Thursday, February 1, 2018

ಲಾರಿ ಅಪಘಾತ
                    ಪಿರಿಯಾಪಟ್ಟಣ ತಾಲೋಕು ಅರೆನಹಳ್ಳಿ ಗ್ರಾಮದವರಾದ ಶಿವಣ್ಣ ಎಂಬವರು ದಿನಾಂಕ 31-1-2018 ರಂದು ಬೆಳಗ್ಗೆ 5-45 ಗಂಟೆ ಸಮಯದಲ್ಲಿ ಅವರ ಗ್ರಾಮದ ಶಿವಣ್ಣ, ಜಗದೀಶ, ಮಹೇಶ ಹಾಗು ಲಾರಿ ಚಾಲಕ ಅಬ್ದುಲ್ ಹಮೀದ್ ರವರ ಜೊತೆ ಲೋಡ್ ಕೆಲಸಕ್ಕೆ ಬಂದು ಲಾರಿಯಲ್ಲಿ ಕೊಂಡಂಗೇರಿ ಅಮ್ಮತ್ತಿ ಕಡೆಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿದ್ದಾಗ ಪುಲಿಯೇರಿ ಗ್ರಾಮದ ಆನಂದಪುರ ರಸ್ತೆಯಲ್ಲಿ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಲಾರಿ ರಸ್ತೆ ಬದಿಯ ಕಾಫಿ ತೋಟದೊಳಗೆ ಮಗುಚಿ ಬಿದ್ದ ಪರಿಣಾಮವಾಗಿ ಲಾರಿಯಲ್ಲಿದ್ದ ಫಿರ್ಯಾದಿ ಶಿವಣ್ಣ , ಜಗದೀಶ ಹಾಗು ಮಹೇಶರವರು ಗಾಯಗೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎಟಿಎಮ್ ಪಿನ್ ಪಡೆದು ಹಣ ವಂಚನೆ
               ಮಡಿಕೇರಿ ನಗರದ ಸಂಪಿಕೆ ಕಟ್ಟೆ ನಿವಾಸಿ ಎಂ.ಪಿ. ಯೋಗಾನಂದ ಎಂಬವರಿಗೆ ದಿನಾಂಕ 20-1-2018 ರಂದು ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ತಾನು ಎಸ್.ಬಿ.ಐ. ಬ್ಯಾಂಕಿನ ಅಧಿಕಾರಿ ಎಂದು ಹೇಳಿ ಎ.ಟಿ.ಎಂ. ಕಾರ್ಡಿನ ಮಾಹಿತಿಯನ್ನು ಪಡೆದುಕೊಂಡು ಸದರಿ ಎಂ.ಪಿ. ಯೋಗಾನಂದನವರ ಬ್ಯಾಂಕ್ ಖಾತೆಯಿಂದ ದಿನಾಂಕ 20-1-2018 ರಿಂದ 26-1-2018ರ ಅವಧಿಯಲ್ಲಿ 3,45,900/0 ರೂ.ಗಳನ್ನು ಡ್ರಾ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಸಾವು
                 ಮಡಿಕೇರಿ ತಾಲೋಕು ಚಿಕ್ಲಿಹೊಳೆ ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಗಂಗೆ ರವರ ಗಂಡ ರಾಜು ಮತ್ತು ಮುರುಗೇಶ್ ರವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮುರುಗೇಶ್ ರವರು ರಾಜುರವರ ಮೇಲೆ ಹಲ್ಲೆ ನಡೆಸಿದ್ದು, ರಾಜುರವರು ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ರಾಜುರವರು ದಿನಾಂಕ 31-1-2018 ರಂದು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಕಾರು ಡಿಕ್ಕಿ
                         ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದ ನಿವಾಸಿ ಎಂ.ಆರ್. ಬೆಳ್ಳ್ಯಪ್ಪ ರವರ ತಂದೆ ರಾಮಕೃಷ್ಣ ಎಂಬುವರು ತಮ್ಮ ಬಾಪ್ತ ಹೋಂಡಾ ಆಕ್ಟೀವಾ ಸ್ಕೂಟರ್ ಸಂಖ್ಯೆ ಕೆಎ-12-ಆರ್-7968 ರಲ್ಲಿ ವಿರಾಜಪೇಟೆಯಿಂದ ಬೊಳ್ಳುಮಾಡುವಿಗೆ ಹೋಗುತ್ತಿದ್ದು, ಕುಕ್ಲೂರು ಗ್ರಾಮದ ಸೆಂಟ್ ಜಾನ್ಸ್ ಇಂಡಸ್ಟ್ರೀಸ್ ಬಳಿ ಎದುರುನಿಂದ ಬಂದ ಕೆಎ-04-ಎಂಎ-4356 ರ ಮಾರುತಿ 800 ಕಾರಿನ ಚಾಲಕಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮಕೃಷ್ಣ ಓಡಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಡಪಸಿದ ಪರಿಣಾಮ ರಾಮಕೃಷ್ಣ ರವರು ಗಾಯಗೊಂಡು ವಾಹನವು ಸಹ ಜಖಂಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ಬೆದರಿಕೆ
                ದಿನಾಂಕ 31-01-2018 ರಂದು ಗೋಣೀಕೊಪ್ಪ ಠಾಣಾ ಸರಹದ್ದಿಗೆ ಸೇರಿದ ಬಾಳಾಜಿ ಗ್ರಾಮದ ನಿವಾಸಿ ಕಾವ್ಯ ಎಂಬುವವರು ಕೆರೆಯ ಏರಿಯಲ್ಲಿ ಕುಳಿತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಮುತ್ತಣ್ಣ ಮತ್ತು ತಿಮ್ಮಯ್ಯನವರು ಕಾವ್ಯರವರಿಗೆ ದೊಣ್ಣೆಯಿಂದ ಹೊಡೆಯಲು ಪ್ರಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾವ್ಯ ರವರು ನೀಡದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ 
              ದಿನಾಂಕ 31-01-2018 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಮರಿಸ್ವಾಮಿ ಮತ್ತು ಸಿಬ್ಬಂದಿಯವರು ಬೆಸೂರು ಗ್ರಾಮದ ನ್ಯಾಯದಹಳ್ಳಿ ಸೇತುವೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಡುತ್ತಿದ್ದ 5 ಜನ ಆರೋಪಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 1200 ರೂ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.