Sunday, February 25, 2018

ಸ್ಕೂಟರ್ ಅಪಘಾತ:

     ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ವಾಸಿ ಕಣ್ಣನ್ ಎಂಬವರು ದಿನಾಂಕ 22-2-2018 ರಂದು ಸಂಜೆ 7-30 ಗಂಟೆಗೆ ತಮ್ಮ ಮಗಳೊಂದಿಗೆ ಸ್ಕೂಟರಿನಲ್ಲಿ ರಾಜಾ ಸೀಟ್ ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ಅಪಘಾತಕ್ಕೀಡಾಗಿ ರಸ್ತೆಯ ಮೇಲೆ ಬಿದ್ದ ಕಾರಣ ಕಣ್ಣನ್ ರವರ ಮಗಳಾದ ರಂಜಿತಳು ಗಂಭೀರವಾಗಿ ಗಾಯಗೊಂಡಿದ್ದು ಅಲ್ಲದೆ ಸವಾರ ಕಣ್ಣನ್ ರವರ ಕೈಗೆ ಗಾಯವಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೀಪು ಡಿಕ್ಕಿ ಪಾದಚಾರಿಗೆ ಗಾಯ:

     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಅರವಿಂದ ಎಂಬವರು ದಿನಾಂಕ 23-2-2018 ರಂದು ನೆಲ್ಲಿಹುದಿಕೇರಿ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಸುಬ್ಬಯ್ಯ ಎಂಬವರು ತಮ್ಮ ಬಾಪ್ತು ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅರವಿಂದರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅರವಿಂದರವರು ಗಾಯಗೊಂಡು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಲಾಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಲಾಟರಿ ಜೂಜಾಟ:

     ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ನಗರದ ಮುನೀರ್ ಎಂಬವರ ಅಂಗಡಿ ಮುಂದೆ ಚೆನ್ನಯ್ಯನ ಕೋಟೆ ಗ್ರಾಮದ ನಿವಾಸಿ ವ್ಯಾಪಾತಿ ಆರ್. ಹರೀಶ್ ಎಂಬವರು ತಮ್ಮ ಮೊಬೈಲ್ ಮೂಲಕ ಅಕ್ರಮವಾಗಿ ಲಾಟರಿ ಜೂಜಾಟವನ್ನು ನಡೆಸುತ್ತಿದ್ದುದನ್ನು ಪತ್ತೆಹಚ್ಚಿದ ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ಜಿ.ಕೆ. ಸುಬ್ರಮಣಿ ರವರು ಆರೋಪಿ ಆರ್. ಹರೀಶ್ ರವರಿಂದ ಅಕ್ರಮವಾಗಿ ಜೂಜಾಟದಲ್ಲಿ ಸಂಪಾದಿಸಿದ ಹಣ ರೂ.12,350 ಗಳನ್ನು ಮತ್ತು ಜೂಜಾಟಕ್ಕೆ ಬಳಸಿದ 2 ನೋಕಿಯಾ ಮೊಬೈಲ್ ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸ್ಕೂಟರ್ ಅಪಘಾತ ಮಹಿಗೆ ಗಾಯ:

     ದಿನಾಂಕ 23-2-2018 ರಂದು 2-15 ಪಿ.ಎಂ. ಗೆ ಹಾಸನ ಜಿಲ್ಲೆಯ ಈಚಲಬೀಡು ಗ್ರಾಮದವರಾದ ಶ್ರೀಮತಿ ಎ.ಡಿ. ಮಿಥುನರವರು ತನ್ನ ಪತಿ ದಯಾನಂದನವರೊಂದಿಗೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಶನಿವಾರಸಂತೆ ನಗರದ ಚಿನ್ನಳ್ಳಿ ರಸ್ತೆಯಲ್ಲಿ ನಾಯಿಯೊಂಡು ಸ್ಕೂಟರಿಗೆ ಅಡ್ಡ ಬಂದ ಕಾರಣ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಸ್ಕೂಟರಿನಲ್ಲಿದ್ದ ಶ್ರೀಮತಿ ಮುಥುನರವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಜನಪ್ರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ನೇಣುಬಿಗಿದುಕೊಂಡು ಮಹಿಳೆ ಸಾವು:

     ವಿರಾಜಪೇಟೆ ತಾಲೋಕು ಮಗ್ಗುಲ ಗ್ರಾಮದ ಶ್ರೀಮತಿ ಶಮಿತಾ ಎಂಬವರ ತಾಯಿ 74 ವರ್ಷದ ಶಾಂತಕುಮಾರಿ ಎಂಬವರು ದಿನಾಂಕ 24-2-2018 ರಂದು ಮಗ್ಗುಲ ಗ್ರಾಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.