Friday, January 12, 2018

ಅಕ್ರಮ ಜೂಜಾಟ ಬಂಧನ
                          ಕೊಡಗು ಜಿಲ್ಲೆಯಾದ್ಯಂತ ಜೂಜಾಟ ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಮೇರೆಗೆ, ಈ ಬಗ್ಗೆ ಮಾಹಿತಿ ಕಲೆಹಾಕಿ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕಾರ್ಯೋನ್ಮುಖರಾದ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾದ ಎಂ.ಮಹೇಶ್‌ರವರ ನೇತೃತ್ವದ ತಂಡ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ಕೂರ್ಗ್‌ ಕೌಂಟಿ ರೆಸಾರ್ಟ್‌ಗೆ ಒತ್ತಾಗಿರುವ ಸುರೇಶ್ ಎಂಬವರ ಕಾಫಿ ತೋಟದ ಒಳಗೆ ಸಾರ್ವಜನಿಕರು ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯದ ಅನುಮತಿಯನ್ನು ಪಡೆದು ಸುಂಟಿಕೊಪ್ಪ ಪೊಲೀಸ್ ಠಾಣಾ ಮೊ.ಸಂ. 02/2018 ಕಲಂ. 87 ಕರ್ನಾಟಕ ಪೊಲೀಸ್ ಕಾಯ್ದೆ ರಂತೆ ಪ್ರಕರಣವನ್ನು ದಾಖಲಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಎಸ್‌.ನ್‌. ಜಯರಾಂ ಮತ್ತು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಈ ಕೆಳಕಂಡ 10 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಜೂಜಾಟ ಆಡುತ್ತಿದ್ದ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿರುವುದಾಗಿದೆ.

1. ಕೆ.ಎನ್. ಭೀಮಯ್ಯ @ ದಿನು ತಂದೆ ಲೇ|| ಕೆ.ಪಿ. ನಂಜಪ್ಪ, 43 ವರ್ಷ, ವ್ಯವಸಾಯ, ಕಾಲೂರು ಗ್ರಾಮ, ಮಡಿಕೇರಿ ತಾಲ್ಲೂಕು.
2. ಜಿ. ಶ್ರೀಧರ್ ತಂದೆ ಲೇ|| ಗೋಪಾಲ, 53 ವರ್ಷ, ವ್ಯಾಪಾರ, ನಂ. 35, 1ನೇ ಮೇನ್, 2ನೇ ಕ್ರಾಸ್, ಬೋಗಾದಿ, ಮೈಸೂರು.
3. ಸಿ.ಡಿ. ದಿಲೀಪ್ ಕುಮಾರ್ ತಂದೆ ತಮ್ಮಯ್ಯ, 35 ವರ್ಷ, ವ್ಯಾಪಾರ, ಟಿ.ಶೆಟ್ಟಿಗೇರಿ ಗ್ರಾಮ, ವಿರಾಜಪೇಟೆ ತಾಲ್ಲೂಕು.
4. ಎಂ.ಎ ಸತ್ತಾರ್ ತಂದೆ ಅಬ್ದುಲ್ ರಹಮಾನ್, 47 ವರ್ಷ, ವ್ಯಾಪಾರ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.
5. ಜೆ.ಆರ್. ಲವಕುಮಾರ್ ತಂದೆ ಜೆ.ಸಿ. ರಾಜಪ್ಪ, 32 ವರ್ಷ, ವ್ಯಾಪಾರ, ಗುಮ್ಮನಕೊಲ್ಲಿ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು.
6. ಹೆಚ್.ಪಿ. ವಿನೋದ್ ತಂದೆ ಹೆಚ್.ಸಿ. ಪೂವಯ್ಯ, 30 ವರ್ಷ, ವ್ಯಾಪಾರ, ಕೆ.ನಿಡುಗಣೆ ಗ್ರಾಮ, ಮಡಿಕೇರಿ ತಾಲ್ಲೂಕು.
7. ಕೆ.ಕೆ. ಸುಬ್ರಮಣಿ ತಂದೆ ಲೇ|| ಕೆ.ಬಿ. ಕಾರ್ಯಪ್ಪ, 50 ವರ್ಷ, ವ್ಯವಸಾಯ, ಶ್ರೀಮಂಗಲ, ವಿರಾಜಪೇಟೆ ತಾಲ್ಲೂಕು.
8. ಅಬ್ದುಲ್ ಸತ್ತಾರ್ ತಂದೆ ಅಬ್ದುಲ್ ರಹಮಾನ್, 42 ವರ್ಷ, ವ್ಯಾಪಾರ, ಗಣಪತಿ ಬೀದಿ, ಮಡಿಕೇರಿ ನಗರ.
9. ಎಂ.ಪಿ. ನರೇನ್ ತಂದೆ ಲೇ|| ಪೊನ್ನಪ್ಪ, 43 ವರ್ಷ, ವ್ಯವಸಾಯ, ಅಂದಗೋವೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು.
10. ಎಂ.ಎಂ. ಪೊನ್ನಪ್ಪ @ ಸುರೇಶ ತಂದೆ ಲೇ|| ಮಾಚಯ್ಯ, 51 ವರ್ಷ, ವ್ಯವಸಾಯ, 7ನೇ ಹೊಸಕೋಟೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು.
11. ಕುಂಞ ಕುಟ್ಟಿ @ ಮುಸ್ತಾಫ, 7ನೇ ಹೊಸಕೋಟೆ ಗ್ರಾಮ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. (ಓಡಿ ತಪ್ಪಿಸಿಕೊಂಡವರು)

                    ಮೇಲ್ಕಂಡ ಆರೋಪಿಗಳಿಂದ ಜೂಜಾಟಕ್ಕೆ ಬಳಸಲಾಗಿದ್ದ ಸಾಮಾಗ್ರಿಗಳು ಹಾಗೂ 4,27,505/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

                  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ ನಿರ್ದೇಶನದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಜಯರಾಂ, ಹಾಗೂ ಡಿಸಿಐಬಿ ಎಎಸ್ಐ ರವರುಗಳಾದ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಯವರಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್, ಕೆ.ಎಸ್. ಶಶಿಕುಮಾರ್ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ದಿನೇಶ್, ಧನುಕುಮಾರ್, ಪುಂಡರೀಕಾಕ್ಷ, ಈರಪ್ಪ, ಮಂಜುನಾಥ್ ರವರುಗಳು ಪಾಲ್ಗೊಂಡಿದ್ದರು . ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ. 
                    ಕೊಡಗು ಜಿಲ್ಲೆಯಲ್ಲಿ ಲಾಟರಿ, ಜೂಜಾಟ, ಮಟ್ಕ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಆಯಾ ಗ್ರಾಮದ ಬೀಟ್ ಸದಸ್ಯರು ಪೊಲೀಸ್ ಅಧೀಕ್ಷಕರಿಗೆ / ಡಿಸಿಐಬಿ ಪೊಲೀಸ್ ನಿರೀಕ್ಷಕರಿಗೆ / ಬೀಟ್ ಅಧಿಕಾರಿಗಳಿಗೆ / ಪಿಎಸ್ಐ ರವರಿಗೆ / ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲ್ಲೆ ಪ್ರಕರಣ
                 ದಿನಾಂಕ 10/01/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ನಿವಾಸಿ ದರ್ಶನ್‌ ಎಂಬವರ ಅಜ್ಜ ಸಿ.ಕೆ.ಕಾಳಪ್ಪ ಎಂಬವರ ತೋಟದಲ್ಲಿ ಸಿ.ಕೆ.ದೇವಯ್ಯ ಮತ್ತು ಸಿ.ಡಿ.ಯೋಗೇಂದ್ರ ಎಂಬವರು ಕಾಫಿ ಕುಯ್ಯುತ್ತಿದ್ದುದನ್ನು ಕಂಡು ಪ್ರಶ್ನಿಸಿದಾಗ ದೇವಯ್ಯ ಮತ್ತು ಯೋಗೇಂದ್ರರವರು ಸೇರಿಕೊಂಡು ದರ್ಶನ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ
                   ದಿನಾಂಕ 30/12/2017ರಂದು ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಜೋಸೆಫ್ ವಂದನಾಥ್ ಎಂಬವರು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬಂದಿದ್ದಾಗ ಅಲ್ಲಿ ಮಾದಾಪಟ್ನ ನಿವಾಸಿ ಕಿರಣ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜೋಸೆಫ್‌ರವರನ್ನು ಅಶ್ಲೀಲವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.