Thursday, August 30, 2018

ಚಿನ್ನಾಭರಣ ಕಳವು:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಡಾವು ಕೊಯಿನಾಡು ಗ್ರಾಮದಲ್ಲಿ ವಾಸವಾಗಿರುವ ಲತಾ ಎಂಬವರ ಮನೆಯಲ್ಲಿ ಅವರ ಅತ್ತಿಗೆಯಾದ ಶ್ರೀಮತಿ ಜಯ ಯಾನೆ ಜಯಂತಿ ಎಂಬವರು ಕೆಲವು ಸಮಯದಿಂದ ವಾಸವಾಗಿದ್ದು, ಲತಾರವರು ತಮ್ಮ ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಒಂದು ಚಿನ್ನದ ಉಂಗುರ ಮತ್ತು ಓಲೆಯನ್ನು ಇಟ್ಟಿದ್ದು ದಿನಾಂಕ 28-8-2018 ರಂದು ನೋಡಿದಾಗ ಸದರಿ ಚಿನ್ನದ ಆಭರಣಗಳು ಕಳ್ಳತನವಾಗಿರುವುದು ಕಂಡುಬಂದಿದ್ದು,  ಸದರಿ ಲತಾರವರ ಮನೆಯಲ್ಲಿ ಇದ್ದ ಅವರ ಅತ್ತಿಗೆ ಶ್ರೀಮತಿ ಜನ ಯಾನೆ ಜಯಂತಿರವರು ಸದರಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವ ಸಂಶಯವಿರುವುದಾಗಿ ಲತಾರವರ ಅಣ್ಣ ಪಿ.ಎಂ. ಬಾಬುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಡ್ಡಕುಸಿತ ವೇಳೆ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆ:

     ಮಡಿಕೇರಿ ತಾಲೋಕು ಕಾಟಕೇರಿ ಗ್ರಾಮದಲ್ಲಿ ಗಿಲ್ಬರ್ಟ್ ರವರು ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು ಜಿಲ್ಲೆಯಲ್ಲಿ ದಿನಾಂಕ 16-8-2018 ರಂದು ಸುರಿದ ಭಾರೀ ಮಳೆಯ ಸಂದರ್ಭದಲ್ಲಿ  ಮಡಿಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಗಿಲ್ಬರ್ಟ್‍ರವರು ವಾಸವಾಗಿರುವ ಪ್ರದೇಶದಲ್ಲಿಯೂ ಭೂಕುಸಸಿತ ಉಂಟಾದ ಸಂದರ್ಭದಲ್ಲಿ ಅವರು ಕಾಣೆಯಾಗಿದ್ದು, ದಿನಾಂಕ 29-8-2018 ರಂದು ಪೊಲೀಸ್ ಹಾಗು ಸಾರ್ವಜನಿಕರು ಪತ್ತೆಕಾರ್ಯ ನಡೆಸಿದ ಸಂದರ್ಭದಲ್ಲಿ ಸದರಿ ಗಿಲ್ಬರ್ಟ್ ರವರ ಮೃತ ದೇಹವು ಸಿಕ್ಕಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮನುಷ್ಯ ಕಾಣೆ:

     ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಮುತ್ತಪ್ಪ ದೇವಾಲಯದ ಬಳಿ ವಾಸವಾಗಿರುವ ಬಿ.ಜಿ. ರಮೇಶ್ ರವರ ತಂದೆ ಬಿ.ಪಿ. ಗಣಪತಿ ಎಂಬವರು ದಿನಾಂಕ 29-8-2018 ರಂದು ಬೆಳಗ್ಗೆ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಬಿ.ಜಿ. ರಮೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ದಿವ್ಯಾ ಡಿಸೋಜಾ ಎಂಬವರ ಪತಿ ಕಾಶ್ಮೀರ್ ಡಿಸೋಜಾ ಎಂಬವರು ದಿನಾಂಕ 28-8-2018 ರಂದು ರಾತ್ರಿ ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ಪತ್ನಿ ಶ್ರೀಮತಿ ದಿವ್ಯಾ ಡಿಸೋಜಾ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಮ ಮೀರಿ ಮರದ ದಿಮ್ಮಿಗಳ ಸಾಗಾಟ:

     ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಟಕ್ಕೆ ಜಿಲ್ಲಾಧಿಕಾರಿಯವರು ನಿಷೇಧಿಸಿ ಆದೇಶವನ್ನು ಹೋರಡಿಸಿದ್ದು, ದಿನಾಂಕ 28-8-2018 ರಂದು ಕುಶಾಲನಗರ ಠಾಣಾ ಸರಹದ್ದಿನ ನಿಸರ್ಗಧಾಮದ ಮುಂದುಗಡೆ(1) ಶರತ್ ಕುಮಾರ್, ಕಾನ್‍ಬೈಲು ಸುಂಟಿಕೊಪ್ಪ,(2) ಸಲೀಮ್, ಕೊಪ್ಪ, ಪಿರಿಯಾಪಟ್ಟಣ, (3) ಶಫಿಕ್, ಕೂಡಿಗೆ ಮತ್ತು ಸತೀಶ್ ಅಂದಗೋವೆ, ಸುಂಟಿಕೊಪ್ಪ ಗ್ರಾಮ ಇವರುಗಳು ತಮ್ಮ ಲಾರಿ ಮತ್ತು ಪಿಕ್ ಅಪ್ ವಾಹನದಲ್ಲಿ ನಿಯಮ ಮೀರಿ ಹೆಚ್ಚಿನ ಬಾರದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಕುಶಾಲನಗರ ಕಂದಾಯ ಪರಿವೀಕ್ಷಕರಾದ ಮಧುಸೂದನ್ ರವರು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯುವತಿ ಆತ್ಮಹತ್ಯೆ:

     ಸೋಮವಾರಪೇಟೆ ತಾಲೋಕು ಕಿರಗಂದೂರು ಗ್ರಾಮದ ನಿವಾಸಿ ಶ್ರೀಮತಿ ಆಲಿಮಾ ಎಂಬವರ ಮಗಳಾದ 20 ವರ್ಷ ಪ್ರಾಯದ ರುಕಿಯಾ ಎಂಬವರು ಹೊಟ್ಟೆನೋವು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡ ಆಕೆ ದಿನಾಂಕ 29-8-2018 ರಂದು ತಾವು ವಾಸವಾಗಿರುವ ಮನೆಯ ಹತ್ತಿರದ ಕಾಫಿ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮತಿ ಆಲಿಮಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮನೆಯಿಂದ ಚಿನ್ನಭರಣ ಕಳವು:

     ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೊರೆಬೀದಿಯಲ್ಲಿ ಕೆಂಪನಾಯಕ ಎಂಬವರು ವಾಸವಾಗಿದ್ದು, ಅವರು ಎಂದಿನಂತೆ ದಿನಾಂಕ 29-8-2018 ರಂದು ಕೆಲಸಕ್ಕೆಂದು ಹೋಗಿದ್ದು, ಮನೆಯಲ್ಲಿದ್ದ ಮಕ್ಕಳು ಶಾಲೆಗೆ ತೆರಳುವಾಗ ಮರೆತು ಮನೆಗೆ ಬೀಗವನ್ನು ಹಾಕದೇ ಹೋಗಿದ್ದು, ಇದೇ ಸಂದರ್ಭವನ್ನು ಉಪಯೋಗಿಸಿದ ಕಳ್ಳರು ಅವರ ಮನೆಯೊಳಗೆ ಪ್ರವೇಶ ಮಾಡಿ ಲಾಕರ್ ನಲ್ಲಿಟ್ಟಿದ್ದ 12,000 ರೂ ಬೆಲೆಬಾಳುವ ಚಿನ್ನದ ಉಂಗುರ ಮತ್ತು ಜುಮುಕಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ವಿಚಾರವಾಗಿ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:

     ವಿರಾಜಪೇಟೆ ತಾಲೋಕು ಗೋಣಿಕೊಪ್ಪ ನಗರದಲ್ಲಿ ವಾಸವಾಗಿರುವ ಎನ್. ಸಿದ್ದಯ್ಯ ಎಂಬವರು ದಿನಾಂಕ 29-8-2018 ರಂದು 1ನೇ ವಿಭಾಗದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪ ಕಡೆಯಿಂದ ಬೈಕನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎನ್. ಸಿದ್ದಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಅವರಿಗೆ ಗಾಯಗಳಾಗಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, August 28, 2018

ರಸ್ತೆ ಅಪಘಾತ
ದಿನಾಂಕ 27/08/2018ರಂದು ಮುಗುಟಗೇರಿ ನಿವಾಸಿ ಏಜಾಸ್ ಎಂಬವರು ಅವರು ಚಾಲಕರಾಗಿದ್ದ ಬಸ್ಸನ್ನು ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆಗೆ ಚಾಲಿಸಿಕೊಂಡು ಬರುತ್ತಿರುವಾಗ ಕಳತ್ಮಾಡು ಬಳಿ ಒಂದು ಕಾರನ್ನು ಅದರ ಚಾಲಕ ರಗೀಶ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಏಜಾಸ್‌ರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ರಗೀಶ್ ಹಾಗೂ ಕಾರಿನಲ್ಲಿದ್ದ ಸುಧಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಳವು ಪ್ರಕರಣ
ಇತ್ತೀಚಿಗಿನ ಭಾರೀ ಮಳೆಯಿಂದ ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ಭೂಕುಸಿತವುಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಈ ಸಮಯದಲ್ಲಿ ದಿನಾಂಕ 20/08/2018ರಂದು  ನಿವಾಸಿ ಪಿ.ಸಿ.ತಮ್ಮಯ್ಯ ಎಂಬವರ ಮನೆಯ ಗೋದಾಮಿನ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು ರೂ. 35,000/- ಮೌಲ್ಯದ ಕರಿ ಮೆಣಸನ್ನು ಕಳವು ಮಾಡಿರುವುದಾಗಿ ದೂರು ನೀಡಿದ್ದು ಪಿ.ಸಿ.ತಮ್ಮಯ್ಯನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ್, ಸ್ವಾಮಿ ಮತ್ತು ಪುಷ್ಪ ಎಂಬವರು ಕರಿ ಮೆಣಸನ್ನು ಕಳವು ಮಾಡಿರುವ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 27/08/2018ರಂದು ಮಡಿಕೇರಿ ನಗರದ ಭಗವಾನ್ ಗ್ಲಾಸ್ ಅಂಗಡಿಯ ಮುಂದೆ ನಗರದ ಗಣಪತಿ ಬೀದಿ ನಿವಾಸಿ ದಿವ್ಯಶ್ರೀ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿ ರಸ್ತೆ ಬದಿಯಲ್ಲಿ ನಾರಾಯಣ ಎಂಬವರು ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದ ಜೀಪು ಹಿಮ್ಮುಖವಾಗಿ ಚಲಿಸಿ ದಿವ್ಯಶ್ರೀರವರಿಗೆ ಡಿಕ್ಕಿಯಾದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, August 24, 2018

ವ್ಯಕ್ತಿ ಆತ್ಮಹತ್ಯೆ
ದಿನಾಂಕ 23/08/2018ರಂದು ಸೋಮವಾರಪೇಟೆ ಬಳಿಯ ಯಡವಾರೆ ನಿವಾಸಿ ಕೆ.ಕೆ.ಬಾಲಕೃಷ್ಣ ಎಂಬವರು ಮನೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಕೆ.ಕೆ.ಬಾಲಕೃಷ್ಣರವರು ದೀರ್ಘ ಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಈ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 23/08/2018ರಂದು ವಿರಾಜಪೇಟೆ ಬಳಿಯ ನಾಂಗಾಲ ನಿವಾಸಿ ಹೆಚ್‌.ಎಸ್.ದರ್ಶನ್ ಎಂಬವರು ಸ್ಕೂಟರಿನಲ್ಲಿ ವಿರಾಜಪೇಟೆಯಿಂದ ಬಿಟ್ಟಂಗಾಲ ಕಡೆಗೆ ಹೋಗುತ್ತಿರುವಾಗ ಪಂಜರಪೇಟೆ ಬಳಿ ಹಿಂದಿನಿಂದ ಒಂದು ಪಿಕ್‌ಅಪ್ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ದರ್ಶನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಾನಿಗೆ ಜೀಪು ಡಿಕ್ಕಿ
ದಿನಾಂಕ 23/08/2018ರಂದು ಮೈಸೂರು ನಿವಾಸಿ ಕೆ.ವಿಜಯ್ ಪೈ ಎಂಬವರು ಅವರ ಸಂಬಂಧಿಕರೊಂದಿಗೆ ಕೆಲಸದ ನಿಮಿತ್ತ ಬಾಳೆಲೆಯ ಬೆಸಗೂರಿನಿಂದ ಮೂರ್ನಾಡಿಗೆ ಅವರ ಮಾರುತಿ ಇಕೋ ವ್ಯಾನಿನಲ್ಲಿ ಹೋಗುತ್ತಿರುವಾಗ ಕೊಳತ್ತೋಡು ಬೈಗೋಡು ಬಳಿ ಒಂದು ಪಿಕ್‌ಅಪ್ ಜೀಪನ್ನು ಅದರ ಚಾಲಕ ಮಹಾದೇವ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ವಿಜಯ್ ಪೈ ಮತ್ತು ಇತರರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
ದಿನಾಂಕ 23/08/2018ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಸಂತೋಷ್ ಕುಮಾರ್ ಎಂಬವರ ತಂದೆ ಬೋಪಯ್ಯ ಎಂಬವರು ಗೋಣಿಕೊಪ್ಪದಿಂದ ಬಸ್ಸಿನಲ್ಲಿ ಬಂದು ಗೋಣಿಕೊಪ್ಪ ಕಳತ್ಮಾಡು ರಸ್ತೆ ಜಂಕ್ಷನ್ ಬಳಿ ಬಸ್ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಫೆಬಿನ್ ಮ್ಯಾಥ್ಯೂ ಎಂಬಾತನು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೋಪಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಬೋಪಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, August 16, 2018


ವಿದ್ಯುತ್ ಸ್ಪರ್ಷಗೊಂಡು ಮಹಿಳೆ ಸಾವು:

     ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮದ ನಿವಾಸಿ ಎಂ.ಬಿ. ಆನಂದ ಎಂಬವರ ತಾಯಿ ಅಮ್ಮವ್ವ ಎಂಬವರು ದಿನಾಂಕ 15-8-2018 ರಂದು ಬೆಳಗ್ಗೆ ತಮ್ಮ ತೋಟಕ್ಕೆ ಹೋಗಿದ್ದು, ತೋಟದಲ್ಲಿ ಹಾದುಹೋದ ವಿದ್ಯುತ್ ತಂತಿ ಮೇಲೆ ಮರ ಬಿದ್ದು ತಂತಿ ನೆಲದ ಮೇಲೆ ಬಿದ್ದಿದ್ದು ಸದರಿ ವಿದ್ಯುತ್ ತಂತಿ ಮೇಲೆ ಅಮ್ಮವ್ವನವರು ಆಕಸ್ಮಿಕವಾಗಿ ಕಾಲನ್ನು ಇಟ್ಟಿದ್ದ ಪರಿಣಾಮವಾಗಿ ವಿದ್ಯುತ್ ಹರಿದು ಸದರಿ ಅಮ್ಮವ್ವನವರು ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ:

     ಸುಂಟಿಕೊಪ್ಪ ಠಾಣೆ ಸರಹದ್ದಿನ ಹೊಸಕೋಟೆ ಗ್ರಾಮದಲ್ಲಿ ಮಡಿಕೇರಿ ನಗರದ ಸುಬ್ರಹ್ಮಣ್ಯ ನಗರ ನಿವಾಸಿ ಸಿ.ಜೆ. ಪೂವಣ್ಣ ಎಂಬವರು ತಮ್ಮ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅವೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿ.ಜೆ. ಪೂವಣ್ಣರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು ಜಿ.ಜೆ. ಪೂವಣ್ಣನವರಿಗೆ ಪೆಟ್ಟಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Wednesday, August 15, 2018

ವಾಹನ ಅಪಘಾತ ;ಸಾವು
ದಿನಾಂಕ 13/08/2018ರಂದು ಪೊನ್ನಂಪೇಟೆ ಬಳಿಯ ಸುಳುಗೋಡು ನಿವಾಸಿ ಪಣಿ ಎರವರ ಅಪ್ಪು ಎಂಬವರು ಬಾಳೆಲೆ ಸಂತೆಗೆಂದು ಹೋಗಿ ಮರಳಿ ಮನೆಗೆ ಬರುವಾಗ ಬಾಳೆಲೆ ಸುಳುಗೋಡು ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
ದಿನಾಂಕ 14/08/2018ರಂದು ಪೊನ್ನಂಪೇಟೆ ಬಳಿಯ ಮುಗುಟಗೇರಿ ಗ್ರಾಮದ ನಿವಾಸಿ ಚೇರಂಡ ಮೇದಪ್ಪನವರ ತೋಟದ ಬಳಿಯ ಕಡಂಗದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ಬಲ್ಯಮಂಡೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎಸ್.ರಾಜೇಶ್‌ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
ದಿನಾಂಕ 14/08/2018ರಂದು ವಿರಾಜಪೇಟೆ ಬಳಿಯ ಕಂಡಂಗಾಲ ನಿವಾಸಿ ಕೊಂಗಂಡ ದೇವಯ್ಯ ಎಂಬವರು ಗದ್ದೆಗೆ ಹೋಗುತ್ತಿರುವಾಗ ಅಪರಿಚಿತ ಭಿಕ್ಷುಕನೋರ್ವನ ಶವ ಪತ್ತೆಯಾಗಿದ್ದು ಈ ಸಂಬಂಧ ಕೊಂಗಂಡ ದೇವಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
ದಿನಾಂಕ 14/08/2018ರಂದು ಮಡಿಕೇರಿ ಬಳಿಯ ಕೆ.ಬಾಡಗ ನಿವಾಸಿ ಡಾಲೇಶ್ ಎಂಬವರು ಅದೇ ಗ್ರಾಮದ ನಿವಾಸಿ ಬಿದ್ದಂಡ ದಿಲೀಪ್ ನಾಚಯ್ಯ ಎಂಬವರ ತೋಟದಲ್ಲಿ ಹಸುಗಳಿಗೆ ಹುಲ್ಲು ಕುಯ್ಯಲು ಹೋಗುವಾಗ ತೊಟದ ಒಳಗಡೆ ಓರ್ವ ಅಪರಿಚಿತ ವ್ಯಕ್ತಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತೋಟದ ನೌಕರ ಎನ್‌.ಕೆ.ರವಿಚಂದ್ರ ಎಂಬವರಿಗೆ ತಿಳಿಸಿದ್ದು ಅವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ
ದಿನಾಂಕ 14/08/2018ರಂದು ಮಾದಾಪುರ ಬಸ್‌ ನಿಲ್ದಾಣದ ಬಳಿ ಕೆಎ-50-ಎ-5799 ಸಂಖ್ಯೆಯ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಾದಾಪುರ ಬಸ್‌ ನಿಲ್ದಾನದ ಬಳಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿದ್ಯುತ್ ಕಂಬವು ಹಾನಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, August 14, 2018

ವ್ಯಕ್ತಿ ನಾಪತ್ತೆ
          ವಿರಾಜಪೇಟೆ ತಾಲೂಕಿನ ಅರ್ಜಿ ಗ್ರಾಮದ ಪೆರಂಬಾಡಿಯ ನಿವಾಸಿಯಾದ 34 ವರ್ಷ ಪ್ರಾಯದ ಥೋಮಸ್ ಎಂಬುವವರು ದಿನಾಂಕ 17-05-2018 ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಪತ್ನಿ ಧನಲಕ್ಷ್ಮಿ ಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, August 13, 2018


ಕಾರು-ಮಾರುತಿ ವ್ಯಾನ್ ಅಪಘಾತ:

     ಕಾರು ಹಾಗು ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡ ಘಟನೆ ಮಡಿಕೇರಿ ಸಮಿಪದ ದೇವರಕೊಲ್ಲಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಇಲವಾಲ ನಿವಾಸಿ ಎಸ್. ಮೋಹನಕುಮಾರ ಎಂಬವರು ದಿನಾಂಕ 11-8-2018 ರಂದು ತಮ್ಮ ಬಾಪ್ತು ಕಾರಿನಲ್ಲಿ ಇಲವಾಲದಿಂದ ಮಡಿಕೇರಿ ಮಾರ್ಗವಾಗಿ ಉಜಿರೆಗೆ ಹೋಗುತ್ತಿದ್ದಾಗ ಮಡಿಕೇರಿ ಸಮೀಪಕ ದೇವರಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಬಂದ ಮಾರುತಿ ವ್ಯಾನಿನ ಚಾಲಕ ಸದರಿ ವ್ಯಾನನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಲಾರಿಯೊಂದನ್ನು ಒವರ್‍ಟೇಕ್ ಮಾಡಿಕೊಂಡು ಬಂದು ಎನ್. ಮೋಹನ್ ಕುಮಾರ್‍ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಮಾರುತಿ ವ್ಯಾನಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಕಾರಿನ ಚಾಲಕ ಎಸ್. ಮೋಹನ್‍ಕುಮಾರ್‍ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ.

     ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿ ಮಗುಚಿಬಿದ್ದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಎಂಬಲ್ಲಿ ನಡೆದಿದೆ. ದಿನಾಂಕ 11-8-2018 ರಂದು ಜೇವರ್ಗಿ ತಾಲೋಕಿನ ಹಿಪ್ಪರಗಾ ಗ್ರಾಮದ ನಿವಾಸಿ ಎಸ್. ವಿಶ್ವನಾಥ ಎಂಬವರು ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ತಮ್ಮ ಬಾಪ್ತು ಕಾರಿನಲ್ಲಿ ಪ್ರವಾಸ ಬಂದಿದ್ದು ದಿನಾಂಕ 12-8-2018 ರಂದು  ಭಾಗಮಂಡಲಕ್ಕೆ ಹೋಗಿ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಚಾಲಕ ನಿರಂಜನ್‍ರೆಡ್ಡಿ ರವರು ಸದರಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಬೆಟ್ಟಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕಾರು ಮಗುಚಿ ಬಿದ್ದು ಕಾರು ಜಖಂಗೊಂಡು ಕಾರಿನಲ್ಲಿ ಸಂಚರಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಜಗಳ

     ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಎಸ್.ಎಸ್. ಮೋಹನ್ ಹಾಗು ಅವರ ಮನೆಯವರೇ ಆದ ಸೂರ್ತಲೆ ಹರೀಶ್ @ ಕಾಶಿ ಎಂಬವರ ನಡುವೆ  ದಿನಾಂಕ 12-8-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಅವರ ಗದ್ದೆಯಲ್ಲಿ ಬೇಲಿಯ ವಿಚಾರದಲ್ಲಿ ಜಗಳವಾಗಿ  ಪಪರಸ್ಪರ ಅವಾಚ್ಯವಾಗಿ ಬೈದಾಡಿಕೊಂಡು ಹಲ್ಲೆ ಮಾಡಿದ್ದು  ನಂತರ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದು ನಡೆದಿದ್ದು  ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ನೀಡಿದ್ದು ಅದರಂತೆ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನಾಥ ವ್ಯಕ್ತಿ ಸಾವು:

     ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಟೌನ್‍ನಲ್ಲಿ ಕೆಲವು ದಿನಗಳಿಂದ ರವಿ ಎಂಬ ವ್ಯಕ್ತಿ ಬಂದು ಕೂಲಿ ಕೆಲಸವನ್ನು ಮಾಡಿಕೊಂಡಿದ್ದು ಆತನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದು, ದಿನಾಂಕ 6-7-2018 ರಂದು ನಿಶಕ್ತನಾಗಿ ಬಿದ್ದಿದ್ದ ಆತನನ್ನು ಕೊಡ್ಲಿಪೇಟೆ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಿ.ಪಿ. ಭೂಪಾಲ್ ರವರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಸದರಿ ವ್ಯಕ್ತಿ ದಿನಾಂಕ 12-8-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, August 12, 2018

ಹಣದ ವಿಚಾರದ ವ್ಯಕ್ತಿಯ ಕೊಲೆ ಬೆದರಿಕೆ

ಸೋಮವಾರಪೇಟೆ ತಾಲೋಕು, ಕುಶಾಲನಗರ ಸಮೀಪದ ಆನೆಕಾಡು ನಿವಾಸಿ ಎಂ.ಇ. ಅಬೆ ಎಂಬವರು 2014-15ನೇ ಸಾಲಿನಲ್ಲಿ ವಿರಾಜಪೇಟೆ ನಗರದಲ್ಲಿ ವಾಸವಾಗಿರುವ ವಿನು ಎಂಬವರಿ 19 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದು, ದಿನಾಂಕ 23-7-2018 ರಂದು ಎಂ.ಇ. ಅಬೆಯವರು ಸೋಮವಾರಪೇಟೆಗೆ ಹೋದ ಸಂದರ್ಭದಲ್ಲಿ ಆರೋಪಿಗಳಾದ ವಿನು ಹಾಗು ಓಮನ ಜೋಸೆಫ್ ರವರುಗಳು ಭೇಟಿಯಾಗಿದ್ದು ಅವರಲ್ಲಿ ಅಬೆರವರು ಸಾಲದ ಹಣ 19 ಲಕ್ಷವನ್ನು ಹಿಂತಿರುಗಿಸುವಂತೆ ಕೇಳಿಕೊಂಡಾಗ ಸಾಲದ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನ್ಯಾಯಾಲಯಲ್ಲಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ನಿರ್ದೇಶನದಂತೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿಗೆ ಕಾರು ಡಿಕ್ಕಿ:

ಕೆಎಸ್‍ಆರ್‍ ಟಿಸಿ ಬಸ್ಸಿಗೆ ಕಾರೊಂದು ಡಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ಕೆಎಸ್‍ಆರ್‍ಟಿಸಿ ಬಸ್ಸ್ ಚಾಲಕ ರಘು ಎಂಬವರು ದಿನಾಂಕ 11-8-2018 ಎಂದಿನಂತೆ ಬೆಳಗ್ಗೆ ಕೆಎ-18ಎಫ್-784 ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಅರೆಸೀಕೆರೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಶಿರಂಗಾಲ ಗ್ರಾಮದಲ್ಲಿ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎಸ್‍.ಆರ್‍.ಟಿ.ಸಿ. ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್‍ ಮತ್ತು ಕಾರು ಜಖಂಗೊಂಡಿದ್ದು, ಈ ಸಂಬಂಧ ಬಸ್ ಚಾಲಕನ ದೂರಿನ ಮೇರೆಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಟೆ ಮರ ಕಳವು:

ದಿನಾಂಕ 11-8-2018 ರಂದು ಸಿದ್ದಾಪುರ ಠಾಣಾ ಸರಹದ್ದಿನ ಮಟಣಿ ಎಸ್ಟೇಟ್‍ ನಿಂದ ಯಾರೋ ಕಳ್ಳರು ಅಂದಾಜು 45,000 ರೂ ಮೌಲ್ಯದ 5 ಅಡಿ ದಪ್ಪ 25 ಅಡಿ ಉದ್ದದ ಒಣಗಿದ ಬೀಟಿ ಮರವನ್ನು ಕಳ್ಳತನ ಮಾಡಿಕೊಂಡಿದ್ದು ಹೋಗಿರುತ್ತಾರೆಂದು ಸದರಿ ಮರಣಿ ಎಸ್ಟೇಟಿನ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಎ.ಎನ್. ಜನಾರ್ಧನ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ

ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ವಿ.ಬಿ. ಜೋಯಪ್ಪ ಎಂಬವರ ಮಗ ದಿನಾಂಕ 29-7-2018 ರಂದು ತಮ್ಮ ಬಾಪ್ತು ಮಾರು ಓಮಿನಿಯಲ್ಲಿ ಮನೆಯ ಕಡೆಗೆ ಹೋಗುತ್ತಿದ್ದಾ  ಮೂರ್ನಾಡುವಿನ ನಟೇಶ ಎಂಬವರು ತಮ್ಮ ಬಾಪ್ತು ಪಿಕ್‍ಅಪ್ ವಾಹನವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು, ಅದನ್ನು ಕೇಳಲು ಹೋದ ವಿ.ಬಿ. ಜೋಯಪ್ಪನವರ ಮಗನ ಮೇಲೆ ನಟೇಶ ಹಲ್ಲೆ ನಡೆಸಿದ್ದು, ಮತ್ತೆ ದಿನಾಂಕ 18-8-2018 ರಂದು ವಿ.ಬಿ. ಜೋಯಪ್ಪನವರು ಮಾರುತಿ ವ್ಯಾನಿನಲ್ಲಿ ಕಗ್ಗೋಡ್ಲುವಿನಿಂದ ಹೊದ್ದೂರಿಗೆ ಹೋಗುತ್ತಿದ್ದಾಗ ನಟೇಶ ಮತ್ತು ಇತರರು ಸೇರಿ ಮಾರುತಿ ವ್ಯಾನಿಗೆ ಪಿಕ್‍ಅಪ್ ವ್ಯಾನನ್ನು ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ಯುವತಿ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ಜಮ್ಮಂಡ ಮಾದಪ್ಪ ರವರ ಲೈನುಮನೆಯಲ್ಲಿ ವಾಸವಾಗಿರುವ ಶಿವಲಿಂಗಪ್ಪ ಎಂಬವರ ಮಗಳು ದಿನಾಂಕ 11-8-2018 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶಿವಲಿಂಗಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, August 11, 2018

ಹಣದ ವಿಚಾರದಲ್ಲಿ ಹಲ್ಲೆ 
                ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದ ನಿವಾಸಿಯಾದ ಜಾನ್ಸಿ ಎಂಬುವವರು ಅದೇ ಗ್ರಾಮದ ಚೇತನ್ ರವರಿಗೆ ಸಾಲವಾಗಿ ಕೊಟ್ಟಿದ್ದ ಹಣವನ್ನು ದಿನಾಂಕ 10-08-2018 ರಂದು ವಾಪಾಸ್ಸು ಕೇಳಿದಾಗ ಜಗಳ ಮಾಡಿ ಚೇತನ್ ಹಾಗೂ ಸುರೇಶರವರು ಹಲ್ಲೆ ನಡೆಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
            ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ಮಾರ್ಕೆಟ್ ಹತ್ತಿರ ವಾಸವಿರುವ ಅಮರ್ ನಾಥ್ ಕುಮಾರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 10-08-2018 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, August 10, 2018

ಯುವಕ ಆತ್ಮಹತ್ಯೆ
ದಿನಾಂಕ 08/08/2018ರಂದು ನಾಪೋಕ್ಲು ಬಳಿಯ ಕುಂಜಿಲ ನಿವಾಸಿ ಕಲಿಯಾಟಂಡ ಎಂ ಉಮೇಶ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಪಂಜರಿಎರವರ ಮಂಜು ಎಂಬಾತನು ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಯುವಕನ ಆಕಸ್ಮಿಕ ಸಾವು
ಮಡಿಕೇರಿ ನಗರದ ಮಂಗಳೂರು ರಸ್ತೆಯ ನಿವಾಸಿ ರತ್ನಮ್ಮ ಎಂಬವರ ಮಗ ರಾಜ ಯಾನೆ ಆರ್ಮುಗಂ ಎಂಬಾತನು ದಿನಾಂಕ 08/08/2018ರಂದು ನಗರಕ್ಕೆ ಹೋಗಿ ರಾತ್ರಿ ವೇಳೆ ಮನೆಗೆ ಮರಳಿದಾಗ ಆತನ ಆತನ ತಲೆಯಲ್ಲಿ ರಕ್ತ ಸ್ರವಿಸುತ್ತಿದ್ದುದನ್ನು ಕಂಡ ತಾಯಿ ರತ್ನಮ್ಮನವರು ಕೇಳಿದಾಗ ತಾನು ಬರೆಯಿಂದ ಜಾರಿ ಬಿದ್ದಿದ್ದು ಆಗ ಕಲ್ಲು ತಾಗಿ ಗಾಯವಾಗಿರುವುದಾಗಿ ತಿಳಿಸಿದ್ದು ಆತನನ್ನು ಚಿಕಿತ್ಸೆಗಾಗಿ ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ
ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ನಿವಾಸಿ ಹೆಚ್‌.ಎಸ್. ಶಿವನಂಜಪ್ಪ ಎಂಬವರು ಅದೇ ಗ್ರಾಮದ ನಿವಾಸಿ ಗೀತಾ ಎಂಬವರಿಗೆ ಸೇರಿದ ಜಾಗದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ 2016ನೇ ಸಾಲಿನಲ್ಲಿ ಸುಂಟಿಕೊಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಅಡಮಾನ ಮಾಡಿ ರೂ.5,00,000/- ದಷ್ಟು ಸಾಲ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
ದಿನಾಂಕ 08/08/2018ರಂದು ವಿರಾಜಪೇಟೆ ಬಳಿಯ ಬೇಟೋಳಿ ನಿವಾಸಿ ಜೇನು ಕುರುಬರ ಸುನಿತಾ ಎಂಬ ಮಹಿಳೆಯು ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಸುನಿತಾ ಅತೀವ ಮದ್ಯ ವ್ಯಸನಿಯಾಗಿದ್ದು ಮದ್ಯದ ಅಮಲಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, August 8, 2018

ವೃದ್ದ ಮಹಿಳೆ ಕಾಣೆ
ಮಡಿಕೇರಿ ಬಳಿಯ ಕಡಗದಾಳು ನಿವಾಸಿ ಗೀತಾ ರಮೇಶ್‌ ಎಂಬವರ 80 ವರ್ಷ ಪ್ರಾಯದ ವೃದ್ದ ತಾಯಿ ಸುಂದರಿ ಎಂಬವರು ದಿನಾಂಕ 07/08/2018ರಂದು ಮನೆಯಿಂದ ಹೊರಗಡೆ ಹೋಗಿದ್ದು ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೇಲಿ ಕಡಿದು ನಾಶ
ದಿನಾಂಕ 07/08/2018ರಂದು ಗೋಣಿಕೊಪ್ಪ ಬಳಿಯ ಕುಟ್ಟಂದಿ ನಿವಾಸಿ ಕಾಳಮಂಡ ಜಗತ್ ಎಂಬವರ ತೋಟದ ಸನಿಹದ ತೋಟದ ಮಾಲೀಕರಾದ ಚೇರಂಡ ಮುದ್ದಯ್ಯ ಮತ್ತು ಅವರ ಮಗ ಕಿರಣ್ ಎಂಬವರುಗಳು ಸೇರಿಕೊಂಡು ಜಗತ್‌ರವರ ತೋಟದ ಸುಮಾರು 40 ಅಡಿಗಳಷ್ಟು ಬೇಲಿಯನ್ನು ಕಡಿದು ನಾಶಗೊಳಿಸಿದ್ದು ವಿಚಾರಿಸಲು ಹೋದ ಜಗತ್‌ರವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, August 7, 2018

ಅಪಘಾತ ಪ್ರಕರಣ 
          ದಿನಾಂಕ 05-08-2018 ರಂದು ಕಂಬಿಬಾಣೆಯ ಸನಿಲ್ ಕುಮಾರ್ ಎಂಬುವವರು ಮೋಟಾರು ಸೈಕಲಿನಲ್ಲಿ ಸುಭಾಷ್ ರವರನ್ನು ಕರೆದುಕೊಂಡು ಗುಡ್ಡೆಹೊಸೂರು ಕಡೆಯಿಂದ ಬಸವನಹಳ್ಳಿಗೆ ಹೋಗುತ್ತಿರುವಾಗ ಎದುರುಗಡೆ ಹೋಗುತ್ತಿದ್ದ ಸ್ಕೂಟರನ್ನು ಅದರ ಸವಾರ ಬಲಬದಿಗೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಎರಡೂ ವಾಹನದವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
        ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಪೊನ್ನಂಪೇಟೆಯ ನಿಸರ್ಗ ನಗರದಲ್ಲಿ ವರದಿಯಾಗಿದೆ. ಪೊನ್ನಂಪೇಟೆಯ ನಿಸರ್ಗ ನಗರದ ನಿವಾಸಿ ಮಾಸ್ತಿಗೌಡ ಎಂಬುವವರು ದಿನಾಂಕ 02-08-2018 ರಂದು ಕಾಣೆಯಾಗಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
           ದಿನಾಂಕ 05-08-2018 ರಂದು ಹಚ್ಚಿನಾಡು ಗ್ರಾಮದ ಯಡೂರುವಿನ ನಿವಾಸಿಯಾದ ಮಂಜು ಎಂಬುವವರಿಗೆ ಪಕ್ಕದ ನಿವಾಸಿಯಾದ ಕರಿಯಾ, ಅಯ್ಯಪ್ಪ ಹಾಗೂ ಇನ್ನಿಬ್ಬರು ಸೇರಿ ಹಲ್ಲೆ ನಡೆಸಿದ್ದು ಗಾಯಗೊಂಡ ಮಂಜುರವರು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಂಜುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮರಳು ಶೇಖರಣೆ 
         ದಿನಾಂಕ 06-08-2018 ರಂದು ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹರಿಯುವ ಕಿರು ತೋಡಿನಿಂದ ಯಾರೋ ಅಕ್ರಮವಾಗಿ ಮರಳು ತೆಗೆದು ಶೇಖರಿಸಿಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಪರಿಶೀಲಿಸಲಾಗಿ ಸುಮಾರು ಒಂದು ಪಿಕ್ ಅಪ್ ನಷ್ಟು ಮರಳು ಕಂಡು ಬಂದಿದ್ದು, ಮರಳನ್ನು ವಶಕ್ಕೆ ಪಡೆದುಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Monday, August 6, 2018

ಬೀಗ ಮುರಿದು ಕಳ್ಳತನಕ್ಕೆ ಯತ್ನ:     ಸರ್ಕಾರಿ ಶಾಲೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಮಡಿಕೇರಿ ನಗರದ ಜೂನಿಯರ್ ಕಾಲೇಜು ಹಾಗು ಪಕ್ಕದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ದಿನಾಂಕ 4-8-2018 ರ ಸಂಜೆ 7-00 ಗಂಟೆ ಮತ್ತು ದಿನಾಂಕ 5-8-2018 ರ ಬೆಳಗ್ಗೆ 8-00 ನಡುವಿನ ಅವಧಿಯಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಮತ್ತು ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಯ ಬೀಗವನ್ನು ಯಾರೋ ಕಳ್ಳತು ಮುರಿದು ಒಳ ಪ್ರವೇಶಿಸಿ ದಾಖಲೆಗಳನ್ನು ಚೆಲ್ಲಾಲಿಪ್ಪಿ ಮಾಡಿ ಹೋಗಿದ್ದು ಈ ಸಂಬಂಧ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗುರುರಾಜ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣುಬಿಗಿದು ಯುವಕನ ಆತ್ಮಹತ್ಯೆ:
     ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಕೂರು ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ. ಮೋಕೂರು ಹೊಸ್ಕೇರಿ ಗ್ರಾಮದ ನಿವಾಸಿ ಮುತ್ತುರಾಮನ್ ಎಂಬವರ ಪುತ್ರ 25 ವರ್ಷ ಪ್ರಾಯದ ಶರವಣ ಎಂಬಾತ ದಿನಾಂಕ 4-8-2018 ರಂದು ರಾತ್ರಿ ತನ್ನ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತನ ತಂದೆ ಮುತ್ತುರಾಮನ್ ರವರು ನೀಡಿದ ದೂರಿನ ಮೇರೆಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುನುಷ್ಯ ಕಾಣೆ:
     ಕೆಲಸಕ್ಕೆ ಹೋದ ಯುವಕನೋರ್ವ ಮನೆಗೆ ಬಾರದೆ ಕಾಣೆಯಾದ ಘಟನೆ ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದಿಂದ ವರದಿಯಾಗಿದೆ. ಕೂಡ್ಲೂರು ಗ್ರಾಮದ ನಿವಾಸಿ ಬಿ.ಎಸ್. ಪ್ರಕಾಶ್ ಎಂಬವರ ಮಗ ಪ್ರಾಯ 24 ವರ್ಷದ ಸುನಿಲ್ ಎಂಬವರು ಎಸ್ಎಲ್ಎನ್ ಕಾಫಿ ವರ್ಕ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 01.08.2018 ರಂದು ಬೆಳಿಗ್ಗೆ ಸಮಯ 11.00 ಗಂಟೆಗೆ ತನ್ನ ತಂದೆಯ ಬಾಪ್ತು ಕೆಎ-12-ಎಂಎ-0944 ರ ಸ್ವಿಪ್ಟ್ ಕಾರಿನಲ್ಲಿ ಮನೆಯಿಂದ ಹೋಗಿದ್ದು ಮತ್ತೆ ವಾಪಾಸ್ಸು ಬಾರದೆ ಕಾಣೆಯಾಗಿದ್ದು ಈ ಸಂಬಂಧ ಬಿ.ಎಸ್. ಪ್ರಕಾಶ್‍ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
     ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹವು ಗೋಣಿಕೊಪ್ಪ ಬಸ್‍ ನಿಲ್ದಾಣದಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ದಿನಾಂಕ 5-8-2018 ರಂದು ಗೋಣಿಕೊಪ್ಪ ನಗರದಲ್ಲಿ ವ್ಯಾಪಾರ ವೃತ್ತಿ ಮಾಡಿಕೊಂಡಿರುವ ಬಿ.ವಿ. ರಾಜ ಎಂಬವರು ಗೋಣಿಕೊಪ್ಪ ಬಸ್‍ ನಿಲ್ದಾಣಕ್ಕೆ ಹೋಗಿದ್ದು ಸಾರ್ವಜನಿಕರಿಗೆ ಕೂರಲು ಇರುವ ಕುರ್ಚಿಗಳ ನಡುವೆ ಅಂದಾಜು 75-80 ವರ್ಷ ಪ್ರಾಯದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಸದರಿ ವ್ಯಕ್ತಿ ಅಲ್ಲಿ ಬಿಕ್ಷೆ ಬೇಡಿಕೊಂಡು ಸಿಕ್ಕಿದ ಕಡೆಗಳಲ್ಲಿ ಮಲಗುತ್ತಿದ್ದುದಾಗಿ ತಿಳಿದು ಬಂದಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣ ಇಬ್ಬರ ಮೇಲೆ ಹಲ್ಲೆ:
     ದಿನಾಂಕ 5-8-2018 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಸುಂಟಿಕೊಪ್ಪ ಸಂತೆಗೆ ಬಂದ 7ನೇ ಹೊಸಕೋಟೆ ನಿವಾಸಿ ಬಿ.ರವಿ ಹಾಗು ಜನಾರ್ಧನ ಎಂಬವರ ಮೇಲೆ ಸುಂಟಿಕೊಪ್ಪದ ಪುನೀತ್ ಮತ್ತು ಅಶ್ವತ್ ರವರುಗಳು ಹಲ್ಲಿನಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Sunday, August 5, 2018

ಹಳೆ ದ್ವೇಷ ಹಲ್ಲೆ 
           ದಿನಾಂಕ 04-07-2018 ರಂದು ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ನಿವಾಸಿಯಾದ ಪ್ರಕಾಶ್ ಮತ್ತು ಅದೇ ಗ್ರಾಮದ ನಿವಾಸಿಯಾದ ಪುಷ್ಪ ರೈ @ ಬಾಬಿರವರಿಗೆ ಹಳೇ ದ್ವೇಷದಿಂದ ಜಗಳವಾಗಿ ಹಲ್ಲೆ ನಡೆಸಿಕೊಂಡಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಎರಡು ಪ್ರಕರಣ ದಾಖಲಾಗಿರುತ್ತದೆ. 
ಅನುಮಾನಾಸ್ಪದ ವ್ಯಕ್ತಿಗಳ ಬಂಧನ 
           ದಿನಾಂಕ 03-08-2018 ರಂದು ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಯವರಾದ ಸುನಿಲ್ ಮತ್ತು ರಜನ್ ಕುಮಾರ್ ಎಂಬುವವರು ಠಾಣಾ ಸರಹದ್ದಿನ ಮಗ್ಗುಲ ಗ್ರಾಮದ ಕಡೆ ರಾತ್ರಿ ಗಸ್ತು ಹೋಗುತ್ತಿರುವಾಗ ಹಾಲಿ ಹಾಕತ್ತೂರು ಗ್ರಾಮದಲ್ಲಿ ವಾಸವಿರುವ ಕೇರಳ ರಾಜ್ಯದ ಕಣ್ಣನೂರಿನ ನಿವಾಸಿಗಳಾದ ಪ್ರವೀಣ್ ಚಂದ್ರನ್ ಮತ್ತು ಅರುಣ್ ಮೋಹನ್ ಎಂಬುವವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವನ್ನು ವಶಕ್ಕೆ ಪಡೆದುಕೊಂಡು ನೀಡಿದ ಪುಕಾರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಚಿನ್ನದ ಸರ ಸುಲಿಗೆ 
         ದಿನಾಂಕ 04-08-2018 ರಂದು ನೆಲ್ಲಿಹುದಿಕೇರಿ ಗ್ರಾಮದ ಮಾದಪ್ಪ ಕಾಲೋನಿಯ ನಿವಾಸಿಯಾದ ವಿಲ್ಮ ಎಂಬುವವರು ಮನೆಯಲ್ಲಿರುವಾಗ ಮನೆಯ ಹಿಂಬದಿಯಿಂದ ಯಾರೋ ಅಪರಿಚಿತರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಯೊಳಗಡೆ ನುಗ್ಗಿ ವಿಲ್ಮರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಹಣ ಸುಲಿಗೆ ಪ್ರಕರಣ 
     ದಿನಾಂಕ 04-08-2018 ರಂದು ಜೀವನ್ ಎಂಬುವವರು ಮಡಿಕೇರಿ ನಗರದಲ್ಲಿ ಅಹಿಲಿ ಚಿಟ್ ಫಂಡ್ ಸಂಸ್ಥೆಗೆ ಸೇರಿದ ಸದಸ್ಯರುಗಳ ಹಣವನ್ನು ವಸೂಲಿ ಮಾಡಿ ರಾಣಿಪೇಟೆಯಿಂದ ಕಾನ್ವೆಂಟ್ ಜಂಕ್ಷನ್ ಕಡೆಗೆ ಹೋಗುತ್ತಿರುವಾಗ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಯಾರೋ ಬೆನ್ನನ್ನು ತಟ್ಟಿದಾಗ ಹಿಂದಿರುಗಿ ನೋಡಿದಾಗ ಕಣ್ಣಿಗೆ ಕಾರದ ಪುಡಿ ಎರಚಿ ಇಬ್ಬರು ಅಪರಿಚಿರು ಕೈಯಲ್ಲಿದ್ದ 18,850 ರೂ ನಗದು ಹಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಜೀವನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, August 4, 2018

ಜಿಂಕೆಗೆ ವಾಹನ ಡಿಕ್ಕಿ 
            ದಿನಾಂಕ 03-08-2018 ರಂದು ಅತ್ತೂರು-ಆನೆಕಾಡು ಮೀಸಲು ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 257 ರಲ್ಲಿ ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದ ಯಾವುದೋ ವಾಹನ ರಸ್ತೆ ದಾಟುತ್ತಿದ್ದ ವನ್ಯಪ್ರಾಣಿಯಾದ ಜಿಂಕೆಗೆ ಡಿಕ್ಕಿಪಡಿಸಿ ಹೋಗಿದ್ದು, ಅಪಘಾತದಂದ ಜಿಂಕೆಯು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ವಲಯದ ಡಿ.ಆರ್.ಎಫ್ ಓ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
        ದಿನಾಂಕ 29-07-2018 ರಂದು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುಂಟಿಕೊಪ್ಪ ನಗರದಿಂದ ವರದಿಯಾಗಿದೆ. ಸುಂಟಿಕೊಪ್ಪ ನಗರದ ಮದುರಮ್ಮ ಬಡಾವಣೆಯ ನಿವಾಸಿ ಪ್ರಕಾಶರವರು ಮನೆ ಪಕ್ಕ ಇರುವ ಅಂಗಡಿಯಲ್ಲಿ ಜೂಸು ಕುಡಿದು ಖಾಲಿ ಬಾಟಲನ್ನು ಚರಂಡಿ ಬಳಿ ಬಿಸಾಕಿದಾಗ ಆಟೋ ಚಾಲಕನಾದ ಪ್ರಕಾಶ್ @ ಅನಿಯವರ ಕಾಲಿಗೆ ತಾಗಿದ್ದು, ಇದೇ ವಿಚಾರದಲ್ಲಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
        ದಿನಾಂಕ 03-07-2018 ರಂದು ಕಡಗದಾಳು ಗ್ರಾಮದ ಬಿದ್ದಪ್ಪ @ ಬಿಂದು ರವರು ಮನೆಯಲ್ಲಿರುವಾಗ ಅವರ ತಮ್ಮನಾದ ಮಂಜುಚಂಗಪ್ಪನವರು ಮದ್ಯ ಕುಡಿದು ಅಣ್ಣನೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಅಣ್ಣ ಬಿದ್ದಪ್ಪ @ ಬಿಂದುರವರ ತಲೆಗೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, August 3, 2018

ನಕಲಿ ದಾಖಲೆ ಸೃಷ್ಠಿಸಿ ವಂಚನೆ
ಕುಟ್ಟ ಬಳಿಯ ತೈಲ ಗ್ರಾಮದ ನಿವಾಸಿ ಅಪ್ಪಂಡೇರಂಡ ಅಪ್ಪಯ್ಯ ಎಂಬವರಿಗೆ ಸೇರಿದ ಆಸ್ತಿಯನ್ನು ಅಪ್ಪಂಡೇರಂಡ ಗಣಪತಿ ಮತ್ತು ಅಪ್ಪಂಡೇರಂಡ ಜರೀನಾ ಎಂಬವರುಗಳು ನಕಲಿ ದಾಖಲೆ ಮತ್ತು ನಕಲಿ ಸಹಿಯನ್ನು ಸೃಷ್ಠಿಸಿ ಅಪ್ಪಂಡೇರಂಡ ಗಣಪತಿಯವರ ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಪಘಾತ; ಸಾವು
ದಿನಾಂಕ 02/08/2018ರಂದು ಸೋಮವಾರಪೇಟೆ ತಾಲೂಕಿನ ಹೇರೂರು ನಿವಾಸಿ ಭವ್ಯ ಎಂಬವರು ಅವರಿಗೆ ಪರಿಚಯವಿರುವ ಸೋಮವಾರಪೇಟೆಯ ನಿವಾಸಿ ನವೀನ್ ಎಂಬವರೊಂದಿಗೆ ಬೈಕಿನಲ್ಲಿ ಮಡಿಕೇರಿ ನಗರದ ಅಬ್ಬಿಫಾಲ್ಸ್ ಜಲಪಾತ ವೀಕ್ಷಣೆಗೆಂದು ಹೋಗುತ್ತಿದ್ದಾಗ ಕೆ.ನಿಡುಗಣೆ ಗ್ರಾಮದ ಬಳಿ ನವೀನನು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕ್ ಅಪಘಾತಕ್ಕೀಡಾಗಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಭವ್ಯರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 02/08/2018ರ ಸಂಜೆ ವೇಳೆ ಮಡಿಕೇರಿ ಸಮೀಪದ ಕಗ್ಗೋಡ್ಲು ನಿವಾಸಿ ಮಿಲನ್ ಎಂಬವರು ಅವರ ತಂದೆ ಸೋಮಣ್ಣ ಎಂಬವರೊಂದಿಗೆ ಬೈಕಿನಲ್ಲಿ ಮೂರ್ನಾಡಿನಿಂದ ಕಗ್ಗೋಡ್ಲಿಗೆ ಬರುತ್ತಿರುವಾಗ ಹಾಕತ್ತೂರು ಬಳಿ ಎದುರಿನಿಂದ ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೋಮಣ್ಣರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸೋಮಣ್ಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 02/08/2018ರಂದು ಶನಿವಾರಸಂತೆ ಬಳಿಯ ಮಳ್ಳೂರು ನಿವಾಸಿ ನವೀನ ಎಂಬವರು ಜಾಗೇನಹಳ್ಳಿ ನಿವಾಸಿ ಅಭಿಲಾಷ್ ಎಂಬವರ ಮನೆಯ ಗೇಟು ತೆರೆದು ಒಳ ಪ್ರವೇಶಿಸಿ ಅಂಗಳದಲ್ಲಿರುವ ನಲ್ಲಿಯ ನೀರಿನಲ್ಲಿ ಮುಖ ತೊಳೆಯುತ್ತಿದ್ದು ನೀರು ಪೋಲು ಮಾಡದಿರುವಂತೆ ಅಭಿಲಾಷ್‌ರವರು ಹೇಳಿದ್ದು ಈ ಕಾರಣಕ್ಕೆ ನವೀನರವರು ಕಲ್ಲಿನಿಂದ ಅಭಿಲಾಷ್‌ರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ರಿಕ್ಷಾ ಡಿಕ್ಕಿ
ದಿನಾಂಕ 01/08/2018ರಂದು ಕಾಂತರಾಜ ಎಂಬವರು ಪ್ರಶಾಂತ ಎಂಬವರೊಂದಿಗೆ ಬೈಕಿನಲ್ಲಿ ಯಸಳೂರಿಗೆ ಹೋಗುತ್ತಿರುವಾಗ ಶನಿವಾರಸಂತೆ ಬಳಿಯ ದುಂಡಳ್ಳಿ ಗ್ರಾಮದ ಯಸಳೂರು ರಸ್ತೆಯ ಬೆಂಬಳೂರು ಜಂಕ್ಷನ್ ಬಳಿ ಎದುರಿನಿಂದ  ಚಂದ್ರು ಎಂಬವರು ಅವರ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾಂತರಾಜರವರಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಶಾಂತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
ದಿನಾಂಕ 02/08/2018ರ ರಾತ್ರಿ ವೇಳೆ ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಜಪ್ಪು ಎಂಬವರು ಕೈಕೇರಿಯ ಫಸ್ಟ್ ಚಾಯ್ಸ್ ಎಂಬ ಅಂಗಡಿಯ ಮುಂದೆ ನಿಂತಿರುವಾಗ ಗೋಣಿಕೊಪ್ಪ ಕಡೆಯಿಂದ ಡಾ. ಶಿವಪ್ಪ ಎಂಬವರು ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಅಪರಿಚಿತ ವ್ಯಕ್ತಿಗೆ ಡಿಕ್ಕಿಪಡಿಸಿದ ಪರಿಣಾಮ ಆ ವ್ಯಕ್ತಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಸ್ಪರ್ಷ; ವ್ಯಕ್ತಿ ಸಾವು
ದಿನಾಂಕ 01/08/2018ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಯಮನೂರ ಎಂಬವರು ಗೋಣಿಕೊಪ್ಪ ನಗರದಲ್ಲಿ ಗಾರೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾಕ್ಕೆ ಕಾರು ಡಿಕ್ಕಿ
ದಿನಾಂಕ 02/08/2018ರಂದು ಮಡಿಕೇರಿ ಬಳಿಯ ಮಕ್ಕಂದೂರು ನಿವಾಸಿ ರಮ್ಯ ಎಂಬವರು ಅವರ ತಾಯಿ ಪದ್ಮಾವತಿ ಎಂವರೊಂದಿಗೆ ರಿಕ್ಷಾವೊಂದರಲ್ಲಿ ಮಡಿಕೇರಿಯಿಂದ ಮಕ್ಕಂದೂರಿಗೆ ಹೋಗುತ್ತಿರುವಾಗ ಚೆನ್ನಿಕೊಪ್ಪ ಎಸ್ಟೇಟಿನ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ರಮ್ಯರವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾ ಮಗುಚಿಕೊಂಡು ರಮ್ಯ, ಅವರ ತಾಯಿ ಪದ್ಮಾವತಿ ಹಾಗೂ ರಿಕ್ಷಾ ಚಾಲಕ ತಿಮ್ಮಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕು ಕಾರು ಡಿಕ್ಕಿ
ದಿನಾಂಕ 02/08/2018ರಂದು ಸುಂಟಿಕೊಪ್ಪದ ಪಂಪ್ ಹೌಸ್ ನಿವಾಸಿ ಗಣಿ ಎಂಬವರು ಅವರ ಮಗಳು ಅವರ ಮಗಳು ಪರಿಣೀತ ಎಂಬಾಕೆಯೊಂದಿಗೆ ಬೈಕಿನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಬಾಳೆಕಾಡು ಬಳಿ ಮಡಿಕೇರಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಣಿರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಗಣಿ ಹಾಗೂ ಬಾಲಕಿ ಪರಿಣೀತಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಬೈಕ್ ಡಿಕ್ಕಿ
ದಿನಾಂಕ 31/07/2018ರಂದು ನಾಪೋಕ್ಲು ಬಳಿಯ ಕೊಟ್ಟಮುಡಿ ನಿವಾಸಿ ಪಿ.ಎಸ್.ಹಂಸ ಎಂಬವರು ಅವರ ಸ್ನೇಹಿತ ಸಂಶೇರ್ ಎಂಬವರೊಂದಿಗೆ ಬೈಕಿನಲ್ಲಿ ನಾಪೋಕ್ಲಿನಿಂದ ಕೊಟ್ಟಮುಡಿಗೆ ಹೋಗುತ್ತಿರುವಾಗ ಕೊಟ್ಟಮುಡಿ ಸೇತುವೆ ಬಳಿ ಎದುರಿನಿಂದ ಒಂದು ಬೈಕನ್ನು ಅದರ ಚಾಲಕ ಮಸೂದ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಂಸರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಹಂಸ, ಸಂಶೇರ್ ಮತ್ತು ಹೈದರ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.