Saturday, February 10, 2018

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ 
            ದಿನಾಂಕ 9-2-2018 ರಂದು ಸೋಮವಾರಪೇಟೆ ನಗರದ ಜನತಾ ಕಾಲೋನಿಯ ನಿವಾಸಿ ಹರ್ಷಿತ್ ಎಂಬುವವರು ಬಜೆಗುಂಡಿಯ ಕುಸುಬೂರು ಗ್ರಾಮದ ದೇವಸ್ಥಾನದ ಹತ್ತಿರ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಕಾರಿನಲ್ಲಿ ಹಿಂದಿನಿಂದ ಬಂದ ಭರತ್, ಅಭಿ, ರಾಜೇಶ್ ಮತ್ತು ಇನ್ನಿಬ್ಬರು ಸ್ಕೂಟರಿನ ಹಿಂಭಾಗಕ್ಕೆ ಕಾರನ್ನು ಡಿಕ್ಕಿಪಡಿಸಿದ್ದು, ಹರ್ಷಿತ್ ರವರು ಕೆಳಗೆ ಬಿದ್ದಾಗ ಕಾರಿನಲ್ಲಿದ್ದವರು ರಾಡು ಮತ್ತು ದೊಣ್ಣೆಗಳಿಂದ ಹರ್ಷಿತ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕಣ ದಾಖಲಾಗಿರುತ್ತದೆ.

ವಾಹನ ಅಪಘಾತ
              ದಿನಾಂಕ 8-2-2018 ರಂದು ಕುಶಾಲನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರದ ನಿವಾಸಿಯಾದ ಗೌರೀಶ್ ಎಂಬುವವರು ಮೋಟಾರು ಸೈಕಲಿನ ಹಿಂಬದಿಯಲ್ಲಿ ಯಶವಂತ್ ಎಂಬುವವರನ್ನು ಕೂರಿಸಿಕೊಂಡು ಹೋಗುತ್ತಿರುವಾಗ ಪಕ್ಕದ ರಸ್ತೆಯಿಂದ ಮಾರುತಿ 800 ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದು, ಗೌರೀಶ್ ಮತ್ತು ಯಶವಂತರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ಸಾವು
            ದಿನಾಂಕ 8-2-2018 ರಂದು ವಿರಾಜಪೇಟೆ ತಾಲೂಕಿನ ಈಚೂರು ಗ್ರಾಮದ ನಿವಾಸಿಯಾದ ಅಯ್ಯಪ್ಪ ಎಂಬುವವರು ಮನೆಯಿಂದ ಪೊನ್ನಂಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ವಾಪಾಸ್ಸು ಬಾರದೇ ಇದ್ದು, ನಂತರ ದಿನಾಂಕ   9-2-2018 ರಂದು ಈಚೂರು ಗ್ರಾಮದ ಪೂವಯ್ಯನವರ ಕೆರೆಯಲ್ಲಿ ಅಯ್ಯಪ್ಪನವರ ಮೃತ ಶರೀರ ತೇಲುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಮೃತನ ಪತ್ನಿ ರಮ್ಯರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.