Thursday, December 7, 2017

ಕ್ಷುಲ್ಲಕ ಕಾರಣ ವ್ಯಕ್ತಿಯಿಂದ ಹಲ್ಲೆ:

   ವಿರಾಜಪೇಟೆ ತಾಲೋಕು ಕರಡಿಗೋಡು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಲಕ್ಷ್ಮೀದೇವಿ ಎಂಬವರು ದಿನಾಂಕ 05-12-2017 ರಂದು ಸಮಯ 04.30 ಪಿ.ಎಂ.ಗೆ ತನ್ನ ತಾಯಿ ಶೋಭನ ಮತ್ತು ತಂಗಿ ಪ್ರಭಾದೇವಿಯವರೊಂದಿಗೆ ಮನೆಯಲ್ಲಿರುವಾಗ್ಗೆ, ಅವರ ತಾಯಿಯ ಅಣ್ಣನ ಮಗ ಸುಧೀಶ್ ಎಂಬುವವನು ಮನೆಗೆ ಬಂದಿದ್ದು, ಆತನನ್ನು ಶೋಭನರವರು ನೀನು ಏಕೆ ನಿನ್ನ ತಂದೆ ಸತ್ತಾಗಲೂ ಬರಲಿಲ್ಲ ಹಾಗೂ ತಿಥಿಗೂ ಬರಲಿಲ್ಲ ಎಂದು ಕೇಳಿದ್ದು, ಅದೇ ವಿಚಾರದಲ್ಲಿ ಸದರಿ ಸುಧೀಶ್ ಶೋಭನರವರೊಂದಿಗೆ ಜಗಳ ಮಾಡಿ ಕೈಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಜಗಳವನ್ನು ತಡೆಯಲು ಹೋದ ಶ್ರೀಮತಿ ಲಕ್ಷ್ಮೀದೇವಿ ರವರ ಮೇಲೂ ಆತ ದೊಣ್ಣೆಯಿಂದ ಕುತ್ತಿಗೆ ಭಾಗಕ್ಕೆ ಹೊಡೆದು ನೋವುಪಡಿಸಿ, ಫಿರ್ಯಾದಿ ಶ್ರೀಮತಿ ಲಕ್ಷ್ಮೀದೇವಿ ರವರ ತಂಗಿ ಪ್ರಭಾದೇವಿಯ ಮೇಲೂ ಕೈಯಿಂದ ಮತ್ತು ಕಾಲಿನಿಂದ ಒದ್ದು ನೋವುಪಡಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದ ನಿವಾಸಿ ಶ್ರೀಮತಿ ಲೀಲಾವತಿ ಎಂಬವರು ದಿನಾಂಕ 6-12-2017 ರಂದು ಅವರ ಮನೆಯಲ್ಲಿದ್ದಾಗ ಆಕೆಯ ಅಣ್ಣ ಮುತ್ತಪ್ಪ ಎಂಬವರು ಅಲ್ಲಿಗೆ ಬಂದು ವಿನಾಕಾರಣ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಅಲ್ಲೇ ಇದ್ದ ಲಿಲಾವರಿಯವರ ತಂಗಿ ದೇವಕ್ಕಿರವರಿಗೆ ತಾಗಿ ಗಾಯವಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆಗೆ ಯತ್ನ:

     ಪೊನ್ನಂಪೇಟೆ ಠಾಣಾ ಸರಹದ್ದಿನ ದೇವನೂರು ಗ್ರಾಮದ ನಿವಾಸಿ ಪಂಜರಿ ಎರವರ ಗಾಂಧಿ ಎಂಬವರ ಮಗ ಮಣಿ ಎಂಬವನೊಂದಿಗೆ ಆರೋಪಿಗಳಾದ ಪಂಜರಿ ಎರವರ ಮುತ್ತ, ಪಂಜರಿ ಎರವರ ಮಹೇಶ ಹಾಗು ಶ್ರೀಮತಿ ಪಂಜರಿ ಎರವರ ಗೋಪಿ ರವರುಗಳು ಸೇರಿ ಹಣದ ವಿಚಾರದಲ್ಲಿ ಜಗಳ ಮಾಡಿ ಕೈಗಳಿಂದ ಹಾಗು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಪರಿಣಾಮ ಮಣೆ ಪ್ರಜ್ಞೆ ಕಳೆದುಕೊಂಡು ಸದರಿಯವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಪಂಜರಿ ಎರವರ ಗಾಂಧಿರವರ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ:

     ವಿರಾಜಪೇಟೆ ತಾಲೋಕು ಬಿಳೂರು ಗ್ರಾಮದ ನಿವಾಸಿ ಕೆ.ಡಿ. ರಮೇಶ್ ಎಂಬವರು ದಿನಾಂಕ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಡಕೆಬೀಡು ಬಳಿಯ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆ.ಡಿ. ರಮೇಶ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕೆ.ಡಿ. ರಮೇಶ್ ರವರು ಗಾಯಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

     ಸೋಮವಾರಪೇಟೆ ತಾಲೋಕು ಕೆರಗನಳ್ಳಿ ಗ್ರಾಮದದ ನಿವಾಸಿ ಅಶೋಕ್ ಲೋಬೋ ರವರು ದಿನಾಂಕ 5-12-2017ರಂದು ರಾತ್ರಿ 8-00 ಗಂಟೆಗೆ ತಮ್ಮ ಬಾಪ್ತು ಕೆಎ-12 ಜೆ-8760 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ನಂತರ ರಾತ್ರಿ 9-00 ಗಂಟೆಯ ಸಮಯದಲ್ಲಿ ನೋಡಿದಾಗ ಸದರಿ ಮೋಟಾರ್ ಸೈಕಲ್ ಅಲ್ಲಿ ಇರದೇ ಯಾರೋ ಕಳ್ಳರು ಸದರಿ ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಕಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ವ್ಯಕ್ತಿ ಸಾವು:

     ಹಾಸನ ಜಿಲ್ಲೆ, ಅರಕಲಗೋಡು ತಾಲೋಕು, ಮರಿಯಾನಗರ ನಿವಾಸಿ ಅಂತೋಣಿ ಕುಮಾರ್ ರವರು ಫಿರ್ಯಾದಿ ಡೇವಿಡ್ ಕುಮಾರ್ ರವರೊಂದಿಗೆ ದಿನಾಂಕ 5-12-2017 ರಂದು ಮಧ್ಯಾಹ್ನ 2-00 ಗಂಟೆಯ ಸಮಯದಲ್ಲಿ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಿಂದ ಗೆಣಸಿನ ವ್ಯಾಪಾರಕ್ಕಾಗಿ ಚೀಲಗಳನ್ನು ಆಟೋ ರಿಕ್ಷಾದಲ್ಲಿ ತುಂಬಿಸಿಕೊಂಡು ಸಂಜೆ 4.00 ಗಂಟೆಗೆ ಆಟೋ ಹೆಬ್ಬಾಲೆ ಬಾಣವಾರ ರಸ್ತೆಯ ಚಿಕ್ಕಅಳುವಾರ ಗ್ರಾಮದ ಬೈರಪ್ಪನಗುಡಿ ಎಂಬಲ್ಲಿಗೆ ತಲುಪುವಾಗ್ಗೆ ಚಾಲಕ ಅಂತೋಣಿಕುಮಾರ್ ಆಟೋ ರಿಕ್ಷಾವನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಮಗುಚಿದ ಪರಿಣಾಮ ಅಂತೋಣಿಕುಮಾರರವರ ತಲೆ ಹಾಗು ಹೊಟ್ಟೆ ಬಾಗಕ್ಕೆ ಪೆಟ್ಟಾಗಿದ್ದು ಆಟೋ ರಿಕ್ಷಾದಲ್ಲಿದ್ದ ಫಿರ್ಯಾದಿ ಡೇವಿಡ್ ಕುಮಾರ್ ಹಾಗು ಆನಂದ ಎಂಬವರಿಗೂ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡ ಚಾಲಕ ಅಂತೋಣಿಕುಮಾರ್ ರವರನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಸದರಿಯವರು ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.