Tuesday, December 19, 2017

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 17/12/2017ರಂದು ಮಡಿಕೇರಿಯ ಹೊಸ ಬಡಾವಣೆ ನಿವಾಸಿ ಕೆ.ಎ.ಪೊನ್ನಪ್ಪ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಪೊನ್ನಪ್ಪರವರಿಗೆ 65 ವರ್ಷ ವಯಸ್ಸಾಗಿದ್ದು, ಅತೀವ ಹೊಟ್ಟೆ ನೋವು ಹಾಗೂ ವಯೋ ಸಂಬಂಧಿ ದುರ್ಬಲತೆಯಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                      ದಿನಾಂಕ 17/12/2017ರಂದು ಸಂಪಾಜೆ ಬಳಿಯ ಕೊಯನಾಡು ನಿವಾಸಿ ಮಹಮದ್ ಹನೀಫ್ ಎಂಬವರು ಸಮೀರ್‌,  ಅಶ್ರಫ್ ಮತ್ತು ಜಾಫರ್ ಎಂಬವರೊಂದಿಗೆ ಕೆಎ-21-ಎಂ-9337ರ ಕಾರಿನಲ್ಲಿ ಸಂಪಾಜೆಯ ದೇವಿಚರಣ್ ಎಂಬವರ ಸಾವಿನ ಅಂತಿಮ ದರ್ಶನಕ್ಕೆ ಹೋಗಿ ಮರಳಿ ಬರುವಾಗ ಸಂಪಾಜೆಯ ಅರಣ್ಯ ಕಚೇರಿ ಬಳಿ ಕಾರು ನಿಲ್ಲಿಸಿ  ಸಮೀಪದ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋಗಿ ಸ್ನಾನ ಮುಗಿಸಿ ಮರಳಿ ಕಾರಿನ ಬಳಿ ಬರುವಾಗ ಯಾರೋ ಕಳ್ಳರು ಕಾರಿನ ಗಾಜನ್ನು ಒಡೆದು ಒಳಗಿದ್ದ ಎರಡು ಮೊಬೈಲ್ ಫೋನ್, ವಾಚು ಮತ್ತು ನಗದು ರೂ.3000/- ಸೇರಿದಂತೆ ಒಟ್ಟು ರೂ.30,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಂಶಯಾಸ್ಪದ ವ್ಯಕ್ತಿಯ ಬಂಧನ
                    ದಿನಾಂಕ 18/12/2017ರ ಮುಂಜಾನೆ 3:00 ಗಂಟೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಬಿ ಈರಪ್ಪರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಸುಂಟಿಕೊಪ್ಪ ನಗರದ ಮಸೀದಿಯ ಪಕ್ಕದ ಅಂಗಡಿಯ ಬಳಿ ಕೇರಳದ ಮಾನಂದವಾಡಿ ನಿವಾಸಿ ರಾಘವನ್ ಎಂಬ ವ್ಯಕ್ತಿಯು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದು ಯಾವುದೇ ರೀತಿಯ ಸಮಂಜಸ ಉತ್ತರ ನೀಡದ  ಕಾರಣ ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
                  ದಿನಾಂಕ 18/12/2017ರಂದು ಕುಶಾಲನಗರದ ರಾಧಾಕೃಷ್ಣ ಬಡಾವಣೆ ನಿವಾಸಿ  ಸೂರಪ್ಪ ಎಂಬವರು ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೂಡಿಗೆ ಕಡೆಯಿಂದ ಕೆಎ-14-ವಿ-4114ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೂರಪ್ಪನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ಗಾಯಾಳು ಸೂರಪ್ಪನವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
                    ದಿನಾಂಕ 17/12/2017ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಲಿಂಗಯ್ಯ ಎಂಬವರು ಬಟ್ಟೆ ಒಗೆಯಲೆಂದು ಪಕ್ಕದ ಕೆರೆಗೆ ಹೋಗಿದ್ದು ರಾತ್ರಿಯಾದರೂ ಬಾರದ ಕಾರಣ ಮಾರನೆ ದಿನ 18/12/2017ರಂದು ಹುಡುಕಾಡಿದಾಗ ಕೆರೆಯ ಬಳಿ ಆತನ ಬಟ್ಟೆಗಳು ಕಾಣ ಸಿಕ್ಕಿದ್ದು ನಂತರ ಅಗ್ನಿ ಶಾಮಕ ದಳದ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದಾಗ ಲಿಂಗಯ್ಯನ ಮೃತ ದೇಹ ಪತ್ತೆಯಾಗಿದ್ದು ಬಟ್ಟೆ ಒಗೆಯುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗಿಡಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.