Saturday, February 24, 2018


ಕ್ಲುಲ್ಲಕ ಕಾರಣಕ್ಕೆ ಗುಂಡಿಕ್ಕಿ ಮಹಿಳೆಯ ಹತ್ಯೆ
                  ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ನಿವಾಸಿ ಧರ್ಮರಾಯ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದಿನಾಂಕ 23-2-2018 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಶಾಲಾಕ್ಷಿ @ ಲಲಿತರವರ ಮನೆಗೆ ಹೋಗಿ ಆಕೆಗೆ ಗುಂಡು ಹೊಡೆದು ಕೊಲೆ ಮಾಡಿ ತಾನೂ ಸಹಾ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದವನು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮೃತೆ ವಿಶಾಲಕ್ಷಿಯವರ ಪತಿ ಚೆನ್ನಪಂಡ ನಂಜಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಬಂದೂಕು ಜಪ್ತಿ
               ದಿನಾಂಕ 23-2-2018 ರಂದು ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿಯವರಾದ ಚೇತನ್ ರವರಿಗೆ 1ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಆನಂದ ಎಂಬುವವರು ಮನೆಯಲ್ಲಿ ಅಕ್ರಮವಾಗಿ ಒಂಟಿ ನಳಿಕೆ ಬಂದೂಕು ಇಟ್ಟುಕೊಂಡಿರುವುದಾಗಿ ಬಂದ ಮಾಹಿತಿ ಮೇರೆಗೆ ಮನೆಗೆ ಹೋಗಿ ದಾಳಿ ಮಾಡಿ ಪರಿಶೀಲಿಸಲಾಗಿ ಯಾವುದೇ ಪರವಾನಿಗೆ ಇಲ್ಲದ ಒಂಟಿ ನಳಿಗೆ ಬಂದೂಕು ಪತ್ತೆಯಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                    ದಿನಾಂಕ 23-2-2018 ರಂದು ವಿರಾಜಪೇಟೆ ತಾಲೂಕಿನ ಮಾಯಮುಡಿಯ ನಿವಾಸಿ ತಿಮ್ಮಯ್ಯ ಎಂಬುವವರು ಕಾರಿನಲ್ಲಿ ಗೋಣಿಕೊಪ್ಪ ಕಡೆಯಿಂದ ಹೋಗುತ್ತಿರುವಾಗ ಸೀಗೆತೋಡು ಎಂಬಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವಾಗ ಎದುರುಗಡೆಯಿಂದ ಪಿಕ್ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಜಾಲನೆಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿಪಡಿಸಿ ಜಖಂ ಪಡಿಸಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.