Sunday, February 11, 2018

ಅಸ್ವಾಭಾವಿಕ ಸಾವು, ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಶ್ರೀಮತಿ ವಿಮಲಾ ಎಂಬವರಿಗೆ ಲೈನ್ ಮನೆಗಳಿದ್ದು ಸದರಿ ಲೈನ್ ಮನೆಯೊಂದರಲ್ಲಿ ರಾಮಕೃಷ್ಣ ಎಂಬುವವರು ಬಾಡಿಗೆಗೆ ಬಂದು ವಾಸವಾಗಿದ್ದು, ಇವರು ಒಬ್ಬಂಟಿಯಾಗಿ ಸುಮಾರು 15 ವರ್ಷಗಳಿಂದ ಸಿದ್ಧಾಪುರದಲ್ಲಿಯೇ ವಾಸವಾಗಿದ್ದರು. ಇವರು ಕೂಲಿಕೆಲಸ ಮಾಡಿಕೊಂಡಿದ್ದು, ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದರೂ ಸಹ ಚಿಕಿತ್ಸೆಯನ್ನು ಪಡೆಯದೆ ಮದ್ಯಪಾನ ಮಾಡುತ್ತಿದ್ದು, ಹೀಗೆ ಒಂದು ವಾರಗಳ ಹಿಂದಿನಿಂದ ಜಾಂಡೀಸ್ ಕಾಯಿಲೆ ಹೆಚ್ಚಾಗಿದ್ದರಿಂದ ಫಿರ್ಯಾದಿ ಶ್ರೀಮತಿ ವಿಮಲಾರವರು ಅಕ್ಕಪಕ್ಕದವರೊಂದಿಗೆ ದಿನಾಂಕ 06-02-2018 ರಂದು ಸಿದ್ಧಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಸದರಿ ರಾಮಕೃಷ್ಣರವರು ದಿನಾಂಕ 09-02-2018 ರಂದು ಚಿಕಿತ್ಸೆಯನ್ನು ಲೆಕ್ಕಿಸದೆ ಮಾನಸಿಕ ಅಸ್ವಸ್ಥನಂತೆ ಲೈನು ಮನೆಗೆ ರಾತ್ರಿ ಬಂದಿದ್ದು, ದಿನಾಂಕ 10-02-2018 ರಂದು ಬೆಳಿಗ್ಗೆ 10.00 ಗಂಟೆಗೆ ಲೈನ್ ಮನೆ ಮುಂಭಾಗ ಮೃತಪಟ್ಟಿರುರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.