Saturday, December 23, 2017

ಅಪಘಾತ ಪ್ರಕರಣ
              ದಿನಾಂಕ 22-12-2017 ರಂದು ಬಂಟ್ವಾಳ ತಾಲೂಕಿನ ಪೊನ್ನಚ್ಚ ಗ್ರಾಮದ ನಿವಾಸಿಯಾದ ಈಶ್ವರ್ ನಾಯಕ್ ಎಂಬುವವರು ವಿಟ್ಲಾದಿಂದ ಜಲ್ಲಿ ಕಲ್ಲನ್ನು  ಲಾರಿಯಲ್ಲಿ ತುಂಬಿಸಿಕೊಂಡು ಸಂಪಾಜೆಗೆ ಬರುತ್ತಿರುವಾಗ ಪೆರಾಜೆ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಇನ್ನೂ ನೋಂದಣಿಯಾಗದ ಮಾರುತಿ ಡಿಸೈರ್ ಕಾರನ್ನು ಅರ ಚಾಲಕ ಶಶಾಂಕ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಕಾರಿಗೆ ಡಿಕ್ಕಿ ಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

           ದಿನಾಂಕ 22-12-2017 ರಂದು ವಿರಾಜಪೇಟೆ ತಾಲೂಕಿನ ಮಾಯಮುಡಿಯ ಬಾಳಾಜಿ ಗ್ರಾಮದ ನಿವಾಸಿಯಾದ ಕಾವ್ಯ ಎಂಬುವವರು ತನ್ನ ಗಂಡ ಮತ್ತು ಮಗನೊಂದಿಗೆ ಜೀಪಿನಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ವಾಸಿಯಾದ ಗುಲಾಬಿ ಎಂಬುವವರು ಜೀಪನ್ನು ತಡೆದು ನಿಲ್ಲಿಸಿ ಕಾವ್ಯರವರ ಪತಿ ಸೋಮಯ್ಯನವರೊಂದಿಗೆ ಮಗನ ಮೇಲೆ ಪೊಲೀಸ್ ಪುಕಾರು ನೀಡಿದ ಬಗ್ಗೆ ಜಗಳ ಮಾಡಿ, ಕಾವ್ಯರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ:

        ದಿನಾಂಕ 21-12-2017 ರಂದು ಬೆಂಗಳೂರಿನ ನಿವಾಸಿ ಅಮರೇಂದ್ರ ಪ್ರಸಾದ್ ಎಂಬುವವರು ಕುಶಾಲನಗರದ ಕುಶಾಲ್ ಲಾಡ್ಜ್ ನಲ್ಲಿ ತಂಗಿದ್ದು ರಾತ್ರಿ ತಂಗಿದ್ದ ಲಾಡ್ಜ್ ನ ರೂಮಿಗೆ ಹೋಗಲೆಂದು ಕುಶಾಲ್ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗ ಕಾರನ್ಉ ನಿಲ್ಲಿಸುವಾಗ ಕುಶಾಲನಗರದ ಬೈಚನಹಳ್ಳಿಯ ನಿವಾಸಿಗಳಾದ ಕುಮಾರ, ಉದಯ, ಪ್ರಸನ್ನ, ರವಿ ಮತ್ತು ಇನ್ನಿಬ್ಬರು ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.