Monday, March 19, 2018

ನೀರಿಗೆ ಬಿದ್ದು ಮಹಿಳೆ ಸಾವು 
                  ಕಲ್ಲು ಕೋರೆಯ ಕೆರೆಯಲ್ಲಿ ಮುಳುಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ದೊಡ್ಡಕೊಡ್ಲಿ ಗ್ರಾಮದಲ್ಲಿ ವರದಿಯಾಗಿದೆ. ದೇವಮ್ಮ ಎಂಬುವವರ ಮಗಳು ಜ್ಯೋತಿಯವರು ದಿನಾಂಕ 18-3-2018 ರಂದು ಕಲ್ಲುಕೋರೆಯ ಕೆರೆಗೆ ಬಟ್ಟೆತೊಳೆಯಲು ಹೋದವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಮೃತಳ ತಾಯಿ ದೇವಮ್ಮರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
              ಕಾರುಗಳು ಪರಸ್ಪರ ಡಿಕ್ಕಿಯಾಗಿ ಗಾಯಗೊಂಡ ಘಟನೆ ಮೂರ್ನಾಡುವಿನ ಬಾಡಗ ಎಂಬಲ್ಲಿ ವರದಿಯಾಗಿದೆ. ದಿನಾಂಕ 18-3-2018 ರಂದು ಹಾಕತ್ತೂರು ಗ್ರಾಮದ ಅಬುಬಕ್ಕರ್ ಎಂಬುವವರು ತನ್ನ ಮಗಳೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಹೋಗುತ್ತಿರುವಾಗ ಬಾಡಗ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಅಬುಬಕ್ಕರ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಅಬುಬಕ್ಕರ್ ಮತ್ತು ಅವರ ಮಗಳಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
               ದಿನಾಂಕ 18-3-2018 ರಂದು ವಿರಾಜಪೇಟೆ ನಗರದ ನಿವಾಸಿ ಶ್ರೀನಿವಾಸ ಎಂಬುವವರು ತಮ್ಮ ಆಲ್ಟೋ ಕಾರಿನಲ್ಲಿ ಮೂರ್ನಾಡುವಿನಿಂದ ವಿರಾಜಪೇಟೆಗೆ ಹೋಗುತ್ತಿರುವಾಗ ಕದನೂರು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಮಾರುತಿ 800 ಕಾರನ್ನು ಚಾಲಕ ಶ್ರೀನಿವಾಸ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿ ಎರಡೂ ಕಾರಿನ ಚಾಲಕರಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.