Monday, February 5, 2018

ಅಪರಿಚಿತರಿಂದ ವ್ಯಕ್ತಿಯ ಅಪಹರಣ:

     ದಿನಾಂಕ 31-1-2018 ರಂದು ಕಲಬುರ್ಗಿ ಜಿಲ್ಲೆಯ ಕುರಿಕೋಟ ಗ್ರಾಮದ ತೇಜಪ್ಪ ಎಂಬವರ ಮಗ ಗಣೇಶ ಎಂಬವರು ಸ್ನೇಹಿತರಾದ ಕೈಲಾಶ್, ಶಿವಲಿಂಗ, ಸಿದ್ದಪ್ಪ, ಬಾಬುರಾವ್ ಹಾಗು ಆನಂದ ರವರುಗಳು ಸೇರಿ ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದು, ದಿನಾಂಕ 3-2-2018 ರಂದು ಸಂಜೆ 7-30 ಗಂಟೆಗೆ ಕುಶಾಲನಗರದ ಕಾರ್ಮೆಲ್ ಲಾಡ್ಜ್ ನಲ್ಲಿ ಕೋಣೆಗಳನ್ನು ಬುಕ್ ಮಾಡಿ ರಾತ್ರಿ 10-00 ಗಂಟೆಗೆ ಊಟ ಮುಗಿಸಿ ಲಾಡ್ಜ್ ಗೆ ಹೋಗುತ್ತಿದ್ದಾಗ 4 ಜನ ಅಪರಿಚಿತ ವ್ಯಕ್ತಿಗಳು ಇನ್ನೋವಾ ಕಾರಿನಲ್ಲಿ ಬಂದು ಫಿರ್ಯಾದಿ ಗಣೇಶರವರ ಸ್ನೇಹಿತ ಕೈಲಾಸ್ ನ್ನು ಅಪಹರಿಸಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಡಿಕ್ಕಿ ಇಬ್ಬರಿಗೆ ಗಾಯ:

     ಬೆಂಗಳೂರಿನಿಂದ ಪ್ರವೀಣ್ ಭಟ್ ಹಾಗು ಅವರ ಸ್ನೇಹಿತರುಗಳು ದಿನಾಂಕ 3-1-2018 ರಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದು ದಿನಾಂಕ 04-02-2018 ರಂದು ಸಮಯ ಸುಮಾರು 02.30 ಗಂಟೆಗೆ ಶೃತಿ ಡಿ ಪಾಟಿಲ್‌ ಹಾಗೂ ಸುಜೇಯ ಆಚಾರ್ಯ ಹಾಗೂ ಇನ್ನಿತರ ಸ್ನೇಹಿತರು ದುಬಾರೆ ರಾಪ್ಟಿಂಗ್‌ಗೆ ಹೋಗಿ ರಸ್ತೆ ಬದಿಯಲ್ಲಿದ್ದ ಎಳೆನೀರು ಕುಡಿಯಲು ನಂಜರಾಯಪಟ್ಟಣ ರಾಜ್ಯ ಹೆದ್ದಾರಿ ರಸ್ತೆ ದಾಟುವಾಗ ಗುಡ್ಡೆಹೊಸರು ಕಡೆಯಿಂದ ಬಂದ ಕೆಎ-12ಜೆ 6455 ರ ಮೊಟಾರು ಬೈಕ್‌ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಶೃತಿ ಡಿ ಪಾಟಿಲ್‌ ಹಾಗೂ ಬೈಕ್‌ನಲ್ಲಿದ್ದ ಕಿರಣರವರಿಗೆ ರಕ್ತಗಾಯವಾಗಿದ್ದು ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಸೇರಿ ಇಬ್ಬರು ಮಹಿಳೆಯವರು ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಾನೂರು ಗ್ರಾಮದ ಬ್ರಹ್ಮಗಿರಿ ಪೈಸಾರಿಯಲ್ಲಿ ವಾಸವಾಗಿರುವ ಪಂಜರಿ ಎರವರ ಎಂ.ಪ್ರಥ್ವಿ @ ಶರಣು ಎಂಬವರು ದಿನಾಂಕ 2-2-2018 ರಂದು ತನ್ನ ತಾಯಿಯನ್ನು ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಪಿ.ಪಿ. ಕಾವ್ಯ, ಮಗು ಪಿ.ಪಿ. ಅಶ್ವಿನಿ ಮತ್ತು ನಾದಿನಿ ಪಿ.ಕೆ. ಪ್ರಿಯಾ @ ಸಂದ್ಯ ರವರುಗಳು ಕಾಣೆಯಾಗಿದ್ದು ಈ ಸಂಬಂಧ ಫಿರ್ಯಾದಿ ಪಂಜರಿ ಎರವರ ಎಂ. ಪ್ರಥ್ವಿ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಜೀಪು ಡಿಕ್ಕಿ:

     ದಿನಾಂಕ 4-2-2018 ಹುಣಸೂರು ತಾಲೋಕಿನ ಹೈರಿಗೆ ಗ್ರಾಮದವರಾದ ಶಪಿವುಲ್ಲಾ ರವರು ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲಿನಲ್ಲಿ ನಾಪೋಕ್ಲು ಗ್ರಾಮಕ್ಕೆ ಬರುತ್ತಿದ್ದಾಗ ತಿತಿಮತಿ ನಗರದ ದೇವಸ್ಥಾನದ ಹತ್ತಿರ ಹಿಂದಿನಿಂದ   ಜೀಪವೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಪಿವುಲ್ಲಾ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಸಫಿವುಲ್ಲಾ ಹಾಗು ಅವರ ಪತ್ನಿ ಬೈಕಿನಿಂದ ಬಿದ್ದು ಗಾಯಗೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.