Thursday, May 10, 2018

ಕ್ಷುಲ್ಲಕ ಕಾರಣಕ್ಕೆ ಹಲ್ಲೆ: 
     ಸಿದ್ದಾಪುರ ಠಾಣಾ ಸರಹದ್ದಿನ ಟಾಟಾ ಕಾಫಿ ತೋಟ ಎಮ್ಮೆಗುಂಡಿ ವಿಭಾಗದಲ್ಲಿ ವಾಸವಾಗಿರುವ ಬಾಬು ಮತ್ತು ಅವರ ಪಕ್ಕದ ಮನೆಯ ನಿವಾಸಿ ಸಂಜಯ್ ಹಲ್ ದಾರ್ ಎಂಬವರ ನಡುವೆ ಟಿ.ವಿ.ಯ ಸೌಂಡ್ ನ್ನು ಜೋರಾಗಿ ಹಾಕಿ ನೋಡುತ್ತಿದ್ದ ವಿಚಾರದಲ್ಲಿ ಜಗಳವಾಗಿದ್ದು ಬಾಬುರವರ ಮೇಲೆ ಸಂಜಯ್ ಹಲ್ ದಾರ್ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪತಿಯಿಂದ ಪತ್ನಿ ಮೇಲೆ ಹಲ್ಲೆ:
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಸಗೋಡು ಗ್ರಾಮದ ನಿವಾಸಿ ಶ್ರೀಮತಿ ಎಂ.ಎಸ್. ಜಯಮ್ಮ ಎಂಬವರು ದಿನಾಂಕ 9-4-2018 ರಂದು ತಮ್ಮ ಮನೆಯಲ್ಲಿದ್ದ ವೇಳೆಯಲ್ಲಿ ಅವರ ಪತಿ ಶಿವರಾಜುರವರು ಮದ್ಯಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ: 
     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೂಗೆಕೋಡಿ ಗ್ರಾಮದ ನಿವಾಸಿ ಕಿರಣ್ ಕುಮಾರ್ ಎಂಬವರು ತನ್ನ ಸ್ನೇಹಿತರಾದ ಸಂತೋಷ್, ಅವಿನಾಶ್, ಸಂದರ್ಶ್, ಪುನಿತ್ ಮತ್ತು ಅಭಿಷೇಕ್ ರವರೊಂದಿಗೆ 3 ಬೈಕಿನಲ್ಲಿ 11:45 ಗಂಟೆಗೆ ಮಲ್ಲಳ್ಳಿ ಫಾಲ್ಸ್ ನೋಡಲೆಂದು ಹೋಗಿದ್ದು, ಎಲ್ಲರೂ ಜಲಪಾತದ ಗುಂಡಿಯ ಪಕ್ಕ ನೀರಿನಲ್ಲಿ ಆಟವಾಡುತ್ತಿದ್ದಾಗ ಸ್ನೇಹಿತ ಪ್ರಾಯ 19 ವರ್ಷದ ಅಭಿಶೇಕ್ ನೀರಿನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ: 
     ಹಾಸನ ಜಿಲ್ಲೆಯ ಗಂಗೂರು ರಾಮನಾಥಪುರ ನಿವಾಸಿ ಚೇತನ್ ಎಂಬವರು ತನ್ನ ಸ್ನೇಹಿತ ಗಂದಾಧರ ಎಂಬವರೊಂದಿಗೆ ಮೋಟಾರ್ ಸೈಕಲಿನಲ್ಲಿ ಕುಶಾಲನಗರಕ್ಕೆ ಬಂದು ವಾಪಾಸು ಹೋಗುತ್ತಿದ್ದಾಗ ಬೈಚನಳ್ಳಿ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಬಂದ ಕಾರೊಂದು ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಚೇತನ್ ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.