Saturday, March 31, 2018

ಅಕ್ರಮ ಮದ್ಯ ಮಾರಾಟ ವ್ಯಕ್ತಿಯ ಬಂಧನ 
               ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ನಗರದಲ್ಲಿ ವಿನು ಎಂಬುವವರು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 30-3-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರು ಸಿಬ್ಬಂದಿಯವರೊಂದಿಗೆ ಮನೆಗೆ ದಾಳಿ ಮಾಡಿ ಮಾರಾಟ ಮಾಡಲು ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಕೇರಳ ರಾಜ್ಯದ ಲಾಟರಿ ಟಿಕೆಟ್ ವಶ 
              ವಿರಾಜಪೇಟೆ ನಗರದ ಗೋಣಿಕೊಪ್ಪ ರಸ್ತೆಯ ಟೆಂಡರ್ ಕೋಳಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದದಲ್ಲಿ ಇಬ್ಬರು ವ್ಯಕ್ತಿಗಳು ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 30-3-2018 ರಂದು ವಿರಾಜಪೇಟೆ ನಗರ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಕಶ್ಯಪ್ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದವರಾದ ನಂದು ಬಾಲಕೃಷ್ಣ ಮತ್ತು ಶ್ರೀಲೇಶ್ ರವರನ್ನು ಬಂಧಿಸಿ ಲಾಟರಿ ಟಿಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
            ವ್ಯಕ್ತಿಯೊಬ್ಬರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದಲ್ಲಿ ವರದಿಯಾಗಿದೆ. ಕಿಗ್ಗಾಲು ಗ್ರಾಮದ ನಿವಾಸಿಯಾದ ಪ್ರಕಾಶ್, ಮಣಿ ಹಾಗೂ ಕರಿಯರವರು ಮಾತನಾಡಿಕೊಂಡಿರುವಾಗ ಅಲ್ಲಿಗೆ ಪ್ರಕಾಶ್ ರವರ ತಂಗಿಯ ಗಂಡ ಮುತ್ತಪ್ಪನವರು ಹೋಗಿ ಪ್ರಕಾಶ್ ರವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ತಡೆಯಲು ಹೋದ ಮಣಿ ಹಾಗೂ ಕರಿಯರವರ ಮೇಲೆ ಸಹಾ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ಪ್ರಕಾಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
          ದಿನಾಂಕ 30-3-2018 ರಂದು ಕುಶಾಲನಗರದ ನಿವಾಸಿ ನಿತಿನ್ ಎಂಬುವವರು ತನ್ನ ರಾಯಲ್ ಎನ್ ಫೀಲ್ಡ್ ಮೋಟಾರು ಸೈಕಲಿನಲ್ಲಿ ಪುತ್ತೂರಿಗೆ ಹೋಗುತ್ತಿರುವಾಗ ಮಡಿಕೇರಿ ಮಂಗಳೂರು ರಸ್ತೆಯ ತಿರುವಿನಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ರಾಮಾಂಜನೇಯ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ನಿತಿನ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
          ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೂಕಿನ ದೊಡ್ಡಭಂಡಾರ ಗ್ರಾಮದಲ್ಲಿ ವರದಿಯಾಗಿದೆ. ದೊಡ್ಡಭಂಡಾರ ಗ್ರಾಮದ ನಿವಾಸಿ ವೇಣುರಾಜ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 25-03-2018 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರನ್ನು ಚಿಕಿತ್ಸೆಯ ಬಗ್ಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-3-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಸ್ಕೂಟರಿಗೆ ಕಾರು ಡಿಕ್ಕಿ 
        ದಿನಾಂಕ 30-3-2018 ರಂದು ಶನಿವಾರಸಂತೆಯ ಹೊನ್ನೇಕೊಪ್ಪಲು ಗ್ರಾಮದ ನಿವಾಸಿಯಾದ ರಮೇಶರವರು ಶನಿವಾರಸಂತೆಯಿಂದ ಸ್ಕೂಟರಿನಲ್ಲಿ ವಸಂತರವರನ್ನು ಕೂರಿಸಿಕೊಂಡು ಮನೆಗೆ ಹೋಗುತ್ತಿರುವಾಗ ಚಿಕ್ಕಕೊಳತ್ತೂರು ಗ್ರಾಮದ ಕೂನಕಂಡಿ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಮಾರುತಿ ವ್ಯಾನನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ರಮೇಶ ಮತ್ತು ವಸಂತರವರಿಗೆ ಗಾಯವಾಗಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, March 30, 2018

ವಂಚನೆ ; ವ್ಯಕ್ತಿಯ ಬಂಧನ
                          ಸರ್ಕಾರಿ ಅಧಿಕಾರಿ ಎಂಬುದಾಗಿ ಸುಳ್ಳು ಹೇಳಿ ಸರ್ಕಾರಿಅಧಿಕಾರಿಗೆ ವಂಚಿಸಿ ಸವಲತ್ತನ್ನು ಪಡೆದುಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 

                          ದಿನಾಂಕ 28-03-2018 ರಂದು ಸೌಮ್ಯ ರಂಜನ್ ಮಿಶ್ರ ಎಂಬ ವ್ಯಕ್ತಿಯು ಮೈಸೂರಿನ ಮಹಾನಗರ ಪಾಲಿಕೆಯ ಕಮಿಷನರ್ ರವರಿಗೆ ಕರೆ ಮಾಡಿ ತಾನು ಮುಂಬೈ ರೆವಿನ್ಯೂ ಇಲಾಖೆಯ ರೀಜನಲ್ ಕಮಿಷನರ್ ಎಂದು ಪರಿಚಯಿಸಿಕೊಂಡು ಅವರಿಂದ ಜಿಲ್ಲೆಯ ವಿರಾಜಪೇಟೆಗೆ ಹೋಗಲು ಒಂದು ವಾಹನವನ್ನು ಪಡೆದುಕೊಂಡಿದ್ದು ವಿರಾಜಪೇಟೆಯ ಅಂಬಟ್ಟಿ ಗ್ರೀನ್ಸ್ ರೆಸಾರ್ಟಿಗೆ ಬಂದು ತಂಗಿರುವುದಾಗಿದೆ. ನಂತರ ಈ ವ್ಯಕ್ತಿಯು ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳ ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಇಂಟರ್ನೆಟ್ ಮೂಲಕ ಪಡೆದು ವಿರಾಜಪೇಟೆ ಡಿವೈ.ಎಸ್.ಪಿ. ನಾಗಪ್ಪರವರಿಗೆ ಹಾಗು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಕುಮಾರ ಆರಾಧ್ಯ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಬಸವರಾಜುರವರುಗಳಿಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿ ಅವರಿಗೂ ಸಹ ತಾನು ಮುಂಬೈ ರೆವಿನ್ಯೂ ಇಲಾಖೆಯ ರೀಜನಲ್ ಕಮಿಷನರ್ ಎಂದು ಪರಿಚಯಿಸಿಕೊಂಡು ತಾನು ವಿರಾಜಪೇಟೆಯ ಅಂಬಟ್ಟಿ ಗ್ರೀನ್ಸ್ ರೆಸಾರ್ಟಿನಲ್ಲಿ ತಂಗಿದ್ದು ತನಗೆ ಕೊಡಗಿನಲ್ಲಿ ತಿರುಗಾಡುವುದಕ್ಕೆ ಒಬ್ಬ ಪೊಲೀಸ್ ಗನ್ ಮ್ಯಾನ್ ಬೇಕೆಂದು ಕೇಳಿದ್ದಾನೆ. ಮಾತ್ರವಲ್ಲದೆ ಕೊಡಗಿನ ಜಿಲ್ಲಾಧಿಕಾರಿ ಶ್ರೀಮತಿ ಪಿ.ಐ. ಶ್ರೀವಿದ್ಯಾ, ಐ.ಎ.ಎಸ್., ಹಾಗು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರಿಗೂ ಸಹಾ ಕರೆ ಮಾಡಿ ಮಾತನಾಡಿ ಸರಕಾರದ ಸವಲತ್ತು ಪಡೆಯಲು ಯತ್ನಿಸಿದ್ದಾನೆ.

                            ಈತನ ನಡವಳಿಕೆಯಿಂದ ಅನುಮಾನಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ರವರು ಈತನ ಕೂಲಂಕುಶವಾಗಿ ವಿಚಾರಿಸುವಂತೆ ವಿರಾಜಪೇಟೆ ಉಪ ವಿಭಾಗದ ಡಿಎಸ್ಪಿ ನಾಗಪ್ಪರವರಿಗೆ ನಿರ್ದೇಶನಗಳನ್ನು ನೀಡಿದ್ದು ಅದರಂತೆ ದಿನಾಂಕ 29-03-2018 ರಂದು ಸಂಜೆ 4-00 ಗಂಟೆಗೆ ವಿರಾಜಪೇಟೆ ಉಪವಿಭಾಗದ ಡಿಎಸ್‌ಪಿನಾಗಪ್ಪರವರ ನೇತೃತ್ವದಲ್ಲಿ ಸಿ.ಪಿ.ಐ. ಕುಮಾರ ಆರಾಧ್ಯ, ಪಿ.ಎಸ್.ಐ. ಬಸವರಾಜುರವರು ಅಂಬಟ್ಟಿ ಗ್ರೀನ್ಸ್ ರೆಸಾರ್ಟಿಗೆ ಹೋಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನು ಸೌಮ್ಯ ರಂಜನ್ ಮಿಶ್ರ ತಂದೆ ರಾಧಾಕಾಂತ್ ಮಿಶ್ರ, 32 ವರ್ಷ, ಬ್ರಾಹ್ಮಣರು, ಸ್ವಂತ ಊರು ಸುಕಿಗೋಪಾಲ್ ತಾಲೂಕು, ಬೀರಾರಾಂ ಚಂದ್ರಪುರ್ ಗ್ರಾಮ, 1ನೇ ಖಂಡಿ, ಪುರಿ ಜಿಲ್ಲೆ, ಓಡಿಶಾ ರಾಜ್ಯ ಎಂದು ತಿಳಿದು ಬಂದಿರುತ್ತದೆ.
 
                       ಸೌಮ್ಯ ರಂಜನ್ ಮಿಶ್ರಾನು ಎಂ.ಸಿ.ಎ. ಪದವೀಧರನಾಗಿದ್ದು ಈ ಹಿಂದೆ ಎಂಪ್ಲಾಯಿಮೆಂಟ್ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಗುತ್ತಿಗೆ ಆಧಾರದಲ್ಲಿ ಆಗಿ ಕೆಲಸ ಮಾಡುತ್ತಿದ್ದು ತನಗೆ ಇಲಾಖಾ ಅಧಿಕಾರಿಯಂತೆ ನಟಿಸಿ ಸವಲತ್ತುಗಳನ್ನು ಕೇಳಿದರೆ ತಕ್ಷಣ ಸಿಗುವುದೆಂದು ಈ ರೀತಿ ರೀಜನಲ್ ಕಮಿಷನರ್ ಎಂದು ಸುಳ್ಳು ಹೇಳಿರುವುದಾಗಿ ತಿಳಿಸಿರುತ್ತಾನೆ.

                 ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ವಾಹನವನ್ನು ಕಾನೂನು ಬಾಹಿರವಾಗಿ ಉಪಯೋಗಿಸಿಕೊಂಡು ವಂಚನೆ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ.76/2018 ಕಲಂ.170, 419, 420 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೌಮ್ಯ ರಂಜನ್ ಮಿಶ್ರಾನನ್ನು ದಸ್ತಗಿರಿ ಮಾಡಲಾಗಿದೆ.

                   ಈ ರೀತಿ ಸುಳ್ಳು ಹೇಳಿ ಸರಕಾರಿ ನೌಕರರಿಗೆ ಹಾಗು ಇತರೆ ಸಾರ್ವಜನಿಕರಿಗೆ ಮೋಸ ಮಾಡುವ ಜನರ ಬಗ್ಗೆ ಸಾರ್ವಜನಿಕರು, ವಿದ್ಯಾಥರ್ಿಗಳು ಮತ್ತು ಮಹಿಳೆಯರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕೆಂದು ಕೊಡಗು ಜಿಲ್ಲಾಧಿಕಾರಿಗಳು ಹಾಗು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
   
ವಾಹನ ಅಪಘಾತ
                    ದಿನಾಂಕ 28/03/2018ರಂದು ಮಂಗಳೂರು ನಿವಾಸಿ ಶಾಂತಾ ಎಂಬವರು ಅವರ ಪತಿ ಮೋಹನ್ ಮತ್ತು ಮಗ ಧ್ಯಾನ್ ತಮ್ಮಯ್ಯ ಎಂಬವರೊಂದಿಗೆ ಕೆಎ-51-ಜೆಡ್-2579ರ ಬೊಲೆರೋ ವಾಹನದಲ್ಲಿ ಮಂಗಳೂರಿನಿಂದ ಗೋಣಿಕೊಪ್ಪಲಿನ ಕಡೆಗೆ ಹೋಗುತ್ತಿರುವಾಗ ನಗರದ ಉಮಾ ಮಹೇಶ್ವರಿ ದೇವಸ್ಥಾನದ ಬಳಿ ಎದುರಿನಿಂದ ಕೆಎ-01-ಎಎಫ್-8217ರ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಾಂತಾರವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಾಂತಾರವರ  ಕುಟುಂಬ ಮತ್ತು ಬಸ್ಸಿನಲ್ಲಿದ್ದ ಅಜಿತ್ ಮತ್ತು ವಿಜಯ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯಪಾನ, ಮೂವರ ಬಂಧನ
                       ದಿನಾಂಕ 29/03/2018ರಂದು ಕುಶಾಲನಗರದ ಜಾತ್ರಾ ಮೈದಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಿರಿಯಾಪಟ್ನದ ಅಜಯ್, ಸತಿಶ್ ಮತ್ತು ಕುಶಾಲನಗರದ ಲಕ್ಷ್ಮಣ್ ಎಂಬವರು ಕಾನೂನು ಬಾಹಿರವಾಗಿ ಅಕ್ರಮವಾಗಿ ಮದ್ಯಪಾನ ಮಾಡುತ್ತಿದ್ದ  ಪ್ರಕರಣವನ್ನು ಪತ್ತೆ ಹಚ್ಚಿದ ಕುಶಾಲನಗರ ಪಟ್ಟಣ ಠಾಣೆಯ ಪಿಎಸ್‌ಐ ಪಿ.ಜಗದೀಶ್‌ರವರು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ 
                  ದಿನಾಂಕ 29/03/2018ರಂದು ನಾಪೋಕ್ಲು ಬಳಿಯ ನೆಲಜಿ ನಿವಾಸಿ ಶೈಲಾ ಎಂಬ ಮಹಿಳೆಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ವಿಪರೀತ ಮದ್ಯಪಾನ ಮಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                   ದಿನಾಂಕ 28/03/2018ರಂದು ಮಡಿಕೇರಿ ನಗರದ ಸುಬ್ರಮಣ್ಯ ರಸ್ತೆ ನಿವಾಸಿ ಸುಬ್ರಮಣಿ ಎಂಬವರು ಸುಬ್ರಮಣ್ಯ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಪಿ-8520ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ರಮಣಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 29, 2018

ಪತಿಯಿಂದ ಪತ್ನಿ ಕೊಲೆ:
 
     ಕೌಟುಂಬಿಕ ಜಗಳದಿಂದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹುಂಡಿ ಬಾಡಗಬಾಣಂಗಾಲ ಗ್ರಾಮದಲ್ಲಿ ನಡೆದಿದೆ.  ಹುಂಡಿ ಬಾಡಗಬಾಣಂಗಾಲ ಗ್ರಾಮದ ಜೆ.ಕೆ. ರಾಜು @ ಸಣ್ಣಕೂಸು ಎಂಬವರು ದಿನಾಂಕ 27-3-2018 ರಂದು 9-30 ಗಂಟೆ ಸಮಯದಲ್ಲಿ ಕೌಟುಂಬಿಕ ವಿಚಾರದಲ್ಲಿ ಜಗಳ ಮಾಡಿ ತನ್ನ ಪತ್ನಿ ಶ್ರೀಮತಿ ಪದ್ಮಾ ಎಂಬವರ ಮೇಲೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ:
 
     ಎದೆನೋವಿನಿಂದ ಬಳಲುತ್ತಿದ್ದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಮಡಿಕೇರಿ ತಾಲೋಕು  ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.  ಎಮ್ಮೆಮಾಡು ಗ್ರಾಮದ ನಿವಾಸಿ ಕೆ.ಎಂ. ದಾವೋದ್ ಎಂಬವರ ಪುತ್ರಿ 18 ವರ್ಷ ಪ್ರಾಯದ ಸಜೀನ ಎಂಬವರು ಕೆಲವು ಸಮಯದಿಂದ ಎದೆನೋವಿನಿಂದ ಬಳಲುತ್ತಿದ್ದು ಇದರಿಂದ ಜಿಗುಪ್ಸೆಕೊಂಡ ಆಕೆ ದಿನಾಂಕ 28-3-2018 ರಂದು 12-30 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ವ್ಯಕ್ತಿ ಮೇಲೆ ಹಲ್ಲೆ:
 
     ಶನಿವಾರಸಂತೆ ಠಾಣಾ ಸರಹದ್ದಿನ ಚಿಕ್ಕಬಂಡಾರ ಗ್ರಾಮದ ನಿವಾಸಿ ಚಿಕ್ಕಯ್ಯ ಎಂಬವರು ದಿನಾಂಕ 28-3-2018 ರಂದು 12-00 ಗಂಟೆ ಸಮಯದಲ್ಲಿ ಬೆಸೂರು ಗ್ರಾಮ ಪಂಚಾಯ್ತಿ ಪಿ.ಡಿ.ಒ.ರವರಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ ಎಂಬವರು ಚಿಕ್ಕಯ್ಯನವರನ್ನು ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಕೆನ್ನೆಗೆ ಹಲ್ಲೆ ಮಾಡಿ ನೋವು ಪಡಿಸಿದ್ದು ಅಲ್ಲದೆ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಕಾರು ಟಿಂಬರ್ ಲಾರಿಗೆ ಡಿಕ್ಕಿ, ಒಬ್ಬನ ಸಾವು:
 
     ದಿನಾಂಕ 28-3-2018 ರಂದು ಸಂಜೆ 7-20 ಗಂಟೆ ಸಮಯದಲ್ಲಿ ಸುಬ್ರಮಣಿ, ಅರುಣ್ಯ ಪಾಂಡ್ಯನ್,  ಅಮನ್ ಅನಸ್ ಆರ್. ಮತ್ತು ಅಮೀರ್ ಬಾಷಾ ಎಂಬವರುಗಳು ಟಿ.ಎನ್. 11-ಡಿ-1474ರ ಕಾರಿನಲ್ಲಿ ಮಡಿಕೇರಿಯಿಂದ ಪಿರಿಯಾಪಟ್ಟಣದ ಕಡೆಗೆ ಹೋಗುತ್ತಿದ್ದಾಗ ಕಾರನ್ನು ಚಾಲನೆ ಮಾಡುತ್ತಿದ್ದ ಸುಬ್ರಮಣಿರವರು ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿ ಮುಂದುಗಡೆ ರಸ್ತೆಯಲ್ಲಿ ಹೋಗುತ್ತಿದ್ದ ಮರ ತುಂಬಿದ ಲಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ದ್ದ ಚಾಲಕ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ಕುಶಾಲನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಅರುಣ್ಯ ಪಾಂಡ್ಯನ್ ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಅಕ್ರಮ ಜೂಜು ಪ್ರಕರಣ ದಾಖಲು:
 
     ಅಕ್ರಮವಾಗಿ ಜುಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ,  ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆದಾರದ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣಾ ಪಿಎಸ್ ಐ ಆರ್. ಮಂಚಯ್ಯನವರು ಸಿಬ್ಬಂದಿಯೊಂದಿಗೆ ದಿನಾಂಕ 27-3-2018 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ  ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯ ಬಾಣೆಯಲ್ಲಿ ಅಕ್ರಮವಾಗಿ 6 ಜನರ ಗುಂಪು ಜೂಜಾಟ ನಡೆಸುತ್ತಿದ್ದುದನ್ನು ಪತ್ತೆಹಚ್ಚಿ ಅವರ  ಮೇಲೆ ದಾಳಿ ಮಾಡಿ ಆಟಕ್ಕೆ ಬಳಸಿದ ರೂ.1570/- ಗಳನ್ನು, ಜೂಜಾಟಕ್ಕೆ ಬಳಸಿದಇಸ್ಪೀಟ್ ಎಲೆ ಮತ್ತು ಇತರೆ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
 
 

Wednesday, March 28, 2018

ಅಕ್ರಮ ಮದ್ಯ ಮಾರಾಟ 
                 ವಿರಾಜಪೇಟೆ ತಾಲೂಕಿನ ಕಿರಗೂರು ಗ್ರಾಮದ ಗೋಪಾಲ ಎಂಬುವವರು ತನ್ನ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 27-3-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರು ಸಿಬ್ಬಂದಿಯವರೊಂದಿಗೆ ಅಂಗಡಿಗೆ ದಾಳಿ ಮಾಡಿ ಮಾರಾಟ ಮಾಡಲು ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
                 ದಿನಾಂಕ 26-3-2018 ರಂದು ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿಯಾದ ಪ್ರಸಾದ್ ರವರು ತಮ್ಮ ಗದ್ದೆಯ ಬಳಿ ಹಸುಗಳನ್ನು ಮೇಯಿಸುತ್ತಿದ್ದಾಗ ಅವರ ಕುಟುಂಬದವರಾದ ಅಯ್ಯಪ್ಪನವರ ಪತ್ನಿ ವೈಲಾರವರು ಅವರ ಹಸುಗಳನ್ನು ಕರೆತಂದು ಪ್ರಸಾದ್ ರವರ ಕೆರೆಯಲ್ಲಿ ನೀರು ಕುಡಿಸುತ್ತಿದ್ದು, ಇದೇ ವಿಚಾವಾಗಿ ವೈಲಾರವರು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲಿಗೆ ಬಂದ ಅಯ್ಯಪ್ಪ ಮತ್ತು ಜೀವನ್ ರವರು ಜಗಳ ತೆಗೆದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪ್ರಸಾದ್ ರವರು ದಿನಾಂಕ 27-3-2018 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಚಿನ್ನಾಭರಣ ಕಳವು 
                ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ನಿವಾಸಿಯಾದ ಕಾಳಪ್ಪ ಎಂಬುವವರು ತನ್ನ ತಂದೆ ತಾಯಿಯವರಿಗೆ ತುಂಬಾ ವಯಸ್ಸಾದ ಕಾರಣ ಅವರನ್ನು ನೋಡಿಕೊಳ್ಳಲು ಮೈಸೂರಿನ ಹೆಲ್ತ್ ಅಂಡ್ ವೆಲ್ನೆಸ್ ಕೇರ್ ಸರ್ವಿಸಸ್ (ರಿ) ಕಂಪೆನಿಯ ಮುಖಾಂತರ ಬೂದೇಶ್ ಎಂಬುವವರನ್ನು 20 ದಿವಸಗಳ ಹಿಂದೆ ನೇಮಿಸಿಕೊಂಡಿದ್ದು, ದಿನಾಂಕ 26-3-2018 ರಂದು ಕಾಳಪ್ಪರವರು ಕೆಲಸದ ನಿಮಿತ್ತ ಮಂಗಳೂರಿಗೆ ಪತ್ನಿ ಮಕ್ಕಳೋಂದಿಗೆ ಹೋಗಿದ್ದಾಗ ಮನೆಯಲ್ಲಿದ್ದ ಅಂದಾಜು 4,25,000 ರೂ ಮೌಲ್ಯ ಚಿನ್ನಾಭರಣ ಹಾಗೂ 20,000 ರೂ ನಗದು ಹಣವನ್ನು ಬೂದೇಶ್ ಎಂಬುವವನು ಕಳವು ಮಾಡಿರುವುದಾಗಿ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಹತ್ಯೆ 
                        ಮಡಿಕೇರಿ ತಾಲೋಕಿನ ಮೇಕೇರಿ ಗ್ರಾಮದ ಶಕ್ತಿ ನಗರದ ನಿವಾಸಿಯಾದ ಗಣೇಶ ಎಂಬುವವರು ಬಲಮುರಿ ಗ್ರಾಮದ ನಿವಾಸಿಯಾದ ಸೂರಜ್ ಎಂಬುವವರ ಟಿಪ್ಪರ್ ಲಾರಿಯಲ್ಲಿ ಐದು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳೆದ 5-6 ತಿಂಗಳಿಂದ ತನಗೆ ಬರಬೇಕಾದ ಕೂಲಿ ಹಣವನ್ನು ಲಾರಿ ಮಾಲಿಕ ಸೂರಜ್ ರವರನ್ನು ಕೇಳಿದ ಕಾರಣಕ್ಕೆ ಗಣೇಶರವರ ಮೇಲೆ ಸೂರಜ್ ರವರು ಹಲ್ಲೆ ನಡೆಸಿ ಗಲಾಟೆ ಮಾಡಿದ್ದು, ನಂತರ ಸೂರಜ್ ರವರು ಗಣೇಶರವರನ್ನು ಬಲತ್ಕಾರವಾಗಿ ಕೆಲಸಕ್ಕೆ ಪುನ: ಕರೆದುಕೊಂಡು ಹೋಗಿ, ದಿನಾಂಕ 26-3-2018 ರಂದು ಸದರಿ ಗಣೇಶರವರನ್ನು ಸೂರಜ್ ರವರು ಹಲ್ಲೆ ನಡೆಸಿ ಕೊಲೆ ಮಾಡಿ ಬಲಮುರಿ ಗ್ರಾಮದ ಕಾವೇರಿ ಹೊಳೆಯಲ್ಲಿ ಹಾಕಿರುವುದಾಗಿ ಮೃತರ ಪತ್ನಿ ಶ್ರೀಮತಿ ಕಮಲರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, March 27, 2018

ವ್ಯಕ್ತಿ ಕಾಣೆ ಪ್ರಕರಣ
                      ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಗಣೇಶ ಎಂಬವರು ದಿನಾಂಕ 24/03/2018ರಂದು ಕೂಲಿ ಕೆಲಸಕ್ಕೆಂದು ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                    ದಿನಾಂಕ 26/03/2018ರಂದು ಸೋಮವಾರಪೇಟೆ ಬಳಿಯ ಹೊಸತೋಟ ನಿವಾಸಿ  ಸುನಿಲ್ ಎಂಬವರ ಭಾವ ಅಶ್ವಥ್ ಎಂಬವರು ಕೆಎಲ್-59-ಎಂ-5270ರ ಬೈಕಿನಲ್ಲಿ ಸೋಮವಾರಪೇಟೆಯಿಂದ ಹೊಸತೋಟ ಕಡೆಗೆ ಹೋಗುತ್ತಿರುವಾಗ ಗರಗಂದೂರು ಬಳಿ ಎದುರಿನಿಂದ ಕೆಎ-03-ಸಿ-6971ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಶ್ವಥ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅಶ್ವಥ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                     ದಿನಾಂಕ 26/03/2018ರಂದು ಪೊನ್ನಂಪೇಟೆ ಬಳಿಯ ಜೋಡುಬೆಟ್ಟಿ ಬಳಿ ಅಲ್ಲಿನ ನಿವಾಸಿ ಅಜಿತ್ ಎಂಬವರು ಅವರ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಪೊನ್ನಂಪೇಟೆ ಠಾಣೆಯ ಎಎಸ್‌ಐ ಕೆ.ಕೆ.ಗಣಪತಿರವರು ಸ್ಥಳಕ್ಕೆ ತೆರಳಿದಾಗ ಆರೋಪಿ ಅಜಿತ್ ಓಡಿ ಹೋಗಿದ್ದು ಸ್ಥಳದಲ್ಲಿದ್ದ ಮದ್ಯದ ಪ್ಯಾಕೆಟುಗಳು ಮತ್ತು ಗ್ಲಾಸುಗಳನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 26/03/2018ರಂದು ವಿರಾಜಪೇಟೆ ಬಳಿಯ ಬೇತ್ರಿ ನಿವಾಸಿ ಉಣ್ಣಿಕೃಷ್ಣನ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಒಂಟಿಯಾಗಿ ಜೀವಿಸುತ್ತಿದ್ದ ಉಣ್ಣಿಕೃಷ್ಣನ್ ಒಂಟಿತನದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 26, 2018

 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ತಾಕೇರಿ ಗ್ರಾಮದಲ್ಲಿ ನಡೆದಿದೆ. ತಾಕೇರಿ ಗ್ರಾಮದ ನಿವಾಸಿ ಸುಬ್ಬಯ್ಯ (57) ಎಂಬವರು ಹಾಗು ಅವರ ಪತ್ನಿಯವರು ದಿನಾಂಕ 15-3-2018 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗಿದೆ ಸುಬ್ಬಯ್ಯನವರು ದಿನಾಂಕ 25-3-2018 ರಂದು ಸಾವನಪ್ಪಿದ್ದು, ಈ ಸಂಬಂಧ ಮೃತರ ಮಗ ಸ್ವಾಗತ್ ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ:

     ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗದ್ದೆಹಳ್ಳ ಗ್ರಾಮದ ನಿವಾಸಿ ಸುನೀಲ್ ಹಾಗು ಚಂದ್ರಶೇಕರ್ ಎಂಬವರು ಗದ್ದೆಹಳ್ಳದಲ್ಲಿ ಹೋಟೇಲ್ ನಡೆಸಿಕೊಂಡಿದ್ದು ಸದರಿ ಹೋಟೇಲಿನಲ್ಲಿ ಹೋಟೇಲ್ ಗ್ರಾಹಕರಿಗೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸುಂಟಿಕೊಪ್ಪ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ಎಸ್.ಎನ್. ಜಯರಾಮ್ ರವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಮರಳು ಸಾಗಾಟ:

     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ವಿ.ಚೇತನ್ ರವರು ದಿನಾಂಕ 25-3-2018 ರಂದು ರಾತ್ರಿ ಗಸ್ತು ಕರ್ವವ್ಯದಲ್ಲಿದ್ದಾಗ ಬಂದ ಮಾಹಿತಿ ಆದಾರದ ಮೇರೆಗೆ ಕೋಡಂಬೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೆಎ-12 ಬಿ-3611 ರ ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.


 


Sunday, March 25, 2018

ಅಕ್ರಮ ಮದ್ಯ ಮಾರಾಟ 
                ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದ ರಿನ್ನ @ ಅಯ್ಯಪ್ಪ ಎಂಬುವವರು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 24-3-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರು ಸಿಬ್ಬಂದಿಯವರೊಂದಿಗೆ ಮನೆಗೆ ದಾಳಿ ಮಾಡಿ ಮನೆಯಲ್ಲಿ ಮಾರಾಟ ಮಾಡಲು ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಮೊಬೈಲ್ ಕಳುವಿಗೆ ಯತ್ನ 
           ದಿನಾಂಕ 24-3-2018 ರಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಮೇಘನಾ ಎಂಬುವವರು ಬಿ.ಸಿ.ಎಂ ಹಾಸ್ಟೇಲ್ ನಿಂದ ತರಭೇತಿಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತೆ ಅಪೇಕ್ಷರವರೊಂದಿಗೆ ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ದಾಣದ ಹತ್ತಿರ ಇರುವ ಹಾಲಿನ ಡೈರಿಯ ಪಕ್ಕ ಕೈಯಲ್ಲಿ ಮೊಬೈಲನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರದ ನಿವಾಸಿ ರಂಜಿತ್ ಎಂಬುವವರು ಹಿಂದಿನಿಂದ ಹೋಗಿ ಕೈಯಿಂದ ಮೊಬೈಲನ್ನು ಕಿತ್ತುಕೊಂಡು ಓಡಲು ಪ್ರಯತ್ನಿಸಿದವನನ್ನು ಸಾರ್ವಜನಿಕರು ಹಿಡಿದಿದ್ದು, ಈ ಬಗ್ಗೆ ಮೇಘನಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮದ್ಯ ಮಾರಾಟ 
           ದಿನಾಂಕ 24-3-2018ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆನಂದರವರು ಗಸ್ತುವಿನಲ್ಲಿರುವಾಗ ಕೊಡ್ಲಿಪೇಟೆಯ ಜನಾರ್ಧನ ಹಳ್ಳಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಪಕ್ಕ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಅಲ್ಲಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ತಿಮ್ಮೇಗೌಡ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Saturday, March 24, 2018

ವ್ಯಕ್ತಿಯ ಆತ್ಮಹತ್ಯೆ 
                ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ವರದಿಯಾಗಿದೆ. ಬೆಸಗೂರು ಗ್ರಾಮದ ನಿವಾಸಿ ಬೊಳಕ ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ದಿನಾಂಕ 22-03-2018 ರಂದು ಮದ್ಯಪಾನ ಮಾಡಿ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳ ಮಾಡಿದ್ದು, ಪತ್ನಿ ಹೆದರಿ ಪಕ್ಕದ ಲೈನ್ ಮನೆಯಲ್ಲಿ ರಾತ್ರಿ ಇದ್ದು, ಬೆಳಿಗ್ಗೆ ನೋಡುವಾಗ ಬೊಳಕನು ಮನೆಯ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೊಳಕನು ವಿಪರೀತ ಮದ್ಯಪಾನ ಮಾಡಿದ ಮತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಪಣಿಯರವರ ಅಮ್ಮಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮದ್ಯ ಮಾರಾಟ 
                ವಿರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ಉತ್ತಯ್ಯ ಎಂಬುವವರು ಅಂಗಡಿಯ ಮುಂಭಾಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 23-3-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಉತ್ತಯ್ಯ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಕರಿಮೆಣಸು ಕಳ್ಳತನ 
                ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ವಿನಾಯಕ ಎಂಬುವವರಿಗೆ ಹಾಕತ್ತೂರಿನಲ್ಲಿ ಕಾಫಿ ಹಾಗೂ ಮೆಣಸಿನ ತೋಟವಿದ್ದು, ಸದರಿ ತೋಟದಲ್ಲಿ ಅಜೀಜ್ ಹಾಗೂ ಇತರರು ಸುಮಾರು 20 ದಿವಸಗಳಿಂದ ಕಾಳು ಮೆಣಸು ಕುಯ್ಯುತ್ತಿದ್ದು, ದಿನಾಂಕ 23-03-2018 ರಂದು ವಿನಾಯಕರವರು ತೋಟಕ್ಕೆ ಹೋಗಿ ನೋಡುವಾಗ ಬಳ್ಳಿಯಿಂದ ಅಂದಾಜು 1100 ಕೆ ಜಿ ಯಷ್ಟು ಹಸಿ ಮೆಣಸು ಕಳುವಾಗಿರುವುದು ಕಂಡುಬಂದಿದ್ದು, ಸದರಿ ಕಳ್ಳತನವನ್ನು ಕಾಳು ಮೆಣಸು ಕುಯ್ಯುತ್ತಿದ್ದವರೇ ಮಾಡಿರುವುದಾಗಿ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾರು ಅಪಘಾತ 
             ಕಾರು ಅಪಘಾತಗೊಂಡು ಪ್ರಯಾಣಿಕರು ಗಾಯಗೊಂಡ ಘಟನೆ ಕಾಟಕೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 23-03-2018 ರಂದು ಪುತ್ತೂರಿನ ನಿವಾಸಿಯಾದ ರಮೇಶಶೆಟ್ಟಿಯವರು ತಮ್ಮ ಕುಟುಂಬದವರೊಂದಿಗೆ ಸೋಮವಾರಪೇಟೆ ಹೋಗುತ್ತಿರುವಾಗ ಮಂಗಳೂರು ಮಡಿಕೇರಿ ರಸ್ತೆಯ ಕಾಟಕೇರಿ ಎಂಬಲ್ಲಗೆ ತಲುಪುವಾಗ ಕಾರನ್ನು ರಮೇಶಶೆಟ್ಟಿಯವರು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡ ಬದಿಯ ತಡೆಗೋಡೆಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಹೇಮರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ 
           ವಿರಾಜಪೇಟೆ ತಾಲೂಕಿನ ಶ್ರೀಮಂಗಲದ ನಿವಾಸಿ ಮುಖೇಶ್ ಸುಬ್ಬಯ್ಯ ಎಂಬುವವರು ಹೈದರಾಬಾದ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಸೇರಿದ ಶ್ರೀಮಂಗಲದಲ್ಲಿರುವ ಮನೆ ಹಾಗೂ ತೋಟವನ್ನು ನೋಡಿಕೊಂಡಿರುವ ಬಸವರಾಜುರವರು ದಿನಾಂಕ 17-03-2018 ರಂದು ಮನೆಯನ್ನು ಶುಚಿಗೊಳಿಸಿ ಬೀಗ ಹಾಕಿ ಹೋಗಿದ್ದು, ನಂತರ ದಿನಾಂಕ 21-03-2018 ರಂದು ನೋಡುವಾಗ ಮನೆಯ ಬೀಗ ಒಡೆದಿರುವುದು ಕಂಡು ಬಂದು ಸದರಿ ಮಾಹಿತಿಯನ್ನು ಮುಖೇಶ್ ಸುಬ್ಬಯ್ಯನವರಿಗೆ ತಿಳಿಸಿದ್ದು, ಅವರು ಬಂದು ನೋಡುವಾಗ ಮನೆಯಲ್ಲಿದ್ದ ಎಸ್.ಬಿ.ಬಿ.ಎಲ್ ಬಂದೂಕು, 25 ಕಾಟ್ರೇಜುಗಳು, 23 ಸಾವಿರ ರೂ ನಗದು, 66 ಸಾವಿರ ರೂ ಬೆಲೆ ಬಾಳುವ ಚಿನ್ನಾಭರಣಗಳು ಹಾಗೂ ಒಂದು ಕೈಗಡಿಯಾರ ಕಳುವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಮುಖೇಶ್ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Friday, March 23, 2018

ಕಾಫಿ, ಕರಿಮೆಣಸು ಗಿಡ ನಾಶ
                       ದಿನಾಂಕ 21/03/2018ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ನಿವಾಸಿ ಬಿ.ಎನ್.ಬದರಿ ನಾರಾಯಣ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅವರ ಮೊಮ್ಮಗ ಆನಂದ ರಾವ್ ಎಂಬವರ ಕುಮ್ಮಕ್ಕಿನಿಂದ ಅಕ್ರಮವಾಗಿ ಪ್ರವೇಶಿಸಿದ ಅನಿಲ್‌ ಜಿ. ರಾವ್‌ ಮತ್ತು ತೋಟದ ರೈಟರ್‌ ಸೇರಿಕೊಂಡು ಜೆ.ಸಿ.ಬಿ. ಯಂತ್ರದಿಂದ ಸುಮಾರು ರೂ.1,50,000/- ಮೌಲ್ಯದ ಕಾಫಿ, ಕರಿಮೆಣಸು ಮತ್ತು ಸಿಲ್ವರ್ ಮರಗಳನ್ನು ನೆಲಸಮ ಮಾಡಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                  ಪೊನ್ನಂಪೇಟೆ ಬಳಿಯ ಬೆಸಗೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ದಿನಾಂಕ 22/03/2018ರಂದು ಪೊನ್ನಂಪೇಟೆ ಠಾಣೆಯ ಎಎಸ್‌ಐ ಕೆ.ಕೆ.ಗಣಪತಿರವರು ಸ್ಥಳಕ್ಕೆ ಧಾಳಿ ನಡೆಸಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಿ ಮದ್ಯ ಸೇವನೆಗೆ ಅವಕಾಶ ನೀಡಿದ್ದ ಪೊನ್ನಿಮಾಡ ಗಿರೀಶ್‌ ಎಂಬವರನ್ನು ಬಂಧಿಸಿ ಅವರಿಂದ ರೂ.289/- ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ ಪ್ರಕರಣ
                    ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಮಹದೇವ ಎಂಬವರ ಮನೆಯಲ್ಲಿ ವಾಸವಿದ್ದು ಗಾರೆ ಕೆಲಸಕ್ಕೆ ಹೋಗುತ್ತಿದ್ದ ಕೊಳ್ಳೇಗಾಲದ ನಿವಾಸಿ ವಿಜಯ ಎಂಬವರು 2016ನೇ ಜುಲೈ ತಿಂಗಳಿನಲ್ಲಿ ಕೊಳ್ಳೇಗಾಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಂದೂಕು ಕಳವು
                  ಮಡಿಕೇರಿ ಬಳಿಯ ಕೆ.ನಿಡುಗಣೆ ನಿವಾಸಿ ಎನ್‌.ಕೆ.ಈರಪ್ಪ ಎಂಬವರು ದಿನಾಂಕ 02/03/2018ರಂದು ಕೆಲಸದ ನಿಮಿತ್ತ ಮಡಿಕೇರಿಗೆ ಹೋಗಿ ಮನೆಗೆ ಮರಳಿದಾಗ ಮನೆಯ ಬಾಗಿಲ ಮೂಲೆಯಲ್ಲಿ ಇಟ್ಟಿದ್ದ ಸುಮಾರು ರೂ.18,000/- ಮೌಲ್ಯದ ಬಂದೂಕು ಕಾಣೆಯಾಗಿದ್ದು ಯಾರಾದರೂ ಕುಟುಂಬದವರು ತೆಗೆದುಕೊಂಡು ಹೋಗಿರಬಹುದೆಂದು ಭಾವಿಸಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಬಂದೂಕನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ವಂಚನೆ
                  2015ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ಮಡಿಕೇರಿಯ ಪ್ರಾವಿಡೆಂಟ್ ಫಂಡ್ ಕಚೇರಿಯ ಅಧಿಕಾರಿ ದಯಾನಂದ ನಾಯಕ್ ಎಂಬವರು ಹೊದ್ದೂರಿನ ಪಿಎಸಿಎಸ್ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಸಿಬ್ಬಂದಿಯವರ ಇ.ಪಿಎಫ್. ಮಾಸಿಕ ಕಂತಿನ ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವಂತೆ ತಿಳಿಸಿದ್ದು ಬ್ಯಾಂಕಿನಲ್ಲಿ ಆನ್‌ಲೈನ್ ವ್ಯವಸ್ಥೆ ಇಲ್ಲದ ಕಾರಣ ಮಹೇಂದ್ರ ವರ್ಮ ಎಂಬವರ ಮೂಲಕ ಸಲ್ಲಿಸುವಂತೆ ದಯಾನಂದ ನಾಯಕ್‌ರವರು ಮಹೇಂದ್ರ ವರ್ಮರವರನ್ನು ಪರಿಚಯಿಸಿಯಿದ್ದರು. ನಂತರ ಬ್ಯಾಂಕಿನ ವ್ಯವಸ್ಥಾಪಕರಾದ ಚೋಂದಕ್ಕಿಯವರು ನವೆಂಬರ್ 2015ನೇ ಸಾಲಿನಿಂದ 2017ರ ಮಾರ್ಚ್‌ ತಿಂಗಳವರೆಗಿನ ಸಿಬ್ಬಂದಿಗಳ ಇ.ಪಿ.ಎಫ್. ಹಣ ರೂ. 3,79,680/- ಗಳಷ್ಟು ಮೊತ್ತವನ್ನು ಮಹೇಂದ್ರ ವರ್ಮರವರಿಗೆ ಪಾವತಿಸಿದ್ದು ಮಹೇಂದ್ರ ವರ್ಮರವರು ಸದ್ರಿ ಹಣವನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸದೆ ಬ್ಯಾಂಕಿನ ನಕಲಿ ಪಾವತಿ ರಸೀತಿಯನ್ನು ನೀಡಿ ವಂಚಿಸಿದ್ದು ದಯಾನಂದ ನಾಯಕ್‌ರವರು ಮಹೆಂದ್ರ ವರ್ಮರವರೊಡನೆ ಸೇರಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ, ಸಾವು
                 ದಿನಾಂಕ 22/03/2018ರಂದು ಮಡಿಕೇರಿ ಬಳಿಯ ಕತ್ತಲೆಕಾಡು ನಿವಾಸಿ ರೋಹಿಣಿ ಎಂಬವರ ಮಗ ಯೋಗೇಶ್‌ ಎಂಬಾತನು ಲವಿನ್‌ ಎಂಬಾತನೊಂದಿಗೆ ಕೆಎ-12-ಹೆಚ್‌ಸಿ-9798ರ ಮೋಟಾರು ಬೈಕಿನಲ್ಲಿ ಪಿರಿಯಾಪಟ್ಟಣದಿಂದ ಸಿದ್ದಾಪುರಕ್ಕೆ ಬರುತ್ತಿರುವಾಗ ಮಾಲ್ದಾರೆ ಗ್ರಾಮದ ದೇವಮಚ್ಚಿ ಅರಣ್ಯದ ಬಳಿ ರಸ್ತೆಯಲ್ಲಿ ಬೈಕ್ ಚಾಲಕ ಲವಿನ್ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಯೋಗೇಶ್‌ರವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                 ದಿನಾಂಕ 22/03/2018ರಂದು ನಾಪೋಕ್ಲು ಬಳಿಯ ಹೊದವಾಡ ಕಾಲೋನಿ ನಿವಾಸಿ ಗುರುವ ಎಂಬವರಿಗೆ ಸತೀಶ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮರದ ರೀಪರ್‌ ಪಟ್ಟಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                ದಿನಾಂಕ 14/03/2018ರಂದು ಹಾಸನ ಜಿಲ್ಲೆಯ ಯಸಳೂರಿನ ಚಂಗಡಹಳ್ಳಿ ನಿವಾಸಿ ಮುರುಗೇಶ ಎಂಬವರು ಕೆಎ-13-ಇಜಿ-0010ರ ಬೈಕಿನಲ್ಲಿ ಶನಿವಾರಸಂತೆಯಿಂದ ಸಿ.ಡಿ. ಸುರೇಶ ಎಂಬವರೊಂದಿಗೆ ಚಂಗಡಹಳ್ಳಿಗೆ ಹೋಗುತ್ತಿರುವಾಗ ಕಾಜೂರು ಗ್ರಾಮದ ಬಳಿ ಎದುರಿನಿಂದ ಕೆಎ-20-ಎನ್-3112ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುರುಗೇಶರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮುರುಗೇಶ ಮತ್ತು ಸುರೇಶರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                    ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದ ಹೋಟೆಲೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ನವೀನ್ ಗೌಡರವರಿಗೆ ದೊರೆತ ಮಾಹಿತಿಯ ಮೇರೆಗೆ ದಿನಾಂಕ 22/03/2018ರಂದು ಸಿಬ್ಬಂದಿಗಳೊಂದಿಗೆ ಹೆಬ್ಬಾಲೆ ಗ್ರಾಮದ ಹೋಟೆಲೊಂದರ ಮುಂದೆ ಸೋಮಶೇಖರ ಹೆಚ್‌.ಟಿ. ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿ ಸೋಮಶೇಖರರವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                    ಕುಶಾಲನಗರ ಬಳಿಯ ಹಕ್ಕೆ ಗ್ರಾಮದ ಹೋಟೆಲೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ನವೀನ್ ಗೌಡರವರಿಗೆ ದೊರೆತ ಮಾಹಿತಿಯ ಮೇರೆಗೆ ದಿನಾಂಕ 22/03/2018ರಂದು ಸಿಬ್ಬಂದಿಗಳೊಂದಿಗೆ ಹಕ್ಕೆ ಗ್ರಾಮದ ಹೋಟೆಲೊಂದರ ಮುಂದೆ ಸೋಮಶೇಖರ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿ ಸೋಮಶೇಖರರವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಬೈಕ್ ಡಿಕ್ಕಿ
                   ದಿನಾಂಕ 22/03/2018ರಂದು ಮೈಸೂರಿನ ಸಾಗರ್ ಎಂಬವರು ಕೆಎ-09-ಸಿ-4428ರ ಗೂಡ್ಸ್ ವಾಹನದಲ್ಲಿ ಕುಶಾಲನಗರದಿಂದ ಹೆಬ್ಬಾಲೆಗೆ ಹೋಗುತ್ತಿರುವಾಗ ಹೆಬ್ಬಾಲೆ ಗ್ರಾಮದ ಸಮೀಪ ಎದುರಿನಿಂದ ಅರಕಲಗೂಡಿನ ಭರತ್ ಎಂಬಾತನು ಕೆಎ-13-ಇಜೆ-3270 ಬೈಕನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಾಗರ್‌ರವರ ಗೂಡ್ಸ್ ವಾಹನದ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಮೂವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 22, 2018

ಅಕ್ರಮ ಮರಳು ಸಾಗಾಟ
                       ದಿನಾಂಕ 21/03/2017ರಂದು ಶನಿವಾರಸಂತೆ ಠಾಣೆಯ ಎಎಸ್‌ಐ ಪಿ.ಆರ್.ವೆಂಕಟೇಶ್‌ರವರು ಕೊಡ್ಲಿಪೇಟೆ ಉಪ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಶಾಂತಪುರ ಹೊಳೆಯಲ್ಲಿ  ಹಲವರು ಅಕ್ರಮವಾಗಿ ಮರಳನ್ನು ತೆಗೆದು ಚೀಲದಲ್ಲಿ ತುಂಬಿಸಿ ಮಾರುತಿ ಓಮಿನಿ ವ್ಯಾನಿಗೆ ತುಂಬಿಸುತ್ತಿದ್ದುದನ್ನು ಪತ್ತೆ ಹಚ್ಚಿ ಸುಮಾರು 10 ಚೀಲ ಮರಳು, ಕೆಎ-12-ಎಂಎಂ-0655ರ ಮಾರುತಿ ವ್ಯಾನನ್ನು ವಶಪಡಿಸಿಕೊಂಡು ಕೊಡ್ಲಿಪೇಟೆಯ ಕಲ್ಲಾರೆ ನಿವಾಸಿ ಕುಮಾರ ಎಂಬಾತನನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅವಘಢ
                  ದಿನಾಂಕ 21/03/2018ರಂದು ಮೈಸೂರಿನ ಗೋಕುಲಂ ನಿವಾಸಿ ಪಿ.ಕೆ.ಪೆಮ್ಮಯ್ಯ ಎಂಬವರು ಕೆಎ-03-ಎಎಫ್‌-1285 ರ ಕಾರಿನಲ್ಲಿ ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಶಾಂತಿಗಿರಿ ತೋಟದ ಬಳಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಯಲ್ಲಿ ಮಗುಚಿಕೊಂಡಿದ್ದು ಕಾರಿಗೆ ಹಾನಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಕಳುವು
                      ಮಡಿಕೇರಿ ಬಳಿಯ ಕಟ್ಟೆಮಾಡು ನಿವಾಸಿ ಚಂಗಪ್ಪ ಎಂಬವರಿಗೆ ದಿನಾಂಕ 20/03/2018ರಂದು ಅಬ್ಬಾಸ್ ಎಂಬವರು ಚಂಗಪ್ಪನವರ ಕೆಲಸದ ಕಾರ್ಮಿಕ ಮಾದ ಎಂಬಾತನು ಕೊಂಡಂಗೇರಿಯಲ್ಲಿ ಕಾಳು ಮೆಣಸು ಮಾರಲು ತೆಗೆದುಕೊಂಡು ಹೋಗಿರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದು ಕೂಡಲೇ ಚಂಗಪ್ಪನವರು ಅವರ ಗೋದಾಮಿಗೆ ಹೋಗಿ ನೋಡಿದಾಗ ಗೋದಾಮಿನಲ್ಲಿದ್ದ ಕಾಳು ಮೆಣಸಿನ ಚೀಲಗಳ ಪೈಕಿ ಕಿಟಕಿಯ ಪಕ್ಕದಲ್ಲಿಟ್ಟಿದ್ದ ಪ್ಲಾಸ್ಟಿಕ್ ಚೀಲವನ್ನು ತೂತು ಮಾಡಿ ಅಲ್ಲಿಂದಲೇ ಕಾಳುಮೆಣಸನ್ನು ಕಳವು ಮಾಡಿರುವುದು ಕಂಡು ಬಂದಿದ್ದು ಸುಮಾರು ರೂ.17,500/- ಮೌಲ್ಯದ ಕಾಳು ಮೆಣಸನ್ನು ಮಾದನೇ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, March 21, 2018

ಕಳವು ಪ್ರಕರಣ 
                ಮನೆಯ ಹೆಂಚು ತೆಗೆದು ಒಳನುಗ್ಗಿ ಚಿನ್ನ ಹಾಗೂ ಹಣ ಕಳವು ಮಾಡಿದ ಘಟನೆ ಸಿದ್ದಾಪುರದ ನೆಲ್ಲಿಹುದಿಕೇರಿ ಎಂಬಲ್ಲಿ ವರದಿಯಾಗಿದೆ. ನೆಲ್ಲಿಹುದಿಕೇರಿಯ ನಿವಾಸಿ ರಾಮಲಿಂಗ ಎಂಬುವವರು ದಿನಾಂಕ 19-3-2018 ರಂದು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ ವಾಪಾಸ್ಸು ಮನೆಗೆ ಬಂದು ನೋಡುವಾಗ ಮಲಗುವ ಕೋಣೆಯ ಹೆಂಚನ್ನು ತೆಗೆದು ಒಳ ನುಗ್ಗಿ ಬೀರುವಿನಲ್ಲಿಟ್ಟಿದ್ದ 8 ಗ್ರಾಂ ತೂಕದ ಚಿನ್ನದ ಸರ ಹಾಗೂ ನಗದು 4,500 ರೂ ಗಳನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ರಾಮಲಿಂಗರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮದ್ಯ ಮಾರಾಟ 
             ಕುಶಾಲನಗರದ ಸೀಗೆಹೊಸೂರು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 20-3-2018 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ನವೀನ್ ಗೌಡರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಲಕ್ಷ್ಮಿ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಅಪರಿಚಿತ ವ್ಯಕ್ತಿಯ ಶವ ಪತ್ತೆ 
         ದಿನಾಂಕ 20-3-2018 ರಂದು ವಿರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಚಿಟ್ಟಿಯಪ್ಪ ಎಂಬುವವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಲಾರಿ ಅಪಘಾತ 
                ಲಾರಿಯು ಅಪಘಾತಗೊಂಡು ಕ್ಲೀನರ್ ಗೆ ಗಾಯವಾಗ ಘಟನೆ ಮಡಿಕೇರಿ ಮಂಗಳೂರು ರಸ್ತೆಯ ಜೋಡುಪಾಲ ಎಂಬಲ್ಲಿ ವರದಿಯಾಗಿದೆ. ದಿನಾಂಕ 20-3-2018 ರಂದು ಕೆಎ-52-7074 ರ ಲಾರಿಯಲ್ಲಿ ಚಿಕ್ಕಬಳ್ಳಾಪುರದಿಂದ ಸೋಪು ಮತ್ತು ಸರ್ಪ್ ತುಂಬಿಸಿಕೊಂಡು ಮಂಗಳೂರಿಗೆ ಹೋಗುತ್ತಿರುವಾಗ ಜೋಡುಪಾಲ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಚಾಲಕ ರಾಜುರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬರೆಗೆ ಡಿಕ್ಕಿಪಡಿಸಿದ ಪರಿಣಾಮ ಕ್ಲೀನರ್ ಮಹದೇವರವರ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಮಹಿಳೆಯ ಸಾವು 
                 ಅಪರಿಚಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಬಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದ  ಹೆಂಗಸು ದಿನಾಂಕ 20-3-2018 ರಂದು ಕುಶಾಲನಗದ ರಿಷಿಕ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡದ ಹತ್ತಿರ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
           ದಿನಾಂಕ 20-3-2018 ರಂದು ವಿರಾಜಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ನಿವಾಸಿ ವಿಷ್ಣು @ ಸುನಿಲ್ ಎಂಬುವವರು ಪಕ್ಕದ ಮನೆಯವರಾದ ಉಮೇಶ ಮತ್ತು ಅವರ ಪತ್ನಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ಬೋಜಮ್ಮನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, March 20, 2018

ಜೀಪು ಅವಘಢ
                    ದಿನಾಂಕ 18/03/2018ರಂದು ಗುಡ್ಡೆಹೊಸೂರು ನಿವಾಸಿ ಭರತ್ ಕುಮಾರ್ ಎಂಬವರು ಅವರ ಪಿಕ್‌ಅಪ್ ಜೀಪು ಸಂಖ್ಯೆ ಕೆಎ-12-ಬಿ-0215ರಲ್ಲಿ ಚಾಲಕ ದೀಪಕ್ ಎಂಬಾತನೊಂದಿಗೆ ಸುಂಟಿಕೊಪ್ಪದಿಂದ ಗುಡ್ಡೆಹೊಸೂರಿಗೆ ಹೋಗುತ್ತಿರುವಾಗ ಕೊಡಗರಹಳ್ಳಿಯ ಮಾರುತಿನಗರದ ಬಳಿ ಜೀಪು ಚಾಲಕ ದೀಪಕ್ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ರಸ್ತೆ ಬದಿಯ ಚರಂಡಿಯ ಸಿಮೆಂಟ್ ಕಟ್ಟೆಗೆ ಡಿಕ್ಕಿಯಾಗಿ ಜೀಪಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ
                    ದಿನಾಂಕ 19/03/2018ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ಬಸ್‌ ನಿಲ್ದಾಣದ ಬಳಿ ಕುಟ್ಟದ ನಿವಾಸಿ ಎಂ.ರಾಜ ಎಂಬಾತನು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊನ್ನಂಪೇಟೆ ಠಾಣೆಯ ಎಎಸ್‌ಐ ಹೆಚ್‌.ವೈ.ಚಂದ್ರರವರು ಆರೋಪಿ ರಾಜನನ್ನು ಬಂಧಿಸಿ ಆತನಿಂದ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಲಾಟರಿಗಳನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                    ದಿನಾಂಕ 12/03/2018ರಂದು ವಿರಾಜಪೇಟೆ ಬಳಿಯ ಮೈತಾಡಿ ನಿವಾಸಿ ಕೆ.ಬಿ.ಚಿಂಗಪ್ಪ ಎಂಬವರು ಅವರ ಪತ್ನಿ ಕಲ್ಪನ, ಅತ್ತಿಗೆ ಮತ್ತು ಮಗ ಮೊಣ್ಣಪ್ಪನವರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ವಿರಾಜಪೇಟೆಗೆ ಬರುತ್ತಿರುವಾಗ ಗೋಣಿಕೊಪ್ಪ ನಗರದ ಹರಿಶ್ಚಂದ್ರಪುರದ ಬಳಿ ಮೊಣ್ಣಪ್ಪನವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರನ್ನು ರಸ್ತೆ ಬದಿಯ ಚರಂಡಿಗೆ ಇಳಿಸಿದ ಪರಿಣಾಮ ಕಾರಿನಲ್ಲಿದ್ದ ಚಿಂಗಪ್ಪನವರ ಪತ್ನಿ ಕಲ್ಪನ ಮತ್ತು ಅತ್ತಿಗೆಯವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                  ದಿನಾಂಕ 19/03/2018ರಂದು ಶನಿವಾರಸಂತೆ ಬಳಿಯ ಆಲೂರು ಸಿದ್ದಾಪುರ ನಿವಾಸಿ ಅರುಣ್ ಕುಮಾರ್ ಎಂಬವರು ಆಲೂರು ಸಿದ್ದಾಪುರದ ಬಾರ್‌ ಒಂದರ ಮುಂದೆ ನಿಂತಿರುವಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿ ಗಗನ್ ಎಂಬವರು ಹಳೆ ದ್ವೇಷದಿಂದ ಅರುಣ್‌ ಕುಮಾರ್‌ರವರೊಂದಿಗೆ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 19, 2018

ನೀರಿಗೆ ಬಿದ್ದು ಮಹಿಳೆ ಸಾವು 
                  ಕಲ್ಲು ಕೋರೆಯ ಕೆರೆಯಲ್ಲಿ ಮುಳುಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ದೊಡ್ಡಕೊಡ್ಲಿ ಗ್ರಾಮದಲ್ಲಿ ವರದಿಯಾಗಿದೆ. ದೇವಮ್ಮ ಎಂಬುವವರ ಮಗಳು ಜ್ಯೋತಿಯವರು ದಿನಾಂಕ 18-3-2018 ರಂದು ಕಲ್ಲುಕೋರೆಯ ಕೆರೆಗೆ ಬಟ್ಟೆತೊಳೆಯಲು ಹೋದವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಮೃತಳ ತಾಯಿ ದೇವಮ್ಮರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
              ಕಾರುಗಳು ಪರಸ್ಪರ ಡಿಕ್ಕಿಯಾಗಿ ಗಾಯಗೊಂಡ ಘಟನೆ ಮೂರ್ನಾಡುವಿನ ಬಾಡಗ ಎಂಬಲ್ಲಿ ವರದಿಯಾಗಿದೆ. ದಿನಾಂಕ 18-3-2018 ರಂದು ಹಾಕತ್ತೂರು ಗ್ರಾಮದ ಅಬುಬಕ್ಕರ್ ಎಂಬುವವರು ತನ್ನ ಮಗಳೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಹೋಗುತ್ತಿರುವಾಗ ಬಾಡಗ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಅಬುಬಕ್ಕರ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಅಬುಬಕ್ಕರ್ ಮತ್ತು ಅವರ ಮಗಳಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
               ದಿನಾಂಕ 18-3-2018 ರಂದು ವಿರಾಜಪೇಟೆ ನಗರದ ನಿವಾಸಿ ಶ್ರೀನಿವಾಸ ಎಂಬುವವರು ತಮ್ಮ ಆಲ್ಟೋ ಕಾರಿನಲ್ಲಿ ಮೂರ್ನಾಡುವಿನಿಂದ ವಿರಾಜಪೇಟೆಗೆ ಹೋಗುತ್ತಿರುವಾಗ ಕದನೂರು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಮಾರುತಿ 800 ಕಾರನ್ನು ಚಾಲಕ ಶ್ರೀನಿವಾಸ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿ ಎರಡೂ ಕಾರಿನ ಚಾಲಕರಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Sunday, March 18, 2018

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 17/03/2018ರಂದು ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಬರಡಿ ನಿವಾಸಿ ವೈ.ಎಂ.ಶಶಿ ಎಂಬವರು ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಶಶಿರವರು ಈ ಹಿಂದೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದಿದ್ದು ವಾಸಿಯಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ
                ದಿನಾಂಕ 17/03/2018ರಂದು ಶನಿವಾರಸಂತೆ ನಗರದ ಅಂಗವಿಕಲರ ಕ್ಲಬ್‌ನ ಕೊಠಡಿಯಲ್ಲಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಶನಿವಾರಸಂತೆ ಠಾಣಾ ಪಿಎಸ್‌ಐ ಆನಂದ್‌ರವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಪೃಥ್ವಿ, ಅರುಣ, ಶೇಷಗಿರಿ, ಪವನ್ ಮತ್ತು ಮಹೇಶ್‌ ಎಂಬವರನ್ನು ಬಂಧಿಸಿ ಜೂಜಾಡಲು ಬಳಸಿದ್ದ ಹಣ ರೂ.12,440/-ನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                  ದಿನಾಂಕ 17/03/2018ರಂದು ಮಂಗಳೂರು ನಿವಾಸಿ ಅಕ್ಷಯ್ ಶೆಟ್ಟಿ ಎಂಬವರಿಗೆ ಸೇರಿದ ಕೆಎ-19-ಎಬಿ-3939ರ ಲಾರಿಯಲ್ಲಿ ಟೈಲ್ಸ್‌ಗಳನ್ನು ತುಂಬಿಕೊಂಡು ಚಾಲಕ ಜಿತೇಂದ್ರ ಕುಮಾರ್ ಎಂಬವರು ಚಾಲಿಸಿಕೊಂಡು ಮಂಗಳೂರಿನಿಂದ  ಬೆಂಗಳೂರಿಗೆ ಹೋಗುತ್ತಿರುವಾಗ ಬೋಯಿಕೇರಿ ಬಳಿ ಜಿತೇಂದ್ರ ಕುಮಾರ್‌ರವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗಕ್ಕೆ ಮಗುಚಿಕೊಂಡು ಚಾಲಕ ಜಿತೇಂದ್ರ ಕುಮಾರ್‌ರವರಿಗೆ ಗಾಯಗಳಾಗಿದ್ದು ಲಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                      ದಿನಾಂಕ 17/03/2018ರಂದು ವಿರಾಜಪೇಟೆ ನಗರದ ನಿವಾಸಿ ಟಿ.ಹೆಚ್‌.ಮೊಹಮದ್ ಸಲೀಂ ಎಂಬವರ ಅಣ್ಣನ ಮಗ ಮಹಮದ್ ಅನಾಸ್ ಎಂಬ ಬಾಲಕನು ಸೈಕಲಿನಲ್ಲಿ ವಿರಾಜಪೇಟೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹೋಗುತ್ತಿರುವಾಗ ಶಿವಾಸ್ ಜಂಕ್ಷನ್‌ ಬಳಿ ಕೆಎ-12-ಪಿ-8164 ರ ಕಾರನ್ನು ಅದರ ಚಾಲಕ ಜಾಸಿಮ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹಮದ್ ಅನಾಸ್‌ನ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬಾಲಕ ಮಹಮದ್ ಅನಾಸ್‌ಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, March 17, 2018

ಹಣ ಪಡೆದುಕೊಂಡು ವಂಚನೆ 
          ಹಣವನ್ನು ಸಾಲವಾಗಿ ಪಡೆದುಕೊಂಡು ವಾಪಾಸ್ಸು ಹಿಂತಿರುಗಿಸದೇ ವಂಚಿಸಿದ ಘಟನೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ವರದಿಯಾಗಿದೆ. ಟಿ ಶೆಟ್ಟಿಗೇರಿ ಗ್ರಾಮದ ನಿವಾಸಿಯಾದ ವಿಜು ಸೋಮಯ್ಯ ಎಂಬುವವರಿಂದ ಸ್ನೇಹಿತ ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದವರಾದ ನಿತಿನ್ ಕಾರ್ಯಪ್ಪ ಮತ್ತು ನಯನಸಿಂಗ್ ರವರು 2016 ನೇ ಸಾಲಿನಲ್ಲಿ ವ್ಯಾಪಾರ ಮಾಡಲು 50 ಲಕ್ಷ ರೂಗಳನ್ನು ಸಾಲವಾಗಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮತ್ತು ಕಾರನ್ನು ಪಡೆದುಕೊಂಡು ಇದುವರೆಗೂ ಹಣ ಮತ್ತು ಕಾರನ್ನು ವಾಪಾಸ್ಸು ಕೊಡದೇ ಮೋಸ ಮಾಡಿರುವುದಾಗಿ ಪೊನ್ನಂಪೇಟೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಅಂಚೆ ಇಲಾಖೆ ನೌಕರನಿಂದ ಗ್ರಾಹಕರಿಗೆ ವಂಚನೆ 
               ಶನಿವಾರಸಂತೆ ಅಂಚೆ ಕಚೇರಿಯಲ್ಲಿ 2 ವರ್ಷಗಳಿಂದ ಅಂಚೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ ಎನ್ ಕುಳ್ಳಯ್ಯ ಎಂಬುವವರು ಗ್ರಾಹಕರಿಂದ ಸಂಗ್ರಹಿಸಿದ 73,500 ರೂಗಳಷ್ಟು RD/SB/SSA ಗೆ ಸೇರಿದ ಹಣವನ್ನು ಗ್ರಾಹಕರ ಖಾತೆಗಳಿಗೆ ಜಮಾ ಮಾಡದೇ ವಂಚನೆ ಮಾಡಿರುವುದನ್ನು ಪತ್ತೆಹಚ್ಚಿ, ಸೋಮವಾರಪೇಟೆ ಉಪ ವಿಭಾಗದ ಅಂಚೆ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ 
ನಕಲಿ ಪಾಸು ಬಳಸಿ ಮರಳು ಸಾಗಣೆ 
                 ಮೈಸೂರಿನ ಪೀತಾಂಬರ ರಾಜು ಎಂಬುವವರು ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖೆಯ ಎ.ಇ.ಇ ರವರ ಮೊಹರು ಉಪಯೋಗಿಸಿ ಸಹಿ ಮಾಡಿಕೊಂಡು ನೆಲ್ಲಿ ಹುದಿಕೇರಿಯ ಬರಡಿ ಹೊಳೆಯಿಂದ ಕುಶಾಲನಗರದ ಕಲಾ ಭವನಕ್ಕೆ ಕೆಎ-12-ಬಿ-2101 ರ ಲಾರಿಯಲ್ಲಿ ಮರಳು ಸಾಗಿಸಲು ಅನುಮತಿ ಇರುವ ನಕಲು ರಹದಾರಿ ಪತ್ರ ಇಟ್ಟುಕೊಂಡು ಮರಳನ್ನು ಸಾಗಿಸುತ್ತಿದ್ದುದ್ದನ್ನು ದಿನಾಂಕ 16-03-2018 ರಂದು ಪತ್ತೆ ಹಚ್ಚಿ ಸೋಮವಾರಪೇಟೆ ತಾಲೂಕು ಎ.ಇ.ಇ ರವರರಾದ ಮಹೇಂದ್ರ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ವ್ಯಕ್ತಿಯ ಆತ್ಮಹತ್ಯೆ 
             ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ವಣಚಲು ಎಂಬಲ್ಲಿ ವರದಿಯಾಗಿದೆ. ವಣಚಲುವಿನ ನಿವಾಸಿ ಕುಶಾಲಪ್ಪ ಎಂಬುವವರು ಅನಾರೋಗ್ಯದಿಂಧ ಬಳಲುತ್ತಿದ್ದು, ಇದೇ ವಿಷಯದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-03-2018 ರಂದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, March 16, 2018

ಆತ್ಮಹತ್ಯೆ ಪ್ರಕರಣ
                      ದಿನಾಂಕ 15/03/2018ರಂದು ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಶಾಂತ ಕುಮಾರಿ ಎಂಬ ಮಹಿಳೆಯು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ವರದಿಯಾಗಿದೆ. ಶಾಂತ ಕುಮಾರಿಯವರು ದೀರ್ಘ ಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವಿಪರೀತ ಹಣ ಸಾಲ ಮಾಡಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ
                     ದಿನಾಂಕ 14/03/2018ರಂದು ಶನಿವಾರಸಂತೆ ಬಳಿಯ ಬೀಟಿಕಟ್ಟೆ ಬಳಿ ರಸ್ತೆಯಲ್ಲಿ ಶನಿವಾರಸಂತೆಯ ಇಬ್ರಾಹಿಂ ಮತ್ತು ಇತರರು ಸಿಲ್ವರ್ ಮರಗಳನ್ನು ಕೆಎ-12-9663ರ ಲಾರಿಗೆ ತುಂಬಿಸಿ ಲಾರಿಯನ್ನು ಚಾಲಿಸುವ ಸಂದರ್ಭ ಲಾರಿಯ ಕ್ಲೀನರ್ ಮಹಮದ್ ಶಮೀಮ್ ಎಂಬವರು ಲಾರಿಯ ಚಕ್ರಕ್ಕೆ ಕಟ್ಟೆಯನ್ನು ಇಡುತ್ತಿರುವಾಗ ಲಾರಿಯ ಚಾಲಕ ದಿನೇಶ್‌ ಎಂಬವರು ಲಾರಿಯನ್ನು ನಿರ್ಲಕ್ಷ್ಯತನದಿಂದ ಚಾಲಿಸಿದ ಪರಿಣಾಮ ಶಮೀಮ್‌ರವರ ಕೈಲ್ಲಿದ್ದ ಕಟ್ಟೆಯು ಅವರ ಕಾಲಿಗೆ ಬಡಿದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಚೆ ಚೀಟಿ ನಕಲು, ವಂಚನೆ
                      ಕುಶಾಲನಗರ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಹೆಚ್‌.ಎನ್.ಸುರೇಶ್‌ ಎಂಬವರು ಸುಮಾರು ಎರಡು ವರ್ಷಗಳಿಂದ ಸುಮಾರು ರೂ.2,00,000/- ಮೌಲ್ಯದ ಅಂಚೆ ಚೀಟಿಗಳನ್ನು ನಕಲು ಮಾಡಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಕೊಲೆ
                    ದಿನಾಂಕ 15/03/2017ರಂದು ಬಾಳೆಲೆ ಬಳಿಯ ಬೇಕರಿ ಒಂದರಲ್ಲಿ ರವಿ ಎಂಬಾತನು ಪಾನಿಪುರಿ ತಿನ್ನುತ್ತಿರುವಾಗ ಅಲ್ಲಿಗೆ ಬಂದ ಚಿಕ್ಕಣ್ಣ ಎಂಬಾತನು ರವಿರವರ ತಟ್ಟೆಯಿಂದ ಪಾನಿಪುರಿ ತೆಗೆದು ತಿಂದ ವಿಚಾರಕ್ಕೆ ಜಗಳವಾಗಿ ರವಿಯು ಚಿಕ್ಕಣ್ಣನ ಮುಖಕ್ಕೆ ತೀವ್ರವಾಗಿ ಹೊಡೆದ ರಭಸಕ್ಕೆ ಚಿಕ್ಕಣ್ಣನವರು ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಣ್ಣನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                    ದಿನಾಂಕ 15/03/2018ರಂದು ಶ್ರೀಮಂಗಲ ಬಳಿಯ ವೆಸ್ಟ್ ನೆಮ್ಮಲೆ ನಿವಾಸಿ ಚಟ್ಟಂಗಡ ರಾಜು ಕಾಳಯ್ಯ ಎಂಬವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತರ ಮಗ ಕಿರಣ್ ಎಂಬವರು ವರ್ಷದ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ತೀರಿಕೊಂಡಿದ್ದು ಅದೇ ಕಾರಣಕ್ಕೆ ನೋವಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 15/03/2018ರಂದು ಶ್ರೀಮಂಗಲ ಬಳಿಯ ಬಾಡಗರಕೇರಿ ನಿವಾಸಿ ಅಣ್ಣೀರ ಹರೀಶ್ ಎಂಬವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರಿಗೆ ಸಾಲದ ಹೊರೆ ಅಧಿಕವಿದ್ದು ಈ ಸಾಲಿನಲ್ಲಿ ಕಾಫಿ ಫಸಲು ಸಹಾ ಕಡಿಮೆ ಆಗಿರುವುದರಿಂದ ಸಾಲ ತೀರಿಸುವ ಬಗ್ಗೆ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                      ದಿನಾಂಕ 15/03/2018ರಂದು ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಭ್ಯತ್‌ಮಂಗಲ ಗ್ರಾಮದಲ್ಲಿ ಅಲ್ಲಿನ ನಿವಾಸಿ ಸುಶೀಲ ಎಂಬವರು ಉಮೇಶ್‌ ಎಂಬವರ ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ಉಮೇಶ್‌ರವರು ಸುಶೀಲರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 15, 2018

ವ್ಯಕ್ತಿಯ ಆತ್ಮಹತ್ಯೆ 
            ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ತಿತಿಮತಿಯ ದೇವರಕಾಡು ಪೈಸಾರಿಯಲ್ಲಿ ವರದಿಯಾಗಿದೆ. ದೇವರಕಾಡು ಪೈಸಾರಿಯ ನಿವಾಸಿ ಸತೀಶ ಎಂಬುವವರು ಅನಾರೋಗ್ಯದಿಂಧ ಬಳಲುತ್ತಿದ್ದು, ಇದೇ ವಿಷಯದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 14-03-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ರವೀಶ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
             ದಿನಾಂಕ 14-03-2018 ರಂದು ಕೆ ಎಸ್ ಆರ್ ಟಿ ಸಿ ಬಸ್ಸು ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಸುಂಟಿಕೊಪ್ಪದ ಕೂರ್ಗಳ್ಳಿ ಎಸ್ಟೇಟ್ ಬಳಿ ತಲುಪುವಾಗ ಎದುರುಗಡೆಯಿಂದ ಅಶೋಕಾ ಲೈಲೆಂಡ್ ಕಂಪೆನಿಗೆ ಸೇರಿದ ಗೂಡ್ಸ್ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿಗೆ ಡಿಕ್ಕಿಪಡಿಸಿ, ಬಸ್ಸಿನ ಹಿಂಬದಿ ಹೋಗುತ್ತಿದ್ದ ಕಾರಿಗೂ ಸಹಾ ಡಿಕ್ಕಿಪಡಿದ್ದು, ಗೂಡ್ಸ್ ಆಟೋ ಚಾಲಕನಿಗೆ ಗಾಯಗಳಾಗಿರುತ್ತದೆ. ಈ ಬಗ್ಗೆ ಬಸ್ಸಿನ ಚಾಲಕ ಕೃಷ್ಣರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಟ್ರ್ಯಾಕ್ಟರ್ ಅಪಘಾತ ಚಾಲಕನ ದುರ್ಮರಣ 
               ಟ್ರ್ಯಾಕ್ಟರ್ ಅಪಘಾತಗೊಂಡು ಚಾಲಕ ಮರಣಹೊಂದಿದ ಘಟನೆ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 14-03-2018 ರಂದು ತೊರೆನೂರು ಗ್ರಾಮದ ನಿವಾಸಿಯಾದ ಮನೋಜ್ ಎಂಬುವವರು ಟ್ರ್ಯಾಕ್ಟರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಚಿಕ್ಕನಾಯಕನ ಹೊಸಳ್ಳಿ ಎಂಬಲ್ಲಿ ನಾಲೆಗೆ ಮಗುಚಿ ಬಿದ್ದು ಚಾಲಕ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, March 14, 2018

ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯ ಸಾವು 
           ದಿನಾಂಕ 11-03-2018 ರಂದು ಕೂಡ್ಲೂರು ಕೂಡಿಗೆಯ ನಿವಾಸಿ ಯಶೋಧರ ಎಂಬುವವರು ಧರ್ಮ ಎಂಬುವವರೊಂದಿಗೆ ಸ್ಕೂಟರಿನಲ್ಲಿ ಬಸವನಹಳ್ಳಿ ಎಂಬಲ್ಲಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಮೋಟಾರು ಸೈಕಲನ್ನು ಇಸ್ಮಾಯಿಲ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ್ದು, ಸ್ಕೂಟರಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಧರ್ಮರವರ ತಲೆಗೆ ಪೆಟ್ಟಾಗಿ ಚಿಕಿತ್ಸೆಯ ಬಗ್ಗೆ ಮೈಸೂರಿನ ಸಂತಜೋಸೆಫ್ ರ ಆಸ್ಪತ್ರೆಗೆ ದಾಖಲಿಸಿದ್ದವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ 12-03-2018 ರಂದು ಮೈಸೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕ್ಷುಲ್ಲಕ ಕಾರಣಕ್ಕೆ ಜಗಳ 
             ದಿನಾಂಕ 13-3-2018 ರಂದು ಗೂಡುಗದ್ದೆ ಗ್ರಾಮದ ನಿವಾಸಿಯಾದ ಮಣಿ ಎಂಬುವವರು ಕೆಲಸದ ನಿಮಿತ್ತ ಕಾರಿನಲ್ಲಿ ಪುಲಿಯೇರಿ ಗ್ರಾಮಕ್ಕೆ ಹೋಗುತ್ತಿರುವಾಗ ಪುಲಿಯೇರಿ ಗ್ರಾಮದ ರಸ್ತೆಯಲ್ಲಿ ಬೋಜ ಮತ್ತು ಇತರರು ಜೀಪನ್ನು ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರನ್ನು ಕಾರಿಗೆ ದಾರಿ ಬಿಡುವಂತೆ ಕೇಳಿದಾಗ ಅಲ್ಲಿದ್ದವರು ಏಕಾಏಕಿ ಕಾರಿನಲ್ಲಿದ್ದ ಮಣಿ, ಅಜೇಯರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ 
               ಮಡಿಕೇರಿ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಚೇತನ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಬೆಟ್ಟಗೇರಿ ಗ್ರಾಮದ ಉತ್ತಯ್ಯನವರ ಕಾಫಿ ತೋಟದ ಬಳಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಗಳಾದ ಉತ್ತಯ್ಯ, ರಮೇಶ್, ಧನು, ಪ್ರಕಾಶ್ ನಾಯಕ್ ಹಾಗೂ ಉಸ್ಮಾನ್ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ 6,200 ರೂ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಬೈಕಿಗೆ ಬಸ್ಸು ಡಿಕ್ಕಿ 
               ದಿನಾಂಕ 13-03-2018 ರಂದು ಪಿರಿಯಾಪಟ್ಟದ ನಿವಾಸಿ ಮಣಿಕಂಠ ಎಂಬುವವರು ಕಣಿವೆ ಗ್ರಾಮದಲ್ಲಿ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ರಾಘವೇಂದ್ರ ಖಾಸಗಿ ಬಸ್ಸು ಡಿಕ್ಕಿಯಾಗಿ ಮಣಿಕಂಠರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಾಚಾರಿಗೆ ಬೈಕ್ ಡಿಕ್ಕಿ 
              ದಿನಾಂಕ 13-03-2018 ರಂದು ಕೇಶವ ಎಂಬುವವರು ಮಾಯಮುಡಿಯಿಂದ ಮನೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ಮೋಟಾರು ಸೈಕಲನ್ನು ನಿಲ್ಲಿಸದೇ ಹೊರಟು ಹೋಗಿದ್ದು ಕೇಶವರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕೇಶವನವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, March 13, 2018

ವಿದ್ಯಾರ್ಥಿ ಆಕಸ್ಮಿಕ ಸಾವು
                          ದಿನಾಂಕ 11/03/2018ರಂದು ತಮಿಳುನಾಡಿನ ಕೊಯಮತ್ತೂರಿನಿಂದ ಪ್ರವಾಸ ಬಂದಿದ್ದ ಕಾಲೇಜು ವಿದ್ಯಾರ್ಥಿಗಳು ಗುಡ್ಡೆಹೊಸೂರು ಬಳಿ ತೆಪ್ಪದಕಂಡಿ ಎಂಬಲ್ಲಿ ಕಾವೇರಿ ಹೊಳೆಯಲ್ಲಿ ಪ್ರಶಾಂತ್‌ ಎಂಬ ವಿದ್ಯಾರ್ಥಿಯು ಕೈಕಾಲು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಬೈಕ್ ಡಿಕ್ಕಿ
                             ದಿನಾಂಕ 11/03/2018ರಂದು ಕೊಡಗರಹಳ್ಳಿ ನಿವಾಸಿ ಯಶೋಧರ ಎಂಬವರು ಅವರ ಸ್ನೇಹಿತ ಧರ್ಮ ಎಂಬವರೊಂದಿಗೆ ಗುಡ್ಡೆಹೊಸೂರಿನಿಂದ ಬಸವನಹಳ್ಳಿ ಕಡೆಗೆ ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಒಂದು ಬೈಕನ್ನು ಅದರ ಚಾಲಕ ಇಸ್ಮಾಯಿಲ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು  ಯಶೋಧರರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಯಶೋಧರ, ಧರ್ಮ, ಇಸ್ಮಾಯಿಲ್ ಮತ್ತು ಇಸ್ಮಾಯಿಲ್‌ರವರ ಬೈಕಿನ ಹಿಂಬದಿ ಸವಾರ ಪ್ರಶಾಂತ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ಅವಘಢ, ಮಹಿಳೆ ಸಾವು
                        ದಿನಾಂಕ 12/03/2018ರಂದು ಕೊಡ್ಲಿಪೇಟೆ ಬಳಿಯ ಅವರೆದಾಳು ನಿವಾಸಿ ಚಿನ್ನಮ್ಮ ಎಂಬವರು ಕೊಡ್ಲಿಪೇಟೆಗೆ ಹೋಗಲು ಕೆಎ-12-4115ರ ಖಾಸಗಿ ಬಸ್ಸನ್ನು ಬಸ್ಸನ್ನು ಏರಲು ಹೋಗುತ್ತಿರುವಾಗ ಬಸ್ಸಿನ ಚಾಲಕ ಕಾಶಿ ಎಂಬವರು ಬಸ್ಸನ್ನು ಅಜಾಗರೂಕತೆಯಿಂದ ಏಕಾಏಕಿ ಚಾಲಿಸಿದ ಪರಿಣಾಮ ಬಸ್ ಚಿನ್ನಮ್ಮರವರಿಗೆ ತಾಗಿ ಅವರು ಕೆಳಗೆ ಬಿದ್ದಾಗ ಬಸ್‌ನ ಚಕ್ರ ಚಿನ್ನಮ್ಮನವರ ಮೇಲೆ ಹರಿದು ಚಿನ್ನಮ್ಮರವರು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                         ದಿನಾಂಕ 04/03/2018ರಂದು ಶನಿವಾರಸಂತೆ ಬಳಿಯ ಗೋಪಾಲಪುರ ನಿವಾಸಿ ವಿರೂಪಾಕ್ಷ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12/03/2018ರಂದು ಮೃತರಾಗಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                       ದಿನಾಂಕ 11/03/2018ರಂದು ವಿರಾಜಪೇಟೆ ಬಳಿಯ ಕಡಂಗಮರೂರು ನಿವಾಸಿ ಪಾಪು ಎಂಬವರು ಅವರ ಪತ್ನಿ ಆಶಾ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸಪರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                          ದಿನಾಂಕ 12/03/2018ರಂದು ಶ್ರೀಮಂಗಲ ಬಳಿಯ ಈಸ್ಟ್ ನೆಮ್ಮಲೆ ನಿವಾಸಿ ಪಣಿ ಎರವರ ಗಣೇಶ್ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 12, 2018

 ಬೈಕ್ ಅಪಘಾತ ಸವಾರನ ದುರ್ಮರಣ:

     ಕೇರಳ ರಾಜ್ಯದ ತೋಲ್ಪಟ್ಟಿ ನಿವಾಸಿ ವಿ.ಕೆ. ಹಂಸ ಎಂಬವರು ತನ್ನ ಸ್ನೇಹಿತ ಸುದೀಶ್ ಎಂಬವರೊಂದಿಗೆ ತನ್ನ ಬಾಪ್ತು ಮೋಟಾರ್ ಸೈಕಲಿನಲ್ಲಿ ದಿನಾಂಕ 25-2-2018 ರಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಗೆ ಬಂದು ಸಂಜೆ ತೋಲ್ಪಟ್ಟಿಗೆ ಹಿಂದಿರುಗುತ್ತಿರುವಾಗ ಸಂಜೆ 7-30 ಗಂಟೆ ಸಮಯ ಟಿ.ಶೆಟ್ಟಿಗೇರಿ ಗ್ರಾಮದ ಪೂಕೋಳತೋಡು ಎಂಬಲ್ಲಿ ಬಿಪಿಎಲ್ ತಿರುವ ಜಂಕ್ಷನ್ ಗೆ ತಲುಪುವಾಗ್ಗೆ ಮೋಟಾರ್ ಸೈಕಲ್ ಅಪಘಾತಕ್ಕೀಡಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿ ಅವರನ್ನು ಚಿಕಿತ್ಸೆಗಾಗಿ ಕೇರಳ ಮಾನಂದವಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ವಿ.ಕೆ ಹಂಸರವರು ದಿನಾಂಕ 11-3-2018 ರಂದು ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಕಳವು:

    ಕಣದಲ್ಲಿ ಒಣಗಲು ಹಾಕಿದ ಕರಿಮೆಣಸನ್ನು ಕಳ್ಳರು ಕಳವು ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಂತೂರು ಮೂರ್ನಾಡು ಗ್ರಾಮದಲ್ಲಿ ನಡೆದಿದೆ. ಮರಗೋಡು ಗ್ರಾಮದ ನಿವಾಸಿ ದಯಾನಂದ ಎಂಬವರು ಕಾಂತೂರು ಮುರ್ನಾಡು ಗ್ರಾಮದಲ್ಲಿ ತಮ್ಮ ತೋಟದ ಕಣದಲ್ಲಿ ಹಸಿ ಕರಿಮೆಣಸನ್ನು ಒಣಗಲು ಹಾಕಿದ್ದು ಸುಮಾರು 750 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ದಿನಾಂಕ 10-3-2018ರಂದು ಸಮಯ 20-00 ಗಂಟೆಯಿಂದ 11-3-2018ರ ಬೆಳಗ್ಗೆ 10-00 ಗಂಟೆಯ ಮದ್ಯದ ಅವಧಿಯೊಳಗೆ ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬೆಲೆ ಅಂದಾಜು ರೂ. 70,000/- ಗಳಾಗಬಹುದು ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

Sunday, March 11, 2018

 ಬೈಕ್ ಅಪಘಾತ ಇಬ್ಬರಿಗೆ ಗಾಯ:

     ಕುಶಾಲನಗರದ ಮಾರ್ಕೆಟ್ ರಸ್ತೆ ನಿವಾಸಿ ರಂಜಿತ್ ಎಂಬವರು ದಿನಾಂಕ 10-3-2018 ರಂದು ಬೆಳಿಗ್ಗೆ 9-00 ಗಂಟೆಗೆ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕುಶಾಲನಗರದ ಬೈಚನಳ್ಳಿ ಗ್ರಾಮದ ಬೈಕ್ ಸರ್ವಿಸ್ ಸ್ಟೇಷನ್ ಗೆ ಹೋಗುತ್ತಿದ್ದಾಗ ಹಿಂದಿನಿಂದ ವಿನೀತ್ ಎಂಬವರು ತಮ್ಮ ಮೋಟಾರ್ ಸೈಕಲಿನಲ್ಲಿ ಅದೇ ಸರ್ವಿಸ್ ಸ್ಟೇಷನಿಗೆ ಹೋಗುತ್ತಿದ್ದ ಬೈಕನ್ನು ಅತೀ ವೇಗ  ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಮ ರಂಜಿತ್ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈನಿಕ ಸವಾರರು ಕೆಳಗೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಅಸಹಜ ಸಾವು:

     ವಿರಾಜಪೇಟೆ ತಾಲೋಕು ಚಾಮಿಯಾಲ ಗ್ರಾಮದ ನಿವಾಸಿ ನಾಸೀರ್ @ ಸಜ್ಜು ಎಂಬವರ ಪತ್ನಿ ಶ್ರೀಮತಿ ಅಸ್ಮಾ ಎಂಬವರು ದಿನಾಂಕ 10-3-2018 ರಂದು ಬೆಳಗ್ಗೆ 10-30 ಗಂಟೆ ಸಮಯದಲ್ಲಿ ತಮ್ಮ ಮನೆಯ ಒತ್ತಿನಲ್ಲಿರುವ ಶೆಡ್ ನಲ್ಲಿ ಅಡುಗೆ ಮಾಡಲು ಒಲೆಗೆ ಬೆಂಕಿ ಹಾಕಲು ಸೀಮೆಣ್ಣೆ ಸುರಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಆಕೆಯ ಬಟ್ಟೆಗಳಿಗೆ ತಗುಲಿ ಬೆಂಕಿಯ ಸುಟ್ಟ ಗಾಯಗಳಿಂದ ಆಕೆ ಸಾವನಪ್ಪಿದ್ದು, ಈ ಸಂಬಂಧ ಮೃತರ ತಂದೆ ಸಿ. ಇಬ್ರಾಹಿಂ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿಯ ಆತ್ಮಹತ್ಯೆ:
    ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳಾಜಿ ಗ್ರಾಮದ ಚೆರಿಯಪಂಡ ಸಾಬು ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ 80 ವರ್ಷ ಪ್ರಾಯದ ಎರವರ ಮಣಿ ಎಂಬ ವ್ಯಕ್ತಿ ದಿನಾಂಕ 10-3-2018 ರಂದು ಬಾಳಾಜಿ ಗ್ರಾಮದಲ್ಲಿರುವ ಚೆರಿಯಪಂಡ ಸಾಬುರವರಿಗೆ ಸೇರಿದ ಕಾಫಿ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ದಾರಿ ತಡೆದು ಹಲ್ಲೆ:

     ವಿರಾಜಪೇಟೆ ತಾಲೋಕು ಗೋಣಿಕೊಪ್ಪದ ನೇತಾಜಿ ಬಡಾವಣೆಯ ವಾಸಿ ಪ್ರಭಾಕರ ನೆಲ್ಲಿತ್ತಾಯ ಎಂಬವರು ದಿನಾಂಕ 10-3-2018 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಹೋಗುತ್ತಿದ್ದಾಗ ಆರೋಪಿ ವಕೀಲ ಸಂದೇಶ್ ನೆಲ್ಲಿತ್ತಾಯ ಎಂಬವರು ಅಲ್ಲಿಗೆ ಬಂದು ಪ್ರಭಾಕರ ನೆಲ್ಲಿತ್ತಾಯರವರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈಕು ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಹೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಶಿವಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಹೆಚ್.ಎಸ್. ಸುನೀತ ಎಂಬವರ ಗಂಡ 42 ವರ್ಷ ಪ್ರಾಯದ ಸುಬ್ರಮಣಿ ಎಂಬವರು ಕೆಲವು ವರ್ಷಗಳಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಬೇಸತ್ತು ದಿನಾಂಕ 10-3-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿ ಕೊಂಡಿದ್ದು, ಈ ಸಂಬಂಧ ಶ್ರೀಮತಿ ಹೆಚ್.ಎಸ್. ಸುನೀತರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

Saturday, March 10, 2018

ಆನೆ ತುಳಿದು ವ್ಯಕ್ತಿಯ ಸಾವು 
                   ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ಬಾಡಗ ಬಾಣಂಗಾಲ ಗ್ರಾಮದ ಕಾನನ ಕಾಡ್ ತೋಟದಲ್ಲಿ ವಾಸವಿರುವ ರುದ್ರಪ್ಪ ಎಂಬುವವರು ದಿನಾಂಕ 9-3-2018 ರಂದು ಚೆನ್ನಯ್ಯನ ಕೋಟೆಗೆ ಅಂಗಡಿಗೆಂದು ಹೋಗುತ್ತಿರುವಾಗ ಕಾಫಿತೋಟದ ಒಳಗೆ ಕಾಡಾನೆಯು ದಾಳಿ ಮಾಡಿ ರುದ್ರಪ್ಪನವರು ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

Friday, March 9, 2018

ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 08/03/2018ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ಬೆಂಜಾಂಡ ಕಾಶಿ ಎಂಬವರು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಕಾಶಿರವರು ಅತೀವ ಮದ್ಯಪಾನದ ಚಟ ಮತ್ತು ಸಾಲದ ವಿಚಾರದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                       ದಿನಾಂಕ 26/01/2018ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಲೋಕೇಶ್ ಎಂಬವರು ನಗರದ ಈಸ್ಟ್ ಎಂಡ್ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-13-ಎಂ-5964ರ ಕಾರನ್ನು ಅದರ ಚಾಲಕ ದೀಪಕ್ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲೋಕೇಶ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಲೋಕೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಹಲ್ಲೆ ಪ್ರಕರಣ
                     ದಿನಾಂಕ 07/03/2018ರಂದು ಸಂಜೆ ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಅವಿನಾಶ್ ಎಂಬವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿಗಳಾದ ಮಹೇಶ್, ವಾಸು, ಯೋಗೇಶ ಮತ್ತು ಚಂದ್ರ ಎಂಬವರು ಗುಂಪು ಕೂಡಿಕೊಂಡು ಹಳೆ ವೈಷಮ್ಯದಿಂದ ಅವಿನಾಶ್‌ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ವರದಿಯಾಗಿದ್ದು ಅದೇ ರೀತಿ ಅವಿನಾಶ್, ವಿಶ್ವನಾಥ್, ಕಲ್ಯಾಣಿ, ಮತ್ತು ಮಂಜು ಎಂಬವರು ಸೇರಿಕೊಂಡು ಮಹೇಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಸಿದ್ದಾಪುರ ಪೊಲೀಸರು ಎರಡೂ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                    ದಿನಾಂಕ 08/03/2018ರಂದು ಕುಶಾಲನಗರ ಬಳಿಯ ಬಸವನಹಳ್ಳಿ ನಿವಾಸಿ ದೊಡ್ಡಯ್ಯ ಎಂಬವರು ಮನೆಯ ಹಿಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಹಿಂದೆ ನಡೆದ ವಾಹನ ಅಪಘಾತದಲ್ಲಿ ಉಂಟಾದ ನೋವಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                  ಪೊನ್ನಂಪೇಟೆ ಬಳಿಯ ನಿಟ್ಟೂರು ಗ್ರಾಮದ ನಿವಾಸಿ ಕಮಲಾಕ್ಷಿ ಎಂಬವರಿಗೆ ಸೇರಿದ ತೋಟಕ್ಕೆ ದಿನಾಂಕ 09/02/2018, 10/02/2018 ಮತ್ತು 11/02/2018ರಂದು ಅದೇ ಗ್ರಾಮದ ನಿವಾಸಿಗಳಾದ ಕೆ.ಎಸ್.ಲತಾ, ಲಕ್ಷ್ಮಣ ಮತ್ತು ದೀಪು ಎಂಬವರು ಅಕ್ರಮವಾಗಿ ಪ್ರವೇಶಿಸಿ ಸುಮಾರು ರೂ. 35,000/- ಮೌಲ್ಯದ ಕಾಫಿ ಮತ್ತು ಕರಿ ಮೆಣಸನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                     ದಿನಾಂಕ 08/03/2018ರಂದು ಹಾಸನದ ಯೆಸಳೂರು ನಿವಾಸಿ ಶಿವರಾಜ್ ಎಂಬವರು ಅವರ ಮೋಟಾರು ಬೈಕಿನಲ್ಲಿ ಮನೆಗೆ ಹೋಗುತ್ತಿರುವಾಗ ಹೊಸೂರು ರಸ್ತೆಯ ಚಿಕ್ಕಕೊಳತ್ತೂರು ಜಂಕ್ಷನ್‌ ಬಳಿ ಶನಿವಾರಸಂತೆ ಕಡೆಯಿಂದ ಕೆಎ-12-ಎನ್-3726ರ ಮಾರುತಿ ವ್ಯಾನನ್ನು ಅದರ ಚಾಲಕ ಆನಂದ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿವರಾಜ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಶಿವರಾಜ್‌ರವರಿಗೆ ಹಾಗೂ ಮಾರುತಿ ವ್ಯಾನಿನಲ್ಲಿದ್ದ ಲೋಲಾಕ್ಷಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 8, 2018

ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ:
 
     ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಳ್ಳಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಅರ್ಚನಾ ಎಂಬವರು ಗೌಡಳ್ಳಿ ಗ್ರಾಮದ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿ ಕೆಲಸ  ನಿರ್ವಹಿಸಿಕೊಂಡಿದ್ದು   ಆಕೆಗೂ ಮತ್ತು ಗಂಡ ಅಂಥೋಣಿ ನಡುವೆ ಕೌಟುಂಬಿಕ ಕಲಹ ವಿದ್ದು, ದಿನಾಂಕ 7-3-2018 ರಂದು ಸಮಯ ಬೆಳಗ್ಗೆ 9-00 ಗಂಟೆಯಿಂದ 15-00 ಗಂಟೆಯ ನಡುವಿನ ಅವಧಿಯಲ್ಲಿ  ಅರ್ಚನಾರವರನ್ನು ಆಕೆಯ ಗಂಡ ಆಂಥೋಣಿ ನೈಲಾನ್ ಹಗ್ಗವನ್ನು ಬಳಸಿ ಕುತ್ತಿಗೆಯನ್ನು ಬಿಗಿದು ಕೊಲೆಗೈದು ಬಳಿಕ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಗೌಡಳ್ಳಿ ಪ್ರಾಥಮಿಕ  ಆರೋಗ್ಯಕೇಂದ್ರದಲ್ಲಿಲ ಗ್ರೂಪ್ ಡಿ ನೌಕರಳಾಗಿರುವ ಶ್ರೀಮತಿ ಮಮ್ತಾಜ್ ಬೇಗಂರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಅಕ್ರಮ ಮರಳು ಸಂಗ್ರಹ:
 
      ಮಡಿಕೇರಿ ತಾಲೋಕು ನಾಪೋಕ್ಲು ಗ್ರಾಮದ ನಿವಾಸಿ ಸಾಹಿದ್ @ ಸುಕ್ರು  ಎಂಬವರು   ಒಂದು ಟಿಪ್ಪರ್ ನಲ್ಲಿ ತುಂಬಿಸುವಷ್ಟು  ಮರಳನ್ನು ಬೇತು ಗ್ರಾಮದ ಕಾವೇರಿ ಹೊಳೆಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ದಿನಾಂಕ 7-3-2018 ರಂದು 16-00 ಗಂಟೆಯ ಸಮಯದಲ್ಲಿ ಫಿರ್ಯಾದಿ ಬಿ. ರೇಷ್ಮಾ, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ರವರು ಪತ್ತೆಹಚ್ಚಿ  ದಾಸ್ತಾನು ಮಾಡಿದ ಮರಳನ್ನು ಮತ್ತು  ದಾಸ್ತಾನ ಮಾಡಲು ಬಳಸಿದ ಪ್ಲಾಸ್ಟಿಕ್ ಬಕೇಟ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ನೀಡಿದ ದೂರಿನ  ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, March 7, 2018

ಜೀವನದಲ್ಲಿ ಜುಗುಪ್ಸೆ ವ್ಯಕ್ತಿಯ ಆತ್ಮಹತ್ಯೆ 
                  ಅನಾರೋಗ್ಯದಿಂದ ಬಳಲುತ್ತಿದ್ದ ವಿರಾಜಪೇಟೆ ತಾಲೂಕಿನ ತೂಚಮಕೇರಿಯ ನಿವಾಸಿ ಗೋವಿಂದ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 5-3-2018 ರಂದು ಮನೆಯ ಒಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿದ್ದವರನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಗೋವಿಂದರವರು ಮೃತಪಟ್ಟಿದ್ದು ಈ ಬಗ್ಗೆ ಅಯ್ಯಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಕಾಳು ಮೆಣಸು ಕಳವು 
                         ವಿರಾಜಪೇಟೆ ತಾಲೂಕಿನ ಐಮಂಗಲ ಗ್ರಾಮದ ನಿವಾಸಿ ಬೊಳ್ಳಚಂಡ ಪ್ರಕಾಶ್ ಎಂಬುವವರು ದಿನಾಂಕ 3-3-2018 ರಂದು ಕೆಲಸದ ನಿಮಿತ್ತ ಕುಶಾಲನಗರಕ್ಕೆ ಹೋಗಿದ್ದವರು ದಿನಾಂಕ 6-3-2018 ರಂದು ವಾಪಾಸು ಮನೆಗೆ ಬಂದು ಕಾಳು ಮೆಣಸು ಇಟ್ಟಂತಹ ರೂಮನ್ನು ನೋಡಲಾಗಿ ಬೀಗವನ್ನು ಯಾರೋ ಕಳ್ಳರು ಒಡೆದು ಸುಮಾರು 50 ಕೆ ಜಿಯಷ್ಟು ಕಾಳುಮೆಣಸನ್ನು ಕಳವು ಮಾಡಿದ್ದು ಈ ಬಗ್ಗೆ ಪ್ರಕಾಶ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, March 6, 2018

ಕಳವು ಪ್ರಕರಣ
                        ದಿನಾಂಕ 04/03/2018ರಂದು ನಾಪೋಕ್ಲು ಬಳಿಯ ಕುಂಜಿಲ ನಿವಾಸಿ ಅಬ್ದುಲ್ ರಜಾಕ್‌ ಎಂಬವರು ಕುಂಜಿಲ ಗ್ರಾಮದ ಪೈನೆರಿಯಲ್ಲಿ ನಡೆಯುತ್ತಿದ್ದ ಸ್ವಲಾತ್ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಕುಂಜಿಲದ ಮನೆಯಿಂದ ಹೋಗಿದ್ದು ಅಲ್ಲಿಂದ ಹಿಂದಿರುಗಿದಾಗ ಮನೆಯ ಹಿಂದಿನ ಬಾಗಿಲನ್ನು ಯಾರೋ ಒಡೆದು ಒಳ ನುಗ್ಗಿ ಮನೆಯೊಳಗೆ ಬೀರುವಿನಲ್ಲಿಟ್ಟಿದ್ದ ಅಬ್ದುಲ್ ರಜಾಕ್‌ರವರ ಪರ್ಸಿನಿಂದ ರೂ.60,000/- ನಗದು ಹಾಗೂ 6000 ರಿಯಾಲ್ ಸೌದಿ ಕರೆನ್ಸಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ 
                              ದಿನಾಂಕ 05/03/2018ರಂದು ಕುಶಾಲನಗರ ಬಳಿಯ ಮದಲಾಪುರ ನಿವಾಸಿ ರಾಜೇಶ್ ಎಂಬವರು ಅವರ ಸ್ನೇಹಿತ ಹರೀಶ್‌ ಎಂಬವರೊಂದಿಗೆ ಕೆಎ-12-ಕ್ಯು-8730ರ ಬೈಕಿನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಕುಶಾಲನಗರದ ಮಾದಾಪಟ್ನ ಬಳಿ ಎದುರಿನಿಂದ ಕೆಎ-12-ಬಿ-3518ರ ಟಾಟಾ ಏಸ್ ಸರಕು ಸಾಗಣೆ ವಾಹನವನ್ನು ಅದರ ಚಾಲಕ ಪ್ರವೀಣ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜೇಶ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ರಾಜೇಶ್‌ ಹಾಗೂ ಅವರ ಸ್ನೇಹಿತ ಹರೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ಕಾರು ಮಗುಚಿ ವ್ಯಕ್ತಿ ಸಾವು
                        ದಿನಾಂಕ 05/03/2018ರಂದು ವಿರಾಜಪೇಟೆ ಬಳಿಯ ಬಾಳುಗೋಡು ನಿವಾಸಿ ಟಿ.ಸಿ.ಆಲಿ ಎಂಬವರು ಕೆ.ಎಂ.ಯೂಸುಫ್, ಅಹಮದ್, ಎಡಪಾಲ ಗ್ರಾಮದ ಯೂಸುಫ್ ಮತ್ತು ಬೆಮ್ಮತ್ತಿಯ ಮುಸ್ತಾಫ ಎಂಬವರೊಂದಿಗೆ ಕೆಎ-09-ಜೆಡ್-7907ರ ಕಾರಿನಲ್ಲಿ ಕೇರಳಕ್ಕೆ ಹೋಗುತ್ತಿರುವಾಗ ಮಾಕುಟ್ಟ ದೇವಸ್ಥಾನದ ಬಳಿ ಚಾಲಕ  ಮುಸ್ತಫಾರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಮುಸ್ತಫಾರವರ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಭಾಗದ ಗುಂಡಿಗೆ ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ತೀವ್ರವಾಗಿ ಗಾಯಗೊಂಡ ಚಾಲಕ ಮುಸ್ತಫಾರವರು ಕೇರಳದ ಪರಿಹಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                        ದಿನಾಂಕ 05/03/2018ರಂದು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದ ಸಿ.ಟಿ.ಬಿದ್ದಪ್ಪ ಎಂಬವರು ಪಿತೃ ಕಾರ್ಯಕ್ಕೆಂದು ವಿನು ಮೇದಪ್ಪ ಎಂಬವರ ಮನೆಗೆ ಹೋಗಿದ್ದು ಅಲ್ಲಿ ಸಿ.ಟಿ.ಬಿದ್ದಪ್ಪ, ಸಿ.ಟಿ.ನಾಚಪ್ಪ, ಸಿ..ಟಿ.ಉತ್ತಪ್ಪ, ಸಂಪತ್ ಹಾಗೂ ಸುನೀತ ಎಂಬವರು ಕಾರ್ಯ ಮುಗಿಸಿ ಊಟ ಮಾಡುತ್ತಿರುವಾಗ ತೋಟದ ಉಸ್ತುವಾರಿಯ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ನಾಚಪ್ಪ, ಉತ್ತಪ್ಪ, ಸಂಪತ್ ಹಾಗೂ ಸುನೀತರವರು ಸಿ.ಟಿ.ಬಿದ್ದಪ್ಪನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

Monday, March 5, 2018

ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ತೋರ ಗ್ರಾಮದ ನಿವಾಸಿ ದಿಲೀಪ್ ಎಂಬವರು ದಿನಾಂಕ 4-3-2018 ರಂದು ತನ್ನ ಬಾಪ್ತು ಮೋಟಾರ್ ಸೈಕಲಿನಲ್ಲಿ ತನ್ನ ಸ್ನೇಹಿತ ಸಂತು ಎಂಬವರನ್ನು ನೋಡಲು ಬೆಟ್ಟತ್ತೂರು ಗ್ರಾಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೆಟ್ಟತ್ತೂರು ಗ್ರ಻ಮದ ನಿವಾಸಿಗಳಾದ ಸೋಮಯ್ಯ, ತನು, ಚಂಗಪ್ಪ ಮತ್ತು ಇತರರ ನಡುವೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ಏರ್ಪಟ್ಟು ಉಬಯ ಕಡೆಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೈಕಲಿನಲ್ಲಿ ಹೋಗುತ್ತಿದ್ದ ಹುಡುಗನಿಗೆ ಬೈಕ್ ಡಿಕ್ಕಿ:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಕೊತ್ತೂರು ಗ್ರಾಮದ ನಿವಾಸಿ ಸಿ.ಜೆ. ದಿನೇಶ್ ಎಂಬವರ ಅಣ್ಣ ಸಿ.ಜೆ. ಗಿರೀಶ್ ಎಂಬವರ ಮಗ ಅಂಕುಶ ಎಂಬವನು ದಿನಾಂಕ 2-3-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಸೈಕಲನ್ನು ತುಳಿದುಕೊಂಡು ಶನಿವಾರಸಂತೆಗೆ ಹೋಗಿದ್ದು ಶನಿವಾರಸಂತೆಯ ಚಿನ್ನಳ್ಳಿ ರಸ್ತೆಯ ಬಸವೇಶ್ವರ ನಗರದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಮೊಯ್ದೀನ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಂಕುಶ್ ತುಳಿದುಕೊಂಡು ಹೋಗುತ್ತಿದ್ದ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಅಂಕುಶನು ರಸ್ತೆಯ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ಮಹಿಳೆ ಸಾವು:

     ಸೋಮವಾರಪೇಟೆ ತಾಲೋಕು ಹಾಡಗೇರಿ ಗ್ರಾಮದ ನಿವಾಸಿ ವೇಲಾಯುಧ ಎಂಬವರ ಪತ್ನಿ ಶ್ರೀಮತಿ ಮುತ್ತಮ್ಮ ಎಂಬವರಿಗೆ ವಿಪರೀತ ಮದ್ಯಸೇವಿಸುವ ಚಟವಿದ್ದು ದಿನಾಂಕ 4-3-2018 ರಂದು 3-00 ಪಿ.ಎಂ. ಸಮಯಕ್ಕೆ ತಮ್ಮ ವಾಸದ ಮನೆಯ ಹತ್ತಿರದ ತೋಟಕ್ಕೆ ಹೋಗಿದ್ದು ತೋಟದಲ್ಲಿ ಇರುವ ಕೆರೆಯೊಂದಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
 
 

Sunday, March 4, 2018

ತೋಟಕ್ಕೆ ಬೆಂಕಿ
                           ದಿನಾಂಕ 02/03/2018ರಂದು ಮಾದಾಪುರ ಬಳಿಯ ತೋಟಗಾರಿಕಾ ಇಲಾಖೆಯ ತೋಟಗಾರಿಕಾ ಕ್ಷೇತ್ರದ ಸುಮಾರು 40 ಏಕರೆ ತೋಟಕ್ಕೆ ಬೆಂಕಿ ತಗುಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                           ದಿನಾಂಕ 01/03/2018ರಂದು ವಿರಾಜಪೇಟೆ ಬಳಿಯ ಕುಟ್ಟಂದಿ ನಿವಾಸಿ ಜೆ.ಬಿ.ಮಹೇಶ ಎಂಬವರು ವಿ.ಬಾಡಗ ಗ್ರಾಮದಲ್ಲಿ ಪಡಿತರ ತರಲು ಅಂಗಡಿಗೆ ಹೋಗುತ್ತಿರುವಾಗ ದಾರಿ ಮಧ್ಯೆ ಕುಪ್ಪಂಡ ಮೊಣ್ಣಪ್ಪ ಎಂಬವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, March 3, 2018

ಕರಿಮೆಣಸು ಕಳ್ಳತನ
                  ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ನಿವಾಸಿಯಾದ ಮಾಳೇಟ್ಟಿರ ದೇವಯ್ಯರವರು ಅವರ ತೋಟದಿಂದ ಕುಯಿದಿದ್ದ ಕಾಳು ಮೆಣಸನ್ನು ಕಣದಲ್ಲಿ ಒಣಗಲು ಹಾಕಿದ್ದು, ದಿನಾಂಕ 1-3-2018 ರ ರಾತ್ರಿ ಕಣದಿಂದ ಯಾರೋ ಅಂದಾಜು 100 ಕೆ ಜಿ ಯಷ್ಟು ಕರಿಮೆಣಸನ್ನು ಕಳವು ಮಾಡಿರುವುದಾಗಿ ದೇವಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೀರಿಗೆ ಬಿದ್ದು ವಿದ್ಯಾರ್ಥಿ ಸಾವು
             ದಿನಾಂಕ 2-3-2018 ರಂದು ಹಾಸನ ಜಿಲ್ಲೆಯ ಅರಸಿಕೆರೆಯ ಹೊಯ್ಸೆಳೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಕೊಡಗು ಜಿಲ್ಲೆಗೆ ಬಂದಿದ್ದು, ಕುಶಾಲನಗರದ ಕಣಿವೆ ಎಂಬಲ್ಲಿ ಕಾವೇರಿ ಹೊಳೆಯಲ್ಲಿ ಕೈಕಾಲು ತೊಳೆಯುವ ಸಮಯದಲ್ಲಿ ವಿನೋದ್ ಎಂಬ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

Friday, March 2, 2018

ಅಪರಿಚಿತ ಶವ ಪತ್ತೆ
                       ದಿನಾಂಕ 22/02/2018ರಂದು ವಿರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ನಿತ್ರಾಣಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಗಣೇಶ್‌ ಎಂಬ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 01/03/2018ರಂದು ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ
                          ದಿನಾಂಕ 01/03/2018ರಂದು ಗೋಣಿಕೊಪ್ಪ ನಗರದ ಪಾಲಿಬೆಟ್ಟ ಜಂಕ್ಷನ್‌ನಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಹೆಚ್‌.ವೈ.ರಾಜುರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಗೋಣಿಕೊಪ್ಪದ ಪಟೇಲ್‌ ನಗರ ನಿವಾಸಿ ಅಯ್ಯಪ್ಪ ಎಂಬಾತನು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೆರೆಗೆ ಬಿದ್ದು ವ್ಯಕ್ತಿ ಸಾವು
                      ದಿನಾಂಕ 01/03/2018ರಂದು ಕುಟ್ಟ ಬಳಿಯ ತೈಲ ನಿವಾಸಿ ಪಂಜರಿ ಎರವರ ಗಣೇಶ ಎಂಬಾತನ ಶವವು ಕೆರೆಯಲ್ಲಿ ಪತ್ತೆಯಾಗಿದ್ದು ದಿನಾಂಕ 27/02/2018ರಂದು ಮದ್ಯಪಾನ ಮಾಡಿ ತಂದೆ ಚಾತನನ್ನು ನೋಡಿ ಬರಲು ಹೋದವನು ಕೆರೆಯ ಏರಿಗಾಗಿ ನಡೆದುಕೊಂಡು ಬರುವಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                     ಶ್ರೀಮಂಗಲ ಬಳಿಯ ಹರಿಹರ ನಿವಾಸಿ ಪಣಿ ಎರವರ ಚಿಪ್ಪ ಎಂಬವರು  ದಿನಾಂಕ 27/02/2018ರಂದು ಹರಿಹರ ನಿವಾಸಿ ಟಿ.ಬಿ. ಜೀವನ್‌ ಎಂಬವರಿಗೆ ಸೇರಿದ ಸುಮಾರು 5,000/- ರೂ ಮೌಲ್ಯದ 15 ಕೆ.ಜಿ. ಕರಿ ಮೆಣಸನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 27/02/2018ರಂದು ಏಳನೇ ಹೊಸಕೋಟೆ ನಿವಾಸಿ ಬಾಪುಟ್ಟಿ ಎಂಬವರು 7ನೇ ಹೊಸಕೋಟೆಯ ಲಕ್ಷ್ಮಿ ತೋಟದಲ್ಲಿ ಕಣಜದ ಗೂಡನ್ನು ಸುಡಲು ಹೋಗುತ್ತಿರುವಾಗ ತೋಟದಲ್ಲಿ ಮರವೊಂದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಸಾವಿಗೀಡಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                     ದಿನಾಂಕ 01/03/2018ರಂದು ಮಡಿಕೇರಿ ಬಳಿಯ ಕಟ್ಟೆಮಾಡು ಗ್ರಾಮದಲ್ಲಿ ಕಿರು ಹೊಳೆಯ ಸೇತುವೆ ಬಳಿ ಮಧು ಎಂಬಾತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಕ್ರಮ ಜೂಜಾಟ 
                    ದಿನಾಂಕ 01/03/2018ರಂದು ಕರ್ಣಂಗೇರಿ ಗ್ರಾಮದ ಮೆಡಿಕಲ್‌ ಕಾಲೇಜಿಗೆ ಹೋಗುವ ರಸ್ತೆಯ ಬದಿಯ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಚೇತನ್‌ರವರು ಜೂಜಾಡುತ್ತಿದ್ದ ನರೇಶ್‌, ಅನಿಲ್ ನವೀನ್, ಸಲೀಂ, ಚಂದನ್, ಸುಜಿತ್‌ ಶೆಟ್ಟಿ ಮತ್ತು ಶರಣ್ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ರೂ.10,370/-ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 1, 2018

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದ ಟಿ.ಕೆ. ಮಾದಯ್ಯ ಎಂಬವರ ಅಕ್ಕ ಶ್ರೀಮತಿ ಕರಿನೆರವಂಡ ಮೀನಾಕ್ಷಿ @ ಗೀತಾ ರವರು ಕೆಲವು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದು ದಿನಾಂಕ 27-2-2018 ರಂದು ಅಪರಾಹ್ನ 3-15 ಗಂಟೆ ಸಮಯದಲ್ಲಿ ಅಂಗನವಾಡಿಯಿಂದ ಕೆಲಸ ಮುಗಿಸಿ ಮನೆಗೆ ಬಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು, ಅವರನ್ನು ಚಿಕಿತ್ಸೆಗಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದು ಹೋಗಿದ್ದು ಅಲ್ಲಿ ಸದರಿ ಶ್ರೀಮತಿ ಕೆ. ಮೀನಾಕ್ಷಿಯವರು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಮೇಲೆ ಪತಿಯಿಂದ ಹಲ್ಲೆ:

     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಿಬ್ಬೆಟ್ಟ ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ಜಿ.ಕೆ. ಗಂಗೆಯವರು ದಿನಾಂಕ 26-2-2018 ರಂದು ಕೆಲಸಕ್ಕೆ ರಜೆ ಇದ್ದುದ್ದರಿಂದ ಮನೆಯಲ್ಲಿಯೇ ಇದ್ದು, ಗಂಡ ಶೇಖರ ಪೇಟೆಗೆ ಹೋಗಿ ರಾತ್ರಿ 9:00 ಗಂಟೆಗೆ ಬ್ರಾಂದಿ ಕುಡಿದು ಕೊಂಡು ಮನೆಗೆ ಬಂದು ಪತ್ನಿ ಗಂಗೆಯೊಂದಿಗೆ ಜಗಳ ತೆಗೆದು ಓಲೆಯಲ್ಲಿದ್ದ ಕಟ್ಟಿಗೆಯನ್ನು ತಂದು ಗಂಗೆಯವರ ಬಲಕೈ ಮುಂಗೈಗೆ ತಲೆಗೆ ಹಾಗೂ ಮುಖಕ್ಕೆ ಹೊಡೆದು ಕೆಳಗೆ ಬೀಳಿಸಿ ತೊಡೆಗೆ ಬೆಂಕಿ ಕೊಳ್ಳಿಯಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಗಂಗೆಯವರಿಗೆ ಸುಟ್ಟ ಗಾಯಗಳಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆರೆಗೆ ಬಿದ್ದು ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣೆ ಸರಹದ್ದಿನ ಕಿರುಗೂರು ಗ್ರಾಮದ ನಿವಾಸಿ ಬಲ್ಯಮೀದೇರಿರ ರಾಜು ಎಂಬವರ 2ನೇ ಮಗ 26 ವರ್ಷ ಪ್ರಾಯದ ದಿಲನ್@ ದೇವಯ್ಯ ಎಂಬವರು ದಿನಾಂಕ 26-2-2018 ರ ಸಂಜೆ 6-00 ಗಂಟೆಯಿಂದ ದಿನಾಂಕ 28-2-2018ರ ಬೆಳಗ್ಗೆ 7-00 ಗಂಟೆಯ ಮದ್ಯದ ಅವಧಿಯಲ್ಲಿ ಅವರ ಕಾಫಿತೋಟದಲ್ಲಿರುವ ಕೆರೆಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
 
     ಕುಟ್ಟ ಪೊಲೀಸ್ ಠಾಣೆ ಸರಹದ್ದಿನ ಕೋತೂರು ಗ್ರಾಮದ ನಿವಾಸಿ ವಿ.ಟಿ. ಶಿವಪ್ಪ ಎಂಬವರು ದಿನಾಂಕ 28-2-2018 ರಂದು ಬೆಳಿಗ್ಗೆ 8-00 ಗಂಟೆಗೆ ತನ್ನ ಸ್ನೇಹಿತನೊಂದಿಗೆ ತಮ್ಮ ಮನೆಯ ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಕೋತೂರು ಗ್ರಾಮದ ರವಿ, ಗಾಂಧಿ ಹಾಗು ಮಹಾದೇವ ರವರುಗಳು ಅಲ್ಲಿಗೆ ಬಂದು ವಿ.ಟಿ. ಶಿವಪ್ಪನವರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಮರಳು ಸಾಗಿಸುತ್ತಿದ್ದುದನ್ನು ಪೊಲೀಸರಿಗೆ ತಿಳಿಸಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ನೋವು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.