Monday, January 8, 2018

ಅಂಗಡಿ ಕಳವು
                      ದಿನಾಂಕ 06/01/2018ರಂದು ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿರುವ ಡಿ.ಎಸ್.ಪ್ರವೀಣ ಎಂಬವರ ವಿಘ್ನೇಶ್ವರ ಹಾರ್ಡ್‌ವೇರ್ ಅಂಗಡಿಯ ಹಿಂಬದಿಯ ಕಿಟಕಿ ಸರಳನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯೊಳಗಿದ್ದ ಸಿ.ಸಿ.ಕ್ಯಾಮೆರಾದ ಡಿವಿಆರ್‌ ಯಂತ್ರ ಹಾಗೂ ನಗದು ರೂ.300/-ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 

ವ್ಯಾನ್ ಮಗುಚಿ ಅಪಘಾತ
                     04/01/2018ರಂದು ತುಮಕೂರು ನಿವಾಸಿ ಸಿ.ಜೆ.ನಾಗರಾಜ ಎಂಬವರು ಸ್ನೇಹಿತರೊಂದಿಗೆ  ಕೆಎ-04-ಸಿ-3137ರ ವ್ಯಾನಿನಲ್ಲಿ ಶಬರಿಮಲೆಗೆ ಹೋಗುತ್ತಿರುವಾಗ ಮುಂಜಾನೆ ವೇಳೆ ವಿರಾಜಪೇಟೆ ಬಳಿಯ ಮಾಕುಟ್ಟ ಎಂಬಲ್ಲಿ ವ್ಯಾನಿನ ಚಾಲಕ ಪುಟ್ಟರಾಜು ಎಂಬಾತನು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವ್ಯಾನು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ವ್ಯಾನಿನಲ್ಲಿದ್ದ ನಾಗರಾಜು ಹಾಗೂ ಇತರೆ ಎಂಟು ಜನರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.