Friday, March 16, 2018

ಆತ್ಮಹತ್ಯೆ ಪ್ರಕರಣ
                      ದಿನಾಂಕ 15/03/2018ರಂದು ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಶಾಂತ ಕುಮಾರಿ ಎಂಬ ಮಹಿಳೆಯು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ವರದಿಯಾಗಿದೆ. ಶಾಂತ ಕುಮಾರಿಯವರು ದೀರ್ಘ ಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವಿಪರೀತ ಹಣ ಸಾಲ ಮಾಡಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ
                     ದಿನಾಂಕ 14/03/2018ರಂದು ಶನಿವಾರಸಂತೆ ಬಳಿಯ ಬೀಟಿಕಟ್ಟೆ ಬಳಿ ರಸ್ತೆಯಲ್ಲಿ ಶನಿವಾರಸಂತೆಯ ಇಬ್ರಾಹಿಂ ಮತ್ತು ಇತರರು ಸಿಲ್ವರ್ ಮರಗಳನ್ನು ಕೆಎ-12-9663ರ ಲಾರಿಗೆ ತುಂಬಿಸಿ ಲಾರಿಯನ್ನು ಚಾಲಿಸುವ ಸಂದರ್ಭ ಲಾರಿಯ ಕ್ಲೀನರ್ ಮಹಮದ್ ಶಮೀಮ್ ಎಂಬವರು ಲಾರಿಯ ಚಕ್ರಕ್ಕೆ ಕಟ್ಟೆಯನ್ನು ಇಡುತ್ತಿರುವಾಗ ಲಾರಿಯ ಚಾಲಕ ದಿನೇಶ್‌ ಎಂಬವರು ಲಾರಿಯನ್ನು ನಿರ್ಲಕ್ಷ್ಯತನದಿಂದ ಚಾಲಿಸಿದ ಪರಿಣಾಮ ಶಮೀಮ್‌ರವರ ಕೈಲ್ಲಿದ್ದ ಕಟ್ಟೆಯು ಅವರ ಕಾಲಿಗೆ ಬಡಿದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಚೆ ಚೀಟಿ ನಕಲು, ವಂಚನೆ
                      ಕುಶಾಲನಗರ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಹೆಚ್‌.ಎನ್.ಸುರೇಶ್‌ ಎಂಬವರು ಸುಮಾರು ಎರಡು ವರ್ಷಗಳಿಂದ ಸುಮಾರು ರೂ.2,00,000/- ಮೌಲ್ಯದ ಅಂಚೆ ಚೀಟಿಗಳನ್ನು ನಕಲು ಮಾಡಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಕೊಲೆ
                    ದಿನಾಂಕ 15/03/2017ರಂದು ಬಾಳೆಲೆ ಬಳಿಯ ಬೇಕರಿ ಒಂದರಲ್ಲಿ ರವಿ ಎಂಬಾತನು ಪಾನಿಪುರಿ ತಿನ್ನುತ್ತಿರುವಾಗ ಅಲ್ಲಿಗೆ ಬಂದ ಚಿಕ್ಕಣ್ಣ ಎಂಬಾತನು ರವಿರವರ ತಟ್ಟೆಯಿಂದ ಪಾನಿಪುರಿ ತೆಗೆದು ತಿಂದ ವಿಚಾರಕ್ಕೆ ಜಗಳವಾಗಿ ರವಿಯು ಚಿಕ್ಕಣ್ಣನ ಮುಖಕ್ಕೆ ತೀವ್ರವಾಗಿ ಹೊಡೆದ ರಭಸಕ್ಕೆ ಚಿಕ್ಕಣ್ಣನವರು ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಣ್ಣನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                    ದಿನಾಂಕ 15/03/2018ರಂದು ಶ್ರೀಮಂಗಲ ಬಳಿಯ ವೆಸ್ಟ್ ನೆಮ್ಮಲೆ ನಿವಾಸಿ ಚಟ್ಟಂಗಡ ರಾಜು ಕಾಳಯ್ಯ ಎಂಬವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತರ ಮಗ ಕಿರಣ್ ಎಂಬವರು ವರ್ಷದ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ತೀರಿಕೊಂಡಿದ್ದು ಅದೇ ಕಾರಣಕ್ಕೆ ನೋವಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 15/03/2018ರಂದು ಶ್ರೀಮಂಗಲ ಬಳಿಯ ಬಾಡಗರಕೇರಿ ನಿವಾಸಿ ಅಣ್ಣೀರ ಹರೀಶ್ ಎಂಬವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರಿಗೆ ಸಾಲದ ಹೊರೆ ಅಧಿಕವಿದ್ದು ಈ ಸಾಲಿನಲ್ಲಿ ಕಾಫಿ ಫಸಲು ಸಹಾ ಕಡಿಮೆ ಆಗಿರುವುದರಿಂದ ಸಾಲ ತೀರಿಸುವ ಬಗ್ಗೆ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                      ದಿನಾಂಕ 15/03/2018ರಂದು ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಭ್ಯತ್‌ಮಂಗಲ ಗ್ರಾಮದಲ್ಲಿ ಅಲ್ಲಿನ ನಿವಾಸಿ ಸುಶೀಲ ಎಂಬವರು ಉಮೇಶ್‌ ಎಂಬವರ ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ಉಮೇಶ್‌ರವರು ಸುಶೀಲರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.