Wednesday, January 31, 2018

ಮಹಿಳೆಯ ಅಸಹಜ ಸಾವು, ಪ್ರಕರಣ ದಾಖಲು:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ದೇವಮಚ್ಚಿ ಗ್ರಾಮದ ನಿವಾಸಿ ಮುತ್ತು ಎಂಬವರು ದಿನಾಂಕ 29-1-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಸ್ನಾನದ ಕೋಣೆಗೆ ಹೋಗಿದ್ದು ಹೊರಗೆ ಬಂದು ನರಳಾಡುತ್ತಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿ ಮುತ್ತುರವರು ಸಾವನಪ್ಪಿದ್ದು, ಈ ಸಂಬಂಧ ಮೃತರ ತಾಯಿ ಜೇನುಕುರುಬರ ಮಲ್ಲಿಗೆಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೋಕು ಅಜ್ಜವರ ಗ್ರಾಮದ ನಿವಾಸಿ ಟಿ. ರಾಧಕೃಷ್ಣ ಎಂಬವರ ಅಣ್ಣ ದಿವಾಕರ ರವರು ದಿನಾಂಕ 26-1-2018 ರಂದು ಕಾಣೆಯಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30-1-2018 ರಂದು ಫಿರ್ಯಾದಿ ಟಿ. ರಾಧಾಕೃಷ್ಣ ಹಾಗು ಕೆಲಸದವರು ದಿವಾಕರರವರನ್ನು ಹುಡುಕುತ್ತಿದ್ದಾಗ ಅಪ್ಪಂಗಳ ಗ್ರಾಮದ ರಾಮಚಂದ್ರ ಎಂಬವರ ಕಾಫಿ ತೋಟದಲ್ಲಿ ಸದರಿ ದಿವಾಕರರವರು ಮರವೊಂದಕ್ಕೆ ನೈಲಾನ್ ಅಗ್ಗವನ್ನು ಬಳಸಿ ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಂಡು ಬಂದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಲಾರಿ ಅಪಘಾತ ವ್ಯಕ್ತಿ ದುರ್ಮರಣ:

    ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ಒ.ಇ. ಉತ್ತಪ್ಪ ಎಂಬವರು ತ್ರಿವಿಕ್ ಹೊಟೇಲ್ ಮತ್ತು ರೆಸಾರ್ಟ್ ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸಿಕೊಂಡಿದ್ದು ದಿನಾಂಕ 30-1-2018 ರಂದು ಬೆಳಗಿನ ಜಾವ 3.30 ಗಂಟೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸೀಮೆಂಟನ್ನು ಲಾರಿಯಲ್ಲಿ ತುಂಬಿಸಿಕೊಂಡು ಬಂದಿದ್ದು ಸದರಿ ಸಿಮೆಂಟ್ ನ್ನು ಇಳಿಸುವ ಸಂಬಂಧ ಲಾರಿಯನ್ನು ಅದರ ಚಾಲಕ ಹಿಂದಕ್ಕೆ ಚಾಲಿಸಿದ್ದು ಲಾರಿಯ ಹಿಂದೆ ನಿಂತಿದ್ದ ಕುಲ್ದೀಪ್ ಎಂಬ ವ್ಯಕ್ತಿಗೆ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಸದರಿ ಕಲ್ದೀಪ್ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿ ಮಹಿಳೆಗೆ ವ್ಯಾನ್ ಡಿಕ್ಕಿ:

    ದಿನಾಂಕ 30-01-2018 ರಂದು ಸಮಯ ಸುಮಾರು 05.00 ಪಿಎಂಗೆ ಕುಶಾಲನಗರ ಬಳಿಯ ಸೀಗೆಹೊಸೂರು ಗ್ರಾಮದ ನಿವಾಸಿ ಫಿರ್ಯಾದಿ ನಾಗರಾಜು ಮತ್ತು ಅವರ ಅಕ್ಕ ಸರೋಜಮ್ಮನವರು ಮಾದಪಟ್ಟಣದ ಅವರ ನೆಂಟರ ಮನೆಗೆ ಹೋಗಿ ವಾಪಸ್ಸು ನಲ್ಲೂರಿಗೆ ಹೋಗಲು ಮಾದಪಟ್ಟಣ ಪಾಲಿಟೆಕ್ನಿಕ್‌ ಜಂಕ್ಷನ್‌ನ ರಸ್ತೆ ಬಳಿ ನಿಂತಿರುವಾಗ್ಗೆ ಮಡಿಕೇರಿ ಕಡೆಯಿಂದ ಬಂದ ಕೆ ಎ 55 ಎಂ 2159 ರ ಓಮಿನಿ ವ್ಯಾನಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ವ್ಯಾನನ್ನು ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸರೋಜಮ್ಮನವರು ಬಿದ್ದು, ಅವರ ತಲೆ ಮತ್ತು ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು, ತಕ್ಷಣ ಗಾಯಾಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿಗೆ ಸಾಗಿಸಲಾಗಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Tuesday, January 30, 2018

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
                      ಕೊಲೆ ಪ್ರಕರಣವೊಂದರಲ್ಲಿ ಆರೋಪಿಗೆ ಅಪರ ಜಿಲ್ಲಾ ಮತ್ತು ಸತ್ರೆ ನ್ಯಾಯಾಲಯ, ಮಡಿಕೇರಿ (ಕಾರ್ಯ ನಿರ್ವಹಣೆ ವಿರಾಜಪೇಟೆ) ಯು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

                       ಪೊನ್ನಂಪೇಟೆ ಬಳಿಯ ನಿಟ್ಟೂರು ಗ್ರಾಮದ ಮಲ್ಲೂರು ನಿವಾಸಿ ಜೇನು ಕುರುಬರ ಕರಿಯ ಎಂಬಾತನು ಪಾನಮತ್ತನಾಗಿ ಆತನ ಪತ್ನಿ ಜಯಮಾಲ ಎಂಬಾಕೆಯನ್ನು ದಿನಾಂಕ 01/12/2015ರಂದು ರಾತ್ರಿ ಕುತ್ತಿಗೆ ಹಿಚುಕಿ ನಂತರ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ್ದು ತೀವ್ರವಾಗಿ ಗಾಯಗೊಂಡ ಜಯಮಾಲ ನೀಡಿದ ಹೇಳಿಕೆಯ ಮೇರೆಗೆ ದಿನಾಂಕ 02/12/2015ರಂದು ಪೊನ್ನಂಪೇಟೆ ಠಾಣೆಯಲ್ಲಿ ಮೊ.ಸಂ.124/2015 ವಿಧಿ 307 ಐಪಿಸಿ ಪ್ರಕಾರ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ನಂತರ ಗಾಯಾಳು ಜಯಮಾಲ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಿನಾಂಕ 06/12/2015ರಂದು ಮೃತಳಾಗಿದ್ದು ಮೊಕದ್ದಮೆಗೆ ವಿಧಿ 302 ಐಪಿಸಿಯನ್ನು ಅಳವಡಿಸಿಕೊಂಡು ಆಗಿನ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ತನಿಖೆಯನ್ನು ಕೈಗೊಂಡಿದ್ದರು. ತನಿಖಾಧಿಕಾರಿಯಾದ ಸಿಪಿಐ ಪಿ.ಕೆ.ರಾಜುರವರು ದಿನಾಂಕ 16/03/2016ರಂದು ಆರೋಪಿ ಜೇನುಕುರುಬರ ಕರಿಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

                         ಆಗಿನ ಗೋಣಿಕೊಪ್ಪ ವೃತ್ತ ನಿರೀಕ್ಷಕರಾಗಿದ್ದ ಹಾಲಿ ಕುಟ್ಟ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ಪ್ರಕರಣದ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್ ಹಾಗೂ ವಿರಾಜಪೇಟೆ ಪೊಲೀಸ್‌ ಉಪ ಅಧೀಕ್ಷಕರಾದ ನಾಗಪ್ಪರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪಿ.ಕೆ.ರಾಜು, ಸಿಪಿಐರವರು ಹಾಗೂ ಸಿಬ್ಬಂದಿಗಳು ಪ್ರಕರಣದ ಸಾಕ್ಷಿದಾರರಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ನ್ಯಾಯಾಲಯದಲ್ಲಿ ಆರೋಪವು ಸಾಬೀತಾಗುವಲ್ಲಿ ಯಶಸ್ವಿಯಾಗಿರುತ್ತಾರೆ.

                      ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ (ಕಾರ್ಯನಿರ್ವಹಣೆ ವಿರಾಜಪೇಟೆ)ಯ ನ್ಯಾಯಾಧೀಶರಾದ ಶ್ರೀ ಮೋಹನ್‌ ಪ್ರಭುರವರು ದಿನಾಂಕ 30/01/2018ರಂದು ಪ್ರಕರಣದ ಆರೋಪಿ ಜೇನು ಕುರುಬರ ಕರಿಯ, ತಂದೆ ಪೌತಿ ತಿಮ್ಮ, ಕುಂಬಾರಕಟ್ಟೆ ಹಾಡಿ, ಮಲ್ಲೂರು, ನಿಟ್ಟೂರು ಗ್ರಾಮ ಈತನಿಗೆ ಸಾದಾ ಜೀವಾವಧಿ ಶಿಕ್ಷೆ ಹಾಗೂ ರೂ.10,000/- ದಂಡ ವಿಧಿಸಿದ್ದು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೂ ಆರು ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀ ಮಹಾಂತಪ್ಪನವರು ವಾದ ಮಂಡಿಸಿದ್ದರು.
 
ವ್ಯಕ್ತಿ ಆತ್ಮಹತ್ಯೆ
                            ದಿನಾಂಕ 29/01/2018ರಂದು ಶನಿವಾರಸಂತೆ ನಿವಾಸಿ ನಿಶಾಂತ್ ಎಂಬ ಯುವಕನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ನಿಶಾಂತ್‌ನ ತಂದೆ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
                        ದಿನಾಂಕ 29/01/2018ರಂದು ಬೆಳಿಗ್ಗೆ ಸುಂಟಿಕೊಪ್ಪ ನಿವಾಸಿ ಅಬ್ದುಲ್ ಗಫೂರ್ ಎಂಬವರು ಪಟ್ಟಣದ ಹೆದ್ದಾರಿಯಲ್ಲಿರುವ ಸೂರ್ಯ ಹೋಟೆಲ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರ ಕಡೆಯಿಂದ ಒಂದು ನಂಬರ್‌ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಬ್ದುಲ್ ಗಫೂರ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ಸಾಗಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಬೈಕಿಗೆ ಕಾರು ಡಿಕ್ಕಿ
                       ದಿನಾಂಕ 29/01/2018ರಂದು ಸೋಮವಾರಪೇಟೆ ಬಳಿಯ ಮೂವತೊಕ್ಲು ನಿವಾಸಿ ಚಂದ್ರ ಎಂಬವರು ಅವರ ಕೆಎ-12-188ರ ಮೋಟಾರು ಬೈಕಿನಲ್ಲಿ ಹೊಳೆನರಸೀಪುರಕ್ಕೆ ಹೋಗುತ್ತಿರುವಾಗ ಕೋವರ್‌ಕೊಲ್ಲಿ ಬಳಿ ಒಂದು ಮಾರುತಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿ ವ್ಯಾನನ್ನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 29, 2018

 ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ:

     ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ವಾಸಿ ಶ್ರೀಮತಿ ಮಾಲತಿ ಎಂಬವರು ದಿನಾಂಕ 28-1-2018 ರಂದು 11-00 ಗಂಟೆಗೆ ತಮ್ಮ ಮನೆಯಲ್ಲಿದ್ದಾಗ ಅವರ ಮನೆಯ ಪಕ್ಕದ ಮನೆಯ ನಿವಾಸಿ ಮುರಳಿ ಎಂಬವರು ಮನೆಯ ಬಳಿ ಬಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಇದನ್ನು ಪ್ರಶ್ನಿಸಿದ ಕಾರಣಕ್ಕೆ ಸದರಿ ಆರೋಲಿ ಮುರಳಿ ಫಿರ್ಯಾದಿ ಶ್ರೀಮತಿ ಮಾಲತಿರವರ ಕೈಯನ್ನು ಹಿಡಿದು ಎಳೆದಾಡಿ ಕೈಯಿಂದ ಹಲ್ಲೆ ನಡೆಸಿದ್ದು ಈ ಸಂಬಂಧ ಶ್ರೀಮತಿ ಮಾಲತಿರವರ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ನಿವಾಸಿ ಟಿ.ಕೆ. ಸುನಿಲ್ ಎಂಬವರ ಚಿಕ್ಕಪ್ಪನವರ ತೋಟದಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸಿಕೊಂಡಿರುವ 7ನೇ ಹೊಸಕೋಟೆ ಗ್ರಾಮದ ನಿವಾಸಿ ಕಿರಣ್ ರವರು ದಿನಾಂಕ 28-1-2018 ರಂದು ಬೆಳಗ್ಗೆ ತಾನು ವಾಸವಾಗಿರುವ ತೋಟದ ವಸತಿ ಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಬೈಕಿಗೆ ಜೀಪು ಡಿಕ್ಕಿ:
     ದಿನಾಂಕ 28-01-2018 ರಂದು ಪಿರ್ಯಾದಿ ಬಿಹಾರಿ ಮೂಲದ ಮಂತು ಕುಮಾರ್ ಗಿರಿ ಹಾಗೂ ಅವರ ತಮ್ಮ ಬಿರೇಂದ್ರ ಗಿರಿ @ ಸೋನು ಗಿರಿ ರವರು KA-12-L-6213 ರ ಬೈಕ್ ನಲ್ಲಿ ಮಡಿಕೇರಿಯಿಂದ ಸುಂಟಿಕೊಪ್ಪಕ್ಕೆ ಹೋಗುತ್ತಿದ್ದಾಗ, ಸಿಂಕೋನದಲ್ಲಿ ಸಮಯ 8.15 ಎ.ಎಂ ಗೆ ಎದುರುಗಡೆಯಿಂದ ಅಂದರೆ ಸುಂಟಿಕೊಪ್ಪ ಕಡೆಯಿಂದ KA-12-N-1348 ರ ಪಿಕ್ ಆಪ್ ಜೀಪನ್ನು ಅದರ ಚಾಲಕ ಯೂಸಷ್ ರವರು ಅತೀವೇಗ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಏಕಾಎಕಿ ಯಾವುದೇ ಸೂಚನೆ ಇಲ್ಲದೇ ಬೈಕಿನ ಮುಂಭಾಗದಲ್ಲಿ ಮಕ್ಕಂದೂರು ಕಡೆಗೆ ತಿರುಗಿಸಿದ್ದರಿಂದ ಪಿರ್ಯಾಧಿಯವರ ನಿಯಂತ್ರಣ ತಪ್ಪಿದ ಬೈಕ್ ಜೀಪಿನ ಹಿಂಭಾಗದ ಚಕ್ರದ ಬಳಿ ಡಿಕ್ಕಿಯಾದ ಪರಿಣಾಮ ಪಿರ್ಯಾಧಿ ಹಾಗೂ ಅವರ ತಮ್ಮ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿಗೆ ಬಿದ್ದು ಮಹಿಳೆ ಸಾವು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಪಂಜರಿ ಎರವರ ಕಾಳ ಎಂಬವರ ಮಗಳು (35) ಮೂರ್ಛೆ ರೋಗದಿಂದ ಬಳಲುತ್ತಿದ್ದು ದಿನಾಂಕ 28-1-2018 ರಂದು ಸಮಯ 10-00 ಗಂಟೆಗೆ ಮನೆಯ ಪಕ್ಕದಲ್ಲಿ ಇರುವ ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದು ಬಟ್ಟೆ ಒಗೆಯುತ್ತಿದ್ದ ವೇಳೆ ಆಕೆ ನೀರಿನಲ್ಲಿ ಬಿದ್ದು ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಹುಡುಗ ಕಾಣೆ:

    ಗೋಣಿಕೊಪ್ಪ ಠಾಣಾ ಸರಹದ್ದಿನ ಕಳತ್ಮಾಡು ಗ್ರಾಮದ ನಿವಾಸಿ ಗಾಯತ್ರಿ ಎಂಬವರ ಮಗ ಮಧುಮೋಹನ ದಿನಾಂಕ 27-1-2018 ರಂದು ಬೆಳಗ್ಗೆ 11-45 ಗಂಟೆಗೆ ತನ್ನ ಅಕ್ಕ ಮೇಘಮೋಹನ್ ರವರೊಂದಿಗೆ ಗೋಣಿಕೊಪ್ಪದಲ್ಲಿರುವ ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಅಕ್ಕ ಮೇಘಮೋಹನ್ ರವರನ್ನು ಟೈಲರ್ ಅಂಗಡಿಯಲ್ಲಿ ಬಿಟ್ಟು ಹೋಗಿ ನಂತರ ಮರಳಿ ಬಾರದೆ ಕಾಣೆಯಾಗಿರುತ್ತಾರೆ ಎಂದು ಫಿರ್ಯಾದಿ ಗಾಯತ್ರಿಯವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, January 28, 2018

ವ್ಯಕ್ತಿ ಕಾಣೆ 
              ಸುಳ್ಯ ತಾಲೂಕಿನ ಆಜ್ಜವರ ಗ್ರಾಮದ ನಿವಾಸಿಯಾದ ದಿನೇಶ್ ಎಂಬುವವರು ರಾಮಚಂದ್ರ ಎಂಬುವವರಿಗೆ ಸೇರಿದ ಅಪ್ಪಂಗಳದಲ್ಲಿರುವ ಕಾಫಿ ತೋಟದಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದವರು ದಿನಾಂಕ 26-01-2018 ರಂದು ಯಾರಿಗೂ ತಿಳಿಸದೇ ಎಲ್ಲಿಗೋ ಹೋಗಿದ್ದು, ಈ ಬಗ್ಗೆ ತಮ್ಮ ರಾಧಾಕೃಷ್ಣ ಎಂಬುವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, January 27, 2018

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಹೊಸುರು ಬೆಟ್ಟಗೇರಿ ಗ್ರಾಮದ ನಿವಾಸಿ ಶ್ರೀಮತಿ ಹೆಚ್.ಬಿ. ಶಶಿ ಎಂಬವರ ಪತಿ ಕುಶ ಎಂಬವರು ದಿನಾಂಕ 26-1-2018 ರಂದು ಯಾವುದೋ ವಿಷ ಸೇವಿಸಿ ಅಸ್ವಸ್ಥಗೊಂಡು ಅವರನ್ನು ಚಿಕಿತ್ಸೆಗೆ ಅಮ್ಮತ್ತಿ ಆರ್.ಐ.ಹೆಚ್.ಪಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಕುಶರವರು ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ತಾಲೋಕು, ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ವಾಸವಾಗಿರುವ ಮಂಜುನಾಥ ಎಂಬವರ ತಂದೆ ಕೃಷ್ಣಶೆಟ್ಟಿಯವರಿಗೆ 70 ವರ್ಷ ಪ್ರಾಯವಾಗಿದ್ದು ಮನೆಯಲ್ಲಿ ಇರುತ್ತಿದ್ದು ಇವರಿಗೆ ಮಧ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 26-01-2018 ರಂದು ಬೆಳಿಗ್ಗೆ 08.00 ಗಂಟೆಗೆ ಸದರಿ ಕೃಷ್ಣಶೆಟ್ಟಿಯವರು ಮಲಗುವ ಕೋಣೆಯಲ್ಲಿ ವಿಪರೀತ ಮಧ್ಯಪಾನ ಮಾಡಿದ ಮತ್ತಿನಲ್ಲಿ ಜೇವನದಲ್ಲಿ ಜಿಗುಪ್ಸೆಗೊಂಡು ಮರದ ಕೌಕೋಲಿಗೆ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಅವರ ಮಗ ಮಂಜುನಾಥರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ಷುಲ್ಲಕ ಕಾರಣ ಜಗಳ ಹಲ್ಲೆ:

      ಸೋಮವಾರಪೇಟೆ ತಾಲೋಕು ಅರೆಯೂರು ಗ್ರಾಮದ ನಿವಾಸಿಗಳಾದ ವಿ.ಪಿ. ಸಂಪು ಮತ್ತು ರಶ್ಮಿ ಎಂಬವರ ನಡುವೆ ದಿನಾಂಕ 26-1-2018 ರಂದು ಸಮಯ 21-30 ಗಂಟೆಗೆ ಸಂಪು ಮತ್ತು ಉತ್ತಪ್ಪ ರವರುಗಳು ಮೋಟಾರ್ ಸೈಕಲಿನಲ್ಲಿ ಬಂದು ಉತ್ತಪ್ಪ ಎಂಬವರ ಮನೆಯ ಮುಂದೆ ಬೈಕ್ ಸ್ಕಿಡ್ ಆಗಿ ಬಿದ್ದ ವಿಚಾರದಲ್ಲಿ ಜಗಳವಾಗಿ ಉತ್ತಪ್ಪ ಹಾಗು ಅವರ ಪತ್ನಿ ರಶ್ಮಿರವರು ದೊಣ್ಣೆಯಿಂದ ಸಂಪು ರವರ ಮೇಲೆ ಹಲ್ಲೆ ನಡೆಸಿರುತ್ತಾರೆಂದು ದೂರನ್ನು ನೀಡಿದ್ದು ಮತ್ತು ಇದೇ ವಿಚಾರದಲ್ಲಿ ರಶ್ಮಿರವರು ದೂರನ್ನು ನೀಡಿ ಸಂಪು ಮತ್ತು ಸಂದೇಶ್ ರವರು ಉತ್ತಪ್ಪ ಹಾಗು ಅವರ ಪತ್ನಿ ಫಿರ್ಯಾದಿ ರಶ್ಮಿರವರ ಮೇಲ್ ಹಲ್ಲೆ ಹಲ್ಲೆ ನಡೆಸಿರುತ್ತಾರೆಂದು ದೂರನ್ನು ನೀಡಿದ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರತ್ಯೇಕವಾಗಿ 2 ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 
 

Friday, January 26, 2018

 ಮೋಟಾರ್ ಬೈಕಿಗೆ ಪಿಕ್ ಅಪ್ ವಾಹನ ಡಿಕ್ಕಿ.

     ಸೋಮವಾರಪೇಟೆ ತಾಲೋಕು ಹೆಮ್ಮನೆ ಗ್ರಾಮದ ನಿವಾಸಿ ಬಿ.ವಿ. ರಂಜಿತ್ ರವರು ದಿನಾಂಕ 25-1-2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ತನ್ನ ಸ್ನೇಹಿತ ದೀಕ್ಷಿತ್ ರವರೊಂದಿಗೆ ತಮ್ಮ ಬಾಪ್ತು ಮೊಟಾರ್ ಸೈಕಲಿನಲ್ಲಿ ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಎದುರುಗಡೆಯಿಂದ ಬಂದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಬಿ.ವಿ. ರಂಜಿತ್ ಮತ್ತು ದೀಕ್ಷಿತ್ ರವರು ಗಾಯಗೊಂಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯಿಂದ ಪತ್ನಿಗೆ ಕಿರುಕುಳ:

     ಸೋಮವಾರಪೇಟೆ ಠಾಣೆ ಸರಹದ್ದಿನ ಹಾನಗಲ್ಲು ಗ್ರಾಮದ ನಿವಾಸಿ ಶ್ರೀಮತಿ ಶಾಂಭವಿ ಎಂಬವರಿಗೆ ಅವರ ಗಂಡ ಹೆಚ್.ಆರ್. ನವೀನ್, ಅತ್ತೆ ತಂಗಮ್ಮ, ಮಾವ ರಾಜು, ಮತ್ತು ಅತ್ತಿಗೆ ಬೀನಾ ರವರು ಸೇರಿ ಮಾನಸಿಕ ಕಿರುಳುಳ ನೀಡುತ್ತಿರುವುದಾಗಿ ಮತ್ತು ದಿನಾಂಕ 25-1-2018 ರಂದು ಸಂಜೆ 4-30 ಗಂಟೆಗೆ ಗಂಡ ಹೆಚ್.ಆರ್. ನವೀನ್ ರವರು ಜಗಳ ಮಾಡಿ ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಸೋಮಣ್ಣ ಎಂಬವರ ಮಗ ಎನ್.ಎಸ್. ಚಿದಾನಂದ ಎಂಬವರು ದಿನಾಂಕ 23-1-2018 ರಂದು ಮದೆನಾಡುವಿನಿಂದ ಮಡಿಕೇರಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ:

     ದಿನಾಂಕ 25-1-2018ರಂದು ಪೊನ್ನಂಪೇಟೆ ಠಾಣೆ ಸರಹದ್ದಿನ ತ್ಯಾಗರಾಜ ರಸ್ತೆ, ಪೊನ್ನಂಪೇಟೆ ನಿವಾಸಿ ಕೋಳೇರ ಸಜನ್ ಎಂಬವರು ಬಿ.ಕೆ. ಸೌಮ್ಯ ಎಂಬವರೊಂದಿಗೆ ಪೊನ್ನಂಪೇಟೆ ಕಾವೇರಿ ಹೋಟೇಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ್ಯಪ್ಪ ಎಂಬ ವ್ಯಕ್ತಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಸೌಮ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಸೌಮ್ಯರವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಬಿ.ಜಿ.ಎಸ್. ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Thursday, January 25, 2018

ಹಳೇ ದ್ವೇಷ, ಹಲ್ಲೆ:

     ದಿನಾಂಕ 24-1-2018 ರಂದು ಸಂಜೆ 5-30 ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಮೂಕಂಡಬಾಣೆ ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಜೆ. ಪವಿತ್ರ, ಅವರ ಗಂಡ ಎನ್. ಆರ್. ಜೀವನ್ ಹಾಗು ಅವರ ಮಾವ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಸಹದೇವ, ಮಿರನ್ ಕುಮಾರ್ ಹಾಗು ದಿನೇಶ ಎಂಬವರುಗಳು ಅಲ್ಲಿಗೆ ಬಂದು ಅಂದು ಹಳೇ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಮೂವರ ಮೇಲೂ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ:

     ವಿರಾಜಪೇಟೆ ತಾಲೋಕು, ಹೈಸೊಡ್ಲೂರು ಗ್ರಾಮದ ನಿವಾಸಿ ಮಂಡೆಂಗಡ ಯು. ಕವಿನ್ ರವರು ದಿನಾಂಕ 22-1-2018 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಹೈಸೊಡ್ಲೂರು ಗ್ರಾಮದಿಂದ ಗೋಣಿಕೊಪ್ಪದ ಕಡೆಗೆ ತಮ್ಮ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಬೇಗೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಶ್ರೀಮತಿ ಸುಮನ್ ಎಂಬವರು ತಮ್ಮ ಬಾಪ್ತು ಕಾರನ್ನು ರಸ್ತೆಯ ಎಡಬದಿಯಿಂದ ಯಾವುದೇ ಸೂಚನೆಗಳನ್ನು ನೀಡದೆ ರಸ್ತೆಯ ಬಲಭಾಗಕ್ಕೆ ಕಾರನ್ನು ಚಾಲಿಸಿದ್ದರಿಂದ ಸದರಿ ಕಾರು ಮಂಡೆಂಗಡ ಯು. ಕವಿನ್ ರವರು ಚಾಲಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಸದರಿ ಕವನ್ ರವರು ಗಾಯಗೊಂಡಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಣಗಲು ಹಾಕಿದ್ದ ಕಾಫಿ ಕಳವು:

     ಶ್ರೀಮತಿ ಜಾನಕಿ ಎಂಬವರಿಗೆ ಕಿರಗಂದೂರು ಗ್ರಾಮದಲ್ಲಿ 5 ಎಕರೆ ಕಾಫಿ ತೋಟವಿದ್ದು ಅಳುಗಳ ಸಹಾಯದಿಂದ ಕಾಫಿ ತೋಟದಲ್ಲಿ ಕಾಫಿಯನ್ನು ಕುಯ್ಯಿಸುತ್ತಿರುವುದಾಗಿದ್ದು, ಕುಯ್ದ ಕಾಫಿಯನ್ನು ಬೇಳೆ ಮಾಡಿಸಿ ಮನೆಯ ಮುಂದೆ ಟಾರ್ಪಲ್ ನಲ್ಲಿ ಒಣಗಲು ಹಾಕಿದ್ದು, ದಿನಾಂಕ 24/01/2018 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ನೋಡುವಾಗ ಒಣಗಲು ಹಾಕಿದ್ದ ಸುಮಾರು 50 ಕೆಜಿಯ 3 ಕಾಫಿ ಚೀಲದಷ್ಟು ಕಾಫಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಾಫಿ ಬೇಳೆಯ ಬೆಲೆ ಅಂದಾಜು 18 ರಿಂದ 20 ಸಾವಿರ ರುಪಾಯಿ ಅಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Wednesday, January 24, 2018

 ಆಸ್ತಿ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕು ಹೊಸಬೀಡು ಹಾನಗಲ್ಲು ಗ್ರಾಮದ ನಿವಾಸಿ ಹೆಚ್.ಎ. ಸ್ನೇಹ ರವರ ತಾಯಿ ಹೆಸರಿನಲ್ಲಿ ಆಸ್ತಿ ಇದ್ದು, ಸದರಿ ಆಸ್ತಿಯ ವಿಚಾರವಾಗಿ ಸ್ನೇಹರವರ ಚಿಕ್ಕಪ್ಪನಾದ ಹೂವಯ್ಯ ಎಂಬವರು ಮದ್ಯಪಾನ ಮಾಡಿಕೊಂಡು ಬಂದು ತಾಯಿ ರತಿಯವರೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದು ದಿನಾಂಕ 18-1-2018 ರಂದು 09-45 ಎ.ಎಂ.ಗೆ ಸದರಿ ಹೂವಯ್ಯನವರು ಹೆಚ್.ಎ. ಸ್ನೇಹರವರ ಮನೆಯ ಹತ್ತಿರ ಬಂದು ಸ್ನೇಹರವರ ತಮ್ಮ ಅಕ್ಷಯ್ ಗೌಡರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಪಿ. ಹೂವಯ್ಯನವರು ಸೋಮವಾರಪೇಟೆ ಠಾಣೆಯಲ್ಲಿ ದೂರನ್ನು ನೀಡಿ ಅಕ್ಷಯ್ ಗೌಡ ರವರು ದಿನಾಂಕ 18-1-2018 ರಂದು ಬೆಳಗ್ಗೆ 9045 ಗಂಟೆಗೆ ಹೂವಯ್ಯನವರ ಮನೆಯ ಬಳಿ ಹೋಗಿ ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಹೂವಯ್ಯನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಅಕ್ಷಯ್ ಗೌಡನವರ ವಿರುದ್ದವೂ ಪ್ರಕರಣವನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ:
ಸೋಮವಾರಪೇಟೆ ಠಾಣಾ ಸರಹದ್ದಿನ ಶಾಂತಳ್ಳಿ ಗ್ರಾಮದ ನಿವಾಸಿ ಕೆ.ಎಸ್. ಪ್ರಸಾದ್ ರವರ ತಾಯಿ ಶ್ರೀಮತಿ ಚಂದ್ರಾವತಿಯವರು ದಿನಾಂಕ 16/01/2018 ರಂದು ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ್ಗೆ, ಶಾಂತಳ್ಳಿ ಕಡೆಯಿಂದ ಕೆಎ-02 ಎಂಬಿ-7625ರ ಮಾರುತಿ ಆಲ್ಟೋ ಕಾರಿನ ಚಾಲಕ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಂದ್ರಾವತಿಯವರಿಗೆ ಡಿಕ್ಕಿಪಡಿಸಿದ ಪರಣಾಮ ಸದರಿಯವರ ತಲೆಯ ಭಾಗಕ್ಕೆ ,ಬಲಕೈಗೆ ಮತ್ತು ಬೆನ್ನಿನ ಭಾಗಕ್ಕೆ ಪೆಟ್ಟಾಗಿದ್ದು ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಜಗಳ:

    ಶ್ರೀಮತಿ ಯಮುನ, ಸೋಮವಾರಪೇಟೆ ವಾಸಿ ಇವರು ಈ ಹಿಂದೆ ಗುರು ಎಂಬವರನ್ನು ಮದುವೆಯಾಗಿದ್ದು, ಗಂಡ ಗುರು ಅವರನ್ನು ಬಿಟ್ಟು ಹೋದ ಬಗ್ಗೆ ವಿಚಾರಿಸಲು ಶ್ರೀಮತಿ ಯಮುನರವರು ತಂದೆ ಗಣೇಶ, ತಾಯಿ ಪ್ರೇಮ, ಅಣ್ಣ ಯೋಗೇಶ್ ರವರೊಂದಿಗೆ ಗುರುವಿನ ಮನೆ ಬಳಿ ಹೋದಾಗ ಗುರು,ಆತನ ತಾಯಿ ಲತಾ, ಗುರುವಿನ ಮಾವ ಪ್ರಕಾಶರವರುಗಳು ಸೇರಿ ಶ್ರೀಮತಿ ಯಮುನ ರವರ ಮೇಲೆ ಹಲ್ಲೆ ನಡೆಸಿ ದೂಡಿ ಕೆಳಗೆ ಬೀಳಿಸಿದ ಪರಿಣಾಮ ಹೊಟ್ಟೆ ಭಾಗಕ್ಕೆ ಪೆಟ್ಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ ಹಲ್ಲೆ:

    ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಶ್ರೀಮತಿ ಲತಾ ಎಂಬವರು ದಿನಾಂಕ 23-1-2018 ರಂದು ತಮ್ಮ ಮನೆಯಲ್ಲಿ ಇರುವಾಗ್ಗೆ ಆರೋಪಿಗಳಾದ ಯೋಗೇಶ, ಗಣೇಶ, ಪ್ರೇಮಾ, ಯಮುನಾ ರವರು ಸೇರಿಕೊಂಡು ಲತಾರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಲತಾರವರ ಮಗಳ ಮದುವೆ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಶ್ರೀಮತಿ ಲತಾರವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖ ಕೈಗೊಂಡಿದ್ದಾರೆ.

Tuesday, January 23, 2018

ವ್ಯಕ್ತಿ ಆಕಸ್ಮಿಕ ಸಾವು
                         ದಿನಾಂಕ 21/01/2018 ರಿಂದ 22/01/2018ರ ನಡುವೆ ಮಡಿಕೇರಿ ನಗರದ ಕಾನ್ವೆಂಟ್ ಜಂಕ್ಷನ್ ನಿವಾಸಿ ಸತೀಶ್‌ ರಾವ್ ಎಂಬವರು ಕಾನ್ವೆಂಟ್ ಜಂಕ್ಷನ್ ಬಳಿ ಇರುವ ಭಾಸ್ಕರ್ ಹೋಟೆಲಿನ ಪಕ್ಕದ ತೋಡಿನ ಸಿಮೆಂಟ್ ಕಟ್ಟೆಯ ಮೆಷ್‌ಗೆ ಸಿಲುಕಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಮೃತ ಸತೀಶ್‌ ರಾವ್‌ರವರು ಅತೀವ ಮದ್ಯ  ವ್ಯಸನಿಯಾಗಿದ್ದು ಅಪಸ್ಮಾರ ಕಾಯಿಲೆಯೂ ಇದ್ದ ಕಾರಣ ಆಕಸ್ಮಿಕವಾಗಿ ಸಿಮೆಂಟ್ ಕಟ್ಟೆಯ ಮೆಷ್‌ಗೆ ಸಿಲುಕಿ ಸಾವಿಗೀಡಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                       ದಿನಾಂಕ 22/01/2018ರಂದು ಮಡಿಕೇರಿ ನಗರದ ದೇಚೂರು ನಿವಾಸಿಗಳಾದ ಮಹದೇವ ಮತ್ತು ಜಯಲಕ್ಷ್ಮಿ ಎಂಬವರ ಮೇಲೆ ಜಯ ಗಣಪತಿ, ಸರಸು ಮತ್ತು ಇನ್ನಿತರರು ಸೇರಿ ಹಲ್ಲೆ ಮಾಡಿ ಮನೆಯೊಳಗಿದ್ದ ಸಾಮಗ್ರಿಗಳನ್ನು ಹೊರಗೆ ಹಾಕಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ  ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಡಾನೆ ಧಾಳಿ, ಸಾವು
                    ದಿನಾಂಕ 22/01/2018ರಂದು ಸಿದ್ದಾಪುರ ಬಳಿಯ ಕರಡಿಗೋಡು ನಿವಾಸಿ ಕೆ.ಪಿ.ಮೋಹನ್ ದಾಸ್ ಎಂಬವರು ತೋಟದಲ್ಲಿ ಕಾಫಿ ಕುಯ್ಲು ಮಾಡುತ್ತಿದ್ದಾಗ ಕಾಡಾನೆ ಧಾಳಿಗೆ ಸಿಲುಕಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್‌ಗೆ ಬೆಂಕಿ
                      ದಿನಾಂಕ 21/01/2018ರಂದು ರಾತ್ರಿ ವೇಳೆ ಸುಂಟಿಕೊಪ್ಪ ಬಳಿಯ ಹಾಲೇರಿ ನಿವಾಸಿ ಬಿ.ಡಿ. ಹರಿಣಿ ಎಂಬವರು ಮನೆಯ ಪಕ್ಕದ ರಸ್ತೆಯ ಬದಿ ನಿಲ್ಲಿಸಿದ್ದ ಅವರ ಸ್ಕೂಟರಿಗೆ ಯಾರೋ ಬೆಂಕಿ ಹಚ್ಚಿದ್ದು ವಿಚಾರಿಸಿದಾಗ ಹಾಲೇರಿ ನಿವಾಸಿ ಶಂಕರ ಎಂಬಾತನು ಬೆಂಕಿ ಹಚ್ಚಿರುವುದಾಗಿ ತಿಳಿದು ಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 22, 2018

ಜೀವನದಲ್ಲಿ ಜುಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.   ಎಮ್ಮೆಮಾಡು ಗ್ರಾಮದ ಪಿ.ಎ. ಇಬ್ರಾಹಿಂ ಎಂಬವರ ಸಹೋದರ ಪಿ.ಎ.ಹಸೇನಾರ್ ಎಂಬವರು ಎಮ್ಮೆಮಾಡು ಗ್ರಾಮದಲ್ಲಿ ವ್ಯಾಪಾರ ವೃತ್ತಿಯನ್ನು ಮಾಡಿಕೊಂಡಿದ್ದು ಅವರ ಪತ್ನಿ ಹಾಗು 2 ಮಕ್ಕಳು ತಮ್ಮ ಊರಿಗೆ ಹೋಗಿ ಸುಮಾರು 20 ದಿನಗಳು ಕಳೆದರೂ ಮರಳಿ ಬಾರದೇ ಇರುವುದರಿಂದ ನೊಂದ ಪಿ.ಎ. ಹಸೇನಾರ್ ರವರು ದಿನಾಂಕ 19-1-2018 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಗೆ ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 20-1-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಪಿ.ಎ. ಇಬ್ರಾಹಿಂ ರವರ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

Sunday, January 21, 2018

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
                     ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ದಿನಾಂಕ 27/12/2015ರಂದು ಕುಟ್ಟ ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಬೊಮ್ಮಾಡು ಹಾಡಿಯ ನಿವಾಸಿ ಕರಿಯಣ್ಣ ಎಂಬಾತನ ಮೇಲೆ ಜೇನುಕುರುಬರ ಬೊಳ್ಳ, ನಾಗಪ್ಪ ಮತ್ತು ದಾದು ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು ಗಾಯಾಳು ಕರಿಯಣ್ಣ ಆಸ್ಪತ್ರೆಯಲ್ಲಿ ಮೃತನಾಗಿ ಆರೋಪಿಗಳ ವಿರುದ್ದ ಕುಟ್ಟ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್.ದಿವಾಕರ್‌ರವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 
                      ಪ್ರಕರಣದ ವಿಚಾರಣೆಯನ್ನು ನಡೆಸಿದ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಪ್ರಭುರವರು ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕ 17/01/2018ರಂದು  ಆರೋಪಿಗಳಾದ ಜೇನುಕುರುಬರ ಬೊಳ್ಳ, ನಾಗಪ್ಪ ಮತ್ತು ದಾದುರವರಿಗೆ ಸಾದಾ ಜೀವಾವಧಿ ಸಜೆ ಮತ್ತು ತಲಾ ರೂ.5,000/-ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಾಂತಪ್ಪನವರು ವಾದ ಮಂಡಿಸಿದ್ದರು. 

ಕಳವು ಆರೋಪಿ ಬಂಧನ
                             ದಿನಾಂಕ 08/09/2016ರಂದು ವಿರಾಜಪೇಟೆ ನಿವಾಸಿ ಶಿಬಾ ಎಂಬವರು ಅವರ ಕಾರನ್ನು ವಿರಾಜಪೇಟೆ ನಗರದ  ಸೈಂಟ್ ಆ್ಯನ್ಸ್ ಚರ್ಚಿನ ಮುಂಭಾಗ ನಿಲ್ಲಿಸಿ ಹೋಗಿದ್ದ ಕಾರಿನಿಂದ ಸುಮಾರು 41 ಗ್ರಾಂ ಚಿನ್ನಾಭರಣ, ರೂ.20,000/- ನಗದನ್ನು ಕಳವು ಮಾಡಿದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯರವರು ತನಿಖೆಯನ್ನು ಕೈಗೊಂಡಿದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರ ಹಾಗೂ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪರವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ವಿರಾಜಪೇಟೆ ನಗರ ಪೊಲೀಸರ ತಂಡವು ಕೇರಳದ ಕಣ್ಣೂರು ಜಿಲ್ಲೆಯ ಕಾಂಜಲೇರಿಯ ನಿವಾಸಿ ಪಿ.ಕೆ.ಅರ್ಶದ್ ಎಂಬಾತನನ್ನು ದಿನಾಂಕ 19/01/2018ರಂದು ಪತ್ತೆ ಹಚ್ಚಿ ಬಂಧಿಸಿ ಆತನಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. 
                  ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯರವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ವಿರಾಜಪೇಟೆ ನಗರ ಠಾಣಾ ಪಿಎಸ್‌ಐ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ ಮುನೀರ್, ದೇವಯ್ಯ, ಸುನಿಲ್ ಮತ್ತು ರಜನ್ ಕುಮಾರ್‌ರವರು ಪಾಲ್ಗೊಂಡಿದ್ದು ತಂಡದ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌ ಐಪಿಎಸ್‌ರವರು ಶ್ಲಾಘಿಸಿದ್ದಾರೆ. 

ಮರ-ಮುಟ್ಟುಗಳಿಗೆ ಬೆಂಕಿ
                         ದಿನಾಂಕ 19/01/2018ರಂದು ನಾಪೋಕ್ಲು ಬಳಿಯ ಕೋಕೇರಿ ನಿವಾಸಿ ಬಿ.ಎನ್.ತೇಜಕುಮಾರ್ ಎಂಬವರು ಮನೆ ಕಟ್ಟುವ ಸಲುವಾಗಿ ಶೇಖರಿಸಿಟ್ಟಿದ್ದ ಸುಮಾರು 2 ಲಕ್ಷ ರೂಗಳಷ್ಟು ಬೆಲೆ ಬಾಳುವ ಮರ-ಮುಟ್ಟುಗಳಿಗೆ ಅವರ ಚಿಕ್ಕಪ್ಪ ಬಿ.ಬಿ.ಕುಟ್ಟಪ್ಪ ಹಾಗೂ ತಂಗವ್ವ ಎಂಬವರು ರಾತ್ರಿ ವೇಳೆ ಬೆಂಕಿ ಹಚ್ಚಿ ನಾಶಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬೈಕ್ ಡಿಕ್ಕಿ
                           ದಿನಾಂಕ 19/01/2018ರಂದು ಮೂರ್ನಾಡು ಬಳಿಯ ಬಾಡಗ ನಿವಾಸಿ ಸತೀಶ್‌ ರೈ ಎಂಬವರು ಅವರ ನೂತನ ಕಾರಿನಲ್ಲಿ ಪುತ್ತೂರಿನಿಂದ ತಾಳತ್‌ಮನೆ ಮಾರ್ಗವಾಗಿ ಮನೆಗೆ ಬರುತ್ತಿದ್ದಾಗ ಮೇಕೇರಿ ಬಳಿ ಒಂದು ಮೋಟಾರ್ ಬೈಕ್ ಸಂಖ್ಯೆ ಕೆಎ-21-ಆರ್-0083 ನ್ನು ಅದರ ಚಾಲಕ ಹಿಂದಿನಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸತೀಶ್‌ ರೈರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾಗೂ ಬೈಕಿಗೆ ಹಾನಿಯುಂಟಾಗಿ ಬೈಕಿನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, January 20, 2018

ನೀರಿನ ವಿಚಾರದಲ್ಲಿ ಜಗಳ:

     ಸೋಮವಾರಪೇಟೆ ತಾಲೋಕು ಮೂದರವಳ್ಳಿ ಗ್ರಾಮದ ನಿವಾಸಿ ಪುಟ್ಟಪ್ಪ ಎಂಬವರೊಂದಿಗೆ ದಿನಾಂಕ 18-01-2018 ರಂದು ಅವರ ಪಕ್ಕದ ಮನೆಯಲ್ಲಿರುವ ಅವರ ಅಣ್ಣ ಕುಮಾರ ಹಾಗೂ ಅವರ ಮಗ ಧನಂಜಯ ರವರು ನೀರಿನ ಪೈಪಿನ ವಿಚಾರದಲ್ಲಿ ಜಗಳ ತೆಗದು ಮಣ್ಣು ಹೆಂಟೆ ಮತ್ತು ಸಣ್ಣ ಕಲ್ಲಿನಿಂದ ಫಿರ್ಯಾದಿ ಪುಟ್ಟಪ್ಪನವರ ತಲೆಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಅಪಘಾತ ಸವಾರ ಸಾವು:

     ಹಾಸನ ಜಿಲ್ಲೆಯ ಅರಕಲಗೂಡು ತಾಲೋಕಿನ ಅರಗಲ್ಲು ಗ್ರಾಮದ ನಿವಾಸಿ ಯೋಗೇಶ್ ಎಂಬವರು ದಿನಾಂಕ 18-1-2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಹೆಬ್ಬಾಲೆ ಕಡೆಯಿಂದ ಬರುತ್ತಿದ್ದು ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತೊರೆನೂರು ಗ್ರಾಮದ ಬಸ್ ನಿಲ್ದಾಣ ಬಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಇರುವ ರೋಡ್ ಹಂಪ್ ಬಳಿ ಬೈಕ್ ಮೇಲೆ ಹಾರಿ ಸುಮಾರು 50 ಅಡಿ ದೂರಕ್ಕೆ ಬೈಕ್ ಸಮೇತ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು, ಸದರಿಯವರನ್ನು ಚಿಕಿತ್ಸೆಗಾಗಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಯೋಗೇಶ್ ಸಾವನಪ್ಪಿದ್ದು ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಪಿಕ್ ಅಪ್ ವಾಹನ ಡಿಕ್ಕಿ:

ನಾಪೋಕ್ಲು ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದ ನಿವಾಸಿ ಅರ್ಷದ್ ಹಾಗು ರಾಶಿದ್ ಎಂಬವರು ದಿನಾಂಕ 18-1-2018 ರಂದು ಸಮಯ 9-45 ಎ.ಎಂ. ಗೆ ಮೋಟಾರ್ ಸೈಕಲಿನಲ್ಲಿ ಚೆರಿಯಪರಂಬು ಕಡೆಯಿಂದ ಹೊದವಾಡ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಶುಕ್ರು ಎಂಬವರು ತಮ್ಮ ಬಾಪ್ತು ಪಿಕ್ ಅಪ್ ವಾಹನದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಯಾವುದೇ ಸೂಚನೆಗಳನ್ನು ನೀಡದೆ ರಸ್ತೆಯ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಅರ್ಷದ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಅರ್ಷದ್ ಹಾಗು ರಾಶಿದ್ ರವರುಗಳು ಗಾಯಗೊಂಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

    ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡುಮಂಗಳೂರು ಗ್ರಾಮದ ನಿವಾಸಿ ಎ.ಬಿ. ಮುರುಳಿ ಕೃಷ್ಣ ಎಂಬವರು ದಿನಾಂಕ 16-1-2018 ರಂದು ರಾತ್ರಿ 11-00 ಗಂಟೆಗೆ ತನ್ನ ಮನೆಯ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಕೂಡುಮಂಗಳೂರು ಗ್ರಾಮದ ನಿವಾಸಿ ಕೆ.ಕೆ. ಪ್ರಸಾದ್ ಮತ್ತು ನರೇಂದ್ರ ಎಂಬವರುಗಳು ಮುರುಳಿ ಕೃಷ್ಣರವರ ದಾರಿ ತಡೆದು ನಿಲ್ಲಿಸಿ ಆಸ್ತಿ ವಿಚಾದಲ್ಲಿ ಜಗಳ ಮಾಡಿ ಚಾಕುವಿನಿಂದ ಕಿವಯ ಭಾಗಕ್ಕೆ ಕಡಿದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, January 19, 2018

ಬೈಕಿಗೆ ಕಾರು ಡಿಕ್ಕಿ
                      ದಿನಾಂಕ 18/01/2018ರಂದು ಪಾಲಿಬೆಟ್ಟ ನಿವಾಸಿ ಪಿ.ಜಿ.ಮುರಳಿ ಮೋಹನ ದಾಸ್ ಎಂಬವರು ಅವರ ಮೋಟಾರು ಬೈಕಿನಲ್ಲಿ ಮೂರ್ನಾಡಿನ ಅರಣ್ಯ ಇಲಾಖೆಯ ಕಚೇರಿಗೆ ಹೋಗುತ್ತಿರುವಾಗ ಅಮ್ಮತ್ತಿ ಬಳಿ ಒಂಟಿಯಂಗಡಿ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12-ಪಿ-3015ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುರಳಿ ಮೋಹನ ದಾಸ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಆತ್ಮಹತ್ಯೆ
                          ದಿನಾಂಕ 13/01/2018ರಂದು ಶನಿವಾರಸಂತೆ ಬಳಿಯ ಕೊರ್ಲಳ್ಳಿ ನಿವಾಸಿ ಬಸವರಾಜು ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ದಿನಾಂಕ 17/01/2018ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವಾಗ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                        ಸಿದ್ದಾಪುರ ಬಳೀಯ ಪಾಲಿಬೆಟ್ಟದ ಗೋಣಿಕೊಪ್ಪತಿ ತಿಮತಿ ಜಂಕ್ಷನ್‌ನಲ್ಲಿ ಕುಟ್ಟ ನಿವಾಸಿ ಹೆಚ್‌.ಸಿ.ತಿಮ್ಮಯ್ಯ ಎಂಬವರು ರಸ್ತೆ ಕಾಮಗಾರಿಗಾಗಿ ತಂದಿರಿಸಿದ್ದ ರಸ್ತೆಗೆ ಡಾಮರು ಹಾಕುವ ಉಪಕರಣಗಳಾದ  ಡಾಮರಿಂಗ್ ಯಂತ್ರದ ಹೆಡ್‌ ಲೈಟ್, ಟ್ರ್ಯಾಕ್ಟರಿನ ಬ್ಯಾಟರಿ ಸೇರಿದಂತೆ ಸುಮಾರು ರೂ.25,000/- ಮೌಲ್ಯದ ವಸ್ತುಗಳನ್ನು ದಿನಾಂಕ 17/01/2018 ರಿಂದ 18/01/2018ರ ನಡುವೆ ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, January 18, 2018

ಅಕ್ರಮ ಜೂಜು:
 
    ಮಡಿಕೇರಿ ನಗರ ಪೊಲೀಸ್ ಠಾಣೆ ಸರಹದ್ದಿನ ಗಾರ್ಡ್ ನ್ ಸ್ಪೈಸೆಸ್  ಅಂಗಡಿಯಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಜೂಟಾಡುತ್ತಿದ್ದನ್ನು ಮಡಿಕೇರಿ ನಗರ ಠಾಣಾ ಪಿ.ಎಸ್.ಐ. ಷಣ್ಮುಗಂ ರವರು ದಿನಾಂಕ 16-1-2018 ರಂದು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ಮೂರು ಮೊಬೈಲ್ ಫೋನ್ ಹಾಗು ರೂ.3150/- ಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 
ವಿದ್ಯುತ್ ಸ್ಪರ್ಷಿಸಿ ವ್ಯಕ್ತಿ ಸಾವು:
 
   ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದ ಶ್ರೀಮತಿ ಶೋಭ ಎಂಬವರ ಪತಿ 60 ವರ್ಷ ಪ್ರಾಯದ ಮುತ್ತಪ್ಪ ಎಂಬವರು ದಿನಾಂಕ 17-1-2018 ರಂದು ತಮ್ಮ ಬಾಪ್ತು ಅಡಿಕೆ ತೋಟದಲ್ಲಿ ಅಲ್ಯುಮಿನಿಯಂ ಉದ್ದನೆಯ ಪೈಪಿನಿಂದ ಅಡಿಕೆಗಳನ್ನು ಕುಯ್ಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಪೈಪು ತಗುಲಿ ಸದರಿ ಮುತ್ತಪ್ಪನವರು ಸಾವನಪ್ಪಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಅಕ್ರಮ ಮರಳು ಸಂಗ್ರಹ:
 
   ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದ ಕಾವೇರಿ ಹೊಳೆಯಿಂದ ಯಾರೋ ವ್ಯಕ್ತಿಗಳು ಅಕ್ರಮವಾಗಿ ಮರಳನ್ನು ತೆಗೆದು ಸಂಗ್ರಹ ಮಾಡುತ್ತಿದ್ದುದನ್ನು  ಕೆ.ಎಸ್. ನಾಗೇಂದ್ರಪ್ಪ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆ, ಮಡಿಕೇರಿ ಹಾಗು ಸಿದ್ದಾಪುರ ಪೊಲೀಸರು ದಿನಾಂಕ 17-1-2018ರಂದು ಸಮಯ ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಲು ಉಪಯೋಗಿಸಿದ ತೆಪ್ಪ ಹಾಗು ಇತರೆ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 
 

Wednesday, January 17, 2018

ಅಪರಿಚಿತ ವ್ಯಕ್ತಿ ಸಾವು:
 
     ವಿರಾಜಪೇಟೆ ನಗರದ ತಾಲೋಕು ಮೈದಾನದ ಬಳಿ ದಿನಾಂಕ 16-1-2018 ರಂದು ಬೆಳಗ್ಗೆ 8-30 ಗಂಟೆಯ ಸಮಯದಲ್ಲಿ  ಅಂದಾಜು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಬಿದ್ದಿರುವುದು ಕಂಡು ಬಂದಿದ್ದು ಆತ ವಿಪರೀತ ಮದ್ಯ ಸೇವಿಸಿ ಬಿದ್ದು ಗಾಯಗೊಂಡಿದ್ದು ಅಲ್ಲದೆ ಮೃತಪಟ್ಟಿದ್ದು ಕಂಡು ಬಂದಿದ್ದು,  ವಿರಾಜಪೇಟೆ ಪಟ್ಟಣ ಪಂಚಾಯ್ತಿ ನೌಕರರಾದ ಹೆಚ್.ಆರ್. ವೇಲುಮುರುಗ  ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
 
ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
 
    ಮಡಿಕೇರಿ ನಗರದ ಸುಬ್ರಮಣ್ಯನಗರದ ನಿವಾಸಿ ವೈ.ಎಸ್. ರಂಜಿತ್ ಎಂಬವರು ದಿನಾಂಕ 15-1-2018 ರಂದು ಸಂಜೆ 6-30 ಗಂಟೆಗೆ ನಗರದ ಸುದರ್ಶನ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಸುಜಿತ್ ಮತ್ತು ಇತರರು ಸೇರಿ ರಂಜಿತ್ ರವರ ದಾರಿ ತಡೆದು ಹಳೇ ದ್ವೇಷವನ್ನಿಟ್ಟುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಮಹಿಳೆಯಿಂದ ಚಿನ್ನಾಭರಣ ಸುಲಿಗೆ:
 
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ತುರುಕರಟ್ಟಿ ಗ್ರಾಮದ ನಿವಾಸಿ ಶ್ರೀಮತಿ ಮುತ್ತಮ್ಮ ರವರು ಮನೆಯಲ್ಲಿ ಒಬ್ಬರೇ ಇದ್ದು ದಿನಾಂಕ 16-1-2018 ರಂದು ಬೆಳಗ್ಗೆ 6-30 ಗಂಟೆ ಸಮಯದಲ್ಲಿ ಯಾರೋ ಅಪರಿಚಿತ ಇಬ್ಬರು ವ್ಯಕ್ತಿಗಳು ಅವರ ಮನೆಗೆ ಬಂದು  ಅವರ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಪ್ರಜ್ಞೆ ತಪ್ಪಿಸಿ ಮನೆಯೊಳಗಿನಿಂದ ಅಂದಾಜು ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
 
    ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ತೈಲ ಕುಟ್ಟ ಗ್ರಾಮದ 50 ವರ್ಷ ಪ್ರಾಯದ ಪಂಜರಿ ಎರವರ ಮುತ್ತ ಎಂಬ ವ್ಯಕ್ತಿ ದಿನಾಂಕ 16-1-2018 ರಂದು  12-00  ಪಿ.ಎಂ. ಸಮಯದಲ್ಲಿ  ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿಕೊಂಡು ಸಾವನಪ್ಪಿದ್ದು ಕುಟ್ಟ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
 
ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:
 
    ವಿರಾಜಪೇಟೆ ತಾಲೋಕು ಕುಕ್ಲೂರು ಗ್ರಾಮದ ಹರಿಜನ ಕಾಲೋನಿಯಲ್ಲಿ ವಾಸವಾಗಿದ್ದ 36 ವರ್ಷದ ಅರುಣ ಎಂಬ ವ್ಯಕ್ತಿಗೆ ವಿಪರೀತ ಮದ್ಯ ಸೇವಿಸುವ ಅವ್ಯಾಸವಿದ್ದು ದಿನಾಂಕ 16-1-2018 ರಂದು ತಾನು ವಾಸವಾಗಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, January 16, 2018


ವಿಷ ಸೇವಿಸಿದ್ದ ವ್ಯಕ್ತಿಯ ಸಾವು
                ಸೋಮವಾರಪೇಟೆ ತಾಲೂಕಿನ ನೇರುಗಳಲೆ ಗ್ರಾಮದ ನಿವಾಸಿ ಸುರೇಶ ಎಂಬುವವರು ದಿನಾಂಕ 11-01-2018 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15-01-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೀಟೆ ಮರ ಕಳ್ಳತನಕ್ಕೆ ಯತ್ನ
             ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ನಿವಾಸಿಯಾದ ಕೊಟ್ಟಕೇರಿಯನ ಪದ್ಮನಾಭ ಎಂಬುವವರ ತೋಟದಲ್ಲಿ ಬಿದ್ದಿದ್ದ ಬೀಟೆ ಮರವನ್ನು ದಿನಾಂಕ 14-01-2018 ರಂದು ಕುಶಾಲಪ್ಪ ಮತ್ತು ಇತರ 4 ಜನರು ಸೇರಿ ಕಳವು ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಪದ್ಮನಾಭರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಯತ್ನ
            ದಿನಾಂಕ 15-01-2018 ರಂದು ಗೋಣಿಕೊಪ್ಪ ನಗರದಲ್ಲಿರುವ ಶಾಲಿಮಾರ್ ಬ್ರಾಂದಿ ಅಂಗಡಿಯಲ್ಲಿ ಗೋಣಿಕೊಪ್ಪ ನಗರದ ನಿವಾಸಿ ಉದಯ ಎಂಬುವವರು ಮದ್ಯಪಾನ ಮಾಡುತ್ತಾ ಕುಳಿತ್ತಿರುವಾಗ ಪಕ್ಕದ ಟೇಬಲ್ ನಲ್ಲಿ ಕುಳಿತ್ತಿದ್ದ ನಿತಿನ್ ಎಂಬುವವರು ಉದಯರವರನ್ನು ಕುರಿತು ನೀನೇನು ನನ್ನನ್ನು ನೋಡಿ ಗುರಾಯಿಸುತ್ತಿದ್ದೀಯಾ ಎಂದು ಹೇಳಿ ಜಗಳ ತೆಗೆದಿದ್ದು, ನಂತರ ಉದಯರವರು ಹಳೆಯ ಪಂಚಾಯಿತಿ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿರುವಾಗ ನಿತಿನ್ ರವರು ಕತ್ತಿಯಿಂದ ಉದಯರವರ ತಲೆಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಗೋಣೀಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
          ದಿನಾಂಕ 15-01-2018 ರಂದು ವಿರಾಜಪೇಟೆ ತಾಲೂಕಿನ ಸುಳುಗೋಡು ಗ್ರಾಮದ ನಿವಾಸಿ ಶಿವ ಎಂಬುವವರು ತನ್ನ ಪತ್ನಿಯೊಂದಿಗೆ ದೇವರಪುರಕ್ಕೆ ಹೋಗುತ್ತಿರುವಾಗ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕಾರನ್ನು ಅದರ ಚಾಲಕಿ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಶಿವುರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, January 15, 2018

ಬೈಕ್ ಕಳವು ಪ್ರಕರಣ
                        ದಿನಾಂಕ 12/01/2018ರಂದು ಕುಶಾಲನಗರ ಬಳಿಯ ಮದಲಾಪುರ ನಿವಾಸಿ ಅಭಿಷೇಕ್ ಎಂಬವರು ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಕೆ-9755ನ್ನು ಪೆಟ್ರೋಲ್ ಮುಗಿದ ಕಾರಣ ಕೂಡಿಗೆ ಕೊಪ್ಪಲು ಬಳಿ ನಿಲ್ಲಿಸಿ ಕೂಡಿಗೆಗೆ ಹೋಗಿ ಪೆಟ್ರೋಲ್ ತರುವಷ್ಟರಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                  ದಿನಾಂಕ 14/01/2018ರಂದು ಶನಿವಾರಸಂತೆ ಬಳಿಯ ಹೆರೂರು ನಿವಾಸಿ ಸೋಮಶೇಖರ್ ಎಂಬವರು ಕಿರಂತ್ ಎಂಬವರೊಂದಿಗೆ ಕೆಎ-13-ಎಫ್‌ಎಫ್‌-9732ರಲ್ಲಿ ಆಲೂರು ಸಿದ್ದಾಪುರದಿಂದ ಮನೆಗೆ ಹೋಗುತ್ತಿರುವಾಗ ಮಾಲಂಬಿ ಗ್ರಾಮದ ಕೂಡುರಸ್ತೆ ಬಳಿ ಎದುರುಗಡೆಯಿಂದ ಕೆಎ-03-ಇಎ-3622ರ ಬೈಕನ್ನು ಅದರ ಸವಾರ ಚಂದ್ರರಾಜ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೋಮಶೇಖರ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈಕುಗಳಿಗೆ ಹಾನಿಯುಂಟಾಗಿದ್ದು ಮೂವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                      ದಿನಾಂಕ 13/01/2018ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ನಿವಾಸಿ ಗಂಗಮ್ಮ ಎಂಬ ವೃದ್ದ ಮಹಿಳೆಯು ಗ್ರಾಮದ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆಯ ಪತಿ ಮೃತರಾದ ನಂತರ ಮಾನಸಿಕವಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪಘಾತ, ವ್ಯಕ್ತಿಯ ಸಾವು
                      ದಿನಾಂಕ 04/01/2018ರಂದು ಮೈಸೂರಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆದರ್ಶ ಎಂಬವರು ಸಂಪಾಜೆ ಬಳಿ ಚಾಲಕನು ಅಜಾಗರೂಕತೆಯಿಂದ ಬಸ್‌ ಚಾಲಿಸಿದ ಪರಿಣಾಮ ಸ್ಲೀಪರ್‌ನ ರಾಡ್ ತುಂಡಾಗಿ ಮೇಲಿನ ಸ್ಲೀಪರ್‌ನಲ್ಲಿ ಪ್ರಯಾಣಿಸುತ್ತಿದ್ದ ಆದರ್ಶರವರು ಕೆಳಗೆ ಬಿದ್ದು ಗಾಯಾಳುವಾಗಿ ಮಂಗಳುರಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14/01/2018ರಂದು ಆದರ್ಶರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೆಂಕಿ ತಗುಲಿ ಬಾಲಕಿ ಸಾವು
                  ದಿನಾಂಕ 12/01/2018ರಂದು ಮಡಿಕೇರಿ ಬಳಿಯ ಹೊಸ್ಕೇರಿ ನಿವಾಸಿ ಕಲ್ಪನ ಎಂಬವರ ಮಗಳು ತಪಸ್ವಿ ಎಂಬಾಕೆಯು ಅಡುಗೆ ಕೋಣೆಯಲ್ಲಿ ಗೋಡೆಯ ಮೇಲೆ ಸೀಮೆಣ್ಣೆ ದೀಪವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ದೀಪ ತಪಸ್ವಿರವರ ಮೈಮೇಲೆ ಬಿದ್ದು ಬೆಂಕಿ ಹತ್ತಿಕೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                 ದಿನಾಂಕ 14/01/2018ರಂದು ಮಡಿಕೇರಿ ಬಳಿಯ ಮರಗೋಡು ನಿವಾಸಿ ರಮೇಶ ಎಂಬವರು ಕಾಫಿ ಕಣದಲ್ಲಿ ಕೆಲಸಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ರಘು ಎಂಬವರು ರಮೇಶರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, January 14, 2018

ಚಿನ್ನದ ಚೈನು ಕಳವು:
 
     ಬೆಂಗಳೂರಿನ ಜಿ.ಸಿ.ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿರುವ ಶ್ರೀಮತಿ ಡಿ.ಜೆ.ರಶ್ಮಿ ರವರು ದಿನಾಂಕ 28-11-2017 ರಂದು ತನ್ನ ಗಂಡನ ತಮ್ಮನ ಮದುವೆಗೆಂದು ಕುಶಾಲನಗರದ ಕೂಡುಮಂಗಳೂರು  ಗ್ರಾಮದಲ್ಲಿರುವ ಅವರ ಮನೆಗೆ ಬಂದಿದ್ದು, ಅವರು ಧರಿಸಿದ್ದ 48,000/- ರೂ ಬೆಲೆಬಾಳುವ ಚಿನ್ನದ ಚೈನನ್ನು ತೆಗೆದು ಬ್ಯಾಗಿನಲ್ಲಿಟ್ಟು ಮಧ್ಯಾಹ್ನ ಸದರಿ ಚೈನನ್ನು ಧರಿಸುವ ಸಲುವಾಗಿ ಬ್ಯಾಗಿನಲ್ಲಿ ನೋಡಿದಾದ ಸದರಿ ಚೈನು ಕಾಣೆಯಾಗಿರುವುದು ಕಂಡು ಬಂದಿದ್ದು, ಸದರಿ ಚೈನನ್ನು ಯಾರೋ ವ್ಯಕ್ತಿಗಳು ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಟ್ರಾಕ್ಟರ್ ಗೆ ಬೈಕ್ ಡಿಕ್ಕಿ:
 
     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ವಡಯನಪುರ ಗ್ರಾಮದ ನಿವಾಸಿ ಆರ್.ಎಸ್. ಶಿವಕುಮಾರ್ ಎಂಬವರು ದಿನಾಂಕ 12-1-2018 ರಂದು ವಡಯನಪುರ ಗ್ರಾಮದಿಂದ  ಗುಡುಗಳಲೆ ಬೈಕಿನಲ್ಲಿ ಹೋಗುತ್ತಿದ್ದಾಗ ವಡಯನಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದ ಟ್ರಾಕ್ಟರ್ ನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೆ ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬೈಕಿನಲ್ಲಿ ಹೋಗುತ್ತಿದ್ದ ಆರ್.ಎಸ್. ಶಿವಕುಮಾರ್ ರವರ ಬೈಕ್ ಟ್ರಾಕ್ಟರ್ ಹಿಂದಿನ ಟ್ರೈಲರ್ ಗೆ ಡಿಕ್ಕಿಯಾಗಿ ತಲೆ ಮತ್ತು ಕೈಗಳಿಗೆ ಗಾಯಗಳಾಗಿ ಶವಿವಕುಮಾರ್ ರವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಕುಳಿತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ.
 
     ಹಾಸನ ಜಿಲ್ಲೆಯ ಹುಸಿನಕೇರಿಗೋಡು ಗ್ರಾಮದ ವಾಸಿ ಶೇಕ್ ಮುಕ್ತಾರ್ ಎಂಬವರು ದಿನಾಂಕ 13-1-2018 ರಂದು ಮಾಲಂಬಿ ಗ್ರಾಮದ ಗಣಗೂರಿನ ಸಾರ್ವಜನಿಕ ರಸ್ತೆಯಲ್ಲಿ ಲಾರಿಯೊಂದರಲ್ಲಿ ಶುಂಠಿಯನ್ನು ತುಂಬಿಸಿ ರಸ್ತೆಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಕುಳಿತುಕೊಂಡಿರುವಾಗ ರಶೀದ್ ಆಹಮ್ಮದ್ ಎಂಬವರು ತನ್ನ ಲಾರಿಯನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆ ಬದಿಯಲ್ಲಿ ಕುಳಿತ್ತಿದ್ದ ಶೇಖ್ ಮುಕ್ತಾರ್ ರವರ ಎರಡು ಕಾಲುಗಳ ಮೇಲೆ ಲಾರಿಯನ್ನು ಹತ್ತಿಸಿದ್ದು, ಪರಿಣಾಮ ಶೇಖ್ ಮುಕ್ತಾರ್ ರವರ ಎರಡೂ ಕಾಲುಗಳಿಗೆ ತೀವ್ರತರಹದ ಗಾಯಗಳಾಗಿ ಸದರಿಯವರನ್ನು ಹಾಸನದ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, January 13, 2018

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 11/01/2018ರಂದು ಕೊಡ್ಲಿಪೇಟೆ ಬಳಿಯ ಅವರೆದಾಳು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಿವಾಸಿ ಅಪ್ಪಾವು ಎಂಬವರು ಅವರೆದಾಳು ಗ್ರಾಮದಲ್ಲಿ ಅವರು ಉಳಿದುಕೊಂಡಿದ್ದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಅಪ್ಪಾವು ಅತೀವ ಮದ್ಯವ್ಯಸನಿಯಾಗಿದ್ದು ಕೆಲಸ ಮಾಡಲು ಸಾಧ್ಯವಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ
                  ದಿನಾಂಕ 11/01/2018ರಂದು ಪೊನ್ನಂಪೇಟೆ ನಿವಾಸಿ ಅಭಿಲಾಷ್ ಎಂಬವರು ಕೆಎಲ್-13-ಕೆ-4798ರಲ್ಲಿ ಕುಟ್ಟ ಬಳಿಯ ಕೋತೂರು ಗ್ರಾಮದ ಸಮೀಪ ಹೋಗುತ್ತಿರುವಾಗ ಎದುರುಗಡೆಯಿಂದ ಕೋತೂರು ನಿವಾಸಿ ರಮೇಶ ಎಂಬವರು ಅವರ ಕೆಎ-12-ಎಂ-5140ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಭಿಲಾಷ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅಭಿಲಾಷ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ದಾಸ್ತಾನು
                       ದಿನಾಂಕ 12/01/2018ರಂದು ಸಿದ್ದಾಪುರ ಬಳಿಯ ವಾಲ್ನೂರು ತ್ಯಾಗತ್ತೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರೇಷ್ಮ ಎಂಬವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳನ್ನು ದಡದಲ್ಲಿ ದಾಸ್ತಾನು ಮಾಡುತ್ತಿದ್ದ ವಾಲ್ನೂರು ತ್ಯಾಗತ್ತೂರಿನ ಪ್ರವೀಣ ಮತ್ತು ಅಭ್ಯತ್ ಮಂಗಲದ ದಿನೇಶ್‌ ಎಂಬವರು ಮರಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, January 12, 2018

ಮಹಿಳೆ ಆತ್ಮಹತ್ಯೆ
                      ದಿನಾಂಕ 11/01/2018ರಂದು ಕಕ್ಕಬೆ ನಿವಾಸಿ ಯು.ಪಿ.ಸೋಮಯ್ಯ ಎಂಬವರು ಪೊರಾಟ್ ಎಂಬಲ್ಲಿ ಕಕ್ಕಬೆ ಹೊಳೆಯಲ್ಲಿ ಕೈಕಾಲುಗಳನ್ನು ಕಟ್ಟಿಕೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಮೃತ ಸೋಮಯ್ಯನವರ ಮಗ ರೇಣು ಪೂವಯ್ಯ ಎಂಬವರು ಮೃತಪಟ್ಟ ಕಾರಣದಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                     ದಿನಾಂಕ 01/01/2018ರಂದು ಸೋಮವಾರಪೇಟೆ ಬಳಿಯ ತಲ್ತರೆ ಶೆಟ್ಟಳ್ಳಿ ನಿವಾಸಿ ನಾರಾಯಣ ಎಂಬವರಿಗೆ ಅದೇ ಗ್ರಾಮದ ಸಿ.ಕೆ.ಪ್ರಜ್ವಲ್, ಯು.ಬಿ.ಕೌಶಿಕ್ ಮತ್ತು ಸಿ.ಟಿ.ದರ್ಶನ್ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ನಾರಾಯಣರವರೊಂದಿಗೆ ಜಗಳವಾಡಿ ಕತ್ತಿಯಿಂದ ಕೈಗೆ ಕಡಿದು ತೀವ್ರ ತರಹದ ಗಾಯವುಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಕಳವು
                  ಭಾಗಮಂಡಲ ಬಳಿಯ ಬಿ.ಬಾಡಗ ಗ್ರಾಮದ ನಿವಾಸಿ ನಂದ ಕುಮಾರ್ ಮತ್ತು ಅರುಣ್ ಕುಮಾರ್ ಎಂಬವರು ಅಕ್ರಮವಾಗಿಕಾವೇರಿ ಹೊಳೆಯಿಂದ ಮರಳು ಕಳ್ಳತನ ಮಾಡುತ್ತಿರುವುದಾಗಿ ಮಡಿಕೇರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಂದ್ರಪ್ಪ ಎಂಬವರು ದಿನಾಂಕ 11/01/2018ರಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಬಂಧನ
                          ಕೊಡಗು ಜಿಲ್ಲೆಯಾದ್ಯಂತ ಜೂಜಾಟ ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಮೇರೆಗೆ, ಈ ಬಗ್ಗೆ ಮಾಹಿತಿ ಕಲೆಹಾಕಿ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕಾರ್ಯೋನ್ಮುಖರಾದ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾದ ಎಂ.ಮಹೇಶ್‌ರವರ ನೇತೃತ್ವದ ತಂಡ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ಕೂರ್ಗ್‌ ಕೌಂಟಿ ರೆಸಾರ್ಟ್‌ಗೆ ಒತ್ತಾಗಿರುವ ಸುರೇಶ್ ಎಂಬವರ ಕಾಫಿ ತೋಟದ ಒಳಗೆ ಸಾರ್ವಜನಿಕರು ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯದ ಅನುಮತಿಯನ್ನು ಪಡೆದು ಸುಂಟಿಕೊಪ್ಪ ಪೊಲೀಸ್ ಠಾಣಾ ಮೊ.ಸಂ. 02/2018 ಕಲಂ. 87 ಕರ್ನಾಟಕ ಪೊಲೀಸ್ ಕಾಯ್ದೆ ರಂತೆ ಪ್ರಕರಣವನ್ನು ದಾಖಲಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಎಸ್‌.ನ್‌. ಜಯರಾಂ ಮತ್ತು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಈ ಕೆಳಕಂಡ 10 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಜೂಜಾಟ ಆಡುತ್ತಿದ್ದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿರುವುದಾಗಿದೆ.

1. ಕೆ.ಎನ್. ಭೀಮಯ್ಯ @ ದಿನು ತಂದೆ ಲೇ|| ಕೆ.ಪಿ. ನಂಜಪ್ಪ, 43 ವರ್ಷ, ವ್ಯವಸಾಯ, ಕಾಲೂರು ಗ್ರಾಮ, ಮಡಿಕೇರಿ ತಾಲ್ಲೂಕು.
2. ಜಿ. ಶ್ರೀಧರ್ ತಂದೆ ಲೇ|| ಗೋಪಾಲ, 53 ವರ್ಷ, ವ್ಯಾಪಾರ, ನಂ. 35, 1ನೇ ಮೇನ್, 2ನೇ ಕ್ರಾಸ್, ಬೋಗಾದಿ, ಮೈಸೂರು.
3. ಸಿ.ಡಿ. ದಿಲೀಪ್ ಕುಮಾರ್ ತಂದೆ ತಮ್ಮಯ್ಯ, 35 ವರ್ಷ, ವ್ಯಾಪಾರ, ಟಿ.ಶೆಟ್ಟಿಗೇರಿ ಗ್ರಾಮ, ವಿರಾಜಪೇಟೆ ತಾಲ್ಲೂಕು.
4. ಎಂ.ಎ ಸತ್ತಾರ್ ತಂದೆ ಅಬ್ದುಲ್ ರಹಮಾನ್, 47 ವರ್ಷ, ವ್ಯಾಪಾರ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.
5. ಜೆ.ಆರ್. ಲವಕುಮಾರ್ ತಂದೆ ಜೆ.ಸಿ. ರಾಜಪ್ಪ, 32 ವರ್ಷ, ವ್ಯಾಪಾರ, ಗುಮ್ಮನಕೊಲ್ಲಿ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು.
6. ಹೆಚ್.ಪಿ. ವಿನೋದ್ ತಂದೆ ಹೆಚ್.ಸಿ. ಪೂವಯ್ಯ, 30 ವರ್ಷ, ವ್ಯಾಪಾರ, ಕೆ.ನಿಡುಗಣೆ ಗ್ರಾಮ, ಮಡಿಕೇರಿ ತಾಲ್ಲೂಕು.
7. ಕೆ.ಕೆ. ಸುಬ್ರಮಣಿ ತಂದೆ ಲೇ|| ಕೆ.ಬಿ. ಕಾರ್ಯಪ್ಪ, 50 ವರ್ಷ, ವ್ಯವಸಾಯ, ಶ್ರೀಮಂಗಲ, ವಿರಾಜಪೇಟೆ ತಾಲ್ಲೂಕು.
8. ಅಬ್ದುಲ್ ಸತ್ತಾರ್ ತಂದೆ ಅಬ್ದುಲ್ ರಹಮಾನ್, 42 ವರ್ಷ, ವ್ಯಾಪಾರ, ಗಣಪತಿ ಬೀದಿ, ಮಡಿಕೇರಿ ನಗರ.
9. ಎಂ.ಪಿ. ನರೇನ್ ತಂದೆ ಲೇ|| ಪೊನ್ನಪ್ಪ, 43 ವರ್ಷ, ವ್ಯವಸಾಯ, ಅಂದಗೋವೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು.
10. ಎಂ.ಎಂ. ಪೊನ್ನಪ್ಪ @ ಸುರೇಶ ತಂದೆ ಲೇ|| ಮಾಚಯ್ಯ, 51 ವರ್ಷ, ವ್ಯವಸಾಯ, 7ನೇ ಹೊಸಕೋಟೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು.
11. ಕುಂಞ ಕುಟ್ಟಿ @ ಮುಸ್ತಾಫ, 7ನೇ ಹೊಸಕೋಟೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. (ಓಡಿ ತಪ್ಪಿಸಿಕೊಂಡವರು)

                    ಮೇಲ್ಕಂಡ ಆರೋಪಿಗಳಿಂದ ಜೂಜಾಟಕ್ಕೆ ಬಳಸಲಾಗಿದ್ದ ಸಾಮಾಗ್ರಿಗಳು ಹಾಗೂ 4,27,505/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

                  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ ನಿರ್ದೇಶನದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಜಯರಾಂ, ಹಾಗೂ ಡಿಸಿಐಬಿ ಎಎಸ್ಐ ರವರುಗಳಾದ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಯವರಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್, ಕೆ.ಎಸ್. ಶಶಿಕುಮಾರ್ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ದಿನೇಶ್, ಧನುಕುಮಾರ್, ಪುಂಡರೀಕಾಕ್ಷ, ಈರಪ್ಪ, ಮಂಜುನಾಥ್ ರವರುಗಳು ಪಾಲ್ಗೊಂಡಿದ್ದರು . ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ. 
                    ಕೊಡಗು ಜಿಲ್ಲೆಯಲ್ಲಿ ಲಾಟರಿ, ಜೂಜಾಟ, ಮಟ್ಕ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಆಯಾ ಗ್ರಾಮದ ಬೀಟ್ ಸದಸ್ಯರು ಪೊಲೀಸ್ ಅಧೀಕ್ಷಕರಿಗೆ / ಡಿಸಿಐಬಿ ಪೊಲೀಸ್ ನಿರೀಕ್ಷಕರಿಗೆ / ಬೀಟ್ ಅಧಿಕಾರಿಗಳಿಗೆ / ಪಿಎಸ್ಐ ರವರಿಗೆ / ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲ್ಲೆ ಪ್ರಕರಣ
                 ದಿನಾಂಕ 10/01/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ನಿವಾಸಿ ದರ್ಶನ್‌ ಎಂಬವರ ಅಜ್ಜ ಸಿ.ಕೆ.ಕಾಳಪ್ಪ ಎಂಬವರ ತೋಟದಲ್ಲಿ ಸಿ.ಕೆ.ದೇವಯ್ಯ ಮತ್ತು ಸಿ.ಡಿ.ಯೋಗೇಂದ್ರ ಎಂಬವರು ಕಾಫಿ ಕುಯ್ಯುತ್ತಿದ್ದುದನ್ನು ಕಂಡು ಪ್ರಶ್ನಿಸಿದಾಗ ದೇವಯ್ಯ ಮತ್ತು ಯೋಗೇಂದ್ರರವರು ಸೇರಿಕೊಂಡು ದರ್ಶನ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ
                   ದಿನಾಂಕ 30/12/2017ರಂದು ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಜೋಸೆಫ್ ವಂದನಾಥ್ ಎಂಬವರು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬಂದಿದ್ದಾಗ ಅಲ್ಲಿ ಮಾದಾಪಟ್ನ ನಿವಾಸಿ ಕಿರಣ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜೋಸೆಫ್‌ರವರನ್ನು ಅಶ್ಲೀಲವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, January 10, 2018

ರಸ್ತೆ ಅವಘಢ, ಸಾವು
                        08/01/2018ರಂದು ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ಆಂಜನೇಯ ಎಂಬವರು ನಗರದ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಹೋಗುತ್ತಿರುವಾಗ ಯಾವುದೋ ಅಪರಿಚಿತ ವಾಹನದ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆಂಜನೇಯರವರಿಗೆ ಡಿಕ್ಕಿಪಡಿಸಿದ್ದು ನಂತರ ಅವರೇ ಗಾಯಾಳು ಆಂಜನೇಯರವರನ್ನು ಆಸ್ಪತ್ರೆಗೆ ದಾಖಲಿಸಿ ಯಾವುದೇ ವಿವರಗಳನ್ನು ನೀಡದೆ ಹೋಗಿದ್ದು ಗಾಯಾಳು ಆಂಜನೇಯರವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ
                            ದಿನಾಂಕ 08/01/2018ರಂದು ಮಡಿಕೇರಿ ಬಳಿಯ ಅಭ್ಯತ್ ಮಂಗಲ ಗ್ರಾಮದ ಒಂಟಿಯಂಗಡಿ ಜಂಕ್ಷನ್ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕೆಎ-12-ಎ-2747ರ ಲಾರಿಯನ್ನು ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐರವರು ಪತ್ತೆ ಹಚ್ಚಿರುವುದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವ್ಯಕ್ತಿ ಆತ್ಮಹತ್ಯೆ
                       ದಿನಾಂಕ 08/01/2018ರ ರಾತ್ರಿ ವೇಳೆ ಶ್ರೀಮಂಗಲ ಬಳಿಯ ಬೆಳ್ಳೂರು ನಿವಾಸಿ ಕಳ್ಳೇಂಗಡ ಸೋಮಣ್ಣ ಎಂಬವರು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ವ್ಯಾನ್ ಡಿಕ್ಕಿ
                       ದಿನಾಂಕ 09/01/2018ರಂದು ಸೋಮವಾರಪೇಟೆ ಬಳಿಯ ಗೋಣಿಮರೂರು ಗ್ರಾಮದಲ್ಲಿ ಗ್ರಾಮದ ನಿವಾಸಿ ಅಣ್ಣಂಜನಪ್ಪ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಪಿ-1054ರ ಓಮ್ನಿ ವ್ಯಾನನ್ನು ಅದರ ಚಾಲಕ ಪುನೀತ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಣ್ಣಂಜನಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ಅಣ್ಣಂಜನಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, January 9, 2018

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 07/01/2018ರಂದು ವಿರಾಜಪೇಟೆ ಬಳಿಯ ಟಿ.ಶೆಟ್ಟಿಗೇರಿ ನಿವಾಸಿ ಎಂ.ಸ್ವಾಮಿ ಎಂಬ ವ್ಯಕ್ತಿಯು ವಿಪರೀತ ಮದ್ಯಪಾನ ಮಾಡಿ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                     ದಿನಾಂಕ 06/01/2018ರಂದು ವಿರಾಜಪೇಟೆ ಬಳಿಯ ಕೊಟ್ಟೋಳಿ ನಿವಾಸಿ ಪದ್ಮಾವತಿ ಎಂಬವರಿಗೆ ಸಂತೋಷ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                     ದಿನಾಂಕ 07/01/2018ರಂದು ರಾತ್ರಿ ವೇಳೆ ಗೋಣಿಕೊಪ್ಪ ಬಳಿಯ ಕುಟ್ಟಂದಿ ನಿವಾಸಿ ಪಣಿ ಎರವರ ಅವ್ವಿ ಎಂಬ ಮಹಿಳೆಯು ಮನೆಯಲ್ಲಿ ಮಾಡಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಅವ್ವಿಯ ಮಗ ಚೋಮ ಎಂಬಾತನು ಕಳೆದ ವರ್ಷ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಕಾರಣಕ್ಕೆ ಜುಗುಪ್ಸೆಗೊಂಡು ಅವ್ವಿಯು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                    ದಿನಾಂಕ 08/01/2018ರಂದು ಸೋಮವಾರಪೇಟೆ  ಬಳಿಯ ಮೂವತೊಕ್ಲು ನಿವಾಸಿ ಕಾರ್ಯಪ್ಪ ಎಂಬವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಅವರ ಮಗ ಜೀವನ್ ಸೋಮಯ್ಯ ಎಂಬಾತನು ದೊಣ್ಣೆಯಿಂದ ಕಾರ್ಯಪ್ಪನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 8, 2018

ಅಂಗಡಿ ಕಳವು
                      ದಿನಾಂಕ 06/01/2018ರಂದು ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿರುವ ಡಿ.ಎಸ್.ಪ್ರವೀಣ ಎಂಬವರ ವಿಘ್ನೇಶ್ವರ ಹಾರ್ಡ್‌ವೇರ್ ಅಂಗಡಿಯ ಹಿಂಬದಿಯ ಕಿಟಕಿ ಸರಳನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯೊಳಗಿದ್ದ ಸಿ.ಸಿ.ಕ್ಯಾಮೆರಾದ ಡಿವಿಆರ್‌ ಯಂತ್ರ ಹಾಗೂ ನಗದು ರೂ.300/-ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 

ವ್ಯಾನ್ ಮಗುಚಿ ಅಪಘಾತ
                     04/01/2018ರಂದು ತುಮಕೂರು ನಿವಾಸಿ ಸಿ.ಜೆ.ನಾಗರಾಜ ಎಂಬವರು ಸ್ನೇಹಿತರೊಂದಿಗೆ  ಕೆಎ-04-ಸಿ-3137ರ ವ್ಯಾನಿನಲ್ಲಿ ಶಬರಿಮಲೆಗೆ ಹೋಗುತ್ತಿರುವಾಗ ಮುಂಜಾನೆ ವೇಳೆ ವಿರಾಜಪೇಟೆ ಬಳಿಯ ಮಾಕುಟ್ಟ ಎಂಬಲ್ಲಿ ವ್ಯಾನಿನ ಚಾಲಕ ಪುಟ್ಟರಾಜು ಎಂಬಾತನು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವ್ಯಾನು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ವ್ಯಾನಿನಲ್ಲಿದ್ದ ನಾಗರಾಜು ಹಾಗೂ ಇತರೆ ಎಂಟು ಜನರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, January 7, 2018

ಕ್ಷುಲ್ಲಕ ಕಾರಣಕ್ಕೆ ಬೆದರಿಕೆ
                     ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದ ನಿವಾಸಿಯಾದ ಕುಮಾರ ಎಂಬುವವರು ದಿನಾಂಕ 5-1-2018 ರಂದು ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ದಿನೇಶ್ ಗೌಡ ಎಂಬುವವರು ಕುಮಾರರವರನ್ನು ಕುರಿತು ಈ ಹಿಂದೆ ಜೀಪು ಗ್ರಾಮ ಪಂಚಾಯಿತಿ ಗೇಟ್ ಗೆ ತಾಗಿದ್ದ ವಿಚಾರವನ್ನು ಎಲ್ಲರಿಗೂ ಹೇಳುತ್ತಿದ್ದೀಯಾ ಎಂದು ಜಗಳ ತೆಗೆದು ಬೆದರಿಕೆ ಹಾಕಿದ್ದು ಈ ಬಗ್ಗೆ ಕುಮಾರರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಜಗಳ
              ದಿನಾಂಕ 5-1-2018 ರಂದು ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ನಿವಾಸಿಯಾದ ಪಾರ್ವತಿಯವರು ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಯಾದ ಸೋಮಯ್ಯ ಎಂಬುವವರು ಪೊಲೀಸ್ ಠಾಣೆಗೆ ಪುಕಾರು ನೀಡಿದ ವಿಚಾರದಲ್ಲಿ ಜಗಳ ತೆಗೆದು ಮನೆಗೆ ಕಲ್ಲನ್ನು ಹೊಡೆದು ಗಾಜು ಮತ್ತು ಹಂಚುಗಳನ್ನು ಒಡೆದು ನಷ್ಟಪಡಿಸಿದ್ದು ಈ ಬಗ್ಗೆ ಪಾರ್ವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, January 6, 2018

ಪಾದಚಾರಿಗೆ ಸ್ಕೂಟರ್ ಡಿಕ್ಕಿ:

     ಸಿದ್ದಾಪುರ ಠಾಣಾ ಸರಹದ್ದಿನ ಅಭ್ಯತ್ ಮಂಗಲ ಗ್ರಾಮದ ನಿವಾಸಿ ಹೆಚ್.ಪಿ. ಸಣ್ಣರಂಗ ಎಂಬವರು ದಿನಾಂಕ 05/01/2017 ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಸ್ವಂತ ಕೆಲಸದ ನಿಮಿತ್ತ ಸಿದ್ದಾಪುರ ನಗರದ ಗುಹ್ಯಾ ಅಗಸ್ತೇಶ್ವರ ಸಹಕಾರ ಬ್ಯಾಂಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಸಿದ್ದಾಪುರ ಬಸ್ ನಿಲ್ದಾಣದ ಕಡೆಯಿಂದ KA-12-L-4966 ರ ಸ್ಕೂಟರ್ ಅನ್ನು ಅದರ ಚಾಲಕ ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹೆಚ್.ಪಿ. ಸಣ್ಣ ರಂಗರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಬಿದ್ದು ಅವರ ಕಾಲು ಮುರಿದಿದ್ದು, ಕೈಗೆ ಪೆಟ್ಟಾಗಿದ್ದು ಚಿಕಿತ್ಸೆಗೆ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆ ದ್ವೇಷದ ಹಿನ್ನಲೆ, ವ್ಯಕ್ತಿಗಳ ಕೊಲೆಗೆ ಯತ್ನ:

     ವಿರಾಜಪೇಟೆ ತಾಲೋಕು ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿ ವಾಸವಾಗಿರುವ ಎಂ.ಪಿ. ಹರೀಶ್ ಎಂಬವರು ದಿನಾಂಕ 1-1-2018 ರಂದು ರಾತ್ರಿ 9-30 ಗಂಟೆಗೆ ತನ್ನ ಗೆಳೆಯ ಮನು ಎಂಬವನೊಂದಿಗೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಬಲ್ಯಮಂಡೂರು ಸೇತುವೆ ಬಳಿ ಆರೋಪಿಗಳಾದ ಗಣೇಶ, ದೀಪು ಹಾಗು ದೇವರಾಜು ಎಂಬವರುಗಳು ಎಂ.ಪಿ. ಹರೀಶ್ ರವರ ಮೋಟಾರ್ ಸೈಕಲನ್ನು ತಡೆದು ನಿಲ್ಲಿಸಿ ಹಳೇಯ ದ್ವೇಷದಿಂದ ಜಗಳ ಮಾಡಿ ಕತ್ತಿಯಿಂದ ಮನು ರವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದು ಅದರಿಂದ ಮನು ತಪ್ಪಿಸಿಕೊಂಡಾಗ ಸದರಿ ಕತ್ತಿ ಹರೀಶ್ ರವರ ಕುತ್ತಿಗೆಗೆ ತಾಗಿ ಕೆಳಗೆ ಬಿದ್ದು ಹೋಗಿದ್ದು ನಂತರ ಆರೋಪಿಗಳು ಹರೀಶ್ ರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಸ್ಥಳದಿಂದ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

     ಸೋಮವಾರಪೇಟೆ ನಗರದ ನಿವಾಸಿ ಬಸವರಾಜು ಎಂಬವರ ಮಗ ವಿಜಯಕುಮಾರ ಎಂಬವರು ಸೋಮವಾರಪೇಟೆ ನಗರದಲ್ಲಿ ಕೆಎ 12 ಬಿ 0723 ನಂಬರ್ ನ ಆಟೋ ಚಾಲನೆ ಮಾಡಿಕೊಂಡಿದ್ದು ದಿನಾಂಕ 03.01.2018 ರಂದು ಸಮಯ ಸಂಜೆ 5:45 ಗಂಟೆಗೆ ಆಟೋದಲ್ಲಿ ಸೋಮವಾರಪೇಟೆ ನಗರದಿಂದ ಹಾನಗಲ್ಲು ಗ್ರಾಮದ ವಾಸಿ ತೇಜುರವರೊಂದಿಗೆ ಮಾನಸ ಹಾಲ್ ಕಡೆ ಹೋಗಿ, ಮತ್ತೆ ಮರಳಿ ಬಾರದೆ ಕಾಣೆಯಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, January 5, 2018

ಬೀಟಿ ಮರ ಕಳವು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿರುವ ಎ.ಬಿ. ಬಿದ್ದಪ್ಪ ಎಂಬವರಿಗೆ ಸೇರಿದ ಹೆರೂರು ಕಾಫಿ ತೋಟದ ದಲ್ಲಿ ಸುಮಾರು 4 ಅಡಿ 7 ಇಂಚು ದಪ್ಪದ ಒಣಗಿದ ಬೀಟಿ ಮರವನ್ನು ಯಾರೋ ಕಳ್ಳರು ಕತ್ತರಿಸಿ ತುಂಡುಗಳನ್ನಾಗಿ ಮಾಡಿ ಕಳವು ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿದ ಮರದ ಬೆಲೆ ಅಂದಾಜು 40 ಸಾವಿರ ಆಗಬಹುದಾಗಿದ್ದು, ಈ ಸಂಬಂಧ ಎ.ಬಿ. ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ:

     ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀ ವಿ. ಚೇತನ್ ರವರಿಗೆ ದಿನಾಂಕ 4-1-2018 ರಂದು ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಕಾವೇರಿ ಸೇತುವೆ ಬಳಿ ಕಟ್ಟೆಮಾಡು ಗ್ರಾಮದ ನಿವಾಸಿ ಎಸ್.ಜಿ. ಮಧು ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದು ಅವರು ಮಾರಾಟಕ್ಕೆ ಇಟ್ಟಿದ್ದ ಒರಿಜಿನಲ್ ಚಾಯ್ಸ್ ಬ್ರಾಂದಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ:

    ಸೋಮವಾರಪೇಟೆ ಠಾಣಾ ಸರಹದ್ದಿನ ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಎನ್. ತಿಮ್ಮಯ್ಯ ಎಂಬವರ ತಾಯಿ 65 ವರ್ಷ ಪ್ರಾಯದ ಶ್ರೀಮತಿ ಗಂಗಮ್ಮ ಎಂಬವರು ಮೂರ್ಚೆರೋಗದಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಮನನೊಂದು ದಿನಾಂಕ 4-1-2018 ರಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.


Thursday, January 4, 2018

ರಸ್ತೆ ಅಪಘಾತ
                     ದಿನಾಂಕ 01/01/2018ರಂದು ಕುಶಾಲನಗರ ಬಳಿಯ ನಂಜರಾಯಪಟ್ಟಣ ನಿವಾಸಿ ನಿಶಾಚಿತ್ ಎಂಬ ಯುವಕನು ಆತನ ಮೋಟಾರು ಬೈಕ್ ಸಂಖ್ಯೆ ಕೆಎ-12-ಕ್ಯು-0401ಲ್ಲಿ ಮಡಿಕೇರಿಯಿಂದ ಮಂಗಳೂರು ರಸ್ತೆಯಲ್ಲಿ ಹೋಗುತ್ತಿರುವಾಗ ನಗರದಿಂದ 1.5 ಕಿ.ಮೀ. ದೂರದಲ್ಲಿ ಮಂಗಳೂರು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-09-ಸಿ-4882ರ ಪಿಕ್‌ಅಪ್ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಶಾಚಿತ್‌ರವರ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ನಿಶಾಚಿತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 02/01/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ಹರೀಶ ಎಂಬಾತನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 03/01/2018ರಂದು ಮೃತನಾಗಿರುವುದಾಗಿ ವರದಿಯಾಗಿದೆ. ಸೋಮವಾರಪೇಟೆ ಪೊಲೀಸರು ಘಟನೆ ಸಂಬಂಧ  ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                   ದಿನಾಂಕ 02/01/2018ರಂದು ಕೊಡ್ಲಿಪೇಟೆ ಬಳಿಯ ನೀರುಗುಂದ ನಿವಾಸಿ ನಾಗರಾಜು ಎಂಬವರು ಸಂಜೆ ವೇಳೆ ಸತೀಶ್‌ ಎಂಬವರೊಂದಿಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬೈಕಿನಲ್ಲಿ ಬಂದ ಲಿಂಗರಾಜು ಎಂಬಾತನು ವಿನಾ ಕಾರಣ ಜಗಳವಾಡಿ ಕಲ್ಲಿನಿಂದ ನಾಗರಾಜುರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಅವಘಢ
                   ದಿನಾಂಕ 03/01/2018ರಂದು ಪಿರಿಯಾಪಟ್ನ ನಿವಾಸಿ ಮಂಜುನಾಥ್ ಎಂಬವರು ಯೋಗೇಶ್‌ ಎಂಬವರೊಂದಿಗೆ ಕೆಎ-04-ವಿ-2720ರ ಬೈಕಿನಲ್ಲಿ ವಿರಾಜಪೇಟೆ ನಗರದಿಂದ ಅರಮೇರಿ ಕಡೆಗೆ ಹೋಗುತ್ತಿರುವಾಗ ನಗರದ ಮಠದ ಗದ್ದೆ ಬಳಿ ಬೈಕ್ ಚಾಲಿಸುತ್ತಿದ್ದ ಯೋಗೇಶ್‌ರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕ್ ಯೋಗೇಶ್‌ರವರ ಹತೋಟಿ ಕಳೆದುಕೊಂಡು ರಸ್ತೆ ಬದಿಯ ಮೋರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, January 3, 2018

ಕೊಲೆ ಭೇದಿಸಿದ ಪೊಲೀಸರು, ಆರೋಪಿಗಳ ಬಂಧನ:

      ದಿನಾಂಕ 23/12/2017 ರಂದು ಮಾದಾಪುರದ ಇಗ್ಗೊಡ್ಲು ಗ್ರಾಮದ ಕಾಳಚಂಡ ರಂಜು ಪೂವಯ್ಯ ರವರನ್ನು ಗುಂಡು ಹೊಡೆದು ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾ ಮೊ. ಸಂ. 364/17 ಕಲಂ 302 ಐಪಿಸಿ ಮತ್ತು 3 & 25 ಶಸ್ತ್ರಾಸ್ತ್ರ ಕಾಯ್ದೆ ರೀತ್ಯ ಪ್ರಕರಣ ದಾಖಲಾಗಿ, ಸೋಮವಾರಪೇಟೆ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡಿದ್ದರು.
ಈ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೋಮವಾರಪೇಟೆ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಡಿಸಿಐಬಿ ರವರಿಗೆ ಮಾರ್ಗದರ್ಶನವನ್ನು ನೀಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಡಿಸಿಐಬಿ ಪೊಲೀಸ್ ನಿರೀಕ್ಷಕರು ರವರ ತಂಡ ಮಾಹಿತಿ ಸಂಗ್ರಹಿಸಿ, ವಿರಾಜಪೇಟೆ ತಾಲ್ಲೂಕು ಚಂಬೆಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ್ @ ಅಯ್ಯಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿ, ಆತನು ಮೃತ ಕಾಳಚಂಡ ರಂಜು ಪೂವಯ್ಯನ ಪತ್ನಿ ಶಾಂತಿಳನ್ನು ಫೇಸ್ಬುಕ್ ಮುಖಾಂತರ ಪರಿಚಯ ಮಾಡಿಕೊಂಡು, ಪರಿಚಯ ಪ್ರೀತಿಗೆ ತಿರುಗಿ, ಶಾಂತಿಯ ಗಂಡ ಪ್ರತಿ ದಿನ ಕುಡಿದು ಬಂದು ತನಗೆ ಹಾಗೂ ತನ್ನ ಮಕ್ಕಳಿಗೆ ಹಿಂಸಿಸುತ್ತಿದ್ದು, ಆತನನ್ನು ಹೊರಗಿನವರಿಂದ ಕೊಲೆ ಮಾಡಿಸುವಂತೆ ರಾಜೇಶನನ್ನು ಕೇಳಿಕೊಂಡಿದ್ದು, ಅದರಂತೆ ರಾಜೇಶನು ಕಾಳಚಂಡ ರಂಜು ಪೂವಯ್ಯನನ್ನು ಕೊಲೆ ಮಾಡಿಸಲು ಹಣ ಖರ್ಚಾಗುವುದಾಗಿ ತಿಳಿಸಿದ ಮೇರೆಗೆ ಆ ಹಣವನ್ನು ಕೊಲೆ ಮಾಡಿದ ನಂತರ ನೀಡುವುದಾಗಿ ಶಾಂತಿ ಹೇಳಿದ್ದು, ಶಾಂತಿ ಹಾಗೂ ಮಂಡೇಪಂಡ ರಾಜೇಶ @ ಅಯ್ಯಪ್ಪ ಸೇರಿ ಸಂಚು ರೂಪಿಸಿದ್ದು, ಕಾಳಚಂಡ ರಂಜು ಪೂವಯ್ಯನು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಡುವುದರಿಂದ ಅದೇ ಸರಿಯಾದ ಸಮಯವೆಂದು ನಿರ್ಧರಿಸಿ, ಈ ಕೆಲಸಕ್ಕಾಗಿ ರಾಜೇಶ ತನ್ನ ಕುಟುಂಬದವನೇ ಆದ ಮಂಡೇಪಂಡ ಅಶೋಕ @ ದೇವಯ್ಯನಿಗೆ ಈ ಕೊಲೆ ಮಾಡಿಕೊಟ್ಟಲ್ಲಿ ಆತನಿಗೆ 1.50 ಲಕ್ಷ ರೂ ಹಣವನ್ನು ನೀಡುವುದಾಗಿ ಹೇಳಿ ದಿನಾಂಕ: 23-12-2017 ರಂದು ಬೆಳಗಿನ ಜಾವ ಮಂಡೇಪಂಡ ರಾಜೇಶ ಹಾಗೂ ಅಶೋಕ ವಿರಾಜಪೇಟೆಯಿಂದ ಸ್ನೇಹಿತನ ಬೈಕ್ನಲ್ಲಿ ಹೊರಟು ಇಗ್ಗೊಡ್ಲು ಗ್ರಾಮಕ್ಕೆ ತಲುಪಿ ಕಾಳಚಂಡ ರಂಜು ಪೂವಯ್ಯ ಮನೆಯಿಂದ ಕೆಳಗೆ ಇಳಿದು ಬರುವ ವೇಳೆ ಅಶೋಕನು ತನ್ನ ಬಂದೂಕಿನಿಂದ ಗುಂಡು ಹೊಡೆದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಮಂಡೇಪಂಡ ಅಶೋಕ್ @ ದೇವಯ್ಯ ಹಾಗೂ ಮೃತ ಕಾಳಚಂಡ ರಂಜು ಪೂವಯ್ಯನ ಪತ್ನಿ ಶಾಂತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿ ಅವರು ತಾವುಗಳು ಕಾಳಚಂಡ ರಂಜು ಪೂವಯ್ಯನ ಕೊಲೆ ಪ್ರಕರಣದಲ್ಲಿ ಸಂಚುರೂಪಿಸಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.

ದಸ್ತಗಿರಿ ಮಾಡಿರುವ ಆರೋಪಿಗಳ ವಿವರ ಈ ಕೆಳಕಂಡಂತಿರುತ್ತದೆ.

1) ಕಾಳಚಂಡ ಶಾಂತಿ ಪೂವಯ್ಯ ಕೋಂ ಲೇ|| ಕಾಳಚಂಡ ರಂಜು ಪೂವಯ್ಯ, 36 ವರ್ಷ, ಗೃಹಿಣಿ, ಇಗ್ಗೊಡ್ಲು ಗ್ರಾಮ, ಮಾದಾಪುರ ಹೋಬಳಿ, ಸೋಮವಾರಪೇಟೆ ತಾಲ್ಲೂಕು.

2) ಮಂಡೇಪಂಡ ರಾಜೇಶ @ ಅಯ್ಯಪ್ಪ, ತಂದೆ ಲೆ|| ಮುತ್ತಣ್ಣ, 40 ವರ್ಷ, ವ್ಯವಸಾಯ, ಚಂಬೇಬೆಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೂಕು.

3) ಮಂಡೇಪಂಡ ಅಶೋಕ @ ದೇವಯ್ಯ ತಂದೆ ಲೇ|| ಮಾಚಯ್ಯ, 44 ವರ್ಷ, ವ್ಯವಸಾಯ, ಚಂಬೇಬೆಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೂಕು.

2 ಆರೋಪಿ ಮಂಡೇಪಂಡ ರಾಜೇಶ @ ಅಯ್ಯಪ್ಪ, 9 ನೇ ತರಗತಿಯವರೆಗೆ ವಿರಾಜಪೇಟೆಯಲ್ಲಿ ವ್ಯಾಸಂಗ ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಒಂದು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು 2012 ರಲ್ಲಿ 7 ವರ್ಷ ಶಿಕ್ಷೆ ಪ್ರಕಟಿಸಿರುತ್ತದೆ.

3ನೇ ಆರೋಪಿ ಮಂಡೇಪಂಡ ಅಶೋಕ @ ದೇವಯ್ಯ, 8 ನೇ ತರಗತಿಯವರೆಗೆ ದೇವಣಗೇರಿಯಲ್ಲಿ ವ್ಯಾಸಂಗ ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2010 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿದೆ.

ಆರೋಪಿಗಳಿಂದ ಸಂಚು ರೂಪಿಸಲು ಉಪಯೋಗಿಸಿದ್ದ ಮೊಬೈಲ್ಗಳು, ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರವಾಹನ ಹಾಗೂ ಒಂದು ಎಸ್ಬಿಬಿಎಲ್ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್ ರವರ ನೇತೃತ್ವದಲ್ಲಿ ಡಿಸಿಐಬಿ ಎಎಸ್ಐ ರವರಾದ ಕೆ.ವೈ.ಹಮ್ಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಯವರಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಎಂ.ಬಿ. ಸುಮತಿ, ಯು.ಎ.ಮಹೇಶ್, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್ ಹಾಗೂ ಚಾಲಕರುಗಳಾದ ಕೆ.ಎಸ್. ಶಶಿಕುಮಾರ್, ಶೇಷಪ್ಪ ರವರುಗಳು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
 


ಬಾಗಿಲು ಮುರಿದು ಚಿನ್ನಾಭರಣ ಕಳವು:

     ವಿರಾಜಪೇಟೆ ಗ್ರಾಮಾಂತರ ಠಾಣೆ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿರುವ ಹೆಚ್.ಕೆ. ಕೃಷ್ಣ ಎಂಬವರಿಗೆ ಸೇರಿದ ಮನೆಗೆ ದಿನಾಂಕ 25-12-2017 ರಂದು 10-00 ಗಂಟೆಯಿಂದ ದಿನಾಂಕ 2-1-2018ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮುಂದಿನ ಬಾಗಿಲನ್ನು ಮುರಿದು ಮನೆಯಿಂದ ಸುಮಾರು 87,000 ರೂ ಬೆಲೆಬಾಳುವ ಚಿನ್ನಾಭರಣವನ್ನು ಕಳವು ಮಾಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

    ಗೋಣಿಕೊಪ್ಪ ಠಾಣಾ ಸರಹದ್ದಿನ ಅತ್ತೂರು ಗ್ರಾಮದಲ್ಲಿ ವಾಸವಿರುವ ಆಚಾರಿ ವಿಶ್ವನಾಥ ಎಂಬವರು ದಿನಾಂಕ 2-1-2018 ರಂದು ಗೋಣಿಕೊಪ್ಪನಗರದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅರುವತ್ತೊಕ್ಲು ಗ್ರಾಮದ ನಿವಾಸಿ ಸೋಮಯ್ಯ ಎಂಬವರು ಹಣದ ವಿಚಾರದಲ್ಲಿ ಜಗಳ ಮಾಡಿ ಆಚಾರಿ ವಿಶ್ವನಾಥರವರ ಮೇಲೆ ಹಲ್ಲೆನಡೆಸಿದ್ದು. ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುನುಷ್ಯಕಾಣೆ ಪ್ರಕರಣ ದಾಖಲು:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಶ್ರೀವರ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ನೇಪಾಳಿ ಮೂಲಕ ಪ್ರಕಾಶ ಎಂಬಾತ ದಿನಾಂಕ 1-1-2018 ರಿಂದ ಕಾಣೆಯಾಗಿದ್ದು, ಕುಶಾಲನಗರದ ಮುಳ್ಳುಸೋಗೆ ನಿವಾಸಿ ಎಂ.ವಿ. ದಾಸೇಗೌಡ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಜಗಳ ಹಲ್ಲೆ:

     ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪ ಬಡಾವಣೆಯಲ್ಲಿ ವಾಸವಾಗಿರುವ ಸುಭಾಶ್ ಎಂಬ ವ್ಯಕ್ತಿ ದಿನಾಂಕ 2-1-2018 ರಂದು ತಮ್ಮ ಮನೆಗೆ ಬಂದ ಬಾಲಕೃಷ್ಣ ರವರಲ್ಲಿ ಸಂಸಾರದ ವಿಚಾರದಲ್ಲಿ ಜಗಳ ಮಾಡಿ ಬಾಲಕೃಷ್ಣರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆ ದ್ವೇಷ, ಗುಂಡು ಹಾರಿಸಿ ಕೊಲೆಗೆ ಯತ್ನ:

     ಸೋಮವಾರಪೇಟೆ ಠಾಣೆ ಸರಹದ್ದಿನ ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಸಿ.ಟಿ. ದರ್ಶನ್ ರವರು ದಿನಾಂಕ 01/01/2017 ರಂದು ರಾತ್ರಿ 10:00 ಗಂಟೆಗೆ ಮನೆಯಲ್ಲಿರುವಾಗ್ಗೆ ಅತನ ದೊಡ್ಡಪ್ಪನ ಮಗ ಪ್ರಜ್ವಲ್ ಮತ್ತು ಊರಿನ ಕೌಶಿಕ್ ರವರು ಕಾರಿನಲ್ಲಿ ಬಂದು ಸಿ.ಟಿ. ದರ್ಶನ್ ರವರನ್ನು ಕರೆದುಕೊಂಡು ಊರಿನ ಸ್ಕೂಲ್ ಗ್ರೌಂಡಿನ ಬಳಿ ಹೋಗಿದ್ದು ಸಮಯ 10:15 ಪಿ ಎಂ ಗೆ ಗ್ರೌಂಡಿನಲ್ಲಿ ಕಾಫಿ ಒಣಗಲು ಹಾಕಿಕೊಂಡು ಅಲ್ಲಿಯೇ ಇದ್ದ ಅರೋಪಿಗಳಾದ ಸಂದೀಫ್ ಮತ್ತು ಸಂತೋಷ್ ರವರು ಹಳೆ ದ್ವೇಶದಿಂದ ಪ್ರಜ್ವಲ್ ರವರನ್ನು ಕುರಿತು ನೀನು ನಮ್ಮೊಂದಿಗೆ ಜಗಳ ಮಾಡಲು ದರ್ಶನ್(ಪಿರ್ಯದಿ) ರವರನ್ನು ಕರೆದುಕೊಂಡು ಬಂದಿದ್ದೀಯ ನಿಮ್ಮನ್ನು ಈ ದಿನ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಹೇಳಿ ಕಾರಿನಲ್ಲಿ ಇದ್ದ ಕೋವಿಯನ್ನು ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕೋವಿಯಿಂದ ಗುಂಡು ಹೊಡೆದಿದ್ದು ಅಗ ಗುಂಡು ಪಿರ್ಯದಿಯವರ ಎಡಭುಜ ಮತ್ತು ಎದೆಯ ಬಾಗಕ್ಕೆ ಹಾಗು ಪ್ರಜ್ವಲ್ ರವರ ಶರೀರಕ್ಕೆ ತಗುಲಿ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೇಳೂರು ಗ್ರಾಮದ ನಿವಾಸಿ ರಾಮಶಂಕರ್ ಎಂಬವರು ದಿನಾಂಕ 2-1-2018 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, January 2, 2018

ರಸ್ತೆ ಅಪಘಾತ
                       ದಿನಾಂಕ 31/12/2017ರಂದು ಪೊನ್ನಂಪೇಟೆ ಬಳಿಯ ಕಾನೂರು ನಿವಾಸಿ ನಿತಿನ್ ಎಂಬವರು ಕಾನೂರಿನ ವಿಜಯಾ ಬ್ಯಾಂಕ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಎಂ-548ರ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿತಿನ್‌ರವರ ಕಾಲಿನ ಮೇಲೆ ಹತ್ತಿಸಿಕೊಂಡು ಹೋದ ಪರಿಣಾಮ ಅವರ ಕಾಲಿಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು
                    ದಿನಾಂಕ 01/01/2018ರಂದು ಕುಶಾಲನಗರ ಬಳಿಯ ಕಣಿವೆ ಗ್ರಾಮದ ಕಾವೇರಿ ಹೊಳೆಯಲ್ಲಿ ಹುಣಸೂರು ತಾಲೂಕಿನ ದೊಡ್ಡ ಬೀಚನಹಳ್ಳಿ ಗ್ರಾಮದ ನಿವಾಸಿ ಚರಣ್ ಹಾಗೂ ಆತನ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಚರಣನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                      ದಿನಾಂಕ 01/01/2018 ರಂದು ಮೂರ್ನಾಡು ನಿವಾಸಿ ತಂಗು ಎಂಬ ಮಹಿಳೆಯು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                      ದಿನಾಂಕ 01/01/2018ರಂದು ಮಡಿಕೇರಿ ಬಳಿಯ ಕಾಟಕೇರಿ ನಿವಾಸಿ ಬೈರೇಟಿರ ರಜತ್ ಎಂಬಾತನು ಕಾಟಕೇರಿಯಿಂದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ರಾಘವೇಂದ್ರ, ಶರತ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿಕೊಂಡು ರಸ್ತೆಯ ವಿಚಾರದಲ್ಲಿ ಜಗಳವಾಡಿ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ರಜತ್‌ರವರು ದೂರು ನೀಡಿದ್ದು, ಅದೇ ರೀತಿ ರಜತ್, ಕಾರ್ಯಪ್ಪ ಮತ್ತು ದೊರೆಮಣಿ ಎಂಬವರು ಸೇರಿಕೊಂಡು ಬೈರೇಟಿರ ಪಳಂಗಪ್ಪ ಎಂಬವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 1, 2018

ದೇವಾಲಯದಿಂದ ಹುಂಡಿ ಕಳವು:

     ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನಕ್ಕೆ ದಿನಾಂಕ 30-12-2017 ರ ಬೆಳಿಗ್ಗೆ 9-00 ಗಂಟೆಯಿಂದ ದಿನಾಂಕ 31-12-2017ರ ಬೆಳಿಗ್ಗೆ 7-00 ಗಂಟೆಯ ಅವದಿಯಲ್ಲಿ ದೇವಾಲಯದ ಮುಖ್ಯದ್ವಾರದ ಮೇಲಿನ ಭಾಗದಿಂದ ಯಾರೋ ಕಳ್ಳರು ಒಳನುಗ್ಗಿ ದೇವಾಲಯದಲ್ಲಿದ್ದ 2 ಕಾಣಿಕೆ ಹುಂಡಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಿ.ಸಿ. ಪೊನ್ನಪ್ಪ, ಅಧ್ಯಕ್ಷರು ಬಿಳಿಗೇರಿ ಗ್ರಾಮಾಭಿವೃದ್ಧಿ ಸಮೀತಿ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರು ಅಪಘಾತ ನಾಲ್ವರಿಗೆ ಗಾಯ:

    ದಿನಾಂಕ 31-12-2017 ರಂದು ಬೆಂಗಳೂರಿನ ಬಿ. ಸುನಿಲ್ ಎಂಬವರು ತನ್ನ ಸ್ನೇಹಿತರಾದ ಸಾಗರ್, ಮಂಜುನಾಥ್ ರವರೊಂದಿಗೆ ಬಾಬು ರೆಡ್ಡಿ ರವರ ಬಾಪ್ತು ಕೆಎ-03, ಎಂ.ಯು-7228 ರ ಕಾರಿನಲ್ಲಿ ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದು, ಸೋಮವಾರಪೇಟೆಯ ಮಲ್ಲಳ್ಳಿ ಫಾಲ್ಸ್ ಗೆ ಬೇಟಿ ನೀಡಿ ವಾಪಾಸ್ಸು ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ್ಗೆ, ಮಲ್ಲಳ್ಳಿ ಫಾಲ್ಸ್ ನಿಂದ ಸುಮಾರು 4 ಕಿ.ಮೀ. ತಲುಪುವಾಗ್ಗೆ ಸಮಯ ಬೆಳಿಗ್ಗೆ 11.30 ಗಂಟೆಗೆ ಎದುರುಗಡೆಯಿಂದ ಬಂದ ಕಾರಿಗೆ ದಾರಿ ಬಿಡುವ ಸಮದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಎಡಬದಿಗೆ ಮಗುಚಿಕೊಂಡಿದ್ದು, ಕಾರಿನಲ್ಲಿದ್ದ ಬಿ.ಸುನಿಲ್, ಸಾಗರ್, ಮಂಜುನಾಥ ಮತ್ತು ಚಾಲಕ ಬಾಬುರೆಡ್ಡಿರುವರುಗಳು ಗಾಯಗೊಂಡಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿವಾದ ಮಹಿಳೆ ಮೇಲೆ ಹಲ್ಲೆ:

    ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಬಿ.ಎ. ಮುತ್ತಮ್ಮ ಎಂಬವರಿಗೆ ಸೇರಿದ ಜಾಗಕ್ಕೆ ಅದೇ ಗ್ರಾಮದ ಶಿವಪ್ಪ ಹಾಗು ಇತರೆ 5 ಜನರು ಸೇರಿ ಅಕ್ರಮ ಪ್ರವೇಶ ಮಾಡಿ ಜಾಗದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಶ್ರೀಮತಿ ಬಿ.ಎ. ಮುತ್ತಮ್ಮ ನವರ ಮೇಲೆ ನಡೆಸಿರುತ್ತಾರೆಂದು ಸದರಿ ಶ್ರೀಮತಿ ಬಿ.ಎ. ಮುತ್ತಮ್ಮನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಬೈಕ್ ಕಳವು:

    ವಿರಾಜಪೇಟೆ ತಾಲೋಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಬಿ.ಬಿ. ಸಂಜಯ್ ರವರ ಬಾಪ್ತು ಮೋಟಾರ್ ಸೈಕಲ್ ಸಂ.ಕೆಎ-12 ಹೆಚ್- 5589 ಸಿ.ಟಿ.100 ನ್ನು ದಿನಾಂಕ 30-12-2017 ರಂದು ಸಂಜೆ 5-00 ಗಂಟೆಗೆ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಮಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದಣಿ ಕಾಲೋನಿ ಪೊನ್ನಂಪೇಟೆ ನೀವಾಸಿ ಕೆ.ಎಸ್. ಉಣ್ಣಿಕೃಷ್ಣ ರವರು ದಿನಾಂಕ 30-12-2017 ರಂದು ಕಾರಿನಲ್ಲಿ ತಮ್ಮ ಪತ್ನಿ ಮತ್ತು ಮಗನೊಂದಿಗೆ ಹೋಗುತ್ತಿದ್ದಾಗ ಸಮಯ ರಾತ್ರಿ 10-30 ಗಂಟೆಗೆ ಪೊನ್ನಂಪೇಟೆ ಎಸ್.ಬಿ.ಐ. ಬ್ಯಾಂಕಿನ ಬಳಿ ಆರೋಪಿಗಳಾದ ಕಾರ್ಯಪ್ಪ, ದರ್ಶನ ಮತ್ತು ಹರೀಶ ಎಂಬವರು ಕಾರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.