Tuesday, July 31, 2018

ರಸ್ತೆ ಅಪಘಾತ
ದಿನಾಂಕ 29/07/2018ರಂದು ಮಡಿಕೇರಿಯ ಇಂದಿರಾ ನಗರ ನಿವಾಸಿ ಪಿ.ಎಂ.ನಂದ ಎಂಬವರು ಅವರ ಮೋಟಾರು ಸೈಕಲಿನಲ್ಲಿ ನಗರದ ಗಾಂಧಿ ಮೈದಾನದ ಬಳಿ ಹೋಗುತ್ತಿರುವಾಗ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ನಂದರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ನಂದರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಗೆ ಗುಂಡು
ದಿನಾಂಕ 30/07/2018ರಂದು ಮಡಿಕೇರಿ ನಗರದ ಎಫ್ಎಂಸಿ ಕಾಲೇಜು ಹಿಂಭಾಗದ ನಿವಾಸಿ ಜನಾರ್ಧನ ಎಂಬವರು ಮನೆಯಲ್ಲಿರುವಾಗ ರಾತ್ರಿ ವೇಳೆ ಯಾರೋ ಅಪರಿಚಿತರು ಅವರ ಮನೆಯ ಕಿಟಕಿಗೆ ಗುಂಡು ಹೊಡೆದು ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.

ಕಾಡಾನೆ ಧಾಳಿ; ವ್ಯಕ್ತಿ ಸಾವು
ದಿನಾಂಕ 29/07/2018ರಂದು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಜೇನು ಕುರುಬರ ತಿಮ್ಮಪ್ಪ ಎಂಬವರು ಅವರ ಬಂಧುಗಳೊಂದಿಗೆ ಕೋತೂರು ಗ್ರಾಮಕ್ಕೆ ಕೆಲಸಕ್ಕೆ ಹೋಗಿದ್ದು ಮರಳಿ ಮನೆಗೆ ಬರುವಾಗ ತಿಮ್ಮಪ್ಪನವರು ಅಂಗಡಿಗೆಂದು ಹೋಗಿ ಒಂಟಿಯಾಗಿ ಮನೆಗೆ ಹೋಗುತ್ತಿರುವಾಗ ನಾಲ್ಕೇರಿಯ ಗೋಣಿಗದ್ದೆ ಹಾಡಿಗೆ ಹೋಗುವ ರಸ್ತೆಯ ಬಳಿ ಕಾಡಾನೆಯೊಂದು ಅವರ ಮೇಳೆ ಧಾಳಿ ನಡೆಸಿ ಎಳೆದಾಡಿದ ಪರಿಣಾಮ ತಿಮ್ಮಪ್ಪನವರು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ನಿವಾಸಿ ಸಮೀವುಲ್ಲಾ ಎಂಬವರು ದಿನಾಂಕ 30/07/2018ರಂದು ಗೌರಿ ಬಿದನೂರಿನಿಂದ ಸಿಮೆಂಟ್ ತುಂಬಿದ ಲಾರಿಯನ್ನು ಚಾಲಿಸಿಕೊಂಡು ಮಂಗಳೂರಿಗೆ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದ ಸ್ಯಾಂಡಲ್ ವುಡ್ ತೋಟದ ಬಳಿ ಹಿಂದಿನಿಂದ ಒಂದು ಇನ್ನೋವಾ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಲಾರಿಗೆ ಹಾನಿಯುಂಟಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಅಸ್ವಾಭಾವಿಕ ಸಾವು
ಮಡಿಕೇರಿ ಸಮೀಪದ ಎಂ.ಬಾಡಗ ಗ್ರಾಮದ ಭಗವತಿ ದೇವಸ್ಥಾನದ ಅರ್ಚಕರಾದ ಸುಬ್ರಮಣಿ ಹೆಗಡೆ ಎಂಬವರು ದಿನಾಂಕ 28/07/2018 ರಿಂದ 29/07/2018ರ ನಡುವೆ ಅವರು ವಾಸವಿದ್ದ ವಸತಿ ಗೃಹದಲ್ಲಿ ಅಸ್ವಾಭಾವಿಕವಾಗಿ ಸಾವಿಗೀಡಾಗಿರುವುದಾಗಿ ಅವರ ಸೋದರ ದಾವಣಗೆರೆಯ ಗಣಪತಿ ಯು ಹೆಗಡೆ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 30/07/2018ರಂದು ವಿರಾಜಪೇಟೆ ಬಳಿಯ ಕಲ್ಲುಬಾಣೆ ನಿವಾಸಿ ವಿಜೇಶ್ ಎಂಬಾತನು ಆತನ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ವಿಜೇಶನು ನಿರುದ್ಯೋಗಿಯಾಗಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
ದಿನಾಂಕ 30/07/2018ರಂದು ಪೊನ್ನಂಪೇಟೆ ಬಳಿಯ ಕಾನೂರು ಗ್ರಾಮದ ಕಾನೂರು ಹೊಳೆಯಲ್ಲಿ ಸುಮಾರು 55 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವುದಾಗಿ ಕಾನೂರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎಸ್.ರಾಜೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 30/07/2018ರಂದು ಗೋಣಿಕೊಪ್ಪ ಬಳಿಯ ಹಾತೂರು ನಿವಾಸಿ ವಿಕ್ಟರ್ ಎಂಬವರು ಹಾತೂರಿನಲ್ಲಿ ಅವರ ಹೋಟೆಲಿನ ಮುಂದೆ ನಿಂತಿರುವಾಗ ವಿರಾಜಪೇಟೆ ಕಡೆಯಿಂದ ಕೆ-12-ಝೆಡ್-5129ರ ಕಾರನ್ನು ಅದರ ಚಾಲಕ ಮಂದಣ್ಣ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿಗೆ ಡಿಕ್ಕಿ ಪಡಿಸಿದ ಪರಿಣಾಮ ಆ ವ್ಯಕ್ತಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, July 30, 2018ಮನೆಗೆ ನುಗ್ಗಿ ಹಣ ಕಳವು:

     ಸೋಮವಾರಪೇಟೆ ತಾಲೋಕು ಹೆಮ್ಮನಗದ್ದೆ ಗ್ರಾಮದ ನಿವಾಸಿ ಶ್ರೀಮತಿ ಗಿರಿಜಮ್ಮ ರವರು ದಿನಾಂಕ 28-7-2018 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ತಮ್ಮ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ 5-00 ಗಂಟೆಗೆ ಮನೆಗೆ ಬಂದಾಗ ಮನೆಗೆ ಹಾಕಿದ ಬೀಗವು ಹಾಗೆಯೇ ಇದ್ದು ಮನೆಯೊಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ ಬಟ್ಟೆ ಹಾಸಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮಲಗುವ ಕೋಣೆಯ ಸ್ಲಾಬ್ ಮೇಲೆ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಯ ಒಳಗಡೆ ಇಟ್ಟಿದ್ದ 25,000 ರೂ. ಯಾರೋ ಕಳ್ಳತನ ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, July 29, 2018

ಕಳವು ಪ್ರಕರಣ
ವಿರಾಜಪೇಟೆ ಬಳಿಯ ರಂಜಿತ್ ಕುಮಾರ್ ಎಂಬವರು ದಿನಾಂಕ 26/07/2018ರಂದು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದು ದಿನಾಂಕ 28/07/2018ರಂದು ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿ ಮನೆಯೊಳಗಿನ ಆಲ್ಮೆರಾದಲ್ಲಿದ್ದ ಸುಮಾರು ರೂ.80,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ 
ದಿನಾಂಕ 28/07/2018ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ಗ್ರಾಮದ ದುದ್ದಗಲ್ಲು ನಿವಾಸಿ ಬಿ.ಸಿ.ನಾರಾಯಣ ಎಂಬವರ ಮಗ ಮಹೇಶ್ ಎಂಬಾತನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಮಹೇಶನು ವಿಪರೀತ ಗ್ಯಾಸ್ಟ್ರಿಕ್ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಣೆಯಾದ ವ್ಯಕ್ತಿಯ ಶವ ಪತ್ತೆ
ದಿನಾಂಕ 19/07/2018ರಂದು ಮಡಿಕೇರಿ ನಗರದ ಎಫ್‌ಎಂ.ಸಿ. ಕಾಲೇಜು ಹಿಂಭಾಗದ ನಿವಾಸಿ ಬಿ.ಡಿ.ಗಂಗಾಧರ ಎಂಬವರು ಮನೆಯಿಂದ ಕಾಣೆಯಾಗಿದ್ದು ಅವರ ಶವವು ಹರದೂರು ಬಳಿಯ ಹಾರಂಗಿ ಹೊಳೆಯ ಹಿನ್ನೀರಿನಲ್ಲಿ ದಿನಾಂಕ 28/07/2018ರಂದು ಪತ್ತೆಯಾಗಿದ್ದು ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅವಘಢ
ದಿನಾಂಕ 28/07/2018ರಂದು ಮಡಿಕೇರಿ ನಗರದ ನಿವಾಸಿ ಹೆಚ್‌.ಎನ್.ರಾಣಿ ಎಂಬವರು ಅವರ ಮಾರುತಿ ಓಮಿನಿ ವ್ಯಾನಿನಲ್ಲಿ ನಗರದ ಚೈನ್ ಗೇಟ್ ಬಳಿ ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಒಂದು ಶೆವರ್ಲೆ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಣಿರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಣಿರವರ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಸ್ಪರ್ಷ; ವೃದ್ದೆ ಸಾವು
ದಿನಾಂಕ 28/07/2018ರಂದು ಮಡಿಕೇರಿ ಬಳಿಯ ಕರವಲೆ ಬಾಡಗ ನಿವಾಸಿ ಅರೆಯಂಡ ಶರತ್ ಎಂಬವರ ತಾಯಿ 77 ವರ್ಷ ಪ್ರಾಯದ ಮಾಚಮ್ಮ ಎಂಬವರು ಅವರ ಐನ್ ಮನೆಯ ಬಳಿ ಆಕಸ್ಮಿಕ ವಿದ್ಯುತ್ ಸ್ಪರ್ಷದಿಂದಾ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
ದಿನಾಂಕ 25/07/2018ರಂದು ಮಾದಾಪುರ ನಿವಾಸಿ ಬಾಬು ಎಂಬವರ ಮಗ ಮುತ್ತಣ್ಣ ಎಂಬಾತನು ಗರಗಂದೂರು ಗ್ರಾಮದ ಚೆನ್ನಮ್ಮ ಕಾಲೇಜಿಗೆ ಹೋಗಲು ಬಸ್‌ ಹತ್ತುವ ಸಲುವಾಗಿ ರಸ್ತೆ ದಾಟುತ್ತಿರುವಾಗ ಗರಗಂದೂರು ಕಡೆಯಿಂದ ಒಂದು ಮಾರುತಿ ಓಮಿನಿ ಕಾರನ್ನು ಅದರ ಚಾಲಕ ದೇವಪ್ಪ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುತ್ತಣ್ಣನಿಗೆ ಡಿಕ್ಕಿಪಡಿಸಿದ ಪರಿಣಾಮ ಆತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
ದಿನಾಂಕ 27/07/2018ರ ರಾತ್ರಿ ವೇಳೆ ಶನಿವಾರಸಂತೆ ಬಳಿಯ ಆಲೂರು ಸಿದ್ದಾಪುರ ಗ್ರಾಮದ ಬಂಡಿಯಮ್ಮ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ತೆರೆದು ಒಳಗಿದ್ದ ಎರಡು ದೀಪದ ಕಂಬಗಳನ್ನು ಕಳವು ಮಾಡಿದ್ದು ನಂತರ ಸಮೀಪವಿರುವ ಸರ್ಕಾರಿ ಶಾಲೆಯ ಉಗ್ರಾಣದ ಬಾಗಿಲು ತೆರೆದು ಒಳಗಿದ್ದ ಎರಡು ಗುದ್ದಲಿ ಹಾಗೂ ಒಂದು ವಾಲಿ ಬಾಲ್‌ ಅನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಬಂಡಿಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಮಾಚಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, July 28, 2018

ಅಪಘಾತ ಪ್ರಕರಣ 
           ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಮೋಟಾರು ಸೈಕಲ್ ಮತ್ತು ಮಾರುತಿ ಕಾರುಗಳು ಪರಸ್ಪರ ಡಿಕ್ಕಿಯಾಗಿ ಮಹದೇವಪೇಟೆಯ ನಿವಾಸಿಯಾದ ನಿಶಾಂತ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಕಾರು ಚಾಲಕ ಸಂತೋಷ್ ಮತ್ತು ಮೋಟಾರು ಸೈಕಲ್ ಸವಾರ ನಿಶಾಂತ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
         ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಸುಂಟಿಕೊಪ್ಪದಲ್ಲಿ ವರದಿಯಾಗಿದೆ. ದಿನಾಂಕ 26-07-2018 ರಂದು ಅರುಣ ಎಂಬುವವರು ಕ್ಯಾಂಟರ್ ಲಾರಿಯಲ್ಲಿ ಬೆಂಗಳೂರಿನಿಂದ ಕುರ್ ಕುರೇ ತುಂಬಿಸಿಕೊಂಡು ಸುಂಟಿಕೊಪ್ಪದ ಗದ್ದೆಹಳ್ಳದ ಗಣೇಶ ಏಜೆನ್ಸಿ ಅಂಗಡಿಯ ಮುಂದೆ ರಾತ್ರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವಾಗ ಸಮಯ ರಾತ್ರಿ 1-00 ಗಂಟೆಗೆ ಕುಶಾಲನಗರ ಕಡೆಯಿಂದ ಬಂದ ಕಾರನ್ನು ಅದರ ಚಾಲಕ ಹರೀಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಲ್ಲಿಸಿದ್ದ ಲಾರಿಗೆ ಹಿಂದುಗಡೆಯಿಂದ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಈ ಬಗ್ಗೆ ಲಾರಿಯ ಚಾಲಕ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಚಿನ್ನಾಭರಣ ಕಳವು 
              ದಿನಾಂಕ 25-07-2018 ರಂದು ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಶ್ರೀಮತಿ ಸವಿತ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕೂಡುಮಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದವರು ವಾಪಾಸ್ಸು ದಿನಾಂಕ 27-07-2018 ರಂದು ಮನೆಗೆ ಬಂದು ನೋಡುವಾಗ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸವಿತರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವಾಹನ ಅಪಘಾತ 
                  ದಿನಾಂಕ 27-07-2018 ರಂದು ಮಂಗಳೂರಿನ ಕಾರ್ಗೋಲಿನ್ಸ್ ಕಂಪೆನಿಗೆ ಸೇರಿದ ಕಂಟೈನರ್ ಲಾರಿಯಲ್ಲಿ ಹಾಸನದಿಂದ ಹತ್ತಿಯನ್ನು ತುಂಬಿಸಿಕೊಂಡು ಚಾಲಕ ಜೋಸೆಫ್ ರವರು ಮಂಗಳೂರಿಗೆ ಹೋಗುತ್ತಿರುವಾಗ ಜೋಡುಪಾಲ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಖಾಸಗಿ ಬಸ್ಸನ್ನು ಅದರ ಚಾಲಕ ಗಣೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಬಸ್ಸಿನ ಚಾಲಕನಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, July 27, 2018

ರಸ್ತೆ ಅಪಘಾತ
ದಿನಾಂಕ 26/07/2018ರಂದು ಹಾಸನ ಜಿಲ್ಲೆಯ ದುದ್ದ ಹೋಬಳಿ ನಿವಾಸಿ ಹರ್ಷ ಎಂಬವರು ಅವರ ಸ್ನೇಹಿತರಾದ ರಾಬಿನ್, ಪ್ರದೀಪ್ ಮತ್ತು ಕುಮಾರ್ ಎಂಬವರೊಡನೆ ಎರಡು ಬೈಕುಗಳಲ್ಲಿ ಮಡಿಕೇರಿಯಿಂದ ಹಾಸನಕ್ಕೆ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಒಂದು ಬೈಕನ್ನು ಚಾಲಿಸುತ್ತಿದ್ದ ಪ್ರದೀಪ್ ಎಂಬವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಚಾಲಕ ಪ್ರದೀಪರ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಹಿಂಬದಿ ಸವಾರ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಗೆ ಬೈಕ್ ಡಿಕ್ಕಿ
ದಿನಾಂಕ 26/07/2018ರಂದು ಕುಶಾಲನಗರದ ನಿವಾಸಿ ಸುಮಿತ್ರ ಎಂಬವರು ಕುಶಾಲನಗರ ಪಟ್ಟಣದ ಲಾರಿ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಬೈಕ್ ಚಾಲಕ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಮಿತ್ರರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
ದಿನಾಂಕ 26/07/2018ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ಬೊಳ್ಳಂಗಡ ಮನು ಎಂಬವರು ಅವರ ಮಾರುತಿ ಓಮಿನಿ ವ್ಯಾನಿನಲ್ಲಿ ಪೊನ್ನಂಪೇಟೆ ನಗರದಿಂದ ಮನೆಗೆ ಹೋಗುತ್ತಿರುವಾಗ ಸಂತ ಅಂತೋಣಿ ಶಾಲೆಯ ಬಳಿ ಎದುರಿನಿಂದ ಒಂದು ಓಮಿನಿ ವ್ಯಾನನ್ನು ಮತ್ತಂಡ ನಟೇಶ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾಪಿಳ್ಳೆ ತೋಡು ನಿವಾಸಿ ಪಣಿ ಎರವರ ಬೊಳ್ಳಿ ಎಂಬವರಿಗೆ ಡಿಕ್ಕಿಪಡಿಸಿದ ಪರಿಣಾಮ ಬೊಳ್ಳಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 26/07/2018ರಂದು ಸುಂಟಿಕೊಪ್ಪ ಬಳಿಯ ಕೆದಕಲ್ ನಿವಾಸಿ ವೈ.ಟಿ.ಪ್ರಶಾಂತ್ ಎಂಬವರು ಅವರ ಕಾರಿನಲ್ಲಿ ಮಡಿಕೇರಿಯಿಂದ ಕೆದಕಲ್‌ನ ಅವರ ಮನೆಗೆ ಹೋಗುತ್ತಿರುವಾಗ ಮನೆಯ ಬಳಿ ಕೆದಕಲ್ ನಿವಾಸಿ ವಿನೋದ್ ಎಂಬಾತನು ಬೈಕಿನಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಪ್ರಶಾಂತ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿಗೆ ಕಾರು ಡಿಕ್ಕಿ
ದಿನಾಂಕ 26/07/2018ರಂದು ದಕ್ಷಿಣ ಕನ್ನಡ ಜಿಲ್ಲೆಯ ಪರಂಗಿಪೇಟೆ ನಿವಾಸಿ ಸುಲೈಮಾನ್ ಎಂಬವರು ಅವರ ಲಾರಿಯಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಕಾರ್ಕಳದಿಂದ ಅರಮೇರಿಗೆ ಹೋಗುತ್ತಿರುವಾಗ ಕಗ್ಗೋಡ್ಲು ಗ್ರಾಮದ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿ ಹಾಗೂ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 25/07/2018ರಂದು ಪೊನ್ನಂಪೇಟೆ ಬಳಿಯ ಮತ್ತೂರು ನಿವಾಸಿ ವಿಬಿನ್ ಎಂಬವರು ಮನೆಯ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೃತ ವಿಬಿನ್ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಸಾವು
ದಿನಾಂಕ 25/07/2018ರಂದು ಕುಟ್ಟ ಬಳಿಯ ಸಿಂಕೋನ ಕಾಲೋನಿ ನಿವಾಸಿ ಶ್ರೀಜೇಶ್ ಎಂಬವರು ಅವರ ರಿಕ್ಷಾದಲ್ಲಿ ಕೇಂಬುಕೊಲ್ಲಿಯಿಂದ ಕುಟ್ಟದ ಕಡೆಗೆ ಬರುತ್ತಿರುವಾಗ ಪೈತ್ ಎಸ್ಟೇಟಿನ ಬಳಿ ಓರ್ವ ಅಪರಿಚಿತ ವ್ಯಕ್ತಿ ನಿತ್ರಾಣಗೊಂಡು ಚರಂಡಿಯಲ್ಲಿ ಬಿದ್ದಿರುವುದನ್ನು ಕಂಡು ಅವರನ್ನು ಚಿಕಿತ್ಸೆಗಾಗಿ ಕುಟ್ಟದ ಆಸ್ಪತ್ರೆಗೆ ದಾಖಲಿಸಿದ್ದು ರಾತ್ರಿ ವೇಳೆ ಆ ವ್ಯಕ್ತಿಯು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಭರಣ ಅಪಹರಣ
ದಿನಾಂಕ 23/07/2018ರಂದು ಕುಶಾಲನಗರ ಪಟ್ಟಣ ನಿವಾಸಿ ಇಂದಿರಾ ಎಂಬವರು ಅವರ ಮಗಳೊಂದಿಗೆ ಮೈಸೂರಿಗೆ ಹೋಗಲು ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರುತ್ತಿರುವಾಗ ನೂಕು ನುಗ್ಗಲಿನಲ್ಲಿ ಯಾರೋ ಅಪರಿಚಿತ ಮಹಿಳೆಯರು ಅವರ ಕೈಚೀಲದಲ್ಲಿದ್ದ ಸುಮಾರು ರೂ. 3,62,500/- ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 26, 2018

ಆತ್ಮಹತ್ಯೆ ಪ್ರಕರಣ
ದಿನಾಂಕ 24/07/2018ರಂದು ಮಡಿಕೇರಿ ಬಳಿಯ 2ನೇ ಮೊಣ್ಣಂಗೇರಿ ನಿವಾಸಿ ಚಂದ್ರಮ್ಮ ಎಂಬ ಮಹಿಳೆಯೊಬ್ಬರು ಮನೆಯ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗ್ರಾಮದ ನಿವಾಸಿ ಬಾಲಕೃಷ್ಣ ಎಂಬವರ ತಾಯಿ 55 ವರ್ಷ ಪ್ರಾಯದ ಚಂದ್ರಮ್ಮನವರು ವೈಯುಕ್ತಿಕ  ಸಮಸ್ಯೆಗಳಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 24/07/2018ರಂದು ಕುಶಾಲನಗರ ವ್ಯಾಪ್ತಿಯ ಚಿಕ್ಕ ಆಳುವಾರ ಗ್ರಾಮದ ನಿವಾಸಿ ಸುರೇಶ ಎಂಬವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಸುರೇಶನ ಚಿಕ್ಕಮ್ಮನೊಂದಿಗಿನ ಆಸ್ತಿಯ ವಿಚಾರದಲ್ಲಿ ಜುಗುಪ್ಸೆಗೊಂಡು ಸುರೇಶನು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಬೆದರಿಕೆ
ದಿನಾಂಕ 25/07/2018ರಂದು ನಾಪೋಕ್ಲು ಠಾಣಾ ವ್ಯಾಪ್ತಿಯ ಕಡಿಯತ್ತೂರು ನಿವಾಸಿ ಎನ್..ಎಂ.ಜಯಪ್ರಕಾಶ್ ಎಂಬವರು ಮಡಿಕೇರಿಯಿಂದ ಅವರ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಅದೇ ಗ್ರಾಮದ ನಿವಾಸಿ ವಶಿಷ್ಠ ಎಂಬವರು ಕೈಯಲ್ಲಿ ಕೋವಿ ಹಿಡಿದುಕೊಂಡು ಹಳೆ ವೈಷಮ್ಯದಿಂದ ಜಯಪ್ರಕಾಶ್‌ರವರನ್ನು ತಡೆದು ನಿಲ್ಲಿಸಿ ಗುಂಡು ಹೊಡೆದು ಕೊಲೆ ಮಾಡುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಕಳವು ಪ್ರಕರಣ
 ನಂಜರಾಯಪಟ್ನ ನಿವಾಸಿ ಹೆಚ್‌.ಬಿ.ಶಿವಕುಮಾರ್ ಎಂಬವರು ಮಂಗಳೂರಿನಲ್ಲಿ ವಾಸವಾಗಿದ್ದು  ದಿನಾಂಕ 24/07/2018ರ ರಾತ್ರಿ ವೇಳೆ ಯಾರೋ ಕಳ್ಳರು ಮನೆಯ ಸ್ನಾನ ಗೃಹದ ಬಾಗಿಲು ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು 24,500 ರೂ ಬೆಲೆಯ ಒಂದು ಎಸ್‌ಬಿಬಿಎಲ್ ಬಂದೂಕನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, July 25, 2018

ಬೀಟೆ ಮರ ಕಳವು 
             ವಿರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮದ ನಿವಾಸಿಯಾದ ಧರ್ಮಜ ಎಂಬುವವರ ಕಾಫಿ ತೋಟದಲ್ಲಿದ್ದ ಒಣಗಿದ ಬೀಟೆ ಮರವನ್ನು ಯಾರೋ ಕಳ್ಳರು ದಿನಾಂಕ 18-07-2018 ರಿಂದ 23-07-2018 ರ ಮದ್ಯ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಧರ್ಮಜರವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಮಹಿಳೆ ಆತ್ಮಹತ್ಯೆ 
            ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದ ಚೀಪೆಕೊಲ್ಲಿಯ ನಿವಾಸಿಯಾದ ಹೆಚ್ ಎಂ ವಿಠಲರವರ ತಾಯಿ ಅಮ್ಮರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 24-07-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ 
               ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ನಿವಾಸಿಯಾದ ಪ್ರಭಾಕರವರು ಕಾಫಿ ವ್ಯಾಪಾರದ ಸಂಬಂದ ದಿನಾಂಕ 24-07-2018 ರಂದು ಚೇರಂಬಾಣೆಗೆ ಹೋಗಿದ್ದು, ಅವರ ಪತ್ನಿ ಕಾಫಿ ತೋಟಕ್ಕೆ ಕೆಲಸಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ 20 ಸಾವಿರ ರೂ ನಗದು ಹಣ, ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ 
              ದಿನಾಂಕ 24-07-2018 ರಂದು ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದ ನಿವಾಸಿಯಾದ ಶ್ರೀಜಿತ್ ಎಂಬುವವರು ಮೋಟಾರು ಸೈಕಲಿನಲ್ಲಿ ಹಿಂಬದಿ ಸೀಟಿನಲ್ಲಿ ವೆಂಕಟೇಶ್ ಎಂಬುವವರನ್ನು ಕೂರಿಸಿಕೊಂಡು ಮಡಿಕೇರಿಗೆ ಬಂದು ವಾಪಾಸ್ಸು ಹೋಗುತ್ತಿರುವಾಗ ಮಡಿಕೇರಿ ನಗರದ ಕಾಮಧೇನು ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ ಅಶೋಕ್ ರಾವ್ ಎಂಬುವವರು ಓಮಿನಿ ವ್ಯಾನನ್ನು ಯಾವುದೇ ಮುನ್ನೂಚನೆ ನೀಡದೇ ಬಲಕ್ಕೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್ ಡಿಕ್ಕಿಯಾಗಿ ಹಿಂಬದಿ ಕುಳಿತ್ತಿದ್ದ ವೆಂಕಟೇಶ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಅಪರಿಚಿತ ಶವ ಪತ್ತೆ 
                ದಿನಾಂಕ 24-07-2018 ರಂದು ಅರಣ್ಯ ರಕ್ಷಕರಾದ ಪೂಣಚ್ಚರವರು ಗಸ್ತುವಿನಲ್ಲಿರುವಾಗ ಆನೆ ಕಾವಾಡಿ ಮಂಜು ಎಂಬುವವರು ಅತ್ತೂರು ಮೀಸಲು ಅರಣ್ಯದೊಳಗೆ ಅಪರಿಚಿತ ಶವ ಕಂಡು ಬಂದಿರುವುದಾಗಿ ತಿಳಿಸಿದ ಮೇರೆಗೆ ನೋಡಲಾಗಿ ಅಂದಾಜು ಒಂದು ತಿಂಗಳ ಹಿಂದೆ ಮೃತಪಟ್ಟಿರುವಂತ ಶವದ ದೇಹದ ಭಾಗವು ಕೊಳೆತು ಹೋಗಿದ್ದು, ಶರೀರದ ಭಾಗಗಳು ಬೇರೆ ಬೇರೆಯಾಗಿದ್ದು, ಮರದ ಕೊಂಬೆಯಲ್ಲಿ ಹಗ್ಗ ಕಂಡು ಬಂದಿದ್ದು, ಈ ಬಗ್ಗೆ ಪೂಣಚ್ಚನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, July 24, 2018

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ದಿನಾಂಕ 14/07/2018ರಂದು ವಿರಾಜಪೇಟೆ ಬಳಿಯ ರುದ್ರಗುಪ್ಪೆ ನಿವಾಸಿ ಕೆ.ಎ.ಗಣೇಶ ಎಂಬವರ ಪತ್ನಿ ರೋಹಿಣಿ ಎಂಬವರು ದೀರ್ಘ ಕಾಲದ ಹೊಟ್ಟೆ ನೋವು ಮತ್ತು ತಲೆ ನೋವನ್ನು ಸಹಿಸಲಾರದೆ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದವರು ದಿನಾಂಕ 22/07/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, July 23, 2018

ಹಣದ ವಿಚಾರ ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದ ಶ್ರೀಮತಿ ಪೂವಮ್ಮ ರವರು ತಮ್ಮ ತಂದೆಯ ಪಾಲಿನ ಜಾಗವನ್ನು ಒಂದು ಲಕ್ಷ ರೂ;ಗಳಿಗೆ ಮಾರಾಟ ಮಾಡಿದ್ದು ಅದರಲ್ಲಿ 71 ಸಾವಿರ ರೂಪಾಯಿಗಳನ್ನು ತಮ್ಮ ಸಹೋದರ ಮಂದಣ್ಣನವರಿಗೆ ನೀಡಿದ್ದು, ದಿನಾಂಕ 22-7-2018 ರಂದು ಬೆಳಗ್ಗೆ ಶ್ರೀಮತಿ ಪೂವಮ್ಮನವರು ತಮ್ಮ ಮನೆಯಲ್ಲಿರುವಾಗ್ಗೆ ಆರೋಪಿ ಮಂದಣ್ಣನವರು ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ 1 ಲಕ್ಷದಲ್ಲಿ ಉಳಿದ ಹಣವನ್ನು ನೀಡುವಂತೆ ಜಗಳ ಮಾಡಿ ದೊಣ್ಣೆಯಿಂದ ಶ್ರೀಮತಿ ಪೂವಮ್ಮನವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ:

      ದಿನಾಂಕ 22-7-2018ರಂದು ಥಾಮಸ್ ಡಿಸೋಜಾ ಎಂಬವರು ತಮ್ಮ ಕಾರನ್ನು ಮಡಿಕೇರಿ ನಗರದ ಎಂ.ಎಂ. ವೃತ್ತದಲ್ಲಿ ನಿಲ್ಲಿಸಿದ್ದು ಸದರಿ ಕಾರಿಗೆ ಬಾಲಚಂದ್ರ ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದಿಸೋಜಾರವರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಅಪಘಾತ:

      ದಿನಾಂಕ 22-7-2018 ರಂದು ಮಡಿಕೇರಿ ತಾಲೋಕು ಇಬ್ನಿವಳವಾಡಿ ಗ್ರಾಮದ ನಿವಾಸಿ ಎಂ.ಯು.ಮುತ್ತಪ್ಪ ಎಂಬವರು ತಮ್ಮ ಬಾಪ್ತು ಕಾರಿನಲ್ಲಿ ಸುಂಟಿಕೊಪ್ಪ ಕಡೆಯಿಂದ ಬೋಯಿಕೇರಿಯಲ್ಲಿರುವ ತಮ್ಮ ಮನೆಗೆ ಬರುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಕುಶಾಲನಗರ-ಮಡಿಕೇರಿ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಯು. ಮುತ್ತಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, July 20, 2018

ಹಲ್ಲೆ ಪ್ರಕರಣ
ದಿನಾಂಕ 18/07/2018ರಂದು ಶ್ರೀಮಂಗಲ ಬಳಿಯ ಕುರ್ಚಿ ನಿವಾಸಿ ಮಚ್ಚಾಮಾಡ ಕರುಂಬಯ್ಯ ಎಂಬವರು ನವೀನ ಎಂಬವರೊಡನೆ ವ್ಯವಹಾರದ ನಿಮಿತ್ತ ಕುಟ್ಟ ನಗರಕ್ಕೆ ಹೋಗಿ ಅಲ್ಲಿನ ಕಾನೂರು ರಸ್ತೆಯಲ್ಲಿರುವ ಬ್ರಾಂದಿ ಅಂಗಡಿಗೆ ಹೋದಾಗ ಅಲ್ಲಿ ತೀತಿರ ರಾಜ ಎಂಬವರು ಕ್ಷುಲ್ಲಕ ಕಾರಣಕ್ಕೆ ಕರುಂಬಯ್ಯನವರೊಂದಿಗೆ ಜಗಳವಾಡಿ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 17/07/2018ರಂದು ಮಡಿಕೇರಿ ಬಳಿಯ ಹೆಬ್ಬೆಟ್ಟಗೇರಿ ನಿವಾಸಿ ಹೇಮಾವತಿ ಎಂಬವರ ಮನೆಗೆ ಅವರ ಪತಿಯ ತಮ್ಮ ಮುತ್ತಣ್ಣ ಎಂಬಾತನು ಮದ್ಯಪಾನ ಮಾಡಿ ಬಂದು ಮನೆಯಲ್ಲಿದ್ದ ಮುತ್ತಣ್ಣನ ತಂದೆ ಪೂವಯ್ಯನವರಿಗೆ ಥಳಿಸಿ ಮನೆಯಿಂದ ಹೊರಗೆ ಹಾಕಿದುದಲ್ಲದೆ ಮನೆಯ ಕಿಟಕಿಯ ಗಾಜನ್ನು ಒಡೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 18/07/2018ರಂದು ನಾಪೋಕ್ಲು ಬಳಿಯ ಎಮ್ಮೆಮಾಡು ನಿವಾಸಿ ಶಂಷುದ್ದೀನ್ ಎಂಬವರು ಅವರ ಬೈಕಿನಲ್ಲಿ ನಾಪೋಕ್ಲಿನಿಂದ ಎಮ್ಮೆಮಾಡಿಗೆ ಹೋಗುತ್ತಿರುವಾಗ ಚೋನಕೆರೆಯ ಬಳಿ ಎದುರಿನಿಂದ ಎಮ್ಮೆಮಾಡಿನ ಅಬ್ದುಲ್ಲಾ ಎಂಬವರು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಂಷುದ್ದೀನ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 19, 2018

ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆ:
     ದಿನಾಂಕ 18-7-2018 ರಂದು ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಅರಣ್ಯ ವೀಕ್ಷಕರಾದ ಟಿ.ಕೆ. ದಿನೇಶ್ ರವರು ಅರಣ್ಯ ಗಸ್ತಿನಲ್ಲಿರುವಾಗ್ಗೆ ಬಸವನಳ್ಳಿಯ ಮ್ಯಾಗ್‍ದೋರ್ ಎಸ್ಟೇಟಿನ ಬಳಿ ಮೀಸಲು ಅರಣ್ಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದ್ದು  ಪಕ್ಕದಲ್ಲಿ ಒಂದು ರೌಂಡ್ ಅಪ್ ಕಳೆನಾಶಕದ ಬಾಟಲ್ ಪತ್ತೆಯಾಗಿದ್ದು ಸದರಿ ಅಪರಿಚಿತ ವ್ಯಕ್ತಿ ಕಳೆನಾಶಕವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ:
     ದಿನಾಂಕ 16-7-2018 ರಂದು ಸಮಯ 11-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರದ ಶಿವಕೇರಿಯಲ್ಲಿ ವಾಸವಾಗಿರುವ ಶ್ರೀಮತಿ ಜವರಮ್ಮ ಎಂಬವರು  ವಿರಾಜಪೇಟೆ ಸರಕಾರಿ ಆಸ್ಪತ್ರೆಯಿಂದ ತಮ್ಮ ಮನೆಯ ಕಡೆಗೆ ಕೋರ್ಟ ಮುಂಭಾಗದ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕಾರು ಅವರಿಗೆ ಡಿಕ್ಕಯಾಗಿದ್ದು, ಪರಿಣಾಮವಾಗಿ ಸದರಿ ಜವರಮ್ಮನವರು ಕೆಳಗೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದು, ಸದರಿ ಅಪಘಾತಪಡಿಸಿದ ಕಾರನ್ನು ಚಾಲಕ ನಿಲ್ಲಿಸದೇ ಸ್ಥಳದಿಂದ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Wednesday, July 18, 2018

ರಸ್ತೆ ಅಪಘಾತ
ದಿನಾಂಕ 17/07/2018ರಂದು ಮರಗೋಡು ನಿವಾಸಿ ತಿಮ್ಮಪ್ಪ ಎಂಬವರು ಅವರ ಮೋಟಾರು ಬೈಕಿನಲ್ಲಿ ಮಡಿಕೇರಿಯಿಂದ ಹಾಕತ್ತೂರಿಗೆ ಹೋಗುತ್ತಿರುವಾಗ ಕಗ್ಗೋಡ್ಲು ಬಳಿ ಮುಂಭಾಗದಲ್ಲಿ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಒಮ್ಮೆಲೆ ನಿಲ್ಲಿಸಿದ್ದರಿಂದ ತಿಮ್ಮಪ್ಪನವರು ಕಾರನ್ನು ದಾಟಿ ಹೋಗುವಾಗ ಕಾರಿನ ಕಾರಿನ ಕನ್ನಡಿ ತಾಗಿ ಕೆಳಗೆ ಬಿದ್ದಾಗ ಎದುರಿನಿಂದ ಒಂಡು ಮೋಟಾರು ಬೈಕಿನ ಚಾಲಕ ಅತಿ ವೇಗದಿಂದ ಬಂದು ತಿಮ್ಮಪ್ಪನವರ ಮೇಲೆ ಹತ್ತಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರಿಗೆ ಕಾರು ಡಿಕ್ಕಿ
ದಿನಾಂಕ 17/07/2018ರಂದು ಮಡಿಕೇರಿ ನಿವಾಸಿ ವಿಮಲ ಎಂಬವರು ಅವರ ತಂಗಿ ಧರಣಿ ಎಂಬವರೊಡನೆ ಸ್ಕೂಟರಿನಲ್ಲಿ ನಗರದ ಹಿಲ್‌ ರಸ್ತೆ ಮೂಲಕ ಮಾರ್ಕೆಟ್ ಕಡೆಗೆ ಹೋಗುತ್ತಿರುವಾಗ ಮಾರ್ಕೆಟ್ ಬಳಿ ಹಿಂಭಾಗದಿಂದ ಒಂದು ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಷರೀಫ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಂದಿನಿಂದ ವಿಮಲರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ವಿಮಲರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪಘಾತ ಗಾಯಾಳು ಸಾವು
ದಿನಾಂಕ 10/07/2018ರಂದು ಕುಶಾಲನಗರದ ನಿಸರ್ಗಧಾಮದ ಬಳಿ ಹೈದರ್ ಎಂಬವರು ಸ್ಕೂಟರಿನಲ್ಲಿ ಬರುತ್ತಿರುವಾಗ ಹಿಂಬದಿಯಿಂದ ಒಂದು ಕಾರು ಡಿಕ್ಕಿಯಾಗಿ ಗಾಯಾಳುವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದ ಹೈದರ್‌ರವರು ದಿನಾಂಕ 16/07/2018ರಂದು ಮೃತರಾಗಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಕುಶಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 16/07/2018ರಂದು ಶನಿವಾರಸಂತೆ ಬಳಿಯ ಹಾರಳ್ಳಿ ನಿವಾಸಿ ಕೆ.ಆರ್.ಲಕ್ಷ್ಮಪ್ಪ ಎಂಬವರು ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೃತರ ಲಕ್ಷ್ಮಪ್ಪನವರು ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಈ ಸಂಬಂಧ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ದಿನಾಂಕ 16/07/2018ರಂದು ಸುಂಟಿಕೊಪ್ಪ ಬಳಿಯ ಅಂಜನಗೇರಿ ಬೆಟ್ಟಗೇರಿ ಗ್ರಾಮದ ನಿವಾಸಿ ಜಿ.ಎಂ.ಈರಪ್ಪ ಎಂಬವರು ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಈರಪ್ಪನವರಿಗೆ ಅನೇಕ ವರ್ಷಗಳಿಂದ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, July 17, 2018

ಅಂಗನವಾಡಿ ಕಳವು
ಕುಶಾಲನಗರ ಬಳಿಯ ಶಿರಂಗಾಲ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿನಾಂಕ 13/07/2018 ರಿಂದ 15/07/2018ರ ವರೆಗೆ ಮಳೆಯ ಕಾರಣ ರಜೆ ಇದ್ದು ದಿನಾಂಕ 16/07/2018ರಂದು ಕೇಂದ್ರದ ಸಹಾಯಕಿ ಲತಾ ಎಂಬವರು ಅಂಗನವಾಡಿಯನ್ನು ತೆರೆಯಲೆಂದು ಹೋದಾಗ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿ ಒಳಗಿರಿಸಿದ್ದ ಸುಮಾರು ರೂ.2000/- ಮೌಲ್ಯದ ಅನಿಲ ಸಿಲಿಂಡರ್ ಹಾಗೂ ಪೂರಕ ಪೌಷ್ಠಿಕ ಆಹಾರವನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ 
ದಿನಾಂಕ 16/07/2018ರಂದು ಕುಶಾಲನಗರ ಬಳಿಯ ರಂಗ ಸಮುದ್ರ ನಿವಾಸಿ ಮುತ್ತಪ್ಪ ಎಂಬವರು ಅವರ ರಿಕ್ಷಾದಲ್ಲಿ ಕುಶಾಲನಗರದ ಐಬಿ ರಸ್ತೆಯಿಂದ ಬಿ.ಎಂ.ರಸ್ತೆಗೆ ಪ್ರವೇಶಿಸುತ್ತಿರುವಾಗ ಕುಶಾಲನಗರದ ಬಸ್ ನಿಲ್ದಾಣದ ಕಡೆಯಿಂದ ಒಂದು ಬೈಕನ್ನು ಅದರ ಸವಾರ ತಿಮ್ಮಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುತ್ತಪ್ಪನವರ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮುತ್ತಪ್ಪನವರು ರಿಕ್ಷಾದಿಂದ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ವ್ಯಕ್ತಿ ಸಾವು
ದಿನಾಂಕ 16/07/2018ರಂದು ಸುಂಟಿಕೊಪ್ಪ ಬಳಿಯ ಅಂದಗೋವೆಯ ನಿವಾಸಿ ಪಿ.ಎಸ್.ಗಣೇಶ್ ಎಂಬವರು ಅವರ ತೋಟದ ದಾರಿಯಲ್ಲಿದ್ದ ಹಲಸಿನ ಹಣ್ಣಿನ ಮರಕ್ಕೆ ಬಿದಿರಿನ ಏಣಿಯ ಮೂಲಕ ಏರಿ ಹಲಸಿನ ಹಣ್ಣನ್ನು ಕಡಿದು ಕೆಳಕ್ಕೆ ಇಳಿಯುತ್ತಿರುವಾಗ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
ದಿನಾಂಕ 16/07/2018ರಂದು ಕುಟ್ಟ ಬಳಿಯ ಪೈತ್ ತೋಟದ ಕಾರ್ಮಿಕ ಮಲ್ಲಿಕಾರ್ಜುನ ಎಂಬವರ ಮಗಳು ಮಾಲ ಎಂಬಾಕೆಯು ಕುಟ್ಟದ ತಂದೆಯ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮ,ಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಮಾಲಳ ಪತಿ ಇತ್ತೀಚೆಗೆ ನಿಧನಹೊಂದಿದ್ದು  ಪತಿಯ ಸಾವಿನ ದುಃಖವನ್ನು ಭರಿಸಲಾಗದೆ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, July 16, 2018

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದ ನಿವಾಸಿ ಹೆಚ್.ಟಿ.ಪ್ರವೀಣ್ ಕುಮಾರ್ ಎಂಬವರ ಪತ್ನಿ ಮಂಗಳ ಎಂಬವರು ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ದಿನಾಂಕ 11-7-2018 ರಂದು ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ದಿನಾಂಕ 15-7-2018 ರಂದು ಸದರಿ ಮಂಗಳರವರ ಮೃತದೇಹವು ಅವರ ಮನೆಯ ಹತ್ತಿರದ ಬಾವಿಯಲ್ಲಿ ದೊರೆತಿದ್ದು, ಆಕೆ ಸದರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಆಕೆಯ ಪತಿ ಹೆಚ್.ಟಿ. ಪ್ರವೀಣ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

     ಮಡಿಕೇರಿ ನಗರದ ಪುಟಾಣಿನಗರದ ನಿವಾಸಿ ಕೆ.ಎನ್. ರವಿಚಂದ್ರ ಎಂಬವರ ಸಹೋದರ ಕೆ.ಎನ್. ಸ್ವಾಮಿ ಎಂಬವರು ಆಟೋ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು ದಿನಾಂಕ 9-7-2018 ರಂದು ಬೆಳಗ್ಗೆ 11-00 ಗಂಟೆಗೆ ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಕೆ.ಎನ್. ರವಿಚಂದ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಲಾರಿ ಡಿಕ್ಕಿ.

     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ದಿನಾಂಕ 15-7-2018 ರಂದು ಬೆಳಗ್ಗೆ 7-30 ಗಂಟೆಯ ಸಮಯದಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ, ಪರಿಣಾಂ ಕಾರು ಜಖಂಗೊಂಡು ಕಾರು ಚಾಲಕ ಇರ್ಷಾದ್ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ಮಹಿಳೆ ಸಾವು:

     ಮಡಿಕೇರಿ ತಾಲೋಕು ಬೇಂಗೂರು ಗ್ರಾಮದ ನಿವಾಸಿ ಶ್ರೀಮತಿ ವಿಶಾಲಾಕ್ಷಿ ಎಂಬವರ ಪತಿ ಮಣಿ ಎಂಬವರು ಕೆಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 15-7-2018 ರಂದು ತನ್ನ ವಾಸದ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ.

     ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ನಿವಾಸಿ ಡ್ಯಾನಿಯಲ್ ಪೌಲ್ ಎಂಬವರು ದಿನಾಂಕ 15-7-2018 ರಂದು ಕೈಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪದ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, July 15, 2018

ಕಾರು ಅಪಘಾತ 
           ದಿನಾಂಕ 14-07-2018 ರಂದು ಜಾರ್ಕಾಂಡ್ ರಾಜ್ಯದ ಜಮ್ ಷದ್ ಪುರದವರಾದ ಅಮಿತ್ ತಿವಾರಿ ಎಂಬುವವರು ತನ್ನ ತಂದೆ-ತಾಯಿ ಹಾಗೂ ಸಹೋದರನೊಂದಿಗೆ ಕಾರಿನಲ್ಲಿ ಮಡಿಕೇರಿಗೆ ಪ್ರವಾಸಕ್ಕೆಂದು ಬರುತ್ತಿರುವಾಗ ಸುಂಟಿಕೊಪ್ಪ ಠಾಣಾ ಸರಹದ್ದಿನ 7 ನೇ ಹೊಸಕೋಟೆ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದ ಅಮಿತ್ ತಿವಾರಿಯವರು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರು ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, July 14, 2018

ಮನುಷ್ಯ ಕಾಣೆ ಪ್ರಕರಣ
ದಿನಾಂಕ 12/07/2018ರಂದು ಮೈಸೂರಿನ ಪಿರಿಯಾಪಟ್ನ ನಿವಾಸಿ 70 ವರ್ಷ ಪ್ರಾಯದ ಅಬ್ದುಲ್ ಖಾನ್ ಎಂಬವರು ಪಿರಿಯಾಪಟ್ಟಣ ನಗರದಿಂದ ಬೈಲುಕುಪ್ಪೆಯಲ್ಲಿನ ಲಕ್ಷ್ಮಿ ಕ್ಲಿನಿಕ್‌ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, July 13, 2018

ಮಹಿಳೆ ಆತ್ಮಹತ್ಯೆ
ದಿನಾಂಕ 11/07/2018ರಂದು ನಾಪೋಕ್ಲು ಬಳಿಯ ಚೇಲಾವರದ ವಾಟರ್ ಫಾಲಿಂಗ್ ಎಸ್ಟೇಟಿನಲ್ಲಿ ಕೆಲಸ ಮಾಡಿಕೊಂಡಿರುವ ಗೋವಿಂದರಾಜ್ ಎಂಬವರ ಪತ್ನಿ ರಾಜಕುಮಾರಿ ಎಂಬವರು ಚೇಲಾವರದ ಅವರ ತೋಟದ ಬಳಿ ಇರುವ ಹೊಳೆಗೆ ಹಾರಿ ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗೋವಿಂದರಾಜ್ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗಿನಿಂದ ರಾಜಕುಮಾರಿರವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 12, 2018


ಕಾರಿಗೆ ಜೀಪು ಡಿಕ್ಕಿ:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಂತೂರು ಗ್ರಾಮದ ನಿವಾಸಿ ಬಿ.ಎಸ್. ದೀಕ್ಷಿತ್ ಎಂಬವರು ದಿನಾಂಕ 11-7-2018 ರಂದು ತನ್ನ ಕುಟುಂಬದವರೊಂದಿಗೆ ತಾಳತ್‍ಮನೆ ಮಾರ್ಗವಾಗಿ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದಾಗ ಸಮಯ 11-30 ಗಂಟೆಗೆ ಕಾಟಕೇರಿ ಬಳಿ ತಲುಪುವಾಗ್ಗೆ ಎದುರುಗಡೆಯಿಂದ ಕೆಎ-12ಎಂ3208ರ ಜೀಪನ್ನು ಅದರ ಚಾಲಕ ನಿರ್ಲಕ್ಷತನದಿಂದ ಚಾಲಿಸಿ ಕೊಂಡು ಬಂದು ಬಿ.ಎಸ್. ದೀಕ್ಷಿತ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ಬಿ.ಎಸ್. ದೀಕ್ಷಿತ್ ರವರ ಅಕ್ಕನಮಗಳಾದ ಲಿಪಿಕಳಿಗೆ ಗಾಯವಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೀಪಿಗೆ ಕಾರು ಡಿಕ್ಕಿ:
     ಮಡಿಕೇರಿ ತಾಲೋಕಿನ ಕಾಟಕೇರಿ ಗ್ರಾಮದ ನಿವಾಸಿ ಕೆ.ಕೆ. ಶಂಕರ್ ಎಂಬವರು ತಮ್ಮ ಬಾಪ್ತು ಕೆಎ-12 ಎಂ3208ರ ಜೀಪನ್ನು ದಿನಾಂಕ 11-7-2018 ರಂದು ಬೆಳಗ್ಗೆ 11-30 ಗಂಟಗೆ ಕಾಟಕೇರಿಯಿಂದ ಮಡಿಕೇರಿ ಕಡೆಗೆ ಚಾಲಿಸಿಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಬಿ.ಎಸ್. ದೀಕ್ಷಿತ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆ.ಕೆ. ಶಂಕರ್ ರವರು ಚಲಾಯಿಸುತ್ತಿದ್ದ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಜೀಪು ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, July 11, 2018

ಗುಮಾನಿ ವ್ಯಕ್ತಿಯ ಬಂಧನ
ದಿನಾಂಕ 10/07/2018ರಂದು ಕುಸಾಲನಗರ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲೇಶ್‌ ನಾಯಕ್ ಎಂಬವರು ಗೃಹರಕ್ಷಕ ದಳದ ಸಿಬ್ಬಂದಿ ಸ್ವಾಮಿ ಎಂಬವರೊಂದಿಗೆ ರಾತ್ರಿ ಗಸ್ತಿನಲ್ಲಿರುವಾಗ ಕುಶಾಲನಗರದ ಗೋಪಾಲ ಸರ್ಕಲ್ ಬಳಿಯ ಕಟ್ಟಡವೊಂದರ ಬಳಿ ರಾತ್ರಿ ಅವೇಳೆಯಲ್ಲಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಕಂಡು ಅನುಮಾನದಿಂದ ವಿಚಾರಿಸಿದಾಗ ಆತನು ಸರಿಯಾದ ಉತ್ತರ ನೀಡದೆ ಆತನ ಇರುವಿಕೆಯನ್ನು ಮರೆಮಾಚಿಕೊಂಡಿದ್ದು ನಂತರ ಪುನಃ ವಿಚಾರಿಸಿದಾಗ ಆತನ ಹೆಸರನ್ನು ವಿಜಯಕುಮಾರ್ ಜಿ, ತಂದೆ ಗುಣಶೇಖರ ವಾಸ ಕೂಡ್ಲೂರು ಎಂಬುದಾಗಿ ತಿಳಿಸಿದ್ದು ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿ ಇದ್ದಿರಬಹುದಾಗಿ ಸಂಶಯಿಸಿ ಆತನನ್ನು ವಶಕ್ಕೆ ಪಡೆದು ಕುಶಾಲನಗರ ಪಟ್ಟಣ ಠಾಣೆಗೆ ಹಾಜರು ಪಡಿಸಿ ಆತನ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ರಸ್ತೆ ಅಪಘಾತ
ದಿನಾಂಕ 09/07/2018ರಂದು ಮಡಿಕೇರಿ ನಗರದ ಕಾವೇರಿ ಬಡಾವಣೆ ನಿವಾಸಿ ಎಂ.ಎ.ಜಫ್ರುಲ್ಲಾ ಎಂಬವರು ಅವರ ಭಾವ ಜಮೀರ್‌ ಅಹಮದ್‌ರವರೊಂದಿಗೆ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿಯ ರಾಜರಾಜೇಶ್ವರಿ ಶಾಲೆಯ ಬಳಿ ಕಾರು ಚಾಲಿಸುತ್ತಿದ್ದ ಜಮೀರ್‌ ಅಹಮದ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅವಘಢ ಪ್ರಕರಣ
ದಿನಾಂಕ 10/07/2018ರಂದು ಕುಶಾಲನಗರದ ಹೆಚ್‌ಆರ್‌ಪಿ ಕಾಲೊನಿ ನಿವಾಸಿ ಲೋಹಿತ್ ಕುಮಾರ್ ಎಂಬವರು ಕುಶಾಲನಗರದ ಬೈಪಾಸ್‌ ರಸ್ತೆಯ ಬಳಿ ಪೊಲಿಸ್ ಮೈದಾನದ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲೇ ಇರುವ ಅಂಗಡಿಗೆ ಹೋಗಿದ್ದಾಗ ಕೂಡಿಗೆ ನಿವಾಸಿ ಅಬ್ದುಲ್ ಲತೀಫ್‌ ಎಂಬವರು ಅವರ ಇನ್ನೋವಾ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅವರ ಮುಂದೆ ಹೋಗುತ್ತಿದ್ದ ಒಂದು ಒಂದು ಮಾಟಿಜ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮಾಟಿಜ್ ಕಾರು ಲೋಹಿತ್‌ ಕುಮಾರ್‌ವರು ನಿಲ್ಲಿಸಿದ್ದ ಅವರ ಕಾರಿಗೆ ಡಿಕ್ಕಿಯಾಗಿ ಮೂರೂ ಕಾರುಗಳಿಗೆ ಹಾನಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್ ಅಪಘಾತ
ದಿನಾಂಕ 10/07/2018ರಂದು  ಪಿರಿಯಾಪಟ್ಟಣದ ಮರೂರುಕೊಪ್ಪ ನಿವಾಸಿ ಹೈದರ್ ಎಂಬವರು ಒಂದು ಸ್ಕೂಟರಿನಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿ ಗುಡ್ಡೆಹೊಸೂರು ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿರುವಾಗ ಹೈದರ್‌ರವರ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹೈದರ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು ಹೈದರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, July 10, 2018

ವ್ಯಕ್ತಿಯ ಆಕಸ್ಮಿಕ ಸಾವು
 ದಿನಾಂಕ 09/07/2018 ರಂದು ಭಾಗಮಂಡಲ ಬಳಿಯ ಬೇಂಗೂರು ನಿವಾಸಿ ಹೆಚ್‌.ಜಿ.ಪೂವ ಎಂಬವರು ಕುಂದಚೇರಿ ಗ್ರಾಮದ ಕೆದಂಬಾಡಿ ಸತೀಶ್ ಎಂಬವರ ತೋಟದಲ್ಲಿ ಕಬ್ಬಿಣದ ಏಣಿಯನ್ನು ಇಟ್ಟುಕೊಂಡು ಮರಗಸಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಹರಿದು ಆಕಸ್ಮಿಕವಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ ಪ್ರಕರಣ
ದಿನಾಂಕ 07/07/2018ರಂದು ವಿರಾಜಪೇಟೆ ಬಳಿಯ ಕೊಟ್ಟೋಳಿ ನಿವಾಸಿ ಸಿ.ಎಸ್.ಸುಬ್ಬಯ್ಯ ಎಂಬ 69 ವರ್ಷ ಪ್ರಾಯದ ವ್ಯಕ್ತಿಯು ವಿರಾಜಪೇಟೆ ಪಟ್ಟಣಕ್ಕೆ ಬಸ್ಸು ಹತ್ತಿ ಹೋಗಿದ್ದು ಮರಳಿ ಬಂದಿರುವುದಿಲ್ಲವೆಂದು ಅವರ ಪತ್ನಿ  ಲೀಲಾ ಸಿ.ಎಸ್. ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Monday, July 9, 2018

ಸ್ಕೂಟರಿಗೆ ಬೈಕ್ ಡಿಕ್ಕಿ

     ವಿರಾಜಪೇಟೆ ತಾಲೋಕು ಅಮ್ಮತ್ತಿ ಗ್ರಾಮದಲ್ಲಿ ವಾಸವಾಗಿರುವ ಮಹಮ್ಮದ್ ರಶೀದ್ ಎಂಬವರು ದಿನಾಂಕ 6-7-2018 ರಂದು ಸ್ಕೂಟರ್‍ ನಲ್ಲಿ ಅಮ್ಮತ್ತಿಯ ಕಡೆಗೆ ಹೋಗುತ್ತಿದ್ದಾಗ ರಂಗಸಮುದ್ರದ ಚಿಕ್ಲಿಹೊಳೆ ಜಂಕ್ಷನ್ ಬಳಿ ತಲುಪುವಾಗ್ಗೆ ಹಿಂದಿನಿಂದ ವ್ಯಕ್ತಿಯೋರ್ವ ಮೋಟಾರ್‍ ಸೈಕಲನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಟಿಕೊಂಡು ಬಂದು ಮಹಮ್ಮದ್ ರಶೀದ್‍ ರವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರ ರಸ್ತೆಯಮೇಲೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧವಾಗಿ ಕುಶಾಲನಗರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಲ್ಲಿಸಿದ್ದ ಲಾರಿಗೆ ಕಂಟೈನರ್ ಡಿಕ್ಕಿ:

     ಆಂದ್ರಪ್ರದೇಶ ಮೂಲದ ವ್ಯಕ್ತಿ ವಾಜೀದ್ ಪಾಷ ಎಂಬವರು ದಿನಾಂಕ 7-7-2018 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ತಮ್ಮ ಲಾರಿಯನ್ನು ಮಡಿಕೇರಿ ಕಡೆಯಿಂದ ಮಂಗಳೂರಿನ ಕಡೆಗೆ ಚಾಲಿಸಿಕೊಂಡು ಹೋಗಿ ಮದೆ ಗ್ರಾಮದ ದೇವರಕೊಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲಿ ತಮ್ಮ ಲಾರಿಯನ್ನು ನಿಲ್ಲಿಸಿ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಲಾರಿಯ ಬಳಿ ಬಂದಾಗ ಲಾರಿಯ ಮುಂಭಾಗ ಜಖಂಗೊಂಡಿರುವುದು ಕಂಡು ಬಂದಿದ್ದು, ಸದರಿ ಲಾರಿಯ ಮುಂದೆ ನಿಲುಗಡೆಗೊಳಿಸಿದ್ದ ಲಾರಿಯನ್ನು ಹಿಂದಕ್ಕೆ ಚಲಾಯಿಸಿದ ಸಂದರ್ಭದಲ್ಲಿ ವಾಜೀದ್ ಬಾಷರವರ ಲಾರಿಗೆ ಡಿಕ್ಕಿಯಾಗಿ ಜಖಂಗೊಂಡಿರುವುದಾಗಿದ್ದು, ಈ ಸಂಬಂಧ ಸದರಿ ಲಾರಿ ಚಾಲಕ ವಾಜೀದ್ ಪಾಷರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, July 8, 2018

ಸ್ಕೂಟಿಗೆ ಕಾರು ಡಿಕ್ಕಿ:

      ಸೋಮವಾರಪೇಟೆ ನಗರದ ಕೆಂಚಮ್ಮನ ಬಾಣೆ ಬಡಾವಣೆಯಲ್ಲಿ ವಾಸವಾಗಿರುವ ಕೆ.ಎಸ್. ಪುಟ್ಟಸ್ವಾಮಿ ಎಂಬವರು ದಿನಾಂಕ 7-7-2018 ರಂದು ಬೆಳಗ್ಗೆ ಸಮಯ 11-00 ಗಂಟೆಗೆ ಸ್ಕೂಟಿಯಲ್ಲಿ ಸೋಮವಾರಪೇಟೆ ನಗರದ ಕಡೆಗೆ ಹೋಗುತ್ತಿದ್ದಾಗ ಸೋಮವಾರಪೇಟೆ ನಗರದ ಅಣ್ಣಮ್ಮ ಗ್ಯಾರೇಜು ಬಳಿ ತಲುಪುವಾಗ್ಗೆ ಹಿಂದಿನಿಂದ ವ್ಯಕ್ತಿಯೋರ್ವ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆ.ಎಸ್. ಪುಟ್ಟಸ್ವಾಮಿಯವರು ಚಲಾಯಿಸುತ್ತಿದ್ದ ಸ್ಕೂಟಿರಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದು, ಪರಿಣಾಮ ಸ್ಕೂಟಿ ರಸ್ತೆಯ ಮೇಲೆ  ಬಿದ್ದು ಕೆ.ಎಸ್. ಪುಟ್ಟಸ್ವಾಮಿಯವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮನೆಗೆ ನುಗ್ಗಿ ನಗ ನಾಣ್ಯ ಕಳವು:

     ಮಡಿಕೇರಿ ನಗರದ ಇಂದಿರಾನಗರದಲ್ಲಿ ವಾಸವಾಗಿರುವ ಶ‍್ರೀಮತಿ ಹೊನ್ನಮ್ಮ ಎಂಬವರ ಮನೆಗೆ ದಿನಾಂಕ 4-7-2018 ರಿಂದ 6-7-2018 ಬೆಳಗ್ಗೆ 7-00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ತೆರೆದು ಮನೆಯಲ್ಲಿಟ್ಟಿದ್ದ ಪೆಟ್ಟಿಗೆಯಿಂದ 20,000 ರೂ ನಗದು ಹಣ ಮತ್ತು 22000 ರೂ ಬೆಲೆಬಾಳುವ 8 ಗ್ರಾಂ ಚಿನ್ನದ ಚೈನನ್ನು ಕಳವುಮಾಡಿಕೊಂಡುಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅರಣ್ಯ ಶಿಬಿರಕ್ಕೆ ನುಗ್ಗಿ ಕಳವು:

     ನಾರಗಹೊಳೆ ವನ್ಯಜೀವಿ ವಲಯದಲ್ಲಿ ಹುಣಸಕಟ್ಟೆ ಕಳ್ಳಬೇಟೆ ತಡೆ ಶಿಬಿರ ಸಿಪಿಟಿ-6 ಕ್ಯಾಂಪ್ ಇದ್ದು ಸದರಿ ಕ್ಯಾಂಪಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ದಿನಾಂಕ 6-7-2018 ರಂದು ಬೆಳಗ್ಗೆ 10-00 ಗಂಟೆಗೆ ಗಸ್ತು ಕರ್ತವ್ಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಸದರಿ ಕ್ಯಾಂಪಿನ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಶಿಬಿರದ ಸಿಬ್ಬಂದಿಯವರ ಮೈಕ್ರೋಮೇಕ್ಸ್ ಮೊಬೈಲ್, ಮೊಬೈಲ್ ಚಾರ್ಜರ್ ಹಾಗು ಒಂದು ಎಸ್‍ಬಿಎಂ ಬ್ಯಾಂಕಿನ ಎ.ಟಿ.ಎಂ ಕಾರ್ಡ್‍ನ್ನುಮತ್ತು 1500 ರೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕುಟ್ಟ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕೆ.ಎಸ್‍.ಆರ್.ಟಿ.ಸಿ. ಬಸ್ – ಬೈಕ್ ನಡುವೆ ಅಪಘಾತ:

     ಮೈಸೂರು ವಿಭಾಗದ ಪಿರಿಯಾಪಟ್ಟಣ ಡಿಪೋ ಚಾಲಕ ವಿಜಯಕುಮಾರ್ ರವರು ದಿನಾಂಕ 7-7-2018 ರಂದು ಮಧ್ಯಾಹ್ನ 12-45 ಗಂಟೆಯ ಸಮಯದಲ್ಲಿ ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿನ ಕಡೆಗೆ ಕೆ.ಎಸ್‍.ಆರ್.ಟಿ.ಸಿ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಿತಿಮತಿ ಭದ್ರಗೊಳಗ್ರಾಮದ ಸಾರ್ವಜಕ ರಸ್ತೆಯಲ್ಲಿ ಎದುರುಗಡೆಯಿಂದ ಬುಲೆಟ್ ಬೈಕಿನ ಸವಾರನೊಬ್ಬ ಸದರಿ ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಬಲಭಾಗದಲ್ಲಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ರಸ್ತೆಮೇಲೆ ಬಿದ್ದು ಸವಾರ ಹಾಗು ಹಿಂಬದಿ ಸವಾರರು ಗಾಯಗೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಲಾರಿ ಡಿಕ್ಕಿ, ಬೈಸವಾರ ಸಾವು:

     ದಿನಾಂಕ 7-7-2018 ರಂದು ವಿರಾಜಪೇಟೆ ತಾಲೋಕು ಈಚೂರು ಗ್ರಾಮದ ನಿವಾಸಿ ಕಿರಣ್ ಕುಮಾರ್ ಹಾಗು ಪುರುಷ ಎಂಬವರು ರಾತ್ರಿ 8-00 ಗಂಟೆಯ ಸಮಯಲದಲ್ಲಿ ತಿತಿಮತಿ ಆನೆಚೌಕೂರು ಮಾರ್ಗವಾಗಿ ಗೋಣಿಕೊಪ್ಪದ ಕಡೆಗೆ ಮೋಟಾರು ಸೈಕಲಿನಲ್ಲಿ ಬರುತ್ತಿದ್ದಾಗ ತಿತಿಮತಿಯ ಮಜ್ಜಿಗೆಹಳ್ಳ ಎಂಬಲ್ಲಿ ಗೋಣಿಕೊಪ್ಪ ತಿತಿಮತಿ ಕಡೆಯಿಂದ ಕೆಎಲ್-58-ಡಿ8861ರ ಈಚರ್ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪುರುಷರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಪುರುಷ ಹಾಗು ಹಿಂಬದಿ ಸವಾರ ಕಿರಣ್ ಕುಮಾರ್‍ರವರು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಪುರುಷ ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, July 7, 2018

ಅಪಘಾತ ಪ್ರಕರಣ

               ದಿನಾಂಕ 05-07-2018 ರಂದು ಕುಶಾಲನಗರ ಕೂಡುಮಂಗಳೂರು ಗ್ರಾಮದ ನಿವಾಸಿಯಾದ ಈರಯ್ಯ ಎಂಬುವವರು ಮೋಟಾರು ಸೈಕಲಿನಲ್ಲಿ ಕೂಡಿಗೆಗೆ ಹೋಗಿದ್ದವರು ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಕೂಡುಮಂಗಳೂರು ಬಳಿ ಬಲಕ್ಕೆ ತಿರುಗುವಾಗ ಎದುರುಗಡೆಯಿಂದ ಬಂದ ಮೋಟಾರು ಸೈಕಲನ್ನು ಅದರ ಸವಾರ ಪ್ರಸನ್ನರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲಿನ ಸವಾರರಿಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. 

ಕಳವಿಗೆ ಯತ್ನ
             ದಿನಾಂಕ 06-07-2018 ರಂದು ವಿರಾಜಪೇಟೆಯ ಗಾಂಧಿನಗರದ ನಿವಾಸಿ ರಂಜನ್ ಎಂಬುವವರು ಮಧ್ಯಾಹ್ನ ಮನೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವಾಗ ಬೋಯಿಕೇರಿ ಗ್ರಾಮದ ಶರತ್ ಎಂಬಾತನು ರಂಜನ್ ರವರು ಮಲಗಿದ್ದ ರೂಮಿಗೆ ನುಗ್ಗಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೀಳಲು ಪ್ರಯತ್ನಿಸಿದ್ದು ಆಗ ರಂಜನ್ ರವರು ಬೊಬ್ಬೆಹಾಕಿದಾಗ ಅಕ್ಕಪಕ್ಕದವರು ಬಂದು ಆತನನ್ನು ಹಿಡಿದುಕೊಂಡಿದ್ದು, ಈ ಬಗ್ಗೆ ರಂಜನ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ
              ಮಡಿಕೇರಿ ನಗರದ ಹೊಸ ಬಡಾವಣೆಯ ನಿವಾಸಿ ಸುಮಂತ್ ಎಂಬುವವರು ದಿನಾಂಕ 03-07-2018 ರಂದು ಮೊಬೈಲ್ ಖರೀದಿಸುವ ಉದ್ದೇಶದಿಂದ ಉತ್ತರಪ್ರದೇಶದ ರಾಘವ್ ಎಂಟರ್ ಪ್ರೈಸಸ್ ರವರಿಗೆ 9000 ರೂ ಹಣವನನ್ನು ಪೇಟಿಎಂ ಮೂಲಕ ಪಾವತಿಸಿದ್ದು, ಈವರೆಗೂ ಮೊಬೈಲ್ ನೀಡದೇ ಮೋಸ ಮಾಡಿರುವುದಾಗಿ ಸುಮಂತ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
              ದಿನಾಂಕ 06-07-2018 ರಂದು ಮಡಿಕೇರಿ ನಗರದ ನಿವಾಸಿ ತಾರಿಕ್ ಅಹಮದ್ ರವರು ಮೋಟಾರು ಸೈಕಲಿನಲ್ಲಿ ನೌಫಲ್ ಎಂಬುವವರನ್ನು ಕೂರಿಸಿಕೊಂಡು ಎ.ವಿ ಶಾಲೆಯ ಕಡೆಯಿಂದ ಮಾರ್ಕೆಟ್ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ತಾರಿಕ್ ಅಹಮದ್ ಮತ್ತು ನೌಫಲ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Friday, July 6, 2018

ಹಲ್ಲೆ ಪ್ರಕರಣ
ದಿನಾಂಕ 14/05/2018ರಂದು ಅರಕಲಗೂಡು ತಾಲೂಕಿನ ಮಲ್ಲಿಪಟ್ನದ ಬೆಸೂರು ಗ್ರಾಮದ ದೇವರಾಜ ಎಂಬವರು ಶನಿವಾರಸಂತೆ ಬಳಿಯ ಮಾದೇಗೋಡು ಗ್ರಾಮಕ್ಕೆ ಬಂದಿದ್ದು ಅಲ್ಲಿನ ಬೋರ್‌ವೆಲ್ ಒಂದರ ಬಳಿ ಸ್ನೇಹಿತ ರಾಜಶೇಖರ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಅಲ್ಲಿಗೆ ಬಂದ ಮಾದೇಗೋಡು ಗ್ರಾಮದ ಎಂ.ಎನ್.ನಂದೀಶ್, ಎಂ.ಎನ್.ವಿಶ್ವನಾಥ, ಎಂ.ಎಂ.ವಿಶ್ವನಾಥ, ಎಂ.ಬಿ.ಮಂಜುನಾಥ ಮತ್ತು ಇನ್ನಿತರ 9 ಜನರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 04/07/2018ರಂದು ಸುಂಟಿಕೊಪ್ಪ ಬಳಿಯ ನಾಕೂರು ಶಿರಂಗಾಲ ಗ್ರಾಮದ ನಿವಾಸಿ ದಿಲೀಪ್ ಎಂಬವರು ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ದಿಲೀಪನು ಸುಮಾರು ಎರಡು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ರಿಕ್ಷಾ ಡಿಕ್ಕಿ
ದಿನಾಂಕ 05/07/2018ರಂದು ಸೋಮವಾರಪೇಟೆ ಬಳಿಯ ಬಜೆಗುಂಡಿ ನಿವಾಸಿ ಎಸ್.ಸುಧಿ ಎಂಬವರು ಅವರ ಮೋಟಾರು ಸೈಕಲಿನಲ್ಲಿ ಅವರ ಮಗಳು ವೈಷ್ಣವಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಿರುವಾಗ ನ್ಯಾಯಾಲಯದ ರಸ್ತೆಯ ಬಳಿ ಎದುರಿನಿಂದ ಒಂದು ರಿಕ್ಷಾವನ್ನು ಅದರ ಚಾಲಕ ಸುಂದರೇಶ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಧಿರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಬಾಲಕಿ ವೈಷ್ಣವಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 04/07/2018ರಂದು ಪೊನ್ನಂಪೇಟೆ ಬಳಿಯ ತಿತಿಮತಿ ನೊಕ್ಯ ಗ್ರಾಮದ ನಿವಾಸಿ ಹೆಚ್‌.ಎಸ್.ರವಿ ಎಂಬವರು ಮರೂರು ಗ್ರಾಮಕ್ಕೆ ಹೋಗಿ ಮರಳಿ ಬರುತ್ತಿರುವಾಗ ಅಲ್ಲಿನ ಬಾಳುಮನಿ ಗಣಪತಿ ದೇವಸ್ಥಾನದ ಬಳಿ ಪೂರ್ಣಿಮಾ, ಅನಿಲ್ ಕುಮಾರ್, ಮಂಟಯ್ಯ, ರಾಚಯ್ಯ ಮತ್ತು ಚಂದ್ರು ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ರವಿರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವೃದ್ದೆ ಕಾಣೆ ಪ್ರಕರಣ
ದಿನಾಂಕ 29/06/2018ರಂದು ವಿರಾಜಪೇಟೆ ಬಳಿಯ ಮಾಕುಟ್ಟ ನಿವಾಸಿ ಕೆ.ರಾಜು ಎಂಬವರ ತಾಯಿ 85 ವರ್ಷ ಪ್ರಾಯದ ಸರೋಜಿನಿ ಎಂಬವರು ಸೌದೆ ತರಲೆಂದು ಕಾಡಿಗೆ ಹೋಗಿದ್ದು ಮರಳಿ  ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 05/07/2018ರಂದು ವಿರಾಜಪೇಟೆ ಬಳಿಯ ಕೆದಮುಳ್ಳೂರು ನಿವಾಸಿ ಬಿ.ಎಸ್.ಪೂವಪ್ಪ ಎಂಬವರು ಅವರ ತೋಟಕ್ಕೆ ಹೋದಾಗ ಅಲ್ಲಿ ಅದೇ ಗ್ರಾಮದ ನಿವಾಸಿಗಳಾದ ಶಿವಪ್ಪ, ಜೀವನ್ ಮತ್ತು ಇನ್ನಿತರರು ಸೇರಿಕೊಂಡು ಆಸ್ತಿ ವಿಚಾರಕ್ಕೆ ಜಗಳವಾಡಿ ತೊಟದ ತಂತಿ ಬೇಲಿಯನ್ನು ಕಿತ್ತು ತುಂಡರಿಸಿ ಹಾನಿಗೊಳಿಸಿದ್ದು ಕೇಳಲು ಹೋದ ಬಿ.ಎಸ್.ಪೂವಪ್ಪನವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ  ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾ - ಕಾರು ಡಿಕ್ಕಿ
ದಿನಾಂಕ 05/07/2018ರಂದು ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ಹೆಚ್‌.ಆರ್.ಸುಬ್ರಮಣಿ ಎಂಬವರು ಅವರ ರಿಕ್ಷಾವನ್ನು ಚಾಲಿಸಿಕೊಂಡು ಕುಕ್ಲೂರುವಿನಿಂದ ವಿರಾಜಪೇಟೆ ಕಡೆಗೆ ಬರುತ್ತಿರುವಾಗ ಗ್ರಾಮದ ಮುತ್ತಪ್ಪ ದೇವಸ್ಥಾನದ ಬಳಿ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಕೊಂಡು ಬಂದು ಸುಬ್ರಮಣಿರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 5, 2018


ನಕಲಿ ಸಹಿ ಮಾಡಿ ವಂಚನೆ.

     ವಿರಾಜಪೇಟೆ ತಾಲೋಕು, ಹಾತೂರು ಗ್ರಾಮದ ನಿವಾಸಿ ಕೊಕ್ಕಂಡ ಎಂ. ಕುಟ್ಟಪ್ಪ ಎಂಬವರಿಗೆ ಹಾತೂರು ಗ್ರಾಮದಲ್ಲಿ ಆಸ್ತಿ ಇದ್ದು,  ಅವರ ಕುಟುಂಬದವರಾದ ಕೊಕ್ಕಂಡ ಬೆಳ್ಳಿಯಪ್ಪನವರು ಕೊಕ್ಕಂಡ ಎಂ.ಕುಟ್ಟಪ್ಪನವರ ನಕಲಿ ಸಹಿಯನ್ನು ಬಳಸಿ ಜಾಗದ ಆರ್‍.ಟಿ.ಸಿ.ಯನ್ನು ಮಾಡಿಸಿಕೊಂಡಿದ್ದು, ಇದಕ್ಕೆ ಪೊನ್ನಂಪೇಟೆ ವೃತ್ತದ ಕಂದಾಯ ನರೀಕ್ಷಕರು ಹಾಗು ಗ್ರಾಮ ಲೆಕ್ಕಾಧಿಕಾರಿಯವರುಗಳು ಸಹಕರಿಸಿ ದಾಖಲಾತಿಗಳನ್ನು ಮಾಡಿಕೊಟ್ಟಿರುತ್ತಾರೆಂದು ಕೊಕ್ಕಂಡ ಎಂ.ಕುಟ್ಟಪ್ಪನವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕಿಗೆ ಜೀಪು ಡಿಕ್ಕಿ ಸವಾರನಿಗೆ ಗಾಯ:

     ವಿರಾಜಪೇಟೆ ತಾಲೋಕು ಬೇಟೋಳಿ ಗ್ರಾಮದ ಎವರ್ ಗ್ರೀನ್ ರೆಸಾರ್ಟ್ ನಲ್ಲಿ ಸ್ವಾಗತಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಬಿ.ಕೆ. ಸಂಜು ಎಂಬವರು ದಿನಾಂಕ 4-7-2018 ರಂದು ವಿರಾಜಪೇಟೆ ನಗರದಿಂದ ನಾಂಗಾಲ ರೆಸಾರ್ಟ್‍ಕಡೆಗೆ ತಮ್ಮ ಬಾಪ್ತು ಮೋಟಾರ್ ಸೈಕಲಿಲ್ಲಿ ಹೋಗುತ್ತಿದ್ದಾಗ ಬಿಟ್ಟಂಗಾಲ ಗ್ರಾಮದ ನಾಂಗಾಲ ಜಂಕ್ಷನ್ ಬಳಿ ಎದುರುಗಡೆಯಿಂದ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಿ.ಕೆ.ಸಂಜುರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಸಂಜುರವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಸ್ಕೂಟರ್ ಡಿಕ್ಕಿ

ದಿನಾಂಕ 02-07-2018 ರಂದು ಸೋಮವಾರಪೇಟೆ ತಾಲೂಕಿನ ಎಡಪಾರೆ ಗ್ರಾಮದ ನಿವಾಸಿಯಾದ ಶೇಖರ್ ಎಂಬುವವರು ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಬಜೆಗುಂಡಿ ಗ್ರಾಮದ ನಿವಾಸಿಯಾದ ಲೋಕೇಶ ಎಂಬುವವರು ಸ್ಕೂಟಿಯನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಶೇಖರ್ ಎಂಬವರಿಗೆ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಶೇಖರ್ ರವರು ಗಾಯಗೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ದಿನಾಂಕ 02-07-2018 ರಂದು ರಾತ್ರಿ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿಟಕಿಯ ಗಾಜನ್ನು ಒಡೆದು ಒಳ ನುಗ್ಗಿ ಇಂಡಕ್ಷನ್ ಸ್ಟವ್, ಡಿಜಿಟಲ್ ಗಡಿಯಾರ, ವೀಡ್ ಕಟ್ಟರ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಡಾ. ಯತಿರಾಜ್ ರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, July 3, 2018

ಬೈಕಿಗೆ ಬೆಂಕಿ
ದಿನಾಂಕ 01/07/2017ರಂದು ರಾತ್ರಿ ವೇಳೆ ಸಿದ್ದಾಪುರ ಠಾಣೆಯ ಚೆನ್ನಯ್ಯನಕೋಟೆ ಉಪಠಾಣೆಯ ಸಿಬ್ಬಂದಿ ಹೆಚ್‌.ಕೆ.ವಸಂತ ಕುಮಾರ್ ಮತ್ತು ಲೋಕೇಶ್ ಎಂಬವರು ಚೆನ್ನಯ್ಯನಕೋಟೆ ಪಟ್ಟಣದಲ್ಲಿ ಯಾವುದೋ ಗಲಾಟೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ವಿಚಾರಿಸಲು ಹೋಗಿ ಮರಳಿ ಉಪ ಠಾಣೆಗೆ ಬರುವಾಗ ಉಪ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್‌ ಸಿಬ್ಬಂದಿ ಹೆಚ್‌.ಕೆ.ವಸಂತಕುಮಾರ್‌ರವರ ಬೈಕಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪೂರ್ತಿ ನಾಶಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಕಳವು ಪ್ರಕರಣ
ದಿನಾಂಕ 30/06/2018ರಂದು ಶ್ರೀಮಂಗಲ ಬಳಿಯ ಹುದಿಕೇರಿ ನಿವಾಸಿ ಅಭಿಶೇಕ್ ಎಂಬವರ ಬೈಕನ್ನು ಅವರ ಸ್ನೇಹಿತ ನಿತಿನ್ ಎಂಬವರು ಗೋಣಿಕೊಪ್ಪ ನಗರಕ್ಕೆ ತಂದಿದ್ದು ನಗರದ ಕಾರ್‌ ವಾಷ್‌ ಸರ್ವೀಸ್‌ ಸ್ಟೇಷನ್‌ನಲ್ಲಿ ಬೈಕಿನ ಕೀ ಸಮೇತ ನಿಲ್ಲಿಸಿ ಹುದಿಕೇರಿಗೆ ಹೋಗಿದ್ದು ಮಾರನೆ ದಿನ ಗೋಣಿಕೊಪ್ಪಕ್ಕೆ ಬಂದು ನೋಡುವಾಗ ಬೈಕನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ; ಸಾವು
ದಿನಾಂಕ 02/07/2018ರಂದು ಕೇರಳದ ತೋಲ್ಪಟ್ಟಿ ನಿವಾಸಿ ಮುನಿಯಾಂಡಿ ಎಂಬವರು ಅವರ ಸ್ನೇಹಿತರಾದ ಸುದೀಶ್‌, ಸಚಿನ್‌ ಮುಂತಾದವರು ಸುದೀಶ್‌ರವರು ಚಾಲಿಸುತ್ತಿದ್ದ ಜೀಪಿನಲ್ಲಿ ಕುಟ್ಟದಿಂದ ತೋಲ್ಪಟ್ಟಿಗೆ ಹೋಗುತ್ತಿರುವಾಗ ಕುಟ್ಟದ ಹಳೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ಚಾಲಕ ಸುದೀಶ್‌ ಜೀಪನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ಸುದೀಶ್‌ರವರ ಹತೋಟಿ ಕಳೆದುಕೊಂಡು ಜೀಪು ರಸ್ತೆಯಲ್ಲಿ ಚಾಲಕನ ಬಲ ಭಾಗಕ್ಕೆ ಮಗುಚಿಕೊಂಡು ಚಾಲಕ ಸುದೀಶ್‌ ಜೀಪನ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗಳೊಂದಿಗೆ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
ದಿನಾಂಕ 01/07/2018ರಂದು ಪಿರಿಯಾಪಟ್ಟ ತಾಲೂಕಿನ ಬಿಲ್ಲಹಳ್ಳಿ ನಿವಾಸಿ ಗುರುಲಿಂಗಪ್ಪ ಎಂಬವರು ಅವರ ಅತ್ತಿಗೆ ದಾಕ್ಷಾಯಣಿ ಎಂಬವರೊಂದಿಗೆ ಬೈಕಿನಲ್ಲಿ ಕುಶಾಲನಗರದಿಂದ ಬಿಲ್ಲಹಳ್ಳಿಗೆ ಹೋಗುತ್ತಿರುವಾಗ ಹೆಬ್ಬಾಲೆ ಬಳಿ ಬೈಕನ್ನು ಸೂಳೆ ಕೋಟೆ ಕಡೆಗೆ ಹೋಗಲು ತಿರುಗಿಸುತ್ತಿರುವಾಗ ಶಿರಂಗಾಲ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗುರುಲಿಂಗಪ್ಪನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ದಾಕ್ಷಾಯಣಿಯವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸ್ನೇಹಿತನಿಂದ ಹಲ್ಲೆ:

ವಿರಾಜಪೇಟೆ ನಗರದ ಶಿವಕೇರಿ ನಿವಾಸಿ ಹೆಚ್‍.ಸಿ. ಸಾಗರ್ ಎಂಬವರು ದಿನಾಂಕ 30-6-2018 ರಂದು ರಾತ್ರಿ 11-00 ಗಂಟೆಗೆ ಗೋಣಿಕೊಪ್ಪದ ಮಂಗಳವಿಹಾರ ಕಲ್ಯಾಣ ಮಂಟಪದಲ್ಲಿ ಡೆಕರೇಷನ್ ಕೆಲಸ ಮುಗಿಸಿ ಕಾರಿನಲ್ಲಿ ವಿರಾಜಪೇಟೆ ನಗರದ ಕಡೆಗೆ ಹೋಗುತ್ತಿದ್ದಾಗ ಜೊತೆಗೆ ಇದ್ದ ಕಾಡಿ ಕುಟ್ಟೀರ ಸತೀಶ ಎಂಬವರು ತನ್ನನ್ನು ತನ್ನ ಮನೆಗೆ ಕಾರಿನಲ್ಲಿ ಬಿಡುವ ವಿಚಾರದಲ್ಲಿ ಜಗಳ ಮಾಡಿ ಫಿರ್ಯಾದಿ ಹೆಚ್.ಪಿ. ಸಾಗರ್ ರವರ ಕಾರಿನ ಗಾಜನ್ನು ದೊಣ್ಣೆಯಿಂದ ಒಡೆದು ಹಾಕಿ ನಷ್ಟಪಡಿಸಿದ್ದು ಅಲ್ಲದೆ ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು:

ಸೋಮವಾರಪೇಟೆ ಠಾಣಾ ಸರಹದ್ದಿನ ಗರ್ವಾಲೆ ಗ್ರಾಮದ ನಿವಾಸಿ ಶ್ರೀಮತಿ ಮಣಿ  ಎಂಬವರ ಪತಿ ಕುಮಾರ ಎಂಬವರು ದಿನಾಂಕ 30-6-2018 ರಂದು ವಿಪರೀತ ಮದ್ಯಸೇವಿಸಿ ಮನೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ಕೆರೆಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಾಕತ್ತೂರು ಗ್ರಾಮದ ತೊಂಭತ್ತುಮನೆ ನಿವಾಸಿ ಶ್ರೀಮತಿ ಬಿ.ಜಿ. ದೇವಕ್ಕಿ ಎಂಬವರ ಪತಿ ಗುರುವ ಎಂಬವರು ದಿನಾಂಕ 29-6-2018 ರಂದು ಕಗ್ಗೋಡ್ಲು ಗ್ರಾಮಕ್ಕೆ ಹೋಗಿಬರುವುದಾಗಿ ತಿಳಿಸಿ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು ಫಿರ್ಯಾದಿ ಶ್ರೀಮತಿ ಬಿ.ಜಿ. ದೇವಕ್ಕಿರವರು ನೀಡಿದ ದೂರಿನ ಮೇರೆಗೆ  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯಮಾರಾಟ.

ದಿನಾಂಕ 01.07.2018 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್‍.ಐ. ರವರಾದ ನವೀನ್ ಗೌಡ ರವರಿಗೆ ಬಂದ ಮಾಹಿತಿಯ ಮೇರೆಗೆ  ದಿನಾಂಕ 1-7-2018 ರಂದು ಗೊಂದಿಬಸವನಹಳ್ಳಿ ಗ್ರಾಮದ ಮಣಿ ಎಂಬವರ ಮನೆಯ ಮುಂಭಾಗ ಸರ್ವಜನಿಕ ಸ್ಥಳದಲ್ಲಿ ಅಯ್ಯಪ್ಪ ಎಂಬ ವ್ಯಕ್ತಿ  ಸರಕಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯದ  ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಒತ್ತಾಯವಾಗಿ ಕುಡಿಯುವಂತೆ ಪ್ರಚೋದನೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರ ವಶದಲ್ಲಿದ್ದ 90 ಎಂ.ಎಲ್.ನ  ಮದ್ಯದ 10 ಪ್ಯಾಕೆಟ್ ಗಳನ್ನು ಹಾಗು ರೂ.150/- ನಗದನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕಳವು:

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಪೋರಂಗಡ ಮೊಣ್ಣಪ್ಪ ಎಂಬವರ ಮನೆಗೆ ದಿನಾಂಕ 27-5-2018 ರಿಂದ 1-7-2018ರ 3.30 ಪಿ.ಎಂ. ನಡುವಿನ ಅವಧಿಯಲ್ಲಿ ಮನೆಯ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ  ಮನೆಯಲ್ಲಿಟ್ಟಿದ್ದ  10,000 ರೂ ಮೌಲ್ಯದ ಹಾಗು 20,000 ರೂ ಮೌಲ್ಯದ ಎರಡು ಎಸ್‍.ಬಿ.ಬಿ.ಎಲ್  ಕೋವಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೋರಂಗಡ ಮೊಣ್ಣಪ್ಪನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.