Sunday, March 11, 2018

 ಬೈಕ್ ಅಪಘಾತ ಇಬ್ಬರಿಗೆ ಗಾಯ:

     ಕುಶಾಲನಗರದ ಮಾರ್ಕೆಟ್ ರಸ್ತೆ ನಿವಾಸಿ ರಂಜಿತ್ ಎಂಬವರು ದಿನಾಂಕ 10-3-2018 ರಂದು ಬೆಳಿಗ್ಗೆ 9-00 ಗಂಟೆಗೆ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕುಶಾಲನಗರದ ಬೈಚನಳ್ಳಿ ಗ್ರಾಮದ ಬೈಕ್ ಸರ್ವಿಸ್ ಸ್ಟೇಷನ್ ಗೆ ಹೋಗುತ್ತಿದ್ದಾಗ ಹಿಂದಿನಿಂದ ವಿನೀತ್ ಎಂಬವರು ತಮ್ಮ ಮೋಟಾರ್ ಸೈಕಲಿನಲ್ಲಿ ಅದೇ ಸರ್ವಿಸ್ ಸ್ಟೇಷನಿಗೆ ಹೋಗುತ್ತಿದ್ದ ಬೈಕನ್ನು ಅತೀ ವೇಗ  ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಮ ರಂಜಿತ್ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈನಿಕ ಸವಾರರು ಕೆಳಗೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಅಸಹಜ ಸಾವು:

     ವಿರಾಜಪೇಟೆ ತಾಲೋಕು ಚಾಮಿಯಾಲ ಗ್ರಾಮದ ನಿವಾಸಿ ನಾಸೀರ್ @ ಸಜ್ಜು ಎಂಬವರ ಪತ್ನಿ ಶ್ರೀಮತಿ ಅಸ್ಮಾ ಎಂಬವರು ದಿನಾಂಕ 10-3-2018 ರಂದು ಬೆಳಗ್ಗೆ 10-30 ಗಂಟೆ ಸಮಯದಲ್ಲಿ ತಮ್ಮ ಮನೆಯ ಒತ್ತಿನಲ್ಲಿರುವ ಶೆಡ್ ನಲ್ಲಿ ಅಡುಗೆ ಮಾಡಲು ಒಲೆಗೆ ಬೆಂಕಿ ಹಾಕಲು ಸೀಮೆಣ್ಣೆ ಸುರಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಆಕೆಯ ಬಟ್ಟೆಗಳಿಗೆ ತಗುಲಿ ಬೆಂಕಿಯ ಸುಟ್ಟ ಗಾಯಗಳಿಂದ ಆಕೆ ಸಾವನಪ್ಪಿದ್ದು, ಈ ಸಂಬಂಧ ಮೃತರ ತಂದೆ ಸಿ. ಇಬ್ರಾಹಿಂ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿಯ ಆತ್ಮಹತ್ಯೆ:
    ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳಾಜಿ ಗ್ರಾಮದ ಚೆರಿಯಪಂಡ ಸಾಬು ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ 80 ವರ್ಷ ಪ್ರಾಯದ ಎರವರ ಮಣಿ ಎಂಬ ವ್ಯಕ್ತಿ ದಿನಾಂಕ 10-3-2018 ರಂದು ಬಾಳಾಜಿ ಗ್ರಾಮದಲ್ಲಿರುವ ಚೆರಿಯಪಂಡ ಸಾಬುರವರಿಗೆ ಸೇರಿದ ಕಾಫಿ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ದಾರಿ ತಡೆದು ಹಲ್ಲೆ:

     ವಿರಾಜಪೇಟೆ ತಾಲೋಕು ಗೋಣಿಕೊಪ್ಪದ ನೇತಾಜಿ ಬಡಾವಣೆಯ ವಾಸಿ ಪ್ರಭಾಕರ ನೆಲ್ಲಿತ್ತಾಯ ಎಂಬವರು ದಿನಾಂಕ 10-3-2018 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಹೋಗುತ್ತಿದ್ದಾಗ ಆರೋಪಿ ವಕೀಲ ಸಂದೇಶ್ ನೆಲ್ಲಿತ್ತಾಯ ಎಂಬವರು ಅಲ್ಲಿಗೆ ಬಂದು ಪ್ರಭಾಕರ ನೆಲ್ಲಿತ್ತಾಯರವರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈಕು ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಹೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಶಿವಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಹೆಚ್.ಎಸ್. ಸುನೀತ ಎಂಬವರ ಗಂಡ 42 ವರ್ಷ ಪ್ರಾಯದ ಸುಬ್ರಮಣಿ ಎಂಬವರು ಕೆಲವು ವರ್ಷಗಳಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಬೇಸತ್ತು ದಿನಾಂಕ 10-3-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿ ಕೊಂಡಿದ್ದು, ಈ ಸಂಬಂಧ ಶ್ರೀಮತಿ ಹೆಚ್.ಎಸ್. ಸುನೀತರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.