Thursday, May 31, 2018

ಚಿನ್ನಾಭರಣ ಕಳವು
                  ದಿನಾಂಕ 30/05/2018ರಂದು ಶನಿವಾರಸಂತೆ ಬಳಿಯ ಮೂದ್ರವಳ್ಳಿ ನಿವಾಸಿ ಸುನಿಲ್ ಕುಮಾರ್  ಆಚಾರ್ ಎಂಬವರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಬಳಿ ಇರುವ ಸಿಮೆಂಟ್ ಕಂಬದ ಬಳಿ ಇಟ್ಟು ಹೋಗಿದ್ದು ಸಂಜೆ ಮನೆಗೆ ಬರುವಾಗ ಯಾರೋ ಕಳ್ಳರು ಸಿಮೆಂಟ್ ಕಂಬದ ಬಳಿ ಇಟ್ಟಿದ್ದ ಕೀಯನ್ನು ತೆಗೆದು ಮನೆಯ ಬಾಗಿಲು ತೆರೆದು ಮನೆಯೊಳಗಿದ್ದ ಸುಮಾರು ರೂ.45,000/- ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ, ಸಾವು
                 ದಿನಾಂಕ 29/05/2018ರಂದು ಕುಶಾಲನಗರ ಬಳಿಯ ಚಿಕ್ಕತ್ತೂರು ನಿವಾಸಿ ಚಂದ್ರಶೇಖರ್ ಎಂಬವರು ಅವರ ಸ್ನೇಹಿತರಾದ ರಕ್ಷಿತ್, ಗಿರೀಶ್ ಮತ್ತು ಅಭಿಷೇಕ್ ಎಂಬವರೊಂದಿಗೆ ಎರಡು ಬೈಕುಗಳಲ್ಲಿ ಕುಶಾಲನಗರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಗುಮ್ಮನಕೊಲ್ಲಿ ಬಳಿ ಎದುರಿನಿಂದ ಮಂಜುನಾಥ ಎಂಬವರು ಅವರ ಮೋಟಾರು ಸೈಕಲನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶ್ ಮತ್ತು ರಕ್ಷಿತ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಕ್ಷಿತ್ ಹಾಗೂ ಗಿರೀಶ್ ಇಬ್ಬರೂ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮೈಸೂರಿಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ರಕ್ಷಿತ್ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, May 30, 2018

ವ್ಯಕ್ತಿಯ ಆತ್ಮಹತ್ಯೆ 
         ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿ ವರದಿಯಾಗಿದೆ. ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯ ನಿವಾಸಿಯಾದ ನಾರಾಯಣ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 28-05-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ರಘುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
           ದಿನಾಂಕ 29-05-2018 ರಂದು ಪೊನ್ನಂಪೇಟೆಯ ನಿವಾಸಿಯಾದ ಗಣಪತಿ @ ಗಪ್ಪುರವರು ಕಾರಿನಲ್ಲಿ ಚಾಲಕ ಈಶ್ವರರವರೊಂದಿಗೆ ಮೈಸೂರಿಗೆ ಹೋಗುತ್ತಿರುವಾಗ ತಿತಿಮತಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಮಾರುತಿ 800 ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಕಾರಿನಲ್ಲಿದ್ದ ಗಣಪತಿಯವರಿಗೆ ಗಾಯವಾಗಿದ್ದು, ಈ ಬಗ್ಗೆ ಗಣಪತಿಯವರು ನೀಡಿದ ಪುಕಾರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, May 29, 2018

ರಸ್ತೆ ಅಪಘಾತ
              ದಿನಾಂಕ 28/05/2018ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಪಿ.ಜಯಸೂರ್ಯನ್ ಎಂಬವರು ಕಾಸರಗೋಡಿನಿಂದ ಬೆಂಗಳೂರಿಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಎದುರಿನಿಂದ ಒಂದು ಟಿಎನ್‌-34-ಹೆಚ್-0883 ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಯಸೂರ್ಯನ್‌ರವರ ಬೈಕಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ
                ದಿನಾಂಕ 27/05/2018ರಂದು ಮಡಿಕೇರಿ ನಗರದ ಮಂಗಳಾದೇವಿ ನಗರದ ನಿವಾಸಿ ಹೆಚ್‌.ಎಸ್.ಗೋಪಾಲ್ ಎಂಬವರು ಮೈಸೂರು ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಗರದ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗೋಪಾಲ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ  ವ್ಯಕ್ತಿ ಸಾವು
                 ದಿನಾಂಕ 28/05/2018ರಂದು ಮಡಿಕೇರಿ ನಗರದ ಪತ್ರಿಕಾ ಭವನದ ಬಳಿಯ ಪ್ರಶಾಂತ್‌ ವುಡ್‌ ವರ್ಕ್ಸ್ ಸಂಸ್ಥೆಯ ಎದುರಿನ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ಸಂಸ್ಥೆಯ ಮಾಲೀಕ ಡಿ.ಪ್ರಶಾಂತ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ರಿಕ್ಷಾ ಡಿಕ್ಕಿ
                ದಿನಾಂಕ 28/05/2018ರಂದು ಸಿದ್ದಾಪುರ ಬಳಿಯ ಗುಹ್ಯ ನಿವಾಸಿ ಪಿ.ಎ.ಜಾನ್‌ ಎಂಬವರು ಅವರ ಇನ್ನೋವಾ ಕಾರಿನಲ್ಲಿ ಕರಡಿಗೋಡು ರಸ್ತೆಯಲ್ಲಿ ಸಿದ್ದಾಪುರ ಕಡೆಗೆ ಬರುತ್ತಿರುವಾಗ ಗ್ರಾಮದ ರಸ್ತೆಯ ತಿರುವಿನಲ್ಲಿ ಸಿದ್ದಾಪುರ ಕಡೆಯಿಂದ ಒಂದು ರಿಕ್ಷಾವನ್ನು ಅದರ ಚಾಲಕ ಇಮ್ರಾನ್‌ ಖಾನ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಕೊಂಡು ಬಂದು ಜಾನ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ
                 ದಿನಾಂಕ 25/05/2018ರ ರಾತ್ರಿ ವೇಳೆ ಯಾರೋ ಕಳ್ಳರು ಗೋಣಿಕೊಪ್ಪ ನಗರದ ಕೂರ್ಗ್‌ ಡಯಾಗ್ನಸ್ಟಿಕ್ ಸೆಂಟರ್‌ನ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿನ ಡ್ರಾಯರಿನಲ್ಲಿದ್ದ ಸುಮಾರು ರೂ.2,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ  ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 28/05/2018ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ಕಾರಪಂಡ ಪ್ರಕಾಶ ಎಂಬವರು ಮನೆಯ ಬಳಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಅವಘಢ
                  ದಿನಾಂಕ 27/05/2018ರಂದು ಮಾದಾಪುರ ಬಳಿಯ ಶಿರಂಗಳ್ಳಿ ನಿವಾಸಿ ಸುಜನ್‌ ಎಂಬವರ ಕಾರನ್ನು ಅವರ ಸ್ನೇಹಿತ ಬೋಪಣ್ಣರವರ ಚಾಲನೆಯಲ್ಲಿ ಇಬ್ಬರೂ ಮಡಿಕೇರಿಯಿಂದ ಮಾದಾಪುರಕ್ಕೆ ಹೋಗುತ್ತಿರುವಾಗ ಮಾದಾಪುರದ ಬಳಿಯ ಶಂಷುದ್ದೀನ್ ಎಂಬವರ ಮನೆಯ ಬಳಿ ಕಾರನ್ನು ಬೋಪಣ್ಣರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                     ದಿನಾಂಕ 27/05/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಭಾಸ್ಕರ್‌ ಎಂಬವರು ಕುಶಾಲನಗರದ ಮಹಾರಾಜ ಹೋಟೆಲಿನ ಬಳಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಬಸ್ಸನ್ನು ಅದರ ಚಾಲಕ ಮಾರುತಿ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭಾಸ್ಕರ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಭಾಸ್ಕರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಪಘಾತ
                    ದಿನಾಂಕ 27/05/2018ರಂದು ಮಂಡ್ಯ ನಿವಾಸಿ ಮಂಡ್ಯದ ನಿವಾಸಿಗಳಾದ ಕೀರ್ತಿ ಕುಮಾರ ಮತ್ತು ಪ್ರಥ್ವಿರಾಜ್ ಎಂಬವರು ನಂಜರಾಯಪಟ್ಟಣಕ್ಕೆ ಬಂದಿದ್ದು ಅಲ್ಲಿ ಕೀರ್ತಿ ಕುಮಾರ್‌ರವರು ರಸ್ತೆ ಬದಿ ಜೀಪು ಚಾಲಕನೊಂದಿಗೆ ಮಾತನಾಡುತ್ತಾ ನಿಂತಿರುವಾಗ ಸಿದ್ದಾಪುರ ಕಡೆಯಿಂದ ಒಂದು ಜೀಪನ್ನು ಅದರ ಚಾಲಕ ಹೇಮರಾಜ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೀರ್ತಿ ಕುಮಾರ್‌ರವರಿಗೆ ಡಿಕ್ಕಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಂಗ್ರಹ 
                         ದಿನಾಂಕ 28/05/2018ರಂದು ಪೊನ್ನಂಪೇಟೆ ಬಳಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದ ಮಡಿಕೇರಿಯ ಗಣಿ ಇಲಾಖೆಯ ಭೂ ವಿಜ್ಞಾನಿ ಕೆ.ಎಸ್..ನಾಗೇಂದ್ರಪ್ಪನರವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಲಕ್ಷ್ಮಣ ತಿರ್ಥ ಹೊಳೆಯಿಂದ ಗ್ರಾಮದ ನಿವಾಸಿಗಳಾದ ಹೆಚ್‌.ಆರ್.ಪ್ರಮೋದ್‌ ಮತ್ತು ಜೋಯಪ್ಪ ಎಂಬವರು ಅಕ್ರಮವಾಗಿ ಮರಳನ್ನು ಸಂಗ್ರಹಿಸಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, May 28, 2018

ಕಾರು ಅಪಘಾತ ನಾಲ್ವರಿಗೆ ಗಾಯ:

      ನಿಂತಿದ್ದ ಕಂಟೈನರ್ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಮಡಿಕೇರಿ ಹತ್ತಿರದ ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 27-5-2018 ರಂದು 01-15 ಗಂಟೆ ಸಮಯದಲ್ಲಿ ಮೈಸೂರಿನ ವಿಜಯನಗರದಲ್ಲಿ ವಾಸವಾಗಿರುವ ಫಿರ್ಯಾದಿ ಸುಮನ್ ಹಾಗು ಅವರ ಮೂರುಜನ ಸ್ನೇಹಿತರು ಕಾರಿನಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ –ಮಂಗಳೂರು ರಸ್ತೆಯ ಮೊದಲನೇ ತಿರುವಿನಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಯ ಹಿಂಬದಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮ ಚಾಲಕ ಸೇರಿ ಮೂವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

      ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ವಾರಿಜ ಎಂಬವರ ಮಗ ತೇಜ ಎಂಬವರು ದಿನಾಂಕ 26-5-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮತಿ ವಾರಿಜರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಸಹಜ ಸಾವು ಪ್ರಕರಣ ದಾಖಲು:

      ಸೋಮವಾರಪೇಟೆ ತಾಲೋಕು ತ್ಯಾಗತ್ತೂರು ಗ್ರಾಮ ನಿವಾಸಿ ಹಾಲಿ ಕುಶಾಲನಗರದಲ್ಲಿ ವಾಸವಾಗಿದ್ದ ಅಬ್ದುಲ್ ಸಮ್ಮದ್ ಎಂಬವರು ದಿನಾಂಕ 27-5-2018 ರಂದು ತಾನು ವಾಸವಾಗಿದ್ದ ಕೊಠಡಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು ಈ ಸಂಬಂಧ ಮೃತನ ಸಹೋದರ ಟಿ.ಎಸ್. ಮೊಹಮ್ಮದ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಲಿಸುತ್ತಿದ್ದ ಟ್ರ್ಯಾಕ್ಟರ್‍ ನಿಂದ ಬಿದ್ದು ವ್ಯಕ್ತಿಯ ದುರ್ಮರಣ:

     ಶನಿವಾರಸಂತೆ ಠಾಣಾ ಸರಹದ್ದಿನ ಹಾರೆಹೊಸೂರು ಗ್ರಾಮದಲ್ಲಿ ದಿನಾಂಕ 27-5-2018 ರಂದು ಬೆಟ್ದಳ್ಳಿ ಗ್ರಾಮದ ಲಕ್ಷ್ಮಣಶೆಟ್ಟಿ ಎಂಬವರು ತಮ್ಮ ಬಾಪ್ತು ಟ್ರ್ಯಾಕ್ಟರ್ ನಲ್ಲಿ ಮರಿಯ ಎಂಬವರನ್ನು ಕೂರಿಸಿಕೊಂಡು ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಮರಿಯರವರು ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನಪ್ಪಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ಖರೀದಿಸಿದ ಹಣ ನೀಡದೆ ವಂಚನೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸೂರು ಗ್ರಾಮದ ನಿವಾಸಿ ಕೊಕ್ಕಲೆಮಾಡ ಮಂದಣ್ಣ ಎಂಬವರು ಹಾಗು ಗ್ರಾಮಸ್ಥರು ತಮ್ಮ ಬಾಪ್ತು ಕಾಫಿಯನ್ನು ಕಾಫಿ ಮಿಲ್ ನಡೆಸುತ್ತಿರುವ ಕೇರಳ ನಿವಾಸಿಗಳಾದ ಬೀಜೇಶ್ ಮತ್ತು ಬಿಜು ಜಾಕೂಬ್ ರವರಿಗೆ ಮಾರಾಟ ಮಾಡಿದ್ದು, ಮಾರಾಟ ಮಾಡಿದ ಕಾಫಿಯ ಹಣವನ್ನು ನೀಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು:

     ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಲೋಕೇಶ್ ಎಂಬವರು ದಿನಾಂಕ 27-5-2018 ರಂದು ಬೆಳ್ಳೂರು ಗ್ರಾಮದ ಇಟ್ಟೀರ ಪೂವಯ್ಯ ಎಂಬವರ ತೋಟದಲ್ಲಿ ಮರವೇರಿ ಕಪಾತ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಷಗೊಂಡು ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, May 27, 2018


ಹಣದ ವಿಚಾರ, ಕೊಲೆ ಬೆದರಿಕೆ:     ಬೆಂಗಳೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಶ್ರೀಮತಿ ಅನಿತ ಎಂಬವರು 23-2-2018 ರಂದು ಸೋಮವಾರಪೇಟೆ ತಾಲೋಕು ತಲ್ತಾರಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಪಿ. ಕುಶಾಲಪ್ಪ ಎಂಬವರಿಗೆ 7 ಲಕ್ಷ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು, ಸದರಿ ಹಣವನ್ನು ಮರಳಿಸುವಂತೆ ಕೇಳಿದ ವಿಚಾರದಲ್ಲಿ ಕುಶಾಲಪ್ಪನವರು ಕೋವಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ಹಾಗೂ ಅವರೊಂದಿಗಿದ್ದ ಕನ್ನಿಮಣಿ ಮತ್ತು ತೇಜಸ್ವಿನಿ ಎಂಬವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಗುಡ್ಡಹೊಸುರು ಗ್ರಾಮದ ಎಂ.ಆರ್. ಗಣೇಶ ಎಂಬವರು ದಿನಾಂಕ 20-5-2018 ರಂದು ತಮ್ಮ ಪತ್ನಿಯೊಂದಿಗೆ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ರಾಜೇಶ, ಹೇಮಾವತಿ ಮತ್ತು ಶೇಖರ ಎಂಬವರು ಅಲ್ಲಿಗೆ ಬಂದು ಹೊಲದಲ್ಲಿ ದನಗಳನ್ನು ಮೇಯಿಸಿದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿಯ ಆತ್ಮಹತ್ಯೆ:
ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದ ನಿವಾಸಿ ದಯಾನಂದ ಎಂಬವರು ದಿನಾಂಕ 26-5-2018 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಹೆಚ್.ಪಿ. ಸುಜಾತ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, May 26, 2018

ಕೊಡಲಿಯಿಂದ ಗಾಯವಾಗಿ ವ್ಯಕ್ತಿಯ ಮೃತ 
              ದಿನಾಂಕ 25-05-2018 ರಂದು ಹೊದ್ದೂರು ಗ್ರಾಮದ ವಾಟೆಕಾಡು ಪೈಸಾರಿಯ ನಿವಾಸಿಯಾದ ವಸಂತಿಯವರ ಮಗ ಸುರೇಶನು ಸೌದೆಯನ್ನು ಒಡೆಯುತ್ತಿರುವಾಗ ಕೊಡಲಿ ಕಾಲಿಗೆ ತಾಗಿ ತೀವ್ರತರಹದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಡಿಕೇರಿಗೆ ಕರೆದುಕೊಂಡು ಬರುವಾಗ ಮೃತಪಟ್ಟಿದ್ದು, ಈ ಬಗ್ಗೆ ವಸಂತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಸಹಜಸಾವು ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ವರದಿಯಾಗಿದೆ. ಬಿಳಿಗೇರಿ ಗ್ರಾಮದ ನಿವಾಸಿಯಾದ ಜೇನುಕುರುಬರ ರಾಜು ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 25-05-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪತ್ನಿ ಲಲಿತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
          ದಿನಾಂಕ 25-05-2018 ರಂದು ಮಡಿಕೇರಿಯ ಗಣಪತಿ ಬೀದಿಯ ನಿವಾಸಿಯಾದ ಉಮ್ಮರ್ ಉಲ್ ಫಾರೂಕ್ ಎಂಬುವವರು ಕಾರಿನಲ್ಲಿ ಪಾರಾಣೆಗೆ ಹೋಗಿದ್ದವರು ವಾಪಾಸ್ಸು ಬರುತ್ತಿರುವಾಗ ಕಗ್ಗೋಡ್ಲು ಎಂಬಲ್ಲಿ ಎದುರಿನಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂಧ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಅಪಘಾತಪಡಿಸಿದ ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ಉಮ್ಮರ್ ಉಲ್ ಫಾರೂಕ್ ರವರು ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಬಾವಲಿ ಗ್ರಾಮದಲ್ಲಿ ವರದಿಯಾಗಿದೆ. ಬಾವಲಿ ಗ್ರಾಮದ ಬೆಳ್ಯಪ್ಪ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 24-05-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಬೋಪಣ್ಣನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾಳುಮೆಣಸು ಬಳ್ಳಿ ಕಡಿದು ನಷ್ಟ 
          ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ನಿವಾಸಿಯಾದ ಯೋಗೇಂದ್ರ ಎಂಬುವವರ ತೋಟದಲ್ಲಿರುವ 100 ರಿಂದ 150 ಕಾಳು ಮೆಣಸಿನ ಬಳ್ಳಿಗಳನ್ನು ಅದೇ ಗ್ರಾಮದವರಾದ ದರ್ಶನ್ ಎಂಬುವವರು ಕಡಿದು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಚೋನಕೆರೆ ಎಂಬಲ್ಲಿ ವರದಿಯಾಗಿದೆ. ಚೋನಕೆರೆಯ ನಿವಾಸಿಯಾದ ಉತ್ತಪ್ಪನವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 25-05-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Friday, May 25, 2018

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಶ್ರೀಮತಿ ಲಲಿತ ಎಂಬವರ ಪತಿ ಪೂವಪ್ಪ ಎಂಬವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಮನನೊಂದು ದಿನಾಂಕ 23-5-2018 ರಂದು ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24-5-2018 ರಂದು ಸದರಿಯವರು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿಗೆ ಬೈಕ್ ಡಿಕ್ಕಿ:
     ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಲೋಕೇಶ್ ಎಂಬವರಲ್ಲಿ ಕೆಲಸ ಮಾಡಿಕೊಂಡಿರುವ ರಾಮೇಗೌಡ ಎಂಬವರು ದಿನಾಂಕ       23-5-2018 ರಂದು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಮೋಟಾರ್ ಸೈಕಲ್ ಸವಾರ ವಿನೋದ್ ಎಂಬವರು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿಕೊಂಡು ಬಂದು ರಾಮೇಗೌಡರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮೇಗೌಡ ರವರು ಗಾಯಗೊಂಡು ಸವಾರ ವಿನೋದ್ ರವರಿಗೂ ಗಾಯಗಳಾಗಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಅಪಘಾತ ಒಬ್ಬನ ಸಾವು:
     ವಿರಾಜಪೇಟೆ ತಾಲೋಕು ಬಾಳೆಲೆ ಎಪಿಸಿಎಂಎಸ್ ನಲ್ಲಿ ಕೆಲಸ ಮಾಡಿಕೊಂಡಿರುವ ಹೆಚ್.ಎಂ. ಚಂದ್ರ ಎಂಬವರು ದಿನಾಂಕ 23-5-2018 ರಂದು ತನ್ನ ಸ್ನೇಹಿತರಾದ ರವೀಂದ್ರ, ಹರೀಶ, ರವಿ, ರಾಜು ರವರೊಂದಿಗೆ ಹರೀಶನ ಬಾಪ್ತು ಆಟೋ ರಿಕ್ಷಾದಲ್ಲಿ ಪರಿಯಾಪಟ್ಟಣಕ್ಕೆ ಹೋಗಿ ಸಿನಿಮಾ ನೋಡಿ ವಾಪಾಸು ಬಾಲೆಳೆ ಗ್ರಾಮಕ್ಕೆ ಬರುತ್ತಿರುವಾಗ್ಗೆ ಹರೀಶ ರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಿಕ್ಷಾ ಮಗುಚಿ ರಸ್ತೆಯ ಮೇಲೆ ಬಿದ್ದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯಗಳಾಗಿ ಅವರ ಪೈಕಿ ರಾಜುರವರು ಮೃತಪಟ್ಟಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ನಿವಾಸಿ ವೆಳ್ಳಂಪಾಡಿ ಎಂಬವರು ದಿನಾಂಕ 24-5-2018 ರಂದು ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, May 24, 2018

ಹಲ್ಲೆ ಪ್ರಕರಣ 
     ದಿನಾಂಕ 22-05-2018 ರಂದು ಮಡಿಕೇರಿ ತಾಲೂಕಿನ ತಣ್ಣಿಮಾನಿ ಗ್ರಾಮದ ನಿವಾಸಿಯಾದ ಮೊಣ್ಣಿಯವರು ಮನೆಯಲ್ಲಿರುವಾಗ ಮಗ ರಾಜುರರವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕತ್ತಿಯಿಂದ ಕಾಲಿಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪರಿಚಿತ ಶವ ಪತ್ತೆ 
        ದಿನಾಂಕ 23-05-2018 ರಂದು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದಲ್ಲಿ ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸದರಿ ಮೃತದೇಹದ ಮೇಲೆ ನೀಲಿ ಜೀನ್ಸ್ ಪ್ಯಾಂಟ್, ತುಂಬುತೋಳಿನ ಹಸಿರು ಕಪ್ಪು ಬಿಳಿ ಚೌಕಳಿಗಳಿರುವ ಶರ್ಟ್ ಮತ್ತು ಬೆಲ್ಟ್ ಇದ್ದು ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅನುಮಾನಾಸ್ಪದ ವ್ಯಕ್ತಿಗಳ ಬಂಧನ 
       ದಿನಾಂಕ 22-05-2018 ರಂದು ರಾತ್ರಿ ಕುಶಾಲನಗರ ಪಟ್ಟಣ ಠಾಣೆಯ ಸಿಬ್ಬಂದಿಯವರಾದ ಸುದೀಶ್ ಕುಮಾರ್ ಮತ್ತು ಮುಸ್ತಾಫರವರು ಗಸ್ತು ಕರ್ತವ್ಯದಲ್ಲಿರುವಾಗ ಸಮಯ 12-30 ಎ.ಎಂ ಗೆ 4 ನೇ ಬ್ಲಾಕ್ ನ ಸರ್ಕಾರಿ ಜೂನಿಯರ್ ಕಾಲೇಜು ಬಳಿ ವಿರಾಜಪೇಟೆಯ ನಿವಾಸಿಗಳಾದ ನಜೀರ್ ಹಾಗೂ ನೌಶಾದ್ ಎಂಬುವವರು ನಿಂತುಕೊಂಡಿದ್ದು ವಿಚಾರಿಸಲಾಗಿ ಸಮರ್ಪಕ ಉತ್ತರ ನೀಡದೇ ಇದ್ದು ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದು ಠಾಣೆಗೆ ಹಾಜರುಪಡಿಸಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಚಾರಿಗೆ ಬೈಕ್ ಡಿಕ್ಕಿ 
          ದಿನಾಂಕ 21-05-2018 ರಂದು ಕುಶಾಲನಗರದ ಕುಡ್ಲೂರು ಗ್ರಾಮದ ನಿವಾಸಿಯಾದ ಕುಸುಮರವರು ಮಗಳಾದ ಸ್ಮಿತಾಳೊಂದಿಗೆ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕೂಡ್ಲೂರು ಸರ್ಕಾರಿ ಶಾಲೆಯ ಬಳಿ ತಲುಪುವಾಗ ವೀರಭೂಮಿ ಕಡೆಯಿಂದ ಕೂಡ್ಲೂರು ಗ್ರಾಮದ ನಿವಾಸಿಯಾದ ಶಿವಕುಮಾರ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಸ್ಮಿತಾಳಿಗೆ ಡಿಕ್ಕಿಪಡಿಸಿದ್ದು ಈ ಬಗ್ಗೆ ಕುಸುಮರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆಯ ಸಾವು 
           ದಿನಾಂಕ 21-05-2018 ರಂದು ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ನಿವಾಸಿಯಾದ ರಾಜುರವರು ತನ್ನ ಪತ್ನಿ ಉಮಾವತಿಯವರೊಂದಿಗೆ ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಪುಷ್ಪರವರು ಹಳೇ ದ್ವೇಷದಿಂದ ಜಗಳ ತೆಗೆದು ಉಮಾವತಿಯರ ತಲೆಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಉಮಾವತಿಯವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-05-2018 ರಂದು ಮೃತಪಟ್ಟಿರುತ್ತಾರೆ.

Wednesday, May 23, 2018

ಅಕ್ರಮ ಮರಳು ಸಾಗಾಟ
                 ದಿನಾಂಕ 21-05-2018 ರಂದು ರಾತ್ರಿ ಸಮಯದಲ್ಲಿ ಬಿ ಬಾಡಗ ಗ್ರಾಮದಿಂದ ಅಕ್ರಮವಾಗಿ ಪಿಕ್ ಅಪ್ ಜೀಪಿನಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವಿನುಕುಮಾರ್ ಮತ್ತು ನಾಗರಾಜ ಎಂಬುವವರ ವಿರುದ್ದ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿಯ ಆತ್ಮಹತ್ಯೆ
          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಎಂ ಬಾಗಡ ಗ್ರಾಮದಲ್ಲಿ ವರದಿಯಾಗಿದೆ. ಎಂ ಬಾಡಗ ಗ್ರಾಮದ ನಿವಾಸಿಯಾದ ತಿಮ್ಮಯ್ಯ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 21-05-2018 ರ ರಾತ್ರಿ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಭೀಮಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
                ದಿನಾಂಕ 22-05-2018 ರಂದು ಸುಳ್ಯದ ನಿವಾಸಿಯಾದ ಕೃಷ್ಣಪ್ಪ ಎಂಬುವವರು ಮಡಿಕೇರಿಯಿಂದ ಸುಳ್ಯಕ್ಕೆ ಲಾರಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕೊಯನಾಡು ಎಂಬಲ್ಲಿ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ನಟರಾಜ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಲಾರಿಯ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನ ಚಾಲಕನಿಗೆ ಗಾಯವಾಗಿದ್ದು, ಈ ಬಗ್ಗೆ ಲಾರಿಯ ಚಾಲಕ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
             ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿಯಾದ ಕಮಲರವರು ದಿನಾಂಕ 14-05-2018 ರಂದು ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ ಹೋಗಿದ್ದವರು ದಿನಾಂಕ 22-05-2018 ರಂದು ವಾಪಾಸ್ಸು ಮನೆಗೆ ಬಂದು ನೋಡುವಾಗ ಮನೆಯ ಮುಂಭಾಗದ ಬಾಗಿಲಿನ ಮೂಲಕ ಯಾರೋ ಕಳ್ಳರು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 2,40,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2000 ರೂ ನಗದು ಹಣವನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ರಸ್ತೆ ಅಪಘಾತ
             ರಸ್ತೆ ಅಪಘಾತವಾಗಿ ವ್ಯಕ್ತಿಯೊಬ್ಬರು ಮರಣ ಹೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 22-05-2018 ರಂದು ಶನಿವಾರಸಂತೆ ಗುಡುಗಳಲೆಯ ನಿವಾಸಿ ತೇಜ್ ಪ್ರಕಾಶ್ ಎಂಬುವವರು ಗರಗಂದೂರು ಗ್ರಾಮದಿಂದ ಓಮಿನಿ ವ್ಯಾನಿನಲ್ಲಿ ಮನೆಗೆ ಹೋಗುತ್ತಿರುವಾಗ ಸೋಮವಾರಪೇಟೆಯ ಕುವೆಂಪು ಶಾಲೆಯ ಬಳಿ ಅಪಘಾತವಾಗಿ ಗಾಯಗೊಂಡು ಮೃತಪಟ್ಟಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
           ದಿನಾಂಕ 21-05-2018 ರಂದು ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ನಿವಾಸಿಯಾದ ರಾಜುರವರು ತನ್ನ ಪತ್ನಿ ಉಮಾವತಿಯವರೊಂದಿಗೆ ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಪುಷ್ಪರವರು ಹಳೇ ದ್ವೇಷದಿಂದ ಜಗಳ ತೆಗೆದು ಉಮಾವತಿಯರ ತಲೆಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ರಾಜುರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವಾಹನ ಅಪಘಾತ
              ದಿನಾಂಕ 22-05-2018 ರಂದು ಮಡಿಕೇರಿ ಡಿಫೋ ಗೆ ಸೇರಿದ ಕೆ.ಎಸ್.ಆರ್.ಟಿ ಸಿ ಬಸ್ಸು ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿರುವಾಗ ಗುಡ್ಡೆಹೊಸೂರುವಿನ ಉದ್ಗಂ ಶಾಲೆಯ ಹತ್ತಿರ ಎದುರಿನಿಂದ ಬಂದ ಬೈಕನ್ನು ಚಾಲಕ ನೇತಾಜ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿನ ಕೆಳಗೆ ನುಗ್ಗಿದ ಪರಿಣಾಮ ಬಸ್ಸಿಗೆ ಬೆಂಕಿ ಹತ್ತಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಳು ಮೆಣಸು ಕಳವು
            ದಿನಾಂಕ 22-05-2018 ರಂದು ವಿ. ಬಾಡಗ ಗ್ರಾಮದ ನಿವಾಸಿಯಾದ ನವೀನ್ ರವರು ತಮ್ಮ ಗೋಡಾನಿನಲ್ಲಿ ಶೇಖರಿಸಿಟ್ಟಿದ್ದ ಕಾಳುಮೆಣಸಿನ ಪೈಕಿ ಅಂದಾಜು 35 ಕೆ.ಜಿ ತೂಕದ ಕರಿಮೆಣಸನ್ನು ಯಾರೋ ಕಳವು ಮಾಡಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, May 22, 2018

ಅಪಘಾತದಿಂದ ಗಾಯಗೊಂಡಿದ್ದ ಮಹಿಳೆಯ ಸಾವು 
             ದಿನಾಂಕ 19-05-2018 ರಂದು ಅರಕಲಗೋಡುವಿನ ಅಜ್ಜೂರು ಗ್ರಾಮದ ರಾಮೇಗೌಡ ಎಂಬುವವರು ಮೋಟಾರು ಸೈಕಲಿನ ಹಿಂಬದಿ ಸೀಟಿನಲ್ಲಿ ಪತ್ನಿ ಗಾಯತ್ರಿಯವರನ್ನು ಕೂರಿಸಿಕೊಂಡು ಕಣಿವೆ ಗ್ರಾಮದ ರಾಮಸ್ವಾಮಿ ದೇವಸ್ಥಾನದ ಹತ್ತಿರ ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಹಂಪನ್ನು ಹತ್ತಿಸಿದ ಪರಿಣಾಮ ಬೈಕ್ ಹಿಂಬದಿ ಕುಳಿತ್ತಿದ್ದ ಪತ್ನಿ ಗಾಯತ್ರಿಯವರು ಕೆಳಗೆ ಬಿದ್ದು ಗಾಯಗೊಂಡವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 21-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
            ದಿನಾಂಕ 21-05-2018 ರಂದು ಶ್ರೀನಿವಾಸ ಮತ್ತು ಗಣೇಶ ಎಂಬುವವರು ಮೋಟಾರು ಸೈಕಲಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಕೈಗಾರಿಕಾ ಬಡಾವಣೆಯ ಹೊಟೆಲ್ ಮುಂದೆ ತಲುಪುವಾಗ ಎದುರುಗಡೆಯಿಂದ ವಿ.ಆರ್.ಎಲ್ ಲಾರಿಯನ್ನು ಅದರ ಚಾಲಕ ಉಮೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ 
            ದಿನಾಂಕ 20-05-2018 ರಂದು ಕುಶಾಲನಗರ ಹೌಸಿಂಗ್ ಬೋರ್ಡ್ ನ ನಿವಾಸಿ ಮಂಜುನಾಥ ಎಂಬುವವರು ಕೆಲಸದ ನಿಮಿತ್ತ ತೊರೆನೂರು ಗ್ರಾಮಕ್ಕೆ ಹೋಗಿ ದಿನಾಂಕ 21-05-2018 ರಂದು ವಾಪಾಸ್ಸು ಬಂದು ನೋಡುವಾಗ ಮನೆಯ ಹಿಂಬದಿ ಬಾಗಿಲಿನ ಲಾಕನ್ನು ಯಾರೋ ಮುರಿದು ಒಳನುಗ್ಗಿ ಮನೆಯೊಳಗಡೆ ಇಟ್ಟಿದ್ದ 70,000 ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ 4,000 ರೂ ನಗದು ಹಣವನ್ನು ಕಳ್ಳತನ ಮಾಡಿರುವು ಕಂಡುಬಂದು ಮಂಜುನಾಥರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಆಸ್ತಿ ವಿಚಾರದಲ್ಲಿ ಜಗಳ 
           ದಿನಾಂಕ 21-05-2018 ರಂದು ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿಯಾದ ಸ್ವಾಮಿನಾಯ್ಕರವರು ಮನೆಯಲ್ಲಿರುವಾಗ ಹನುಮಮ್ಮ, ಹನುಮರಾಜು, ವನಿತಾ, ಜೀವನ್ ಹಾಗೂ ಕಿರಣರವರು ಮನೆಗೆ ಹೋಗಿ ಆಸ್ತಿ ವಿಚಾರದಲ್ಲಿ ಜಗಳ ತೆಗೆದು ಸ್ವಾಮಿನಾಯ್ಕ, ಜಯಮ್ಮ ಮತ್ತು ಅರುಣ ನಾಯ್ಕ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಅರುಣನಾಯ್ಕರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಚಿನ್ನಾಭರಣ ಕಳವು 
              ದಿನಾಂಕ 20-05-2018 ರಂದು ಮೂರ್ನಾಡುವಿನ ಸುಭಾಷ್ ನಗರದ ನಿವಾಸಿ ವೆಂಕಟರಮಣ ಭಟ್ ಎಂಬುವವರು ಮನೆಗೆ ಬೀಗ ಹಾಕಿ ಬಿ. ಸಿ ರೋಡುವಿಗೆ ಸಂಬಂಧಿಕರ ಸಮಾರಂಭಕ್ಕೆ ಹೋಗಿ ಸಾಯಂಕಾಲ ವಾಪಾಸ್ಸು ಬಂದು ನೋಡುವಾಗ ಮನೆಯೊಳಗೆ ಇಟ್ಟಿದ್ದ ಅಂದಾಜು 3,64,000 ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದು ವೆಂಕಟಪಮಣ ಭಟ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಲಾಗಿರುತ್ತದೆ. 

ಅಪಘಾತ ಪ್ರಕರಣ 
           ದಿನಾಂಕ 19-05-2018 ರಂದು ಕೇರಳ ರಾಜ್ಯದ ಕಣ್ಣನೂರು ಜಿಲ್ಲೆಯ ನಿವಾಸಿಯಾದ ಮಹಮ್ಮದ್ ಎಂಬುವವರು ಕೇರಳ ರಾಜ್ಯದಿಂದ ವಿರಾಜಪೇಟೆ ನಗರದ ಕೆಲವು ಹೊಟೆಲ್ ಮತ್ತು ಬೇಕರಿಗಳಿಗೆ ತಿಂಡಿಗಳನ್ನು ಸರಬರಾಜು ಮಾಡುವ ಸಲುವಾಗಿ ಮಾರುತಿ ಓಮಿನಿ ವ್ಯಾನಲ್ಲಿ ವಿರಾಜಪೇಟೆಗೆ ಬರುತ್ತಿರುವಾಗ ಮಾಕುಟ್ಟದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಓಮಿನಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಿ ಮುಂಭಾಗ ಜಖಂಗೊಂಡು ಚಾಲನೆ ಮಾಡುತ್ತಿದ್ದು ಮಹಮ್ಮದ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ದಿನಾಂಕ 21-05-2018 ರಂದು ಮಹಮ್ಮದ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, May 21, 2018

ಗುಂಡು ಹಾರಿಸಿ ಬೆದರಿಕೆ
                      ದಿನಾಂಕ 19/05/2018ರಂದು ಪೊನ್ನಂಪೇಟೆ ಬಳಿಯ ಕುಂದ ನಿವಾಸಿ ಎಂ.ಎಂ.ಕೃಷ್ಣ ಎಂಬವರಿಗೆ ಸೇರಿದ ಈಚೂರು ಕುಂದ ಗ್ರಾಮದಲ್ಲಿರುವ ಹೋಂ ಸ್ಟೇಯಲ್ಲಿ ಪ್ರವಾಸಿಗರಿರುವಾಗ ಯಾರೋ ಅಪರಿಚಿತ ದುಷ್ಕರ್ಮಿಗಳು ಬಂದು ಹೋಂ ಸ್ಟೇಯ ಗೋಡೆಗೆ ಸುಮಾರು 6 ಸುತ್ತು ಗುಂಡು ಹಾರಿಸಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, May 20, 2018

ಅಪಘಾತ ಪ್ರಕರಣ 
           ಸ್ಕೂಟರಿಗೆ ಜೀಪು ಡಿಕ್ಕಿಯಾಗಿ ಗಾಯಗೊಂಡ ಘಟನೆ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 18-05-2018 ರಂದು ಮೈಸೂರಿನ ಕುವೆಂಪು ನಗರದ ನಿವಾಸಿ ಶಿವಕುಮಾರರವರು ಮಡಿಕೇರಿಯಿಂದ ಕರ್ಣಂಗೇರಿಗೆ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಮೂರನೇ ಮೈಲು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಜಿಪ್ಸಿ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಶಿವಕುಮಾರರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ 
           ಮನೆಯ ಬೀಗ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ತಣ್ಣೀರಹಳ್ಳ ಗ್ರಾಮದಲ್ಲಿ ವರದಿಯಾಗಿದೆ. ತಣ್ಣೀರಹಳ್ಳ ಗ್ರಾಮದ ನಿವಾಸಿಯಾದ ಜಯಮ್ಮ ಎಂಬುವವರು ದಿನಾಂಕ 15-05-2018 ರಂದು ಮನೆಗೆ ಬೀಗ ಹಾಕಿ ಕುಶಾಲನಗರದಲ್ಲಿರುವ ಮಗಳ ಮನೆಗೆ ಹೋಗಿದ್ದು ಈ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಅಂದಾಜು ಒಂದು ಲಕ್ಷ ಬೆಲೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಜಯಮ್ಮನವರು ದಿನಾಂಕ 19-05-2018 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

ಪಾದಚಾರಿಗೆ ಕಾರು ಡಿಕ್ಕಿ 
              ಪಾದಚಾರಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಕೂಡುಮಂಗಳೂರುವಿನ ನಿವಾಸಿಯಾದ ಶಿವಲಿಂಗರವರು ದಿನಾಂಕ 18-05-2018 ರಂದು ತನ್ನ ಸಂಸಾರದೊಂದಿಗೆ ಬೈಚನಹಳ್ಳಿಯಲ್ಲಿರುವ ಬಾವನ ಮನೆಗೆ ಹೋಗಿ ವಾಪಾಸ್ಸು ಸಮಯ ರಾತ್ರಿ 10-35 ಗಂಟೆಗೆ ಕುಶಾಲನಗರದ ಬಸ್ಸು ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿರುವಾಗ ಅಥಿತಿ ಹೊಟೆಲ್ ಹತ್ತಿರ ತಲುಪುವಾಗ ಕಾರನ್ನು ಅದರ ಚಾಲಕ ಕುಶಾಲನಗರದ ನಿವಾಸಿಯಾದ ಮಂಜುನಾಥರವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಶಿವಲಿಂಗರವರ ಮಗಳು ಇಂಚರಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಂಚರಳಿಗೆ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
            ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆಯ ಚಿಕ್ಕಪೇಟೆ ಎಂಬಲ್ಲಿ ವರದಿಯಾಗಿದೆ. ಬೇಟೋಳಿ ಗ್ರಾಮದ ನಿವಾಸಿಯಾದ ರಾಮಚಂದ್ರರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 19-05-2018 ರಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಶ್ರೀನಿವಾಸರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
           ಸ್ಕೂಟರಿಗೆ ಜೀಪು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ವರದಿಯಾಗಿದೆ. ದಿನಾಂಕ 17-05-2018 ರಂದು ವಿರಾಜಪೇಟೆ ತಾಲೂಕಿನ ಕೋಣಂಗಾಲ ಗ್ರಾಮದ ನಿವಾಸಿಯಾದ ನಾಚಪ್ಪನವರು ತನ್ನ ತಂದೆ ಲತೇಶ್ ರವರೊಂದಿಗೆ ಸ್ಕೂಟರಿನಲ್ಲಿ ವಿರಾಜಪೇಟೆಗೆ ಸಂಬಂದಿಕರ ಮದುವೆಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿದ್ದಾಗ ಚಿಕ್ಕಪೇಟೆ ಜಂಕ್ಷನ್ ತಲುಪುವಾಗ ಎದುರುಗಡೆಯಿಂದ ಬೊಲೆರೋ ಪಿಕ್ ಅಪ್ ಜೀಪನ್ನು ಅದರ ಚಾಲಕ ರಘು ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನ ಹಿಂಭಾಗದಲ್ಲಿ ಕುಳಿತ್ತಿದ್ದ ಲತೇಶ್ ರವರ ತಲೆಗೆ ಗಾಯವಾಗಿದ್ದು, ಲತೇಶ್ ರವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದು, ನಾಚಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 










Saturday, May 19, 2018

ವ್ಯಕ್ತಿ ಆತ್ಮಹತ್ಯೆ
                    ದಿನಾಂಕ 18/05/2018ರಂದು ಪೊನ್ನಂಪೇಟೆ ಬಳಿಯ ಮತ್ತೂರು ನಿವಾಸಿ ಪಣಿ ಎರವರ ಮಣಿ ಎಂಬಾತನು ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಮಾರು ಆರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ಅದೇ  ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ದೂರು ನೀಡಲಾಗಿದ್ದು ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
                     ದಿನಾಂಕ 18/05/2018ರಂದು ಪೊನ್ನಂಪೇಟೆ ನಗರದ ಕುಂದ ರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಎದುರು ಒಂದು ಅಪರಿಚಿತ ಪುರುಷನ ಶವ ಪತ್ತೆಯಾಗಿರುವುದಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುರೇಶ್‌ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                  ದಿನಾಂಕ 18/05/2018ರಂದು ವಿರಾಜಪೇಟೆ ನಗರದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗನ್ ಎಂಬಾತನು ಹೆಚ್‌.ಎನ್‌.ರಮೇಶ್‌ ಎಂಬವರ ಮೇಲೆ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ
                ಮಡಿಕೇರಿ ಬಳಿಯ ಬೆಟ್ಟತ್ತೂರು ನಿವಾಸಿ ಸಿ.ಜೆ.ಗೋಪಾಲ ಎಂಬವರು ಮಡಿಕೇರಿಯಲ್ಲಿ ರಿಕ್ಷಾ ಓಡಿಸುತ್ತಿದ್ದು, ದಿನಾಂಕ 16/05/2018ರಂದು ಮಡಿಕೇರಿಗೆ ಬಂದಿದ್ದು ಮರಳಿ ಮನೆಗೆ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆಕಸ್ಮಿಕ ಸಾವು
                 ದಿನಾಂಕ 18/05/2018ರಂದು ಮಡಿಕೇರಿ ಬಳಿಯ ಈರೆಳವಳಮುಡಿ ನಿವಾಸಿ ಶಾಮು ಎಂಬವರು ತೋಟದಲ್ಲಿ ಹಲಸಿನ ಮಿಡಿಯನ್ನು ಕುಯ್ಯಲು ಮರ ಹತ್ತಿದ್ದು ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ತೀವ್ರ ಗಾಯಗಳಿಂದ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
              ದಿನಾಂಕ 18/05/2018ರಂದು ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಇಸಾಕ್‌ ಎಂಬವರು ನಗರದ ಮಸೀದಿಯೊಂದರಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಹೋಗುತ್ತಿರುವಾಗ ಮೀನು ಮಾರುಕಟ್ಟೆಯ ಬಳಿ ಹಿಂದಿನಿಂದ ಕೆಎ-01-ಎಂ-9989ರ ಕಾರನ್ನು ಅದರ ಚಾಳಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಇಸಾಕ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ಇಸಾಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                  ದಿನಾಂಕ 18/05/2018ರಂದು ಸೋಮವಾರಪೇಟೆ ಬಳಿಯ ಅಡಿನಾಡೂರು ನಿವಾಸಿ ಸೋಮಶೇಖರ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ತಂದೆ ಬಸವ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸೋಮಶೇಖರ್‌ರವರ ಮೇಲೆಲ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, May 17, 2018

ಗುದ್ದಲಿಯಿಂದ ಹಲ್ಲೆ ಕೊಲೆಗೆ ಯತ್ನ:
     ವಿರಾಜಪೇಟೆ ನಗರ ಠಾಣಾ ಸರಹದ್ದಿನ  ಮೀನುಪೇಟೆ ನಿವಾಸಿ ಪಟ್ಟಡ ವಿಕ್ರಮ್ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಜೇನುಕುರುಬರ ರಾಜು ಎಂಬವರು ದಿನಾಂಕ 16-5-2018 ರಂದು ಪಟ್ಟಡ ವಿಕ್ರಮ್ ರವರ ಮನೆಯ ಮುಂದಿನ ಹೂ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿ ಎರವರ ಮುತ್ತ ಎಂಬವರು ತನ್ನ ಹೆಂಡತಿಯನ್ನು ರಾಜು ಬೈದ ವಿಚಾರದಲ್ಲಿ ಜಗಳ ಮಾಡಿ ಗುದ್ದಲಿಯಿಂದ ರಾಜುರವರ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆಗೆ ಯತ್ನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶಾಮತ್ತ ವ್ಯಕ್ತಿಯಿಂದ ಹಲ್ಲೆ:
     ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಹಿಳಾ ಸಮಾಜ ರಸ್ತೆ, ವಿರಾಜಪೇಟೆ ನಿವಾಸಿ ಬಿ.ಆರ್. ಶ್ರೀಧರ್ ಎಂಬವರು ದಿನಾಂಕ 16-5-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರದ ಬೋಪಯ್ಯ ಎಂಬವರ ಅಂಗಡಿಯ ಮುಂದುಗಡೆ ನಿಂತುಕೊಂಡಿರುವಾಗ್ಗೆ ರಾಜು ಎಂಬ ವ್ಯಕ್ತಿ ನಿಶಾಮತ್ತನಾಗಿ ಬಂದು ವಿನಾ ಕಾರಣ ಕತ್ತಿಯಿಂದ ಚುಚ್ಚಲು ಪ್ರಯತ್ನಿಸಿ ಬಳಿಕ ಕತ್ತಿಯನ್ನು ಬೀಸಿ ಕಾಲಿಗೆ ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, May 10, 2018

ಕ್ಷುಲ್ಲಕ ಕಾರಣಕ್ಕೆ ಹಲ್ಲೆ: 
     ಸಿದ್ದಾಪುರ ಠಾಣಾ ಸರಹದ್ದಿನ ಟಾಟಾ ಕಾಫಿ ತೋಟ ಎಮ್ಮೆಗುಂಡಿ ವಿಭಾಗದಲ್ಲಿ ವಾಸವಾಗಿರುವ ಬಾಬು ಮತ್ತು ಅವರ ಪಕ್ಕದ ಮನೆಯ ನಿವಾಸಿ ಸಂಜಯ್ ಹಲ್ ದಾರ್ ಎಂಬವರ ನಡುವೆ ಟಿ.ವಿ.ಯ ಸೌಂಡ್ ನ್ನು ಜೋರಾಗಿ ಹಾಕಿ ನೋಡುತ್ತಿದ್ದ ವಿಚಾರದಲ್ಲಿ ಜಗಳವಾಗಿದ್ದು ಬಾಬುರವರ ಮೇಲೆ ಸಂಜಯ್ ಹಲ್ ದಾರ್ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪತಿಯಿಂದ ಪತ್ನಿ ಮೇಲೆ ಹಲ್ಲೆ:
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಸಗೋಡು ಗ್ರಾಮದ ನಿವಾಸಿ ಶ್ರೀಮತಿ ಎಂ.ಎಸ್. ಜಯಮ್ಮ ಎಂಬವರು ದಿನಾಂಕ 9-4-2018 ರಂದು ತಮ್ಮ ಮನೆಯಲ್ಲಿದ್ದ ವೇಳೆಯಲ್ಲಿ ಅವರ ಪತಿ ಶಿವರಾಜುರವರು ಮದ್ಯಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ: 
     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೂಗೆಕೋಡಿ ಗ್ರಾಮದ ನಿವಾಸಿ ಕಿರಣ್ ಕುಮಾರ್ ಎಂಬವರು ತನ್ನ ಸ್ನೇಹಿತರಾದ ಸಂತೋಷ್, ಅವಿನಾಶ್, ಸಂದರ್ಶ್, ಪುನಿತ್ ಮತ್ತು ಅಭಿಷೇಕ್ ರವರೊಂದಿಗೆ 3 ಬೈಕಿನಲ್ಲಿ 11:45 ಗಂಟೆಗೆ ಮಲ್ಲಳ್ಳಿ ಫಾಲ್ಸ್ ನೋಡಲೆಂದು ಹೋಗಿದ್ದು, ಎಲ್ಲರೂ ಜಲಪಾತದ ಗುಂಡಿಯ ಪಕ್ಕ ನೀರಿನಲ್ಲಿ ಆಟವಾಡುತ್ತಿದ್ದಾಗ ಸ್ನೇಹಿತ ಪ್ರಾಯ 19 ವರ್ಷದ ಅಭಿಶೇಕ್ ನೀರಿನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ: 
     ಹಾಸನ ಜಿಲ್ಲೆಯ ಗಂಗೂರು ರಾಮನಾಥಪುರ ನಿವಾಸಿ ಚೇತನ್ ಎಂಬವರು ತನ್ನ ಸ್ನೇಹಿತ ಗಂದಾಧರ ಎಂಬವರೊಂದಿಗೆ ಮೋಟಾರ್ ಸೈಕಲಿನಲ್ಲಿ ಕುಶಾಲನಗರಕ್ಕೆ ಬಂದು ವಾಪಾಸು ಹೋಗುತ್ತಿದ್ದಾಗ ಬೈಚನಳ್ಳಿ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಬಂದ ಕಾರೊಂದು ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಚೇತನ್ ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, May 9, 2018

ಬಸ್ಸುಗಳು ಡಿಕ್ಕಿ 
                ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸುಗಳು ಜಖಂಗೊಂಡ ಘಟನೆ ಮಡಿಕೇರಿ ಮೈಸೂರು ರಾಜ್ಯ ಹೆದ್ದಾರಿಯ ಬೋಯಿಕೇರಿ ಎಂಬಲ್ಲಿಂದ ವರದಿಯಾಗಿದೆ. ದಿನಾಂಕ 07-05-2018 ರಂದು ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ ಡಿಪೋಕ್ಕೆ ಸೇರಿದ ಕೆಎ-21-ಎಫ್-0025 ರ ಕೆ.ಎಸ್.ಆರ್.ಟಿ.ಸಿ ಬಸ್ಸು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಬೋಯಿಕೇರಿ ಗ್ರಾಮದ ಸಿಂಕೋನ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ವಿ.ಆರ್.ಎಲ್ ಬಸ್ಸನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬಸ್ಸುಗಳು ಜಖಂಗೊಂಡಿದ್ದು, ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಧನರಾಜ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಟ್ಟಡದಿಂದ ಬಿದ್ದು ಸಾವು 
             ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವರದಿಯಾಗಿದೆ. ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ನಿವಾಸಿ ಸುದೀರ್ ಎಂಬುವವರು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಲ್ಲಿ ಗಾರೆ ಕೆಲಸ ಮಾಡಿಕೊಂಡು ಅದೇ ಕಟ್ಟಡದಲ್ಲಿ ಇತರೆ ಇಬ್ಬರೊಂದಿಗೆ ಮಲಗುತ್ತಿದ್ದು, ದಿನಾಂಕ 07-05-2018 ರಂದು ರಾತ್ರಿ ಕಟ್ಟಡದ ಮೇಲ್ಬಾಗಕ್ಕೆ ಹೋದವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಬೀರ ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, May 8, 2018

ಬೈಕ್‌ ಕಳವು ಪ್ರಕರಣ
                     ಸೋಮವಾರಪೇಟೆ ಬಳಿಯ ಕುಂದಳ್ಳಿ ನಿವಾಸಿ ದರ್ಶನ್‌ ಎಂಬವರು ದಿನಾಂಕ 06/05/2018ರಂದು ಅವರ ಕೆಎ-21-ಕೆ-6467ರ ಮೋಟಾರು ಬೈಕನ್ನು ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿರುವ ಬೇಕರಿ ಒಂದರ ಮುಂಭಾಗ ನಿಲ್ಲಿಸಿ ಸ್ನೇಹಿತನನ್ನು ಬಸ್‌ಗೆ ಹತ್ತಿಸಲು ಬಸ್‌ ನಿಲ್ದಾಣಕ್ಕೆ ಹೋಗಿ ನಂತರ ಮರಳಿ ಬಂದು ನೋಡುವಾಗ ಬೈಕ್‌ ಕಾಣೆಯಾಗಿದ್ದು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಸಾವು
                     ದಿನಾಂಕ 06/05/2018ರಂದು ಕಾನೂರು ಬಳಿ ಲಕ್ಷ್ಮಣ ತೀರ್ಥ ಹೊಳೆಯ ಸೇತುವೆ ಬಳಿ ಓರ್ವ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಮಲಗಿದ್ದು ಆತನನ್ನು ಗ್ರಾಮಸ್ಥರು ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ಸೇರಿಸಿದ್ದು ದಿನಾಂಕ 07/05/2018ರಂದು ಆತನು ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                      ದಿನಾಂಕ 07/05/2018ರಂದು ಸುಂಟಿಕೊಪ್ಪ ಬಳಿಯ ಹರದೂರು ನಿವಾಸಿ ಭಾಗ್ಯ ಎಂಬವರು ಸುಬ್ರಮಣಿ ಎಂಬವರ ರಿಕ್ಷಾ ಸಂಖ್ಯೆ ಕೆಎ-12-ಎ-7152ರಲ್ಲಿ ಹರದೂರಿನಿಂದ ಸುಂಟಿಕೊಪ್ಪಕ್ಕೆ ಬರುತ್ತಿರುವಾಗ ಪನ್ಯ ತೋಟದ ತಿರುವಿನ ಬಳಿ ಎದುರಿನಿಂದ ಕೆಎ-12-ಎನ್-3140ರ ಕಾರನ್ನು ಅದರ ಚಾಲಕ ಸೀತಾರಾಮ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭಾಗ್ಯರವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಕ್ಷಾಕ್ಕೆ ಹಾಣಿಯಾಗಿದ್ದು ಭಾಗ್ಯರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಹಲ್ಲೆ ಪ್ರಕರಣ
                      ದಿನಾಂಕ 07/05/2018ರಂದು ವಿರಾಜಪೇಟೆ ಬಳಿಯ ಕಡಂಗಮರೂರು ನಿವಾಶಿ ಅಮ್ಮಂಡ ವಿವೇಕ್‌ ಎಂಬವರಿಗೆ ರೋಷನ್ ಸುಬ್ರಮಣಿ ಮತ್ತು ಪಳಂಗಂಡ ಸುಬ್ರಮಣಿ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಹೊಡೆದು ಗಾಯಗೊಳಿಸಿರುವುದಾಗಿ ಅಮ್ಮಂಡ ವಿವೇಕ್‌ರವರು ದೂರು ನೀಡಿದ್ದು, ಅದೇ ರೀತಿ ಮಂಡೇಪಂಡ ರೋಷನ್‌ ಸುಬ್ರಮಣಿರವರ ಮೇಲೆ ಅಮ್ಮಂಡ ವಿವೇಕ್‌, ಹೇಮಲತಾ ಮತ್ತು ಗಂಗಮ್ಮ ಎಂಬವರು ಸೇರಿಕೊಂಡು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ಪರಸ್ಪರ ದೂರು ನೀಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, May 7, 2018

ವ್ಯಕ್ತಿಯ ಆಕಸ್ಮಿಕ ಸಾವು
                       ದಿನಾಂಕ 05/05/2018ರಂದು ಮಡಿಕೇರಿ ನಗರದ ನಿವಾಸಿ ಸಿದ್ದನಾಯಕ ಎಂಬವರು ವಿಪರೀತ ಮದ್ಯಪಾನ ಮಾಡಿ ನಗರದ ಖಾಸಗಿ ಬಸ್‌ ನಿಲ್ದಾಣದ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಳ್ಲಲೆತ್ನಿಸಿದಾಗ ಆಯ ತಪ್ಪಿ ಕೆಳಗೆ ಹರಿಯುತ್ತಿರುವ ಚರಂಡಿಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ 
                       ದಿನಾಂಕ 06/05/2018ರಂದು ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ನಂದ ಎಂಬವರು ಮನೆಯ ಬಳಿಯ ಕಾಡಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಯಾವುದೋ ವೈಯುಕ್ತಿಕ ವಿಷಯಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ   ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಹಾನಿ, ಹಲ್ಲೆ ಪ್ರಕರಣ
                        ದಿನಾಂಕ 05/05/2018ರಂದು ಶನಿವಾರಸಂತೆ ಬಳಿಯ ಹಾರೆಹೊಸೂರು ಗ್ರಾಮದ ನಿವಾಸಿ ದಿನೇಶ ಎಂಬವರು ಅವರ ಕಾರಿನಲ್ಲಿ ಬಂದು ಅವರ ಬ್ರಾಂದಿ ಅಂಗಡಿಯ ಬಳಿ ಶೆಡ್ಡಿನಲ್ಲಿ ನಿಲ್ಲಿಸುತ್ತಿರುವಾಗ ದೊಡ್ಡಕುಂದ ನಿವಾಸಿ ತೇಜ ಕುಮಾರ್ ಎಂಬಾತನು ಅಲ್ಲಿಗೆ ಒಂದು ಬಲೇನೋ ಕಾರಿನಲ್ಲಿ ಬಂದು ಏಕಾ ಏಕಿ ದಿನೇಶರವರ ಕಾರಿನ ಗಾಜಿಗೆ ದೊಣ್ಣೆಯಿಂದ ಹೊಡೆದು ಹಾನಿಗೊಳಿಸಿದ್ದು ಈ ಬಗ್ಗೆ ವಿಚಾರಿಸಿದ ಬ್ರಾಂದಿ ಅಂಗಡಿಯ ಕೆಲಸಗಾರ ಧರ್ಮಪ್ಪ ಎಂಬಾತನಿಗೂ ಸಹಾ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                      ದಿನಾಂಕ 06/05/2018ರಂದು ಗೋಣಿಕೊಪ್ಪ ನಿವಾಸಿ ಉಸ್ಮಾನ್ ಎಂಬವರು ನಗರದ ಹರಿಶ್ಚಂದ್ರಪುರದಲ್ಲಿನ ಅವರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಬಿ-6165ರ ಟಾಟಾ ಏಸ್ ವಾಹನವನ್ನು ಅದರ ಚಾಲಕ ನಿತಿನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಸ್ಮಾನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಉಸ್ಮಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತರಿಂದ ಹಲ್ಲೆ
                      ದಿನಾಂಕ 05/05/2018ರಂದು ಪೊನ್ನಂಪೇಟೆ ನಿವಾಸಿ ಕೆ.ಎಂ.ಮುತ್ತಪ್ಪ ಎಂಬವರು ಕುಂದ ಗ್ರಾಮದ ಸಿಲ್ವರ್ ಓಕ್ ಹೋಂ ಸ್ಟೇ ಬಳಿ ಅವರ ಜೀಪಿನಲ್ಲಿ ಬರುತ್ತಿರುವಾಗ ಹಿಂದಿನಿಂದ ಒಂದು ಮಾರುತಿ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮುತ್ತಪ್ಪನವರ ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿ ರಾಡಿನಿಂದ ಮುತ್ತಪ್ಪನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                   05/05/2018ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಎಸ್‌.ಎಸ್.ಕಾವೇರಪ್ಪ ಎಂಬವರು ಕೆಲಸದ ನಿಮಿತ್ತ ಗೋಣಿಕೊಪ್ಪ ನಗರಕ್ಕೆ ಬಂದು ಮರಳಿ ಮನೆಗೆ ಹೋದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಒಳಗಿದ್ದ ಡಿವಿಡಿ ಪ್ಲೇಯರ್, ಎರಡು ಚಿನ್ನದ ಉಂಗುರ ಸೇರಿದಂತೆ ಒಟ್ಟು ರೂ.24,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

Sunday, May 6, 2018


ಕಳವು ಪ್ರಕರಣ
          ಮಡಿಕೇರಿ ನಗರದ ದೇಚೂರು ಎಂಬಲ್ಲಿ ಮನೆಗೆ ಕಳ್ಳರು ನುಗ್ಗಿ ಕಳವು ಮಾಡಿರುವ ಘಟನೆ ವರದಿಯಾಗಿದೆ. ದಿನಾಂಕ 14-04-2018 ರಂದು ದೇಚೂರುವಿನ ನಿವಾಸಿ ಜಯ ಅಪ್ಪಚ್ಚು ಗಣಪತಿಯವರು ಬೆಂಗಳೂರಿಗೆ ಹೋಗಿದ್ದು, ಅವರ ಮನೆಯಲ್ಲಿ ಬಾಡಿಗೆಗೆ ಇರುವ ನಾಗರಾಜುರವರು ಸಹಾ ಮಂಡ್ಯ ಜಿಲ್ಲೆಗೆ ಹೋಗಿದ್ದು, ದಿನಾಂಕ 03-05-2018 ರ ನಡುವೆ ಯಾರೊ ಕಳ್ಳರು ನಾಗರಾಜುರವರ ಮನೆಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿ ನಾಗರಾಜುರವರ ಮನೆಯಿಂದ 40,000 ರೂ ನಗದು ಹಣವನ್ನು ಹಾಗು ನಾಗರಾಜುರವರ ಮನೆಯ ಒಳಗಿನಿಂದ ಜಯಅಪ್ಪಚ್ಚು ಗಣಪತಿಯವರ ಮನೆಗೆ ಬಾಗಿಲಿನ ಮೂಲಕ ಒಳ ಹೋಗಿ ಹಾಲ್‍ ನ ಮುಂಭಾಗದಲ್ಲಿ ಇಟ್ಟಿದ್ದ 6 ಬಂದೂಕುಗಳ ಪೈಕಿ ಒಂದು .22 ರೈಫಲ್, ಒಂದು ಡಿ.ಬಿ.ಬಿ.ಎಲ್ ಬಂದೂಕು ಹಾಗೂ 2 ಮದ್ಯದ ಬಾಟಲಿಗಳನ್ನು ಕಳವುಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ 05-05-2018 ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.
 
ಬ್ಯಾಂಕ್ ಮಾಹಿತಿ ಪಡೆದು ವಂಚನೆ
          ದಿನಾಂಕ 27-04-2018 ರಂದು ಸಿದ್ದಾಪುರದ ಕರಡಿಗೊಡುವಿನ ನಿವಾಸಿ ಜೋಸೆಫ್ ಕಿರಣ್ ಎಂಬುವವರಿಗೆ ಅನಾಮಧೇಯ ನಂಬರಿನಿಂದ ಕರೆ ಮಾಡಿ ತಾನು ಬೆಂಗಳೂರಿನ ಶಾಂತಿ ನಗರದ ಕೆನರಾ ಬ್ಯಾಂಕ್ ಶಾಖೆಯಿಂದ ಕರೆ ಮಾಡುತ್ತಿದ್ದು ನಿಮ್ಮ ಡೆಬಿಟ್ ಕಾರ್ಡ್ ನಲ್ಲಿ ತೊಂದರೆ ಇದ್ದು ಸರಿಪಡಿಸುವುದಾಗಿ ಹೇಳಿ ಡೆಬಿಟ್ ಕಾರ್ಡ್ ನ ಹಿಂಭಾಗದಲ್ಲಿರುವ CVV ನಂಬರನ್ನು ಪಡೆದುಕೊಂಡು ಖಾತೆಯಿಂದ 83,000 ರೂ ನಗದು ಹಣವನ್ನು ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮ ಹತ್ಯೆ
          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಎಂ.ಬಾಡಗ ಗ್ರಾಮದಲ್ಲಿ ವರದಿಯಾಗಿದೆ. ಎಂ.ಬಾಡಗ ಗ್ರಾಮದ ನಿವಾಸಿಯಾದ ಕರುಂಬಯ್ಯ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-05-2018 ರಂದು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾ ಅಪಘಾತ
          ದಿನಾಂಕ 05-05-2018 ರಂದು ಮಡಿಕೇರಿ ಪಟ್ಟಣದ ಇಂದಿರಾ ನಗರದ ನಿವಾಸಿ ಸಜನ ಎಂಬುವವರು ತಾಯಿ ಮರಿಯಮ್ಮನವರೊಂದಿಗೆ ಕೆಎ-12-ಬಿ-2903ರ ಆಟೋ ರಿಕ್ಷಾದಲ್ಲಿ ಮಡಿಕೇರಿ ನಗರದಿಂದ ಮನೆಗೆ ಹೋಗುತ್ತಿರುವಾಗ ಲಿವಾ ಕ್ಲೀನಿಕ್ ಬಳಿ ಆಟೋವನ್ನು ಚಾಲಕ ಅಜಾಗರುಕತೆಯಿಂದ ಚಾಲನೆ ಮಾಡಿ ಮಗುಚಿ ಬಿದ್ದ ಪರಿಣಾಮ ಸಜನ ಮತ್ತು ಮರಿಯಮ್ಮನವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅನಾಮದೇಯ ವ್ಯಕ್ತಿಯ ಸಾವು

           ಗೋಣೀಕೊಪ್ಪ ನಗರದಲ್ಲಿ ಸುಮಾರು 5-6 ವರ್ಷಗಳಿಂದ ಹುಬ್ಬಳ್ಳಿಯ ವ್ಯಕ್ತಿ ಸಿಕ್ಕಿದ ಕಡೆ ಕೂಲಿ ಕೆಲಸ ಮಾಡಿಕೊಂಡು ನಗರದ ಹಳೇ ಗ್ರಾಮ ಪಂಚಾಯಿತಿ ಕಛೇರಿಯ ಆವರಣದಲ್ಲಿ ಮಲಗುತ್ತಿದ್ದು, ಸದರಿ ವ್ಯಕ್ತಿಯು 2 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 04-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ
          ದಿನಾಂಕ 04-05-2018 ರಂದು ಕುಶಾಲನಗರದ ವೆಬ್ಸಾ ಶೋ ರೂಂ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುವ ಅಬ್ಬುರುಕಟ್ಟೆ ಗ್ರಾಮದ ನಿವಾಸಿ ಯೋಗೇಶ ಎಂಬುವವರು ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ವಳಗುಂದ ಗ್ರಾಮದ ಪ್ರೀತಮ್ ಎಂಬುವವರು ಇನ್ನೊಬ್ಬನೊಂದಿಗೆ ಬಂದು ಜಗಳ ತೆಗೆದು ಮೋಟಾರು ಸೈಕಲ್ ರಿಪೇರಿ ವಿಷಯದಲ್ಲಿ ಜಗಳ ಮಾಡಿ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೊಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೂಕಿನ ಮೂವತ್ತೋಕ್ಲು ಗ್ರಾಮದಿಂದ ವರದಿಯಾಗಿದೆ. ದಿನಾಂಕ 05-05-2018 ರಂದು ಮೂವತ್ತೋಕ್ಲು ಗ್ರಾಮದ ನಿವಾಸಿ ತಿಮ್ಮಯ್ಯ ಎಂಬುವವರು ಮನೆಗೆ ಬಾವಿಯಿಂದ ನೀರು ತರುತ್ತಿರುವಾಗ ಪಕ್ಕದ ಮನೆಯ ನಿವಾಸಿಗಳಾದ ಪದ್ಮ, ಪೊನ್ನಮ್ಮ, ಪವಿ, ಕಿಟ್ಟ ಹಾಗು ಅಪ್ಪಣ್ಣನವರು ಬಾವಿಯಿಂದ ನೀರು ತೆಗೆದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ತಿಮ್ಮಯ್ಯನವರು ನಿಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, May 5, 2018

ವ್ಯಕ್ತಿಯ ಸಾವು ಪ್ರಕರಣ ದಾಖಲು: 

     ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಮನೆಯ ಬಾತ್ ರೂಂನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ನಡೆದಿದೆ. ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವ ಪೇಟೆ ನಿವಾಸಿ ರವಿ ಎಂಬವರು ಮಡಿಕೇರಿ ನಗರದ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದು ದಿನಾಂಕ 4-5-2018 ರಂದು ತಮ್ಮ ಮನೆಯ ಬಾತ್ ರೂಂ ನಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು, ಆರೋಗ್ಯದ ತೊಂದರೆಯಿಂದಲೋ ಅಥವಾ ಜಾರಿಬಿದ್ದು ಮೃತಪಟ್ಟರಬಹುದೆಂದು ಸುರೇಶ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ: 

     ಮಡಿಕೇರಿ ಗ್ರಾಮಾಂತರ ಠಾಣೆ ಸರಹದ್ದಿನ ಯು.ಚೆಂಬು ಗ್ರಾಮದ ನಿವಾಸಿ ಕೆ.ಜಿ.ನಯನ ಎಂಬವರು ದಿನಾಂಕ 1-5-2018 ರಂದು ಚೆಂಬು ಗ್ರಾಮದಲ್ಲಿ ಜೀಪಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ದೀಕ್ಷಿತ್, ಮನೋಹರ, ಜಿತೇಶ್, ನಂದಕುಮಾರ್, ರವರುಗಳು ಜೀಪನ್ನು ನಿಲ್ಲಿಸಿ ಜೀಪಿನಿಂದ ಕೆ.ಜಿ.ನಯನರವರನ್ನು ಎಳೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಗಿಲು ಮುರಿದು ಕಳವು: 

     ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ‍್ವರ ಬಡಾವಣೆಯಲ್ಲಿರುವ ಪ್ರದೀಪ್ ನರೋನ ಎಂಬವರ ಮನೆಯ ಹಿಂದಿನ ಬಾಗಿಲಿಗೆ ಹಾಕಿದ ಬೋಲ್ಟ್ ನ್ನು ಮುರಿದು ಒಳಗೆ ಪ್ರವೇಶಿಸಿ ಟಿ.ವಿ., ಪೋನ್, ಕೈಗಡಿಯಾರ, ಕ್ಯಾಮರಾ ಹಾಗು ಇತರೆ ಮನೆ ಸಾಮಾಗ್ರಿಗಳು ಒಟ್ಟು 21,000 ರೂ. ಬೆಲೆಬಾಳುವ ವಸ್ತುಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ನಡೆಸುತ್ತಿದ್ದಾರೆ. 

ಮನೆ ಕಳವು: 

     ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಸ್ವಾಮಿ ಬಡಾವಣೆಯಲ್ಲಿರುವ ಫಿರ್ಯಾದಿ ಪಿ.ಬಿ. ನಾಚಪ್ಪ, ಎಂಬವರ ಮನೆಯ ಮುಂಬಾಗದ ಕಿಟಕಿಯ ಎರಡು ರಾಡುಗಳನ್ನು ಕತ್ತರಿಸಿ ತೆಗದು ಕಿಟಕಿ ಮೂಲಕ ಒಳಪ್ರವೇಶಿಸಿ ನಗದು ರೂ.37,000, 2 ಬೆಳ್ಳಿ ನಾಣ್ಯ, ಅರ್ಧ ಪವನಿನ 2 ಮುತ್ತಿನ ಸರ ಕೆನರಾ ಬ್ಯಾಂಕಿನ ಎ.ಟಿ.ಎಂ. ಕಾರ್ಡ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಷ ಸೇವಿಸಿ ವ್ಯಕ್ತಿ ಸಾವು: 

     ಶ್ರೀಮಂಗಲ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ನಿವಾಸಿ ಕರ್ತಮಾಡ ಸುಬ್ರಮಣಿ ಎಂಬವರು ದಿನಾಂಕ 3-5-2018 ರಂದು ರಾತ್ರಿ ಯಾವುದೋ ವಿಷವನ್ನು ಸೇವಿಸಿ ಮೃತಪಟ್ಟಿದ್ದು, ಈ ಸಂಬಂಧ ಕರ್ತಮಾಡ ಎಸ್. ಬೋಪಣ್ಣ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, May 4, 2018

ಪರಸ್ಪರ ಕಾರು ಡಿಕ್ಕಿ
                      ದಿನಾಂಕ 03/05/2018ರಂದು ಮಡಿಕೇರಿ ನಗರದ ವಿದ್ಯಾನಗರ ನಿವಾಸಿ ಬಿ.ಎಸ್.ಉಮೇಶ್ ಎಂಬವರು ಅವರ ಕೆಎ-12-ಬಿ-4313ರ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಗಾಳಿಬೀಡು ಗ್ರಾಮದಲ್ಲಿ ಎದುರಿನಿಂದ ಕೆಎ-12-ಬಿ-0294ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಮೇಶ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಚಿನ್ನಾಭರಣ ಕಳವು
                       ಸಿದ್ದಾಪುರ ನೆಲ್ಲಿಹುದಿಕೇರಿ ಬಳಿಯ ನಲ್ವತೆಕ್ರೆ ನಿವಾಸಿ ಫಾತಿಮಾ ಎಂಬವರು ದಿನಾಂಕ 22/04/2018ರಂದು ಅವರ ಪತಿಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಕೇರಳದ ಮಂಜೇರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 03/05/2018ರಂದು ಮರಳಿ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂಬಾಗದ ಕಿಟಕಿಯ ವೆಂಟಿಲೇಟರ್ ಮೂಲಕ ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.1,90,000/- ಮೌಲ್ಯದ ಚಿನ್ನಾಭರಣ, ಡಿವಿಡಿ ಪ್ಲೇಯರ್, ಬಟ್ಟೆಗಳು ಮತ್ತು ನಗದು ರೂ. 28,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ 
                      ದಿನಾಂಕ 03/05/2018ರಂದು  ಶ್ರೀಮಂಗಲ ಬಳಿಯ ಹೈಸೊಡ್ಲೂರು ನಿವಾಸಿ ಚೇಂದಿರ ಪವಿತ್ರ ಕುಮಾರ್‌ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಚೇಂದಿರ ಡ್ಯಾನಿ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮರದ ದೊಣ್ಣೆಯಿಂದ ಪವಿತ್ರ ಕುಮಾರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                  ದಿನಾಂಕ 03/05/2018ರಂದು ಅರಕಲಗೂಡು ಬಳಿಯ ಹಿಪ್ಪಲಿ ನಿವಾಸಿ ಚರಣ್‌ರಾಜ್‌ ಎಂಬವರು ಹರೀಶ್‌ ಎಂಬವರೊಂದಿಗೆ ಕೆಎ-12-ಆರ್-4426ರ ಬೈಕಿನಲ್ಲಿ ಬಾಗದಾಳು ಗ್ರಾಮದಿಂದ ಶನಿವಾರಸಂತೆ ಬಳಿಯ ಕಿತ್ತೂರು ಗ್ರಾಮಕ್ಕೆ ಹೋಗುತ್ತಿರುವಾಗ ಕಿತ್ತೂರು ಗ್ರಾಮದ ಬಳಿ ಶನಿವಾರಸಂತೆ ಕಡೆಯಿಂದ ಕೆಎ-05-ಎಂಕೆ-6522ರ ಕಾರನ್ನು ಅದರ ಚಾಲಕ ಸಚಿನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚರಣ್‌ರಾಜ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಚರಣ್‌ರಾಜ್ ಮತ್ತು ಹರೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಆಕಸ್ಮಿಕ ಸಾವು
                     ದಿನಾಂಕ 02/05/2018ರಂದು ಸೋಮವಾರಪೇಟೆ ಬಳಿಯ ಕಾರೆಕೊಪ್ಪ ಗ್ರಾಮದ ನಿವಾಸಿ ಸತೀಶ್‌ ಎಂಬವರ ತೋಟದಲ್ಲಿ ತಮಿಳುನಾಡಿನ ಸೇಲಂ ನಿವಾಸಿ ಉನ್ನಮಲೈ ಎಂಬವರು ಮರಗಸಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, May 3, 2018

ಅತ್ಯಾಚಾರ ಪ್ರಕರಣ ಆರೋಪಿಗೆ ಶಿಕ್ಷೆ       
   
    ದಿನಾಂಕ 23-08-2016ರಂದು ಕೊಡಗು ಜಿಲ್ಲೆಯ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳ ಮೇಲೆ ಆರೋಪಿ ಸಿದ್ದಪ್ಪ @ ಸಿದ್ದು ಎಂಬಾತನು ಮಾರಣಾಂತಿಕ ಹಲ್ಲೆ ಮಾಡಿ ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗಿ ಬೆದರಿಕೆ ಹಾಕಿ ಬಲತ್ಕಾರವಾಗಿ ಅತ್ಯಾಚಾರ ಮಾಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ. 92/2016, ವಿಧಿ: 341,324,506,376 ಐಪಿಸಿ ರೀತಿ ಪ್ರಕರಣ ದಾಖಲಾಗಿದ್ದು, ನಂತರ ದಿನಾಂಕ 01/09/2016 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಪಿರ್ಯಾಧಿಯವರು ನೀಡಿದ ಚಹರೆಯ ಆಧಾರದ ಮೇಲೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. 

     ಈ ಪ್ರಕರಣದ ತನಿಖೆಯನ್ನು ಈ ಹಿಂದೆ ಇದ್ದ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ನಡೆಸಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.


    ಈ ಪ್ರಕರಣದ ವಿಚಾರಣೆಯು ಮಾನ್ಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ ಇಲ್ಲಿ ನಡೆದು, ಆರೋಪಿಯ ವಿರುದ್ಧ ಆರೋಪವು ಸಾಭೀತಾದ ಕಾರಣ ಮಾನ್ಯ ನ್ಯಾಯಾಧೀಶರಾದ ಪವನೇಶ್‍ ರವರು ದಿ:30/01/2018 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಕೇಸಿನ ಅಂತಿಮ ತೀರ್ಪು ನೀಡಿದ್ದು, ಘನ ನ್ಯಾಯಾಲಯದ ಎಸ್‍.ಸಿ ನಂ.107/2016 ರಲ್ಲಿ ವಿಚಾರಣೆಯಲ್ಲಿ ಆರೋಪಿ ವಿರುದ್ದ ದಿನಾಂಕ 02-05-2018ರಂದು ವಿಧಿ:353(2) ಸಿ.ಆರ್‍.ಪಿ.ಸಿಯಂತೆ ಕಲಂ 341 ಐಪಿಸಿಗೆ 500 ರೂ ದಂಢ ತಪ್ಪಿದಲ್ಲಿ 1 ತಿಂಗಳು ಶಿಕ್ಷೆ, ಕಲಂ 506 ಐಪಿಸಿ 03 ವರ್ಷ ಕಠಿಣ ಶಿಕ್ಷೆ ಹಾಗೂ 3500/- ರೂ ದಂಢ, ತಪ್ಪಿದಲ್ಲಿ 02 ತಿಂಗಳ ಸಾದಾ ಶಿಕ್ಷೆ, ಕಲಂ 376 ಐಪಿಸಿ 10 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ, ಕಲಂ 307 ಐಪಿಸಿ 08 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಕೃಷ್ಣವೇಣಿರವರು ವಾದ ಮಂಡಿಸಿದ್ದರು.

     ಈ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕರರಾದ ಶ್ರೀ ಪಿ.ಕೆ.ರಾಜು ಹಾಗು ತನಿಖೆಗೆ ಸಹಕರಿಸಿದ ಪೊಲೀಸ್ ಸಿಬ್ಬಂದಿಯವರನ್ನು ಶ್ಲಾಘಿಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.


ಯುವಕ ಕಾಣೆ:
       ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ನಿವಾಸಿ ಬಿ.ವಿ. ಸತೀಶ್ ರೈ ಎಂಬವರ ಮಗ 18 ವರ್ಷ ಪ್ರಾಯದ ಶ್ರೇಯಸ್ ಎಂಬವನು ದಿನಾಂಕ 16-4-2018 ರಂದು ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಬಿ.ವಿ. ಸತೀಶ್ ರೈ ರವರು  ದಿನಾಂಕ 2-5-2018 ರಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಕೊಲೆಗೆ ಯತ್ನ:
        ಆಸ್ತಿ ವಿಚಾರದಲ್ಲಿ ವ್ಯಕ್ತಿ ಮೇಲೆ ತನ್ನ ಸಹೋದರ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಯಲಕನೂರು ಗ್ರಾಮದಲ್ಲಿ ನಡೆದಿದೆ.  ಫಿರ್ಯಾದಿ ಕೆ.ಜೆ. ಪ್ರಸನ್ನ ಎಂಬವರ ತಂದೆಯವರಿಗೆ ಸೋಮವಾರಪೇಟೆ ತಾಲೋಕಿನ ಶಾಂತಳ್ಳಿ  ಮತ್ತು ಹೊಸಳ್ಳಿ ಗ್ರಾಮದಲ್ಲಿ ಕಾಫಿ ತೋಟವಿದ್ದು, ಸದರಿ ಆಸ್ತಿಯನ್ನು ಪಾಲು ಮಾಡಿಕೊಡದ ವಿಚಾರದಲ್ಲಿ ಕೆ.ಜೆ. ಪ್ರಸನ್ನ ರವರ ಸಹೋದರ ಲತೇಶ ಎಂಬವರು ದಿನಾಂಕ 1-5-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಪ್ರಸನ್ನರವರ ಮನೆಗೆ ಬಂದು ಆಸ್ತಿ ಪಾಲುಮಾಡಿಕೊಡದ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ಪ್ರಸನ್ನರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ನೀಡಿದ ದೂರಿನನ್ವಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿದ ಬಾಲಕ ಸಾವು:
     ಆಟವಾಡುತ್ತಿದ್ದಾದ  ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ 5 ವರ್ಷದ ಬಾಲಕ ಸಾವನಪ್ಪಿದ ಘಟನೆ ನಡೆದಿದೆ.  ಪೊನ್ನಂಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಳೆಲೆ ಗ್ರಾಮದ ನಿವಾಸಿ ಸಿ.ಎಂ ಪೂಣಚ್ಚ ಎಂಬವರ ಮಗ ಡಿಕ್ಕಿ ದೇವಯ್ಯ ಎಂಬವ ದಿನಾಂಕ 1-5-2018ರಂದು ಆಟವಾಡಿಕೊಂಡಿರುವಾಗ್ಗೆ ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಸದರಿ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ದಾರಿ ತಡೆದು ಹಲ್ಲೆ:
ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಮೈಸೂರಮ್ಮ ಕಾಲೋನಿ ನಿವಾಸಿ ಕೆ.ಸಿ. ವಿನೋದ ಎಂಬವರು ದಿನಾಂಕ 30-4-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗೋಣಿಕೊಪ್ಪದ ಬೈಪಾಸ್ ರಸ್ತೆಯಲ್ಲಿ ತನ್ನ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ರಸ್ತೆಯಲ್ಲಿ ಆರೋಪಿಗಳಾದ ಕೆ. ರಾಮು ಹಾಗು ಎಲ್. ಅಯ್ಯಪ್ಪ ಎಂಬವರುಗಳು ನಿಂತಿದ್ದು, ವಿನೋದ್ ರವರ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಹಳೇ ದ್ವೇಷದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖಡ ಕೈಗೊಂಡಿದ್ದಾರೆ.

Tuesday, May 1, 2018

ನೀರಿನಲ್ಲಿ ಮುಳುಗಿ ಬಾಲಕ ಸಾವು
                          ದಿನಾಂಕ 29/04/2018ರಂದು ಸಿದ್ದಾಪುರ ಬಳಿಯ ಬೈರಂಬಾಡ ಗ್ರಾಮದ ನಿವಾಸಿ ಎಂ.ಸಿ. ಕಾರ್ಯಪ್ಪ ಎಂಬವರ ತೊಟದಲ್ಲಿ ಕೆರೆ ಕೆಲಸ ಮಾಡುತ್ತಿದ್ದ ಹಾಸನದ ಅರಸೀಕೆರೆ ನಿವಾಸಿ ಈರ ಬೋವಿ ಎಂಬವರ ಮಗ ಕಿರಣ್ ಎಂಬ ಬಾಲಕನು ಬಾಳೆ ದಿಂಡಿನ ಸಹಾಯದೊಂದಿಗೆ ಗೆಳೆಯರ ಜೊತೆ ಕೆರೆಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಬಾಳೆ ದಿಂಡು ಆತನ ಕೈಯಿಂದ ಜಾರಿ ಕಿರಣನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                          ದಿನಾಂಕ 30/04/2018ರಂದು ಚೇರಂಬಾಣೆ ಬಳಿಯ ಕೊಟ್ಟೂರು ನಿವಾಸಿ ಟಿ.ಎಸ್.ಸುಬ್ಬಯ್ಯ ಎಂಬವರು ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಆರ್-8951ರಲ್ಲಿ ಕೊಟ್ಟೂರುವಿನಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿ ನಗರದ ಮಂಗಳೂರು ರಸ್ತೆಯ ಬಳಿ ಮಡಿಕೇರಿ ಕಡೆಯಿಂದ ಕೆಎ-07-ಎ-7963ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ಬಯ್ಯನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ
                      ಮಡಿಕೇರಿ ಬಳಿಯ ಬೋಯಿಕೇರಿ ನಿವಾಸಿ ಅಳಗುಸ್ವಾಮಿ ಎಂಬ ವ್ಯಕ್ತಿಯು ದಿನಾಂಕ 07/04/2018ರಂದು ಮಡಿಕೇರಿ ನಗರದ ಬಸ್‌ ನಿಲ್ದಾಣದಿಂದ ಕಾಣೆಯಾಗಿರುವುದಾಗಿ ಆತನ ಅಕ್ಕ ಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                     ದಿನಾಂಕ 29/04/2018ರಂದು ಶನಿವಾರಸಂತೆ ನಗರದ ತ್ಯಾಗರಾಜ ಕಾಲೊನಿ ನಿವಾಸಿ ಮಂಜ ಎಂಬವರು ಅವರ ಪತ್ನಿಯ ಮನೆಯಲ್ಲಿ ಊಟ ಮಾಡುತ್ತಿರುವಾಗ ಕುಮಾರ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಂಜರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                    ದಿನಾಂಕ 29/04'2018ರಂದು ಶನಿವಾರಸಂತೆಯ ಅರಣ್ಯ ಇಲಾಖೆಯ ಉದ್ಯೋಗಿ ಚಂದ್ರ ಎಂಬವರು ಕೆಎ-43-ಹೆಚ್-306 ರ ಬೈಕಿನಲ್ಲಿ ಕರ್ತವ್ಯಕ್ಕೆ ಹೋಗುತ್ತಿರುವಾಗ ಶನಿವಾರಸಂತೆ ನಗರದ ಅರಣ್ಯ ಇಲಾಖೆ ಕಚೇರಿ ಬಳಿ ಹಿಂದಿನಿಂದ ಕೆಎ-46-3174ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಚಂದ್ರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                    ದಿನಾಂಕ 30/04/2018ರಂದು ಸೋಮವಾರಪೇಟೆ ಬಳಿಯ ಮಾದಾಪುರ ನಿವಾಸಿ ಸುಧಾಕರ ಎಂಬಾತನು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಾಫಿ ಕೃಷಿಯಲ್ಲಿ ನಷ್ಟ ಹಾಗೂ ಸ್ನೇಹಿತರೊಂದಿಗೆ ಪಡೆದ ಸಾಲ ತೀರಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                    ದಿನಾಂಕ 29/04/2018ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ನಿವಾಸಿ ಜೇನುಕುರುಬರ ರಾಜು ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಜೇನು ಕುರುಬರ ದಿನೇಶ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರಾಜುರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.