಿ ಸ್ನಾನ ಮುಗಿಸಿ ಮರಳಿ ಕಾರಿನ ಬಳಿ ಬರುವಾಗ ಯಾರೋ ಕಳ್ಳರು ಕಾರಿನ ಗಾಜನ್ನು ಒಡೆದು ಒಳಗಿದ್ದ ಎರಡು ಮೊಬೈಲ್ ಫೋನ್, ವಾಚು ಮತ್ತು ನಗದು ರೂ.3000/- ಸೇರಿದಂತೆ ಒಟ್ಟು ರೂ.30,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಂಶಯಾಸ್ಪದ ವ್ಯಕ್ತಿಯ ಬಂಧನ
                    ದಿನಾಂಕ 18/12/2017ರ ಮುಂಜಾನೆ 3:00 ಗಂಟೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಬಿ ಈರಪ್ಪರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಸುಂಟಿಕೊಪ್ಪ ನಗರದ ಮಸೀದಿಯ ಪಕ್ಕದ ಅಂಗಡಿಯ ಬಳಿ ಕೇರಳದ ಮಾನಂದವಾಡಿ ನಿವಾಸಿ ರಾಘವನ್ ಎಂಬ ವ್ಯಕ್ತಿಯು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದು ಯಾವುದೇ ರೀತಿಯ ಸಮಂಜಸ ಉತ್ತರ ನೀಡದ  ಕಾರಣ ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
                  ದಿನಾಂಕ 18/12/2017ರಂದು ಕುಶಾಲನಗರದ ರಾಧಾಕೃಷ್ಣ ಬಡಾವಣೆ ನಿವಾಸಿ  ಸೂರಪ್ಪ ಎಂಬವರು ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೂಡಿಗೆ ಕಡೆಯಿಂದ ಕೆಎ-14-ವಿ-4114ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೂರಪ್ಪನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ಗಾಯಾಳು ಸೂರಪ್ಪನವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
                    ದಿನಾಂಕ 17/12/2017ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಲಿಂಗಯ್ಯ ಎಂಬವರು ಬಟ್ಟೆ ಒಗೆಯಲೆಂದು ಪಕ್ಕದ ಕೆರೆಗೆ ಹೋಗಿದ್ದು ರಾತ್ರಿಯಾದರೂ ಬಾರದ ಕಾರಣ ಮಾರನೆ ದಿನ 18/12/2017ರಂದು ಹುಡುಕಾಡಿದಾಗ ಕೆರೆಯ ಬಳಿ ಆತನ ಬಟ್ಟೆಗಳು ಕಾಣ ಸಿಕ್ಕಿದ್ದು ನಂತರ ಅಗ್ನಿ ಶಾಮಕ ದಳದ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದಾಗ ಲಿಂಗಯ್ಯನ ಮೃತ ದೇಹ ಪತ್ತೆಯಾಗಿದ್ದು ಬಟ್ಟೆ ಒಗೆಯುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗಿಡಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, December 18, 2017

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ:

     ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಪಿಸ್ತೂಲಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಸಮೀಪದ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಸಂಪಾಜೆ ಗ್ರಾಮದ ನಿವಾಸಿ ಶ್ರೀಮತಿ ಟೀನಾ ಎಂಬವರ ಪತಿ ದೇವಿಚರಣ್ ಎಂಬವರು ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದು, ದಿನಾಂಕ 16-12-2017 ಸಂಜೆ 7-45 ಗಂಟೆಯಿಂದ ದಿನಾಂಕ 17-12-2017 ಬೆಳಗ್ಗೆ 7-45 ಗಂಟೆಯೊಳಗೆ ತಮ್ಮ ವಾಸದ ಮನೆಯಲ್ಲಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ವ್ಯಕ್ತಿಯ ಪತ್ನಿ ಶ್ರೀಮತಿ ಟೀನಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

 ಕಾರು ಡಿಕ್ಕಿ ಮಹಿಳೆ ಸಾವು:

    ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದ ಮಿನಿಹಟ್ ಹೊಟೇಲ್ ಮುಂದಿನ ರಸ್ತೆಯಲ್ಲಿ ದಿನಾಂಕ 17/12/2017 ರಂದು ಸಮಯ 3-15 ಗಂಟೆಗೆ ವಿರಾಜಪೇಟೆ ಕಡೆಯಿಂದ ಒಂದು ಲಾರಿ ಮಣ್ಣು ತುಂಬಿಸಿಕೊಂಡು ಬಂದು ಕೊಡವ ಸಮಾಜ ರಸ್ತೆಯ ಕಡೆಗೆ ಹೋಗುತ್ತಿದ್ದು ಆ ಸಮಯಕ್ಕೆ ಲಾರಿಯ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನವಾಗಿ ಚಲಾಯಿಸಿಕೊಂಡು ಬಂದು ಲಾರಿಯ ಮುಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅದೇ ವೇಗದಲ್ಲಿ ಕಾರು ಮುಂದೆ ಚಲಿಸಿ ಮಿನಿಹಟ್ ಹೋಟೇಲ್ ಮುಂಭಾಗದ ಮಣ್ಣು ರಸ್ತೆಯಲ್ಲಿ ನಿಂತಿದ್ದ ಒಬ್ಬ ಗಂಡಸು ಮತ್ತು ಹೆಂಗಸಿಗೆ ಡಿಕ್ಕಿಯಾದ ಪರಿಣಾಮ ಸದರಿಯವರುಗಳು ತೀವ್ರವಾಗಿ ಗಾಯಗೊಂಡು ಗಾಯಾಳುಗಳನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಲಾಗಿ ಗಾಯಾಳು ಮಹಿಳೆ 42 ವರ್ಷ ಪ್ರಾಯದ ಜೇನುಕುರುಬ್ ಜಾನುರವರು ಮೃತಪಟ್ಟಿದ್ದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
 
 
 

Sunday, December 17, 2017

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 10/12/2017ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸೋಮವಾರಪೇಟೆ ಬಳಿಯ ಯಡವಾರೆ ನಿವಾಸಿ ಅಭಿ ಪ್ರಸಾದ್‌ ಎಂಬವರು ದಿನಾಂಕ 16/12/2017ರಂದು ಮೃತರಾಗಿರುವುದಾಗಿ ವರದಿಯಾಗಿದೆ. ಮೃತ ಅಭಿಪ್ರಸಾದ್‌ ಸುಮಾರು ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದು ಪತ್ನಿ ತನ್ನನ್ನು ಬಿಟ್ಟು ಹೋಗಿರುವ ಬಗ್ಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನೆ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಕಳವು ಪ್ರಕರಣ
                      ದಿನಾಂಕ 05/12/2017ರಂದು ಸೋಮವಾರಪೇಟೆ ಬಳಿಯ ದೊಡ್ಡಹಣಕೋಡು ಗ್ರಾಮದ ನಿವಾಸಿ ಹೆಚ್‌.ಕೆ.ಪಾರ್ವತಿ ಎಂಬವರ  ಕಾಫಿ ತೋಟಕ್ಕೆ ಮರಗೋಡು ನಿವಾಸಿಗಳಾದ ಭಾರ್ಗವ ಹಾಗೂ ಜೀವರತ್ನ ಎಂಬವರು ಕೆಲಸಗಾರರೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಸುಮಾರು ರೂ.80,000/- ಮೌಲ್ಯದ 20 ರಿಂದ 25 ಚೀಲ ಕಾಫಿಯನ್ನು ಕುಯ್ದು ಕಳವು ಮಾಡಿಕೊಂಡು ಹೋಗಿದ್ದು ಹೋಗುವ ವೇಳೆಗೆ ಪಾರ್ವತಿಯವರ ಮನೆಯ ಹಿಂಭಾಗದ ಸಣ್ಣ ಮನೆಗೆ ಬೆಂಕಿ ಹಚ್ಚಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                             ದಿನಾಂಕ 16/12/2017ರಂದು ವಿರಾಜಪೇಟೆ ನಗರದ ಸುಣ್ಣದ ಬೀದಿ ನಿವಾಸಿ ಶಿವಪ್ರಸಾದ್‌ ಎಂಬವರು ಅವರ ಸ್ನೇಹಿತ ತನು ಕುಟ್ಟಪ್ಪ ಎಂಬವರೊಂದಿಗೆ ನಗರದ ಬದ್ರಿಯಾ ಜಂಕ್ಷನ್ ಬಳಿ ಊಟಕ್ಕೆ ಹೋಗುತ್ತಿರುವಾಗ ಅಭಿ, ಸಂತೋಷ್‌ ಮತ್ತಿಬ್ಬರು ಸೇರಿಕೊಂಡು ಫುಟ್‌ಪಾತ್‌ನಲ್ಲಿ ಟಿ ವಿ ಕೇಬಲ್ ಕೆಲಸ ನಡೆಯುತ್ತಿದ್ದು ರಸ್ತೆಯಲ್ಲಿ ಹೋಗುವಂತೆ ಹೇಳಿ ಜಗಳ ತೆಗೆದು ಶಿವಪ್ರಸಾದ್‌ರವರ ಮೇಲೆ ಕೇಬಲ್ ವಯರಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅಪಘಾತ
                           ದಿನಾಂಕ 16/12/2017ರಂದು ಆಂದ್ರ ಪ್ರದೇಶದ ಕಾನಿಪಾಕಂ ಗ್ರಾಮದ ನಿವಾಸಿ ವಿಸ್ಣು ಎಂಬವರು ಸ್ನೇಹಿತರಾದ ಸಮುದ್ರಳ ನಾಗ ರಕ್ಷಿತ, ಶರಣ್ಯ ಮತ್ತು ಚಂದನ್‌ ಎಂಬವರೊಂದಿಗೆ ಕೆಎ-51-ಡಿ-8081ರ ಕಾರಿನಲ್ಲಿ ಮಡಿಕೇರಿಯಿಂದ ನಾಗರಹೊಳೆಗೆ ಹೋಗುತ್ತಿರುವಾಗ ಮೂರ್ನಾಡು ಬಳಿಯ ಬೇತ್ರಿ ಸೇತುವೆ ಬಳಿ ಕಾರನ್ನು ಚಾಲಿಸುತ್ತಿದ್ದ ಸಮುದ್ರಳ ನಾಗರಕ್ಷಿತರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಚಾಲಕಿ ನಾಗ ರಕ್ಷಿತರವರ ಹತೋಟಿ ತಪ್ಪಿ ಸೇತುವೆ ಮೇಲಿನಿಂದ ಹೊಳೆಗೆ ಬಿದ್ದು ಅವಘಢಕ್ಕೀಡಾಗಿದ್ದು ಚಾಲಕಿ ಸಮುದ್ರಳ ನಾಗ ರಕ್ಷಿತರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, December 16, 2017

 
     ಕರ್ನಾಟಕದಾದ್ಯಂತ ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸ ಎಂದು ಆಚರಿಸುವ ಸಂಪ್ರದಾಯವಿದ್ದು, ಈ ತಿಂಗಳಲ್ಲಿ ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೆಡೆಸುವುದು, ಹಾಗೂ ಪತ್ತೆಯಾಗದ ಪ್ರಕರಣಗಳನ್ನು ಪತ್ತೆ ಮಾಡುವ ಕಾರ್ಯಗಳನ್ನು ನಿರ್ವಹಿಸಲಾಗುವುದು.

    ಈ ಬಗ್ಗೆ ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ಉಪ-ವಿಭಾಗದ ಮಟ್ಟದಲ್ಲಿ ತಂಡಗಳನ್ನು ರಚಿಸಿ ಉಪವಿಭಾಗದಲ್ಲಿ ಪತ್ತೆಯಾಗದ ಪ್ರಕರಣಗಳನ್ನು ಪತ್ತೆ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿರುತ್ತಾರೆ.
 
ಸರಗಳ್ಳತನ ಪ್ರಕರಣ ಪತ್ತೆ:
 
     ದಿನಾಂಕ 21/11/2017 ರಂದು ಮಾದಾಪುರ ಜಂಬೂರು ಗ್ರಾಮದಲ್ಲಿ ನಡೆದ ಜಂಬೂರು ಗ್ರಾಮದ ಪೌತಿ ಕುಟ್ಟಪ್ಪನವರ ಪತ್ನಿಯಾದ ಚಿಣ್ಣವ್ವ ಎಂಬುವರ ಸರಗಳ್ಳತನದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆ ಮೊ. ಸಂ. 343/17 ಕಲಂ 392 ರೀತ್ಯ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರು ಅವರ ತಂಡ ಹಾಗೂ ಡಿಸಿಐಬಿ ಪೊಲೀಸ್ ನಿರೀಕ್ಷಕರು ಅವರ ತಂಡ ಮಾದಾಪುರದ ಸೂರ್ಲಬ್ಬಿ ಗ್ರಾಮದ ನಿವಾಸಿಗಳಾದ ಮುದ್ದಂಡ ಎಂ. ಭೀಮಯ್ಯ @ ಭೀಮಣಿ ಹಾಗೂ ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು ಎಂಬುವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರ, ಉಂಜಿಗನಹಳ್ಳಿ ಹಾಗೂ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟಗೇರಿಯಲ್ಲಿ 3 ಮನೆಗಳ್ಳತನ,  ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಡವನಾಡು, ಬಜೆಗುಂಡಿ, ಜಂಬೂರಿನಲ್ಲಿ 3 ಸರಗಳ್ಳತನ ಹಾಗೂ ಇಗ್ಗೊಡ್ಲು ಗ್ರಾಮದ ಸೀತಮ್ಮ ರವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಅವರ ವಿವರ ಈ ಕೆಳಕಂಡಂತಿರುತ್ತದೆ.
 
1) ಮುದ್ದಂಡ ಎಂ. ಭೀಮಯ್ಯ @ ಭೀಮಣಿ ತಂದೆ ಪೌತಿ ಎಂ.ಕೆ. ಮುದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ    
    ಸೂರ್ಲಬ್ಬಿ ಗ್ರಾಮ ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.

2) ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು, ತಂದೆ ಪೌತಿ ಬಿದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ ಸೂರ್ಲಬ್ಬಿ ಗ್ರಾಮ
   ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.

    1 ಆರೋಪಿ ಮುದ್ದಂಡ ಭೀಮಯ್ಯ ನು 5 ನೇ ತರಗತಿಯವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ವ್ಯಾಸಂಗ ಮಾಡಿದ್ದು, ಮನೆಯಲ್ಲಿ ವ್ಯವಸಾಯ ವೃತ್ತಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.
 
    2ನೇ ಆರೋಪಿ ಮುದ್ದಂಡ ಬಿ. ಕಾರ್ಯಪ್ಪ ನು ದ್ವೀತಿಯ ಪಿ.ಯು.ಸಿ. ವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ಹಾಗೂ ಮಾದಾಪುರದಲ್ಲಿ ವ್ಯಾಸಾಂಗ ಮಾಡಿದ್ದು  2009ನೇ ಇಸವಿಯಲ್ಲಿ ಬೆಂಗಳೂರಿನ ಓಂ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸಿಂಡಿಕೇಟ್ ಬ್ಯಾಂಕ್ ನ ಎ.ಟಿ.ಎಂ., ಹಣ ಕಳ್ಳತನದ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿದೆ.
ಮೇಲ್ಕಂಡ ಆರೋಪಿಗಳು ಭಾಗಿಯಾಗಿದ್ದ ಪ್ರಕರಣಗಳ ವಿವರ ಈ ಕೆಳಕಂಡಂತಿದೆ
 
1. ಸೋಮವಾರಪೇಟೆ ಠಾಣೆ ಮೊ.ಸಂ.137/2014 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ರತನ್ ತಿಮ್ಮಯ್ಯ, ವಕೀಲರು, ಮೂವತ್ತೊಕ್ಲು ಗ್ರಾಮ ರವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಪೀಚೆ ಕತ್ತಿ-

2. ಸೋಮವಾರಪೇಟೆ ಠಾಣೆ ಮೊ.ಸಂ.278/14 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಶ್ರೀಮತಿ ಶೀಲ ಯಡವನಾಡು ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ-

3. ಸೋಮವಾರಪೇಟೆ ಠಾಣೆ ಮೊ.ಸಣ.36/15 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಅಯ್ಯಪ್ಪ, ಉಂಜಿಗನ ಹಳ್ಳಿ ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ, 1 ಬೆಳ್ಳಿಯ ಚೈನು.

4. ಸೋಮವಾರಪೇಟೆ ಠಾಣೆ ಮೊ.ಸಣ 193/15 ಕಲಂ 392 ಐಪಿಸಿ ಪ್ರಕರಣದ  ಫಿರ್ಯಾದುದಾರರಾದ ಪ್ರೇಮ, ಬಜೆಗುಂಡಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-

5. ಕುಶಾಲನಗರ ಗ್ರಾಮಾಂತರ ಠಾಣೆ ಮೊ.ಸಂ 70/15 ಕಲಂ 454, 380 ಐಪಿಸಿ ಪ್ರಕರಣದ  ಫಿರ್ಯಾದುದಾರರಾದ ಗಣೇಶ, ಚಿಕ್ಕಬೆಅಗೇರಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-

6. ಸೋಮವಾರಪೇಟೆ ಠಾಣೆ ಮೊ.ಸಂ299/17 ಕಲಂ 302, 201 ಐಪಿಸಿ ಪ್ರಕರಣದ  ಫಿರ್ಯಾದುದಾರರಾದ ಇಗ್ಗೋಡ್ಲು ಗ್ರಾಮದ ಸೀತಮ್ಮರವರ ಕೊಲೆ ಪ್ರಕರಣಕ್ಕೆ ಸಮಬಂಧಿಸಿದಂತೆ 16 ಗ್ರಾಂ ಚಿನ್ನದ ಗಟ್ಟಿ-

7. ಸೋಮವಾರಪೇಟೆ ಠಾಣೆ ಮೊ.ಸಂ. 343/17 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ , ಜಂಬೂರು ಗ್ರಾಮದ ಚಿಣ್ಣವ್ವ ಇವರಿಗೆ ಸೇರಿದ 12 ಗ್ರಾಂ. ಚಿನ್ನದ ಗಟ್ಟಿ, 2 ಗ್ರಾಂ ಚಿನ್ನದ ಚೈನು ಚೂರು, 1 ಪಲ್ಸರ್ ಬೈಕ್, 1 ಹೆಲ್ಮಟ್, 1 ಬ್ಯಾಗ್ - ವಶಪಡಿಸಿಕೊಳ್ಳಲಾಗಿದೆ.

ಸದರಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮಾಲಿನ ವಿವರ ಈ ಕೆಳಕಂಡಂತಿರುತ್ತದೆ.

(1) 114 ಗ್ರಾಂ. ಚಿನ್ನ
(2) ಒಂದು ಬೆಳ್ಳಿಯ ಚೈನು
(3) 94 ಕೆ.ಜಿ. ಕರಿಮೆಣಸು
(4) ಒಂದು ಪೀಚೆ ಕತ್ತಿ
(5) ರೂ 5,000/- ನಗದು
(6) ಪಲ್ಸರ್ ಬೈಕ್ ನಂ. ಕೆಎ-04-ಹೆಚ್.ಜೆ.-7361 (ಕೃತ್ಯ ಮಾಡಲು ಉಪಯೋಗಿಸಿದ ವಾಹನ)
(7) ಒಂದು ಹೆಲ್ಮೆಟ್ ಹಾಗೂ ಒಂದು ಬ್ಯಾಗ್ 
 
     ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ  ಮಾರ್ಗದರ್ಶನದಲ್ಲಿ  ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಮಡಿಕೇರಿ ಡಿ.ಸಿ.ಐ.ಬಿ., ವಿಭಾಗದ ಆರಕ್ಷಕ ನಿರೀಕ್ಷಕರಾದ ಎಂ.ಮಹೇಶ, ಶನಿವಾರಸಂತೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಹೆಚ್.ಎಂ. ಮರಿಸ್ವಾಮಿ, ಸೋಮವಾರಪೇಟೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ. ಶಿವಣ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಪಿ. ಜಗದೀಶ ಹಾಗೂ ಸೋಮವಾರಪೇಟೆ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ದಯಾನಂದ, ಸಜಿ, ಪ್ರಕಾಶ, ಸಂದೇಶ, ಜೋಸೆಫ್, ಉದಯ, ಸುಧೀಶ, ಮುಸ್ತಾಫ, ಸುರೇಶ, ಪ್ರದೀಪ, ಹರೀಶ, ಪರಮೇಶ, ಮಂಜು, ಕುಮಾರಸ್ವಾಮಿ, ಅನಂತ, ಸ್ವಾಮಿ ಮತ್ತು  ಡಿಸಿಐಬಿ ಸಿಬ್ಬಂದಿಯಾದ ಯೋಗೇಶ್ ರವರುಗಳು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
 

ಮೋಟಾರ್ ಸೈಕಲ್ ಕಳವು ಪ್ರಕರಣ ಪತ್ತೆ, ಆರೋಪಿ ಬಂಧನ:
 
      ಕೊಡಗು ಜಿಲ್ಲೆಯಾದ್ಯಂತ ದ್ವಿಚಕ್ರವಾಹನಗಳ ಕಳವು ಹೆಚ್ಚಾಗುತ್ತಿದ್ದು, ಪೊಲೀಸ್ ಅಧೀಕಕ್ಷರು ರವರ ಸೂಚನೆಯಂತೆ ಕಾರ್ಯಪ್ರವೃತ್ತರಾದ ಕುಶಾಲನಗರ ಪೊಲೀಸರು ದ್ವಿಚಕ್ರವಾಹನಗಳ ಕಳವು ಮಾಡಿರುವ ಆಸಾಮಿಯನ್ನು ಮಾಲು ಸಮೇತ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ದಿನಾಂಕ: 05.12.2017 ರಂದು ಒಬ್ಬ ಆಸಾಮಿಯು ಕುಶಾಲನಗರದ ಕೂಡಿಗೆ ಸೇತುವೆಯ ಬಳಿ ದ್ವಿಚಕ್ರ ವಾಹನವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕುಶಾಲನಗರ ವೃತ್ತ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಪರಿಶೀಲನೆಯ ಬಗ್ಗೆ ಕೂಡಿಗೆ ಸೇತುವೆಯ ಬಳಿ ತೆರಳಿದಾಗ ಅಲ್ಲಿನ ಗ್ಯಾರೇಜ್ ನ ಮುಂದೆ ಕೆಎ-05-ಇಎಫ್-7085 ರ ಮೋಟಾರ್ ಸೈಕಲ್ನೊಂದಿಗೆ ನಿಂತಿದ್ದ ವ್ಯಕ್ತಿಯು ಇವರನ್ನು ನೋಡಿ ಪರಾರಿಯಾಗಲು ಯತ್ನಿಸಿದವನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿ ಮೋಟಾರ್ ಸೈಕಲ್ ಕುಶಾಲನಗರದ ಇಂದಿರಾ ಬಡಾವಣೆಯಲ್ಲಿ ಕಳುವು ಮಾಡಿರುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿಯ ಹೆಸರು ಈ ಕೆಳಕಂಡಂತೆ ಇರುತ್ತದೆ.
1. ಬೋಪಣ್ಣ ಎಂ.ಎ. @ ಶರಣ್ @ ಹರ್ಷ, ತಂದೆ: ಪೌತಿ ಅಚ್ಚಯ್ಯ, ಪ್ರಾಯ: 28 ವರ್ಷ, ವಾಸ: ಕಾಂಡನಕೊಲ್ಲಿ ಗ್ರಾಮ, ಸುಂಟಿಕೊಪ್ಪ.

     ಸದರಿ ಆರೋಪಿಯನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ಆತನು 10 ನೇ ತರಗತಿಯವರೆಗೆ ಸುಂಟಿಕೊಪ್ಪ ಮಾದಾಪುರದ  ಸರಕಾರಿ  ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಬೆಂಗಳೂರಿನ ಎ.ಡಿ.ಸಿ. ಹಾಗೂ ಸೆಕ್ಯೂರ್ ವ್ಯಾಲ್ಯೂ ಸಾಫ್ಟವೇರ್ ಕಂಪೆನಿಗಳಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದು, ನಂತರ ಮಡಿಕೇರಿಯ ವ್ಯಾಂಡಮ್ ಎಂಟರ್ ಪ್ರೈಸೆಸ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿ ನಂತರ ಬೆಂಗಳೂರಿನ ಜಿ ಪಿ. ಮಾರ್ಗನ್ ಕಂಪೆನಿಯಲ್ಲಿ ಟಿ ಕೌಂಟರ್ ನಡೆಸುತ್ತಿರುವುದಾಗಿ, ಬೆಂಗಳೂರು, ಮೈಸೂರು, ಮಡಿಕೇರಿಗಳಲ್ಲಿ ಒಟ್ಟು 21 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿಯು ಭಾಗಿಯಾಗಿರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳ ವಿವರ ಈ ಕೆಳಕಂಡಂತಿರುತ್ತದೆ.
 
 
ಕೊಡಗು ಜಿಲ್ಲೆ:      ಕುಶಾಲನಗರ-   01,
ಮೈಸೂರು ಜಿಲ್ಲೆ:   ಹುಣಸೂರು-   05,  ಪಿರಿಯಾಪಟ್ಟಣ- 06,   ಬಿಳಿಕೆರೆ- 04 
ಮಂಡ್ಯ   ಜಿಲ್ಲೆ:      ಶ್ರೀರಂಗಪಟ್ಟಣ- 01
                          ಕೆ.ಆರ್.ಎಸ್  -  02 
ಬೆಂಗಳೂರು         ನಗರ- 02 
                                       ಒಟ್ಟು 21 
 
     ಆರೋಪಿಯು ಸದರಿ ಮೋಟಾರ್ ಸೈಕಲ್ಗಳನ್ನು ಕಳುವು ಮಾಡಿ ಕುಶಾಲನಗರದಲ್ಲಿ-03, ಸುಂಟಿಕೊಪ್ಪದಲ್ಲಿ-01, ಕಾಂಡನಕೊಲ್ಲಿಯಲ್ಲಿ-01, 7ನೇಹೊಸಕೋಟೆಯಲ್ಲಿ-01, ಮಡಿಕೇರಿಯಲ್ಲಿ-03, ಮಾದಾಪುರದಲ್ಲಿ-02,  ಮುರ್ನಾಡಿನಲ್ಲಿ-01, ವಿರಾಜಪೇಟೆಯಲ್ಲಿ-04, ಗೋಣಿಕೊಪ್ಪದಲ್ಲಿ-02, ಸಿದ್ದಾಪುರದಲ್ಲಿ-01 ಮತ್ತು ಬೆಂಗಳೂರಿನಲ್ಲಿ-01 ಕಡೆಯ  ಗ್ಯಾರೇಜ್ ಗಳಲ್ಲಿ ಮೆಕ್ಯಾನಿಕ್ ಗಳಿಗೆ ಹಾಗೂ ಆರೋಪಿಯ ಸ್ನೇಹಿತರಿಗೆ ಸ್ವಂತದೆಂದು ನಂಬಿಸಿ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಸದರಿ ಆರೋಪಿ ಕಳವು ಮಾಡಿದ್ದ ಸುಮಾರು 6,30,000/- ರೂ ಬೆಲೆಯ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

      ಸದರಿ ಆರೋಪಿ ಬೋಪಣ್ಣ ಎಂ.ಎ. ವಿರುದ್ಧ ಈ ಹಿಂದೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಮೊ.ಸಂ. 67/2016 ಕಲಂ 379 ಐ.ಪಿ.ಸಿ ಯನ್ವಯ ಕಳುವು ಪ್ರಕರಣ ದಾಖಲಾಗಿರುತ್ತದೆ.

    ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ  ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ರವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ. ಕ್ಯಾತೇಗೌಡ, ಕುಶಾಲನಗರ ನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್.ಪಿ, ಸಿಬ್ಬಂದಿಯವರಾದ ಶ್ರೀ.ಸುಧೀಶ್ಕುಮಾರ್, ಶ್ರೀ ಲೋಕೇಶ್, ಶ್ರೀ. ಮುಸ್ತಾಫ, ಶ್ರೀ ಸಜಿ, ಶ್ರೀ. ದಯಾನಂದ, ಶ್ರೀ. ಸುರೇಶ್, ಶ್ರೀ. ಉದಯಕುಮಾರ್, ಶ್ರೀ. ಸಂಪತ್ ರೈ, ಶ್ರೀ. ಚಾಲಕರಾದ ಶ್ರೀ. ಲೋಕೇಶ್ ಬಿ.ಆರ್. ಮತ್ತು  ಶ್ರೀ. ಗಣೇಶ್ ಹಾಗೂ ಸೈಬರ್ ಸೆಲ್ನ ಶ್ರೀ.ರಾಜೇಶ್ ಹಾಗೂ ಶ್ರೀ.ಗಿರೀಶ್, ಹೋಂಗಾಡರ್್ ಕುಮಾರ ರವರು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

      ಸಾರ್ವಜನಿಕರು ಹಳೆಯ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಸದರಿ ವಾಹನದ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿರುವ ವಾಹನ ತಪಾಸಣಾ ವಿಭಾಗದಲ್ಲಿ ಪರಿಶೀಲನೆ ಮಾಡಿಸಿ ನಂತರ ಆ ವಾಹನವನ್ನು ಖರೀದಿಸುವಂತೆ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ಕೋರಿರುತ್ತಾರೆ.
 
ಕೊಲೆ ಪ್ರಕರಣ ಆರೋಪಿ  ಬಂಧನ:

          ಈ ಬಗ್ಗೆ ಕಾರ್ಯಪ್ರವೃತ್ತರಾದ ಕುಟ್ಟ ವೃತ್ತ ನಿರೀಕ್ಷಕರು ದಿನಾಂಕ: 22-10-2017 ರಂದು ಕೊಡಗು ಜಿಲ್ಲೆಯ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ನೆಡೆದ ಶ್ರೀಮತಿ ಸುಂದರಮ್ಮ ರವರ ಕೊಲೆ  ಪ್ರಕರಣದಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಅವರ ತಂಡ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆ ಮೊ.ಸಂ. 96/2017 ಕಲಂ 302,201 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಪ್ರಾರಂಬಿಸಿದ ಕುಟ್ಟ ವೃತ್ತ ನಿರೀಕ್ಷಕರು ಹಾಗೂ ಅವರ ತಂಡ ಮಾಹಿತಿಯನ್ನು ಕಲೆಹಾಕಿದ್ದು, ಆರೋಪಿಯು ಕೇರಳ ರಾಜ್ಯದ ಕ್ಯಾಲಿಕಟ್ನಲ್ಲಿ ಅಡಗಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ.
 
ದಸ್ತಗಿರಿ ಮಾಡಿದ ಆರೋಪಿಯ ವಿವರ :
ಸಿ.ಹೆಚ್. ಅನೀಶ್ ತಂದೆ ಹಮೀದ್, ಪ್ರಾಯ 23 ವರ್ಷ, ಕೂಲಿ ಕೆಲಸ, ವಾಸ ಕೊಳಕೇರಿ ಗ್ರಾಮ, ನಾಪೋಕ್ಲು

     ಆರೋಪಿಯನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ ಆತನು ಹಣ ಮತ್ತು ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಶ್ರೀಮತಿ ಸುಂದರಮ್ಮ ರವರನ್ನು ಕೊಲೆ ಮಾಡಿ 550/- ರೂ ನಗದು ಮತ್ತು ಮೃತೆ ಬಳಸುತ್ತಿದ್ದ ಒಂದು ನೋಕಿಯೋ ಮೊಬೈಲ್ನ್ನು ತೆಗೆದುಕೊಂಡು ಪರಾರಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
 
     ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ಹಾಗೂ ವಿರಾಜಪೇಟೆ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ.ನಾಗಪ್ಪ, ರವರ ಮಾರ್ಗದರ್ಶನದಲ್ಲಿ ಶ್ರೀ.ಪಿ.ಕೆ ರಾಜು ಸಿ.ಪಿ.ಐ ಕುಟ್ಟ ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹೆಚ್.ಸಿ ಸಣ್ಣಯ್ಯ , ಸಿಬ್ಬಂದಿಯವರಾದ  ಟಿ.ಕೆ ರವಿ, ಎ.ಪಿ ವಿಶ್ವನಾಥ, ಕೆ.ಎನ್ ದಿನೇಶ್, ಎ.ಎ ಗಣೇಶ್, ಡಿ. ರಾಮಕೃಷ್ಣ, ಅಬ್ದುಲ್ ಮಜೀದ್ , ಪ್ರಸನ್ನ, ಎಲ್.ಕೆ ಧನಂಜಯ ಮತ್ತು ಜಿಲ್ಲಾ ಪೊಲೀಸ್ ಸಿಡಿಆರ್ ಘಟಕದ ರಾಜೇಶ್ ಮತ್ತು ಗಿರೀಶ್ ರವರು ಭಾಗವಹಿಸಿದ್ದು, ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ.

ರೈಸ್ ಪುಲ್ಲಿಂಗ್ ಪ್ರಕರಣ:

      ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಸಾತ್ವಿಕ್ ಕೂರ್ಗ್  ಎಂಬ ಹೋಂಸ್ಟೇ ಮಾಲೀಕರಾದ ಭೋಗಪ್ಪ ಎಂಬುವರಿಗೆ ಮುಳ್ಳುಸೋಗೆ ಗ್ರಾಮದ ಎಂ.ಜಿ.ಸ್ವಾಮಿ ಎಂಬಾತ (ಆರ್.ಪಿ.) ರೈಸ್ ಪುಲ್ಲಿಂಗ್ ಮಾಡಿಕೊಡುತ್ತೇವೆಂದು ಇದುವರೆಗೆ ರೂ. 23,00,000 ಹಣ ಪಡೆದುಕೊಂಡಿರುತ್ತಾರೆ. ದಿನಾಂಕ 14/12/17 ರಂದು ಸ್ವಾಮಿಯವರು ಕಳುಹಿಸಿದ್ದೆಂದು ಹೇಳಿ ನಂಜನಗೂಡಿನ ಬಾಬುರಾಜ್ ಮತ್ತು ಇತರ 9 ಜನರು ಬಂದು ಬೋಗಪ್ಪರವರ ಹೋಂಸ್ಟೇನಲ್ಲಿ ತಂಗಿದ್ದು, ದಿನಾಂಕ 15/12/17 ರಂದು ಮದ್ಯಾಹ್ನ ಬಾಬುರಾಜ್ ಬೋಗಪ್ಪರವರೊಂದಿಗೆ ಮಾತನಾಡಿ ಸ್ವಾಮಿಯವರು ಕಳುಹಿಸಿದಂತೆ ನಿಮ್ಮ ಮನೆಯಲ್ಲಿ ರೈಸ್ ಪುಲ್ಲಿಂಗ್ ಮಾಡಲು ಬಂದಿದ್ದು, ಇದಕ್ಕಾಗಿ ರೇಡಿಯೇಷನ್ ಪವರ್ ಮೆಟಲ್ ತಂದಿರುತ್ತೇವೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಕೋಟ್ಯಾಧಿಪತಿಯಾಗಬಹುದೆಂದು ತಿಳಿಸಿ ತಮ್ಮೊಂದಿಗೆ ತಂದಿದ್ದ ಬಾಕ್ಸೊಂದನ್ನು ತೋರಿಸಿರುತ್ತಾರೆ. ಬಾಕ್ಸನ್ನು ತೆರೆಯಲು ರೂ. 20,00,000 ಹಣ ನೀಡುವಂತೆ ಹೇಳಿದ್ದು, ಬೋಗಪ್ಪರವರು ರೂ. 20,000 ನೀಡಿ ಬಾಕ್ಸನ್ನು ತೆರೆಯಿಸಲಾಗಿ ಅದರಲ್ಲಿ ಒಂದು ತಾಮ್ರದ ಬಿಂದಿಗೆ ಮಾತ್ರವೇ ಇದ್ದುದರಿಂದ ಸದರಿಯವರು ತಮ್ಮನ್ನು ನಂಬಿಸಿ ಮೋಸ ಮಾಡಿರುವುದಾಗಿ ಕೂಡಲೇ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಮೇರೆಗೆ ಠಾಣೆಯಲ್ಲಿ ಮೊ.ಸಂ. 172/17 ಕಲಂ 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಕೂಡಲೇ ಕುಶಾಲನಗರ ವೃತ್ತ ನಿರೀಕ್ಷಕರಾದ ಶ್ರೀ ಕ್ಯಾತೇಗೌಡರವರಿಗೆ ಮಾಹಿತಿ ನೀಡಿ ಅವರ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ಜೆ.ಇ.ಮಹೇಶ್ ಮತ್ತು ವೃತ್ತ ಕಛೇರಿಯ ಅಪರಾಧ ಪತ್ತೆ ಸಿಬ್ಬಂದಿ ಹಾಗೂ ಠಾಣಾ ಸಿಬ್ಬಂದಿಯವರು ಚಿಕ್ಕತ್ತೂರು ಗ್ರಾಮದಲ್ಲಿನ ಬೋಗಪ್ಪರವರ ಹೋಂಸ್ಟೇಗೆ ದಾಳಿ ನಡೆಸಿ ಆರೋಪಿತರಾದ

1) ಬಾಬುರಾಜ್, ತಂದೆ ರಾಮಕೃಷ್ಣ, 29 ವರ್ಷ, ರಿಯಲ್ ಎಸ್ಟೇಟ್ ವೃತ್ತಿ, ಅಂಡರವಳ್ಳಿ ಬಡಾವಣೆ, ನಂಜನಗೂಡು.
2) ಕೆ.ಎಸ್.ನಿಖಿಲ್, ತಂದೆ ಸೋಮೇಶ್ ಗೌಡ, 25 ವರ್ಷ, ಚಿಕ್ಕೇರೂರು ಗ್ರಾಮ, ಹಂಪಾಪುರ ಹೋಬಳಿ, ಹೆಚ್.ಡಿ. ಕೋಟೆ
3) ಎಂ.ಎಸ್.ದಿಲೀಪ್, ತಂದೆ ಶಾಂತವೀರೇಗೌಡ, 31 ವರ್ಷ, ಚಾಲಕ ವೃತ್ತಿ, ವಾಸ ವಾಣಿ ವಿಲಾಸ ವಸತಿಗೃಹ,

    ಕೆ.ಆರ್.ಎಸ್, ಮಂಡ್ಯ.
4) ಸತ್ಯಾನಂದ, ತಂದೆ ಸ್ವಾಮಿ, 28 ವರ್ಷ, ಡೋರ್ ನಂ. 68 ಬಸ್ತಿಹಳ್ಳಿ, ಚಿನಕುರುಳಿ ಅಂಚೆ. ಮಂಡ್ಯ ಜಿಲ್ಲೆ.
5) ಎನ್.ಪ್ರತಾಪ್, ತಂದೆ ನಂಜುಂಡಯ್ಯ, 24 ವರ್ಷ, ಸರಗೂರು ಗ್ರಾಮ, ನಗರಳ್ಳಿ ಅಂಚೆ, ನಂಜನಗೂಡು.
6) ಎಂ.ರಾಜು, ತಂದೆ ಮಾದೇವ, 20 ವರ್ಷ, ಕೆ.ಆರ್.ಎಸ್. ಚೆಕ್ ಪೋಸ್ಟ್, ಹೊಂಗಳ್ಳಿ ಗ್ರಾಮ, ಕೆ.ಆರ್.ಎಸ್, ಮಂಡ್ಯ.
7) ಸುಜೇಂದ್ರ್ರಕುಮಾರ್, ತಂದೆ ಆನಂದ ಕುಮಾರ್, 27 ವರ್ಷ, ವ್ಯವಸಾಯ ವೃತ್ತಿ, ಹೊಸಕನ್ನಂಬಾಡಿ ಗ್ರಾಮ, ಚಿನಕುರುಳಿ

    ಹೋಬಳಿ, ಪಾಂಡವಪುರ, ಮಂಡ್ಯ
8) ಅಪೇಕ್ಷಿತ್, ತಂದೆ ಸ್ವಾಮಿಗೌಡ, 19 ವರ್ಷ, ರಾಣಿ ಮದ್ರಾಸ್ ಫ್ಯಾಕ್ಟರಿ. ಬಿಜಿಎಸ್ ಸ್ಕೂಲ್ ಹತ್ತಿರ, ವಾಸ ವಾಣಿ ವಿಲಾಸ

    ವಸತಿಗೃಹ, ಕೆ.ಆರ್.ಎಸ್, ಮಂಡ್ಯ.
9)  ಎಂ.ಉಮೇಶ, ತಂದೆ ಮುನಿವೆಂಕಟರಾಯಪ್ಪ ಪ್ರಾಯ 25 ವರ್ಷ, ಚಾಲಕ ವೃತ್ತಿ, ವಾಸ ತಮಿಳು ಸ್ಟ್ರೀಟ್, ಕಿರಂಗೂರು

     ಗ್ರಾಮ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ
10) ಕೆ.ಆರ್.ಸಂತೋಷ್, ತಂದೆ ರೇಣುಕೇಗೌಡ, 21 ವರ್ಷ, ವಾಸ ಸ್ಕೂಲ್ ಮನೆ ಪಕ್ಕ, ಬ್ಯಾಕ್ ವಾಟರ್, ಹೊಸಕನ್ನಂಬಾಡಿ,

     ಕೆ.ಆರ್.ಎಸ್. ಮಂಡ್ಯ ಜಿಲ್ಲೆ.

     ಇವರುಗಳನ್ನು ವಶಕ್ಕೆ ಪಡೆದು ಅವರಿಂದ ಒಂದು ತಾಮ್ರದ ಬಿಂದಿಗೆ, ಒಂದು ಪ್ಲೈವುಡ್ ಬಾಕ್ಸ್, ಕೆಎ 12 ಎನ್ 3372 ರ ಚವರ್ ಲೆಟ್ ಮತ್ತು ಕೆಎ 25 ಎಂ 8292 ರ ಕ್ವಾಲೀಸ್ ವಾಹನ, 20,000 ರೂ. ನಗದು ಹಣ ಹಾಗೂ 12 ಮೊಬೈಲ್ ಫೋನ್ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಬಂಧಿತ ಆರೋಪಿತರಲ್ಲಿ ಬಾಬುರಾಜ್ ಎಂಬಾತ ಇಂತಹುದೇ ಕೃತ್ಯಕ್ಕೆ ಸಂಬಂಧಿಸಿದಂತೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆ ಮೊ.ಸಂ. 4/16 ಕಲಂ 420 ರೆ/ವಿ 34 ಐಪಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿರುತ್ತದೆ. ಉಳಿದವರು ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು. ಮತ್ತು ಪ್ರಕರಣದ 1 ನೇ ಆರೋಪಿ ಎಂ.ಜಿ.ಸ್ವಾಮಿ ಪತ್ತೆಯಾಗಬೇಕಾಗಿದ್ದು, ಪತ್ತೆ ಬಗ್ಗೆ ಕ್ರಮ ಕೈಗೊಳ್ಳಲಾಗಿರುತ್ತದೆ. 

     ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಡಿವೈಎಸ್ಪಿ ಕುಶಾಲನಗರ ರವರ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯದ ತಂಡದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ, ಕುಶಾಲನಗರ ಗ್ರಾಮಾಂತರ ಪಿಎಸ್ಐ ಜೆ.ಇ.ಮಹೇಶ್, ವೃತ್ತದ ಅಪರಾಧ ಪತ್ತೆ ಸಿಬ್ಬಂದಿಯವರಾದ ಸುರೇಶ್, ಸುದೀಶ್ ಕುಮಾರ್, ಮುಸ್ತಾಫ ಹಾಗೂ ಠಾಣಾ ಸಿಬ್ಬಂದಿ ಪೊನ್ನಪ್ಪ, ಜಯಪ್ರಕಾಶ್, ಅಜಿತ್, ಲೋಕೇಶ್ ಕುಮಾರ್, ನಾಗರಾಜು ಹಾಗೂ ಚಾಲಕರಾದ ಗಣೇಶ್ ಮತ್ತು ರಾಜುರವರು ಭಾಗಿಯಾಗಿದ್ದು, ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸೆಯೊಂದಿಗೆ ಶ್ಲಾಘಿಸಿರುತ್ತಾರೆ.  
 

ರಸ್ತೆ ಅಪಘಾತ ಲಾರಿ ಚಾಲಕ ಸಾವು:

     ಮೈಸೂರು ನಗರದ ವಿಜಯನಗರದ ನಿವಾಸಿ ಮಧುಸೂದನ್ ಎಂಬವರ ತಂದೆ ರಾಮುರವರು ಸಿದ್ದಾಪುರದ ನಿವಾಸಿ ವಿಜಯ್ ರವರಿಗೆ ಸೇರಿದ KA-19-A-9745 ರ ಲಾರಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು, ರಾಮು ರವರು ದಿನಾಂಕ 13-12-2017 ರಂದು ಕುಶಾಲನಗರ ಬಳಿಯ ಕೂಡಿಗೆ ಕಾಫಿ ವರ್ಕ್ಸ್ ನಲ್ಲಿ ಲಾರಿಯಲ್ಲಿ ಕಾಫಿ ಬೂಸವನ್ನು ತುಂಬಿಸಿಕೊಂಡು ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿರುವಾಗ ಸಮಯ 7.15 ಪಿ.ಎಂ ಗೆ ಮದೆನಾಡು ಗ್ರಾಮದ ಜೋಡುಪಾಲದಲ್ಲಿ ಲಾರಿ ಮೋಟಾರ್ ಬೈಕಿಗೆ ತಾಗುವುದನ್ನು ತಪ್ಪಿಸಲು ಬಲಗಡೆಗೆ ತೆಗೆದುಕೊಂಡಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಯ ಹಳ್ಳಕ್ಕೆ ಬಿದ್ದು, ಲಾರಿ ಚಾಲಕ ರಾಮುರವರು ಸ್ಥಳದಲ್ಲಿ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿವೇಶನ ಮಾರಾಟದಲ್ಲಿ ವಂಚನೆ:

      ಮಡಿಕೇರಿ ತಾಲೋಕು 1ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರು ವಿರಾಜಪೇಟೆ ತಾಲೋಕು ಕಾವಾಡಿ ಗ್ರಾಮದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ರವರಿಗೆ ದಿನಾಂಕ 27-4-2017 ರಂದು ರೂ. 3,00,000/- ಗಳಿಗೆ ನಿವೇಶನ ಮಾರಾಟ ಮಾಡಲು ಒಪ್ಪಿದ್ದು, ಆ ಬಾಪ್ತು ಮುಂಗಡವಾಗಿ 50,000/- ರೂಗಳನ್ನು ನೀಡಿದ್ದು ಉಳಿದ 2,50,000/- ರೂಗಳನ್ನು ನೋಂದಣಿ ಮಾಡುವ ಕಾಲಕ್ಕೆ ಪಡೆಯುವುದಾಗಿ ಒಪ್ಪಿ ಮಾರಾಟ ಒಪ್ಪಂದ ಪತ್ರ ಮಾಡಿಕೊಟ್ಟಿದ್ದು, ನಂತರದ ದಿನಗಳಲ್ಲಿ ಕುಶಾಲಪ್ಪನವರು ಆ ಮೊತ್ತಕ್ಕೆ ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹಾಗೂ ಸದರಿ ನಿವೇಶನ ಹೆಚ್ಚಿಗೆ ಬೆಲೆಬಾಳುತ್ತದೆಂದು ಹೇಳಿಕೊಂಡು ನಿವೇಶನವನ್ನು ನೋಂದಣಿ ಮಾಡಿಕೊಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಯು.ಚೆಂಬು ಗ್ರಾಮದ ನಿವಾಸಿ ಪುರುಷೋತ್ತಮ ಎಂಬವರ ತಂಗಿ ಶ್ರೀಮತಿ ಲಾಲಿ @ ಅನಿತ ಎಂಬವರು ದಿನಾಂಕ 14-12-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Friday, December 15, 2017

ಲಾರಿ ಮಗುಚಿ ಚಾಲಕ ಸಾವು
                      ದಿನಾಂಕ 13/12/2017ರಂದು ಮೈಸೂರಿನ ವಿಜಯನಗರ ನಿವಾಸಿ ರಾಂಉ ಎಂಬವರು ಸಿದ್ದಾಪುರದ ವಿಜಯ್‌ ಎಂಬವರಿಗೆ ಸೇರಿದ ಕೆಎ-19-ಎಬಿ-9745ರ ಲಾರಿಯಲ್ಲಿ ಕಾಫಿಯ ಸಿಪ್ಪೆಯನ್ನು ತುಂಬಿಕೊಂಡು ಕೂಡಿಗೆಯಿಂದ ಮಂಗಳೂರಿಗೆ ಹೋಗುತ್ತಿರುವಾಗ ಜೋಡುಪಾಲ ಬಳಿ ಎದುರಿನಿಂದ ಬರುತ್ತಿದ್ದ ಬೈಕನ್ನು ತಪ್ಪಿಸಲು ರಾಮುರವರು ಲಾರಿಯನ್ನು ಬಲಕ್ಕೆ ತಿರುಗಿಸಿದಾಗ ಲಾರಿ ರಾಂಉರವರ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯ ಹಳ್ಳಕ್ಕೆ ಮಗುಚಿಕೊಂಡಿದ್ದು ಚಾಲಕ ರಾಮುರವರು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ಪಡೆದು ವಂಚನೆ
                           ಅಮ್ಮತ್ತಿ ಬಳಿಯ ಕಾವಾಡಿ ನಿವಾಸಿ ಜಯಲಕ್ಷ್ಮಿ ಎಂಬವರಿಗೆ 1ನೇ ಮೊಣ್ಣಂಗೇರಿ ನಿವಾಸಿ ಕುಶಾಲಪ್ಪ ಎಂಬವರು ಒಂದು ನಿವೇಶನವನ್ನು ಮೂರು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡು ಮುಂಗಡವಾಗಿ ರೂ.50,000/- ಗಳನ್ನು ಪಡೆದುಕೊಂಡು ಒಪ್ಪಂದ ಪತ್ರ ಮಾಡಿಕೊಂಡಿದ್ದು ನಂತರ ನಿವೇಶನವನ್ನು ಜಯಲಕ್ಷ್ಮಿಯವರಿಗೆ ನೋಂದಾಯಿಸಿಕೊಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, December 14, 2017

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ:

     ದಿನಾಂಕ 12-12-2017 ರಂದು ರಾತ್ರಿ 11-30 ಗಂಟೆಗೆ ರಾಜು ಎಂಬವರು ತಮ್ಮ ಬಾಪ್ತು ಆಟೋರಿಕ್ಷಾದಲ್ಲಿ ಕುಶಾಲನಗರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಡೆಯಿಂದ ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಆಟೋ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಮಡಿಕೇರಿ ಕಡೆಯಿಂದ ಕೆಎ 19ಎಂಎ 6700 ಇನ್ನಾವೋ ಕಾರನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜುರವರ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಆಟೋ ರಿಕ್ಷಾ ಮಗುಚಿ ಬಿದ್ದು ರಿಕ್ಷಾ ಚಾಲಕ ರಾಜುರವರ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿ ಅವರನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆ:

    ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮದಲಾಪುರ ಗ್ರಾಮದ ನಿವಾಸಿ ಎಂ.ಎ. ಸುಬ್ರಮಣಿ ಎಂಬವರ ಮನೆಯ ಪಕ್ಕದ ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ತಮಿಳರ ಮಣಿ ಎಂಬಾತನನ್ನು ದಿನಾಂಕ 12-12-2017ರ ರಾತ್ರಿ ಅವರ ಮನೆಯಲ್ಲಿ ಯಾರೋ ವ್ಯಕ್ತಿಗಳು ಕೊಲೆ ಮಾಡಿದ್ದು ಫಿರ್ಯಾದಿ ಎಂ.ಎ.ಸುಬ್ರಮಣಿ ಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನ್ಯಾಯಾಲಯದ ಕಟ್ಟಡದಿಂದ ನೀರಿನ ನಲ್ಲಿಗಳ ಕಳವು:

    ಕೊಡಗು ಜಿಲ್ಲಾ ನ್ಯಾಯಾಲಯ ಮಡಿಕೇರಿ ಕಟ್ಟಡಕ್ಕೆ ನೀರಿನ ವ್ಯವಸ್ಥೆಗಾಗಿ ನಲ್ಲಿಗಳನ್ನು ಅಳವಡಿಸಲಾಗಿದ್ದು, ಸದರಿ ಕಟ್ಟಡದಲ್ಲಿ ಅಳವಡಿಸಿದ್ದ 4 ನೀರಿನ ನಲ್ಲಿಗಳನ್ನು ದಿನಾಂಕ 28-11-2017 ರ ಬೆಳಗ್ಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ನೀರಿನ ನಲ್ಲಿಗಳ ಅಂದಾಜು ಮೌಲ್ಯ ರೂ.800/- ಆಗಬಹುದೆಂದು ನ್ಯಾಯಾಲಯದ ಪ್ರಭಾರ ಆಡಳಿತಾಧಿಕಾರಿ ಎಸ್.ಟಿ. ಶಮ್ಮಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Wednesday, December 13, 2017

ಅಕ್ರಮ ಮರಳು ಸಾಗಾಟ:

    ದಿನಾಂಕ 12-12-2017 ರಂದು 3-30 ಗಂಟೆಯ ಸಮಯದಲ್ಲಿ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ಎಸ್. ಸುಂದರ್ ರಾಜ್ ಹಾಗು ಸಿಬ್ಬಂದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಶಾಲೆಗೆ ಹೋಗುವ ಜಂಕ್ಷನ್ ಬಳಿ ಚೆಟ್ಟಳ್ಳಿ ಕಡೆಗೆ ಹೋಗುತ್ತಿದ್ದ ಒಂದು ಸ್ವರಾಜ್ ಮಜ್ದಾ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಮರಳು ತುಂಬಿದ ಲಾರಿಯನ್ನು ವಶಕ್ಕೆಪಡೆದುಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಬಿ.ಡಿ. ವಿಷ್ಣು ಎಂಬವರ ಪತ್ನಿ ಆದಿರ ಎಂಬ ಮಹಿಳೆ ದಿನಾಂಕ 8-12-2017 ರಂದು 10-00 ಗಂಟೆಗೆ ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಫಿರ್ಯಾದಿ ಬಿ.ಡಿ. ವಿಷ್ಣು ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೋಟಾರ್ ಸೈಕಲಿಗೆ ಅಪರಿಚಿತ ವಾಹನ ಡಿಕ್ಕಿ:

    ದಿನಾಂಕ 12-12-2107 ರಂದು ಫಿರ್ಯಾದಿ ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣಿರಹಳ್ಳ ಗ್ರಾಮದ ನಿವಾಸಿ ರಾಜಶೇಖರ್ ರೈ ಎಂಬವರ ಹೆಂಡತಿಯ ಅಣ್ಣ ಶ್ರೀಧರ್ ರೈ ರವರು ಅವರ ಬಾಪ್ತು ಮೋಟಾರ್ ಸೈಕಲ್ ನಂಬರು KA 12 E 9581 ರಲ್ಲಿ ಬಜೆಗುಂಡಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿರುವಾಗೆ ಕೊವರ್ ಕೊಲ್ಲಿ ಟಾಟಾ ಎಸ್ಟೆಟ್ ನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಯಾವುದೋ ವಾಹನ ಡಿಕ್ಕಿ ಪಡಿಸಿ ಶ್ರೀಧರ್ ರೈ ರವರಿಗೆ ಗಾಯವಾಗಿ ಸದರಿಯವರು ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಲಾಟರಿ ಮಾರಾಟ:

     ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀ ಜಯರಾಮ್ ರವರಿಗೆ ದಿನಾಂಕ 12-12-2017 ರಂದು ಸಂಜೆ ದೊರೆತ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸಂಜೆ 6-00 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಬಸ್ ನಿಲ್ದಾಣದ ಬಳಿ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ನಾರ್ಗಾಣೆ ಎಂಬಲ್ಲಿ ವಾಸವಾಗಿರುವ ರವಿ ಎಂಬ ವ್ಯಕ್ತಿ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನ ವಶದಲ್ಲಿದ್ದ ರೂಪಾಯಿ 30ರ ಮುಖಬೆಲೆಯ ದಿನಾಂಕ 13/12/2017 ರಂದು ಡ್ರಾ ಆಗಲಿರುವ ಒಟ್ಟು 12 ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಹಾಗು ಗ್ರಾಹಕರಿಗೆ ಮೊದಲೇ ಮಾರಾಟ ಮಾಡಿ ಇಟ್ಟುಕೊಂಡ ಹಣ ರೂ.1800/- ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬೈಕ್ ಡಿಕ್ಕಿ ಪಾದಚಾರಿ ಸಾವು:

   ಬೈಕೊಂದು ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸಾವನಪ್ಪಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಮೂದ್ರವಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಮೂದ್ರವಳ್ಳಿ ಗ್ರಾಮದ ನಿವಾಸಿ 57 ವರ್ಷ ಪ್ರಾಯದ ಚಂದ್ರಪ್ಪ ಎಂಬವರು ದಿನಾಂಕ 12-12-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಮೂದ್ರವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾ ಗುಡುಗಳಲೆ ಗ್ರಾಮದ ಕಡೆಯಿಂದ ಬಂದ ಮಲ್ಲಿಕಾರ್ಜುನ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಚಂದ್ರಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ಚಂದ್ರಪ್ಪನವರು ತೀವ್ರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನಪ್ಪಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಗಸು ಮತ್ತು ಮಗು ಕಾಣೆ:

    ಸೋಮವಾರಪೇಟೆ ಠಾಣಾ ವ್ಯಾಪ್ತಿ ಕೂವರ್ ಕೊಲ್ಲಿ ಎಸ್ಟೇಟ್ ಲೈನು ಮನೆಯಲ್ಲಿ ವಾಸವಾಗಿರುವ ಎನ್. ಆರ್. ರವಿ ಎಂಬವರ ಪತ್ನಿ ಶ್ರೀಮತಿ ಮಂಜುಳ ಹಾಗು 3 ವರ್ಷ ಪ್ರಾಯದ ಹೆಣ್ಣುಮಗು ದರ್ಶಿಣಿ ದಿನಾಂಕ 16-11-2017 ರಂದು ಮನೆಯಲ್ಲಿದ್ದು ಸಂಜೆ 4-00 ಗಂಟೆಯಿಂದ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ಎನ್.ಆರ್. ರವಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹುಡುಗ-ಹುಡುಗಿ ಆತ್ಮಹತ್ಯೆ:

     ದಿನಾಂಕ 12-12-2017 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಹೊಳೆಯಲ್ಲಿ  ಅಪರಿಚಿತ ಹುಡುಗ ಮತ್ತು  ಹುಡುಗಿಯ  ಮೃತದೇಹ ಪತ್ತೆಯಾಗಿದ್ದು ಸದರಿಯವರು ಸದರಿ ಹೊಳೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Tuesday, December 12, 2017

ಅಕ್ರಮ ಮದ್ಯ ವಶ
                      ದಿನಾಂಕ 11/12/2017ರಂದು ಸಿದ್ದಾಪುರ ಠಾಣಾ ಸಿಬ್ಬಂದಿ ಬಿ.ಆರ್.ಮಂಜುನಾಥ್‌ರವರು ಹಾಲುಗುಂದ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಹಾಲುಗುಂದ ಗ್ರಾಮದ ಬಸ್  ನಿಲ್ದಾಣದ ಬಳಿ ಓರ್ವ  ವ್ಯಕ್ತಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮದ್ಯವನ್ನು ಸಾಗಿಸುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಮಂಜುನಾಥ್‌ರವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಹಾಲುಗುಂದ ನಿವಾಸಿ ಪಿ.ಎನ್.ಗಿಣಿ ಎಂಬವರು ಒಂದು ಬ್ಯಾಗಿನಲ್ಲಿ ಸುಮಾರು ರೂ.1620/- ಮೌಲ್ಯದ 90ಎಂ.ಎಲ್‌.ನ 54 ಪ್ಯಾಕೆಟ್ ಮದ್ಯವನ್ನು ಅಕ್ರಮವಾಗಿ ಹೊಂದಿರುವುದು ಪತ್ತೆಯಾಗಿದ್ದು ಮದ್ಯ ಹಾಗೂ ಆರೋಪಿ ಗಿಣಿಯನ್ನು ವಶಕ್ಕೆ ಪಡೆದುಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವಿಷ ಸೇವಿಸಿ ಆತ್ಮಹತ್ಯೆ
                       ದಿನಾಂಕ 08/12/2017ರಂದು ಪೊನ್ನಂಪೇಟೆ ಬಳಿಯ ತಿತಿಮತಿ ನಿವಾಸಿ ಪಣಿ ಎರವರ ಮುತ್ತಕ್ಕಿ ಎಂಬಾಕೆಯು ಮದ್ಯವೆಂದು ಭ್ರಮಿಸಿ ಕಳೆ ನಾಶಕ ಔಷಧಿ ಸೇವಿಸಿ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿದ್ದು ದಿನಾಂಕ 10/12/2017ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ
                          ದಿನಾಂಕ11/12/2017ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಮುರುವಂಡ ಕುಶಾಲಪ್ಪ ಎಂಬವರು ಮನೆಯಲ್ಲಿರುವಾಗ ಅವರ ಕುಟುಂಬದ ಮಾದಯ್ಯ ಎಂಬವರು ದೂರವಾಣಿ ಕರೆ ಮಾಡಿ ಕೊಳತ್ತೋಡು ಗ್ರಾಮದಲ್ಲಿರುವ ಕುಶಾಲಪ್ಪನವರ ತೋಟದಲ್ಲಿ ಬಾಳೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದಿರುವುದಾಗಿ ತಿಳಿಸಿದ ಮೇರೆಗೆ ಕುಶಾಲಪ್ಪನವರು ಕೊಳತ್ತೋಡು ಗ್ರಾಮಕ್ಕೆ ಹೋದಾಗ ಅಲ್ಲಿ ಅವರ ತೋಟದ ಬಳಿ ಕೆಎ-12-ಬಿ- 1893ರ ಒಂದು ರಿಕ್ಷಾ ನಿಂತಿದ್ದು ಅದರೊಳಗೆ ಸುಮಾರು ರೂ. 1000/- ಮೌಲ್ಯದ 14  ಬಾಳೆ ಗೊನೆಗಳಿದ್ದು  ಜೊತೆಗೆ ಜೋಡುಬೆಟ್ಟಿ ಗ್ರಾಮದ ಲೋಕೇಶ್‌ ಮತ್ತು ಕಿಶೋರ್‌ ಎಂಬ ಇಬ್ಬರು ಯುವಕರಿದ್ದು ಅವರು ತಾವೇ ಬಾಳೆಗೊನೆಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಾನ್ ಅವಘಢ
                     ದಿನಾಂಕ 11/12/2017ರಂದು ಪಶ್ಚಿಮ ಬಂಗಾಳದ ರಿಷಬ್ ಅಗರ್‌ವಾಲ್ ಮತ್ತು ಇತರರು ಕೆಎ-04-ಡಿ-0949ರ ಟೆಂಪೋ ಟ್ರಾವೆಲರ್ ವ್ಯಾನಿನಲ್ಲಿ  ವಿರಾಜಪೇಟೆ ಬಳಿಯ ಪಾಲಂಗಾಲ ಗ್ರಾಮದಿಂದ ವಿರಾಜಪೇಟೆ ನಗರಕ್ಕೆ ಹೋಗುತ್ತಿರುವಾಗ ಅರಮೇರಿ ಬಳಿ ವ್ಯಾನಿನ ಚಾಲಕ ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವ್ಯಾನು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡಿದ್ದು ವ್ಯಾನಿನೊಳಗಿದ್ದ ಸುಮಾರು 7 ಜನ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, December 11, 2017

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
 
     ಮಡಿಕೇರಿ ನಗರದ ಅಶೋಕಪುರ ನಿವಾಸಿ ಜೆ. ಮೈಕಲ್ ಮಾರ್ಷಲ್ ಎಂಬವರು ದಿನಾಂಕ 9-12-2017 ರಂದು ರಾತ್ರಿ 11-15 ಗಂಟೆಗೆ ಮಡಿಕೇರಿ ನಗರದ ಜಿ.ಟಿ. ವೃತ್ತದಲ್ಲಿರುವ ಹಿಲ್ ಟಾಪ್ ಹೋಟೇಲಿನಲ್ಲಿ ಊಟ ಮುಗಿಸಿ ಹೊರಗೆ ಬಂದಾಗ ಆರೋಪಿಗಳಾದ ಭಗವತಿ ನಗರದ ಕಾಶಿ ಹಾಗು ಇಬ್ಬರು ವ್ಯಕ್ತಿಗಳು ಫಿರ್ಯಾದಿ ಜೆ. ಮೈಕಲ್ ಮಾರ್ಷಲ್ ರವರ ದಾರಿ ತಡೆದು ವಿನಾಕಾರಣ ಹೆಲ್ಮಟ್ ನಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿದ್ದು  ಅಲ್ಲದೆ ಕೈಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿರುವ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಕಳವು:
 
     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ನಿವಾಸಿ ಕೈರುನ್ನೀಸ ಎಂಬವರ ಮೊಮ್ಮಗಳು 2 ವರೆ ವರ್ಷ ಪ್ರಾಯದ ಅಫ್ನಾ ಎಂಬಾಕೆಯ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರವು ದಿನಾಂಕ  4-12-2017 ರಂದು ಕಾಣೆಯಾಗಿದ್ದು, ಸದರಿ ಚಿನ್ನದ ಸರವನ್ನು ಟೀ ಕುಡಿಯಲು ಬಂದಿದ್ದ ಆಟೋ ಚಾಲಕನು ತೆಗೆದುಕೊಂಡು ಹೋಗಿರಬಹುದೆಂದು ಸಂದೇಹವಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
 
ದಾರಿತಡೆದು ಹಲ್ಲೆ:
 
     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅಂದಗೋವೆ ಗ್ರಾಮದ ಕೇಚಿರ ಭಾಗೇಶ್ ಎಂಬವರ ಕಾಫಿ ಎಸ್ಟೇಟ್ ನಲ್ಲಿ ವಾಸವಾಗಿರುವ ವಿ. ವಿನೋದ್ @ ಅಪ್ಪು ಎಂಬವರನ್ನು ದಿನಾಂಕ 10-12-2017 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ಅಂದಗೋವೆ ಗಿರಿಜನ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾ ಆರೋಪಿಗಳಾದ ಗಿರಿಜನ ಕಾಲೋನಿಯ ಚೋಮ, ಮಂಜು, ರುಕ್ಕು ಹಾಗು ಜಯ ರವರುಗಳು ದಾರಿಯಲ್ಲಿ ತಡೆದು ನಿಲ್ಲಿಸಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
 

Sunday, December 10, 2017

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
        ದಿನಾಂಕ 8-12-2017 ರಂದು ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ನಿವಾಸಿಯಾದ ಪ್ರಭಾಕರ ಎಂಬುವವರು ಸುಂದರರವರ ಅಂಗಡಿಯ ಮುಂದೆ ಭುವನೇಶ್ ಮತ್ತು ರಘುಪತಿಯವರೊಂದಿಗೆ ಕಾಫಿ ತೋಟದಲ್ಲಿ ಚರಂಡಿ ಮಾಡಲು ಕೃಷಿ ಇಲಾಖೆಯಿಂದ ಹಣ ಬಿಡುಗಡೆಯಾಗಿರುವ ಬಗ್ಗೆ ಮಾತನಾಡಿಕೊಂಡಿರುವಾಗ ಅಲ್ಲಿಗೆ ಅದೇ ಗ್ರಾಮದ ನಾರಾಯಣರವರು ಹೋಗಿ ವಿನಾ ಕಾರಣ ಜಗಳ ತೆಗೆದು ಪ್ರಭಾಕರರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪ್ರಭಾಕರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ ಲಾರಿ ವಶಕ್ಕೆ
                 ದಿನಾಂಕ 9-12-2017 ರಂದು ಸಿದ್ದಾಪುರ ಪೊಲೀಸ್ ಠಾಣಾ ಸಿಬ್ಬಂದಿಯವರು ಗಸ್ತು ಮಾಡುತ್ತಿರುವಾಗ ಬೆಳಿಗ್ಗೆ 5-30 ಗಂಟೆಗೆ ಮಡಿಕೇರಿ ರಸ್ತೆ ಕಡೆಯಿಂದ ಸಿದ್ದಾಪುರದ ಕಡೆಗೆ ಟಿಪ್ಪರ್ ಮಿನಿ ಲಾರಿಯೊಂದು ಬರುತ್ತಿದ್ದುದ್ದನ್ನು ತಡೆಯಲಾಗಿ ಲಾರಿಯ ಚಾಲಕ ಸೈನುದ್ದೀನ್ ಎಂಬುವವರು ಲಾರಿಯನ್ನು ನಿಲ್ಲಿಸಿ ಓಡಿ ಹೋಗಿದ್ದು ಲಾರಿಯನ್ನು ಪರಿಶೀಲಿಸಿದಾಗ ಮರಳು ತುಂಬಿದ್ದು, ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದ್ದಿಂದ ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
            ದಿನಾಂಕ 8-12-2017 ರಂದು ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ನಿವಾಸಿಯಾದ ನೇತ್ರಾವತಿ ಎಂಬುವವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿಗಳಾದ ಸುಪ್ರಿತ್ ಮತ್ತು ಶೋಭಾರವರು ಮನೆಯ ಹತ್ತಿರ ಹೋಗಿ ಸುಪ್ರಿತ್ ರವರ ಮನೆಗೆ ಯಾರೋ ಕಲ್ಲು ಹೊಡೆದ ವಿಚಾರದಲ್ಲಿ ಜಗಳ ಮಾಡಿ ಇಬ್ಬರೂ ಸೇರಿ ನೇತ್ರಾವತಿಯವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, December 9, 2017

ಹಲ್ಲೆಗೊಳದಾದ ವ್ಯಕ್ತಿ ಸಾವು:
 
     ಪೊನ್ನಂಪೇಟೆ ಠಾಣಾ ಸರಹದ್ದಿನ ದೇವನೂರು ಗ್ರಾಮದ ನಿವಾಸಿ ಪಂಜರಿ ಎರವರ ಮಣಿ ಎಂಬಾತನ ಮೇಲೆ  ಅದೇ ಗ್ರಾಮದ ನಿವಾಸಿಗಳಾದ ಪಂಜರಿ ಎರವರ ಮುತ್ತ, ಪಂಜರಿ ಎರವರ ಮಹೇಶ ಹಾಗು ಶ್ರೀಮತಿ ಗೋಪಿ ಎಂಬವರುಗಳು ದಿನಾಂಕ 3-12-2017 ರಂದು ಹಣದ ವಿಚಾರದಲ್ಲಿ ಜಗಳ ಮಾಡಿ ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ ಪರಿಣಾಮ ಮಣಿರವರು ಪ್ರಜ್ಞೆಯನ್ನು ಕಳೆದುಕೊಂಡು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 7-12-2017 ರಂದು ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಈ ಸಂಬಂಧ  ಮೃತನ ತಂದೆ ಪಂಜರಿ ಎರವರ ಗಾಂಧಿರವರು ನೀಡಿದ ದೂರಿನ ಮೇರೆಗೆ  ಪೊನ್ನಂಪೇಟೆ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
 
ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
 
     ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ  ಕುರ್ಚಿ ಗ್ರಾಮದ ನಿವಾಸಿ 58 ವರ್ಷ ಪ್ರಾಯದ ಗೋವಿ ಎಂಬ ವ್ಯಕ್ತಿ ದಿನಾಂಕ 7-12-2017 ರಂದು ರಾತ್ರಿ ತಾನು ವಾಸವಾಗಿದ್ದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.
 
ವಾಹನ ಕಳವು:
 
     ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೊಲೆರೋ ಜೀಪೊಂದನ್ನು ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.  7ನೇ ಹೊಸಕೋಟೆ ಗ್ರಾಮದ ನಿವಾಸಿಯಾದ ಎ.ಅಜೀದ್ ಎಂಬವರು ದಿನಾಂಕ 6-12-2017 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ತಮ್ಮ ಬಾಪ್ತು ಬೊಲೆರೋ ಜೀಪನ್ನು 7ನೇ ಹೊಸಕೋಟೆ ಗ್ರಾಮದಲ್ಲಿರುವ ಮದೀನಾ ಹೋಟೇಲ್ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿದ್ದು ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:
 
     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ಕೆ.ಎಲ್. ರಾಜನ್ ಎಂಬವರು ದಿನಾಂಕ 7-12-2017 ರಂದು ರಾತ್ರಿ 8-30 ಗಂಟೆಗೆ  7ನೇ ಹೊಸಕೋಟೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಮಣಿಕಂಠ ಹಾಗು ಮಂಜು ಎಂಬವರುಗಳು ಜಗಳ ಮಾಡಿ ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಶೆಟ್ಟರ್ಸ್ ತೆರೆದು ನಗದು ಕಳವು:
 
     ದಿನಾಂಕ 7-12-2017ರಂದು ರಾತ್ರಿ ಸೋಮವಾರಪೇಟೆ ಠಾಣಾ ಸರಹದ್ದಿನ ತ್ಯಾಗರಾಜ ರಸ್ತೆಯಲ್ಲಿರುವ ಡಿ.ವಿ. ರವಿಕುಮಾರ್ ಎಂಬವರಿಗೆ ಸೇರಿದ ಸುಮುಖ್ ಔಷಧಿ ಅಂಗಡಿಯ ಶೆಟರ್ಸ್ ನ್ನು ಮೀಟಿ ಅದರ ಮೂಲಕ ಅಂಗಡಿಗೆ ನುಗ್ಗಿದ ಕಳ್ಳರು ರೂ.500/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಬಾರ್ ನಿಂದ ನಗದು ಕಳವು:
 
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಸೋಮವಾರಪೇಟೆ ನಗರದ ಸುಬ್ಬಯ್ಯ ರಸ್ತೆಯಲ್ಲಿರುವ ಬಾಲಕೃಷ್ಣ ರೈ ಎಂಬವರಿಗೆ ಸೇರಿದ ಟೆಕ್ಮಾ ಬಾರ್ ಗೆ ದಿನಾಂಕ 7-12-2017 ರಂದು ರಾತ್ರಿ ಯಾರೋ ಕಳ್ಳರು ಬಾರಿನ ಶೆಟರ್ಸ್ ಗೆ ಹಾಕಿದ ಬೀಗವನ್ನು ಮುರಿದು ಬಾರಿನೊಳಗೆ ಪ್ರವೇಶ ಮಾಡಿ ಡ್ರಾಯರ್ ನಲ್ಲಿಟ್ಟಿದ್ದ 3221-00 ರೂ. ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಮದ್ಯದಂಗಡಿಯಿಂದ ನಗದು ಮತ್ತು ಮದ್ಯ ಕಳವು:
 
     ಶನಿವಾರಸಂತೆ ಠಾಣಾ ವ್ಯಾಪ್ತಿಯ  ನಗರದ ಹೋಸೂರು ರಸ್ತೆ ಯಲ್ಲಿರುವ ಬಿ.ಕೆ. ದಿನೇಶ್ ಎಂಬವರಿಗೆ ಸೇರಿದ ಮಲ್ನಾಡ್ ಬ್ರಾಂದಿ ಅಂಗಡಿಗೆ ದಿನಾಂಕ 7-12-2017 ರಂದು ರಾತ್ರಿ ಯಾರೋ ಕಳ್ಳರು ಅಂಗಡಿಯ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಡ್ರಾಯರ್ ನಲ್ಲಿಟ್ಟಿದ್ದ 7,000 ರೂ. ನಗದು ಮತ್ತು ವಿವಿಧ ಮಾದರಿಯ ಸುಮಾರು 15,000ರೂ. ಬೆಲೆಬಾಳುವ ಮದ್ಯವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:
 
     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾವಾಡಿ ಗ್ರಾಮದ ನಿವಾಸಿ ಪಣಿಎರವರ ಬೆಳ್ಳಿ  ಎಂಬವ ಮಗ ಪಣಿಎರವರ ಪುಚ್ಚ ಎಂಬ ವ್ಯಕ್ತಿ ದಿನಾಂಕ 3-12-2017 ರಂದು ಮನೆಯಿಂದ ಹೊರಗೆ ಹೋಗಿದ್ದು ದಿನಾಂಕ 8-12-2017 ರಂದು ಅವರು ವಾಸವಾಗಿರುವ ಮನೆಯ ಸ್ವಲ್ಪ ದೂರದಲ್ಲಿ ಸದರಿ ಪುಚ್ಚ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಈ ಸಂಬಂಧ ಪಣಿಎರವರ ಬೆಳ್ಳಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
 
 
 
 

Friday, December 8, 2017

ಕುಖ್ಯಾತ ಬೈಕ್ ಚೋರನ ಬಂಧನ
                  ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿದೆಡೆ ಬೈಕ್ ಕಳವು ಮಾಡುತ್ತಿದ್ದ ಕುಖ್ಯಾತ ಬೈಕ್ ಚೋರನನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 

             ಇತ್ತೀಚೆಗೆ ಕೊಡಗು ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್‌ರವರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದರು.

                    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಕಾರ್ಯಪ್ರವೃತ್ತರಾದ ಕುಶಾಲನಗರ ಪೊಲೀಸರಿಗೆ ದಿನಾಂಕ 05/12/2017 ರಂದು ಕುಶಾಲನಗರದ ಕೂಡಿಗೆ ಸೇತುವೆಯ ಬಳಿ ಓರ್ವ ವ್ಯಕ್ತಿಯು ದ್ವಿಚಕ್ರ ವಾಹನವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡರು ಸಿಬ್ಬಂದಿಯವರೊಂದಿಗೆ ಕೂಡಿಗೆ ಸೇತುವೆಯ ಬಳಿ ತೆರಳಿದಾಗ ಅಲ್ಲಿನ ಒಂದು ಗ್ಯಾರೇಜಿನ ಮುಂದೆ ಕೆಎ-05-ಇಎಫ್-7085 ರ ಸಂಖ್ಯೆಯ ಮೋಟಾರ್ ಸೈಕಲಿನೊಂದಿಗೆ ನಿಂತಿದ್ದ ಓರ್ವ ವ್ಯಕ್ತಿಯು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿದು ವಶಕ್ಕೆ ಪಡೆದು ವಿಚಾರಿಸಿದಾಗ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೋಟಾರ್ ಸೈಕಲ್ ಅನ್ನು ಕುಶಾಲನಗರದ ಇಂದಿರಾ ಬಡಾವಣೆಯಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದು ಆತನು ಸುಂಟಿಕೊಪ್ಪ ಬಳಿಯ ಕಾಂಡನಕೊಲ್ಲಿಯ ನಿವಾಸಿ ಎಂ.ಎ.ಬೋಪಣ್ಣ ಯಾನೆ ಶರಣ್ ಯಾನೆ ಹರ್ಷ ಎಂಬುದಾಗಿ ತಿಳಿಸಿರುತ್ತಾನೆ.

                     ಆರೋಪಿ ಬೋಪಣ್ಣನನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಆತನು ಕೊಡಗು ಜಿಲ್ಲೆಯ ಕುಶಾಲನಗರದಿಂದ ಒಂದು, ಮೈಸೂರು ಜಿಲ್ಲೆಯ ಹುಣಸೂರಿನಿಂದ ಐದು, ಪಿರಿಯಾಪಟ್ಟಣದಿಂದ ಆರು, ಬಿಳಿಕೆರೆಯಿಂದ ನಾಲ್ಕು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಒಂದು, ಕೃಷ್ಣರಾಜಸಾಗರ ವ್ಯಾಪ್ತಿಯಿಂದ ಎರಡು ಮತ್ತು ಬೆಂಗಳೂರು ನಗರ ವ್ಯಾಪ್ತಿಯಿಂದ ಎರಡು ಬೈಕುಗಳು ಸೇರಿದಂತೆ ಒಟ್ಟು 21 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದು ಅವುಗಳನ್ನು ಕುಶಾಲನಗರದಲ್ಲಿ-03, ಸುಂಟಿಕೊಪ್ಪದಲ್ಲಿ-01, ಕಾಂಡನಕೊಲ್ಲಿಯಲ್ಲಿ-01, 7ನೇಹೊಸಕೋಟೆಯಲ್ಲಿ-01, ಮಡಿಕೇರಿಯಲ್ಲಿ-03, ಮಾದಾಪುರದಲ್ಲಿ-02, ಮೂರ್ನಾಡಿನಲ್ಲಿ -01, ವಿರಾಜಪೇಟೆಯಲ್ಲಿ-04, ಗೋಣಿಕೊಪ್ಪದಲ್ಲಿ-02, ಸಿದ್ದಾಪುರದಲ್ಲಿ-01 ಮತ್ತು ಬೆಂಗಳೂರಿನಲ್ಲಿ-01 ಕಡೆಯ ಗ್ಯಾರೇಜುಗಳಲ್ಲಿ ಮೆಕ್ಯಾನಿಕ್‌ಗಳಿಗೆ ಹಾಗೂ ಆತನ ಸ್ನೇಹಿತರಿಗೆ ಸ್ವಂತದ್ದೆಂದು ನಂಬಿಸಿ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಆರೋಪಿ ಬೋಪಣ್ಣನಿಂದ ಆತನು ಕಳವು ಮಾಡಿದ ಸುಮಾರು ರೂ.6,30,000/- ಬೆಲೆಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

                            ಸುಂಟಿಕೊಪ್ಪ ಬಳಿಯ ಕಾಂಡನಕೊಲ್ಲಿ ಬಳಿಯ ನಿವಾಸಿಯಾದ 28 ವರ್ಷ ಪ್ರಾಯದ ಎಂ.ಎ.ಬೋಪ್ಪಣ್ಣನು 10 ನೇ ತರಗತಿಯವರೆಗೆ ಸುಂಟಿಕೊಪ್ಪ ಮತ್ತು ಮಾದಾಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಬೆಂಗಳೂರಿನ ಎ.ಡಿ.ಸಿ. ಹಾಗೂ ಸೆಕ್ಯೂರ್ ವ್ಯಾಲ್ಯೂ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಗನ್ ಮ್ಯಾನ್ ಆಗಿ, ಮಡಿಕೇರಿಯ ವ್ಯಾಂಡಮ್ ಎಂಟರ್ ಪ್ರೈಸಸ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿ ನಂತರ ಬೆಂಗಳೂರಿನ ಜಿ ಪಿ. ಮಾರ್ಗನ್ ಕಂಪೆನಿಯಲ್ಲಿ ಟೀ ಕೌಂಟರ್ ನಡೆಸುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ. ಈತನ ವಿರುದ್ದ ಈ ಹಿಂದೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಮೊ.ಸಂ. 67/2016 ಕಲಂ 379 ಐ.ಪಿ.ಸಿ ಯನ್ವಯ ಕಳವು ಪ್ರಕರಣ ದಾಖಲಾಗಿರುತ್ತದೆ.

                        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ, ಕುಶಾಲನಗರ ನಗರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್.ಪಿ, ಸಿಬ್ಬಂದಿಗಳಾದ ಸುಧೀಶ್‌ಕುಮಾರ್ ಲೋಕೇಶ್, ಮುಸ್ತಫಾ, ಸಜಿ, ದಯಾನಂದ, ಸುರೇಶ್, ಉದಯಕುಮಾರ್, ಸಂಪತ್ ರೈ, ಚಾಲಕರಾದ ಲೋಕೇಶ್ ಬಿ.ಆರ್. ಮತ್ತು ಗಣೇಶ್ ಹಾಗೂ ಸೈಬರ್ ಸೆಲ್‌ನ ರಾಜೇಶ್ ಸಿ.ಕೆ., ಗಿರೀಶ್ ಎಂ.ಎ., ಹಾಗೂ ಗೃಹರಕ್ಷಕ ದಳದ ಹೋಂಗಾರ್ಡ್‌ ಕುಮಾರ ಮುಂತಾದವರು ಪಾಲ್ಗೊಂಡಿದ್ದು, ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್‌ರವರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ. ಸಾರ್ವಜನಿಕರು ಹಳೆಯ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ತಾವು ಖರೀದಿಸಲು ಇಚ್ಛಿಸುವ ವಾಹನದ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿರುವ ವಾಹನ ತಪಾಸಣಾ ವಿಭಾಗದಲ್ಲಿ ಪರಿಶೀಲನೆ ಮಾಡಿಸಿ ನಂತರ ಆ ವಾಹನವನ್ನು ಖರೀದಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದಾರೆ


ಯುವಕ ಆತ್ಮಹತ್ಯೆ
                     ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದ ಚಿಂಗಾರ ಹೋಂ ಸ್ಟೇಯ ಮಾಲೀಕ ಎ.ಎಸ್.ಚಂಗಪ್ಪ ಎಂಬವರ ಮಗ ಶರತ್ ಸೋಮಣ್ಣ ಎಂಬ ಯುವಕ ದಿನಾಂಕ 06/12/2017ರ ಸಂಜೆಯಿಂದ 07/12/2017ರ ಬೆಳಗಿನ ನಡುವಿನ ಅವಧಿಯಲ್ಲಿ ಅವರ ಕಾಫಿ ತೋಟದಲ್ಲಿ ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಯವಕಪಾಡಿ ನಿವಾಸಿ ಎ.ಎಸ್.ಚಂಗಪ್ಪನವರ ಹನಿ ವ್ಯಾಲಿ ಕಾಫಿ ತೋಟದ ನಡುವೆ ಅವರಿಗೆ ಸೇರಿದ ಚಿಂಗಾರ ಎಂಬ ಹೆಸರಿನ ಹೋಂ ಸ್ಟೇ ಇದ್ದು ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಮಗ ಶರತ್ ಸೋಮಣ್ಣ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ದಿನಾಂಕ 06/12/2017ರ ಸಂಜೆ ಹೋಂ ಸ್ಟೇಯಲ್ಲಿಯೇ ತಂಗಿದ್ದು ಮಾರನೇ ದಿನ ಬೆಳಗಾದರೂ ಮನೆಗೆ ಬಾರದ ಕಾರಣ ತಂದೆ ಎ.ಎಸ್.ಚಂಗಪ್ಪನವರು ಮಗನನ್ನು ಹುಡುಕಿಕೊಂಡು ಹೋದಾಗ ತೋಟದಲ್ಲಿನ ಹಲಸಿನ ಮರದ ಕೊಂಬೆಗೆ ಶರತ್‌ ಸೋಮಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಆರೋಗ್ಯ ಸರಿ ಇಲ್ಲದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                    ದಿನಾಂಕ 04/12/2017ರಂದು ಮಡಿಕೇರಿಯ ಹೊಸ ಬಡಾವಣೆ ನಿವಾಸಿ ಲಕ್ಷ್ಮಿ ಎಂಬವರು ಇಬ್ನಿವಳವಾಡಿ ಗ್ರಾಮದ ನೀರುಕೊಲ್ಲಿ ಶಾಲೆಯಿಂದ ಕರ್ತವ್ಯ ಮುಗಿಸಿ ಮರಳಿ ಮನೆಗೆ ಅವರ ಸ್ಕೂಟರಿನಲ್ಲಿ ಬರುತ್ತಿದ್ದಾಗ ನೀರುಕೊಲ್ಲಿ ಬಳಿಯ ಕಲ್ಲುಕೋರೆ ತಿರುವಿನಲ್ಲಿ ಎದುರಿನಿಂದ ಕೆಎ-05-ಎಂಎನ್-1065ರ ಕಾರನ್ನು ಅದರ ಚಾಲಕ ಸಿ.ಎಸ್.ನಾಚಪ್ಪ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಕ್ಷ್ಮಿರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿವಾದ ವಾಹನಗಳಿಗೆ ಬೆಂಕಿ
                      ವಿರಾಜಪೇಟೆ ಬಳಿಯ ಅಮ್ಮತ್ತಿ ನಿವಾಸಿ ಎಂ.ಕೆ.ವಿಶ್ವನಾಥ ಮತ್ತು ಅವರ ಸೋದರ ಚಿಟ್ಟಿಯಪ್ಪ ಎಂಬವರಿಗೆ ಆಸ್ತಿ ವಿವಾದವಿದ್ದು ದಿನಾಂಕ 07/12/2017ರಂದು ವಿಶ್ವನಾಥರವರು ಅವರ ಜೀಪು ಸಂಖ್ಯೆ ಕೆಎ-12-ಪಿ-3380ರಲ್ಲಿ ತೋಟಕ್ಕೆ ಹೋದಾಗ ಅಲ್ಲಿ ಅವರ ಸೋದರ ಚಿಟ್ಟಿಯಪ್ಪನವರು ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದುದನ್ನು ಕಂಡು ತಮ್ಮ ಪತ್ನಿಯ ಅಣ್ಣ ನಾಣಯ್ಯನವರಿಗೆ ತಿಳಿಸಿದ್ದು ನಾಣಯ್ಯನವರು ಬಂದು ಇಬ್ಬರನ್ನೂ ಸಮಾಧಾನಪಡಿಸಿ ವಿಶ್ವನಾಥರವರನ್ನು ಜೀಪಿನಲ್ಲಿ ಕೂರಿಸಿದ್ದ ಸಮಯದಲ್ಲಿ ಚಿಟ್ಟಿಯಪ್ಪನವರು ಅವರ ಕಾರು ಸಂಖ್ಯೆ ಕೆಎ-01-ಎಂಎಂ-7516ರ ಕಾರಿನಲ್ಲಿದ್ದ ಕ್ಯಾನಿನಲ್ಲಿದ್ದ ಪೆಟ್ರೋಲನ್ನು ತಂದು ವಿಶ್ವನಾಥರವರ ಮೇಲೆ ಹಾಗೂ ಜೀಪಿನ ಮೇಲೆ ಸುರಿದು ಬೆಂಕಿ ಹಚ್ಚಿದ್ದು ವಿಶ್ವನಾಥರವರು ಜೀಪಿನಿಂದ ಇಳಿದು ಓಡಿದರೆನ್ನಲಾಗಿದೆ. ನಂತರ ಚಿಟ್ಟಿಯಪ್ಪ ಅಲ್ಲೇ ನಿಲ್ಲಿಸಿದ್ದ ನಾಣಯ್ಯನವರ ಕೆಎ-12-ಎಂ-4517ರ ಮಾರುತಿ ವ್ಯಾನಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಎರಡೂ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿ ಸುಮಾರು ರೂ. 8,00,000/- ದಷ್ಟು ನಷ್ಟವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.