Thursday, January 25, 2018

ಹಳೇ ದ್ವೇಷ, ಹಲ್ಲೆ:

     ದಿನಾಂಕ 24-1-2018 ರಂದು ಸಂಜೆ 5-30 ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಮೂಕಂಡಬಾಣೆ ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಜೆ. ಪವಿತ್ರ, ಅವರ ಗಂಡ ಎನ್. ಆರ್. ಜೀವನ್ ಹಾಗು ಅವರ ಮಾವ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಸಹದೇವ, ಮಿರನ್ ಕುಮಾರ್ ಹಾಗು ದಿನೇಶ ಎಂಬವರುಗಳು ಅಲ್ಲಿಗೆ ಬಂದು ಅಂದು ಹಳೇ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಮೂವರ ಮೇಲೂ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ:

     ವಿರಾಜಪೇಟೆ ತಾಲೋಕು, ಹೈಸೊಡ್ಲೂರು ಗ್ರಾಮದ ನಿವಾಸಿ ಮಂಡೆಂಗಡ ಯು. ಕವಿನ್ ರವರು ದಿನಾಂಕ 22-1-2018 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಹೈಸೊಡ್ಲೂರು ಗ್ರಾಮದಿಂದ ಗೋಣಿಕೊಪ್ಪದ ಕಡೆಗೆ ತಮ್ಮ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಬೇಗೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಶ್ರೀಮತಿ ಸುಮನ್ ಎಂಬವರು ತಮ್ಮ ಬಾಪ್ತು ಕಾರನ್ನು ರಸ್ತೆಯ ಎಡಬದಿಯಿಂದ ಯಾವುದೇ ಸೂಚನೆಗಳನ್ನು ನೀಡದೆ ರಸ್ತೆಯ ಬಲಭಾಗಕ್ಕೆ ಕಾರನ್ನು ಚಾಲಿಸಿದ್ದರಿಂದ ಸದರಿ ಕಾರು ಮಂಡೆಂಗಡ ಯು. ಕವಿನ್ ರವರು ಚಾಲಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಸದರಿ ಕವನ್ ರವರು ಗಾಯಗೊಂಡಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಣಗಲು ಹಾಕಿದ್ದ ಕಾಫಿ ಕಳವು:

     ಶ್ರೀಮತಿ ಜಾನಕಿ ಎಂಬವರಿಗೆ ಕಿರಗಂದೂರು ಗ್ರಾಮದಲ್ಲಿ 5 ಎಕರೆ ಕಾಫಿ ತೋಟವಿದ್ದು ಅಳುಗಳ ಸಹಾಯದಿಂದ ಕಾಫಿ ತೋಟದಲ್ಲಿ ಕಾಫಿಯನ್ನು ಕುಯ್ಯಿಸುತ್ತಿರುವುದಾಗಿದ್ದು, ಕುಯ್ದ ಕಾಫಿಯನ್ನು ಬೇಳೆ ಮಾಡಿಸಿ ಮನೆಯ ಮುಂದೆ ಟಾರ್ಪಲ್ ನಲ್ಲಿ ಒಣಗಲು ಹಾಕಿದ್ದು, ದಿನಾಂಕ 24/01/2018 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ನೋಡುವಾಗ ಒಣಗಲು ಹಾಕಿದ್ದ ಸುಮಾರು 50 ಕೆಜಿಯ 3 ಕಾಫಿ ಚೀಲದಷ್ಟು ಕಾಫಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಾಫಿ ಬೇಳೆಯ ಬೆಲೆ ಅಂದಾಜು 18 ರಿಂದ 20 ಸಾವಿರ ರುಪಾಯಿ ಅಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.