Monday, January 22, 2018

ಜೀವನದಲ್ಲಿ ಜುಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.   ಎಮ್ಮೆಮಾಡು ಗ್ರಾಮದ ಪಿ.ಎ. ಇಬ್ರಾಹಿಂ ಎಂಬವರ ಸಹೋದರ ಪಿ.ಎ.ಹಸೇನಾರ್ ಎಂಬವರು ಎಮ್ಮೆಮಾಡು ಗ್ರಾಮದಲ್ಲಿ ವ್ಯಾಪಾರ ವೃತ್ತಿಯನ್ನು ಮಾಡಿಕೊಂಡಿದ್ದು ಅವರ ಪತ್ನಿ ಹಾಗು 2 ಮಕ್ಕಳು ತಮ್ಮ ಊರಿಗೆ ಹೋಗಿ ಸುಮಾರು 20 ದಿನಗಳು ಕಳೆದರೂ ಮರಳಿ ಬಾರದೇ ಇರುವುದರಿಂದ ನೊಂದ ಪಿ.ಎ. ಹಸೇನಾರ್ ರವರು ದಿನಾಂಕ 19-1-2018 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಗೆ ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 20-1-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಪಿ.ಎ. ಇಬ್ರಾಹಿಂ ರವರ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.