Thursday, February 8, 2018

ಕಾಫಿ ಮಾರಾಟ ಮಾಡಿ ವಂಚನೆ:

     ದಿನಾಂಕ 29-01-2018 ರಂದು ಸಿದ್ಧಾಪುರ ಠಾಣಾ ವ್ಯಾಪ್ತಿಯ ಮುಲ್ಲೆತೋಡುವಿನ ವೆಳ್ಳಿಯಪ್ಪ ಎಸ್ಟೇಟ್ ನಲ್ಲಿ ಕಚೇರಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ವೆಂಕಟಾಚಲಂ ಎಂಬುವವರು ಕಾಫಿ ತೋಟದಲ್ಲಿ ಒಣಗಿಸಿ ಶೇಖರಿಸಿಟ್ಟಿದ್ದ 5 ಲಕ್ಷ ರೂ ಬೆಲೆಬಾಳುವ 23 ಚೀಲ ಅಂದಾಜು 1150 ಕೇಜಿ ತೂಕದ ಕರಿಮೆಣಸನ್ನು ತೋಟದ ಮಾಲೀಕರಿಗೆ ಹಾಗೂ ಫಿರ್ಯಾದಿ  ಪಿ.ಆರ್. ಗಣೇಶ್ ರವರ ಗಮನಕ್ಕೆ ಬಾರದಂತೆ ಮಾರಾಟ ಮಾಡಿ ಹಣವನ್ನು ಪಡೆದಿದ್ದಲ್ಲದೆ, ಕಾಫಿತೋಟದಲ್ಲಿ ಬೆಳೆದು ನಿಂತಿದ್ದ ಅಡಿಕೆ ಫಸಲನ್ನು ಕೂಡ ಅವರ ಗಮನಕ್ಕೆ ಬಾರದೆ 50,000/- ರೂ ಗೆ ಗುತ್ತಿಗೆ ನೀಡಿ ಹಣವನ್ನು ಪಡೆದುಕೊಂಡು ಅದೇ ದಿನ ಯಾರಿಗೂ ತಿಳಿಯದೆ ತೋಟವನ್ನು ಬಿಟ್ಟು ಹೋಗಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ sಸಿದ್ದಾಪುರದ ವಳ್ಳಿಯಪ್ಪ ಎಸ್ಟೇಟ್ ನ ವ್ಯವಸ್ಥಾಪಕರಾದ ಪಿ.ಆರ್. ಗಣೇಶ್ ರವರು ನೀಡಿದ ದೂರನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ಮಾರಾಟ ಮಾಡಿ ವಂಚನೆ:

     ದಿನಾಂಕ 15-12-2017 ರಿಂದ 02-01-2018 ರ ನಡುವೆ ಸಿದ್ಧಾಪುರ ಠಾಣಾ ವ್ಯಾಪ್ತಿಯ ಅತ್ತಿತೋಪು ಮೇ ಫ್ಲೋರ್ ಎಸ್ಟೇಟ್ ನಲ್ಲಿ ಕಚೇರಿ ಗುಮಾಸ್ತ ಹಾಗೂ ರೈಟರ್ ಕೆಲಸ ಮಾಡಿಕೊಂಡಿದ್ದ ವೆಳ್ಳಿಯಪ್ಪ ಎಂಬುವವರು ಕಾಫಿ ತೋಟದ ಗೋದಾಮಿನಲ್ಲಿಟ್ಟಿದ್ದ ಅಂದಾಜು ಬೆಲೆ 2,50,000/- ರೂ ಬೆಲೆಬಾಳುವ 65 ಚೀಲ ಕಾಫಿ ತೋಟದ ಮಾಲೀಕರ ಹಾಗೂ ಫಿರ್ಯಾದಿ ಶ್ರೀನಿವಾಸ ರಾಘವನ್, ವ್ಯವಸ್ಥಾಪಕರ ಗಮನಕ್ಕೆ ಬಾರದಂತೆ ಮಾರಾಟ ಮಾಡಿ ಹಣವನ್ನು ಪಡೆದಿದ್ದಲ್ಲದೆ, ವಿಚಾರಣೆ ಮಾಡಿದಾಗ ಹಣವನ್ನು ನೀಡುವುದಾಗಿ ಪತ್ರದ ಮುಖಾಂತರ ತಿಳಿಸಿದ್ದು, ಕಾಫಿತೋಟದಲ್ಲಿ ಬೆಳೆದು ನಿಂತಿದ್ದ ಅಡಿಕೆ ಫಸಲನ್ನು ಕೂಡ ಅವರ ಗಮನಕ್ಕೆ ಬಾರದೆ ಗುತ್ತಿಗೆ ನೀಡಿ ಹಣವನ್ನು ಪಡೆದುಕೊಂಡು 50,000/- ರೂ ವನ್ನು ಮಾಲೀಕರ ಖಾತೆಗೆ ಹಾಕಿ, 50,000/- ರೂ ಹಣವನ್ನು ಲೆಕ್ಕ ನೀಡದೆ ತೆಗೆದುಕೊಂಡು ಯಾರಿಗೂ ತಿಳಿಯದೆ ತೋಟವನ್ನು ಬಿಟ್ಟು ಹೋಗಿ ಹಣವನ್ನು ನೀಡದೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಅಪಘಾತ:

     ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಕೂಗೂರು ಗ್ರಾಮದ ನಿವಾಸಿ ಧರ್ಮ ಎಂಬವರ ಮಗ ಅರುಣ ಹಾಗು ಕೂಗೂರು ಗ್ರಾಮದ ಗಿರೀಶ ಎಂಬವರು ದಿನಾಂಕ 24-12-2017 ರಂದು ಸಮಯ 15-30 ಗಂಟೆಗೆ ಹೆಗ್ಗುಳ ಗ್ರಾಮದಿಂದ ಕೂಗೂರು ಗ್ರಾಮಕ್ಕೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಸ್ಕೂಟರಿಗೆ ಅಡ್ಡ ಬಂದ ಕಾರಣ ಸ್ಕೂಟರ್ ಸವಾರ ಗಿರೀಶ ಮೋಟಾರ್ ಬೈಕಿನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ಬಿದ್ದು,  ಪರಿಣಾಮ ಹಿಂಬದಿ ಸವಾರ ಅರುಣರವರ ಸೊಂಟಕ್ಕೆ ಪೆಟ್ಟಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಫಿರ್ಯಾದಿ ಧರ್ಮರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪತ್ತೆ:

     ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ಆರೋಪಿ ಎಂ.ಎನ್. ಸುದೀರ್ ಎಂಬವರು ಅವರ ಅಂಗಡಿಯ ಹಿಂಭಾಗದ ಕಾಫಿ ತೋಟದ ಒಳಗಡೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಕುಟ್ಟ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಡಿ.ಕುಮಾರ್ ರವರು ಹಾಗು ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 550/- ರೂ ಬೆಲೆಬಾಳುವ ಮದ್ಯದ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.