Sunday, May 27, 2018


ಹಣದ ವಿಚಾರ, ಕೊಲೆ ಬೆದರಿಕೆ:     ಬೆಂಗಳೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಶ್ರೀಮತಿ ಅನಿತ ಎಂಬವರು 23-2-2018 ರಂದು ಸೋಮವಾರಪೇಟೆ ತಾಲೋಕು ತಲ್ತಾರಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಪಿ. ಕುಶಾಲಪ್ಪ ಎಂಬವರಿಗೆ 7 ಲಕ್ಷ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು, ಸದರಿ ಹಣವನ್ನು ಮರಳಿಸುವಂತೆ ಕೇಳಿದ ವಿಚಾರದಲ್ಲಿ ಕುಶಾಲಪ್ಪನವರು ಕೋವಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ಹಾಗೂ ಅವರೊಂದಿಗಿದ್ದ ಕನ್ನಿಮಣಿ ಮತ್ತು ತೇಜಸ್ವಿನಿ ಎಂಬವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಗುಡ್ಡಹೊಸುರು ಗ್ರಾಮದ ಎಂ.ಆರ್. ಗಣೇಶ ಎಂಬವರು ದಿನಾಂಕ 20-5-2018 ರಂದು ತಮ್ಮ ಪತ್ನಿಯೊಂದಿಗೆ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ರಾಜೇಶ, ಹೇಮಾವತಿ ಮತ್ತು ಶೇಖರ ಎಂಬವರು ಅಲ್ಲಿಗೆ ಬಂದು ಹೊಲದಲ್ಲಿ ದನಗಳನ್ನು ಮೇಯಿಸಿದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿಯ ಆತ್ಮಹತ್ಯೆ:
ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದ ನಿವಾಸಿ ದಯಾನಂದ ಎಂಬವರು ದಿನಾಂಕ 26-5-2018 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಹೆಚ್.ಪಿ. ಸುಜಾತ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.