Friday, February 9, 2018


ಅಕ್ರಮ ಮದ್ಯ ಮಾರಾಟ
                     ದಿನಾಂಕ 18-02-2018 ರಂದು ಕುಟ್ಟ ಠಾಣಾಧಿಕಾರಿಯವರಾದ ಡಿ ಕುಮಾರ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಕೆ ಬಾಡಗ ಗ್ರಾಮದ ನಾಣಚ್ಚಿ ಎಂಬಲ್ಲಿ ರಾಮುರವರು ತನ್ನ ಅಂಗಡಿಯ ಪಕ್ಕದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಜಾಗಕ್ಕೆ ದಾಳಿ ಮಾಡಿ ರಾಮುರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವಾಹನ ಅಪಘಾತ

                   ದಿನಾಂಕ 7-02-2018 ರಂದು ಗೋಣೀಕೊಪ್ಪಲುವಿನ ನಿವಾಸಿ ರಘುನಾಥ ಎಂಬುವವರು ತನ್ನ ಪತ್ನಿ ಭಾಗ್ಯಲಕ್ಷ್ಮಿ ಎಂಬುವವರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಮೈಸೂರಿಗೆ ಹೋಗಿ ವಾಪಾಸು ಬರುತ್ತಿರುವಾಗ ರಾತ್ರಿ 8-30 ಗಂಟೆಗೆ ದೇವರಪುರ ಎಂಬಲ್ಲಿಗೆ ತಲುಪುವಾಗ ಎದುರುಗಡಯಿಂದ ತಿತಿಮತಿಯ ನಿವಾಸಿ ಮಂಜು ಎಂಬುವವರು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿಪಡಿಸಿ ಮಂಜುರವರು ಗಾಯಗೊಂಡಿದ್ದು ರಘುನಾಥರವರ ಪತ್ನಿಯೂ ಸಹಾ ಗಾಯಗೊಂಡಿದ್ದು ಈ ಬಗ್ಗೆ ರಘುನಾಥರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೀಟೆ ಮರ ಕಳವು
                      ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಚೆನ್ನಯ್ಯನಕೋಟೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಕಾಫಿ ತೋಟದಲ್ಲಿದ್ದ 20,000 ರೂ ಬೆಲೆಬಾಳುವ ಬೀಟೆ ಮರವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಸೋಮಯ್ಯನವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ಸುಗಳ ಮುಖಾಮುಖಿ ಡಿಕ್ಕಿ
                     ದಿನಾಂಕ 8-02-2018 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಮುಖ್ಯ ರಸ್ತೆಯಲ್ಲಿ ಶಾಂತಿಗಿರಿ ಎಸ್ಟೇಟ್ ಹತ್ತಿರ ತಿರುವು ರಸ್ತೆಯಲ್ಲಿ ಎರಡು ಕೆ.ಎಸ್.ಆ.ಟಿ.ಸಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕರಿಬ್ಬರೂ ಮೃತಪಟ್ಟಿದ್ದು ಬಸ್ಸಿನಲ್ಲಿದ್ದ ಸುಮಾರು 15 ರಿಂದ 20 ಜನ ಪ್ರಯಾಣಿಕರಿಗೆ ಗಾಯಗಳಾಗಿರುತ್ತದೆ. ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಬಸ್ಸಿನ ಚಾಲಕನು ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಅಜಾಗರೂಕತೆಯಿಂದ ಬಸ್ಸನ್ನು ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ್ದು, ಚಾಲಕರಾದ ಮೊಯಿದೀನ್ ಶರೀಫ್ ಮತ್ತು ಪಾಲಾಕ್ಷ ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಬೆದರಿಕೆ ಪ್ರಕರಣ
                        ದಿನಾಂಕ 08/02/2018ರಂದು ಶ್ರೀಮಂಗಲ ಬಳಿಯ ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಕುಂಞಂಗಡ ನಟೇಶ್‌ ಎಂಬವರು ತೋಟದ ಬಳಿ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಕುಂಞಂಗಡ ನಾಣಯ್ಯ ಎಂಬವರು ಅತೀವ ಮದ್ಯಪಾನ ಮಾಡಿ ಬಂದು ಮದ್ಯದ ಅಮಲಿನಲ್ಲಿ ನಟೇಶ್‌ರವರನ್ನು ಕೊಲೆ ಮಾಡುವುದಾಗಿ ಕೋವಿ ತೋರಿಸಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗಡಿಗೆ ಬೆಂಕಿ
                          ದಿನಾಂಕ 07/02/2018ರಂದು ಗೋಣಿಕೊಪ್ಪ ಬಳಿಯ ಹಾತೂರು ನಿವಾಸಿ ತೆರೆಸಾ ಎಂಬವರ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ಸಂಜೆ 7 ಗಂಟೆ ಸುಮಾರಿಗೆ ಕಾಳೇಂಗಡ ಮುತ್ತಪ್ಪ ಎಂಬವರು ತಿಳಿಸಿದ್ದು ತೆರೆಸಾರವರು ಸ್ಥಳಕ್ಕೆ ತೆರಳಿದಾಗ ಅಂಗಡಿಗೆ ಬೆಂಕಿ ಬಿದ್ದು ಸುಮಾರು ರೂ. 40,000/- ದಷ್ಟು ನಷ್ಟ ಉಂಟಾಗಿದ್ದು ಅಂಗಡಿಯ ಪಕ್ಕದ ನಿವಾಸಿ ಸಿ.ಡಬ್ಲ್ಯು ಪೂಣಚ್ಚ ಎಂಬವರು ಈ ಕೃತ್ಯ ಎಸಗಿರಬಹುದಾಗಿ ಶಂಕಿಸಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.