Tuesday, April 10, 2018

ಅಕ್ರಮ ಮರಳು ಸಾಗಾಟ ಪತ್ತೆ
                    ದಿನಾಂಕ 09/04/2018ರಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಹೆಚ್‌.ಎನ್.ಸಿದ್ದಯ್ಯನವರು ನಾಪೋಕ್ಲು ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಚೆರಿಯಪರಂಬು ಬಳಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಸುಮಾರು 4-5 ಜನರು ಕಾವೇರಿ ನದಿಯಿಂದ ಮರಳನ್ನು ತೆಗೆದು ಕೆಎಲ್‌-12-ಸಿ-7200ರ ಲಾರಿಗೆ ತುಂಬಿಸುತ್ತಿದ್ದುದು ಕಂಡು ಬಂದಿದ್ದು ಪೊಲೀಸರನ್ನು ಕಂಡ ಕೂಡಲೇ ನಾಲ್ವರೂ ಅಲ್ಲಿಂದ ಓಡಿ ಹೋಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                      ದಿನಾಂಕ 08/04/2018ರಂದು ಸಿದ್ದಾಪುರ ಬಳಿಯ ಟಾಟಾ ಕಾಫಿ ತೋಟದ ಎಮ್ಮೆಗುಂಡಿ ವಿಭಾಗದ ತೋಟದಲ್ಲಿ ಕಾರ್ಮಿಕ ಬಾಬು ಲಾಲ್ ಬಸು ಎಂಬವರು ಮನೆಯಲ್ಲಿದ್ದಾಗ ನೆರೆಮನೆಯ ಸಂಜಯ್ ಹಲ್‌ದಾರ್ ಎಂಬವರೊಡನೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸಂಜಯ್‌ ಹಲ್‌ದಾರರು ಬಾಬು ಲಾಲ್ ಬಸುರವರ ಮೇಲೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ
                  ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಸ್ವಾಮಿಗೌಡ ಎಂಬವರು ಹಾಸನ ಜಿಲ್ಲೆಯ ಹಾಲುಮತ ಕುರುಬ ಜನಾಂಗಕ್ಕೆ ಸೇರಿದ್ದು ಆದರೆ ಅವರು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡದ ಕುರುಬ ಜನಾಂಗಕ್ಕೆ ಸೇರಿರುವ ಬಗ್ಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಉದ್ಯೋಗವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾಕ್ಕೆ ಬೆಂಕಿ
                  ದಿನಾಂಕ 08/04/2018ರಂದು ಚೆಟ್ಟಳ್ಳಿ ಬಳಿಯ ಚೇರಳ ಶ್ರೀಮಂಗಲ ನಿವಾಸಿ ಮಹಮದ್ ಅಶೀಫ್ ಎಂಬವರ ಕೆಎ-12-ಎ-8682ಕ್ಕೆ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಬೆದರಿಕೆ ಪ್ರಕರಣ
                 ದಿನಾಂಕ 09/04/2018ರಂದು ನಾಪೋಕ್ಲು ಬಳಿಯ ನರಿಯಂದಡ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಚೇನಂಡ ಗಿರೀಶ್‌ ಪೂಣಚ್ಚ ಎಂಬವರು ಮದ್ಯಾಹ್ನದ ಬಳಿಕ ಕೆಲಸದ ನಿಮಿತ್ತ ಶಾಲೆಗೆ ಹೋದಾಗ ಶಾಲೆಯ ಗುಮಾಸ್ತರಾದ ಜೀತು ಕುಮಾರ್ ಎಂಬವರು ಗಿರೀಶ್‌ ಪೂಣಚ್ಚನವರನ್ನು ತಡೆದು ನಿಲ್ಲಿಸಿ ಅಶ್ಲೀಲವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದ್ದು.ಅದೇ ರೀತಿ   ಗಿರೀಶ್‌ ಪೂಣಚ್ಚ ಹಾಗೂ ಸುರೇಶ್‌ ನಾಣಯ್ಯ ಎಂಬವರಿಬ್ಬರು ಸೇರಿಕೊಂಡು ಶಾಲೆಯ ಗುಮಾಸ್ತ ಜೀತು ಕುಮಾರ್ ಮತ್ತು ಮುಖ್ಯೋಪಾಧ್ಯಾಯ ಮಾನೋಹರ ನಾಯ್ಕ್ ಎಂಬವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಲಾದ ಎರಡು ಪ್ರತ್ಯೇಕ ದೂರುಗಳು ಸೇರಿದಂತೆ ಒಟ್ಟು ಮೂರು ದೂರುಗಳನ್ನು ನಾಪೋಕ್ಲು ಪೊಲೀಸರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                 ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಮಸಗೋಡು ನಿವಾಸಿ ಜಯಮ್ಮ ಎಂಬವರಿಗೆ ಅವರ ಪತಿ ಶಿವರಾಜ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿಗೆ ಬಿದ್ದು ಯುವಕ ಸಾವು
               ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಕೂಗೆಕೋಡಿ ನಿವಾಸಿಗಳಾದ ಕಿರಣ್ ಕುಮಾರ್, ಸಂತೋಷ್, ಅವಿನಾಶ್, ಸಂದರ್ಶ್‌, ಅಭಿಷೇಕ್ ಮುಂತಾದವರು ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದು ಅಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಅಭಿಷೇಕ್ ಎಂಬಾತನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಪಘಾತ
                  ದಿನಾಂಕ 09/04/2018ರಂದು ಹಾಸನದ ರಾಮನಾಥಪುರ ನಿವಾಸಿ ಚೇತನ್ ಎಂಬಾತನು ಸ್ನೇಹಿತ ಗಂಗಾಧರ ಎಂಬವರೊಂದಿಗೆ ಕೆಎ-12-ಆರ್-0831ರ ಬೈಕಿನಲ್ಲಿ ಕುಶಾಲನಗರದಿಂದ ಹಾಸನಕ್ಕೆ ಹೋಗುತ್ತಿರುವಾಗ ಕುಶಾಲನಗರದ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಕೆಎಲ್‌-05-ಎಎಲ್-7761ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೇತನ್‌ರವರು ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಚೇತನ್ ಹಾಗೂ ಅವರ ಸ್ನೇಹಿತ ಗಂಗಾಧರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.