Friday, November 30, 2018

 ಅಕ್ರಮ ಮರಳು ಸಾಗಾಟ ಪತ್ತೆ

      ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಡಿಸಿಐಬಿ ವಿಭಾಗದ ಪೊಲೀಸರು ಪತ್ತೆ ಹಚ್ಚಿ ಮರಳು ಮತ್ತು ಎರಡು ಲಾರಿಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ಗ್ರಾಮದ ಲಕ್ಷ್ಮಣತೀರ್ಥ ನದಿಯಿಂದ ಮರಳು ತೆಗೆದು ಮಿನಿಲಾರಿಗಳಲ್ಲಿ ತುಂಬಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ದಿನಾಂಕ 29-11-2018ರಂದು ಖಚಿತ ವರ್ತಮಾನದ ಮೇರೆ ಧಾಳಿ ನಡೆಸಿದ್ದು ಲಕ್ಷ್ಮಣತೀರ್ಥ ನದಿ ದಡದಲ್ಲಿ ಮರಳು ತುಂಬಿಸಿ ನಿಲ್ಲಿಸಲಾಗಿದ್ದ ಈಚರ್ ಮಿನಿ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ6716 ಹಾಗೂ ಮರಳು ತುಂಬಲಾಗುತ್ತಿದ್ದ ಈಚರ್ ಮಿನಿ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ6464 ವಾಹನಗಳನ್ನು ಮತ್ತು ಸ್ಥಳದಲ್ಲಿ ದೊರೆತ ಮರಳು, ಕಬ್ಬಿಣದ ಕೊಪ್ಪರಿಕೆ, ಬುಟ್ಟಿ ಗುದ್ದಲಿ ಸೇರಿದಂತೆ ವಾಹನ ಚಾಲಕರಾದ ಎಸ್ ಗುರುದತ್ತ  ಹಾಗೂ ಪಿ.ಯು ಪೊನ್ನಪ್ಪ ಮತ್ತು ಮರಳು ತುಂಬಿಸುತ್ತಿದ್ದ ವಿನೋದ್ ಹಾಗೂ ಲಂಬಾಣಿ ಮುತ್ತಣ್ಣರವರನ್ನು ವಶಕ್ಕೆ ಪಡೆಯಲಾಗಿದ್ದು ಮೇಲ್ಕಂಡವರ ವಿರುದ್ದ ಹಾಗೂ ಮರಳು ಗಣಿಗಾರಿಕೆ ನಡೆಸುತ್ತಿದ್ದ ಚಿಮ್ಮುಣೀರ ಹರೀಶ್ ಮತ್ತು ಮಿನಿ ಲಾರಿಗಳ ಮಾಲೀಕರಾದ ಎನ್.ಆರ್ ರಾಜ ಮತ್ತು ಅಪ್ಪಣ್ಣರವರ ವಿರುದ್ದ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಎಎಸ್ಐ ಕೆ.ವೈ ಹಮೀದ್, ಸಿಬ್ಬಂದಿಗಳಾದ ಕೆ.ಎಸ್ ಅನಿಲ್ ಕುಮಾರ್,ವಿ.ಜಿ ವೆಂಕಟೇಶ್,ಬಿ.ಎಲ್ ಯೊಗೇಶ್ ಕುಮಾರ್ ಕೆ.ಆರ್ ವಸಂತ ಎಂ.ಎನ್ ನಿರಂಜನ್ ಮತ್ತು ಶ್ರೀಮಂಗಲ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್, ಸಿಬ್ಬಂದಿಗಳಾದ ಸುಂದರೇಶ್ ಹಾಗೂ ಸಿದ್ದೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

ಹಲ್ಲೆ ಪ್ರಕರಣ
ದಿನಾಂಕ 27/11/2018ರಂದು ಮಕ್ಕಂದೂರು ನಿವಾಸಿ ಎಂ.ಎಸ್.ಶಿವಣ್ಣ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿ ತೋರೇರ ಕಾರ್ಯಪ್ಪ ಎಂಬವರು ಶಿವಣ್ಣರವರು ಕಾರ್ಯಪ್ಪರವರಿಗೆ ಕೊಡಬೇಕಾದ ಹಣದ ಬಾಕಿಯನ್ನು ಕೇಳಿ ಅಶ್ಲೀಲ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 23/11/2018ರಂದು ಬೆಂಗಳೂರಿನ ಗೊರಗುಂಟೆ ಪಾಳ್ಯದ ನಿವಾಸಿ ಜೆ.ವಸಂತ ಕುಮಾರ್ ಎಂಬವರು ಅವರ ಸ್ನೇಹಿತರೊಡನೆ ಕೊಡಗಿಗೆ ಬಂದು ಕಾಲೂರು ಗ್ರಾಮದ ಮಾಂದಲಪಟ್ಟಿ ಬಳಿ ಬಂದು ಅಲ್ಲಿನ ನೀರಿನ ತೊರೆಯೊಂದರ ಬಳಿ ಕುಳಿತುಕೊಂಡು ಅವರ ಸ್ನೇಹಿತರಾದ ಭೀಮಯ್ಯ ಎಂಬವರನ್ನು ಕಾಯುತ್ತಿರುವಾಗ ಅಲ್ಲಿಗೆ ಬಂದ ಕಾಲೂರು ಗ್ರಾಮದ ಅರುಣ ಮತ್ತು ವಾಸು ಎಂಬವರು ವಸಂತ ಕುಮಾರ್‌ರವರನ್ನು ಕುರಿತು ವಿಚಾರಿಸಿ ಅವರನ್ನು ಬೈದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ
ಮಡಿಕೇರಿ ನಗರದ ದೇಚೂರು ನಿವಾಸಿ ವಿ.ಆರ್.ರವಿಕುಮಾರ್ ಎಂಬವರಿಗೆ ದಿನಾಂಕ 23/11/2018ರಂದು ಯಾರೋ ಅನಾಮಧೇಯ ವ್ಯಕ್ತಿ ಕರೆ ಮಾಡಿ ರವಿಕುಮಾರ್‌ರವರ ಎಸ್‌ಬಿಐ ಬ್ಯಾಂಕಿನ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿರುವುದಾಗಿಯೂ ಅದನ್ನು ಸರಿಪಡಿಸಲು ಕಾರ್ಡ್‌ ಸಂಖ್ಯೆಯನ್ನು ನೀಡುವಂತೆ ಕೋರಿದ್ದು ರವಿಕುಮಾರ್‌ರವರು ನಿರಾಕರಿಸಿದ್ದಾರೆ. ನಂತರ ದಿನಾಂಕ 28/11/2018ರಂದು ರವಿಕುಮಾರ್‌ರವರು ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಅವರ ಖಾತೆಯಿಂದ ದಿನಾಂಕ 23/11/2018ರಂದು ಸುಮಾರು ರೂ.74,925/-ಗಳನ್ನು ಯಾರೋ ಆನ್‌ಲೈನ್ ಮೂಲಕ ಡ್ರಾ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ ಪ್ರಕರಣ
ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆಯ ಹೊಲಮಾಳ ನಿವಾಸಿ ಕೋಡಿಮಲರ್ ಎಂಬವರ ತಂದೆ ಚಂದ್ರ ಕುಮಾರ್ ಎಂಬವರು ದಿನಾಂಕ 27/11/2018ರಂದು ಕೋಡಿಮಲರ್‌ರವರಿಗೆ ಕರೆ ಮಾಡಿ ತಾನು ಮಂಡ್ಯಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ಗೋಣಿಕೊಪ್ಪ ನಗರದ ಆರನೇ ವಿಭಾಗದ ನಿವಾಸಿ ರತ್ನವೇಲು ಎಂಬವರು ದಿನಾಂಕ 22/11/2018ರಂದು ಮನೆಯಲ್ಲಿ ಇಲಿಗೆ ಹಾಕುವ ವಿಷವನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದವರು ದಿನಾಂಕ 28/11/2018ರಂದು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 29/11/2018ರಂದು ವಿರಾಜಪೇಟೆ ನಿವಾಸಿ ಹೆಚ್‌.ಟಿ.ಲಕ್ಷ್ಮಣ ಎಂಬವರು ವಿರಾಜಪೇಟೆಯಿಂದ ಪೊನ್ನಂಪೇಟೆಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಗೋಣಿಕೊಪ್ಪದ ಉಮಾ ಮಹೇಶ್ವರಿ ದೇವಸ್ಥಾನದ ಬಳಿ ಕಾನೂರಿನ ನಿವಾಸಿ ಯತೀಶ್‌ ಎಂಬವರು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಕ್ಷ್ಮಣರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಕ್ಷ್ಮಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೆರೆಗೆ ಬಿದ್ದು ವ್ಯಕ್ತಿ ಸಾವು
ಪೊನ್ನಂಪೇಟೆ ಬಳಿಯ ತಿತಿಮತಿ ಗ್ರಾಮದ ಚೇನಿಹಡ್ಲು ಹಾಡಿ ನಿವಾಸಿ ಪಣಿ ಎರವರ ರಾಮ ಎಂಬವರ ಮಗ ಉದಯ ಎಂಬಾತನು ದಿನಾಂಕ 27/11/2018ರಂದು ರಾತ್ರಿ ಮನೆಯಲ್ಲಿ ಮಲಗಿದ್ದು ಮಾರನೆ ದಿನ ಮನೆಯಲ್ಲಿ ಕಾಣದೇ ಇದ್ದ ಕಾರಣ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆನ್ನಲಾಗಿದೆ. ನಂತರ ದಿನಾಂಕ 29/11/2018ರಂದು ಅದೇ ಗ್ರಾಮದ ನಿವಾಸಿ ವಿಜಯ್ ಎಂಬವರು ಗದ್ದೆಯ ಬಳಿಯ ಕೆರೆಯಲ್ಲಿ ಯಾವುದೋ ಹೆಣ ತೇಲುತ್ತಿರುವುದಾಗಿ ತಿಳಿಸಿದ್ದು ಪಣಿಎರವರ ರಾಮರವರು ಹೋಗಿ ನೋಡಿದಾಗ ಅದು ಅವರ ಮಗ ಉದಯನಾಗಿದ್ದು ಆತನಿಗೆ ಮದ್ಯಪಾನ ಮಾಡಿದಾಗ ರಾತ್ರಿ ನಿದ್ರಯಿಂದ ಎದ್ದು ನಡೆಯುವ ಅಭ್ಯಾಸವಿದ್ದು ಅದೇ ರೀತಿ ರಾತ್ರಿ ವೇಳೆ ಹೋಗಿ ಕೆರೆಯಲ್ಲಿ ಬಿದ್ದು ಮೃತನಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಕಳವು, ಕೊಲೆ ಬೆದರಿಕೆ
ದಿನಾಂಕ 29/11/2018ರಂದು ಪೊನ್ನಂಪೇಟೆ ಬಳಿಯ ಕುಮಟೂರು ನಿವಾಸಿ ಲತಾ ಸುಗಂಧ ಎಂಬವರ ಕಾಫಿ ತೋಟದಲ್ಲಿನ ಸುಮಾರು 5 ಕ್ವಿಂಟಲ್ ಹಸಿ ಕಾಫಿಯನ್ನು ಕಮಲಾಕ್ಷಿ, ವಿಷ್ಣು ಮುತ್ತಣ್ಣ ಮತ್ತು ಇನ್ನಿತರರು ಸೇರಿಕೊಂಡು ಕುಯ್ದು ನಷ್ಟಪಡಿಸಿದ್ದು ಈ ಬಗ್ಗೆ ವಿಚಾರಿಸಿದ ಲತಾ ಸುಗಂಧರವರನ್ನು ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಹಲ್ಲೆ ಪ್ರಕರಣ
 ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿ ಸುರೇಶ ಎಂಬವರಿಗೆ,ಅವರ ಮಗ ನಂದನ್, ಭಾವನಿರಂಜನ್  ಮತ್ತು ಅತ್ತೆ ರತ್ನಮ್ಮ ಎಂಬವರಿಗೆ ಅದೇ ಗ್ರಾಮದ ನಿವಾಸಿ ರವಿ ಎಂಬಾತನು ರಾಗಿ ಬೆಳೆಯನ್ನು ದನಗಳು ತಿಂದ ವಿಚಾರಕ್ಕೆ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಪ್ರಸನ್ನ, ನಿರಂಜನ್ ಮತ್ತು ನಾಗೇಗೌಡ ಎಂಬವರು ರವಿರವರ ಮೇಲೆ ಹಲ್ಲೆ ಮಾಡಿರುವುದಾಗಿ ರವಿರವರು ದೂರು ನೀಡಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 27, 2018

ಹಲ್ಲೆ ಪ್ರಕರಣ
ದಿನಾಂಕ 25/11/2018ರಂದು ನಾಪೋಕ್ಲು ಬಳಿಯ ಬೇತು ನಿವಾಸಿ ಹೆಚ್‌.ಎಂ.ಶಾಂತಿ ಎಂಬವರು ಮನೆಯಲ್ಲಿರುವಾಗ ನೆರೆಮನೆಯ ಮನೀಷ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿಯಿಂದ ಶಾಂತಿಯವರಿಗೆ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 25/11/2018ರಂದು ಸಿದ್ದಾಪುರ ಬಳಿಯ ಪುಲಿಯೇರಿ ನಿವಾಸಿ ಕುಮಾರ ಎಂಬಾತನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 25/11/2018ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಜೇನುಕುರುಬರ ಕೃಷ್ಣ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಕೃಷ್ಣರವರು ವಿಪರೀತ ಮದ್ಯವ್ಯಸನಿಯಾಗಿದ್ದು ಮದ್ಯಪಾನದ ಅಮಲಿನಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 25/11/2018ರಂದು ಕೊಡ್ಲಿಪೇಟೆ ಬಳಿಯ ದೊಡ್ಡಕುಂದ ನಿವಾಸಿ ಸಿದ್ದಯ್ಯ ಎಂಬವರು ಕೊಡ್ಲಿಪೇಟೆ ನಗರದ ಕಡೇಪೇಟೆ ಬಳಿ ಇರುವಾಗ ದೊಡ್ಡಕುಂದ ನಿವಾಸಿ ದಿವಾಕರ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸೈಕಲ್ ಚೈನಿನಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸಿದ್ದಯ್ಯನವರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪುಟ್ಟಮ್ಮ ಎಂಬವರು ಪ್ರತಿ ದೂರು ನೀಡಿದ್ದು  ಶನಿವಾರಸಂತೆ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ
ದಿನಾಂಕ 26/11/2018ರಂದು ಶನಿವಾರಸಂತೆ ಬಳಿಯ ಕಾಜೂರು ನಿವಾಸಿ ಕೆ.ಎಂ.ಆಶ ಎಂಬವರು ಹಾಗೂ ಮನೆಯವರು ಮನೆಯಲ್ಲಿಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾತ್‌ರೂಮಿನ ಕಿಟಕಿ ಮುರಿದು ಒಳ ಪ್ರವೇಶಿಸಿ ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ ಆಲ್ಮೆರಾದ ಬೀಗ ಮುರಿದು ಅದರಲ್ಲಿದ್ದ ರೂ. 70,000/- ನಗದು ಹಾಗೂ ರೂ.50,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, November 24, 2018

ವಾಹನ ಅಪಘಾತ; ಮಹಿಳೆ ಸಾವು
ದಿನಾಂಕ 22/11/2018ರಂದು ಮಾದಾಪುರ ಬಳಿಯ ನಂದಿಮೊಟ್ಟೆ ಎಂಬಲ್ಲಿನ ಕಾಫಿ ತೋಟಕ್ಕೆ ಮಹಿಂದ್ರಾ ಕ್ಯಾಂಪರ್ ವಾಹನವೊಂದರಲ್ಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಕೆಲವರು ವಾಹನದ ಹಿಂದೆ ನಿಂತಿದ್ದು ಸಲ್ಮಾ ಮತ್ತು ಮರಿಯಂ ಎಂಬ ಇಬ್ಬರು ಕಾರ್ಮಿಕರು ವಾಹನದೊಳಗೆ ಕುಳಿತ್ತಿದ್ದು ಚಾಲಕ ಗಣೇಶ್‌ ಎಂಬಾತನು ವಾಹನದ ಹ್ಯಾಂಡ್‌ ಬ್ರೇಕನ್ನು ಸರಿಯಾಗಿ ಹಾಕದ ಕಾರಣ ವಾಹನ ಹಿಂದಕ್ಕೆ ಚಲಿಸಿದ್ದು ವಾಹನದೊಳಗಿದ್ದಾ ಸಲ್ಮಾ ಎಂಬಾಕೆಯು ಗಾಬರಿಯಿಂದ ಹೊರಕ್ಕೆ ಹಾರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿರುವಾಗ ದಾರಿಯಲ್ಲಿ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬ್ಯಾಟರಿ ಕಳವು ಪ್ರಕರಣ
ಕುಶಾಲನಗರ ಬಳಿಯ ಮದಲಾಪುರ ನಿವಾಸಿ ಪಿ.ವಿಜಯಪ್ರಕಾಶ್ ಎಂಬವರು ರಂಗಸಮುದ್ರ ಗ್ರಾಮದಲ್ಲಿ ನಿರ್ಮಿಸಿದ್ದ ಶೆಡ್ಡಿಗೆ ದಿನಾಂಕ 22/11/2018ರ ರಾತ್ರಿ ವೇಳೆ ಯಾರೋ ಕಳ್ಳರು ಮೇಲ್ಛಾವಣಿ ಮೂಲಕ ಪ್ರವೇಶಿಸಿ ಒಳಗಿದ್ದ ಸುಮಾರು ರೂ.48,000/- ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 20, 2018

ವ್ಯಕ್ತಿ ಆತ್ಮಹತ್ಯೆ ಪ್ರಕರಣ
ದಿನಾಂಕ 19/11/2018ರಂದು ಸೋಮವಾರಪೇಟೆ ಬಳೀಯ ಚೌಡ್ಲು ನಿವಾಸಿ ದಿವಾಕರ ಎಂಬವರು ದೀರ್ಘ ಕಾಲದ ಮಾನಸಿಕ ಅಸ್ವಸ್ಥತೆಯಿಂದ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 18/11/2018ರಂದು ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ದಿನೇಶ್‌ ಎಂಬವರ ಮೇಲೆ ಮಲ್ಲಿಕಾರ್ಜುನ ನಗರದ ನಿವಾಸಿಗಳಾದ ಆನಂದ, ಕಾವೇರಿ ಹಾಗೂ ಮಾನಸ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಶವ ಪತ್ತೆ
ದಿನಾಂಕ 18/11/2018ರಂದು ಭಾಗಮಂಡಲ ಬಳೀಯ ಚೆಟ್ಟಿಮಾನಿ ನಿವಾಸಿ ಶಿವಾಜಿ ಎಂಬವರು ರಾತ್ರಿ ಮನೆಯಲ್ಲಿದ್ದು ಬೆಳಿಗ್ಗೆ ಮನೆಯಲ್ಲಿ ಕಾಣದ ಎಲ್ಲರೂ ಸೇರಿ ಹುಡುಕಾಡಿದಾಗ ಸಮೀಪದ ಕೇಕಡ ರವೀಂದ್ರ ಎಂಬವರ ಕೆರೆಯಲ್ಲಿ ಶಿವಾಜಿರವರ ಶವ ತೇಲುತ್ತಿದ್ದುದು ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಯತ್ನ ಪ್ರಕರಣ
ದಿನಾಂಕ 18/11/2018ರಂದು ರಾತ್ರಿ ವೇಳೆ ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಮಂಞೀರ ಬೋಪಯ್ಯ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಆತನ ತಮ್ಮ ಮಂಞೀರ ಕುಟ್ಟಪ್ಪ ಎಂಬಾತನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ, ಮಹಿಳೆ ಸಾವು
ದಿನಾಂಕ 18/11/2018ರಂದು ಬೆಂಗಳೂರು ನಿವಾಸಿಗಳಾದ ಬೆನೆಟ್ ಥೋಮಸ್, ವೈಶಾಲಿ, ಶ್ವೇತಾ, ಜೈಸನ್ ಸ್ಯಾಮ್ಯುಯೆಲ್ ಮತ್ತು ಸುನಿಲ್ ತಿಮ್ಮಯ್ಯ ಎಂಬವರು ಒಂದು ಕಾರಿನಲ್ಲಿ ಪೊನ್ನಂಪೇಟೆಯಲ್ಲಿ ಮದುವೆ ಸಮಾರಂಭ ಮುಗಿಸಿ ಗೋಣಿಕೊಪ್ಪದ ಕಡೆಗೆ ಹೋಗುತ್ತಿರುವಾಗ ಅರುವತೊಕ್ಲು ಗ್ರಾಮದ ಬಳಿ ಕಾರನ್ನು ಚಾಲಿಸುತ್ತಿದ್ದ ಸುನಿಲ್ ತಿಮ್ಮಯ್ಯ ಕಾರನ್ನು ಅತಿ ವೇಗ ಮ್ತತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದ ವೈಶಾಲಿ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಉಳಿದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 15/11/2018ರಂದು ಗೋಣಿಕೊಪ್ಪ ಬಳಿಯ ಪಿ.ಹೆಚ್‌.ಎಸ್.ಕಾಲೊನಿ ನಿವಾಸಿ ಮುತ್ತಪ್ಪ ಎಂಬವರು ಮದ್ಯ ಸೇವಿಸಿದ ಅಮಲಿನಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 19/11/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರಿ ಮೆಣಸು ಕಳವು ಪ್ರಕರಣ
ದಿನಾಂಕ 18/11/2018ರ ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ಕೊಟ್ಟಗೇರಿ ನಿವಾಸಿ ಮಾಚಂಗಡ ಅಶೋಕ ಎಂಬವರು ಮದುವೆ ಸಮಾರಂಭಕ್ಕೆಂದು ಪೊನ್ನಂಪೇಟೆಗೆ ಹೋಗಿದ್ದಾಗ ಯಾರೋ ಕಳ್ಳರು ಅವರ ಮನೆ ಬಳಿಯ ಉಗ್ರಾಣದ ಬೀಗ ಒಡೆದು ಒಳ ಪ್ರವೇಶಿಸಿ ಅಲ್ಲಿದ್ದ ಸುಮಾರು ರೂ. ಒಂದು ಲಕ್ಷ ಮೌಲ್ಯದ ಮೂರು ಕ್ವಿಂಟಲ್ ಕರಿ ಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 18/11/2018ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಬೇಟೋಳಿಯ ರಾಮನಗರ ನಿವಾಸಿ ಸುರೇಶ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.