Friday, September 28, 2018

ರಸ್ತೆ ಅಪಘಾತ
ದಿನಾಂಕ 26/09/2018ರಂದು ಸಂಪಾಜೆ ಬಳಿಯ ಕೊಯನಾಡು ಗ್ರಾಮದ ರಸ್ತೆಯಲ್ಲಿ ಕೆಎ-19-ಎಂಬಿ-3211ರ ಸಂಖ್ಯೆಯ ಕಾರನ್ನು ಅದರ ಚಾಲಕ ಮಡಿಕೇರಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯ ಮೋರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋಗಿ ಗಾಯಾಳು ಚಾಲಕನನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಸ್ಕೂಟರ್ ಡಿಕ್ಕಿ
ದಿನಾಂಕ 26/09/2018ರಂದು ಮಡಿಕೇರಿ ನಗರದ ಸುಬ್ರಮಣ್ಯ ನಗರ ನಿವಾಸಿ ಕೆ.ಎಂ.ರಾಜು ಎಂಬವರು ನಗರದ ಪತ್ರಿಕಾ ಭವನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಸ್ಕೂಟರ್ ಅನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎಂ.ರಾಜುರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರಿಗೆ ಕಾರು ಡಿಕ್ಕಿ
ದಿನಾಂಕ 23/09/2018ರಂದು ವಿರಾಜಪೇಟೆ ಬಳಿಯ ಕದನೂರು ನಿವಾಸಿ ಪಿ.ಸಿ.ನಾಣಯ್ಯ ಎಂಬವರು ಅವರ ಸ್ಕೂಟರಿನಲ್ಲಿ ಕೈಕೇರಿಗೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಒಂದು ಟಾಟಾ ಸುಮೋ ಕಾರಿನ ಚಾಲಕನು ಯಾವುದೇ ಸೂಚನೆ ನೀಡದೆ ಏಕಾ ಏಕಿ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದ ಪರಿಣಾಮ ಹಿಂದೆ ಹೋಗುತ್ತಿದ್ದ ನಾಣಯ್ಯನವರ ಸ್ಕೂಟರ್ ಕಾರಿಗೆ ಡಿಕ್ಕಿಯಾಗಿ ನಾಣಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, September 25, 2018

ವ್ಯಕ್ತಿ ಕಾಣೆ ಪ್ರಕರಣ
ಮಾದಾಪುರ ಬಳಿಯ ಜಂಬೂರು ಗ್ರಾಮದ ನಿವಾಸಿ ಸಿ.ಕೆ.ಮಂಜುನಾಥ ಎಂಬವರು ದಿನಾಂಕ 10/09/2018ರಂದು ಮಾದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ಮಂಜುನಾಥರವರ ಪತ್ನಿ ರುಕ್ಮಿಣಿರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ ಪ್ರಕರಣ
ಸೋಮವಾರಪೇಟೆ ಬಳಿಯ ತಲ್ತರೆ ಶೆಟ್ಟಳ್ಳಿ ನಿವಾಸಿ ಬಗ್ಗನ ಕುಶಾಲಪ್ಪ ಎಂಬವರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಕುಶಾಲಪ್ಪರವರು ಅವರ ಕಾಫಿ ತೋಟದ ನಿರ್ವಹಣೆಗಾಗಿ ಸುಮಾರು 24 ಲಕ್ಷಗಳಷ್ಟು ಹಣ ಸಾಲ ಮಾಡಿದ್ದು ಈ ವರ್ಷ ಅತಿ ವೃಷ್ಠಿ ಕಾರಣದಿಂದ ಕಾಫಿ ಬೆಳೆ ಹಾನಿಗೊಳಗಾಗಿದ್ದು ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಸಾವು
ಸೋಮವಾರಪೇಟೆ ಬಳಿಯ ಅಬ್ಬೂರು ಕಟ್ಟೆ ನಿವಾಸಿ ರದೀಶ್ ಎಂಬವರು ಗರಗಂದೂರಿನಲ್ಲಿ ಕೃಷಿ ಮಾಡಿದ್ದ ಸುವರ್ಣ ಗೆಡ್ಡೆ ಹೊಲದಲ್ಲಿ ಕಾವಲು ಕೆಲಸ ಮಾಡಿಕೊಂಡಿದ್ದ ಕೇರಳದ ಥೋಮಸ್ ಎಂಬ ವ್ಯಕ್ತಿಯು ದಿನಾಂಕ 23/09/2018ರಂದು ಸುಂಟಿಕೊಪ್ಪಕ್ಕೆ ಹೋಗಿ ಮರಳಿ ಬಂದು ಶೆಡ್ಡಿನಲ್ಲಿ ಮಲಗಿದ್ದು ಮಾರನೆ ದಿನ ಬೆಳಿಗ್ಗೆ ಉಮ್ಮರ್‌ ಎಂಬರು ಹೋಗಿ ನೋಡಿದಾಗ ಮಲಗಿದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 24/09/2018ರಂದು ಬೆಂಗಳೂರಿನ ನಿವಾಸಿ ಸುಬೀತ್ ಎಂಬವರು ಅವರ ಸ್ನೇಹಿತ ಸುಭಾಷ್, ಸುಭಾಷ್‌ರವರ ಪತ್ನಿ ಆದಿರಾ ಮತ್ತು ಸುಭಾಷ್‌ರವರ ಮಗ ನವಜ್ಯೋತ್‌ ಎಂಬವರೊಂದಿಗೆ ಕೇರಳದಿಂದ ಬೆಂಗಳೂರಿಗೆ ವಿರಾಜಪೇಟೆ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿರುವಾಗ ವಿರಾಜಪೇಟೆ ಬಳಿಯ ಪೆರುಂಬಾಡಿ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಫೈಜಲ್ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬೀತ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವೃದ್ದೆ ಆತ್ಮಹತ್ಯೆ
ದಿನಾಂಕ 22/09/2018ರಂದು ಪೊನ್ನಂಪೇಟೆ ಬಳೀಯ ಕಿರುಗೂರು ನಿವಾಸಿ 81 ವರ್ಷ ಪ್ರಾಯದ ಅಕ್ಕಮ್ಮ ಎಂಬ ವೃದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತೆ ಅಕ್ಕಮ್ಮರವರಿಗೆ ಇತ್ತೀಚೆಗೆ ಮೂರು ತಿಂಗಳಿನಿಂದ ಬಲಗೈ ಸ್ವಾಧೀನ ಕಳೆದುಕೊಂಡಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 23/09/2018ರಂದು ಕುಶಾಲನಗರ ಬಳಿಯ ಬಸವನತ್ತೂರು ಗ್ರಾಮದ ನಿವಾಸಿಗಳಾದ ಅಣ್ಣಾಜಿ ಹಾಗೂ ಅವರ ಸೋದರರು ಆಸ್ತಿಯ ಹಂಚಿಕೆ ಬಗ್ಗೆ ಸರ್ವೆ ಕಾರ್ಯ ಮಾಡಿದ್ದು ನಂತರ ಅಣ್ಣಾಜಿಯವರ ಓರ್ವ ಸೋದರ ವೆಂಕಟೇಶ್‌ರವರು ಅವರಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಳು ಬಂದಿಲ್ಲವೆಂಬುದಾಗಿ ಜಗಳವಾಡಿ ಅಣ್ಣಾಜಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು
ದಿನಾಂಕ 09/06/2018ರಂದು ಮರಗೋಡು ಬಳಿಯ ಹೊಸ್ಕೇರಿಯ ಚಿಲಿಪಿಲಿ ಈಶ್ವರ ದೇವಸ್ಥಾನದ ಅರ್ಚಕ ಕೀರ್ತಿ ಭಟ್ ಎಂಬವರು ಹೊಸ್ಕೇರಿಯಿಂದ ಹಾಲು ತೆಗೆದುಕೊಂಡು ಅವರ ಸ್ಕೂಟರಿನಲ್ಲಿ ಮನೆಗೆ ಬರುತ್ತಿರುವಾಗ ದಾರಿ ಮಧ್ಯೆ ಬಿದ್ದಿದ್ದ ಮರದ ಕೊಂಬೆಯನ್ನು ತೆಗೆಯುತ್ತಿರುವಾಗ ಮತ್ತೊಂದು ಮರದ ಕೊಂಬೆ ಅವರ ಮೇಲೆ ಬಿದ್ದು ಗಾಯಗೊಂಡ ಕೀರ್ತಿ ಭಟ್‌ರವರನ್ನು ಚಿಕಿತ್ಸೆಗಾಗಿ ಮಂಗಳುರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೀರ್ತಿ ಭಟ್‌ರವರು ದಿನಾಂಕ 22/09/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, September 23, 2018

ಬೈಕ್ ಕಳವು ಪ್ರಕರಣ
ವಿರಾಜಪೇಟೆ ಬಳಿಯ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಹೆಚ್‌.ಟಿ.ವೆಂಕಟೇಶ್ ಎಂಬವರು ದಿನಾಂಕ 19/09/2018ರಂದು ಅವರು ವಾಸವಿರುವ ಲಕ್ಷ್ಮಿ ತೋಟದ ವಸತಿ ಗೃಹದ ಪಕ್ಕದ ಪಾಲಿಬೆಟ್ಟ ಅಮ್ಮತ್ತಿ ರಸ್ತೆಯ ಪಕ್ಕದಲ್ಲಿ ಅವರ ಕೆಎ-02-ಜೆಬಿ-6258ರ ಬೈಕನ್ನು ನಿಲ್ಲಿಸಿ ಅವರ ವಸತಿ ಗೃಹಕ್ಕೆ ಹೋಗಿದ್ದು ದಿನಾಂಕ 20/09/2018ರಂದು ನೋಡುವಾಗ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 21/09/2018ರಂದು ಚೆಂಬು ಗ್ರಾಮದ ಬಳಿಯ ಬಾಲೆಂಬಿ ನಿವಾಸಿ ಶಾಂತಿ ಬಿ ರೈ ಎಂಬವರು ಅವರ ಸ್ಕೂಟಿಯಲ್ಲಿ ಕಲ್ಲುಗುಂಡಿಗೆ ಹೋಗುತ್ತಿರುವಾಗ ಊರು ಬೈಲು ಮತ್ತು ಆನೆಹಳ್ಳ ರಸ್ತೆಯ ಬಳಿ ಬಾಲೆಂಬಿ ನಿವಾಸಿ ಮಹಾಬಲ ಎಂಬವರು ಶಾಂತಿ ಬಿ ರೈರವರ ಸ್ಕೂಟರನ್ನು ಒದ್ದು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಗಿಡ ನಾಶ ; ಕೊಲೆ ಬೆದರಿಕೆ
ದಿನಾಂಕ 17/09/2018ರಂದು ಮಡಿಕೇರಿ ನಗರದ ರಾಘವೇಂದ್ರ ದೇವಸ್ಥಾನದ ಬಳಿಯ ನಿವಾಸಿ ವಿಜಯ ಕುಮಾರ್ ಹೆಚ್‌.ಎಸ್. ಎಂಬವರು ಗಾಳಿಬೀಡಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಬಳಿಯ ನಿವಾಸಿಗಳಾದ ಕುಲದೀಪ್, ಲೋಕೇಶ್ ಮತ್ತು ಸ್ಮಿತಾ ಎಂಬವರು ಕತ್ತಿಯಿಂದ ಕಾಫಿ ಗಿಡಗಳನ್ನು ಕಡಿದು ಹಾನಿಗೊಳಿಸುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಕುಲದೀಪ್‌ರವರು ವಿಜಯಕುಮಾರ್‌ರವರನ್ನುದ್ದೇಶಿಸಿ ಕೋವಿಯಿಂದ ಗುಂಡು ಹೊಡೆದು ಕೊಲೆಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಲಾರಿ ಡಿಕ್ಕಿ
ದಿನಾಂಕ 22/09/2018ರಂದು ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಬಳಿಯ ಭೂತನಕಾಡು ನಿವಾಸಿ ವಿನೋದ್‌ ಎಂಬವರು ಅವರ ಬೈಕಿನಲ್ಲಿ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಸುಂಟಿಕೊಪ್ಪದ ಶಾಂತಿಗಿರಿ ತೋಟದ ಬಳಿ ಕುಶಾಲನಗರ ಕಡೆಯಿಂದ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಿನೋದ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೋದ್‌ರವರಿಗೆ  ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 22/09/2018ರಂದು ಶನಿವಾರಸಂತೆ ಬಳೀಯ ನಂದಿಗುಂದ ನಿವಾಸಿ ಎನ್‌.ಎಸ್.ಗೋಪಾಲ್ ಎಂಬವರ ತಮ್ಮನ ಮಗ ಸಚಿನ್ ಎಂಬವರು ಪುನೀತ್‌ ಎಂಬವರೊಡನೆ ಪುನೀತ್‌ರವರ ಬೈಕಿನಲ್ಲಿ ಶನಿವಾರಸಂತೆಯ ಪ್ರಥಮ ದರ್ಜೆ ಕಾಲೇಜಿನ ಬಳಿ ಹೋಗುತ್ತಿರುವಾಗ ಶನಿವಾರಸಂತೆಯ ಮಧ್ಯಪೇಟೆಯ ಕಡೆಯಿಂದ ರಾಮೇನಹಳ್ಳಿ ನಿವಾಸಿ ನವೀನ ಎಂಬವರು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಚಿನ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸಚಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 22, 2018

ರಸ್ತೆ ಅಪಘಾತ
ದಿನಾಂಕ 20/09/2018ರಂದು ಭಾಗಮಂಡಲ ಬಳಿಯ ಕೋಪಟ್ಟಿ ನಿವಾಸಿ ನಾರಾಯಣಪ್ಪ ಎಂಬವರು ಬೊಲೆರೋ ಜೀಪಿನಲ್ಲಿ ಮಡಿಕೇರಿಯಿಂದ ಚೆಟ್ಟಿಮಾನಿಗೆ ಹೋಗುತ್ತಿರುವಾಗ ಕೋಪಟ್ಟಿ ಬಳಿ ಒಂದು ಖಾಸಗಿ ಬಸ್ಸನ್ನು ಅದರ ಚಾಲಕ ಪುಲಕಿತ್ ಎಂಬವರು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾರಾಯಣಪ್ಪನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ನಾರಾಯಣಪ್ಪ ಹಾಗೂ ಜೀಪಿನಲ್ಲಿದ್ದ ಇತರೆ ಮೂವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 21/09/2018ರಂದು ನಾಪೋಕ್ಲು ಬಳಿಯ ಕಿರುಂದಾಡು ನಿವಾಸಿ ಎ.ಬಿ.ರಾಜೇಶ್ ಯಾನೆ ಮುದ್ದಪ್ಪ ಎಂಬವರು ಅವರ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಕಿರುಂದಾಡು ಗ್ರಾಮದಲ್ಲಿ ಅದೇ ಗ್ರಾಮದ ನಿವಾಸಿ ಚೆರುಮಂದಂಡ ವಿವೇಕ್ ಎಂಬವರು ರಾಜೇಶ್‌ರವರ ಸ್ಕೂಟರನ್ನು ಅಡ್ಡ ಹಾಕಿ ಹಳೆ ವೈಷಮ್ಯದಿಂದ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೆರೆಗೆ ಬಿದ್ದು ವ್ಯಕ್ತಿ ಸಾವು
ದಿನಾಂಕ 21/09/2018ರಂದು ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ನಿವಾಸಿ ಪೂವಯ್ಯ ಎಂಬವರು ಅದೇ ಗ್ರಾಮದ ಕೇಳಪಂಡ ಕೃಷ್ಣ ಎಂಬವರ ಕೆರೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಬೈಕ್ ಡಿಕ್ಕಿ
ದಿನಾಂಕ 21/09/2018ರಂದು ವಿರಾಜಪೇಟೆ ಬಳಿಯ ಕೆ.ಬೋಯಿಕೇರಿ ನಿವಾಸಿ ರಾಮು ಎಂಬವರು ವಿರಾಜಪೇಟೆಯಿಂದ ಕೆ.ಬೋಯಿಕೇರಿ ಗ್ರಾಮಕ್ಕೆ ಹೋಗುತ್ತಿರುವಾಗ ಗ್ರಾಮದ ರಸ್ತೆಯಲ್ಲಿ ಧರ್ಮೇಶ್ ಎಂಬಾತನು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮೂರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ದಿನಾಂಕ 21/09/2018ರಂದು ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ನಿವಾಸಿ ವಾಸು ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಾಸು ಅತೀವ ಮದ್ಯ ವ್ಯಸನಿಯಾಗಿದ್ದು ಕೈಸಾಲ ಮಾಡಿದ್ದು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, September 18, 2018

ಕಳವು ಪ್ರಕರಣ
ಮಡಿಕೇರಿ ಬಳಿಯ ಜೋಡುಪಾಲ ನಿವಾಸಿ ಭರತ್ ಕುಮಾರ್ ಎಂಬವರು ದಿನಾಂಕ 13/08/2018ರಂದು ಮಡಿಕೇರಿಗೆ ಕುಟುಂಬ ಸಮೇತ ಬಂದಿದ್ದು ನಂತರ ಮರಳಿ ಮನೆಗೆ ಹೋಗುವಾಗ ಭಾರೀ ಮಳೆಯ ಕಾರಣ ಗುಡ್ಡ ಜರಿದು ಬಿದ್ದು ಮನೆಗೆ ಹೋಗಲು ಸಾಧ್ಯವಾಗದೆ ಮಡಿಕೇರಿಯಲ್ಲಿಯೇ ಇದ್ದು ನಂತರ ದಿನಾಂಕ 10/09/2018ರಂದು ಮನೆಗೆ ಹೋಗಿ ನೋಡುವಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.75,000/- ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ.23,500/-ನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರ್ತವ್ಯಕ್ಕೆ ಅಡ್ಡಿ ಪ್ರಕರಣ
ದಿನಾಂಕ 15/09/2018ರಂದು ಮರಗೋಡಿನ ಬಳಿ ಯಾರೋ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಎಂಬವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಹಾಕತ್ತೂರಿನ ನಿವಾಸಿ ಸುನಿಲ್ ಎಂಬವರು ಇನ್ನಿಬ್ಬರೊಂದಿಗೆ ಅಕ್ರಮವಾಗಿ ಮರಳು ತೆಗೆದು ಪಿಕ್‌ಅಪ್ ವಾಹನಕ್ಕೆ ತುಂಬಿಸುತ್ತಿರುವುದು ಕಂಡು ಬಂದಿದ್ದು ಮರಳು ಮತ್ತು ಜೀಪಿನ ಸಮೇತ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತರುವಾಗ ಸುನಿಲ್‌ರವರು ನಾಗೇಂದ್ರಪ್ಪನವರನ್ನು ತಳ್ಳಿ ಹಾಕಿ ಜೀಪಿನೊಂದಿಗೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 17/09/2018ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಯಶೋದ ಎಂಬವರು ಅವರ ಭಾವ ಬಾಲಕೃಷ್ಣ ಎಂಬವರೊಂದಿಗೆ ಸ್ಕೂಟರಿನಲ್ಲಿ ಮೇಕೇರಿಯ ಅವರ ಮನೆಗೆ ಹೋಗುತ್ತಿರುವಾಗ ಮೇಕೇರಿ ಬಳಿ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕಿ ಕಾಂತೂರು ನೂರ್ನಾಡಿನ ಶೃತಿ ನಾಣಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಯಶೋದರವರು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಯಶೋದರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಳೆ ದ್ವೇಷ, ಸ್ಕೂಟರಿಗೆ ಹಾನಿ 
ದಿನಾಂಕ 14/09/2018ರಂದು ಕಿರುಂದಾಡು ನಿವಾಸಿ ಎ.ಬಿ.ಮುದ್ದಪ್ಪ ಎಂಬವರು ಅವರ ಊರಿನ ಬಿಟ್ಟಿರ ಮಂದಣ್ಣ ಎಂಬವರ ಪತ್ನಿಯ ತಿಥಿ ಕಾರ್ಯಕ್ಕೆ ಅವರ ಸ್ಕೂಟರಿನಲ್ಲಿ ಹೋಗಿದ್ದು ಸ್ಕೂಟರನ್ನು ಮಂದಣ್ಣನವರ ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಸಮಯದಲ್ಲಿ ಅವರ ಗ್ರಾಮದವರೇ ಆದ ಚೆರುಮಂದಂಡ ವಿವೇಕ್ ಎಂಬವರು ಹಳೆ ದ್ವೇಷದಿಂದ ಮುದ್ದಪ್ಪನವರ ಸ್ಕೂಟರನ್ನು ತಳ್ಳಿಕೊಂಡು ಹೋಗಿ ಪಕ್ಕದ ಅಡಿಕೆ ತೋಟದ ಬಳಿಯ ಗುಂಡಿಯೊಂದಕ್ಕೆ ತಳ್ಳಿ ಹಾಕಿ ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೆರೆಗೆ ಬಿದ್ದು ವ್ಯಕ್ತಿ ಸಾವು
ದಿನಾಂಕ 17/09/2018ರಂದು ಸುಂಟಿಕೊಪ್ಪ ಬಳಿಯ ಏಳನೇ ಮೈಲಿನ ಶ್ರೀ ದೇವಿ ಎಸ್ಟೇಟಿನ ನಿವಾಸಿ ಬಿ.ಡಿ.ವಾಸು ಎಂಬವರು ಆಕಸ್ಮಿಕವಾಗಿ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗಡಿ ಕಳ್ಳತನ
ದಿನಾಂಕ 16/09/2018ರ ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ಬೆಸಗೂರು ನಿವಾಸಿ ನಟೇಶ ಎಂಬವರಿಗೆ ಸೇರಿದ ದಿನಸಿ ಅಂಗಡಿಯ ಮೇಲ್ಛಾವಣಿಯ ಮೂಲಕ ಒಳ ಪ್ರವೇಶಿಸಿದ ಯಾರೋ ಕಳ್ಳರು ಅಂಗಡಿಯೊಳಗಿದ್ದ ಸುಮಾರು ರೂ.1000/- ನಗದಿನೊಂದಿಗೆ ಬೀಡಿ ಹಾಗೂ ಇನ್ನಿತರೆ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, September 17, 2018


ದಾರಿ ತಡೆದು ಹಲ್ಲೆ:
     ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ.   ಕಿರುಗೂರು ಗ್ರಾಮದ ವಿ.ಟಿ. ಗೋಪಾಲ ಎಂಬವರು ದಿನಾಂಕ 16-9-2018 ರಂದು ಸ್ಕೂಟಿಯಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಕಿರಗೂರು ಗ್ರಾಮದ ಕಾಕೇರ ಸೋನು ಎಂಬವರು ಸ್ಕೂಟಿಯನ್ನು ತಡೆದು ನಿಲ್ಲಿಸಿ ಅಡಿಕೆ ವ್ಯಾಪಾರ ಮಾಡಿದ  ಬಾಪ್ತು ಹಣದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ವಿ.ಟಿ.ಗೋಪಾಲರವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:
     ವಿರಾಜಪೇಟೆ ತಾಲೋಕು ಮತ್ತೂರು ಗ್ರಾಮದ ನಿವಾಸಿ ಪಿ.ಜಿ. ಅನಿಲ್ ಕುಮಾರ್ ಎಂಬವರು ದಿನಾಂಕ 16-9-2018 ರಂದು ಮಧ್ಯಾಹ್ನ 3-45 ಗಂಟೆಯ ಸಮಯದಲ್ಲಿ ಅರವತ್ತೋಕ್ಲು ಗ್ರಾಮದ ಕಾಫಿ ಬೋರ್ಡಿನ ಬಳಿ ಬಸ್ಸಿಗೆ ಕಾಯುತ್ತಿದ್ದಾಗ ಅರುವತ್ತೋಕ್ಲು ಗ್ರಾಮದವರಾದ ಜಮ್ಮಡ ಉಮೇಶ್, ವೆಂಕಟೇಶ್, ಪಣಿಕರ ರತ್ನ ಮತ್ತು ಸತೀಶ್ ರವರುಗಳು ಮಾರುತಿ ವ್ಯಾನಿನಲ್ಲಿ ಅಲ್ಲಿಗೆ ಬಂದು ಹಳೆಯ ದ್ವೇಷವನ್ನಿಟ್ಟುಕೊಂಡು  ಕೈಯಿಂದ ಮತ್ತು ಹಾಕಿ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದು ಅಲ್ಲದೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು:
     ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹುದುಗೂರು ಗ್ರಾಮದ ನಿವಾಸಿ ಕೆ.ಪಿ. ರಮೇಶ್ ಎಂಬವರ ಮನೆಯಿಂದ ದಿನಾಂಕ 1-9-2018 ರಿಂದ 15-9-2018ರ ನಡುವಿನ ಅವಧಿಯಲ್ಲಿ  ಸುಮಾರು  32,000 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಸದರಿ ಚಿನ್ನಾಭರಣಗಳನ್ನು  ದಿನಾಂಕ 3-9-2018 ರಂದು ಕೈಲ್ ಮುಹೂರ್ತಕ್ಕೆಂದು ಅವರ ಮನೆಗೆ ಬಂದಿದ್ದ ಅವರ ಸಂಬಂಧಿಕರಾದ ಕಿರಣ ಹಾಗು ಯಶಸ್ವಿನಿ ಎಂಬವರು ಕಳ್ಳತನ ಮಾಡಿರುವ ಸಂಶಯವಿರುವುದಾಗಿ ದೂರನ್ನು ನೀಡಿದ್ದು ಅದರೆ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ಕೊಲೆಗೆ ಯತ್ನ:
     ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಸವನತ್ತೂರು ಗ್ರಾಮದ ಲಿಂಗರಾಜು ಎಂಬವರ ಹಾಲೋ ಬ್ರಿಕ್ಸ್ ಪ್ಯಾಕ್ಟರಿಯ ಲೈನು ಮನೆಯಲ್ಲಿ ವಾಸವಾಗಿರುವ ಮೂಲತ: ಉತ್ತರಪ್ರದೇಶದವರಾದ ಸರಲ್ ಪಾಸ್ವಾನ್ ರವರು ದಿನಾಂಕ 15-9-2018 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ತಾನು ವಾಸವಾಗಿರುವ ಲೈನುಮನೆಯ ಮುಂದುಗಡೆ ಕುಳಿತುಕೊಂಡು ಮೊಬೈಲ್‍ನಲ್ಲಿ ಸಿನಿಮಾವನ್ನು ನೋಡುತ್ತಿದ್ದ ವೇಳೆ  ಪಕ್ಕಡ ಲೈನು ಮನೆಯ ವಾಸಿ ರಾಜು ಎಂಬಾತ ಅಲ್ಲಿಗೆ ಬಂದು ವಿನಾಕಾರಣ ಜಗಳ ಮಾಡಿ ಸರಲ್ ಪಾಸ್ವಾನ್‍ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು:
     ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ:ಹೆಚ್.ಆರ್. ಪ್ರಥ್ವಿ ಎಂಬವರು ದಿನಾಂಕ 15-9-2018 ರಂದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದು ದಿನಾಂಕ 16-9-2018 ರಂದು ಬೆಳಗ್ಗೆ  8-20 ಗಂಟೆಗೆ  ಹೆರಿಗೆ ಕೇಸಿನ ಸಂಬಂಧ ಬಂದಿದ್ದ ಮಹಿಳೆಯನ್ನು ಪರೀಕ್ಷಿಸುತ್ತಿದ್ದ ಸಮಯದಲ್ಲಿ  ಕುಶಾಲನಗರದ ದಂಡಿನ ಪೇಟೆ ನಿವಾಸಿ ಆರೀಫ್ ರವರು ಜ್ವರವೆಂದು ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಅವರನ್ನು ಸ್ವಲ್ಪ ಸಮಯ ಕೂರುವಂತೆ ಹೇಳಿ ನಂತರ ನೋಡುವುದಾಗಿ ತಿಳಿಸಿದಾಗ ಸದರಿ ಆರೀಫ್ ಹಾಗು ಆತನೊಂದಿಗೆ ಬಂದಿದ್ದ ಒಬ್ಬ ಗಂಡಸು ಮತ್ತು ಇಬ್ಬರು ಹೆಂಗಸರು ಸೇರಿ ಡಾ: ಹೆಚ್.ಆರ್. ಪ್ರಥ್ವಿ ರವರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ರಾಜೇಂದ್ರ ಎಂಬವರ ತಂದೆ 75 ವರ್ಷದ ಮುರುಗನ್ ಎಂಬವರು 9 ವರ್ಷಗಳು ಹಿಂದೆ ಯಾವುದೋ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ದಿನಾಂಕ 3-9-2018 ರಂದು ಜೈಲಿನಿಂದ ಬಿಡುಗಡೆಹೊಂದಿ ಬಂದಿದ್ದು, ಪ್ರಸ್ತುತ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅದೇ ವಿಚಾರದಲ್ಲಿ ಮನನೊಂದ ಮುರುಗನ್ ರವರು ದಿನಾಂಕ 15-9-2018 ರಂದು  ಯಾವುದೋ ವಿಷವನ್ನು ಸೇವಿಸಿ ಅಸ್ವತ್ಥರಾದವರನ್ನು ಚಿಕಿಸ್ತೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, September 16, 2018

ವ್ಯಕ್ತಿಯ ಅಸ್ವಾಭಾವಿಕ ಸಾವು
ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಆಶಾ ಎಂಬವರ ಮನೆಗೆ ಅವರ ಮಲ ತಮ್ಮ ತೇಜಸ್ ಎಂಬಾತನು ಬಂದಿದ್ದು ರಾತ್ರಿ ಊಟ ಮಾಡುವಾಗ ತೇಜಸ್‌ಗೆ ಅಪಸ್ಮಾರ ಕಾಯಿಲೆ ಬಂದಂತಾಗಿ ಒದ್ದಾಡುತ್ತಿದ್ದು ಆತನನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ವೈದ್ಯರು ತೇಜಸ್‌ ಮೃತನಾಗಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ನಾಡ್ನಳ್ಳಿ ನಿವಾಸಿ ಸವಿತಾ ಎಂಬಾಕೆಯು ನೆರೆಮನೆಯವರಾದ ಬಾಲಕಿ ಎಂಬವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಯ ಮನೆಯಲ್ಲಿದ್ದ ಮಲ್ಲಪ್ಪ, ದರ್ಶನ್ ಮತ್ತು ಪೊನ್ನಪ್ಪ ಎಂಬವರುಗಳು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಸವಿತಾರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ವಳಗುಂದ ಕಾಲೊನಿ ನಿವಾಸಿ ಶಿವ ಎಂಬವರು ಅವರ ನೆಂಟರ ಮನೆಗೆ ಹೋಗಿ ಮರಳಿ ಬರುತ್ತಿರುವಾಗ ಅಬ್ಬೂರು ಕಟ್ಟೆ ಬಳಿ ನೇಗಳ್ಳಿ ಗ್ರಾಮದ ನಿವಾಸಿ ಸಂತೋಷ್ ಎಂಬಾತನು ತೋಟ ಕೆಲಸದ ವಿಷಯದಲ್ಲಿ ಜಗಳವಾಡಿ ಶಿವರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ
ಶನಿವಾರಸಂತೆ ನಗರದ ಗುಂಡೂರಾವ್‌ ಬಡಾವಣೆಯ ಬಳಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ದಿನಾಂಕ 15/09/2018ರಂದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಎಸ್‌.ಆರ್.ಪ್ರತಾಪ್‌, ಕೆ.ಎಸ್.ಪುಟ್ಟಯ್ಯ, ಎಸ್‌.ಆರ್.ವಿನೋದ್, ಎಸ್‌.ಪಿ.ದೀಪಕ್‌ ಎಂಬವರು ಇಸ್ಪೀಟೆಲೆಗಳನ್ನು ಉಪಯೋಗಿಸಿ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಎಲ್ಲರನ್ನೂ ಬಂಧಿಸಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ.1540/- ನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರ ಸಾಗಾಟ
ಕೊಡಗು ಜಿಲ್ಲೆಯಲ್ಲಿ ಮರಳು ಮತ್ತು ಮರ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ದಿನಾಂಕ 15/09/2018ರಂದು ಸುಂಟಿಕೊಪ್ಪ ಬಳಿಯ ಸ್ಯಾಂಡಲ್‌ ವುಡ್‌ ತೋಟದ ಬಳಿ ಟಿಎನ್‌-36-ಎಎ-2887ರ ಲಾರಿಯಲ್ಲಿ ಪಿ.ರಂಜಿತ್‌ ಕುಮಾರ್ ಎಂಬಾತನು ಅಕ್ರಮವಾಗಿ ಸಿಲ್ವರ್‌ ಓಕ್‌ ಮರಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸುಂಟಿಕೊಪ್ಪದ ಗ್ರಾಮ ಲೆಕ್ಕಿಗರಾದ ಯಶವಂತ್‌ರವರು ಲಾರಿ ಸಮೇತ ಮರವನ್ನು ಸುಂಟಿಕೊಪ್ಪ ಪೊಲೀಸರ ಸುಪರ್ದಿಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಹಣ ಕಳವು
ದಿನಾಂಕ 15/09/2018ರಂದು ಗುಡ್ಡೆಹೊಸೂರು ಬಳಿಯ ನಿವಾಸಿ ನಳಿನಿ ಎಂಬವರು ಅವರ ಪತಿಯೊಂದಿಗೆ ಕುಶಾಲನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು ಬಸ್‌ ಹತ್ತುತ್ತಿರುವಾಗ ಅಪರಿಚಿತ ಮಹಿಳೆಯೊಬ್ಬರು ನಳಿನಿಯವರನ್ನು ದೂಡಿಕೊಂಡು ಬಸ್‌ ಹತ್ತಿದ್ದು ನಂತರ ಇಳಿದು ಹೋಗಿರುತ್ತಾರೆ. ನಂತರ ನಳಿನಿಯವರು ಮೈಸೂರಿನಲ್ಲಿ ಅವರ ಕೈ ಚೀಲದಲ್ಲಿದ್ದ ಸಣ್ಣ ಪರ್ಸ್‌ ಅನ್ನು ತೆರೆದು ನೋಡುವಾಗ ಅದರಲ್ಲಿದ್ದ ರೂ.40,000/- ನಗದು ಹಾಗೂ ಕೆಲವು ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 15/09/2018ರಂದು ಶ್ರೀಮಂಗಲ ಬಳಿಯ ನಾಲ್ಕೇರಿ ನಿವಾಸಿ ಪಿ.ಎಂ.ಮಂಜು ಎಂಬವರು ಅವರ ತೋಟದ ಮಾಲೀಕರ ಪತ್ನಿ ವಿಶಾಲಾಕ್ಷಿ ಎಂಬವರೊಂದಿಗೆ ಪೊನ್ನಂಪೇಟೆಯ ನಿಸರ್ಗ ನಗರದಿಂದ ಕೆಲವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಬೆಕ್ಕೆಸೊಡ್ಲೂರು ಗ್ರಾಮಕ್ಕೆ ಹೋಗುತ್ತಿರುವಾಗ ಮುಗುಟಗೇರಿ ಗ್ರಾಮದ ಬಳಿ ಎದುರಿನಿಂದ ಒಂದು ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಿಶಾಲಾಕ್ಷಿಯವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮಂಜು, ವಿಶಾಲಾಕ್ಷಿ, ಶೀಬಾ ಮತ್ತು ಗೌರಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 14, 2018

ಹಲ್ಲೆ ಪ್ರಕರಣ
ದಿನಾಂಕ 13/09/2018ರಂದು ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಮುಂಭಾಗದ ನಿವಾಸಿ ವೈ.ಎಂ.ಯಾದವ ಎಂಬವರು ಅವರ ಮನೆಯ ಮುಂದೆ ಬೀಳುವ ಸ್ಥಿತಿಯಲ್ಲಿದ್ದ ಒಂದು ನೇರಳೆ ಮರವನ್ನು ಕಡಿದು ತೆರವುಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ವೈ.ಜಿ.ಲೋಕೇಶ್, ವೈ.ಜಿ.ಕುಲದೀಪ್ ಮತ್ತು ಸ್ಮಿತಾ ಎಂಬವರುಗಳು ಸೇರಿಕೊಂಡು ಯಾದವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 13/09/2018ರಂದು ನಾಪೋಕ್ಲು ಬಳಿಯ ಹಳೆ ತಾಲೂಕು ನಿವಾಸಿ ರೊನಾಲ್ಡ್ ರಾಡ್ರಿಗಸ್ ಎಂಬವರು ಅವರ ಪತ್ನಿ ಹೇಮಾವತಿ ಮಗಳು ಪೂರ್ವ ಎಂಬವರೊಂದಿಗೆ ನಾಫೋಕ್ಲು ನಗರದಿಂದ ಮನೆಗೆ ಹೋಗುತ್ತಿರುವಾಗ ಬಾಳೆಯಡ ವಿನೋದ್ ಎಂಬಾತನು ರೊನಾಲ್ಡ್ ರಾಡ್ರಿಗಸ್‌ರವರನ್ನು ತಡೆದು ಹಣದ ವಿಚಾರದಲ್ಲಿ ಜಗಳವಾಡಿ ಹಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ ; ಸಾವು
ದಿನಾಂಕ 12/09/2018ರಂದು ಪೊನ್ನಂಪೇಟೆ ಬಳಿಯ ಬಲ್ಯಮಂಡೂರು ನಿವಾಸಿ ರವಿ ಎಂಬವರು ಅವರ ಸ್ಕೂಟರಿನಲ್ಲಿ ಪೊನ್ನಂಪೇಟೆಯಿಂದ ಬಲ್ಯಮಂಡೂರಿಗೆ ಹೋಗುತ್ತಿರುವಾಗ ಮುಗುಟಗೇರಿ ಬಳಿ ಸ್ಕೂಟರನ್ನು ಅತಿ ವೇಗವಾಗಿ ಚಾಲಿಸಿದ ಪರಿಣಾಮ ಸ್ಕೂಟರ್‌ ರವಿಯವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡ ರವಿಯವರನ್ನು ಸಾರ್ವಜನಿಕರು ಗೋಣಿಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿಯವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ
ದಿನಾಂಕ 12/09/2018ರಂದು ತಿತಿಮತಿ ನಿವಾಸಿ ವಿ.ಎ.ನಾಗರಾಜು ಎಂಬವರ ತಮ್ಮ ರವಿ ಎಂಬವರು ತಿತಿಮತಿಯ ಅವರ ಮನೆಯ ಮುಂದಿನ ಫೋಟೋ ಸ್ಟುಡಿಯೋದಿಂದ ಮುಖ್ಯ ರಸ್ತೆಗೆ ಬರುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಕೆಎ-45-ಹೆಚ್‌-8045ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದಿ ರವಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ರವಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗಡಿ ಕಳವು
ಪೊನ್ನಂಪೇಟೆ ಬಳಿಯ ಸುಳುಗೋಡು ನಿವಾಸಿ ಎಂ.ಜಿ.ಶಶಿಧರ ಎಂಬವರು ದಿನಾಂಕ 11/09/2018ರಂದು ಅವರ ಅಂಗಡಿಗೆ ಬೀಗ ಹಾಕಿಕೊಂಡು ಕೇರಳದ ಅವರ ಸಂಬಂಧಿಕರ ಮದುವೆಗೆಂದು ಹೋಗಿದ್ದು ದಿನಾಂಕ 13/09/2018ರಂದು ಮರಳಿ ಬಂದು ಅಂಗಡಿಯನ್ನು ತೆರೆಯುವಾಗ ಯಾ ರೋ ಕಳ್ಳರು ಅಂಗಡಿಯ ಹೆಂಚುಗಳನ್ನು ತೆರೆದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ ಸುಮಾರು ರೂ. 3,000/- ಬೆಲೆಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಡಿಕ್ಕಿ ; ಸಾವು
ದಿನಾಂಕ 12/09/2018ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ಶಿವಕುಮಾರ್ ಎಂಬವರು ಅವರ ಬೈಕಿನಲ್ಲಿ ತಾಕೇರಿ ಗ್ರಾಮದ ಅವರ ತೋಟಕ್ಕೆ ಹೋಗಿ ಮರಳಿ ರಾತ್ರಿ ವೇಳೆ ಮನೆಗೆ ಬರುತ್ತಿರುವಾಗ ಸೋಮವಾರಪೇಟೆ ನಗರದ ಆನೆ ಕೆರೆ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಕ್ರೇನ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಶಿವ ಕುಮಾರ್‌ರವರು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ಬಾಲಕ ಸಾವು
ದಿನಾಂಕ 13/09/2018ರಂದು ಕುಶಾಲನಗರ ಬಳಿಯ ಅರಶಿನಗುಪ್ಪೆ ಗ್ರಾಮದ ನವ ಗ್ರಾಮದ ನಿವಾಸಿ ಅನಂತ ಕುಮಾರ್ ಎಂಬವರ ಮಗ 13 ವರ್ಷ ಪ್ರಾಯದ ಹೇಮಂತ್ ಎಂಬಾತನು ಅದೇ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆಗೆಂದು ಹೋಗಿದ್ದು ಅಲ್ಲಿನ ಬಿದಿರು ಕಟ್ಟೆ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, September 9, 2018

ವ್ಯಕ್ತಿ ಆತ್ಮಹತ್ಯೆ
ದಿನಾಂಕ 08/09/2018ರಂದು ಕುಟ್ಟ ಬಳಿಯ ಸಿಂಕೋನ ಕಾಲೋನಿ ನಿವಾಸಿ ಆರ್‌.ಸುರೇಶ ಎಂಬಾತನು ಮನೆಯ ಕೊಠಡಿಯೊಳಗೆ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅತೀವ ಮದ್ಯವ್ಯಸನಿಯಾಗಿದ್ದ ಸುರೇಶನು ಮದ್ಯದ ಅಮಲಿನಲ್ಲಿ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ಆತ್ಮಹತ್ಯೆ
ದಿನಾಂಕ 08/09/2018ರಂದು ಗೋಣಿಕೊಪ್ಪ ಬಳಿಯ ಹಾತೂರು ಗ್ರಾಮದ ನಿವಾಸಿ ಜವರ ಎಂಬವರು ಅದೇ ಗ್ರಾಮದ ಪ್ರಸನ್ನ ಎಂಬವರ ಕೆರೆಯ ಬಳಿ ಸೀಬೆ ಹಣ್ಣಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ದೀರ್ಘ ಕಾಲದ ಅಸ್ತಮಾ ಮತ್ತು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಜವರನವರು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದೆ. ಘಟನೆ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 08/09/2018ರ ರಾತ್ರಿ ಕುಟ್ಟ ಬಳಿಯ ಕೆ.ಬಾಡಗ ಗ್ರಾಮದ ಅಲಂದೋಡು ಪೈಸಾರಿ ನಿವಾಸಿ ಸರೋಜಿನಿ ಎಂಬವರು ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ಕುಟ್ಟ ನಿವಾಸಿ ಪ್ರಸಾದ್, ಚೂರಿಕಾಡು ನಿವಾಸಿ ಗಣೇಶ ಮತ್ತು ಇನ್ನೊಬ್ಬ ವ್ಯಕ್ತಿಯು ಸೇರಿ ಹಣದ ವಿಚಾರದಲ್ಲಿ ಸರೋಜಿನಿರವರೊಂದಿಗೆ ಜಗಳವಾಡಿ ರಾಡಿನಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದು ಅಲ್ಲಿಯೇ ಇದ್ದ ಟಿ.ಬಿ.ಮೋಹನ ಎಂಬವರ ಮೇಲೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 7, 2018

ಹಾವು ಕಡಿದು ವ್ಯಕ್ತಿ ಸಾವು
ದಿನಾಂಕ 29/08/2018ರಂದು ಸಂಪಾಜೆ ಬಳಿಯ ಯು.ಚೆಂಬು ಗ್ರಾಮದ ನಿವಾಸಿ ಮೋನಪ್ಪ ಎಂಬವರು ಅವರ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ಹಾವು ಕಡಿದು ವಿಷವೇರಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/09/2018ರಂದು ಮೋನಪ್ಪನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ದಿನಾಂಕ 06/09/2018ರಂದು ಮರಗೋಡು ನಿವಾಸಿ ಕೆ.ಆಶಾ ಎಂಬ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಆಶಾರವರು ಮರಗೋಡಿನ ಧರ್ಮಸ್ಥಳ ಸಂಘದಿಂದ ಸಾಲ ಪಡೆದಿದ್ದು ಸಾಲದ ಹಣವನ್ನು ಮರು ಪಾವತಿಸಲು ಹಣ ಹೊಂದಿಸಲು ಸಾಧ್ಯವಾಗದೆ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪು ಡಿಕ್ಕಿ; ಪಾದಚಾರಿ ಸಾವು
 ದಿನಾಂಕ 06/09/2018ರಂದು ಮಡಿಕೇರಿ ನಗರದ ದೇಚೂರು ಬಳಿ ಪಶ್ಚಿಮ ಬಂಗಾಳದ ಮೇದನಿಪುರದ ನಿವಾಸಿ ತೂಫಾನ್ ಬುಯ್ಯ ಎಂಬವರು ದೇಚೂರು ರಾಮ ಮಂದಿರದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಈರಪ್ಪ ಎಂಬವರು ಕೆಎ-12-ಎಂ-5815ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತೂಫಾನ್‌ ಬುಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಸಾವಿಗೀಡಾಗಿದ್ದು ಜೀಪನಲ್ಲಿದ್ದ ಸುಮಾರು 7 ಜನರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೊಬೈಲ್ ಕಳವು ಪ್ರಕರಣ
ದಿನಾಂಕ 06/09/2018ರಂದು ವಿರಾಜಪೇಟೆ ಬಳಿಯ ಕಾವಾಡಿ ನಿವಾಸಿ ರೆಕ್ನೇಸ್ ಎಂಬವರು ವಿರಾಜಪೇಟೆ ನಗರದ ಪಂಜರಪೇಟೆಯ ಬಸ್ ತಂಗುದಾಣದಲ್ಲಿ ಅವರ ಸ್ನೇಹಿತ ಸುರೇಶ್ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಅವರ ಮೊಬೈಲ್ ಫೋನನ್ನು ಪಕ್ಕದಲ್ಲಿಟ್ಟಿದ್ದು ಅದನ್ನು ಕಲ್ಲುಬಾಣೆ ನಿವಾಸಿ ನೌಷದ್ ಎಂಬಾತನು ಎತ್ತಿಕೊಂಡು ಓಡಿ ಹೋಗಿದ್ದು ಸುಮಾರು ರೂ.12,000/- ಮೌಲ್ಯದ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ  ಪ್ರಕರಣ
ದಿನಾಂಕ 06/09/2018ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಕೆ.ಆರ್.ಸುರೇಶ್ ಎಂಬವರು ಅವರ ಮನೆಯ ಬಳಿ ಸ್ನೇಹಿತನೊಂದಿಗೆ ಮಾತನಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾನೂರು ಕಡೆಯಿಂದ ಕುಟ್ಟ ಕಡೆಗೆ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯ ಬಸ್ಸನ್ನು ಚಾಲಿಸುತ್ತಿದ್ದ ಕಳಕಂಡ ಭರತ್ ಎಂಬವರು ಬಸ್ ನಿಲ್ಲಿಸಿ ಕೆಳಗೆ ಇಳಿದು ಕ್ಷುಲ್ಲಕ ಕಾರಣಕ್ಕೆ ಕೆ.ಆರ್.ಸುರೇಶ್‌ರವರೊಂದಿಗೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, September 4, 2018

ಮಹಿಳೆ ಆತ್ಮಹತ್ಯೆ ಪ್ರಕರಣ
ದಿನಾಂಕ 02/09/2018ರಂದು ಪೊನ್ನಂಪೇಟೆ ಬಳಿಯ ಕೃಷ್ಣ ಕಾಲೋನಿ ನಿವಾಸಿ ಪಣಿ ಎರವರ ಕಾವೇರಿ ಎಂಬ ಮಹಿಳೆಯು ಮನೆಯಲ್ಲಿ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಕಾವೇರಿಯ ಕಿರಿ ಮಗ ಸುಬ್ರಮಣಿ ಎಂಬಾತನು ಮನೆ ಬಿಟ್ಟು ಹೋಗಿರುವ ಕಾರಣಕ್ಕೆ ಮನ ನೊಂದು ಕಾವೇರಿಯು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಗೋಣಿಕೊಪ್ಪ ಬಳಿಯ ಅತ್ತೂರಿನ ತೊಟವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾಯಮುಡಿ ನಿವಾಸಿ ಕೊಂಗಂಡ ಸಾಗರ್ ಎಂಬವರ ಪತ್ನಿಯ ಅಕ್ಕ ಸರಸ್ವತಿ ಎಂಬವರಿಗೆ ಸೇರಿದ ತೋಟದಲ್ಲಿ ಅಪರಿಚಿತಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದಿನಾಂಕ 03/09/2018ರಂದು ಸಾಗರ್‌ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 03/09/2018ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ನಿವಾಸಿ ಕೆ.ಎಂ.ಅಪ್ಪಯ್ಯ ಎಂಬವರು ಟಿ.ಶೆಟ್ಟಿಗೇರಿ ಪಟ್ಟಣಕ್ಕೆ ಹೋಗುತ್ತಿರುವಾಗ ಕಟ್ಟೇರ ಜೀವನ್ ಎಂಬವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಅಪ್ಪಯ್ಯನವರ ಮೇಲೆ ಹಲ್ಲೆ ನಡೆಸಿದ್ದು ತಡೆಯಲು ಬಂದ ಬಾಲ ಎಂಬವರಿಗೂ ಸಹ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 02/09/2018ರ ಸಂಜೆ ವೇಳೆ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯ ಗಿರಿಜನ ಕಾಲೋನಿ ನಿವಾಸಿ ಮಧು ಎಂಬವರೊಂದಿಗೆ ನೆರೆಯ ನಾಗರಾಜು ಮತ್ತು ಪುಟ್ಟ ಎಂಬವರು ಜಗಳವಾಡುತ್ತಿದ್ದು ಇದನ್ನು ವಿಚಾರಿಸಿದ ಮಧುರವರ ತಾಯಿ ಜೇನುಕುರುಬರ ಗಂಗಮ್ಮ ಎಂಬವರ ಮೇಲೆ ನಾಗರಾಜು ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 02/09/2018ರಂದು ಕುಶಾಲನಗರ ಬಳಿಯ ಕಣಿವೆಯ ಭುವನಗಿರಿ ಗ್ರಾಮದ ನಿವಾಸಿ ಶಿವರುದ್ರ ಎಂಬವರಿಗೆ ಅವರ ತಂದೆ ದೊಡ್ಡಯ್ಯ ಎಂಬವರು ಸಾಲದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ ಪ್ರಕರಣ
ಮಡಿಕೇರಿ ನಗರದ ಮಂಗಳಾದೇವಿನಗರದ ನಿವಾಸಿ ಹೆಚ್‌.ಟಿ.ಕೃಷ್ಣ ಎಂಬವರು ದಿನಾಂಕ 28/08/2018ರಂದು ರಾತ್ರಿ ಮನೆಯಿಂದ ಹೋದವರು ಇನ್ನೂ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.