Sunday, January 7, 2018

ಕ್ಷುಲ್ಲಕ ಕಾರಣಕ್ಕೆ ಬೆದರಿಕೆ
                     ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದ ನಿವಾಸಿಯಾದ ಕುಮಾರ ಎಂಬುವವರು ದಿನಾಂಕ 5-1-2018 ರಂದು ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ದಿನೇಶ್ ಗೌಡ ಎಂಬುವವರು ಕುಮಾರರವರನ್ನು ಕುರಿತು ಈ ಹಿಂದೆ ಜೀಪು ಗ್ರಾಮ ಪಂಚಾಯಿತಿ ಗೇಟ್ ಗೆ ತಾಗಿದ್ದ ವಿಚಾರವನ್ನು ಎಲ್ಲರಿಗೂ ಹೇಳುತ್ತಿದ್ದೀಯಾ ಎಂದು ಜಗಳ ತೆಗೆದು ಬೆದರಿಕೆ ಹಾಕಿದ್ದು ಈ ಬಗ್ಗೆ ಕುಮಾರರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಜಗಳ
              ದಿನಾಂಕ 5-1-2018 ರಂದು ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ನಿವಾಸಿಯಾದ ಪಾರ್ವತಿಯವರು ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಯಾದ ಸೋಮಯ್ಯ ಎಂಬುವವರು ಪೊಲೀಸ್ ಠಾಣೆಗೆ ಪುಕಾರು ನೀಡಿದ ವಿಚಾರದಲ್ಲಿ ಜಗಳ ತೆಗೆದು ಮನೆಗೆ ಕಲ್ಲನ್ನು ಹೊಡೆದು ಗಾಜು ಮತ್ತು ಹಂಚುಗಳನ್ನು ಒಡೆದು ನಷ್ಟಪಡಿಸಿದ್ದು ಈ ಬಗ್ಗೆ ಪಾರ್ವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.