Saturday, June 30, 2018

ಕಳವು ಪ್ರಕ್ರಣ 
              ದುಬಾರೆ ಮೀಸಲು ಆರಣ್ಯ ವ್ಯಾಪ್ತಿಯ ಮಾಲ್ದಾರೆ ಅರಣ್ಯ ಅಂಚಿನಲ್ಲಿರುವ ಕರಡಿಗೋಡು ಗ್ರಾಮದ ಏರೋಲ್ ಜೇಮ್ಸ್ ಫಾಯಸ್ ಎಂಬುವವರ ಕಾಫಿ ತೋಟದಲ್ಲಿರುವ ಮರಕ್ಕೆ ಆನೆಗಳ ಚಲನ ವಲನ ಗಮನಿಸುವ ಸಂಬಂದ ಅರಣ್ಯ ಇಲಾಖೆಯವರು 6000 ರೂ ಬೆಲೆಯ ಕ್ಯಾಮೆರಾವನ್ನು ದಿನಾಂಕ 22-06-2018 ರಂದು ಅಳವಡಿದ್ದು, ಸದರಿ ಕ್ಯಾಮೆರಾವನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯವರಾದ ಮಂಜುನಾಥ್ ಗೂಳಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
             ದಿನಾಂಕ 28-06-2018 ರಂದು ಸುಂಟಿಕೊಪ್ಪಲುವಿನ ಕಲ್ಲೂರು ಗ್ರಾಮದ ನಿವಾಸಿಯಾದ ರಾಜೇಶ್ ಎಂಬುವವರು ಮಾರುತಿ 800 ಕಾರಿನಲ್ಲಿ ನಾಕೂರು ಶಿರಂಗಾಲ ಗ್ರಾಮದ ನಿವಾಸಿಯಾದ ಸುರೇಶ, ಅವರ ಪತ್ನಿ ವಿನುತಾ, ಮಕ್ಕಳಾದ ಅಕುಲ್ ಮತ್ತು ದೀಕ್ಷಾರವರನ್ನು ಕೂರಿಸಿಕೊಂಡು ಸುಂಟಿಕೊಪ್ಪಕ್ಕೆ ಹೋಗುತ್ತಿರುವಾಗ 7ನೇ ಹೊಸಕೋಟೆಯ ಮೆಟ್ನಳ್ಳ ಜಂಕ್ಷನ್ ನ ಹತ್ತಿರ ತಲುಪುವಾಗ ಎದುರುಗಡೆಯಿಂದ ಗೂಡ್ಸ್ ಆಟೋ ರಕ್ಷಾವನ್ನು ಅದರ ಚಾಲಕ ಕುಶಾಲನಗರದ ಬೈಚನ ಹಳ್ಳಿಯ ನಿವಾಸಿಯಾದ ನಿಸಾರ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸುರೇಶ, ವಿನುತಾ, ಅಕುಲ್ ಮತ್ತು ದೀಖ್ಷಾರವರಿಗೆ ಗಾಯಗಳಾಗಿದ್ದು ಈ ಬಗ್ಗೆ ರಾಜೇಶ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶವ ಪತ್ತೆ 
              ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಂದರನಗರದ ನಿವಾಸಿಗಳಾದ ಅನಿಲ್ ಕುಮಾರ್, ಅರುಣ, ಮಂಜು, ವಿಜಯ, ಜಾನ್ಸನ್ ಮತ್ತು ಮನೋಜ್ ರವರು ದಿನಾಂಕ 22-06-2018 ರಂದು ಶಾಂತಳ್ಳಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ಹೋಗಿದ್ದವರು ವಾಪಾಸ್ಸು ಬರುವಾಗ ಮಲ್ಲಳ್ಳಿ ಜಲಪಾತವನ್ನು ನೋಡಲು ಹೋದವರು ಹರಿಯುವ ನೀರಿನಲ್ಲಿ ಫೋಟೋಗಳನ್ನು ತೆಗೆಯುತ್ತಿರುವಾಗ ಮನೋಜ್ ರವರು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದವರ ಮೃತ ಶರೀರವು ದಿನಾಂಕ 29-06-2018 ರಂದು ಸುಮಾರು 1 ಕಿ ಮೀ ದೂರದಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ 
                   ದಿನಾಂಕ 28-06-2018 ರಂದು ಕುಶಾಲನಗರದ ಕೂಡ್ಲೂರುವಿನ ಕೈಗಾರಿಕಾ ಪ್ರದೇಶದ ಎಸ್.ಎನ್.ಎಲ್ ವರ್ಕ್ಸ್ ಪಕ್ಕ ತೋಡಿನ ಬಳಿ ಅಕ್ರಮವಾಗಿ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ನವೀನ್ ಗೌಡರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಟವಾಡುತ್ತಿದ್ದ ಕೂಡ್ಲೂರು ಗ್ರಾಮದವರಾದ ಹರೀಶ್, ಸಾಹುಲ್, ಮತ್ತು ಕೀರ್ತಿ ಎಂಬುವವರನ್ನು ದಸ್ತಗಿರಿ ಮಾಡಿ ಸ್ಥಳದಿಂದ 2,000 ರೂ ನಗದು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಅಪಘಾತ ಪ್ರಕರಣ 
                   ದಿನಾಂಕ 29-06-2018 ರಂದು ಗೋಣಿಕೊಪ್ಪಲುವಿನ ಪಟೇಲ್ ನಗರದ ನಿವಾಸಿಯಾದ ಮನೋಜ್ ಕುಮಾರ್ ರವರು ಮೋಟಾರು ಸೈಕಲಿನಲ್ಲಿ ಹರಿಶ್ಚಂದ್ರಪುರದಿಂದ ಗೋಣಿಕೊಪ್ಪ ನಗರಕ್ಕೆ ಹೋಗುತ್ತಿರುವಾಗ ಅನಿಶ್ ಮಾದಪ್ಪ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, June 29, 2018

ಕಳವು ಪ್ರಕರಣ 
            ದಿನಾಂಕ 25-06-2018 ರ ರಾತ್ರಿ ಸಮಯದಲ್ಲಿ ಸೋಮವಾರಪೇಟೆಯಲ್ಲಿರುವ ಬಿ.ಟಿ.ಸಿ.ಜಿ ಪದವಿ ಪೂರ್ವ ಕಾಲೇಜಿನ ಕಚೇರಿ ಮತ್ತು ಪ್ರಾಂಶುಪಾಲರ ಕೊಠಡಿಯ ಬೀಗವನ್ನು ಮುರಿದು ಒಳ ನುಗ್ಗಿ ಪುಸ್ತಕಗಳು, ಬೀಗ, ಕೀಗಳು, 250 ರೂ ನಗದು ಹಣ, ಒಂದು ಮೊಬೈಲ್, ಎಸ್.ಎಸ್.ಎಲ್.ಸಿ ಯ ಅಂಕಪಟ್ಟಿಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ 28-06-2018 ರಂದು ಪ್ರಾಂಶುಪಾಲರಾದ ಶರಣ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
              ದಿನಾಂಕ 28-06-2018 ರಂದು ಮಂಗಳೂರಿನ ನಿವಾಸಿ ಎಡ್ಮಂಡ್ ಡಿಸೋಜ ಎಂಬುವವರು ಬೆಂಗಳೂರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಸುಂಟಿಕೊಪ್ಪದ 7ನೇ ಹೊಸಕೋಟೆ ಎಂಬಲ್ಲಿಗೆ ತಲುಪುವಾಗ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹೆಂಗಸು ನಾಪತ್ತೆ 
              ದಿನಾಂಕ 27-06-2018 ರಂದು ಮಡಿಕೇರಿ ತಾಲೂಕಿನ ಬೇತು ಗ್ರಾಮದ ನಿವಾಸಿಯಾದ ರಾಮೇಗೌಡ ಎಂಬುವವರ ತಾಯಿ 68 ವರ್ಷ ಪ್ರಾಯದ ಜಯಮ್ಮ ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದವರು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Thursday, June 28, 2018

ಬಸ್ಸು-ಲಾರಿ ಮುಖಾಮುಖಿ
     ಮಡಿಕೇರಿ ಕೆ.ಎಸ್‍.ಆರ್‍.ಟಿ.ಸಿ. ಡಿಪೋ ಬಸ್‍ ಚಾಲಕರಾದ  ಎಸ್‍. ಅಶೋಕ ಎಂಬವರು ದಿನಾಂಕ 27-6-2018 ರಂದು ಬೆಂಗಳೂರಿನ ಬಸ್ಸು ನಿಲ್ದಾಣದಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬೋಯಿಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸು ಜಖಂ ಗೊಂದು ಬಸ್ಸಿನಲ್ಲಿದ್ದ ಚಾಲಕ ಎಸ್. ಅಶೋಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಗಿಲು ಮುರಿದು ಕಳ್ಳತನ:
     ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟೋಳಿ ಗ್ರಾಮದ ನಿವಾಸಿ ಪಿ.ಎಸ್. ಸತೀಶ ಎಂಬವರಿಗೆ ಸೇರಿದ ಮನೆಗೆ ದಿನಾಂಕ 26-6-2018ರ ರಾತ್ರಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ  90,000 ರೂ ಮೌಲ್ಯದ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಫಿರ್ಯಾದಿ ಪಿ.ಎಸ್. ಸತೀಶ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:
     ಗೋಣಿಕೊಪ್ಪ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದ ನಿವಾಸಿ ಚೇಮದೀರ ನಂಜಮ್ಮ ಎಂಬವರ ಮಗ ದರ್ಶನ್ ಎಂಬವರು ದಿನಾಂಕ 25-6-2018 ರಂದು ಸೀಗೆತೋಡು ಗ್ರಾಮದ ಪೌತಿ ಬೋಜಪ್ಪ ಎಂಬವರಿಗೆ ಸೇರಿದ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, June 27, 2018

ಮೋಟಾರು ಸೈಕಲ್ ಅಪಘಾತ 
           ದಿನಾಂಕ 24-06-2018 ರಂದು ಸೋಮವಾರಪೇಟೆ ನಗರದ ನಿವಾಸಿ ವಿಘ್ನೇಶ್ ಎಂಬುವವರು ಸಂಜೆ ಮನೆಯಿಂದ ಸೋಮವಾರಪೇಟೆ ನಗರಕ್ಕೆ ಮೋಟಾರು ಸೈಕಲಿನಲ್ಲಿ ಹೋದವರು ಗೌಡ ಸಮಾಜದ ಹತ್ತಿರ ಮೋಟಾರು ಸೈಕಲನ್ನು ಅ ಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವಾದ ಪರಿಣಾಮ ವಿಘ್ನೇಶ್ ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಮೈಸೂರಿನ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತದಿಂದ ಗಾಯಗೊಂಡ ವ್ಯಕ್ತಿಯ ಸಾವು 
         ದಿನಾಂಕ 18-06-2018 ರಂದು ಬೇತ್ರಿ ಗ್ರಾಮದ ಹಂಸ ಎಂಬುವವರ ಆಟೋ ರಿಕ್ಷಾದಲ್ಲಿ ನಾಲ್ಕೇರಿ ಗ್ರಾಮದ ನಿವಾಸಿಯಾದ ಗುರುವ ಎಂಬುವವರು ಬಾಡಿಗೆ ಮಾಡಿಕೊಂಡು ಬೇತ್ರಿಯಿಂದ ಹೋಗುತ್ತಿರುವಾಗ ಎಂ ಬಾಡಗ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಲಂಕೇಶ್ ಎಂಬುವವರು ಜೀಪನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋ ರಿಕ್ಷಾಗೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾ ಜಖಂಗೊಂಡು ಗುರುವರವರಿಗೆ ಗಾಯಗಳಾಗಿದ್ದು, ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುವರವರು ದಿನಾಂಕ 26-06-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಚಾರಿಗೆ ಮೋಟಾರು ಸೈಕಲ್ ಡಿಕ್ಕಿ 
               ದಿನಾಂಕ 26-06-2018 ರಂದು ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ತಿಮ್ಮಯ್ಯನವರು ತಮ್ಮ ಪತ್ನಿ ಮಾಚಮ್ಮನವರೊಂದಿಗೆ ಸಂತೆಗೆ ನಡೆದುಕೊಂಡು ರಥಬೀದಿಯಲ್ಲಿ ಹೋಗುತ್ತಿರುವಾಗ ಅಜಯ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಮಾಚಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ತಲೆಗೆ ಗಾಯವಾಗಿದ್ದು ಈ ಬಗ್ಗೆ ತಿಮ್ಮಯ್ಯನವರು ನೀಡಿದ ದೂರನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, June 26, 2018

ಹಲ್ಲೆ ಪ್ರಕರಣ
ದಿನಾಂಕ 05/05/2018ರಂದು ಶನಿವಾರಸಂತೆ ಬಳಿಯ ದೊಡ್ಡಕುಂದ ನಿವಾಸಿ ತೇಜಕುಮಾರ್ ಎಂಬವರು ಅವರ ಕಾರಿನಲ್ಲಿ ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದ ಬಳಿ ಬಂದಾಗ ಅಲ್ಲಿ ಬೆಂಬಳೂರು ಗ್ರಾಮದ ದಿನೇಶ್, ಸಂತೋಷ್, ಕವನ್, ಕಾರ್ತಿಕ್ ಶಿರಂಗಾಲದ ಶಂಕರ, ಹುಲುಸೆ ಗ್ರಾಮದ ಪರಮೇಶ ಮತ್ತು ಸಕಲೇಶಪುರದ ಉಚ್ಚಂಗಿಯ ಕೃಷಿಕ ಎಂಬವರು ಸೇರಿಕೊಂಡು ತೇಜಕುಮಾರ್‌ರವರ ಮೇಲೆ ಹಳೆ ದ್ವೇಷದಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 25/06/2018ರಂದು ವಿರಾಜಪೇಟೆ ಬಳಿಯ ಬಾಳುಗೋಡು ಗ್ರಾಮದ ಅಂಬಟ್ಟಿ ನಿವಾಸಿ ಎ.ಎ.ಮಾದಪ್ಪ ಎಂಬವರು ಅವರ ಜೀಪಿನಲ್ಲಿ ವಿರಾಜಪೇಟೆಗೆ ಬರುತ್ತಿರುವಾಗ ದಾರಿಯಲ್ಲಿ ಅಮ್ಮತ್ತಿ ನಿವಾಸಿ ಟಿ.ಎ.ಸುದನ್ ಎಂಬವರು ಅವರ ಸ್ನೇಹಿತ ಗಗನ್ ಎಂಬಾತನೊಂದಿಗೆ ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಾದಪ್ಪನವರ ಜೀಪಿಗೆ ಡಿಕ್ಕಿಪಡಿಸಿರುವುದಾಗಿ ಮಾದಪ್ಪನವರು ದೂರು ನೀಡಿದ್ದು ಅದೇ ರೀತಿ ಮಾದಪ್ಪನವರು ಅವರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ಬೈಕಿಗೆ ಡಿಕ್ಕಿಪಡಿಸಿರುವುದಾಗಿ ಟಿ.ಎ.ಸುದನ್ ಸಹಾ ಪ್ರತಿ ದೂರು ನೀಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Monday, June 25, 2018

ವ್ಯಕ್ತಿ ಮೇಲೆ ಹಲ್ಲೆ:
     ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಲೆ ಗ್ರಾಮದ ರಾಜಾಪುರ ನಿವಾಸಿ ಪಿ.ಟಿ. ಬಾಲಕೃಷ್ಣ ಹಾಗು ಅವರ ಅಣ್ಣ ಪೂಣಚ್ಚನವರಿಗೆ ಜಾಗದ ದಾರಿ ವಿಚಾರದಲ್ಲಿ ತಕರಾರಿದ್ದು ಅದು ಬಗೆಹರಿದಿದ್ದು, ದಿನಾಂಕ       24-6-2018 ರಂದು ಆರೋಪಿಗಳಾದ ಶರಣು  ಮತ್ತು ಇತರರು ಸೇರಿ  ಪಿ.ಟಿ. ಬಾಲಕೃಷ್ಣರವರ ಮಗ ಕಾವೇರಪ್ಪ ಕಾಫಿತೋಟದಲ್ಲಿರುವ ಕಾಫಿ ಗಿಡಗಳ ಕೊಂಬೆಯನ್ನು ಮುರಿದ ವಿಚಾರದಲ್ಲಿ ಜಗಳ ಮಾಡುತ್ತಿದ್ದು ಜಗಳ ಬಿಡಿಸಲು ಹೋದ ಪಿ.ಟಿ. ಬಾಲಕೃಷ್ಣರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿರುವುದಾಗಿ ಅಲ್ಲದೆ ಮಗ  ಕಾವೇರಪ್ಪ ಹಾಗು ಪತ್ನಿಯ ಮೇಲೂ ಸಹ ಹಲ್ಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ಹಾರಿ ಆತ್ಮಹತ್ಯೆ:
     ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೋಕು ಬಿರುನಾಣಿ ಗ್ರಾಮದಲ್ಲಿ ನಡೆದಿದೆ.  ಬಿರುನಾಣಿ ಗ್ರಾಮದ ನಿವಾಸಿ ನೆಲ್ಲೀರ ದತ್ತಾತ್ರೇಯ ಎಂಬವರ ಮಗ ನೆಲ್ಲೀರ ಬೋಜು @ ಮೊಣ್ಣಪ್ಪ ಎಂಬವರು ದಿನಾಂಕ 24-6-2018 ರಂದು ನೆಲ್ಲೀರ ಹರೀಶ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನೆಲ್ಲೀರ ದತ್ತಾತ್ರೇಯ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದಿಂದ ವಿಗ್ರಹ ಕಳವು:
     ಕುಟ್ಟ ಠಾಣಾ ವ್ಯಾಪ್ತಿಯಲ್ಲಿರುವ ಕುಟ್ಟ ನಗರದ ಶ್ರೀ ಕೃಷ್ಣ ದೇವಸ್ಥಾನಕ್ಕೆ ದಿನಾಂಕ 23-6-2018ರ ಬೆಳಗ್ಗೆ 6-30 ಗಂಟೆ ಹಾಗು ದಿನಾಂಕ 24-6-2018ರ ಬೆಳಗ್ಗೆ 9-00 ಗಂಟೆ ನಡುವೆ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮೀಟಿ ಬಾಗಿಲಿಗೆ ಹಾಕಿದ ತಾಮ್ರದ ಚಿಲಕವನ್ನು ಮುರಿದು ಸುಮಾರು 20,000 ರೂ ಮೌಲ್ಯದ ಶ್ರೀ ಕೃಷ್ಣ ದೇವರ ವಿಗ್ರಹವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಕೆ.ಕೆ. ತಂಗರಾಜುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ.
     ಮಡಿಕೇರಿ ನಗರದ ಕನ್ನಂಡಬಾಣೆಯಲ್ಲಿ ವಾಸವಾಗಿರುವ ಚಂದ್ರಶೇಖರ @ ಚಂದ್ರ ಎಂಬವರು ಮಡಿಕೇರಿ ನಗರದಲ್ಲಿ ಆಟೋ ರಿಕ್ಷಾವನ್ನು ಇಟ್ಟುಕೊಂಡಿದ್ದು ದಿನಾಂಕ 24-6-2018 ರಂದು ಮಡಿಕೇರಿಯಿಂದ ಮದೆನಡು ಕಡೆಗೆ ತಮ್ಮ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿ ಆಟೋ ರಿಕ್ಷಾ ಜಖಂ ಗೊಂಡು ಚಾಲಕ ಚಂದ್ರಶೇಖರ್ ರವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

Sunday, June 24, 2018

ಅಡಿಕೆ ಕಳವು ಪ್ರಕರಣ
ಕುಶಾಲನಗರ ಬಳಿಯ ಹೆಬ್ಬಾಲೆಯಲ್ಲಿರುವ ಸ್ಟಾರ್ ಅಗ್ರಿವೇರ್ ಹೌಸಿಂಗ್ ಕೊಲ್ಯಾಟರಲ್ ಮ್ಯಾನೇಜ್‌ಮೆಂಟ್ ಕಂಪೆನಿಯ ಉಗ್ರಾಣದಲ್ಲಿರಿಸಿದ್ದ ಸುಮಾರು 19,600 ಕೆ.ಜಿ.ಅಡಿಕೆಯನ್ನು ಮಂಜುನಾಥ್ ಹೆಚ್‌ಟಿ, ಹರೀಶ್, ಶಿವೇಗೌಡ, ಮಣಿಕಂಠ ಮತ್ತು ಅಭಿಷೇಕ್ ಎಂಬವರುಗಳು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 03/06/2018ರಂದು ಕುಶಾಲನಗರ ಬಳಿಯ ಶಿರಂಗಾಲ ನಿವಾಸಿ ಕುಮಾರ ಎಂಬವರು ಶಿರಂಗಾಲ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿಂತಿರುವಾಗ ರೇವಣ್ಣ ಎಂಬಾತನು ಕೊಣನೂರು ಕಡೆಯಿಂದ ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಮಾರರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕುಮಾರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, June 23, 2018

ವ್ಯಕ್ತಿಯ ಆತ್ಮಹತ್ಯೆ 
              ದಿನಾಂಕ 19-05-2018 ರಂದು ವಿರಾಜಪೇಟೆ ತಾಲೂಕಿನ ತೆರಾಲು ಗ್ರಾಮದ ನಿವಾಸಿಯಾದ 63 ವರ್ಷ ಪ್ರಾಯದ ಸುಭಾಷ್ ಎಂಬುವವರು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಹೋದವರು ಕಾಣೆಯಾಗಿದ್ದು, ದಿನಾಂಕ 22-06-2018 ರಂದು ಸುಭಾಷ್ ರವರ ಮೃತ ದೇಹವು ಮರಕ್ಕೆ ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುಭಾಷ್ ರವರಿಗೆ ಖಾಯಿಲೆ ಇದ್ದು ಇದೇ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ತಾರಾಬಾಯಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಜಲಪಾತಕ್ಕೆ ಬಿದ್ದ ವ್ಯಕ್ತಿ ಕಾಣೆ 
          ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಂದರನಗರದ ನಿವಾಸಿಗಳಾದ ಅನಿಲ್ ಕುಮಾರ್, ಅರುಣ, ಮಂಜು, ವಿಜಯ, ಜಾನ್ಸನ್ ಮತ್ತು ಮನೋಜ್ ರವರು  ದಿನಾಂಕ 22-06-2018 ರಂದು ಶಾಂತಳ್ಳಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ಹೋಗಿದ್ದವರು ವಾಪಾಸ್ಸು ಬರುವಾಗ ಮಲ್ಲಳ್ಳಿ ಜಲಪಾತವನ್ನು ನೋಡಲು ಹೋದವರು ಹರಿಯುವ ನೀರಿನಲ್ಲಿ ಫೋಟೋಗಳನ್ನು ತೆಗೆಯುತ್ತಿರುವಾಗ ಮನೋಜ್ ರವರು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, June 22, 2018

ಹಲ್ಲೆ ಪ್ರಕರಣ
ದಿನಾಂಕ 20/06/2018ರಂದು ಮಡಿಕೇರಿ ಬಳಿಯ ಮೇಕೇರಿ ಗ್ರಾಮದ ನವಗ್ರಾಮ ನಿವಾಸಿ ತೇಜಸ್ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ವಿನಯ್, ವಿಜಯ್, ಅರುಣ, ಸಜೇಶ್, ಪಮ್ಮು ಮತ್ತು ಶೀತಲ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಂಶಯಾಸ್ಪದ ವ್ಯಕ್ತಿ ವಶ
ದಿನಾಂಕ 20/06/2018ರಂದು ರಾತ್ರಿ ವೇಳೆ ಸುಂಟಿಕೊಪ್ಪ ಠಾಣೆಯ ಸಿಬ್ಬಂದಿ ಬಿ.ಎಸ್.ದಯಾನಂದ ಎಂಬವರು ನಗರ ಗಸ್ತಿನಲ್ಲಿರುವಾಗ ಸಿದ್ದಾಪುರ ನಿವಾಸಿ ಸತೀಶ ಆರ್ ನಾಯಕ ಎಂಬವನು  ಸುಂಟಿಕೊಪ್ಪ ನಗರದ ಮಾದಾಪುರ ರಸ್ತೆಯ ವಿಜಯಾ ಬ್ಯಾಂಕ್ ಬಳಿ ಸಂಶಯಾಸ್ಪದವಾಗಿ ಸುಳಿದಾಡುತ್ತಿದ್ದು ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣವನ್ನು ನೀಡದೆ ಇದ್ದು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಆತನು ಅಲ್ಲಿ ಇದ್ದಿರಬಹುದೆಂದು ಆತನನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 20/06/2018ರಂದು ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಬಳಪಂಡ ಉತ್ತಪ್ಪ ಎಂಬವರು ವಿರಾಜಪೇಟೆ ಬಳಿಯ ಕಂಡಂಗಾಲ ಬಳಿಯ ಬಳಪಂಡ ಶ್ಯಾಂ ಎಂಬವರ ಮನೆಗೆ ತಿಥಿ ಕರ್ಮಾಂತರ ಕಾರ್ಯಕ್ಕೆ ಬಂದಿದ್ದು ಅಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿರುನಾಣಿ ಗ್ರಾಮದ ಮಲ್ಲೆಯಂಡ ಚಂಗಪ್ಪ ಮತ್ತು ಬಳಪಂಡ ವಿನು ಎಂಬವರು ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿ ಅವಘಢ
ದಿನಾಂಕ 21/06/2018ರಂದು ಅಶ್ವಥ್ ಕುಮಾರ್ ಎಂಬವರು ಒಂದು ಲಾರಿಯಲ್ಲಿ ಬೆಂಗಳೂರಿನಿಂದ ಕರ್ನಾಟಕ ಎಣ್ಣೆ ಬೀಜ ಮಹಾ ಮಂಡಳಿಯ ಪಾಮ್ ಎಣ್ಣೆ ಉತ್ಪಾದನೆಯನ್ನು ಬಂಟ್ವಾಳ, ಮೂಡಬಿದಿರೆ ಮತ್ತು ಬೆಳ್ತಂಗಡಿ ಕಡೆಗೆ ಸಾಗಿಸುತ್ತಿರುವಾಗ ಜೋಡುಪಾಲ ಬಳಿ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ಜಖಂಗೊಂಡಿರುವುದಾಗಿ ನಿಗಮದ ಅಧಿಕಾರಿ ಕಾಳಾಚಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಪಘಾತ
ದಿನಾಂಕ 21/06/2018ರಂದು ನಾಪೋಕ್ಲು ಬಳಿಯ ಯವಕಪಾಡಿ ನಿವಾಸಿ ಜಷ್ಮಿ ಎಂಬವರು ಅವರಿಗೆ ಪರಿಚಯವಿರುವ ರಂಜು ಎಂಬವರ ಬೈಕಿನಲ್ಲಿ ಕಕ್ಕಬೆ ಪಟ್ಟಣದಿಂದ ಯವಕಪಾಡಿಯ ಅವರ ಮನೆಗೆ ಹೋಗುತ್ತಿರುವಾಗ ರಂಜುರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವೈಕೋಲ್ ರಸ್ತೆಯ ಬಳಿ ಬೈಕ್ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ಜಷ್ಮಿ ಹಾಗೂ ರಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, June 21, 2018


ವಂತಿಗೆ ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೇರಿ ಗ್ರಾಮದ ನವಗ್ರಾಮದಲ್ಲಿ ವಾಸವಾಗಿರುವ ಎ.ಆರ್. ತೇಜಸ್ ಎಂಬವರು ದಿನಾಂಕ 20-6-2018 ರಂದು ತಮ್ಮ ಮನೆಯ ಬಳಿ ಇರುವಾಗ್ಗೆ ಅದೇ ಗ್ರಾಮದವರಾದ ವಿನಯ್, ವಿಜಯ್, ಅರುಣ, ಸಜಿತ್, ಪಮ್ಮು ಮತ್ತು ಶೀತಲ್ ಎಂಬವರುಗಳು ಅಲ್ಲಿಗೆ ಬಂದು   ಹಬ್ಬಕ್ಕೆ ವಂತಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಎ.ಆರ್. ತೇಜಸ್ ರವರನ್ನು ಅವಾ಼ಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ವಂತಿಗೆ ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:
     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೇರಿ ಗ್ರಾಮದ ನವಗ್ರಾಮದಲ್ಲಿ ವಾಸವಾಗಿರುವ ಎ.ಆರ್. ತೇಜಸ್ ಎಂಬವರು ದಿನಾಂಕ 20-6-2018 ರಂದು ತಮ್ಮ ಮನೆಯ ಬಳಿ ಇರುವಾಗ್ಗೆ ಅದೇ ಗ್ರಾಮದವರಾದ ವಿನಯ್, ವಿಜಯ್, ಅರುಣ, ಸಜಿತ್, ಪಮ್ಮು ಮತ್ತು ಶೀತಲ್ ಎಂಬವರುಗಳು ಅಲ್ಲಿಗೆ ಬಂದು   ಹಬ್ಬಕ್ಕೆ ವಂತಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಎ.ಆರ್. ತೇಜಸ್ ರವರನ್ನು ಅವಾ಼ಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, June 20, 2018

ಅಪಘಾತ ಪ್ರಕರಣ 
        ದಿನಾಂಕ 18-06-018 ಜಾನ್ ಫಿಂಟೋ ಎಂಬುವವರು ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಚಾಲನೆ ಮಾಡಿಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಜೋಡುಪಾಲ ಬಳಿಯ ಅಬ್ಬಿಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಬಸ್ಸು ಜಖಂಗೊಂಡು ಕಾರಿನ ಚಾಲಕನಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಟೋರಿಕ್ಷಾ ಅಪಘಾತ 
       ದಿನಾಂಕ 19-06-2018 ರಂದು ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದ ಕಂಡಕರೆಯ ನಿವಾಸಿಗಳಾದ ಐಶಾಭಿ, ಫಾತಿಮ, ದೇವಕ್ಕಿ, ತಂಗಮ್ಮ ಮತ್ತು ಯಶೋಧರವರು ಅಭ್ಯಾಲಕ್ಕೆ ಕೆಲಸಕ್ಕೆ ಹೋಗಿದ್ದವರು ವಾಪಾಸ್ಸು ಆಟೋರಿಕ್ಷಾದಲ್ಲಿ ಬರುತ್ತಿರುವಾಗ ಪೊನ್ನತ್ ಮೊಟ್ಟೆ ಎಂಬಲ್ಲಿಗೆ ತಲುಪುವಾಗ ಆಟೋರಿಕ್ಷಾವನ್ನು ಚಾಲಕ ಜಗತ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಆಟೋದಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವಾಹನದ ಮೇಲೆ ಮರ ಬಿದ್ದು ವ್ಯಕ್ತಿಯ ದುರ್ಮರಣ 
           ದಿನಾಂಕ 19-06-2018 ರಂದು ಹುಣಸೂರು ತಾಲೂಕಿನ ಚೆಟ್ಟಳ್ಳಿ ಹಾಡಿಯ ನಿವಾಸಿಗಳಾದ ರಾಮು, ರಾಜು, ಸುನಿಲ್, ಬೋಜ, ಕಾಳಪ್ಪ, ಲೋಕೇಶ್, ಅಣ್ಣಯ್ಯ ಮತ್ತು ಇತರರು ಟಾಟಾ ಏಸ್ ವಾಹನದಲ್ಲಿ ಪಾಲಿಬೆಟ್ಟದ ದುಬಾರೆ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದವರು ಕೆಲಸ ಮುಗಿಸಿ ವಾಪಾಸ್ಸು ಪಾಲಿಬೆಟ್ಟದ ತಿತಿಮತಿ ರಸ್ತೆಯಲ್ಲಿ ಹೋಗುತ್ತಿರುವಾಗ ವಾಹನದ ಮೇಲೆ ರಸ್ತೆಯ ಬದಿಯಲ್ಲಿದ್ದ ಮರ ಬಿದ್ದ ಪರಿಣಾಮ ವಾಹನ ಜಖಂಗೊಂಡು ರಾಜುರವರಿಗೆ ತೀವ್ರ ತರಹದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ; ವ್ಯಕ್ತಿಯ ದುರ್ಮರಣ 
             ದಿನಾಂಕ 18-06-2018 ರಂದು ವಿರಾಜಪೇಟೆ ತಾಲೂಕಿನ ಈಸ್ಟ್ ನೆಮ್ಮಲೆ ಗ್ರಾಮದ ನಿವಾಸಿಯಾದ ಕುಪ್ಪಣಮಾಡ ಗಣೇಶ್ ಎಂಬುವವರು ಪೊನ್ನಂಪೇಟೆಯ ಬಾಲಕಿಯರ ವಸತಿ ನಿಲಯದ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಗಣೇಶರವರ ತಲೆಗೆ ತೀವ್ರ ತರಹದ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಈಜಲು ಹೋಗಿ ವ್ಯಕ್ತಿಯ ಸಾವು 
            ದಿನಾಂಕ 19-06-2018 ರಂದು ವಿರಾಜಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ನಿವಾಸಿಗಳಾದ ಪಣಿಯರವರ ಗಂಗೆಯವರು ಗಂಡ ಸುರೇಶ ಮತ್ತು ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿ ವಾಸವಿರುವ ಮಾವ ಚಮಯರವರಲ್ಲಿಗೆ ಹೋಗಿದ್ದು, ಊಟ ಆದ ನಂತರ ಪಕ್ಕದಲ್ಲಿಯೇ ಇದ್ದ ಕೆರೆಯಲ್ಲಿ ಗಂಗೆಯವರು ಬಟ್ಟೆ ತೊಳೆಯುತ್ತಿರುವಾಗ ಸುರೇಶರವರು ಈಜುತ್ತಾ ಕೆರೆಯ ಮದ್ಯಕ್ಕೆ ಹೋದವರು ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ವ್ಯಕ್ತಿಯ ದುರ್ಮರಣ 
        ದಿನಾಂಕ 18-06-2018 ರಂದು ಸುಂಟಿಕೊಪ್ಪದ ನಾಕೂರು ಶಿರಂಗಾಲ ಗ್ರಾಮದ ನಿವಾಸಿಯಾದ ಆನಂದ ಎಂಬುವವರು ತನ್ನ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಶಾಂತಿಗಿರಿ ಕ್ರಾಸ್ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಆನಂದರವರಿಗೆ ತೀವ್ರ ತರಹದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ದಿನಾಂಕ 19-06-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಮೇಲೆ ಹಲ್ಲೆ 
        ದಿನಾಂಕ 18-06-2018 ರಂದು ಶನಿವಾರಸಂತೆಯ ವಿನಾಯಕ ನಗರದ ನಿವಾಸಿಯಾದ ಲೋಕೇಶರವರು ಶನಿವಾರಸಂತೆಯ ವಿನಾಯಕ ಬಾರ್ ನಲ್ಲಿ ಮನು ಮತ್ತು ಪ್ರದೀಪರವರೊಂದಿಗೆ ಮದ್ಯ ಕುಡಿಯುತ್ತಾ ಇರುವಾಗ ಲೋಕೇಶರವರ ಮನೆಗೆ ಪೇಯಿಂಟ್ ಮಾಡುವ ವಿಚಾರದಲ್ಲಿ ಜಗಳವಾಗಿ ಮನು ಮತ್ತು ಪ್ರದೀಪರವರು ಲೋಕೇಶರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಲೋಕೇಶರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾಲುಜಾರಿ ಬಿದ್ದು ಗಾಯಗೊಂಡ ವ್ಯಕ್ತಿಯ ಮರಣ 
          ಕುಶಾಲನಗರ ನಿವಾಸಿ 70 ವರ್ಷ ಪ್ರಾಯದ ನಾರಾಯಣ ಗೌಡ ಎಂಬುವವರು ಸುಮಾರು 10 ತಿಂಗಳ ಹಿಂದೆ ಕೂಡ್ಲೂರು ಗ್ರಾಮದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 17-06-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

Tuesday, June 19, 2018

ಹಲ್ಲೆ ಪ್ರಕರಣ
ದಿನಾಂಕ 17/06/2018ರಂದು ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಶಿವರಾಂ ಧೋಪೆ ಎಂಬವರು ಸಹ ಸಿಬ್ಬಂದಿ ಗೃಹರಕ್ಷಕ ದಳದ ಚೇತನ್ ಎಂಬವರೊಂದಿಗೆ ರಾತ್ರಿ ಗಸ್ತಿನಲ್ಲಿರುವಾಗ ರಾತ್ರಿ 12:30 ಗಂಟೆಯ ವೇಳೆಗೆ ನಗರದ ಬಸ್‌ ನಿಲ್ದಾಣದ ಬಳಿ ನಿಂತಿದ್ದ ಮೇಕೇರಿ ನಿವಾಸಿ ಆಕಾಶ್, ನಗರದ ದೇಚೂರು ನಿವಾಸಿ ವಿ.ವಿ.ಧನುಷ್ ಮತ್ತು ಮಂಗಳಾದೇವಿನಗರದ ಸುಮನ್ ಎಂಬವರುಗಳನ್ನು ಅವರ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಅವರು ಸಮರ್ಪಕ ಉತ್ತರ ನೀಡದೆ ಶಿವರಾಂ ಧೋಪೆ ಮತ್ತು ಚೇತನ್‌ರವರ ಮೇಲೆ ಹಲ್ಲೆಗೆ ಯತ್ನಿಸಿ ಓಡಲೆತ್ನಿಸಿದ್ದು ಅವರನ್ನು ತಡೆಯಯಲತ್ನಿಸಿದ ಶಿವರಾಂ ಧೋಪೆರವರ ಮೇಲೆ ಆಕಾಶ್‌ನು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
ದಿನಾಂಕ 16/06/2018ರಂದು ಮಡಿಕೇರಿ ಬಳಿಯ ಕಡಗದಾಳು ನಿವಾಸಿ ಸಂಗಮ್ ಸೋಮಣ್ಣೆಂಬವರು ಅವರ ಸ್ನೇಹಿತರಾದ ಚೆಟ್ಟಳ್ಳಿಯ ಸಾವನ್ ಕಾರ್ಯಪ್ಪ ಮತ್ತು ನಂಜರಾಯಪಟ್ನದ ಗೋಕುಲ್ ಎಂಬವರೊಂದಿಗೆ ಗೋಕುಲ್‌ರವರ ಕಾರಿನಲ್ಲಿ ನಂಜರಾಯಪಟ್ನಕ್ಕೆ ಹೋಗುತ್ತಿರುವಾಗ ಕಡಗದಾಳು ಗ್ರಾಮದ ಕ್ಯಾಪಿಟಲ್ ವಿಲೇಜ್‌ ಬಳಿ ಕಾರು ಚಾಲಿಸುತ್ತಿದ್ದ ಸಾವನ್‌ ಕಾರ್ಯಪ್ಪ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿ ಮಗುಚಿಕೊಂಡು ಗೋಕುಲ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
ದಿನಾಂಕ 18/06/2018ರಂದು ನಾಪೋಕ್ಲು ನಿವಾಸಿ ನೌಫಲ್ ಎಂಬವರು ಅವರ ರಿಕ್ಷಾದಲ್ಲಿ ಬೇತ್ರಿಯಿಂದ ಮೂರ್ನಾಡಿಗೆ ಹೋಗುತ್ತಿರುವಾಗ ಎಂ.ಬಾಡಗ ಗ್ರಾಮದ ಬಳಿ ರಸ್ತೆಯಲ್ಲಿ ಎದುರಿನಿಂದ ಒಂದು ಜೀಪನ್ನು ಅದರ ಚಾಲಕ ಲಂಕೇಶ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನೌಫಲ್‌ರವರು ಚಾಲಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾಕ್ಕೆ ಹಾನಿಯುಂಟಾಗಿ ಅದರಲ್ಲಿದ್ದ ಪ್ರಯಾಣಿಕ ಹಮೀದ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
ದಿನಾಂಕ 18/06/2018ರಂದು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಮನಮೋಹನ್ ಎಂಬವರು ಅವರ ಕೊಠಡಿಯಿಂದ ಶಸ್ತ್ರ ಚಿಕಿತ್ಸಾ ಕೊಠಡಿಗೆ ಹೋಗಿದ್ದ ಸಮಯದಲ್ಲಿ ಅವರ ಕೊಠಡಿಯಲ್ಲಿದ್ದ ಕಪ್ಪು ಬಣ್ಣದ ಬ್ಯಾಗಿನಿಂದ ಸುಮಾರು ರೂ.16,000/- ಬೆಲೆ ಬಾಳುವ ಒಂದು ಸ್ಯಾಮ್‌ಸಂಗ್ ಟ್ಯಾಬ್ ಮತ್ತು ಇತರೆ ಪರಿಕರ ಹಾಗೂ ದಾಖಲೆಗಳನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 17/06/2018ರಂದು ಕುಶಲನಗರ ಬಳಿಯ ಕೂಡ್ಲೂರು ನಿವಾಸಿ ಸುನಿಲ್ ಎಂಬವರು ಅವರ ಸ್ನೇಹಿತ ರೆಹಮಾನ್ ಎಂಬವರೊಂದಿಗೆ ಕೂಡ್ಲೂರಿನ ಹಲಗಪ್ಪನವರ ಅಂಗಡಿ ಮಳಿಗೆಯ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಬಸವನತ್ತೂರಿನ ಬಸಪ್ಪ ಎಂಬವರು ಹಿಂದಿನಿಂದ ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರೆಹಮಾನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ರೆಹಮಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪಘಾತ ಪ್ರಕರಣ
ದಿನಾಂಕ 18/06/2018ರಂದು ಕೇರಳದ ಕಾಸರಗೋಡಿನ ಬದಿಯಡ್ಕ ನಿವಾಸಿ ಅಬ್ದುಲ್ ಹಮೀದ್ ಎಂಬವರು ಅವರ ಮಗ ಜುನೈದ್ ಮತ್ತು ತಮ್ಮ ಉಮ್ಮರ್‌ರವರೊಂದಿಗೆ ಅವರ ಕಾರಿನಲ್ಲಿ ಮಗ ಜುನೈದ್‌ರವರ ಚಾಲನೆಯಲ್ಲಿ ಸೋಮವಾರಪೇಟೆಯಿಂದ ಹಾರಂಗಿ ಜಲಾಶಯಕ್ಕೆ ಹೋಗುತ್ತಿರುವಾಗ ಕೋವರ್‌ಕೊಲ್ಲಿ ತೋಟದ ಬಳಿ ಎದುರಿನಿಂದ ಮಂಡ್ಯದ ಬಿ.ಎಸ್.ಉಲ್ಲಾಸ್ ಎಂಬಾತನು ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜುನೈದ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅಬ್ದುಲ್ ಹಮೀದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, June 18, 2018

ಅಕ್ರಮ ಪ್ರವೇಶ:
     ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಕೆ.ಕೆ. ಮಂಜುನಾಥ್ ಎಂಬವರ ನಿವೇಶನದ ಜಾಗಕ್ಕೆ ದಿನಾಂಕ 17-6-2018 ರಂದು ಆರೋಪಿಗಳಾದ ಹಂಚಪ್ಪ, ಸಂತೋಷ, ನಾಗಮ್ಮ, ಧರ್ಮ ಹಾಗು ಮರೀಗೌಡ ಎಂಬವರುಗಳು ಅಕ್ರಮ ಪ್ರವೇಶ ಮಾಡಿ ಹೋಳ ಕೃಷಿಯನ್ನು ನಾಶಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ವ್ಯಕ್ತಿ ಮೃತ ದೇಹ ಪತ್ತೆ:
     ಕುಶಾಲನಗರ ಜನತಾ ಕಾಲೋನಿಯಲ್ಲಿ ವಾಸವಾಗಿದ್ದುಕೊಂಡು ಆಟೋ ರಿಕ್ಷಾವನ್ನು ಇಟ್ಟು ಜೀವನ ಸಾಗಿಸುತ್ತಿದ್ದ ಹೆಚ್.ಸಿ. ರಾಮು ಎಂಬ ವ್ಯಕ್ತಿ 10-6-2018 ರಿಂದ ಕಾಣೆಯಾಗಿದ್ದು ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ದಿನಾಂಕ 17-6-2018 ರಂದು ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಸದರಿಯವರ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
    ಗೋಣಿಕೊಪ್ಪ ಠಾಣಾ ಸರಹದ್ದಿನ ಭಾಸ್ಕರ್ ಟಯರ್ ಶಾಫ್ ಮುಂಭಾಗ  ದಿನಾಂಕ 17-6-2018 ರಂದು ಒಬ್ಬ ಅಪರಿಚಿತ ಗಂಡಸಿನ ಅಂದಾಜು 55-60 ವರ್ಷ ಪ್ರಾಯದ ಮೃತದೇಹ ಪತ್ತೆಯಾಗಿದ್ದು, ವಿ ಭಾಸ್ಕರ್, ಅರುವತ್ತೋಕ್ಲು ಗ್ರಾಮ ಇವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಾಗಕ್ಕೆ ಅಕ್ರಮ ಪ್ರವೇಶ, ಕಾಫಿ ಕಳ್ಳತನ:
     ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ  ದುಬಾರಿ ಎಸ್ಟೇಟ್ ಇದ್ದು ಸದರಿ ತೋಟಕ್ಕೆ 2016-17 ಮತ್ತು 2017-18 ಸಾಲಿನಲ್ಲಿ ಚೆಟ್ಟಿನಾಡ್ ಪ್ಲಾಂಟೇಶನ್ ಪ್ರೈ.ಲಿ. ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಅಕ್ರಮ ಪ್ರವೇಶ ಮಾಡಿ ಕಾಫಿಯನ್ನು ಕಳ್ಳತನ ಮಾಡಿ ಮಾರಾಟ ಮಾಡಿರುತ್ತಾರೆಂದು ನೀಡಿದ ದೂರಿನಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Sunday, June 17, 2018

ಗುಂಡು ಹಾರಿಸಿಕೊಂಡು ವ್ಯಕ್ತಿಯ ಆತ್ಮಹತ್ಯೆ 
        ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದಲ್ಲಿ ವರದಿಯಾಗಿದೆ. ಕುಕ್ಲೂರು ಗ್ರಾಮದ ನಿವಾಸಿಯಾದ ಕರುಂಬಯ್ಯನವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-06-2018 ರಂದು ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ತಾಯಿ ಲೀನಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಪಘಾತ ಪ್ರಕರಣ 
       ದಿನಾಂಕ 15-06-2018 ರಂದು ಕುಶಾಲನಗರ ಮುಳ್ಳುಸೋಗೆಯ ನಿವಾಸಿಯಾದ ದರ್ಶನ್ ಎಂಬುವವರು ಹೆಬ್ಬಾಲೆಯಿಂದ ಕೂಡಿಗೆಯ ಕಡೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಟಾಟಾ ಮ್ಯಾಕ್ಷಿಮಾ ವಾಹನವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ದರ್ಶನ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವಂಚನೆ ಪ್ರಕರಣ 
          ಮಡಿಕೇರಿ ನಗರದಲ್ಲಿರುವ ಕೊಡಗು ಮೀಟಿಯಾ ಸರ್ವಿಸಸ್ ಎಂಬ ಕೇಬಲ್ ನೆಟ್ ವರ್ಕ್ ಸಂಸ್ಥೆಯಲ್ಲಿ ಸೀನಿಯರ್ ಟೆಕ್ನಿಕಲ್ ಎಕ್ಷಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುವ ಸುನಿಲ್ ರಾಜ್ ಎಂಬುವವರು ಮಾಲಿಕರಿಗೆ ಗೊತ್ತಾಗದಂತೆ ಕೇಬಲ್ ಗೆ ಸಂಬಂದಿಸಿದ ವಸ್ತುಗಳನ್ನು ಕಳವು ಮಾಡಿ ಬೇರೆ ಕೇಬಲ್ ನೆಟ್ ವರ್ಕ್ ನವರಿಗೆ ಮಾರಾಟ ಮಾಡಿ ಸುಮಾರು 7 ಲಕ್ಷ ರೂಗಳಷ್ಟು ಮೋಸ ಮಾಡಿರುವುದಾಗಿ ಮಾಲಿಕರಾದ ಪೂವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
         ದಿನಾಂಕ 16-06-2018 ರಂದು ಕುಶಾಲನಗರದ ಕೂಡುಮಂಗಳೂರು ಗ್ರಾಮದ ನಿವಾಸಿಯಾದ ಸೋಮಶೇಖರ್ ಎಂಬುವವರು ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕೂಡಿಗೆ ಕಡೆಯಿಂದ ಮಾರುತಿ ಕಾರನ್ನು ಚಾಲಕ ದಿಲೀಪ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸೋಮಶೇಖರ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

Saturday, June 16, 2018

ರಸ್ತೆ ಅಪಘಾತ
                   ದಿನಾಂಕ 14/06/2018ರಂದು ಪಾಲಿಬೆಟ್ಟ ಬಳಿಯ ಊರುಗುಪ್ಪೆ ನಿವಾಸಿ ಸಾಹುಲ್ ಎಂಬ ಬಾಲಕನು ಅಂಗಡಿಯಿಂದ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗುತ್ತಿರುವಾಗ ಎದುರಿನಿಂದ ಒಂದು ಮೋಟಾರು ಬೈಕನ್ನು ಅದರ ಸವಾರ ಜಷೀರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಾಲಕ ಸಾಹುಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಆತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿಗೆ ಬಿದ್ದು ಇಬ್ಬರ ಸಾವು
                 ದಿನಾಂಕ 15/06/2018ರಂದು ವಿರಾಜಪೇಟೆ ಬಳಿಯ ಹೊಸಕೋಟೆ ನಿವಾಸಿಗಳಾದ ಮಹೇಶ್‌ ಮತ್ತು ಅಣ್ಣು ಎಂಬವರು ಅವರ ತೋಟದ ಮಾಲೀಕರ ಕೆರೆಯಲ್ಲಿ ದೋಣಿಯಲ್ಲಿ ಹೋಗುತ್ತಿರುವಾಗ ಕೆರೆಯಲ್ಲಿ ಆಕಸ್ಮಿಕವಾಗಿ ದೋಣಿ ಮಗುಚಿಕೊಂಡು ಮಹೇಶ್‌ ಮತ್ತು ಅಣ್ಣು ಇಬ್ಬರೂ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                ದಿನಾಂಕ 15/06/2018ರಂದು ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಪ್ಯಾಟ್ರಿಕ್ ರಿಚರ್ಡ್‌ ಎಂಬವರ ಭಾವ ಅಂತೋಣಿ ಜೇಮ್ಸ್ ಎಂಬವರು  ಹುದಿಕೇರಿಯಿಂದ ಪೊನ್ನಂಪೇಟೆ ಕಡೆಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಕಲ್ಲುಕೋರೆ ರಸ್ತೆಯ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಂತೋಣಿ ಜೇಮ್ಸ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅಂತೋಣಿ ಜೇಮ್ಸ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
               ದಿನಾಂಕ 14/06/2018ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಟಿ.ಎನ್.ರಮೇಶ್ ಎಂಬವರ ತಂದೆ ಕೈಕೇರಿಯಲ್ಲಿರುವ ಅವರ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಬಂದಿದ್ದು ಮಾರನೆ ದಿನ ಅಂಗಡಿಗೆ ಹೋಗಿ ನೋಡುವಾಗ ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿಯ ಶೀಟನ್ನು ತೆಗೆದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ರೂ.7,000/- ನಗದು ಹಾಗೂ ರೂ.550/- ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, June 14, 2018

ಮನುಷ್ಯ ಕಾಣೆ:
     ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ನಿವಾಸಿ ಆರ್. ಮಹೇಶ ಎಂಬವರ ತಂದೆ 64 ವರ್ಷ ಪ್ರಾಯದ ಹೆಚ್.ಸಿ. ರಾಮು ಎಂಬವರು ದಿನಾಂಕ 10-6-2018 ರಂದು 2-30 ಪಿ.ಎಂ. ಗೆ ಮನೆಯಿಂದ ಹೊರಗಡೆ ಹೋಗಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಆರ್. ಮಹೇಶ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:
     ಕೂಡಿಗೆ ಗ್ರಾಮದ ನಿವಾಸಿ ಕೆ.ಸಿ. ಮಂಜುನಾಥ ಎಂಬವರು ದಿನಾಂಕ 13-6-2018 ರಂದು ಸಂಜೆ 7-20 ಗಂಟೆಗೆ  ತಮ್ಮ ಬಾಪ್ತು ಲಾರಿಯಲ್ಲಿ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಕುಶಾಲನಗರದ ಸಮೀಪದ ಬಸವನಳ್ಳಿ ಗ್ರಾಮದ ಆನೇಕಾಡು ಎಂಬಲ್ಲಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದ್ದುಮ ಸದರಿ ಕಾರಿನಲ್ಲಿದ್ದ  ಮಹಳೆಯೊಬ್ಬರಿಗೆ  ಗಾಯಗಳಾಗಿದ್ದು ಆಕೆಯನ್ನು ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ ಪಾದಚಾರಿ ಸಾವು:
     ಸುಳ್ಯದ ನಿವಾಸಿ ಬಾಬು ಎಂಬವರು ದಿನಾಂಕ 12-6-2018 ರಂದು  8-45 ಪಿ.ಎಂ.ಗೆ ಮಡಿಕೇರಿ ಸಮೀಪಕ ಕಾಟಕೇರಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಸದರಿ ಬಾಬುರವರಿಗೆ ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿದ್ದು ಪರಿಣಾಮ ಬಾಬುರವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿ ಬಾಬುರವರು ದಿನಾಂಕ 13-6-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬ್ಯಾಟರಿ ಕಳವು:
    ಮಡಿಕೇರಿ ತಾಲೋಕು ಮದೆನಾಡು ಗ್ರಾಮದಲ್ಲಿ ಅಳವಡಿಸಿದ ಬಿ.ಎಸ್‍.ಎನ್‍.ಎಲ್. ಟವರ್ ಅಳವಡಿಸಿದ ಸುಮಾರು 24,000 ರೂ. ಬೆಲೆಬಾಳುವ ಬ್ಯಾಟರಿಗಳನ್ನು ದಿನಾಂಕ 12-6-2018 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಬಿ.ಎಸ್‍.ಎನ್‍.ಎಲ್. ಸಬ್ ಡಿವಿಷನಲ್ ಇಂಜಿನಿಯರ್ ಶ್ರೀಮತಿ ಕೆ.ಸೀತೆ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು:
     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದ ನಿವಾಸಿ  ವೈ.ಎ. ಆಶಿಕ್ ಎಂಬವರ ತಾಯಿ ಕಾವೇರಿ ಎಂಬವರಿಗೆ ದಿನಾಂಕ 6-6-2018 ರಂದು ಬೆಳಗ್ಗೆ ಒಲೆಗೆ ಬೆಂಕಿ ಉರಿಸುವಾಗ ಆಕಸ್ಮಿಕವಾಗಿ ಅವರ ಮೈಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಿನಾಂಕ 12-6-2019 ರಂದು ಚಿಕಿತ್ಸೆ ಫಲಕಾರಿಯಾಗದೆ ಸದರಿ ಮಹಿಳೆ ಕಾವೇರಿಯವರು ಮೃತಪಟ್ಟಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೀರಿನಲ್ಲಿ ಬಿದ್ದು ವ್ಯಕ್ತಿ ದುರ್ಮರಣ:
    ಕೇರಳ ರಾಜ್ಯದ ಇರಿಟಿ ನಿವಾಸಿ ಜೋಬಿಸೈಮನ್ ರವರು ದಿನಾಂಕ 12-6-2018 ರಂದು ಶರತ್ ಕುಮಾರ್ ಎಂಬವರೊಂದಿಗೆ ಲಾರಿಯಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಕೇರಳದ ಇರಟಿಯಿಂದ ವಿರಾಜಪೇಟೆಗೆ ತಂದು ಇರಟಿಗೆ ಲಾರಿಯಲ್ಲಿ ಮರಳುತ್ತಿದ್ದಾಗ ರಾತ್ರಿ 8-15 ಗಂಟೆಗೆ  ವಿರಾಜಪೇಟೆ – ಮಾಕುಟ್ಟ ಮಾರ್ಗವಾಗಿ ಇರಟಿಗೆ ಹೋಗುತ್ತಿದ್ದಾಗ ರಾತ್ರಿ 9-00 ಗಂಟೆ ಸಮಯದಲ್ಲಿ ಹನುಮಾನ್ ದೇವಸ್ಥಾನದ ಬಳಿ ತಿರುವಿನಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆಯಲ್ಲಿ ಮರ ಬಿದ್ದಿದ್ದು ಅದನ್ನು ಸದರಿ ಜೋಬಿಸೈಮನ್ ಹಾಗು ಶರತ್ ಕುಮಾರ್ ರವರು ತೆರವುಗೊಳಿಸುತ್ತಿದ್ದಾಗ  ಒಮ್ಮೆಲೆ ರಸ್ತೆಬದಿಯ ಬರೆಯಿಂದ ಮಣ್ಣು ಕುಸಿದ ಪರಿಣಾಮ ಶರತ್ ಕುಮಾರ್ ರಸ್ತೆಬದಿಯ ಗುಂಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Wednesday, June 13, 2018

ವಾಹನ ಅಪಘಾತ 
         ದಿನಾಂಕ 12-06-2018 ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ನಿವಾಸಿಯಾದ ಸಂಜಯ್ ಎಂಬುವವರು ಸಂಸಾರದೊಂದಿಗೆ ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿಯ ಇಬ್ನಿ ರೆಸಾರ್ಟ್ ನ ಬಳಿ ತಲುಪುವಾಗ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಚಾಲಕ ರವೀಂದ್ರ ರೆಡ್ಡಿ ಎಂಬುವವರು ತಿರುವು ರಸ್ತೆಯಲ್ಲಿ ಅಜಾಗರೂಕತೆಯಿಂಧ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಪೇರೂರು ಗ್ರಾಮದಲ್ಲಿ ವರದಿಯಾಗಿದೆ. ಪೇರೂರು ಗ್ರಾಮದ ನಿವಾಸಿಯಾದ ಮಂದಣ್ಣ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 12-06-2018 ರಂದು ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಯದು ಕುಮಾರ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ 
           ಬೈಕಿಗೆ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಗೋಣಿಕೊಪ್ಪಲುವಿನ ಸೀಗೆತೋಡು ಎಂಬಲ್ಲಿ ವರದಿಯಾಗಿದೆ. ದಿನಾಂಕ 12-06-2018 ರಂದು ದೇವರಪುರ ಗ್ರಾಮದ ನಿವಾಸಿಯಾದ ಪೂಣಚ್ಚ ಎಂಬುವವರು ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಸೀಗೆತೋಡು ಎಂಬಲ್ಲಿಗೆ ತಲುಪುವಾಗ ಎದುರುಡೆಯಿಂಧ ಪಿಕ್ ಅಪ್ ಜೀಪನ್ನು ಚಾಲಕ ಹರೀಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಬೈಕಿಗೆ ಡಿಕ್ಕಿಪಡಿಸಿದ್ದು, ಪೂಣಚ್ಚನವರ ಕಾಲುಗಳಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. 
ಕೊಲೆ ಪ್ರಕರಣ 
         ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ವರದಿಯಾಗಿದೆ. ಚೆನ್ನಾಪುರ ಗ್ರಾಮದ ನಿವಾಸಿಯಾದ ಶಶಿಧರ ಎಂಬುವವರು ದಿನಾಂಕ 12-06-2018 ರಂದು ತನ್ನ ತಂಧೆಯಾದ ಬಸಪ್ಪನವರೊಂದಿಗೆ ಮದ್ಯಪಾನ ಮಾಡಲು ಹಣ ಕೇಳಿದಾಗ ಜಗಳವಾಗಿ ಶಶಿಧರನು ಕತ್ತಿಯಿಂದ ತಂದೆಯ ಕಾಲಿಗೆ ಕಡಿದು ತೀವ್ರ ತರಹದ ಗಾಯವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಮೇಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ. 
ಬೈಕಿಗೆ ಜೀಪು ಡಿಕ್ಕಿ 
           ಬೈಕಿಗೆ ಜೀಪು ಡಿಕ್ಕಿಯಾಗಿ ಬೈಕು ಚಾಲಕ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಬೈಚನಹಳ್ಳಿಯ ನಿವಾಸಿಯಾದ ಉದಯ ಎಂಬುವವರು ದಿನಾಂಕ 12-06-2018 ರಂದು ಬೈಕಿನಲ್ಲಿ ಕುಶಾಲನಗರದಲ್ಲಿರುವ ರೈತ ಭವನದ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಬೊಲೆರೋ ಜೀಪನ್ನು ಚಾಲಕ ಬೈಚನಹಳ್ಳಿಯ ನಿವಾಸಿ ಬಷೀರ್ ಎಂಬುವವರು ಅಜಾಗರೂಕತೆಯಿಂಧ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಉದಯವರ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, June 12, 2018


ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:

     ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ.  ಹಚ್ಚಿನಾಡು ಗ್ರಾಮದ ನಿವಾಸಿ ಚಿಟ್ಟಿಚ್ಚ ಎಂಬವರ ಪತ್ನಿ ಶ್ರೀಮತಿ ಸಿ.ರೂಪ ಎಂಬವರು ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದು, ದಿನಾಂಕ 10-6-2018 ರ ರಾತ್ರಿ ಅವರ ಮನೆಯ ಪಕ್ಕದ ತಿಮ್ಮಯ್ಯ ಎಂಬವರ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ತಾಯಿ ಚೊಟ್ಟೆಕಾಳಪಂಡ ಎಂ. ಅಕ್ಕಮ್ಮ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಎಸ್. ಮುರಳಿ ಎಂಬವರು ದಿನಾಂಕ 9-6-2018 ರಂದು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಸಂಜೆ 7-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ನುಗ್ಗಿ ನಗದು ಮತ್ತು ಅಡಿಕೆ ಕಳವು:

     ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕರಿಕೆ ಕಟ್ಟಡದಲ್ಲಿ ವ್ಯಾಪಾರ ಮಾಡಿಕೊಂಡಿರುವ ಅಹಮದ್ ನೂರಿಶ್ ರವರ ಅಂಗಡಿಗೆ ದಿನಾಂಕ 10-6-2018 ರಂದು ರಾತ್ರಿ ಯಾರೋ ಕಳ್ಳರು ಬೀಗ ಮುರಿದು ಒಳ ನುಗ್ಗಿ ಅಂಗಡಿಯಲ್ಲಿಟ್ಟದ್ದ ಅಂದಾಜು 36,000 ರೂ ಬೆಲೆಬಾಳುವ ಅಡಿಕೆ ಮತ್ತು 10,000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕೊಲೆ:

    ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದಲ್ಲಿರುವ ಪರ್ಪಲ್ ಫಾರ್ಮ‍್ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿರುವ ಕೆಲಸಗಾರರಿಗೆ ಸದರಿ ರೆಸಾರ್ಟಿನ ಪಕ್ಕದಲ್ಲಿ ಇರುವ ರಾಜೀವ ಎಂಬವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಸದರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 27 ವರ್ಷ ಪ್ರಾಯದ ಚೆನ್ನಾಪ್ಪಾಜಿ ಎಂಬ ವ್ಯಕ್ತಿಯನ್ನು ದಿನಾಂಕ 11-6-2018 ರಂದು ರಾತ್ರಿ ಯಾರೋ ಕೊಲೆ ಮಾಡಿದ್ದು, ಈ ಕೊಲೆಯನ್ನು ಅದೇ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ನಾಗರಾಜು ಎಂಬವನು ಮಾಡಿರುವ ಸಂಶಯವಿರುವುದಾಗಿ  ಸದರಿ ರೆಸಾರ್ಟಿನ ಹೆ.ಆರ್. ಮೆನೇಜರ್ ಆಗಿರುವ ಕೆ.ದೇವಾನಂದನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Monday, June 11, 2018

ವಂಚನೆ ಪ್ರಕರಣ
              ಚೇರಂಬಾಣೆ ಬಳಿಯ ಬೇಂಗೂರು ನಿವಾಸಿ ಕೆ.ಪಿ.ಬಾಪೂಜಿ ಎಂಬವರಿಗೆ ಅವರ ಜಾಗದ ದಾಖಲಾತಿಗಳನ್ನು ಮಾಡಿಕೊಡುವುದಾಗಿ ಬೇಂಗೂರಿನ ನಿವಾಸಿ  ಕಂದಾಯ ಇಲಾಖೆಯ ತಾತ್ಕಾಲಿಕ ನೌಕರ ಹೆಚ್‌.ಕೆ.ಗಣೇಶ ಎಂಬಾತನು ನಂಬಿಸಿ ಹಣ ಪಡೆದುಕೊಂಡು ಬಾಪೂಜಿರವರಿಗೆ ಮೋಸಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
             ದಿನಾಂಕ 09/06/2018ರಂದು ಮಡಿಕೇರಿ ನಗರದ ಕುಂದುರುಮೊಟ್ಟೆ ದೇವಾಲಯದ ನಿವಾಸಿ ಚಾಮಿ ಎಂಬವರು ಸುಳ್ಯದಿಂದ ಬರುತ್ತಿರುವಾಗ ಮಡಿಕೇರಿ ನಗರದ ನಿವಾಸಿ ಪವನ್ ಎಂಬಾತನು ಚಾಮಿಯವರನ್ನು ಓಂಕಾರೇಶ್ವರ ದೇವಸ್ಥಾನದ ಬಳಿ ಬರುವಂತೆ ತಿಳಿಸಿ ಅಲ್ಲಿಗೆ ಹೋದ ಚಾಮಿಯವರಿಗೆ ರವಿ ಎಂಬವರಿಂದ ಹಣ ಪಡೆದಿರುವ ಬಗ್ಗೆ ಜಗಳವಾಡಿ ಇಬ್ಬರೂ ಸೇರಿ ಚಾಮಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಅಸ್ವಾಭಾವಿಕ ಸಾವು
                  ಮಡಿಕೇರಿ ನಗರದ ಬ್ರಾಹ್ಮಣರ ಬೀದಿಯ ಬಳಿಯ ಪಾಳು ಮನೆಯೊಂದರ ಮುಂಭಾಗದ ಕೋಣೆಯಲ್ಲಿ ನಗರದ ಪುಟಾಣಿ ನಗರ ನಿವಾಸಿ ಧರ್ಮರಾಜು ಎಂಬವರು ಅಸ್ವಾಭಾವಿಕವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಬೆದರಿಕೆ ಪ್ರಕರಣ
                  ದಿನಾಂಕ 08/06/2018ರಂದು ಮಾದಾಪುರ ಬಳಿಯ ಇಗ್ಗೋಡ್ಲು ನಿವಾಸಿ ಪೂವಯ್ಯ ಎಂಬವರ ತೋಟಕ್ಕೆ ಅವರ ಅಣ್ಣ ರಾಮಪ್ಪನವರು ಅಕ್ರಮವಾಗಿ ಪ್ರವೇಶಿಸಿ ಸಿಮೆಂಟ್ ಕಂಬ ಮತ್ತು ತಂತಿ ಬೇಲಿಯನ್ನು ತುಂಡರಿಸಿ ನಷ್ಟಪಡಿಸಿದ ಬಗ್ಗೆ ದಿನಾಂಕ 09/06/2018ರಂದು ಪೂವಯ್ಯನವರು ರಾಮಪ್ಪನವರನ್ನು ಕೇಳಿದಾಗ ರಾಮಪ್ಪನವರು ಪೂವಯ್ಯನವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                    ದಿನಾಂಕ 09/06/2018ರಂದು ಸಂಜೆ ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ನಿವಾಸಿ ಸಿ.ಎಂ.ಮುಸ್ತಫಾ ಎಂಬವರು ಸಂಜೆ ವೇಳೆ ಅವರ ಅಕ್ಕನ ಮನೆಗೆ ಕುಟುಂಬ ಸಮೇತ ಹೋಗಿ ಮಾರನೆ ದಿನ 10/06/2018ರಂದು ಮುಸ್ತಫಾರವರು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಅವರ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ನಗದು ರೂ.22,000/- ಸೇರಿದಂತೆ ಒಟ್ಟು ರೂ.65,000/- ಬೆಲೆಯ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಡಿಕ್ಕಿ; ಹಸುಗಳ ಸಾವು
                 ದಿನಾಂಕ 10/06/2018ರಂದು ತಿತಿಮತಿ ಬಳಿಯ ಮಜ್ಜಿಗೆ ಹಳ್ಳ ಫಾರಂ ನಿವಾಸಿ ಮಹೇಶ್‌ ಎಂಬವರ ಜಾನುವಾರುಗಳನ್ನು ಜೋಗಿ ಎಂಬವರು ಆನೆಚೌಕೂರು ಗೇಟಿಗೆ ಹೋಗುವ ರಸ್ತೆಯಲ್ಲಿ ಮೇಯಿಸಿಕೊಂಡಿರುವಾಗ ತಿತಿಮತಿ ಕಡೆಯಿಂದ ಕೆಎ-12-ಜೆಡ್-4184ರ ಕಾರನ್ನು ಅದರ ಚಾಲಕ ಗ್ಲೇನ್ ಸೋಮಣ್ಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಾನುವಾರುಗಳಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡು ಹಸುಗಳು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, June 10, 2018

ಮರ ಬಿದ್ದು ವ್ಯಕ್ತಿಯ ಸಾವು 
            ವ್ಯಕ್ತಿಯ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ. ಸಿದ್ದಾಪುರದ ನಿವಾಸಿ ಅಹಮ್ಮದ್ ಕುಟ್ಟಿ ಹಾಜಿ ಎಂಬುವವರು ದಿನಾಂಕ 09-06-2018 ರಂದು ನೆಲ್ಲಿಹುದಿಕೇರಿಯಲ್ಲಿರುವ ತಮ್ಮ ತೋಟಕ್ಕೆ ಹೋಗಿದ್ದಾಗ ಮಳೆಗಾಳಿ ಜಾಸ್ತಿ ಇದ್ದ ಕಾರಣ ತಲೆಯ ಮೇಲೆ ಮರ ಬಿದ್ದು ಗಾಯಗೊಂಡವರು ಮೃತಪಟ್ಟಿದ್ದು ಈ ಬಗ್ಗೆ ಮಗ ಅಶ್ರಫ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
           ದಿನಾಂಕ 09-06-2018 ರಂದು ಶಶಿಕುಮಾರ್ ಮತ್ತು ಶಿವಕುಮಾರ್ ರವರು ಎಂಬುವವರು ಮಡಿಕೇರಿ ನಗರದ ಮೈತ್ರಿ ಜಂಕ್ಷನ್ ಹತ್ತಿರ ಗಾಳಿಬೀಡು ರಸ್ತೆಯಲ್ಲಿ ನಿಂತಿರುವಾಗ ದೀಪು, ಶಿರಾಜ್ ಮತ್ತು ಕಿರಣ್ ರವರು ಕಾರನ್ನು ಮಾರಾಟ ಮಾಡಿದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಶಶಿಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
           ದಿನಾಂಕ 09-06-2018 ರಂದು ಕುಶಾಲನಗರ ನಿವಾಸಿ ಸಾಜನ್ ಅಹಮ್ಮದ್ ರವರು ಸ್ನೇಹಿತ ಜಮಾಲ್ ರವರೊಂದಿಗೆ ಕಾರಿನಲ್ಲಿ ಕುಶಾಲನಗರ ಪಟ್ಟಣದ ಕೋಣ ಮಾರಿಯಮ್ಮ ದೇವಸ್ಥಾನದ ಪಕ್ಕ ಹೋಗುತ್ತಿರುವಾಗ ಎದುರುಗಡೆಯಿಂದ ಜಿತೇಂದ್ರ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿ ಕಾಣೆ 
                ದಿನಾಂಕ 29-05-2018 ರಂದು ಕುಶಾಲನಗರ ನಿವಾಸಿ ತಾರಾಬಾಯಿಯವರ ಪತಿ 63 ವರ್ಷ ಪ್ರಾಯದ ಸುಭಾಷ್ ಎಂಬುವವರು ವಿರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿರುವ ತಮ್ಮ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿ ತಾರಾಬಾಯಿಯವರು ದಿನಾಂಕ 09-06-2018 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, June 9, 2018

ಮನುಷ್ಯ ಕಾಣೆ:
     ಮಡಿಕೇರಿ ನಗರದ ಮಂಗಳಾದೇವಿ ನಗರ ನಿವಾಸಿ ನೆಣವತ್ ಲೋಕೇಶ್ ನಾಯ್ಕ ಎಂಬವರು ಮಡಿಕೇರಿ ಕೆ.ಎಸ್‍.ಆರ್.ಟಿ.ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 15-5-2018 ರಂದು ತನ್ನ ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ಬಂಡೆಬಸಪುರ ಗ್ರಾಮಕ್ಕೆ ಹೋಗಿ ಬಂದು ನಂತರ ಕರ್ತವ್ಯಕ್ಕೂ ಹೋಗದೆ ಕಾಣೆಯಾಗಿರುತ್ತಾರೆಂದು ಕಾಣೆಯಾದ ವ್ಯಕ್ತಿಯ ಅಣ್ಣ ಗೋವಿಂದ ನಾಯ್ಕರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.
ದಾರಿ ದೀಪದ ಸೋಲಾರ್ ಪ್ಯಾನಲ್ ಮತ್ತು ಬ್ಯಾಟರಿ ಕಳವು:
     ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ತಾವೂರು ಗ್ರಾಮದ ಕಾವೇರಿ ಕಾಲೇಜು ಬಳಿ ಅಳವಡಿಸಿದ ಸುಮಾರು 40,000 ರೂ. ಮೌಲ್ಯದ ಸೋಲಾರ್ ಬೀದಿ ದೀಪದ ಪ್ಯಾನಲ್ ಬೋರ್ಡ್ ನ್ನು ಮತ್ತು ಅದರ ಬ್ಯಾಟರಿಯನ್ನು ದಿನಾಂಕ 6-6-2018ರ ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಭಾಗಮಂಡಲ ಪಾಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಲಾರಿ ಡಿಕ್ಕಿ:
     ಮಡಿಕೇರಿ ತಾಲೋಕು ಬೇಂಗೂರು ಗ್ರಾಮದ ನಿವಾಸಿ ಮೇದಪ್ಪ ಎಂಬವರು ದಿನಾಂಕ 8-6-2018 ರಂದು ತಮ್ಮ ಬಾಪ್ತು ಕಾರಿನಲ್ಲಿ ಮಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಮದೆನಾಡು ಗ್ರಾಮದ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಫಿರ್ಯಾದಿ ಮೇದಪ್ಪನವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮೇದಪ್ಪನವರ ಮಗಳಾದ ಸಾಕ್ಷ್ಯಳಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ.
     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಶೇಖರ ಎನ್.ಎ ಎಂಬವರು ದಿನಾಂಕ 8-6-2018 ರಂದು ತನ್ನ ಪತ್ನಿಯೊಂದಿಗೆ ನಾಗೇಶ್ ಎಂಬವರ ಆಟೋ ರಿಕ್ಷಾದಲ್ಲಿ ಮಕ್ಕಂದೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಮಕ್ಕಂದೂರು ಗ್ರಾಮದ ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ಟೋಯೋಟಾ ಇಟಿಯಾಸ್ ಕಾರು ಆಟೋರಿಕ್ಷಾಕ್ಕೆ ಡಿಕ್ಕಿಯಾಗ ಪರಿಣಾಮ ಸದರಿ ಆಟೋ ರಿಕ್ಷಾ ರಸ್ತೆ ಮೇಲೆ ಮಗುಚಿಬಿದ್ದು ಎನ್.ಎ ಶೇಖರ್ ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವ್ಯಕ್ತಿಯಿಂದ ಕೊಲೆ ಬೆದರಿಕೆ:
     ಮಡಿಕೇರಿ ತಾಲೋಕು ಬಾವಲಿ ಗ್ರಾಮದ ನಿವಾಸಿ ಶ್ರೀಮತಿ ತಾರಾಮಣಿ ಎಂಬವರು ದಿನಾಂಕ 6-6-2018 ರಂದು ಅಪರಾಹ್ನ 5-45 ಗಂಟೆ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇರುವಾಗ್ಗೆ ಅವರ ಗಂಡನ ತಮ್ಮನಾದ ಪಿ.ಪಿ. ಸೋಮಯ್ಯ ಎಂಬವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಕು ತಾರಾಮಣಿಯವರನ್ನು ಹಾಗು ಆಕೆಯ ಗಂಡ ಪಿ.ಪಿ.ನಾಣಯ್ಯನವರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿ ವಿಚಾರದಲ್ಲಿ ಜಗಳ, ಹಲ್ಲೆ:
     ಸೋಮವಾರಪೇಟೆ ತಾಲೋಕು ಹೆಬ್ಬಾಲೆ ಗ್ರಾಮದ ಹೆಚ್.ಎನ್. ಸತೀಶ್ ಎಂಬವರು ದಿನಾಂಕ 8-6-2018 ರಂದು  15-00 ಗಂಟೆ ಸಮಯದಲ್ಲಿ ಹೆಬ್ಬಾಲೆ ಗ್ರಾಮದಲ್ಲಿರುವ ತಮ್ಮ 2 ಏಕರೆ ಜಮೀನನಲ್ಲಿ ತನ್ನ ಪತ್ನಿ ಮತ್ತು ಮಗನೊಂದಿಗೆ  ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿಗಳಾದ ಅದೇ ಗ್ರಾಮದ ಕುಮಾರ, ನಾಗೇಶ ಮತ್ತು ಮಣಿ ರವರುಗಳು ಅಲ್ಲಿಗೆ ಬಂದು ಜಾಗದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹೆಚ್.ಎನ್. ಸತೀಶರವರ ಮಗನಾದ ಪ್ರವೀಣ ರವರ ತಲೆಗೆ ಕಡಿದು ಗಾಯಪಡಿಸಿ ಅಲ್ಲದೆ ಸತೀಶ್ ರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಪತ್ನಿ ಮಂಜುಳಾ ರವರ ಮೇಲೂ ಹಲ್ಲೆ ನಡೆಸಿ  ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನುಷ್ಯ ಕಾಣೆ:
     ಶನಿವಾರಸಂತೆ ಠಾಣಾ ಸರಹದ್ದಿನ ಮಣಗಲಿ ಗ್ರಾಮದ ನಿವಾಸಿ ಎಂ.ಜಿ. ಕೀರ್ತಿ ಎಂಬವರ ತಂದೆ 50 ವರ್ಷ ಪ್ರಾಯದ ಗಣಪತಿ ಎಂಬವರು ದಿನಾಂಕ 29-5-2018 ರಂದು ಬೆಳಗ್ಗೆ ಹಂಡ್ಲಿ ಗ್ರಾಮದ ಸಹಕಾರಿ ಸಂಘಕ್ಕೆ ಹೋಗಿ 20,000 ರೂ ಹಣ ಡ್ರಾ ಮಾಡಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಎಂ.ಜಿ. ಕೀರ್ತಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, June 8, 2018

ಕಳವು ಪ್ರಕರಣ
                  ದಿನಾಂಕ 28/05/2018ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಸುನಿಲ್ ರಮೇಶ ವಾಲ್ಮೀಕಿ ಎಂಬವರು ಅವರು ಕೆಲಸ ಮಾಡುವ ಶೆಡ್ಡಿನಲ್ಲಿ ಅವರ ಕೆಎ-31-ಎಕ್ಸ್-6585ರ ಬೈಕನ್ನು ಇಟ್ಟು ಹೋಗಿದ್ದು ಮಾರನೆ ದಿನ ಬೆಳಿಗ್ಗೆ ಬಂದು ನೋಡುವಾಗ ಅವರ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
                 ವಿರಾಜಪೇಟೆ ಬಳಿಯ ಬಾಳುಗೋಡು ನಿವಾಸಿ ಎನ್‌.ಎ.ತಿಮ್ಮಯ್ಯನವರು ಬೆಂಗಳೂರಿನಲ್ಲಿ ವಾಸವಿದ್ದು ಬಾಳುಗೋಡಿನಲ್ಲಿ ಬಾಡಿಗೆ ಮನೆ ಮಾಡಿ ತೋಟಕ್ಕೆ ಬಂದು ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಬಂದಿದ್ದ ಅವರು ದಿನಾಂಕ 03/06/2018ರಂದು ಬಾಳುಗೋಡಿನಿಂದ ಮರಳಿ ಬೆಂಗಳೂರಿಗೆ ಹೋಗಿದ್ದು, ದಿನಾಂಕ 06/06/2018ರಂದು ಅವರು ಬಾಡಿಗೆಗಿದ್ದ ಮನೆಯ ಮಾಲೀಕರ ಅಣ್ಣ ರಮೇಶ್‌ರವರು ತಿಮ್ಮಯ್ಯನವರಿಗೆ ಕರೆ ಮಾಡಿ ಅವರ ಬಾಡಿಗೆ ಮನೆಯ ಬೀಗ ಮುರಿದಿರುವುದಾಗಿ ತಿಳಿಸಿದ್ದು ಕೂಡಲೇ ತಿಮ್ಮಯ್ಯನವರು ದಿನಾಂಕ 07/06/2018ರಂದು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ರೂ.36,000/- ನಗದು ಸೇರಿದಂತೆ ಒಟ್ಟು ರೂ.2,18.000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                ದಿನಾಂಕ 07/06/2018ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಪ್ರಕಾಶ ಎಂಬವರು ಅವರ ಬೈಕಿನಲ್ಲಿ ಕುಶಾಲನಗರ ಪಟ್ಟಣದಿಂದ ಕೊಪ್ಪ ಕಡೆಗೆ ಹೋಗುತ್ತಿರುವಾಗ ಬಿ.ಎಂ.ರಸ್ತೆಯ ಬಳಿ ಎದುರಿನಿಂದ ಒಂದು ಟಾಟಾ ಏಸ್ ವಾಹನವನ್ನು ಅದರ ಚಾಲಕ ಮೈಸೂರಿನ ರವಿಶಂಕರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪ್ರಕಾಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಗಾಂಜಾ ಪತ್ತೆ
               ನಾಪೋಕ್ಲು ಬಳಿಯ ಕಕ್ಕಬೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್‌.ಎನ್. ಸಿದ್ದಯ್ಯನವರು ಕಕ್ಕಬೆ ಗ್ರಾಮದ ಪಿ.ಸಿ.ಸುಕುಮಾರ ಎಂಬಾತನ ಮನೆಗೆ ಧಾಳಿ ಮಾಡಿ ಅಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಸುಮಾರು 42 ಗ್ರಾಂ ಗಳ ಗಾಂಜಾ ಪ್ಯಾಕೆಟನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಪರಸ್ಪರ ಹಲ್ಲೆ ಪ್ರಕರಣ
             ದಿನಾಂಕ 07/06/2018ರಂದು ಬಾಳೆಲೆ ಬಳಿಯ ನಿಟ್ಟೂರು ನಿವಾಸಿ ಎಂ.ಎನ್.ಕಮಲಾಕ್ಷಿ ಎಂಬವರಿಗೆ ಹಾಗೂ ಅವರ ಮಗನಿಗೆ ಅದೇ ಗ್ರಾಮದ ನಿವಾಸಿಗಳಾದ ಕಳ್ಳಂಗಡ ಲತಾ, ಸುಗಂಧ ಮತ್ತು ಇತರರು ಹಲ್ಲೆ ಮಾಡಿರುವುದಾಗಿ ದೂರು ನೀಡಲಾಗಿದ್ದು ಅದೇ ರೀತಿ ಎಂ.ಎನ್. ವಿಷ್ಣು ಮುತ್ತಣ್ಣ ಮತ್ತು ವಿಜಯ ಭಾರ್ಗವ ಎಂಬವರು ಸೇರಿಕೊಂಡು ಕೆ.ಜಿ.ಸುಗಂಧರವರು ದೂರು ನೀಡಿದ್ದು ಪೊನ್ನಂಪೇಟೆ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, June 7, 2018

ಅಸಹಜ ಸಾವು ಪ್ರಕರಣ ದಾಖಲು:
     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಹೆಚ್ಚಿನ ಮಾತ್ರೆ ಸೇವಿಸಿದ ಪರಿಣಾಮ ಸಾವನಪ್ಪಿದ ಘಟನೆ ಮಡಿಕೇರಿ ತಾಲೋಕು ಕುಂಜಿಲ ಗ್ರಾಮದಲ್ಲಿ ನಡೆದಿದೆ.  ಕುಂಜಿಲ ಗ್ರಾಮದ ಕುಂಡಂಡ ಆಮು ಎಂಬವರ ಮಗ 27 ವರ್ಷ ಪ್ರಾಯದ ಸಂಷುದ್ದೀನ್ ಎಂಬವರು ಮೂರ್ಛೆರೋಗದಿಂದ ಬಳಲುತ್ತಿದ್ದು ದಿನಾಂಕ 1-6-2018 ರಂದು ಸದರಿ ಸಂಷುದ್ದೀನ್ ರವರು ಅಗತ್ಯಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡು,  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 6-6-2018 ರಂದು ಸದರಿಯವರು ಮೃತಪಟ್ಟಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.ಟಿ.ಎಂ. ಕಾರ್ಡ್ ಬದಲಿಸಿ ವಂಚನೆ:
     ಮಡಿಕೇರಿ ತಾಲೋಕು ಬಿಳಿಗೇರಿ ಗ್ರಾಮದ ನಿವಾಸಿ ಕೆ.ಯು. ಲೋಕೇಶ್ ಎಂಬವರು ದಿನಾಂಕ 31-5-2018 ರಂದು ತಮ್ಮ ಬಾಪ್ತು ಕೆನರಾ ಬ್ಯಾಂಕ್ ಎ.ಟಿ.ಎಂ. ಕಾರ್ಡ್ ನಿಂದ ಮಡಿಕೇರಿ ನಗರದ ಬಸ್ಸು ನಿಲ್ದಾಣ ಬಳಿ ಇರುವ ವಿಜಯಾ ಬ್ಯಾಂಕ್ ಎ.ಟಿ.ಎಂ. ಗೆ ಹೋಗಿ ಅಲ್ಲಿದ್ದ ವ್ಯಕ್ತಿಯೊಬ್ಬರಿಂದ ರೂ.10,000/- ಹಣವನ್ನು ತೆಗೆಸಿದ್ದು, ಸದರಿ ವ್ಯಕ್ತಿ ಹಣವನ್ನು ಎ.ಟಿ.ಎಂ. ನಿಂದ ತೆಗೆದುಕೊಟ್ಟು ಬದಲಿ ಎ,ಟಿ.ಎಂ. ಕಾರ್ಡ್ ನ್ನು ನೀಡಿ ಅಲ್ಲಿಂದ ತೆರಳಿದ್ದು, ದಿನಾಂಕ 4-6-2018 ರಂದು ಫಿರ್ಯಾದಿ ಲೋಕೇಶ್ ನವರು ಬ್ಯಾಂಕಿನಲ್ಲಿ ಪರಿಶೀಲಿಸಿದಾಗ ತನ್ನ ಬ್ಯಾಂಕ್ ಖಾತೆಯಿಂದ 1,90,000/- ಹಣವನ್ನು ಡ್ರಾ ಮಾಡಿ ವಂಚಿಸಿರುವುದು ತಿಳಿದುಬಂದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಗೆ ಕಾರು ಡಿಕ್ಕಿ:
     ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಸಿದ್ದಾಪುರ ಅಂಬೇಡ್ಕರ್ ನಗದಲ್ಲಿ ನೆಲೆಸಿರುವ ಹೆಚ್.ಎಸ್. ಅಯ್ಯ ಎಂಬವರ ಪತ್ನಿ ಶ‍್ರೀಮತಿ ರಾಜೇಶ್ವರಿ ಎಂಬವರು ದಿನಾಂಕ 1-6-2018 ರಂದು ಸಂಜೆ 8-45 ಗಂಟೆ ಸಮಯದಲ್ಲಿ ತಮ್ಮ ಮನೆಯ ಪಕ್ಕದ ಮಿನಿ ವಾಟರ್ ಟ್ಯಾಂಕ್ ನಿಂದ ನೀರು ತರುತ್ತಿರುವಾಗೆ ವ್ಯಕ್ತಿಯೊಬ್ಬರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜೇಶ್ವರಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ರಾಜೇಶ್ವರಿರವರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಕಾರಿನ ಚಾಲಕ ಘಟನೆ ಬಳಿಕ ಕಾರನ್ನು ನಿಲ್ಲಿಸದೇ ಹೋಗಿದ್ದು, ಈ ಸಂಬಂಧ ಹೆಚ್‍.ಎಸ್. ಅಯ್ಯರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನೆಕಳವು:
     ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಎನ್.ಈ. ನಾಗೇಶ್ ರವರು ತಮ್ಮ ಪತ್ನಿಯೊಂದಿಗೆ ದಿನಾಂಕ 3-6-2018 ರಂದು ಬೆಂಗಳೂರಿಗೆ ಹೋಗಿದ್ದು, ಅವರ ತಮ್ಮನನ್ನು ಮನೆ ನೋಡಿಕೊಳ್ಳಲು ತಿಳಿಸಿ ಹೋಗಿದ್ದು ದಿನಾಂಕ 5-6-2018 ರಂದು ರಾತ್ರಿ ಯಾರೋ ಕಳ್ಳರು ಮನೆಯ ಮುಂದಿನ ಕಿಟಕಿಯ ಸರಳುಗಳನ್ನು ಮುರಿದು ಮನೆಯ ಒಳಗಡೆ ಪ್ರವೇಶ ಮಾಡಿ ಬೀರುವಿನಲ್ಲಿಟ್ಟಿದ್ದ ಪರ್ಸ್ ನ್ನು ತೆಗೆದು ಅದರಲ್ಲಿಟ್ಟಿದ್ದ  ಎ.ಟಿ.ಎಂ. ಕಾರ್ಡ್ ಮತ್ತು ಎ.ಟಿ.ಎಂ. ಪಿನ್ ನಂಬರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Wednesday, June 6, 2018

ಕಳವು ಪ್ರಕರಣ 
           ದಿನಾಂಕ 04-06-2018 ರ ರಾತ್ರಿ ಸಮಯದಲ್ಲಿ ಮಡಿಕೇರಿಯ ಆಕಾಶವಾಣಿ ವಸತಿ ಗೃಹಗಳಿಗೆ ಯಾರೋ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಬಾಲನ್ ಎಂಬುವವರ ವಸತಿ ಗೃಹದಿಂದ ಒಂದು ಲ್ಯಾಪ್ ಟಾಪ್, 4 ಹಾರ್ಡ್ ಡಿಸ್ಕ್ ಗಳು, ಎಲ್.ಇ.ಡಿ ಟಿವಿ, 40,000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಮತ್ತೆರಡು ವಸತಿ ಗೃಹಗಳ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದು, ಈ ಬಗ್ಗೆ ಬಾಲನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಲಾರಿ ಡಿಕ್ಕಿ ವ್ಯಕ್ತಿಯ ದುರ್ಮರಣ 
        ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಂಟಿಕೊಪ್ಪ ನಗರದ ಮಡಿಕೇರಿ ಕುಶಾಲನಗರ ಹೆದ್ದಾರಿಯಲ್ಲಿ ವರದಿಯಾಗಿದೆ. ದಿನಾಂಕ 04-05-2018 ರಂದು ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಕಟ್ಟಡಕ್ಕೆ ಕಾಂಕ್ರೀಟ್ ತುಂಬಿಸಿಕೊಂಡು ಕುಶಾಲನಗರದಿಂದ ಬರುತ್ತಿದ್ದ ಲಾರಿಯು ಸುಂಟಿಕೊಪ್ಪ ನಗರದ ವಂದನಾ ಬಾರ್ ಪಕ್ಕ ಅಪಘಾತವಾಗಿ ಮಗುಚಿ ಬಿದ್ದಿದ್ದು, ಸದರಿ ಲಾರಿಯನ್ನು ದಿನಾಂಕ 05-06-2018 ರಂದು ಕ್ರೇನ್ ಮೂಲಕ ಎತ್ತಿ ನಿಲ್ಲಿಸುತ್ತಿರುವಾಗ ಕುಶಾಲನಗರದ ಕಡೆಯಿಂದ ಕೆಎ-01-ಎಸಿ-3690 ರ ಲಾರಿಯನ್ನು ಚಾಲಕ ಗಿರೀಶ್ ಎಂಬುವವರು ಅಜಾಗರಕತೆಯಿಂದ ಚಾಲನೆ ಮಾಡಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಪಡಿಸಿ ಲಾರಿಯ ಪಕ್ಕದಲ್ಲೇ ನಿಂತಿದ್ದ ರಾಜನ್ ಎಂಬವರ ಮೇಲೆ ಲಾರಿ ಹರಿದು ಮೃತಪಟ್ಟಿದ್ದು, ಪ್ರಶಾಂತ್ ಎಂಬವರಿಗೂ ಸಹಾ ಗಾಯವಾಗಿದ್ದು, ಈ ಬಗ್ಗೆ ಪುರುಷೋತ್ತಮ ರೈ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ 
      ದಿನಾಂಕ 27-05-2018 ರಂದು ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ನಿವಾಸಿಯಾದ ಪ್ರಕಾಶ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಮನೆಯ ಹಿಂಬದಿಯಲ್ಲಿಟ್ಟಿದ್ದ ಡಬ್ಬಿಯಲ್ಲಿ ಇಟ್ಟು ಶನಿವಾರಸಂತೆಗ ಹೋಗಿದ್ದು, ಸಂಜೆ ಬರುವಾಗ ಕೀ ಇಟ್ಟಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು, ಸ್ಕ್ರೂಡ್ರೈವರ್ ನಿಂದ ಬಾಗಿಲನ್ನು ತೆಗೆದು ಒಳ ಹೋಗಿ ನೋಡುವಾಗ ಬೀರುವಿನಲ್ಲಿಟ್ಟಿದ್ದ 75000 ರೂ ನಗದು ಹಣ ಹಾಗೂ ಅಂದಾಜು 30 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಪ್ರಕಾಶರವರು ದಿನಾಂಕ 05-06-2018 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, June 5, 2018


ರಸ್ತೆ ಅಪಘಾತ
                      ದಿನಾಂಕ 03/06/2018ರಂದು ಸಂಜೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಸುಳ್ಯ ಡಿಪೋದಲ್ಲಿ ಚಾಲಕರಾಗಿರುವ ಜಗದೀಶ್‌ ಎಂಬವರು ಸುಬ್ರಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರಿರುವ ಬಸ್ಸನ್ನು ಚಾಲಿಸಿಕೊಂಡು ಬರುತ್ತಿರುವಾಗ ಕೊಯನಾಡು ಬಳಿ ಎದುರಿನಿಂದ ಒಂದು ಟ್ಯಾಂಕರನ್ನು ಅದರ ಚಾಲಕ ಮದನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                    ದಿನಾಂಕ 03/06/2018ರಂದು ಮಡಿಕೇರಿ ಬಳಿಯ ಬಿಳಿಗೇರಿ ಗ್ರಾಮದ ಕಿರಣ್ ಎಂಬವರು ಅವರ ಕಾರಿನಲ್ಲಿ ಮನೆಗೆ ಬರುತ್ತಿರುವಾಗ ಬಿಳಿಗೇರಿ ಗ್ರಾಮದ ಬಕ್ಕ ಬಾಣೆ ಬಳಿ ನಾಣಯ್ಯ ಎಂಬಾತನು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಕಿರಣ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                  ದಿನಾಂಕ 27/05/2018ರಂದು ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ನಿವಾಸಿ ಗಿರೀಶ್ ಎಂಬವರು ಅವರ ಮೋಟಾರು ಸೈಕಲಿನಲ್ಲಿ ನೆಲ್ಲಿಹುದಿಕೇರಿಯಿಂದ ಪೊನ್ನಂಪೇಟೆಗೆ ಹೋಗುತ್ತಿರುವಾಗ ಸಿದ್ದಾಪುರ ಬಳಿಯ ಗೂಡುಗದ್ದೆ ಕಡೆ ಹೋಗುವ ಜಂಕ್ಷನ್‌ನಲ್ಲಿ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ವಾಸು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಗಿರೀಶ್‌ ಹಾಗೂ ಬೈಕಿನಲ್ಲಿದ್ದ ಅವರ ಮಗ ಮಂಜೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                    ದಿನಾಂಕ 29/05/2018ರಂದು ಮಡಿಕೇರಿ ಬಳಿಯ ಕಾಟಕೇರಿ ನಿವಾಸಿ ಬಿ.ಕೆ.ಸೀತಾರಾಮ ರೈ ಎಂಬವರ ಭಾವ ಉದಯಕುಮಾರ್ ಎಂಬವರು ಕರ್ಣ ಕುಮಾರ್ ಎಂಬವರ ಸ್ಕೂಟರಿನಲ್ಲಿ ಕೂಡಿಗೆ ಬಳಿಯ ಕಣಿವೇ ದೇವಸ್ಥಾನದಿಂದ ಶನಿವಾರಸಂತೆಗೆ ಹೋಗುವ ಮಾರ್ಗದಲ್ಲಿ ಅಳುವಾರದಮ್ಮ ದೇವಸ್ಥಾನದ ಬಳಿ ಕರ್ಣ ಕುಮಾರ್ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಉದಯಕುಮಾರ್‌ರವರು ಸ್ಕೂಟರಿನಿಂದ ಎಸೆಯಲ್ಪಟ್ಟು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Monday, June 4, 2018
ಅಕ್ರಮ ಶ್ರೀಗಂಧ ಸಾಗಾಟ:

     ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.  ಕೊಡಗು ಜಿಲ್ಲಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಸ್ತುವಾರಿಯಲ್ಲಿರುವ ಯತೀಶ್ ಎನ್. ಐಪಿಎಸ್(ಪ್ರೊಭೆಷನರಿ) ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಸದರಿ ಠಾಣಾ ಪಿಎಸ್‍ ಐ ಚೇತನ್ ಹಾಗು ಸಿಬ್ಬಂದಿಯೊಂದಿಗೆ ದಿನಾಂಕ 4-6-2018 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬೋಯಿಕೇರಿ ಬಸ್ಸು ನಿಲ್ದಾಣದ ಬಳಿ  ನಿಂತಿದ್ದ ವ್ಯಕ್ತಿಯೋರ್ವ ಒಂದು ಚೀಲದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಸಿಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದು ಆತನ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ಆತನ ಬಗ್ಗೆ ಮಾಹಿತಿ ತಿಳಿಯಲಾಗಿ ಈತನ ಹೆಸರು ಸಂಶುದ್ದೀನ್, ತಂದೆ: ಪೌತಿ ಜೈನುದ್ದೀನ್, ಪ್ರಾಯ 23 ವರ್ಷ, ವಾಸ: ಕುಂಟಾರು ಗ್ರಾಮ, ಮುಳ್ಳೇರಿಯಾ ತಾಲೋಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ  ಎಂಬುದಾಗಿ ತಿಳಿದುಬಂದಿದ್ದು, ಆತನಿಂದ 50,000 ರೂ. ಮೌಲ್ಯದ ಅಂದಾಜು 10 ಕೆ.ಜಿ. ತೂಕದ 28 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

          ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರ ನಿರ್ದೇಶನದಲ್ಲಿ, ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಎಸ್. ಸುಂದರ ರಾಜ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದಯ್ಯ, ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಯತೀಶ್ ಎನ್. ಐಪಿಎಸ್ (ಪ್ರೊಭೆಷನರಿ), ಉಪ ನಿರೀಕ್ಷಕರಾದ ವಿ. ಚೇತನ್ ಹಾಗು ಸಿಬ್ಬಂದಿಗಳಾದ ತೀರ್ಥಕುಮಾರ್, ಇಬ್ರಾಹಿಂ, ಸತೀಶ್. ಎ.ಯು. ಶಿವರಾಜೇಗೌಡ, ಸುಧಾಮಣಿ ಚಾಲಕರಾದ ಅರುಣ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು,  ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಮೇಲ್ಕಾಣಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.


ಬೈಕ್ ಅಪಘಾತ:
     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕೆ.ಪಿ. ಪ್ರಥಮ್ ಎಂಬವರು ದಿನಾಂಕ 3-6-2018 ರಂದು ಅಭಿಷೇಕ್ ಎಂಬವರ ಮೋಟಾರ್ ಸೈಕಲಿನಲ್ಲಿ ಕೆ.ಎಸ್‍.ಆರ್‍.ಟಿ.ಸಿ ಡಿಪೋ ಕಡೆಯಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿದ್ದಾಗ ಎದುರುಕಡೆಯಿಂದ ಬಂದ ಮೋಟಾರ್ ಸೈಕಲ್ ಸದರಿ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಭಿಷೇಕ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಕೆ.ಪಿ. ಪ್ರಥಮ್ ಹಾಗು ಅಭಿಷೇಕ್ ರವರು ಗಾಯಗೊಂಡಿದ್ದು ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಕಳವು:
     ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನವಾದ ಘಟನೆ ವಿರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ನಡೆದಿದೆ.  ಸುಣ್ಣದ ಬೀದಿ ನಿವಾಸಿ ಶ್ರೀಮತಿ ರುಬಿನಾ ಎಂಬವರು ದಿನಾಂಕ 1-6-2018 ರಂದು ತಮ್ಮ ಬಾಪ್ತು ಹೋಂಡಾ ಆಕ್ಟೀವಾ ಸ್ಕೂಟರನ್ನು ತಮ್ಮ ಮನೆಯ ಮುಂದುಗಡೆ ನಿಲ್ಲಿಸಿದ್ದು, ಮಾರನೆ ದಿನ ದಿನಾಂಕ 2-6-2018 ರಂದು ಬೆಳಗ್ಗೆ ನೋಡಿದಾಗ ಸದರಿ ಸ್ಕೂಟರ್ ಕಳ್ಳತವಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, June 3, 2018


ಅಕ್ರಮ ಮರಳು ಸಂಗ್ರಹ ಪತ್ತೆ
                      ದಿನಾಂಕ 02/06/2018ರಂದು ಮಡಿಕೇರಿಯ ಹಿರಿಯ ಭೂ ವಿಜ್ಞಾನಿ ರೇಷ್ಮಾ ಮತ್ತು ಇತರರು ನಾಪೋಕ್ಲು ಬಳಿಯ ಬಲಮುರಿ ಎಂಬಲ್ಲಿ ಕಾವೇರಿ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಂಗ್ರಹಿಸಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಅಕ್ರಮವಾಗಿ ಸುಮಾರ್ ಒಂದು ಪಿಕ್‌ಅಪ್ ಜೀಪಿನಷ್ಟು ಮರಳನ್ನು ಅಕ್ರಮವಾಗಿ ಹೊಳೆಯಿಂದ ತೆಗೆದು ದಾಸ್ತಾನು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬ್ಯಾಂಕ್ ಸಾಲ ಪಡೆದು ವಂಚನೆ
                      ಸಿದ್ದಾಪುರದ ವಿಜಯಾ ಬ್ಯಾಂಕಿನ ವ್ಯವಸ್ಥಾಪಕರಾದ ಎ.ಎಸ್.ಬಾಬು ಮತ್ತು ಕೆ.ಎಸ್.ಪ್ರಶಾಂತ್ ಎಂಬವರುಗಳು ಸೇರಿಕೊಂಡು ಚೆನ್ನಯ್ಯನಕೋಟೆ ನಿವಾಸಿ ಕೆ.ಎ.ರಶೀದ್ ಎಂಬವರ ಅಣ್ಣ ಕೆ.ಎ.ನೌಷಾದ್‌ರವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದಲ್ಲದೆ ನೌಷಾದ್‌ ಹಾಗೂ ರಶೀದ್‌ರವರ ಸಹಿಗಳನ್ನು ನಕಲು ಮಾಡಿ ನೌಷಾದ್‌ರವರ ಹೆಸರಿನಲ್ಲಿ ಸುಮಾರು ರೂ.20 ಲಕ್ಷದಷ್ಟು ಹಣವನ್ನು ಸಾಲವಾಗಿ ಪಡೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                      ದಿನಾಂಕ 31/05/2018ರಂದು ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿ ನಿವಾಸಿ ಮಹಮದ್ ಕಬೀರ್ ಎಂಬವರ ತಮ್ಮ ಜುನೈದ್ ಎಂಬವರು ಅದೇ ಗ್ರಾಮದ ನಿವಾಸಿ ಮುಸ್ತಾಫಾ ಎಂಬವರೊಂದಿಗೆ ಮೈಸೂರಿನಿಂದ ಕಾರಿನಲ್ಲಿ ಬರುತ್ತಿರುವಾಗ ಕರಡಿಗೋಡು ಗ್ರಾಮದ ಕೆಸುವಿನ ಹಳ್ಳ ಎಂಬಲ್ಲಿ ಮುಸ್ತಾಫಾರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಯಲ್ಲಿ ಮಗುಚಿಕೊಂಡು ಜುನೈದ್‌ ಹಾಗೂ ಮುಸ್ತಾಫಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ
                     ಭಾಗಮಂಡಲ ಬಳಿಯ ಕೋಪಟ್ಟಿ ನಿವಾಸಿ ಕುದುಪಜೆ ಚಂದ್ರಶೇಖರ್‌ ಎಂಬವರಿಗೆ ದಿನಾಂಕ 31/05/2018ರಂದು 11 ಕೆವಿ ವಿದ್ಯುತ್‌ ಮಾರ್ಗದಿಂದ ಆಕಸ್ಮಿಕವಾಗಿ ಗಾಯಗಳಾಗಿದ್ದು ಈ ಸಂಬಂಧ ಭಾಗಮಂಡಲದ ಸೆಸ್ಕ್ ಅಧಿಕಾರಿ ಹರಿಣಾಕ್ಷಿ ಹಾಗೂ ಸಿಬ್ಬಂದಿಗಳು ದಿನಾಂಕ 01/06/2018ರಂದು ಸ್ಥಳಕ್ಕೆ ಹೋದಾಗ ಅಲ್ಲಿದ್ದ ದಬ್ಬಡ್ಕ ಶ್ರೀಧರ್ ಎಂಬವರು ಹರಿಣಾಕ್ಷಿ ಹಾಗೂ ಅವರ ಸಿಬ್ಬಂದಿಗಳನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಲು ಪ್ರಯತ್ನಿಸಿರುವುದಾಗಿ ದೂರು ನೀಡಿದ್ದು ಅದೇ ರೀತಿ ದಬ್ಬಡ್ಕ ಶ್ರೀಧರ್‌ರವರು ನೀಡಿದ ಪ್ರತಿ ದೂರಿನಲ್ಲಿ ಚಂದ್ರಕುಮಾರ್‌ರವರಿಗೆ ವಿದ್ಯುತ್ ಸ್ಪರ್ಷದಿಂದಾದ ಗಾಯದ ಬಗ್ಗೆ ವಿಚಾರಿಸಲು ಹೋದ ತನ್ನನ್ನು ಭಾಗಮಂಡಲದ ಸೆಸ್ಕ್ ಅಧಿಕಾರಿಗಳಾದ ಕರಿನಾಯಕ್, ದಿನೇಶ್, ಗೋವಿಂದ ಮುಂತಾದವರು ಸೇರಿ ನಿಂದಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಿಕ್‌ಅಪ್ ವಾಹನ ಕಳವು
                    ಸೋಮವಾರಪೇಟೆ ಬಳಿಯ ಎರೆಪಾರೆ ನಿವಾಸಿ ಪ್ರಶಾಂತ್ ಎಂಬವರು ದಿನಾಂಕ 31/05/2018ರಂದು ಅವರ ಪಿಕ್‌ಅಪ್ ಜೀಪು ಸಂಖ್ಯೆ ಕೆಎ-19-ಎಎ-5863 ಅನ್ನು ಅವರ ಎರೆಪಾರೆಯ ಮನೆಯ ಬಳಿ ನಿಲ್ಲಿಸಿ ಸ್ವಂತ ಊರಾದ ಬಂಟ್ವಾಳಕ್ಕೆ ಹೋಗಿ ದಿನಾಂಕ 01/06/2018ರಂದು ಬಂದು ನೋಡಿದಾಗ ಜೀಪನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                      ದಿನಾಂಕ 3105/2018ರಂದು ಮಾದಾಪುರ ಬಳಿಯ ಮೂವತೊಕ್ಲು ನಿವಾಸಿ ಬೆಳ್ಳಿಯಪ್ಪ ಎಂಬವರಿಗೆ ಶ್ರೀನಾಥ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                      ದಿನಾಂಕ 02/06/2018ರಂದು ಸೋಮವಾರಪೇಟೆ ನಗರದ ಬಾಣಾವರ ರಸ್ತೆ ನಿವಾಸಿ ಮೋಹನ ಎಂಬವರು ಮನೆಗೆ ಹೋಗುತ್ತಿರುವಾಗ ಶಾರದಾ ಜುವೆಲ್ಲರ್ಸ್ ಅಂಗಡಿಯ ಮುಂದೆ ರಸ್ತೆಯಲ್ಲಿ ಮೂರ್ತಿ, ಶಿವ ಮತ್ತು ಕಿರಣ್ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಮೋಹನರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.